ಕೆಲವು ದಿನಗಳ ಹಿಂದೆ ನಾವು ದೇವಚಳ್ಳ ಗ್ರಾಮದ ದೇವಾ ಎಂಬಲ್ಲಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರಗಳನ್ನು ಕಡಿದು ಮಾರಾಟ ಮಾಡಲಾಗಿದೆ ಎಂದು ಬರೆದಿದ್ದೆವು. ಅಸಲಿಗೆ ಆ ಮರ ಕಡಿದ ಏರ್ಯ ಯಾರ ಅಂಡರಲ್ಲಿ ಬರುತ್ತದೆ ಎಂದು ಸುಳ್ಯ- ಸುಬ್ರಹ್ಮಣ್ಯ ಎರಡೂ ರೇಂಜಲ್ಲೂ ಕೇಳಿದ್ದೆವು. ನಮಗಲ್ಲ, ನಮಗಲ್ಲ ಎಂದು ಎರಡೂ ರೇಂಜ್ ನವರೂ ರೈಲು ಬಿಟ್ಟಿದ್ದರು.
ನಾವೂ ಮಣ್ಣು ಹಾಕಲಿ ಎಂದು ಸುಮ್ಮನಾಗಿ ಬಿಟ್ಟೆವು. ಈಗ ನೋಡಿದರೆ ಅದೇ ದೇವಚಳ್ಳ ಗ್ರಾಮದ ಕರಂಗಲ್ ಎಂಬಲ್ಲೂ ಲಕ್ಷಾಂತರ ರೂಪಾಯಿ ಮೌಲ್ಯದ ಕೀರಾಲು ಬೋಗಿ ಮರ ಗಳನ್ನು ಮಟಾಷ್ ಮಾಡಲಾಗಿದೆ. ಯಾರಲ್ಲಿ ಹೇಳೋಣ? ಇದಕ್ಕೆ ಸಾಕ್ಷಿ ಎಂಬಂತೆ ಕರಂಗಲ್ ನಲ್ಲಿ ಅಲ್ಲಲ್ಲಿ ಮರದ ಕುತ್ತಿಗಳು ಸಿಗುತ್ತಿದ್ದು ಕೇಳುವವರೇ ಇಲ್ಲದಂತಾಗಿದೆ. ಹಿಂದೆ ಸ್ಟೇಟ್ ಗೊಬ್ಬ ವೀರಪ್ಪನ್ ಇದ್ದ. ಈಗ ಅವನ ಸಂತಾನ ಗ್ರಾಮ ಗ್ರಾಮಗಳಲ್ಲಿ, ಅರಣ್ಯ ಇಲಾಖೆಯಲ್ಲಿ ಹುಟ್ಟಿಕೊಂಡದ್ದು ವಿಪರ್ಯಾಸವೇ ಸರಿ. ಅರಣ್ಯ ಇಲಾಖೆಯ ವೈಟ್ ಕಾಲರ್ ಗಳು ಒಮ್ಮೆ ದೇವಚಳ್ಳ ಗ್ರಾಮಕ್ಕೆ ವಾಕಿಂಗ್ ಹೋದರೂ ಸಾಕು. ಮರ ತಿಂದದ್ದು ಯಾರೆಂದು ಗೊತ್ತಾಗುತ್ತದೆ.
Post a Comment