January 2024

                                        




   ಹಾಗೆಂದು  ‌ಕಳೆದ‌ ವರ್ಷದ ಕೊನೆಯ ದಿನಗಳಲ್ಲಿ ನಿಗೂಢವಾಗಿ ತೀರಿಕೊಂಡ ಕಾಣಿಯೂರಿನ ಆಟೋ ಡ್ರೈವರ್ ವಸಂತನ ಸಾವಿನ ಬಗ್ಗೆ ಸಾವಿರ ಪ್ರಶ್ನೆಗಳು ಎದ್ದು ಕುಂತಿವೆ. ಆದರೆ ಉತ್ತರ ಮಾತ್ರ ಯಾವ ಪ್ರಶ್ನೆಗಳಿಗೂ ಸಿಗುತ್ತಿಲ್ಲ. ಬಿಸಿಯಾಗದೆ ಬೆಣ್ಣೆ ಕರಗದು ನಿಯಮದಡಿ ಪೋಲಿಸರು ಕೆಲಸ‌ ಮಾಡಿದರೆ ಮಾತ್ರ ವಸಂತ ಸಾವಿಗೆ ನ್ಯಾಯ ಸಿಗಬಹುದು. ಇಲ್ಲದಿದ್ದರೆ ಈ ಕೇಸೂ ಬೈತಡ್ಕ ಹಳ್ಳ ಹಿಡಿಯೋದು ಗ್ಯಾರೆಂಟಿ.
        ಹಾಗೆಂದು ವಸಂತ ಸಾವಿಗೆ ಮೂಲ ಕಾರಣ ಒಂದು ವೀಡಿಯೋ. ಕಾಣಿಯೂರು ಅನಿಲದ ಹುಡುಗಿಯೊಬ್ಬಳ ಬೆತ್ತಲೆ ವೀಡಿಯೋ ವಸಂತ ಮೊಬೈಲ್ ಗೆ ಬಂದಿದ್ದು ವಸಂತ ಅದನ್ನು ಯಾರಿಗೋ ತೋರಿಸಿ "ಇದು ಅವಳಲ್ವಾ" ಎಂದು ಕೇಳಿದ್ದ. ವಸಂತ ಕೇಳಿದ ಜನ ಈ ವಿಷಯವನ್ನು ಹುಡುಗಿ ‌ಮನೆಯವರಿಗೆ ಹೋಗಿ ಚಾಡಿ ಹೇಳಿ  ಚಾಂಡಾಲ ಕೆಲಸ‌ ಮಾಡಿದ್ದರು. ಇದೇ ಕಾರಣಕ್ಕೆ ಹುಡುಗಿ ಕಡೆಯವರು ವಸಂತ ಮೇಲೆ ದಂಡೆತ್ತಿ ಬಂದು ವಸಂತನಿಗೆ ಮಾರಾಣಾಂತಿಕ ಹಲ್ಲೆ ಕೂಡ ಮಾಡಿದ್ದರು. ಅಲ್ಲಿಗೆ ಆ ಕತೆ ಮುಗಿಸ ಬಹುದಿತ್ತು.
   ಆದರೆ ಕತೆ ಮತ್ತೇ ಮುಂದುವರಿಸಲಾಯಿತು. ಡಿಸೆಂಬರ್ 27 ರಂದು ಮಧ್ಯಾಹ್ನ ತನಕ ಮನೆಯಲ್ಲಿ ಅಡಿಕೆ ಹೆಕ್ಕಿದ್ದ ವಸಂತ ನಂತರ ರಿಕ್ಷಾ ತಗೊಂಡು ಕಾಣಿಯೂರಿಗೆ ಹೋದವನು ನಂತರ ಕಾಣಿಯೂರು ಸಮೀಪದ ಎಲುವೆ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಸಿಕ್ಕಿದ್ದ. ಹಾಗಾದರೆ ವಸಂತ ಯಾಕೆ ಆತ್ಮಹತ್ಯೆ ಮಾಡಿಕೊಂಡ,? ವಸಂತನನ್ನು ಫಿನಿಷ್ ಮಾಡಲಾಯಿತಾ? ವಸಂತನ ಸಾವಿನ ಹಿಂದೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಲೇ ಬೇಕಾಗಿದೆ. 1) ಅನಿಲದ ಹುಡುಗಿಯ ವೀಡಿಯೋ ಮಾಡಿದ ಮತ್ತು ಅದರಲ್ಲಿ ನಟಿಸಿದ್ದ ಹೀರೋ ಯಾರು? 2) ವೀಡಿಯೋ ವಸಂತನ ಮೊಬೈಲ್ ಗೆ ಹೇಗೆ ಬಂತು? ಕಳಿಸಿದ್ದು ಯಾರು? 3) ವೀಡಿಯೋ ಬಗ್ಗೆ ಒಮ್ಮೆ ವಸಂತನ ಮೇಲೆ ಹಲ್ಲೆ ನಡೆಸಿದ್ದ ಅನಿಲದ ಅಳಿಯನಿಗೆ ಯಾಕೆ ವಸಂತನನ್ನು ಕೊಲ್ಲುವಷ್ಟು ಕೋಪ?4) ಎಲುವೆಗೆ ವಸಂತ ಯಾರ ಬಾಡಿಗೆ ಹೋದದ್ದು?  5) ನಿರ್ಜನ ಪ್ರದೇಶದಲ್ಲಿ ವಸಂತನ ಮೊಬೈಲ್ ಎಳಕೊಂಡದ್ದು ಯಾರು? ಮತ್ತು ಆ ಮೊಬೈಲ್ ಈಗ ಯಾರಲ್ಲಿದೆ? 6) ವಸಂತನ ಚಪ್ಪಲ್ ಗಳ ಕತೆ ಏನು? 7) ಅನಿಲದ ಅಳಿಯನ ಬೆಂಡ್ ತೆಗೆಯುವವರು ಯಾರು? 8)ಅನಿಲದ ಹುಡುಗಿಯ ಕತೆ ಏನು? 9) ಒಮ್ಮೆ ಹಲ್ಲೆ ನಡೆಸಿದ ಪೆಟ್ಟಿಸ್ಟ್ ಗಳು ಮತ್ತೊಮ್ಮೆ ಕರೆದಾಗ ಯಾಕೆ ವಸಂತ ಅವರ ಜೊತೆ ಹೋದದ್ದು? 10) ಬೇರೆ ಯಾರಾದರೂ ವಸಂತನನ್ನು ಬಾಡಿಗೆ ಕರಕ್ಕೊಂಡು ಹೋಗಿ ಹಂತಕರ ಕೈಗೆ ಕೊಟ್ಟರಾ? 11) ಆತ್ಮಹತ್ಯೆ ಮಾಡಿ ಕೊಳ್ಳಲು ವಸಂತ ಹಗ್ಗ ರೆಡಿ ಮಾಡಿಕೊಂಡಿದ್ದನಾ? 12) ವಸಂತ ಆತ್ಮಹತ್ಯೆಯೇ ಮಾಡಿಕೊಳ್ಳುವು ದಿದ್ದರೆ ಅಣ್ಣನಿಗೆ ಕಾಲ್ ಮಾಡಿ ನನ್ನ ಮೊಬೈಲ್ ಯಾರೋ ಎಳೆದುಕೊಂಡಿದ್ದಾರೆ ಎಂದು ಯಾಕೆ ಹೇಳಿದ? 13) ವಸಂತನ ಮೊಬೈಲ್ ಎಳಕೊಂಡದ್ದು ಯಾರು? ಈ ಎಲ್ಲಾ ವಿಷಯಗಳನ್ನು ಪೋಲಿಸರು ಗಂಭೀರವಾಗಿ ಪರಿಗಣಿಸಲೇ ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪೋಲಿಸರು ಅನಿಲದ ಅಳಿಯ ಮತ್ತು ಚಾಡಿ ಹೇಳಿದ ಚಾಂಡಾಲನ ಬೆಂಡ್ ತೆಗೆದರೆ ಸತ್ಯ ಹೊರ ಬರಲಿದೆ.








                                       




            ಹಾಗೆ ನೋಡಿದರೆ ಬೀಫ್ ಪ್ರೀಯರಿಗೆ ಕುಂಡೆ ಕಂಡೆ ಟೈಟಾಗುವಷ್ಟು ಬೀಫ್ ಇಲ್ಲೇ ರೆಡಿಯಾಗುತ್ತಿದೆ. ಪೆತ್ತದ ಫ್ಯಾಮಿಲಿ ಮೆಂಬರ್ಸ್ ಗಳ ಒಂದು ಚಿತ್ರ ಕಂಡರೂ ಸಾಕು ಅದನ್ನೂ ಮಾಸ ಮಾಡಿ ತಿನ್ನುವಲ್ಲಿ ತನಕ ಇಲ್ಲಿ ಹಸಿವಿದೆ. ಆದರೆ ಇಲ್ಲಿ ಕಷ್ಟ ಆದದ್ದು ಗೋಣದ ಮಾಂಸಕ್ಕೆ. ಪೆತ್ತದ ಮಾಂಸವನ್ನಾದರೂ ಇಲ್ಲಿ ಕದ್ದು ಕದ್ದೇ ಮಾಡ ಬಹುದು. ಆದರೆ ಇಲ್ಲಿ ಕೋಣಗಳು ಕೈಗೆ ಸಿಗಲ್ಲ. ಇದ್ದ ಕಂಬಳದ ಕೋಣಗಳ ಹಟ್ಟಿಗೇನಾದರೂ ನೈಟ್ ತಲವಾರು ಹಿಡಿದು ಕದಿಯಲು ಹೋದರೆ ಕಳ್ಳರನ್ನೇ ಕುದಿ‌ಸಿ, ಬೇಯಿಸಿ, ಸೋಸಿ ಹುರುಳಿ ಜೊತೆ ಕೋಣಗಳಿಗೆ ಡಿನ್ನರ್ ಕೊಡುವ ಅಪಾಯಗಳಿರುವ ಕಾರಣ ಸದ್ಯಕ್ಕೆ ಗೋಣ ಮಾಸದ ಸಮಸ್ಯೆ ತುಂಬಾ ಕಡೆ ಇದೆ. ಗೋಣದ ಮಾಸಕ್ಕಾಗಿ ನಾಲಿಗೆ ಎಷ್ಟು ಕಿರುಂಬುತ್ತದೆ ಅಂದರೆ ಅದನ್ನು ಹೇಳಲೇ ಸಾಧ್ಯವಿಲ್ಲ.
  ಹಾಗೆ ಸುಳ್ಯ ಪೈಚಾರಿನಲ್ಲಿ ಈ ಸಮಸ್ಯೆಯ ಸೂಕ್ಷ್ಮತೆಯನ್ನು ಮನಗಂಡ ಒಬ್ಬ ಮಹಾನ್ ಈ ಸಮಸ್ಯೆಯ ನಿವಾರಣೆಗೆ ತನ್ನ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪೇರ್ ಆಮ್ಲೆಟ್ ಅಬ್ಬುಚ್ಚ ಯಾನೆ ಗಾಡಿ ಅಂಬಚ್ಚು ಯಾನೆ ಮನಂಗ್ ಅಬ್ಬಿಚ್ಚ ಯಾನಿ ಕುಂಞಿ ಅಬ್ಬುಚ್ಚ. ಇವರು ಬೆಳ್ಳಾರೆ ಸಮೀಪದ ಪಾಜಪಳ್ಳದ ಪ್ರತಿಭೆ. ಸದ್ಯಕ್ಕೆ ಪೈಚಾರಿನಲ್ಲಿ ಅಪಗಪಗ ಆಮ್ಲೆಟ್ ಗಾಡಿ ನಿಲ್ಲಿಸಿದ್ದಾರೆ. ಅಪಗಪಗ ಅಂದರೆ ಅಂಬಚ್ಚು ಆಮ್ಲೆಟ್ ಯಾವಾಗಲೂ ನಿಮಗೆ ಸಿಗಲ್ಲ. ಸೊಬೈಕ್ ಬಂದ್, ಅಸರ್ಕ್ ಓಪನ್. ಉಚ್ಚೆಕ್ಕ್ ಇಲ್ಲೆ, ಮೋಂದಿಕ್ ಉಂಡು, ಅಂಗಣೆ ಗಾಡಿ. ಹಾಗೆಂದು ಅಂಬಚ್ಚು ಆಮ್ಲೆಟ್ ಗಾಡಿ ಅಪಗಪಗ ಓಪನ್  ಮಾಡಲು ಕಾರಣಗಳೂ ಇದೆ. ಯಾಕೆಂದರೆ ಅಂಬಚ್ಚು ಎಡೆಬಿಡದೆ ಸ್ವಮಜಾ ಸೇವೆ ಮಾಡುತ್ತಿದ್ದಾರೆ. ಅಂಬಚ್ಚು ಅಂಚಿ ಕೇರಳ ಗಡಿಗೆ ಹೋಗಿ ಅಲ್ಲಿಂದ ಒಣಕ್ಕ್ ಪೆತ್ತದ ಮಾಸ ತಂದು ಇಲ್ಲಿ ಪೈಚಾರಿನಲ್ಲಿ ಗೋಣದ ಮಾಸ ಎಂದು ಡಬ್ಬಲ್ ರೇಟಿಗೆ ಮಾರುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರ ಗೋಣದ ಮಾಸ ತಿಂದವರು ಬೋರಿದ್ದು ಯಾವುದು, ಕೋರಿದ್ದು ಯಾವುದು, ಗೋಣದ್ದು ಯಾವುದು ಎಂದು ಟೇಸ್ಟ್ ಗೊತ್ತಾಗದೆ ಪಾಲಿಗೆ ಬಂದದ್ದು ಗೋಣದ ಮಾಸ ಎಂದು ಒಣಕ್ಕ್ ಪೆತ್ತದ ಮಾಂಸವನ್ನೇ ತಿನ್ನುತ್ತಿದ್ದಾರೆ. ಇವನ ಮೋಸ ಗೊತ್ತಾಯಂಗ್ ಇವನೇ ಬೀಫ್ ಆಗುವ ದಿನಾಂಕ ದೂರದಲ್ಲಿಲ್ಲ ಎಂದು ತಿಳಿಸಲು ವಿಷಾದಿಸುತ್ತಿದ್ದೇವೆ.
   ಇನ್ನು ಅಂಬಚ್ಚು ಮಾಡುವ ಇತರ ಸಮಾಜ ಸೇವೆಗಳಲ್ಲಿ ಲಾಟ್ರಿ ಸೇವೆಯೂ ಒಂದು. ಅಂಬಚ್ಚು ಕೇರಳ ಗಡಿಗೆ ಹೋದಾಗಲೆಲ್ಲ ಸಾದಿ  ಖರ್ಚೀಗೆಂದು ಕೇರಳ ರಾಜ್ಯದ ಲಾಟ್ರಿ ತಂದು ಪೈಚಾರಿನಲ್ಲಿ ಕಾನೂನು ಬಾಹಿರವಾಗಿ ಮಾರುತ್ತಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಅಂಬಚ್ಚು ಸ್ವಮಜಾ ಸೇವೆಯಲ್ಲಿ ಬಡ್ಡಿ ಸೇವೆಯೂ ಸೇರಿಕೊಂಡಿದೆ. ಇವನಿಗೆ ಬಡ್ಡಿಗೆ ಬಿಡುವ ದುರಭ್ಯಾಸವೂ ಇದೆ. ಮಾಮೂಲಿ ಅಂಡಿಗುಂಡಿ ಬಡ್ಡಿ ಅಂದರೆ ಹತ್ತು ಸಾವ್ರಕ್ಕೆ ತಿಂಗಳಿಗೆ ಒಂದು ಸಾವ್ರ ಬಡ್ಡಿ. ಆದರೆ ಅಂಬಚ್ಚು ತಿಂಗಳಿಗೆಲ್ಲ  ಬಡ್ಡಿ ಕೇಳಲ್ಲ. ಅಂಬಚ್ಚು ವಾರಕ್ಕೆ ಮಾತ್ರ ಬಡ್ಡಿ ಕೀಳೋದು. ಅಂದರೆ ಅಂಬಚ್ಚು ಹತ್ತು ಸಾವ್ರಕ್ಕೆ ವಾರಕ್ಕೆ ಒಂದು ಸಾವಿರ ಕೇಳುತ್ತಾನೆ.
   ಹಾಗೆಂದು ಗಾಡಿ ಅಂಬಚ್ಚು ಒಮ್ಮೊಮ್ಮೆ ಭಸ್ಮಾಸುರನ ಅವತಾರದಲ್ಲೂ ಕಾಣಿಸಿ ಕೊಳ್ಳುತ್ತಾನೆ. ಕೇರಳದ ಅಂಡಿಗುಂಡಿ ಮಾಂತ್ರಿಕರಿಂದ ಮಂತ್ರಿಸಿ ಲೋಡ್ ಲೆಕ್ಕದಲ್ಲಿ ಬೂದಿ ತಂದು ಪೈಚಾರ್ ತುಂಬಾ ಹಾಕುತ್ತಿದ್ದಾನೆ ಎಂದು ತಿಳಿದುಬಂದಿದೆ. ಇವನ ಆಮ್ಲೆಟ್ ಗಾಡಿ ಎದುರಿನ ಹೋಟೆಲ್ ನವಳು ಬಂದ್ ಮಾಡಿ ಓಡಲಿ ಓಡಲಿ ಎಂದು ಅಂಬಚ್ಚು ಟಿಪ್ಪರ್ ಲೆಕ್ಕದಲ್ಲಿ ತಂದು ಹೋಟೆಲ್ ಎದುರುಗಡೆ  ಕೇರಳದ ಬೊಣ್ಯ ಸುರಿದಿದ್ದ. ಆದರೆ ಏನೂ ಪ್ರಯೋಜನವಾಗಿಲ್ಲ. ಅದೂ ಅಲ್ಲದೆ ಅಂಬಚ್ಚು ತನಗಾಗದವರ ಮನಿ ಮುಂದೆ, ಅಂಗಡಿ ಮುಂದೆ ಕೇರಳದ ಬೊಣ್ಯ ಚೆಲ್ಲುವ ಕೆಲಸದಲ್ಲೂ ಸಕ್ರೀಯವಾಗಿರುತ್ತಾನೆ ಎಂದು ತಿಳಿದುಬಂದಿದೆ. ಅಂಬಚ್ಚು ಮಾಡುವ ಈ ಎಲ್ಲಾ ಸಮಾಜ ಸೇವೆಗಳನ್ನು ಗುರುತಿಸಿರುವ ಸುಳ್ಯ ಪೋಲಿಸರು ಅಂಬಚ್ಚುಗೆ ಒಂದು ಸನ್ಮಾನ ಕಾರ್ಯಕ್ರಮ ಆಯೋಜಿಸಲು ನಲ್ಲೆ ನಾಳ್ ಹುಡುಕುತ್ತಿದ್ದಾರೆ. ನಾಡಿದ್ದು ತಿಂಗಲಾಸೆ ಅಂಬಚ್ಚು ಗಾಡಿ ಕೇರಳಕ್ಕೆ ಗೋಣದ ಮಾಸ ತರಲು ಹೋಗುವ ಬಗ್ಗೆ ಮಾಹಿತಿ ಲೀಕ್ ಆಗಿದ್ದು ಸುಳ್ಯದ ಸಂಘಟನೆಯವರು ಅಂಬಚ್ಚು ಗಾಡಿಗೆ ಉರ್ಲು ಇಡುವ ಅಪಾಯಗಳಿವೆ.








MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget