ದೇವರಿಗೂ ಬೇಸರವಾಗಿರಬಹುದು ಸುಳ್ಯ ದ ಮದುವೆ ಗದ್ದೆಯ ಹುಡುಗಿಯನ್ನು ವಾಪಾಸ್ ಕರೆಸಿಕೊಳ್ಳಲು. ಆದರೆ ಈ ಪಾಪಿಗಳ ಲೋಕದಿಂದ ಅವಳೇ ಸ್ವಯಂ ಮುಕ್ತಿ ತೆಗೆದುಕೊಳ್ಳಲು ನಿರ್ಧರಿಸಿದಾಗ ಆ ದೇವರೇ ಮದುವೆ ಗದ್ದೆ ಹುಡುಗಿಯನ್ನು ವಾಪಾಸ್ ಕರೆಸಿಕೊಂಡಿದ್ದಾನೆ ಅಷ್ಟೇ.
ಇದು ಸುಳ್ಯ ಉಬರಡ್ಕದ ಮದುವೆ ಗದ್ದೆಯ ದುರಂತ ನಾಯಕಿಯೊಬ್ಬಳ ಕತೆ. ಹೆಸರು ಐಶ್ವರ್ಯ. ಸೌಂದರ್ಯದ ಗಣಿ, ಚೆಲುವಿನ ಖಜಾನೆ ಇವಳು. ಬೆಂಗಳೂರಿನಲ್ಲಿ ಸೆಟಲ್ ಆಗಿರುವ ಮದುವೆಗದ್ದೆಯ ಸುಬ್ರಹ್ಮಣ್ಯ - ಉಷಾ ದಂಪತಿಯ ಕೊಂಡಾಟದ ಪುತ್ರಿ ಈಕೆ. ಮದುವೆ ಗದ್ದೆಯ ಪ್ರತಿಷ್ಠೆಗೆ ಮತ್ತು ಕೊಂಡಾಟದ ಮಗಳ ಯಶಸ್ಸಿಗಾಗಿ ಸುಬ್ರಹ್ಮಣ್ಯರು ಮಗಳು ಐಶೂವನ್ನು ಅಮೇರಿಕಾದಲ್ಲಿ ಓದಿಸಿದ್ದರು. ಐಶೂ ಬೆಂಗಳೂರಿನಲ್ಲಿ ಅದ್ಯಾವುದೋ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸವನ್ನೂ ಮಾಡುತ್ತಿದ್ದಳು. ಓದು ಮುಗಿದು, ಕೆಲಸ ಸಿಕ್ಕಿದ ಮೇಲೆ ಸುಬ್ರಹ್ಮಣ್ಯರು ಮಗಳನ್ನು ಬೆಂಗಳೂರಿನ ಡೈರಿ ರಿಚ್ ಸಾಮ್ರಾಜ್ಯದ ರಾಜ ಕುಮಾರ ರಾಜೇಶನಿಗೆ ಕೊಟ್ಟು ಮದುವೆಯನ್ನೂ ಮಾಡಿಸಿದ್ದರು ನಾಲಕ್ಕು ವರ್ಷಗಳ ಹಿಂದೆ. ಮದುವೆ ಗದ್ದೆ ಸುಬ್ರಹ್ಮಣ್ಯರದ್ದು ಎಲ್ಲಾ ಮುಗಿದ ಮೇಲೆ ರಾಜೇಶಂದು ಶುರುವಾಯಿತು. ಮದುವೆ ಗದ್ದೆಯ ಹುಡುಗಿ ಧರೆಗಿಳಿದು ಹೋಯ್ತು.
ಹಾಗೆಂದು ಈ ಡೈರಿ ರಿಚ್ ರಾಜೇಶ್ ಕೂಡಾ ಸುಳ್ಯದವನು. ಕನಕಮಜಲು ಕಾಪಿಲ ಗಿರಿಯಪ್ಪ ಗೌಡರು ಬೆವರು ಸುರಿಸಿ ಕಟ್ಟಿದ ಡೈರಿ ರಿಚ್ ಸಾಮ್ರಾಜ್ಯದ ಉತ್ತರಾಧಿಕಾರಿ ಅವನು. ಸೌಂದರ್ಯದ ಗಣಿಯನ್ನು ಚೆನ್ನಾಗಿಯೇ ನೋಡಿ ಕೊಂಡಿದ್ದ ರಾಜೇಶ. ಆದರೆ ಅದ್ಯಾರೋ ಶಕುನಿ ಗಳು ಎಂಟ್ರಿ ಕೊಟ್ಟು ಮದುವೆ ಗದ್ದೆ ಹುಡುಗಿ ಮತ್ತು ಡೈರಿ ರಿಚ್ ಸಾಮ್ರಾಜ್ಯದ ನಡುವೆ ಫಿಟ್ಟಿಂಗ್ ಇಟ್ಟು ಬಿಟ್ಟರು. ಇದರ ರಿಸಲ್ಟ್ ಮಾತ್ರ ದುರಂತಮಯವಾಗಿ ಹೋಯ್ತು. ಮದುವೆ ಗದ್ದೆ ಹುಡುಗಿ ವಾಪಾಸ್ ಹೊರಟು ಹೋದರೆ ಡೈರಿ ರಿಚ್ ಸಾಮ್ರಾಜ್ಯದ ರಾಜ, ರಾಣಿ, ಯುವರಾಜ ಮತ್ತು ರಾಜ ಪರಿವಾರದ ಕೆಲವು ಸದಸ್ಯರು ಪೋಲಿಸ್ ಕಸ್ಟಡಿಯಲ್ಲಿ VIP ಚಡ್ಡಿಯಲ್ಲಿ ಕುಂತಿದ್ದಾರೆ. ಬೇಕಾ ಇವ್ರಿಗೆ?
ಹಾಗೇ ಮದುವೆ ಗದ್ದೆ ಹುಡುಗಿಯನ್ನು ಮದುವೆಯಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಇವರಿಬ್ಬರ ಬದುಕಿನಲ್ಲಿ ಶನಿ ವಕ್ಕರಿಸಿ ಬಿಟ್ಟ. ರಾಜೇಶನಿಗೆ ಐಶೂ ಬೊಡಿದು ಬಿಟ್ಟಲು. ಅದೇನೋ ಆಸ್ತಿ ಗಲಾಟೆಯೂ ಇವರಿಬ್ಬರ ದಾಂಪತ್ಯದಲ್ಲಿ ಹುಳಿ ಹಿಂಡಿತು. ಐಶೂಗೆ ಗಂಡನ ಮನೆಯಲ್ಲಿ ಕ್ಲಾಸ್, ಸ್ಪೆಷಲ್ ಕ್ಲಾಸ್ ಶುರುವಾಯ್ತು. ಹುಡುಗಿ ಇದನ್ನೆಲ್ಲ ತಡೆದುಕೊಂಡು ಕುಂತಿತು. ಆದರೆ ಕಡೆಗೊಮ್ಮೆ ಇನ್ನು ಸಾಧ್ಯವಿಲ್ಲ ಎಂದು ಗಂಡನ ಮನೆಯಿಂದ ಎದ್ದು ತವರಿನ ಕಡೆಗೆ ತನ್ನ ಲಾಸ್ಟ್ ಜರ್ನಿ ಮುಗಿಸಿ ಬಿಟ್ಟಳು ಮತ್ತು ಅಲ್ಲೇ ತನ್ನ ತವರಿನಲ್ಲೇ ನಾಲಕ್ಕು ಪುಟಗಳ ಗಂಡನ ಮನೆಯ ಕತೆಯನ್ನು ಬರೆದಿಟ್ಟು ಬದುಕಿಗೊಂದು ಅಂತ್ಯ ಹಾಡಿ ಬಿಟ್ಟಳು.
ಹಾಗೇ ಈ ಬಗ್ಗೆ ಪೋಲಿಸ್ ಕಂಪ್ಲೈಂಟ್ ಆಗಿ ಐಶೂ ಬರೆದಿದ್ದ ಗಂಡನ ಮನೆಯ ಕತೆ ಪೋಲಿಸರಿಗೆ ಸಿಕ್ಕು ಅವರು ಡೈರಿ ರಿಚ್ ಮನೆಗೆ ಬಂದರೆ ಡೈರಿ ರಿಚ್ ಅದಾಗಲೇ ಗೋವಾ ರೀಚ್ ಆಗಿತ್ತು. ಗೋವಾದಿಂದ ಡೈರಿ ರಿಚ್ ಪರಿವಾರ ಬಾಂಬೆ ಕಡೆ ದಿಬ್ಬಣ ಹೊರಟಾಗ ಹೋಗಿ ಬೆಂಗಳೂರು ಪೊಲೀಸರು ಹಿಡ್ಕೊಂಡಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಕರೆ ತಂದ ಪೋಲಿಸರು ಡೈರಿ ರಿಚ್ ಪರಿವಾರಕ್ಕೆ ಸನ್ಮಾನ ಮಾಡಲು, ಬೆಂಡ್ ತೆಗೆಯಲು ಪರಿವಾರವನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇನ್ನೊಬ್ಬರ ಮನೆಯ ಗಿಳಿಯನ್ನು ತಂದು ಕತ್ತೆ ಮಾಡುವುದು ಬಹಳ ಪುರಾತನ ಕಾಲದಿಂದಲೂ ನಮ್ಮ ಸಂಪ್ರದಾಯವೇ ಆಗಿ ಬಿಟ್ಟಿದೆ. ಬೇರೆಯವರ ಮನೆಯ ರಾಜ ಕುಮಾರಿಯನ್ನು ತಂದು ಅವಳನ್ನು ಮಹಾ ರಾಣಿ ಮಾಡಬೇಕೇ ಹೊರತು ಅವಳನ್ನು ದಾಸಿ ಮಾಡಿದರೆ ನಾವು ಪೋಲಿಸ್ ಮಾಮನ ಕಸ್ಟಡಿಯಲ್ಲಿ ಚಡ್ಡಿಯಲ್ಲಿ ಕೊಕ್ಕರ ಕೂರ ಬೇಕಾಗುತ್ತದೆ. ಮದುವೆ ಗದ್ದೆ ಹುಡುಗಿಯ ಆತ್ಮಕ್ಕೆ ಶಾಂತಿ ಸಿಗಲಿ.
Post a Comment