ಕಡಬ: ನೆಟ್ಟಣದಲ್ಲಿ ಬೆನ್ನಿಗೆ ಬೆನ್ನಿ ಮಸಾಜ್

                                      


           ಇದು ಕಡಬ ಸಮೀಪದ ನೆಟ್ಟಣದ ಕತೆ. ಸದ್ರಿ ಊರಿನಲ್ಲಿ ಊರವರ ಪುಣ್ಯಕ್ಕೆ ಒಬ್ಬಡಾಕ್ಟರ್ ಹುಟ್ಟಿಕೊಂಡಿದ್ದಾನೆ. ಹೆಸರು ಡಾ! ಬೆನ್ನಿSSLC (fail) at Nettana university. ನೆಟ್ಟಣದಲ್ಲಿ ಇದೀಗ ಬೆನ್ನಿ ಹವಾ ಜೋರಾಗಿದೆ.  ಬೆನ್ನುನೋವು, ಸೊಂಟ ನೋವು, ಕೀಲು ನೋವು, ಕಾರು ಅಡಿ ಮಗ್ರಿದ್ದು, ಪುಳೆವು, ಉಳುಕು,ಕೊಳ್ಪು ಮುಂತಾದ ಜಂಡೂಬಾಂಬ್, ಟೈಗರ್ ಬಾಂಬ್ ಸೀಕ್ ಗಳ ಆರೋಪಿಗಳನ್ನು ಇವನು ತಿಕ್ಕಿ ತಿಕ್ಕಿಯೇ ಒಂಜೆ ಲೆಕ ಮಾಡಿ ಸಮಾಧಾನ ಮಾಡುತ್ತಿದ್ದ ಕಾರಣ ಜನ ಬೆನ್ನಿಯ ಐರನ್ ಹ್ಯಾಂಡಿನಲ್ಲಿ ತಿಕ್ಕಿ ತಿಕ್ಕಿ ತಿಕ್ಕಿಸಿ ಕೊಳ್ಳಲು ಕ್ಯೂ ನಿಂತು ಬಿಟ್ಟರು. ಡಾಕ್ಟರ್ ಗೆ ಗಮ್ಮತ್ತಾಯಿತು.
     ಹಾಗೆ ತನ್ನ ಮಸಾಜ್ ನೆಟ್ಟಣದಲ್ಲಿ ಕ್ಲಿಕ್ ಆಗುತ್ತಿದ್ದಂತೆ ಬೆನ್ನಿ ಡಾಕ್ಟರ್ ಈಗ ಸಾಧಾರಣ ಎಲ್ಲಾ ಕೆಎಂಸಿ ‌ಸೀಕುಗಳಿಗೂ ಮೆಡಿಕಲ್ ಗೆ ಚೀಟಿ ಕೊಡುವಷ್ಟು ಬೆಳೆದಿದ್ದಾನೆ ಎಂದು ತಿಳಿದುಬಂದಿದೆ. ತಿಕ್ಕಿಸಲು ಬಂದವರಿಗೆ ಬೇರೆನಾದರೂ ಮಂಡೆ ಸೀಕುಗಳು ಉಂಟಾ ಎಂದು ತಿಳಿದು  ಕೊಳ್ಳುವ ಬೆನ್ನಿ ಡಾಕ್ಟರ್ ಹಾಗೇನಾದರೂ ಇದ್ದರೆ ಅಂಥವರಿಗೆ  ಮೆಡಿಕಲ್ ಗೆ ಚೀಟಿ ಕೊಡುತ್ತಾನೆ. ಮೆಡಿಕಲ್ ನವರು ಬೆನ್ನಿ ಚೀಟಿ ಪ್ರಕಾರ ಗುಳಿಗೆ ಕೊಡುತ್ತಾರೆ. ಜನ ಗುಳಿಗೆ ನುಂಗಿ ಹುಷಾರಾಗುತ್ತಾರೆ. ಆದರೆ ಕಿಡ್ನಿ? ಈಗಾಗಲೇ ನೆಟ್ಟಣದಲ್ಲಿ ಒಂದು ಹದಿನೈದು ಪರ್ಸೆಂಟ್ ಜನ ಬೆನ್ನಿ ಕೊಟ್ಟ ಗುಳಿಗೆ  ನುಂಗಿ ಕಿಡ್ನಿ ಡ್ಯಾಮೇಜ್ ಮಾಡಿಕೊಂಡಿದ್ದಾರೆ, ತಿಕ್ಕಿಸಿ ತಿಕ್ಕಿಸಿ ಸೊಂಟ ಸೋಬಾನೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಪಕ್ಷಪಾತದ ರೋಗಿಯೊಬ್ಬ ಆಸ್ಪತ್ರೆಯಲ್ಲಿ ಹುಷಾರಾಗಿ ಮನೆಗೆ ಬಂದಿದ್ದ.    ಎಕ್ಸ್ ಟ್ರಾ ಎನರ್ಜಿ ಇರಲಿ ಎಂದು ಬೆನ್ನಿ ಕೈಯಲ್ಲಿ ಬೆನ್ನು, ಸೊಂಟ ಗಿಂಟ ‌ಎಂದೆಲ್ಲ ಸಿಕ್ಕ ಸಿಕ್ಕ ಕಡೆಯೆಲ್ಲಾ ತಿಕ್ಕಿಸಿಕೊಂಡಿದ್ದ ಮತ್ತು ಬೆನ್ನಿ ಕೊಟ್ಟ ಗುಳಿಗೆ ಗುಳುಂ ಮಾಡಿದ್ದ. ಅಷ್ಟೇ. ಎರಡೇ ದಿನದಲ್ಲಿ ಪಡ್ಚ!
     ಹಾಗೆಂದು ಈ ಬೆನ್ನಿ ಡಾಕ್ಟರ್ ಕೂಡ ಒಬ್ಬ ಪೇಶೇಂಟೇ. ಹಲವು ವರ್ಷಗಳ ಹಿಂದೆ ಇದೇ ಬೆನ್ನಿ ವಿಚಿತ್ರ  ಚರ್ಮ ರೋಗದಿಂದ ಬಳಲುತ್ತಿದ್ದ. ಆಗ ಅದ್ಯಾರೋ ಪುಣ್ಯಾತ್ಮರು ಕೊಟ್ಟಿದ್ದ ಎಣ್ಣೆಯನ್ನು ತಿಕ್ಕಿ ತಿಕ್ಕಿ ಇವನು ಬಚಾವಾಗಿದ್ದ. ಈಗ ಅದೇ ಎಣ್ಣೆಯಲ್ಲಿ ಇಡೀ ನೆಟ್ಟಣಕ್ಕೆ ಮಸಾಜ್ ಮಾಡುತ್ತಿದ್ದಾನೆ. ಹಾಗೆಂದು ಇವನ ತಿಕ್ಕಾಟ ಏನೇ ಇರಲಿ ಆದರೆ ಮೆಡಿಕಲ್ ಗೆ ಚೀಟಿ ಕೊಟ್ಟು ಜನರ ಕಿಡ್ನಿಯೊಂದಿಗೆ ಆಟ ಆಡೋದು ಮಾತ್ರ ಅಕ್ಷಮ್ಯ ಅಪರಾಧ. ಮೆಡಿಕಲ್ ಅಸೋಸಿಯೇಶನ್ನವರಿಗೆ ಎಲ್ಲಿಯಾದರೂ ಗೊತ್ತಾದರೆ ಇವನ ತಲೆಗೆ ಬೆಂಕಿ ಕೊಟ್ಟಾರು. ಅದಕ್ಕೂ ಮೊದಲು ಕಡಬ ಪೊಲೀಸರು ಒಮ್ಮೆ ಇವನಿಗೆ ಎಣ್ಣೆ ಮಸಾಜ್ ಕೊಟ್ಟು ಬೆಂಡ್ ತೆಗೆದರೆ ಎಲ್ಲಾ ಸರಿ ಹೋಗುತ್ತದೆ. ಇಲ್ಲದಿದ್ದರೆ ಬೆನ್ನಿ ಇನ್ನು ಆಪ್ರೆಷನ್ ಗೀಪ್ರೆಷನ್ ಎಂದೆಲ್ಲಾ ಶುರು ಹಚ್ಕೊಂಡು ಬಂಜಿಯ ಒಳಗಡೆ ಕತ್ರಿ ಬಾಕಿಯಾದರೆ ಹೊಣೆ ಆಗೋದು ಯಾರು? ಹೆಣ ಆಗೋದು ಯಾರು?








Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget