ಅದು ಸುಳ್ಯ- ಮಡಿಕೇರಿ ಸ್ಟೇಟ್ ಹೈವೇಯಲ್ಲಿ ಸಿಗುವ ಪ್ರತಿಷ್ಠಿತ ಗ್ರಾಮ ಪಂಚಾಯತ್. ಕೊಡಗು ಜಿಲ್ಲಾ ಸರಹದ್ದಿಗೆ ಸೇರಿರುವ ಈ ಊರು ಅರೆಭಾಷೆ ಗೌಡ್ರುಗಳ ರಿಪಬ್ಲಿಕ್ ಸಹ. ಇಲ್ಲಿ ಗೌಡ್ರುಗಳು ಹಾಕಿರುವ ಲಕ್ಷ್ಮಣ ರೇಖೆಯನ್ನು ಯಾರೂ ದಾಟುವಂತಿಲ್ಲ. ಇಂತಹ ಪ್ರತಿಷ್ಠಿತ ಪಂಚಾಯ್ತಿಗೆ ಒಬ್ಬ PDO ಘಟ್ಟದ ಮೇಲಿಂದ ಇಳಿದು ಬರುತ್ತಾನೆ. ಸದ್ರಿ PDOಗೆ ಸ್ವಲ್ಪ ಚೂಡಿ ಮರ್ಲ್ ಜಾಸ್ತಿ ಇತ್ತು ಗಡ. ಹಾಗೇ ಕಣ್ಣಿಗೆ ಕಂಡ ಚೂಡಿಗೆಲ್ಲ ಈತ ಬಲೆ ಹಾಕುತ್ತಿದ್ದ, ಕಾಳು ಹಾಕುತ್ತಿದ್ದ, ಬಿಸ್ಕತ್ತು ಬಿಸಾಡುತ್ತಿದ್ದ ಗಡ. ಆದರೆ ಎಲ್ಲಾ ಬಾಲುಗಳು ಲೂಸ್ ಡೆಲಿವರಿ ಅಲ್ವಲ್ಲ. ಒಂದು ಬಾಲಿಗೆ ಔಟಾದ.
ಹಾಗೇ ಈತನ ಭಂಡಾರ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದೇ ಗ್ರಾಮಕ್ಕೆ ಸಂಬಂಧ ಪಟ್ಟ VA ಒಬ್ಬಳು ಹೆಣ್ಣು ಮಗಳಾಗಿದ್ದಳು. ಹಾಗಾಗಿ ಇಬ್ಬರೂ ಒಂದೇ ಗ್ರಾಮಕ್ಕೆ ಸಂಬಂಧ ಪಟ್ಟವರಾದ ಕಾರಣ PDO ಕಣ್ಣು VA ಮೇಲೆ ಬೀಳುತ್ತದೆ. ಅಲ್ಲಿಂದ VAಗೆ ಇವನ ಗುಳಿಗ್ಗ ಬಾಧೆ ಶುರುವಾಗುತ್ತದೆ. VAಗೆ ಶೇಕ್ ಹ್ಯಾಂಡ್ ಮಾಡೋದು, ಬೆನ್ನು ತಟ್ಟೋದು/ಸವರೋದು, ಅಪಗಪಗ ಟಚ್ಚಿಂಗ್, ಡ್ಯಾಶ್ ಹೊಡೆಯೋದು, ಡ್ರಾಪ್ ಕೊಡೋಕೆ ನೋಡೋದು ಇತ್ಯಾದಿ ಇತ್ಯಾದಿ ಮಾಡುತ್ತಿದ್ದ. ಆದರೆ ಇವನ ಎಲ್ಲಾ ಬಾಲಲೀಲೆಗಳನ್ನು ಸಹಿಸಿಕ್ಕೊಂಡಿದ್ದ VA ತನ್ನಂತೆಯೇ ಇವನೂ ಸರ್ಕಾರಿ ನೌಕರ ಎಂದು ಸುಮ್ಮನಿದ್ದಳು. ಆದರೆ VAಯ ಈ ಮೌನವನ್ನೇ ಒಪ್ಪಿಗೆ ಎಂದು ಮಿಸ್ಸಾಗಿ ಅರ್ಥ ಮಾಡಿಕೊಂಡ PDO ಒಂದು ದಿನ ಮೈನ್ ಸ್ವಿಚ್ ಗೆ ಕೈ ಹಾಕಿ ಬಿಟ್ಟ. ಅಷ್ಟೇ. ಕೇಸ್ ದೊಡ್ಡದಾಯಿತು.
PDOನ ಈ ಒಂದು ಅತಿರೇಕದ ವರ್ತನೆಯಿಂದ ರೋಸಿ ಹೋದ VA ಸೀದಾ ಹೋಗಿ ಆ ಊರಿನ ಪ್ರಮುಖರಲ್ಲಿ PDO ಬಗ್ಗೆ, ಅವನ ಲೀಲೆಗಳ ಬಗ್ಗೆ ಇಂಚಿಂಚು ಬಿಡದೆ ಹೇಳಿದ್ದಾರೆ. ಮೊದಲೇ ಅರೆಭಾಷೆ ಗೌಡ್ರುಗಳ ರಿಪಬ್ಲಿಕ್ಕು, ದೇಶಭಕ್ತರ ಭದ್ರಕೋಟೆ ಬೇರೆ. ಊರ ಪ್ರಮುಖರು PDOನ ಕರೆದು ಬಚ್ಚಿರೆ ತಿಂದು ಉಗಿದಿದ್ದಾರೆ. ಕೂಡಲೇ ಆ ಊರಿಂದ ಕರ ಕೈಲ್, ಗಂಟು ಮೂಟೆ ಕಟ್ಟುವಂತೆ ಪಂಚಾಯಿತಿ ಮುಗಿಸಿದ್ದಾರೆ ಮಾತ್ರವಲ್ಲದೆ ಸದ್ರಿ PDOಗೆ ಆ ಪಂಚಾಯಿತಿಯಿಂದ ಟ್ರಾನ್ಸ್ ಫರ್ ಮಾಡಿಸಿ ಫೈಲ್ ಕ್ಲೋಸ್ ಮಾಡಿಸಿದ್ದಾರೆ. ಇದೀಗ ಆ PDO ಅದೇ ಸ್ಟೇಟ್ ಹೈವೇಯಲ್ಲಿ ಸಿಗುವ ಇನ್ನೊಂದು ಪಂಚಾಯಿತಿಯಲ್ಲಿ ಸ್ಥಾಪನೆಯಾಗಿದ್ದು ಸದ್ಯಕ್ಕೆ ಆ ಪಂಚಾಯಿತಿಗೆ ಕೆಲಸಕ್ಕೆ ಬರುತ್ತಿದ್ದ ಹುಡುಗಿಯೊಂದು ಕೆಲಸಕ್ಕೆ ಬರುತ್ತಿಲ್ಲ ಎಂದು ತಿಳಿದುಬಂದಿದೆ. PDO ಭಾರೀ ಚಾಲೂ ಮಾರಾಯ್ರೆ ದೊಡ್ಡವನಾಗುವಾಗ ಇನ್ನೂ ದೊಡ್ಡ ಚಾಪ್ಟರ್ ಆಗ ಬಹುದು.
Post a Comment