ಹಾಗೆಂದು ಹಳ್ಳಿಗಾಡಿನ ಅಂಡಮಾನ್ ಗಳಲ್ಲಿ ಈವತ್ತು ಸಾಯಲು ಕೆರೆ ಬಾವಿಗಳು, ಬೀಜದ ಮರಗಳು, ರೈಲು ಮಾರ್ಗಗಳು ಇಲ್ಲದಿದ್ದರೆ ಏನಂತೆ ಧರ್ಮಕ್ಕೆ ಸಾಯಲು ಅಥವಾ ನಾವೇ ಟಿಕೆಟ್ ತೆಗೆದು ಕೊಳ್ಳಲು ಪ್ರತೀ ಹಳ್ಳಿಯಲ್ಲೂ ಕೋರೆಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಟಿಕೆಟ್ ತೆಗೆದುಕೊಳ್ಳಲು ಕ್ಯೂ ನಿಲ್ಲಬೇಕಿಲ್ಲ.
ಈವತ್ತು ಹಳ್ಳಿಗಾಡಿನ ಮುಚ್ಚದ ಕಲ್ಲಿನ ಕೋರೆಗಳಿಗೆ ಆಕಸ್ಮಿಕವಾಗಿ ಬಿದ್ದು ಅದೆಷ್ಟೋ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವವರಂತೂ ಉಳ್ಳಾಲ ಸಂಕದ ತನಕ ಹೋಗಲೇ ಬೇಕಿಲ್ಲ. ಇಲ್ಲೇ ತೇಲಾಡ ಬಹುದು. ಇಷ್ಟಿದ್ದರೂ ಜಿಲ್ಲಾಡಳಿತಗಳು, ತಾಲೂಕ ಆಡಳಿತಗಳು ಸದ್ರಿ ಕೋರೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದೀಗ ವಿಟ್ಲ ಸಮೀಪದ ಅಳಿಕೆ ಗ್ರಾಮದ ಆದಾಳ ಎಂಬಲ್ಲಿ ಕಲ್ಲಿನ ಕೋರೆಗೆ ಬಿದ್ದು ಕೂಲಿ ಕಾರ್ಮಿಕನೊಬ್ಬ ಸ್ವರ್ಗ ಪಾಲಾಗಿದ್ದಾನೆ. ಅಮಾಯಕನ ಜೀವಕ್ಕೆ ಈಗ ಚಿಲ್ಲರೆಗಳು ಸೇರಿ ಚಿಲ್ಲರೆ ಬೆಲೆ ಕಟ್ಟಿದ್ದು ಮಾತ್ರ ವಿಪರ್ಯಾಸವೇ ಸರಿ.
ಇವನು ಕಾರ್ತಿಕ್. ವಿಟ್ಲ ಮುಡ್ನೂರು ಗ್ರಾಮದ ಅಲಂಗಾರು ಅಡ್ಡದ ಪಾದೆ ನಿವಾಸಿ. ಕಾರ್ತಿಕ್ ಅಳಿಕೆ ಗ್ರಾಮದ ಕಾಡುಪಾಪನ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕೋರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ತಿಕ್ ಬ್ರದರು ವಿಟ್ಲ ಪೋಲಿಸರಿಗೆ ದೂರು ನೀಡಿದ್ದು ಯುಡಿಆರ್ 53/2023 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿದೆ. ಇನ್ನು ಕೋರೆ ಮಾಲೀಕ ಕಾಡುಪಾಪ ಮಾತ್ರ ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಚಂದುಗಿಡಿ ಎಂಬವರೊಂದಿಗೆ ಸೇರಿಕ್ಕೊಂಡು ಕಾರ್ತಿ ಮನೆಯವರಿಗೆ ಚಿಲ್ಲರೆ ಪರಿಹಾರ ಕೊಟ್ಟು ಕೇಸ್ ಮುಗಿಸಿ ಕೊಳ್ಳಲು ಪಂಚಾತಿಕೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲ ಮಾರಾಯ್ರೆ ಆ ಕಾಡುಪಾಪ ದೊಡ್ಡ ದುಡ್ಡಿನ ಮರ. ಈತನಿಗೆ ಕೇರಳ ಗಡಿಯಲ್ಲಿ ಒಂದು ಪಂಪು ಮತ್ತು ಒಂದು ವೈನ್ ಶಾಪೆಲ್ಲ ಇದೆ. ಇವನನ್ನು ಒಮ್ಮೆ ಅಲುಗಾಡಿಸಿದರೂ ಸಾಕು ಕಾಟು ಕುಕ್ಕಿನ ಮರ ಅಲುಗಾಡಿಸಿದಾಗ ಕುಕ್ಕು ಬೀಳುವ ಹಾಗೆ ದುಡ್ಡು ಬೀಳ ಬಹುದು. ಆದರೂ ಸತ್ತವರಿಗೆ ಪರಿಹಾರ ಕೊಡುವ ವಿಷಯದಲ್ಲಿ ಕುರೆ ಕಟ್ಟುತ್ತಿದ್ದಾರೆ. ಅದಕ್ಕಾಗಿ ಈತ ಒಬ್ಬ ಪಂಚಾಯಿತಿ ಅಧ್ಯಕ್ಷ ಮತ್ತು ಚಂದುಗಿಡಿ ಎಂಬ ನಿರುದ್ಯೋಗಿಯನ್ನು ಛೂ ಬಿಟ್ಟಿದ್ದು ಅವರು ಕಾರ್ತಿ ಕುಟುಂಬಕ್ಕೆ ಚಿಲ್ಲರೆ ನೆಕ್ಕಿಸಿ ರಾಜಿಯಲ್ಲಿ ಫೈಲ್ ಕ್ಲೋಸ್ ಮಾಡಲು ಓಡಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲ ಕಣ್ರೀ ಒಂದು ಪಂಚಾಯಿತಿ ಅಧ್ಯಕ್ಷ ಆಗಿದ್ದುಕ್ಕೊಂಡು ಒಬ್ಬ ಬಡಪಾಯಿ ಗೆ ನ್ಯಾಯ ದೊರಕಿಸಿ ಕೊಡುವ ಬದಲು ಇವನೇ ಹೋಗಿ ಕಾಡುಪಾಪನೊಂದಿಗೆ ಸೇರಿಕೊಂಡಿದ್ದು ವಿಪರ್ಯಾಸವೇ ಸರಿ. ಜನ ಇಂಥವನಿಗೂ ಓಟು ಕೊಟ್ಟಿದ್ದಾರಲ್ಲ. ಅದರಲ್ಲೂ ಅಧ್ಯಕ್ಷನ ಕುರ್ಚಿ ಬೇರೆ. ಇವನ ಬಗ್ಗೆ ಜನರಿಗೆ ಬೆಚ್ಚ ಆಗಿದೆ. ಆದ್ದರಿಂದ ಇನ್ನಾದರೂ ಸ್ಥಳೀಯ ಆಡಳಿತಗಳು ಇಂಥ ಅಪಾಯಕಾರಿ ಕೋರೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನು ಪಾಲಿಸದ ಕೋರೆ ಮಾಲೀಕರು ಮತ್ತು ಕಾನೂನು ಜಾರಿ ಮಾಡದ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಇನ್ನೂ ಅನೇಕ ಸಾವು ನೋವುಗಳು ಸಂಭವಿಸುವುದರಲ್ಲಿ ಸಂಶಯವೇ ಇಲ್ಲ. ಅಮಾಯಕರ ಪ್ರಾಣದೊಂದಿಗೆ ಆಟವಾಡುವವರನ್ನೇ ಕೋರೆಗೆ ದೂಡಿ ಹಾಕಬೇಕು. ಭಂಡಾರ ಹೋಗಲಿ ಅಂಥವರದ್ದು.
Post a Comment