ಹಾಗೆಂದು ಈ ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಕಾಡು ಪಂಜಿ ಹಾವಳಿ ಜೋರು. ತೋಟ, ಗದ್ದೆಗಳಿಗೆ ಧಾಳಿ ಮಾಡುವ ಈ ಕಾಡು ಹಂದಿಗಳು ರೈತರು ಬೆಳೆದ ಬೆಳೆಗಳನ್ನು ಲಗಾಡಿ ಮಾಡಿ ಬಿಡುತ್ತದೆ. ಅದರಲ್ಲೂ ಕಂಡೆ ಮಗುರಿದ ಅಡಿಕೆ ಸಸಿಗಳನ್ನಂತೂ ಕಬ್ಬು ಜಗಿದ ಹಾಗೆ ಜಬ್ಬಿ ಬಿಡುತ್ತದೆ ಈ ಲೋಫರ್ ಪಂಜಿಗಳು. ಹಾಗೆಂದು ಈ ಕಾಡು ಹಂದಿಗಳು ಎಷ್ಟೇ ಅತ್ರಣ ಮಾಡಿದರೂ ಅವನ್ನು ಯಾರೇ ಆಗಲಿ ಟಚ್ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಜೈಲು ವಾಸ್ತವ್ಯ ಗ್ಯಾರೆಂಟಿ. ಅರಣ್ಯ ಇಲಾಖೆ ಮತ್ತು ಪೋಲಿಸ್ ಇಬ್ಬರೂ ಕಾಡು ಪಂಜಿ ಕೇಸಲ್ಲಿ ಟೈಟ್ ಬರೆಯುತ್ತಾರೆ.
ಇದೀಗ ಗುತ್ತಿಗಾರು ಸಮೀಪದ ಮೊಗ್ರ ಕಾಡಪನ ಗುಡ್ಡೆಯಲ್ಲಿ ಪಂಜಿ ಬೋಂಟೆ ಭಾರೀ ಜೋರುಟ್ಟು ಗಡ. ಲೋಕಲ್ ಬೇಟೆಗಾರರ ಉಪಟಳದಿಂದ ಇಡೀಕ್ಕಿಡಿ ಪಂಜಿ ಫ್ಯಾಮಿಲಿಗಳೇ ಗಡ ಗಡ ಆಗಿದೆ ಗಡ. ಪಂಜಿಗಳಿಗೆ ಒಂದು ಕಟ್ಟು ಬೀಡಿ ಸೂತಪೆಟ್ಯೆ ಅಂಗಡಿಯಿಂದ ತರಲೂ ಆಗದಂತಹ ಪರಿಸ್ಥಿತಿ ಮೊಗ್ರದಲ್ಲಿದೆ. ಪಂಜಿಗಳು ಬರುವ ಓಣಿ ಒರುಂಕು, ಬರೆಯಿಂದ ಜಾರಿ ಲ್ಯಾಂಡ್ ಆಗುವ ಜಾಗ, ಅಗರುಗಳಲ್ಲಿ, ಗುರುಂಪುಗಳಲ್ಲಿ, ತೋಡುಗಳಲ್ಲಿ, ಉಜಿರು ಕಣಿಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಲೋಕಲ್ ಬೇಟೆಗಾರರು ಗೇರ್ ವಯರಿನ ಉರ್ಲು ಇಟ್ಟಿರುತ್ತಾರೆ. ಎಲ್ಲಿಯಾದರೂ ಪಂಜಿ ನನ್ಮಗನ ಹಣೆಯಲ್ಲಿ ಟೇಸ್ಟೀ ಟೇಸ್ಟೀ, ಹೆಲ್ದಿ ಹೆಲ್ದಿ ಪಂಜಿ ಕಜಿಪ್ಪಿನ ಬಗ್ಗೆ ಉಲ್ಲೇಕವಿದ್ದರೆ ಆವತ್ತೇ ಅವನು ಇವರು ಅಲ್ಲಲ್ಲಿ ಇಟ್ಟಿರುವ ಗೇರ್ ವಯರಿನ ಉರ್ಲುಗೆ ಬಂದು ಬಿದ್ದೇ ಬೀಳುತ್ತಾನೆ. ಆವತ್ತು ಬೇಟೆಗಾರರಿಗೆ ವಿಜಯದಶಮಿ. ಹಾಗೆಂದು ಮೊಗ್ರದಲ್ಲಿ ಒಂದು ನಾಲ್ಕು ಜನ ಪ್ರೊಫೆಷನಲ್ ಬೊಂಟೆಯವರು ಇದ್ದಾರೆ. ಮೇಲೆ ಸೂರ್ಯ ಅತ್ತ ಮಸ್ಕ್ ಮಸ್ಕ್ ಆಗುತ್ತಿದ್ದಂತೆ ಈ ಬೇಟೆಗಾರರು ಬೆಡಿ ತಗೊಂಡು ಕಾಡು ಹತ್ತಿದರೆ ಮುಗಿಯಿತು, ಆವತ್ತು ಯಾವುದನ್ನಾದರೂ ಢಂ ಮಾಡದೆ ಇವರಿಗೆ ನಿದ್ದೆ ಬರಲ್ಲ. ಓ ಮೊನ್ನೆ ತಾನೇ ಎರಣಿಗುಡ್ಡೆ ಮರ್ಮಯ ಇಟ್ಟಿದ್ದ ಉರ್ಲ್ ಗೆ ಎರಡು ಸಲ ಹಂದಿ ಬಿದ್ದು ಡಬಲ್ ಧಮಾಕಾ ಆಗಿತ್ತು. ನಂತರ ಮೊನ್ನೆ ಮೊಗ್ರ ನದಿಯಲ್ಲಿ ಉರ್ಲಿಗೆ ಬಿದ್ದ ಟೇಸ್ಟೀ ಟೇಸ್ಟೀ ಹಂದಿಯನ್ನು ಭಟ್ರ ಜಾಗದಲ್ಲಿ ಬೆಳಿಗ್ಗೆ 9 ಗಂಟೆಯ ಕರ್ಕಾಟಕ ಲಗ್ನದ ಸುಮುಹೂರ್ತದಲ್ಲಿ ಢಂ ಮಾಡಲಾಗಿದೆ. ಒಟ್ಟಾರೆಯಾಗಿ ಮೊಗ್ರದಲ್ಲಿ ಹಂದಿ ಬೇಟೆ ಒಂದು ಕ್ರೇಜ್ ಆಗಿ ಬೆಳೆಯುತ್ತಿದೆ. ದಿನಾ ಬೇಟೆ ನಡೆಯುತ್ತಿದೆ. ಅದರಲ್ಲೂ ಇರಣಿ ಗುಡ್ಡೆ ಮರ್ಮಯನಿಗೆ ಉರ್ಲ್ ಇಡುವುದರಲ್ಲಿ ಮಾಸ್ಟರ್ ಡಿಗ್ರಿ ಆಗಿದೆ. ಇವನ ಉರ್ಲಿಗೆ ಹೆದರಿ ಮೊಗ್ರ ಭಾಗದ ಅಷ್ಟೂ ಕುಲೆ, ಪೀಡೆ,ಪಿಚಾಚಿಗಳೂ ತಾವೂ ಉರ್ಲಿಗೆ ಬಿದ್ದು ಇನ್ನೊಮ್ಮೆ ಸಾಯೋದು ಬೇಡ ಎಂದು ತಮ್ಮ ನೈಟ್ ರೌಂಡ್ಸನ್ನೇ ನಿಲ್ಲಿಸಿದೆಯೆಂದು ಬಲಿಮ್ಮೆಯವರು ಮಂಡೆ ಬೆಚ್ಚ ಮಾಡಿಕೊಂಡಿದ್ದಾರೆ. ಇನ್ನು ಮೊಗ್ರದ ಚೊಕ್ಕಾಡಿ ಅಳಿಯ ಶಾರ್ಪ್ ಶೂಟರ್. ಇವನು ಗಾಳಿಯಲ್ಲಿ ಗುಂಡು ಹಾರಿಸಿದರೂ ಸಾಕು ಕಾಡು ಹಂದಿಗೆ HEART ATTACK ಆಗಿ ಬಿಡುತ್ತದೆ. ಆದ್ದರಿಂದ ಈ ಬೇಟೆಗಾರರು ಇನ್ನು ಕಾಡಲ್ಲಿ ಟೈಟಾಗಿ ಹಂದಿ ಅಂತ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕ್ಕೊಂಡು ಮೈನೀರು ಬಿಡಲು ಕುಂತವನನ್ನು ಢಂ ಮಾಡಿ ಒಂಜೆಕ್ಕ್ ಒಂಜರೆ ಆಗುವ ಮೊದಲು ಇವರ ಬೇಟೆಯನ್ನು ಸಂಬಂಧ ಪಟ್ಟ ಇಲಾಖೆಗಳು ನಿಲ್ಲಿಸೋದು ಒಳ್ಳೆಯದು. ಇಲ್ಲದಿದ್ದರೆ ಇವರು ಪಂಜಿಯ ಫೋಟೋವನ್ನು ಕೂಡ ಕಜಿಪು ಮಾಡಿ ತಿನ್ನುವ ಅಪಾಯಗಳಿವೆ.
Post a Comment