March 2024

                                                          


  ಹಾಗೆಂದು ಕಡಬ ತಾಲೂಕು ಆದರೂ ಕೆಲವು ಇಲಾಖೆಗಳು ಇನ್ನೂ ಕಡಬದಲ್ಲಿ ದುಖಾನ್‌‌ ತೆರೆದಿಲ್ಲ. ಅವುಗಳು ಬರಲು ಇನ್ನೂ ಕಾಲ ಕೂಡಿ ಬಂದಿಲ್ಲ. ಇಂಥ ಇಲಾಖೆಗಳಲ್ಲಿ ಅರಣ್ಯ ಇಲಾಖೆ ಕೂಡ ಒಂದು. ಅರಣ್ಯ ಇಲಾಖೆಯ ಮ್ಯಾಪಿನಲ್ಲಿ ಕಡಬ ಪಂಜ‌ ರೇಂಜಿನಡಿಯಲ್ಲಿ ಬರುತ್ತದೆ. ಪಂಜ ರೇಂಜಿಂದ ಕಡಬಕ್ಕೆ ಫಾರೆಸ್ಟರ್, ಗಾರ್ಡ್ ಗಳ ರೌಂಡ್ಸ್ ಇದೆ. ಆದರೂ ಕಡಬಕ್ಕೆ ಒಂದು ಪೂರ್ಣ ಪ್ರಮಾಣದ ಕಾಡಾಫೀಸು ಬೇಕು ಅನ್ನುವುದು ಸಾರ್ವಜನಿಕರ ಒತ್ತಾಯ. ಯಾಕೆಂದರೆ ಕಡಬದಲ್ಲಿ ಮರ ಕಡಿಯುವ ಶಬ್ದ ಪಂಜ ತನಕ ಕೇಳಿಸುವುದೇ ಇಲ್ಲ.
  ಹಾಗೆಂದು ಕಡಬದಲ್ಲಿ ಕೂಡ‌ ಎಲ್ಲಾ ಊರುಗಳಲ್ಲಿ ಇರುವಂತೆ ಮರಗಳ್ಳರ ದೊಡ್ಡ ದೊಡ್ಡ ಟೀಮೇ ಇದೆ. ಚಿಲ್ಲರೆ ಮರಗಳ್ಳರ ಕಲರವ ಕೂಡ ಕಡಬದಲ್ಲಿದೆ. ಇವರೆಲ್ಲರೊಂದಿಗೆ ಅರಣ್ಯ ಇಲಾಖೆಯ ಜುಗಲ್ ಬಂದಿ ಇದೆ. ಮರಗಳ್ಳರು ಸತ್ತಂತೆ ಮಾಡೋದು ಅರಣ್ಯ ಇಲಾಖೆಯವರು ಅತ್ತಂತೆ ಮಾಡೋದು ಓಬಿರಾಯನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹಾಗೆಂದು ಕಡಬಕ್ಕೆ ಕಾಡು ಕಾಯಲು ಬರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಡ ಸನ್ಯಾಸಿಗಳಲ್ಲ. ಕಡಬದಲ್ಲಿ ಮರ ಕಡಿಯುವ ಶಬ್ದಕ್ಕೆ ಸೌಂಡ್ ಪ್ರೂಫ್ ಮಾಡಿಕೊಂಡ ಮಹಾನ್ ಕೆಲಸಗಾರರು ಇವರು.





   ಹಾಗೆಂದು ಕಡಬದ ಅರಣ್ಯ ಇಲಾಖೆ ಸಿಬ್ಬಂದಿ ಯಾರೂ ಒಂದು ಪೈಸೆ ಮುಟ್ಟಲ್ಲ. ನೀವು ಎಷ್ಟೇ ಒತ್ತಾಯ ಮಾಡಿದರೂ ಅವರು ನಿಮ್ಮ ಹತ್ತಿರ ದುಡ್ಡು ತೆಗೆದು ಕೊಳ್ಳಲ್ಲ.ಆದರೆ ನಿಮ್ಮ ಕೆಲಸ ಮಾತ್ರ ಜಟ್ ಫಟ್ ಆಗಿಯೇ ಆಗುತ್ತದೆ.‌ ಇದು ಹೇಗೆ ಎಂದು ನಿಮಗೆ ಆಶ್ಚರ್ಯವೇ ಆಗಬಹುದು. ಈಗ ಮ್ಯಾಟರ್ ಗೆ‌‌ ಬರ್ತೇನೆ. ಅಲ್ಲಿ ಕಡಬದ ಹೃದಯ ಭಾಗದಲ್ಲಿ ಸಿದ್ದಕ್ಕಿಚ್ಚನ‌‌ ಗೂಡು ಪೀಡೆ ಒಂದಿದೆ. ಓಬಿರಾಯನ ಕಾಲದಿಂದಲೂ ಕಡಬದಲ್ಲಿ ಈ ಗೂಡಂಗಡಿ ಅರಣ್ಯ ಇಲಾಖೆ ಸಿಬ್ಬಂದಿಗಳ ಅಡ್ಡೆಯಾಗಿದೆ. ನೀವು ಕಡಬದಲ್ಲಿ ಅರಣ್ಯ ಇಲಾಖೆಗೆ ಸಂಬಂಧ ಪಟ್ಟಂತೆ ಏನು ತಪ್ಪು ಕೆಲಸ ಮಾಡಿದರೂ ಅದಕ್ಕೊಂದು ಕ್ಷಮೆ ಇದೆ. ಆದರೆ ಅದಕ್ಕೆ ಪರಿಹಾರವಾಗಿ ಬಡಿಸುವ ಕಾರ್ಯಕ್ರಮ ಏನಿದ್ದರೂ ಅದು ಸಿದ್ದಿಕ್ಕಿಚ್ಚಂಡೆ ಪೀಡೆಯಲ್ಲಿ.
   ಹಾಗೆಂದು ನೀವು ಒಂದು ಮರ🌲ಕದ್ದು ಕಡಿದಿರಿ ಎಂದು ಇಟ್ಟುಕೊಳ್ಳೋಣ. ಅರಣ್ಯ ಇಲಾಖೆಯವರು ಭೂತ ಹಿಡಿದವರಂತೆ ಬಂದು ನಿಮ್ಮನ್ನು ತಿರ್ತ್ ಮಿತ್ತ್ ಮಾಡುತ್ತಾರೆ. ನಂತರ ಭೂತ ಪಿರಿದು ಡೀಲಿಂಗ್ ನಡೆಯುತ್ತದೆ. ಆ ಡೀಲಿಂಗ್ ದುಡ್ಡು ಅವರು ಕೈಯಲ್ಲಿ ಮುಟ್ಟಲ್ಲ. ಅದನ್ನು ನೀವು ಸಿದ್ದಿಕ್ಕಿಚ್ಚಂಡೆ ಪೀಡೆಗೆ ಮುಟ್ಟಿಸಿದರೆ ಸಾಕು,ಅದು ಮುಟ್ಟುವಲ್ಲಿಗೆ ಮುಟ್ಟಿ ಬಿಡುತ್ತದೆ. ಹೀಗೆ ಮರಗಳ್ಳರು, ಮಿಸನ್ ಇದ್ದವರು, ಕ್ರೇನ್ ಇದ್ದವರು, ಆನೆ 🐘 ಹೋಲ್ಡರ್ಸ್, ಮಿಲ್ಲಿನವರು, ಫರ್ನಿಚರ್ ಮಾಡುವವರು ಮತ್ತು ಮರ ಕದ್ದುಕೊಂಡು ಪರ್ಮನೆಂಟ್ ಕಾಡಿನಲ್ಲೇ ಇರುವ ಕಾಡುಪಾಪಗಳು ಹೀಗೆ ಎಲ್ಲರೂ ಅರಣ್ಯ ಇಲಾಖೆಯಿಂದ ಏನಾದರೂ ಉಪದ್ರ,ಅಜನೆ, ವಾಸ್ತು ದೋಷ, ಚಿದ್ರದೋಷ ಕಂಡು ಬಂದಲ್ಲಿ ಸೀದಾ ಸಿದ್ದಿಕ್ಕಿಚ್ಚಂಡೆ ಪೀಡೆಗೆ ಹೋಗಿ ಅಲ್ಲಿ ಅಗೆಲು ಕೊಟ್ಟು ಪರಿಹಾರ ಕಂಡು ಕೊಳ್ಳುತ್ತಾರೆ. ಇದೊಂದು ಸೇಫ್ ಟೆಕ್ನಿಕ್. ಅತಿಮೀರ ಲೋಕಾಯುಕ್ತ ಪೋಲಿಸರು ಬಂದರೂ ಸಿದ್ದಿಕ್ಕಿಚ್ಚನ    ಲುಂಗಿಯನ್ನೇ ಹಿಡಿಯ ಬೇಕಷ್ಟೇ, ಇವರು ಸಿಕ್ಕಿ ಬೀಳುವ ಚಾನ್ಸೇ ಇಲ್ಲ.




     ಇನ್ನೊಂದು ಇಲ್ಲಿನ ವಿಶೇಷ ಏನೆಂದರೆ ಕಾನೂನು ಬಾಹಿರವಾಗಿ ಮರ ಕಡಿಯುವವರು ಮತ್ತು ಕದಿಯುವವರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಳಿಗ್ಗನ ಹಾಗೆ   ಊರಿನ ಕೋಳಿ 🐓 ಕೇಳುತ್ತಾರೆ ಎಂಬ ಸುದ್ದಿ ಇದೆ. ಅಲ್ಲಿ ಹಳೇ ಸ್ಟೇಷನ್ ಹತ್ತಿರ ಯಾರದ್ದು ಮಾರಾಯ್ರೆ 🏡 ಮನೆ? ಕಂಡಾಪಟ್ಟೆ ಮರ ಹಾಕಿದ್ದಾರಂತೆ ಅದಕ್ಕೆ. ಪಾಪದವನು ಸೂತ ಪೆಟ್ಟಿಗೆ ಮಾಡ್ಲಿಕ್ಕೆ ಒಂದು ಪೊಂಗರೆ ಮರ ಕಡಿದರೂ ಅಬ್ಬರಿಸಿ ಬೊಬ್ಬಿರಿಯುವ ಮಂದಿ ಹಳೇ ಸ್ಟೇಷನ್ ಮನೆಗೆ ಒಂದು ರೌಂಡ್ ಹೋಗಿ ಬರಲಿ.







                                                        


  ಅಲ್ಲಿ ಗುತ್ತಿಗಾರು ಸಮೀಪದ ಕಂದ್ರಪಾಡಿಯಲ್ಲಿ ದೊಡ್ಡ ಕೊರ್ದ ಕಟ್ಟ ಆಗುತ್ತಿದ್ದು ಸುಳ್ಯ, ಪುತ್ತೂರು ಭಾಗದ ಕಟ್ಟವೀರ‌ರು ಜಮಾವಣೆ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಕಂದ್ರಪಾಡಿಯಲ್ಲಿ ರಾಜದೈವ ಪುರುಷ ದೈವಗಳ ಕೋಲ ನಡೆದಿದ್ದು ಆ ಲೆಕ್ಕದಲ್ಲಿ ಒಮ್ಮೆ ದೊಡ್ಡ ಸೈಜಿನ ಕಟ್ಟ ನಡೆದಿತ್ತು. ಈವತ್ತು ಪುನಃ ಬಿರಿ ಕಟ್ಟ ನಡೆಯುತ್ತಿದೆ. ಕೋಳಿ ಅಂಕ ನಡೆಸಲು ಪರ್ಮಿಷನ್ ಕೊಡಬಾರದು ಎಂದು ದಕ್ಷಿಣ ಕನ್ನಡ ಪೋಲಿಸ್ ವರಿಷ್ಠನ ಖಡಕ್‌ ಆದೇಶವಿದ್ದರೂ ಅವೆಲ್ಲ ಲೆಕ್ಕಕ್ಕೇ ಇಲ್ಲ. ಆಯ್ತು ಕಂದ್ರಪಾಡಿಯಲ್ಲಿ ಒಮ್ಮೆ ಕಟ್ಟ ನಡೆದಿದೆ ಈಗ ಪುನಃ ಬಿರಿ ಕಟ್ಪ ಯಾತಕ್ಕೆ? ಈಗಾಗಲೇ ಕಂದ್ರಪಾಡಿಯಲ್ಲಿ ರಾಜಾರೋಷವಾಗಿ ಕಟ್ಟ ನಡೆಯುತ್ತಿದ್ದು ಕುಪುಳೆ, ಉರಿಯೆ, ಬೊಳ್ಳೆ, ಮೈಪೆ, ಗಿಡಿಯೆ, ಪೆರಡಿಂಗೆ, ಕಕ್ಕೆ, ಕೆಮೈಪೆ ಮುಂತಾದ ಪೆಟ್ಟಿಸ್ಟ್ ಕೋಳಿಗಳ ಯುದ್ಧ ಶುರುವಾಗಿದೆ. ಈ ನ್ಯೂಸ್ ದಕ್ಷಿಣ ಕನ್ನಡ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಮೊಬೈಲ್ ಗೆ ಮತ್ತು ಪುತ್ತೂರು ಉಪವಿಭಾಗದ ಪೋಲಿಸ್ ವರಿಷ್ಠನ ಮೊಬೈಲ್ ಗೆ ಸೆಂಡ್ ಮಾಡಲಾಗುತ್ತದೆ. 




   ಆದ್ದರಿಂದ ಅವರ ಜನರು ಬರುವ ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ ಸೇಫ್ ಆಗೋದು ಒಳ್ಳೆಯದು. ಇಲ್ಲದಿದ್ದರೆ ಮತ್ತೆ ನೂರು‌ ಮೀಟರ್, ಇನ್ನೂರು ಮೀಟರ್, ಹೈಜಂಪು, ಲಾಂಗ್ ಜಂಪು ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಮಾಡಬೇಕಾಗುತ್ತದೆ.
ಓಡಿ....ಓಡಿ...ಈಗಲೇ ಓಡಿ.
ಪೋಲಿಸರಿಗೆ ವಿ.ಸೂ: ಈವತ್ತು ಕಂದ್ರಪಾಡಿಯಲ್ಲಿ ಕೋಳಿ ಕಟ್ಟ ಮುಗಿದ ಕೂಡಲೇ ಅಲ್ಲಿ ಜುಗಾರಿ ಕುಮಾರಣ್ಣನ ರಬ್ಬರ್ ಕೂಪಿನಲ್ಲಿ ತಾಲೂಕು ಮಟ್ಟದ ಜುಗಾರಿ ಕಾರಂಜಿ ನಡೆಯಲಿದೆ. ಎ.ಬಿ, ಬೈರಾಸ್‌ ಗೊಬ್ಬು, ಡುಗು ಡುಗು ಮುಂತಾದ ವಿವಿಧ ರೀತಿಯ ಜುಗಾರಿ ಗೊಬ್ಬು ನಡೆಯಲಿದೆ.










                                                       


   ಪುತ್ತೂರು: ಮೇಘ ಕಲಾ ಆರ್ಟ್ಸ್ ಡ್ಯಾನ್ಸ್, ದರ್ಬೆ ಪುತ್ತೂರು ಮುರಳಿ ಬ್ರದರ್ಸ್ ಡ್ರಾನ್ಸ್ ಕ್ರೂ ಪುತ್ತೂರು ದ.ಕ. ಇವರ ವತಿಯಿಂದ ಮಾಯಿದೆ ದೇವುಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ವಿಕ್ಟರ್ ಆಂಗ್ಲ ಮಾಧ್ಯಮ  ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಚಿತ್ತಾರ ಮಕ್ಕಳ ಬೇಸಿಗೆ ಶಿಬಿರ ಎ.2ರಿಂದ 11 ರವರೆಗೆ ಪುತ್ತೂರು ಮಾಯಿದೆ ದೇವುಸ್ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ತನಕ ನಡೆಯಲಿದೆ.




    ಶಿಬಿರದಲ್ಲಿ ಗೇಮ್ಸ್,ನಟನೆ,ಡ್ಯಾನ್ಸ್, ವರ್ಲಿಅರ್ಟ್, ಕ್ರಾಫ್ಟ್, ಬೆಂಕಿ ಇಲ್ಲದೆ ಅಡುಗೆ ಸ್ಟೆಜ್ ಫಿಯರ್ ಹಾಗೂ ಇನ್ನಿತರ ಚಟುಚಟಿಕೆಗಳಿದ್ದು ಮಕ್ಕಳ ಕನಸಿಗೊಂದು ವೇದಿಕೆಯಾಗಲಿದೆ ಅವರ ವ್ಯಕ್ತಿತ್ವ ವಿಕಸನ ಹಾಗೂ ಮನೋಭಲ ವೃದ್ದಿಗೆ ಅನುಕೂಲಕರವಾಗಲಿದೆ.ನುರಿತ ಶಿಕ್ಷಕ-ಶಿಕ್ಷಕಿಯರು ವಿಶೇಷ ತರಬೇತಿ ನೀಡಲಿದ್ದಾರೆ.ಪ್ರವೇಶ ಶುಲ್ಕ 850/- ಇದ್ದು 6 ರಿಂದ 16 ವರ್ಷದ ಯಾವುದೇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದು. ಭಾಗವಹಿಸಿದವರಿಗೆ ಸರ್ಟಿಫಿಕೇಟ್ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ. ಎಲ್ಲ ಶಾಲೆಯ ಮಕ್ಕಳಿಗೆ ಅವಕಾಶ 9845166406, 8050843216, ನಂಬರನ್ನು ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










                                                      


   ಅದೊಂದು ‌ಸ್ವಸಹಾಯ ಸಂಘದ ಆಫೀಸು. ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಬಾಲೆಂಬಿಯಲ್ಲಿ ಇದೆ. ಮಡಿಕೇರಿ ತಾಲೂಕು ಅಂದ್ರೆ ಅದು ಘಟ್ಟದ ಮೇಲಿನ ಊರಲ್ಲ. ಘಟ್ಟದ ಕೆಳಗಿನದ್ದೇ ಊರು. ಸುಳ್ಯ ಸಂಪಾಜೆಯ ರಾಜಧಾನಿ ಕಲ್ಲುಗುಂಡಿಯಿಂದ ಬರೀ ಐದಾರು ಕಿ.ಮೀ ಅಷ್ಟೇ. ಒಂದು ಹತ್ತು ಹದಿನೈದು ದಿನಗಳ ಹಿಂದೆ ಇಲ್ಲಿ ಕಾರ್ಯ ನಿರ್ವಹಿಸುವ ಸ್ವಸಹಾಯ ಸಂಘದ ಆಫೀಸಿನಲ್ಲಿ ಗಲಾಟೆಯೋ ಗಲಾಟೆ. ಗ್ರಾಮಸ್ಥರಿಗೆ ಫ್ರೀ ಶೋ. ವಿಷಯ ಏನೆಂದರೆ ಸಂಘದಲ್ಲಿ ಅದೇನೋ ಅಂಡಿಗುಂಡಿ ಕೆಲಸ‌ ಮಾಡುವ ಕುದ್ರೆಪಾಯ ಕೋಜ ಎಂಬುವನು ಪೆರ್ಮುಂಡದ ಆಂಟಿಯೊಬ್ಬಳನ್ನು ಬೈಕಿನಲ್ಲಿ ಅಂಚಿಂಚಿ ಕರಕ್ಕೊಂಡು ಹೋಗುತ್ತಾನೆ, ಸಂಘದ ಕೆಲಸ ಅಂತ ಇಬ್ಬರೂ ಅಪಗಪಗ ಮಾಯವಾಗುತ್ತಾರೆ, ಸಂಘದ ಬಗ್ಗೆ  ಫುಲ್ ನೈಟ್ ಕಿವಿಯ  ಹೂ ಬಾಡಿ ಹೋಗುವಷ್ಟು ಮಾತಾಡುತ್ತಾರೆ, ಅವಳು ತಿಂದ ಅರ್ಧ ಲಾಡು ಇವನು ತಿನ್ತಾನೆ, ಇವನು ತಿಂದ ಅರ್ಧ ಪೆಲತ್ತರಿ ಅವಳು ತಿನ್ತಾಳೆ, ಇವರಿಬ್ಬರೂ ನಾರ್ಮಲ್ ಇರಲ್ಲ, ಸಂಘದ ಕಛೇರಿಯಲ್ಲಿಯೇ "ಉಪ್ಪು ಬೋಡ..... ಮುಂಚಿ ಬೋಡ..." ಎಂದು ಆಂಟಿಯನ್ನು ಎತ್ತಿಕ್ಕೊಂಡು ಆಟ ಆಡಿಸುತ್ತಾ ಇರ್ತಾನೆ ಎಂದೆಲ್ಲಾ ಸುದ್ದಿಯಾಗಿ ಅದು ಬಾಲೆಂಬಿಯಲ್ಲಿ ದಂತಕಥೆಯಾಗಿ ಬಾಯಿಯಿಂದ ಬಾಯಿಗೆ ಪಿಸ ಪಿಸ‌ ಆಗಿ, ಕಿಸ ಕಿಸ ಹೋಗಿ ಕೊನೆಗೆ ಬಂದು ಬಿದ್ದಿದ್ದು ಪೆರ್ಮುಂಡ ಆಂಟಿಯ ಗಂಡನ ಕಿವಿಗೆ. ಆಂಟಿ ಗಂಡನಿಗೆ ಭೂತ ಹಿಡಿದೇ ಬಿಟ್ಟಿತು.




    ಹಾಗೇ ಮೊನ್ನೆ ಬಾಲೆಂಬಿ ಸ್ವಸಹಾಯ ಸಂಘದ ಕಛೇರಿಗೆ ಭೂತ ಹಿಡಿದೇ ಬಂದ ಪೆರ್ಮುಂಡ ಆಂಟಿ ಗಂಡ ತನ್ನ ಹೆಂಡ್ತಿಯ ಗಂಟನಿಗೆ ಸಮಾ... ಕೊಟ್ಟಿದ್ದಾನೆ. ಆದರೆ ಕುದ್ರೆಪಾಯ ಕೋಜ ಪೆಟ್ಟು ತಿಂದು ಸುಮ್ಮನೆ ಕೂರಲಿಲ್ಲ. ಅವನೂ ರಿಟರ್ನ್ ಪೆಟ್ಟು ಕೊಟ್ಟಿದ್ದಾನೆ. ಪೆರ್ಮುಂಡ ಆಂಟಿಯ ಗಂಡ ಮತ್ತು ಗಂಟನ ನಡುವೆ ಬಡಿದಾಟಗಳಾಗಿದೆ. ಗ್ರಾಮಸ್ಥರೆಲ್ಲ ಪ್ರೀಶೋ ನೋಡುತ್ತಾ ನಿಂತಿರಲಾಗಿ ಕುದ್ರೆಪಾಯದವನು ಚೂರಿ ತೆಗೆದಿದ್ದಾನೆ. ಅಷ್ಟರಲ್ಲಿ ಅಲ್ಲಿ ಸೇರಿದ್ದ ಗ್ರಾಮದ ಮಂದಿ ಜಗಳ ಬಿಡಿಸಿ ಇಬ್ಬರನ್ನೂ ಬೇರೆ ಬೇರೆ ಮಾಡಿದ್ದಾರೆ.




    ಹಾಗೇ ಬಾಲೆಂಬಿ ಜಗಳದ ನಂತರ ಪೆರ್ಮುಂಡ ಆಂಟಿ ಕುದ್ರೆಪಾಯದ ಚೂರಿ ಚಿಕ್ಕಣ್ಣನ ಸಹವಾಸ ಬಿಟ್ಟಿದ್ದಾಳೆ ಎಂದು ಸುದ್ದಿ. ಇದೀಗ‌ ಮತ್ತೊಂದು ಬ್ರೇಕಿಂಗ್ ಏನೆಂದರೆ ಇದೇ ಆಂಟಿ ದಬ್ಬಡ್ಕದ ಪುಂಡು ಜೊತೆ ಪುಂಡಿ ಬೇಯಿಸಲು ಶುರು ಮಾಡಿದ್ದಾಳೆ, ಇಬ್ಬರೂ ಅಪಗಪಗ ಮಾಯಕ ಆಗುತ್ತಿದ್ದಾರೆ ಎಂಬ ಸುದ್ದಿ ಬಂದಿದೆ .ಇಬ್ಬರೂ ಈ ತಿಂಗಳ ಅಕೇರಿಗೆ ಬೆಂಗಳೂರಿಗೆ ಗಂಟುಮೂಟೆ ಕಟ್ಟುವ ಸ್ಕೆಚ್ ಹಾಕಿದ್ದಾರೆ ಎಂದು ಬಾಲೆಂಬಿಯ ಬೇಹುಗಾರರು ತಿಳಿಸಿದ್ದಾರೆ. ಈ ನಡುವೆ ಪುಂಡುಗೆ ಪರತ್ತ್‌ ಹೆಂಡ್ತಿಯ ಕೋರ್ಟ್ ನೋಟಿಸ್ ಕೂಡ ಬಂದಿದ್ದು ತರೆಬೆಚ್ಚ ಮಾಡಿಕ್ಕೊಂಡು ಪುಂಡಿ ಬೇಯಿಸಲೂ ಪುರುಸೊತ್ತಿಲ್ಲ ಎಂಬ  ಪರಿಸ್ಥಿತಿಯಲ್ಲಿದ್ದಾನೆ. ಅಲ್ಲ ಮಾರಾಯ್ರೆ ಪೆರ್ಮುಂಡ ಆಂಟಿಗೆ ಎರಡು ಮಕ್ಕಳು, ಕುದ್ರೆಪಾಯದ ಗಂಟನಿಗೆ ಎರಡು, ದಬ್ಬಡ್ಕದ ಪಾಂಡುಗೆ ಎರಡು ಮಕ್ಕಳು. ಆದರೂ ಮೂವರಿಗೂ ಪೋಕಾಲ. ಬೇಕಾ ಇದೆಲ್ಲ?







                                                     


   ಹಾಗೆಂದು ಕಡಬ ಎಂಬ ಪೊಸ ತಾಲೂಕಿಗೆ ಇನ್ನೂ ಕೆಲವು ಅಂಗಗಳು ಹುಟ್ಟಿಲ್ಲ, ಇದ್ದ ಕಾರ್ಯಾಂಗದ ಅಂಗಗಳೇ ಸರಿ ಇಲ್ಲದೆ ಅಂಗವೈಕಲ್ಯ ಶಾಶ್ವತವಾಗಿ ಬಿಡುವ ಅಪಾಯಗಳಿವೆ. ಮೊದಲಿಗೆ ಆ ಪಟ್ಟಣ ಪಂಚಾಯಿತಿಯನ್ನೇ ತಗೊಳ್ಳಿ. ಅದೊಂದು ಮುಂಡವಿಲ್ಲದ ರುಂಡದಂತಿದೆ. ಯಾಕೆಂದರೆ ಅದಕ್ಕೆ ಬಾಡಿಯೇ ಇಲ್ಲ. ರುಂಡವಿದ್ದರೂ ಅದಕ್ಕೆ ಕಿವಿ ಕೇಳಲ್ಲ, ಕಣ್ಣು ಕಾಣಲ್ಲ. ಪಂಚಾಯಿತಿಗೆ ಬಾಡಿ ಇಲ್ಲದಿದ್ರೂ ಬಕಾಸುರನ ಹಸಿವಿದೆ. ನಾಲಿಗೆ ಇಲ್ಲದಿದ್ದರೂ ದುಡ್ಡಿನ ರುಚಿ ಗೊತ್ತಿದೆ.ಚಡ್ಡಿಯಲ್ಲಿದ್ದ ಗ್ರಾಮ ಪಂಚಾಯಿತಿಗೆ ಪ್ಯಾಂಟು ಸಿಕ್ಕಿಸಿ ಪ್ರಮೋಷನ್ ಕೊಟ್ಟಿದ್ದು ಬಿಟ್ಟರೆ ಇದು ಹೊಸ ಕುಪ್ಪಿಯಲ್ಲಿ ಹಳೇ ಗಂಗಸರ ಕೊಟ್ಟಂತಾಗಿದೆ. ಕೆಲಸ ಕಾರ್ಯಗಳು ಕಸದ ಬುಟ್ಟಿಯಲ್ಲಿದೆ.     ಟೋಟಲಿಯಾಗಿ ಹೇಳುವುದಾದರೆ ಕಡಬ ಪಟ್ಟಣ ಪಂಚಾಯಿತಿ ICUನಲ್ಲಿದೆ. ಪೊಸ ಸರ್ಕಾರ ಬಂದರೂ ಇದರದ್ದು ಮಾತ್ರ ಅದೇ ರಾಗ ಅದೇ ಹಾಡು.




    ಇನ್ನು ಕಡಬದ ಅನಾರೋಗ್ಯ ಕೇಂದ್ರದ ಕತೆ ಬರೆದೂ ಬರೆದೂ ನಮಗೇ ವಿಕ್ ನೆಸ್ ಶುರುವಾಗಿದೆ ಮಾರಾಯ್ರೆ. ಇಲ್ಲಿ ಎಲ್ಲವೂ ಇದೆ ಆದರೆ ಡಾಕ್ಟ್ರೇ ಇಲ್ಲ. ಕಡಬದಂತಹ   ‌ತಾಲೂಕ ಹೆಡ್ ಕ್ವಾರ್ಟರ್ಸ್ ನಲ್ಲಿ ಕಡೇ ಪಕ್ಷ ಬಿಪಿ ಡೌನಾದರೂ ಮರಕಟ್ಟುವ ಪರಿಸ್ಥಿತಿ ಇದೆ. ಇನ್ನು ಅನಾರೋಗ್ಯ ಕೇಂದ್ರದ ಸಿಬ್ಬಂದಿಗಳೆಲ್ಲರೂ IAS ಪಾಸು ಮಾಡಿ ಬಂದವರೇ. Dc  ಮುಲೈ ಮುಗಿಲನ್  ಹತ್ತಿರವಾರೂ ದಾನೆ ಎಡ್ಡೆ ಮಾತಾಡಬಹುದು ಅದರೆ ಕಡಬ ಅನಾರೋಗ್ಯ ಕೇಂದ್ರದ ಸಿಬ್ಬಂದಿಗಳ ಹತ್ತಿರ ಮಾತ್ರ ನೀವು ಸಾ...ಸೂ..ಅನ್ನಂಗಿಲ್ಲ. ಅವರು ಯಾವಾಗಲೂ ಮುಡಿ ಹೊತ್ತುಕೊಂಡೇ ಇರ್ತಾರೆ. ಧರ್ಮಕ್ಕೆ ಕೆಲಸ ಮಾಡುವವರ ಹಾಗೆ. ಇದ್ದ ಸಿಬ್ಬಂದಿಗಳಲ್ಲಿ ನರ್ಸ್ ಲತಕ್ಕಳ ಬಗ್ಗೆ ಮಾತ್ರ ಸಾರ್ವಜನಿಕರಲ್ಲಿ ಒಳ್ಳೆ ಅಭಿಪ್ರಾಯಗಳಿವೆ. ಅವರ ನಗುಮುಖದ ಸೇವೆಂಯಿಂದಾಗಿಯೇ ಅನಾರೋಗ್ಯ ಕೇಂದ್ರಕ್ಕೆ ಬೋಣಿಯಾದರೂ ಆಗುತ್ತಿದೆ ಅವರಿಲ್ಲದಿರುತ್ತಿದ್ದರೆ ಕೇಂದ್ರಕ್ಕೆ ಪೇಶೆಂಟ್ ಗಳ ಕುಲೆಯೂ ಹೋಗಲಿಕ್ಕಿಲ್ಲ ಎಂಬ ಮಾತು ಕಡಬದಲ್ಲಿ ಚಾಲ್ತಿಯಲ್ಲಿದೆ.
   ಇನ್ನು ಕಡಬದಲ್ಲಿ ಕರೆಂಟ್ ಕಜೆಂಟ್ ಆಗಿದೆ. ಆಚೆ ಸುಬ್ರಹ್ಮಣ್ಯದಲ್ಲಿ ಒಂದು ಬೊಳ್ಳುಳ್ಳಿ ಪಟಾಕಿ ಢಂ ಅಂದರೂ ಲೈನ್ ಮೆನ್ ಗಳು ಓಡಿ ಹೋಗಿ ಫ್ಯೂಸು ತೆಗೆದು ಅಡಗಿಸಿಡುತ್ತಾರೆ. ಇನ್ನು ಕಡಬದಲ್ಲಿ ಲೈನ್ ರಿಪೇರಿ ಈ ಜನ್ಮದಲ್ಲಿ ಮುಗಿಯಲ್ಲ. ಲೈನ್ ರಿಪೇರಿ ಇದ್ದರಂತೂ ಕರೆಂಟ್ ನ ಫೋಟೋ ಕೂಡ ಸಿಗಲ್ಲ. ಬೆಳಿಗ್ಗೆ ಎದ್ದು ಒಟ್ಟೆ ದೋಸೆ  ತಿಂದು ‌ಸಾಯೋಣ ಎಂದು ಅಕ್ಕಿ ಕಡಿಲಿಕ್ಕೆ ಗ್ರೈಂಡರ್ ಗೆ ಹಾಕಿ ಎರಡು ಸುತ್ತು ತಿರ್ಗಿದ ಕೂಡಲೇ ಕರೆಂಟ್ ಚುಂಯ್ಕ ಎಂದು ಹೋಗಿ ಬಿಡುತ್ತದೆ. ಸುಮಾರು ಪೊರ್ತು ಸುದ್ದಿ.. ಇಜ್ಜಿ. ಇನ್ನು ಕರೆಂಟ್ ಬರಲ್ಲ ಎಂದು ಗ್ರೈಂಡರ್ ನಿಂದ ಅಕ್ಕಿ ತೆಗೆದು ಕಡೆಪ್ಪಲಿಗೆ ಹಾಕಿ ಡ್ರೈವಿಂಗ್ ಸೀಟಿನಲ್ಲಿ ಕೂತು ಎರಡು ಸುತ್ತು ತಿರ್ಗಿದ ಕೂಡಲೇ ಕರೆಂಟ್ ಫಳ್ಳೆಂದು ಬರುತ್ತದೆ. ಕರೆಂಟ್ ಬಂತೆಂದು ಪುನಃ ಕಡೆಪ್ಪಲಿನಿಂದ ಅಕ್ಕಿ ತೆಗೆದು ಗ್ರೈಂಡರ್ ಗೆ ಹಾಕಿದರೆ ಪುನಃ ಕರೆಂಟ್ ಚುಂಯ್ಕ. ಹಾಗೇ ಇಲ್ಲಿ ತನಕ ಕಡಬದ ಜನರನ್ನು ಕಡೆಪ್ಪಲಿನಿಂದ ಗ್ರೈಂಡರ್ ಗೆ, ಗ್ರೈಂಡರ್ ನಿಂದ ಕಡೆಪ್ಪಲಿಗೆ ಹಾಕುತ್ತಾ ಕೆಇಬಿ ವಂಚಿಸುತ್ತಾ ಬಂದಿದೆ. ದೋಸೆಯೂ ಇಲ್ಲ, ಅಕ್ಕಿ ಬಂದವೂ ಇಲ್ಲ. ಕುಂತಿ ಮಕ್ಕಳಿಗೆ ವನವಾಸವೇ ಗತಿ.




    ಬಹಳ ಹಿಂದೆ ಟೆಲಿಫೋನ್ ಇಲಾಖೆ ಅಂತ ಒಂದಿತ್ತು. ಅವರು ಕಂಬ ಹಾಕಿ ಅದರಲ್ಲಿ ತಂತಿ ಎಳೆದು ಫೋನ್ ಸಂಪರ್ಕ ಮನೆ ಮನೆಗೆ ಕೊಡುತ್ತಿದ್ದರು. ಅಬ್ಬಬ್ಬಾ ದೇವ್ರೇ ಅವರ ಕತೆ ನೋಡ ಬೇಕಿತ್ತು ನೀವು.  ಒಂದು ಬೈಹುಲ್ಲಿನ ಲಾರಿ ಅವರ ಕಂಬದಡಿಯಲ್ಲಿ ಪಾಸಾದರೆ ಒಂದು ವಾರ ಫೋನಿಲ್ಲ. ಲೈನ್ ಆಚೆ ಬರ್ಲಿಕ್ಕೆ ಇದ್ದರೆ ಮಾತ್ರ ಬರೋದು, ಲೈನ್ ಸರಿ ಆಗೋದು. ಇಲ್ಲದಿದ್ದರೆ ಇಲ್ಲ. ನೀವೇ ಹೋಗಿ ಅವನನ್ನು ಬ್ಯಾಂಡು ವಾಲಗದಲ್ಲಿ ಕರೆತರಬೇಕು. ಯಾವಾಗ ಮೊಬೈಲ್ ಫೋನ್ ಸಂಪರ್ಕ ಬಂತೋ ಅಂದಿನಿಂದ ಇವರ ಕತೆ ಕ್ಲೋಸ್ ಆಗಿತ್ತು. ಹಾಗೆ ಕರೆಂಟ್ ಗೆ ಕೂಡ ಏನಾದರೂ ಪರ್ಯಾಯ ಬಂದು ಅವರು ನೊಣ ಹೊಡೆಯುವುದನ್ನು ನೋಡಲು ಅದೆಷ್ಟೋ ಜನ ಕಾಯುತ್ತಿದ್ದಾರೆ.  ಅಲ್ಲ ಮಾರಾಯ್ರೆ ಈ ದೇಸಕ್ಕೆ  ಸ್ವತಂತ್ರ ಬಂದು ಎಷ್ಟು ವರ್ಷ ಆಯ್ತು ಎಂದು ಈ ಕೆಇಬಿಯವರಿಗೆ ಒಮ್ಮೆ ಮನವರಿಕೆಯಾದರೂ ಮಾಡಿಕೊಡಬೇಕು. ಸ್ವತಂತ್ರ ಬಂದು ಇಷ್ಟು ವರ್ಷಗಳಾದರೂ ಒಂದು ಇಪ್ಪತ್ತನಾಲ್ಕು ಗಂಟೆ ಬಿಡಿ, ಕಡೇ ಪಕ್ಷ ಹತ್ತು ಗಂಟೆಯಾದರೂ ನಿರಂತರ ಕರೆಂಟ್ ಕೊಡುವ ಯೋಗ್ಯತೆ ಇಲ್ಲದ ಇಲಾಖೆ ಇದ್ದೂ ಇಲ್ಲದಂತಾಗಿದೆ. ಈ ಇಲಾಖೆಯ ಮುಖ್ಯ ಕೆಲಸವೇ ಕರೆಂಟ್ ಕಟ್ ಮಾಡೋದು. ಕಡಬದಂತಹ ಪೇಟೆಯಲ್ಲಿ ಕರೆಂಟ್ ಇಲ್ಲ ಅಂದ್ರೆ ಏರ್ಲ ದಾನೆ ಪನ್ವೆರ್?  ನೈಟ್ ತೆಗೆಯೋದು ಹಗಲು ಹಾಕೋದು, ನೈಟ್ ಹನ್ನೆರಡು ಗಂಟೆಗೆ ಭೂತ, ಕುಲೆ, ಪೀಡೆ ಪಿಚಾಚಿಗಳಿಗೆ ಕರೆಂಟ್  ಹಾಕೋದು, ತ್ರೀ ಫೇಸ್ ಬೇಕಾದಾಗ ಸಿಂಗಲ್ ಕೊಡೋದು, ವೋಲ್ಟೇಜ್ ಡೌನ್ ಮಾಡಿ ಲೈನ್ ಕೊಡೋದು ಇತ್ಯಾದಿ ಇತ್ಯಾದಿ. ಈ ಕರೆಂಟ್ ಇಲಾಖೆ ಮಾಡುವ ಬೇಜವಾಬ್ದಾರಿ ಕೆಲಸಗಳಿಂದ ಕಡಬದ ಜನ ರೋಸಿ ಹೋಗಿದ್ದಾರೆ. ಈ ಬಗ್ಗೆ ಹೇಳುವವರು ಯಾರು ಕೇಳುವವರು ಯಾರು?  ಕಡಬದ ಲೀಡರ್ ಗಳಿಗೆ ಮಾತಾಡಲೂ ವಿಪರೀತ ಸೆಖೆ. ಇದ್ದೊಬ್ಬ ವರ್ಗೀಸ್  ಪೊರ್ಬುಲು ಯಾವುದಕ್ಕೆಲ್ಲ ಮಾತಾಡಲಿ, ಯಾವುದಕ್ಕೆಲ್ಲ ಹೋರಾಡಲಿ? ಇನ್ನು ದೇಸಭಕ್ತರಿಗೆ ಕರೆಂಟೆಲ್ಲ ಬೇಡ. ಚಿಮಿಣಿ ಇದ್ದರೂ ಸಾಕು ಚಾಚಿ ಮಾಡುತ್ತಾರೆ. ಕಡಬಕ್ಕೆ ಕಡಂಬಳಿತ್ತಾಯನೇ ಗತಿ.







                                                    




   ಬಹಳ ಹಿಂದೆ ಒಬ್ಬ ಕಕ್ಕ ಮಾಡುತ್ತಾ ರೊಟ್ಟಿ ತಿನ್ನುತ್ತಿದ್ದನಂತೆ. ಆಗ ಯಾರೋ ದಾರಿಹೋಕ ಹಿರಿಯರು "ನೋಡು ಮಾರಾಯ ನೀನು ಕಕ್ಕ ಮಾಡುವಾಗ ರೊಟ್ಟಿ ತಿನ್ನಬಾರದು" ಎಂದು ಹೇಳಿದರಂತೆ. ಆಗ ಕಕ್ಕ ಮಾಡುತ್ತಿದ್ದವನು ‌" ರೊಟ್ಟಿಯನ್ನು ಅದಕ್ಕೆ ಕಂತಿಸಿ ತಿನ್ನುತ್ತೇನೆ, ನನ್ನ ರೊಟ್ಟಿ ನನ್ನ ಕಕ್ಕ. ನಿನಗೇನು ನಷ್ಟ"? ಅಂದಿದ್ದನಂತೆ. ಹಾಗೇ ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ಮೊನ್ನೆ ಒಬ್ಬ ಮಹಾನ್ ರಕ್ಕಸವಾದಿ ದನ‌‌ ಕಡಿದು ಜಾಲತಾಣಗಳಿಗೆ ಆಹಾರವಾಗಿದ್ದಾನೆ. ಯಾರದ್ದೂ ಸುದ್ದಿ ಇಲ್ಲ. ಸುದ್ದಿ ಬಿಟ್ರಾ ಇವನದ್ದು?
   ಇವನ ಹೆಸರು ಪಿ.ಎಂ (ಪೊಣ್ಣು ಮರ್ಲ)ಮಮ್ಮದೆ‌‌ ಯಾನೆ ದುಬೈ ಕಾಕ. ಕೊಲ್ಲಮೊಗ್ರದಲ್ಲಿ ದೊಡ್ಡ ಪೆಟ್ಟಿಸ್ಟ್. ಸ್ವಂತ ರಬ್ಬರ್ ತೋಟ, ರಬ್ಬರ್ ತೋಟ ಲೀಸಿಗೆ ವಹಿಸಿ ಕೊಳ್ಳುವುದು ಇತ್ಯಾದಿ ದುಬೈ ಕಾಕನ‌‌ ಹಗಲಿನ ವಹಿವಾಟು. ರಾತ್ರಿ ಶುರುವಾದರೆ ಸಾಕು ಕಾಕನ ರಬ್ಬರ್  ತೋಟದ ಶೆಡ್‌ ನಲ್ಲಿ ಅಂಬಾ....ಗಳ ರೋಧನ, ರಕ್ತದ‌ ಓಕುಳಿ, ಮಾನವ ರೂಪದ ರಕ್ಕಸರ ಅಟ್ಟಹಾಸ. ಇದೆಲ್ಲ ಕೊಲ್ಲಮೊಗ್ರದಲ್ಲಿ. ಹಾಗೆಂದು ಕಾಕ ಮೊದಲು ದುಬೈನಲ್ಲಿದ್ದರು. ಅಲ್ಲಿ ಏನೋ ಮುರ್ಕಿಸ್ ಮಾಡಿ ತಲೆ ಗೀಸಿಕ್ಕೊಂಡು ಬೊರ್ ಮಂಡೆ ಕಾಕ ಆಗಿ ಬಂದು ಇಳಿದಿದ್ದು ಕೊಲ್ಲಮೊಗ್ರದಲ್ಲಿ. ಅಲ್ಲಿಂದ ನಿರಂತರವಾಗಿ ದಿನಾ ದನ ಕಡಿಯುವುದು ಮತ್ತು ಅದನ್ನು ಸುಳ್ಯ ಕಲ್ಲುಗುಂಡಿಗಳಲ್ಲಿ‌ ಮಾರ್ಕೆಟಿಂಗ್ ಮಾಡುವುದೇ ಇವನ‌ ಕಾಯಕವಾಗಿದೆ. ಕೊಲ್ಲಮೊಗ್ರದ ಸಮಾಜ ಕಂಟಕ ಪ್ರಶಸ್ತಿ ಏನಾದರೂ ಕೊಡುವುದಿದ್ದರೆ ಅದಕ್ಕೆ ಬೇರೆ ನಾಮೀನೀಸ್ ನಾಡುವ‌ ಪ್ರಮೇಯವೇ ಬರದು. ಯಾಕೆಂದರೆ ಎಲ್ಲಾ ರೀತಿಯಿಂದ ನೋಡಿದರೂ ಅದಕ್ಕೆ ಕಾಕ ಅರ್ಹ ವ್ಯಕ್ತಿ.



   ಹಾಗೆಂದು ಕಾಕ ಎಲ್ಲಾ ಸಬ್ಜೆಕ್ಟ್ ಗಳಲ್ಲೂ ಎತ್ತಿದ ಕೈ. ಪೊಣ್ಣು ವಿಷಯದಲ್ಲೂ ಕಾಕನ ಜೊಲ್ಲು ಟ್ಯಾಂಕರ್ ಲೆಕ್ಕದಲ್ಲಿದೆ. ಪೊಣ್ಣು ಜೀವ ಕಂಡರೆ ಸಾಕು ಕಾಕನ ಸರ್ವಾಂಗಗಳಿಗೂ ಸುಗ್ಗಿ. ಇಂಥ ಕಾಕ‌ ಕಳೆದ ವರ್ಷ ಅದ್ಯಾರೋ ಹೋಟೆಲ್ ಹೆಂಗಸಿನ ಜೊತೆ ಹೋಟೆಲಿನಲ್ಲಿಯೇ ಬಜಿಲ್ ಸಜ್ಜಿಗೆ ಮಾಡಲು ಹೋಗಿ ಸಿಕ್ಕಿ ಬಿದ್ದು ಕುಂಡೆಯಲ್ಲಿ OTP ಬರುವ ತನಕ ತಿಂದಿದ್ದ. ಇಂಥ ಕಾಕ‌ ರಬ್ಬರ್ ಟ್ಯಾಪರ್ ಗಳಿಗೆ ದುಡ್ಡು ಪತಾಯಿಸ್ ಮಾಡೋದು, ಅವರ ಹೆಂಡತಿಗಳಿಗೆ ಕೈ ಕಾಲು ಹಾಕೋದು, ಅವರಿಗೆ ಹೊಡೆಯೋದು, ಓಡಿಸೋದು ಮುಂತಾದ ಧರ್ಮಕಾರ್ಯಗಳನ್ನು ಮಾಡುತ್ತಾ ಆನಂದದಿಂದ ಈ ಜಗತ್ತಿನಲ್ಲಿ ಇನ್ನೂ ಬದುಕಿದ್ದಾನೆ.




    ಹಾಗೇ ಮೊನ್ನೆ ತನಕ ಕಾಕನ ದನ ಕಡಿಯುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ಆದರೆ ನಮ್ಮ ಮಾಹಿತಿದಾರರು ಒಬ್ಬ ರಬ್ಬರ್ ಟ್ಯಾಪರನ್ನು ಸೆಟ್ ಮಾಡಿಕ್ಕೊಂಡು ಕಾಕನ ಶೆಡ್ ನಲ್ಲಿ ದಿನ ದನ ಕಡಿಯುವ ಕೆಲಸದ ವೀಡಿಯೋ ಮಾಡಿಸಿದ್ದರು. ಇದೀಗ ಸ್ವಲ್ಪ ದಿನ ಕಾಕ ಕೆಲಸಕ್ಕೆ ರಜೆ ಘೋಷಣೆ ಮಾಡಬಹುದು. ಹಾಗೆಂದು ಕಾಕ ದಿನಾ ದನ ಕಡಿಯುವ ಕೆಲಸ ಒಂದನ್ನೇ ಮಾಡುತ್ತಿಲ್ಲ. ಕಾಕ ಒಳ್ಳೆ ಬೇಟೆಗಾರ. ಕೊಲ್ಲಮೊಗ್ರ, ಕಲ್ಮಕಾರು ಕಾಡುಗಳಲ್ಲಿ ಕಾಕನ ಬೇಟೆ ಇದೆ. ರಾತ್ರಿಯಿಡೀ ಜಾಗರಣೆ ಕೂರುವ ಕಾಕ ಹಗಲು ಎಲ್ಲಿಗಾದರೂ ಸವಾರಿ ಹೊರಟರೆ ಒಂದು ಅಪಘಾತ ಗ್ಯಾರೆಂಟಿ. ಅಂದ್ರೆ ಕಾಕ ಅಷ್ಟು ನಿದ್ರೆ ಕಜ್ಜೆರಿದ್ದಾನೆ. ಕುಂಭಕರ್ಣನ ಹಾಗೆ ಆರು ತಿಂಗಳು ಮಲಗಿದರೂ ಮುಗಿಯದಷ್ಟು ನಿದ್ದೆ ಇದೆ. ಇನ್ನೊಂದು ವಿಷಯ ಏನೆಂದರೆ ಕಾಕನಲ್ಲಿ ಕಂಟ್ರಿ ಪಿಸ್ತೂಲ್ ಇದೆ ಎಂದು ತಿಳಿದುಬಂದಿದೆ. ಯಾರಿಗೆ, ಯಾವಾಗ ಢಂ ಮಾಡ್ಲಿಕ್ಕೆ ಎಂದು ಯಾರಿಗೆ ಗೊತ್ತು.
   ಎಲ್ಲಿದ್ದಾರೆ ಕೊಲ್ಲಮೊಗ್ರದ ಬುದ್ಧಿಜೀವಿಗಳು, ಹೋರಾಟಗಾರರು, ಬಿಸಿರಕ್ತದ ಯುವಜನಾಂಗ, ಜಾಲತಾಣಗಳ ವೀರರು, ಅಧಿಕ ಪ್ರಸಂಗಿಗಳು? ಆವತ್ತು ಕೊಲ್ಲಮೊಗ್ರದ ಒಂದು ವರದಿ ಮಾಡಿದ್ದಕ್ಕೆ ಪಟ್ಲೆರ್ ನ್ಯೂಸ್  ಮತ್ತು ಅದರ ಸಂಪಾದಕರ ಮೇಲೆ ಪೋಲಿಸ್ ಕಂಪ್ಲೇಂಟ್ ಕೊಟ್ಟು ಕೊಲ್ಲಮೊಗ್ರ ಊರಿನ ಹೆಸರೇ ಹಾಳಾಯಿತು ಎಂದು ಊರೇ ಮುಳುಗಿದಂತೆ ಬೊಬ್ಬೆ ಹಾಕಿದ ಜಾಲತಾಣಗಳ ಅಧಿಕ ಪ್ರಸಂಗಿಗಳು ‌ಈಗ ಎಲ್ಲಿದ್ದಾರೆ? ರಾತ್ರಿ ಹನ್ನೆರಡು ಗಂಟೆಗೆ ನನಗೆ ಕಾಲ್ ಮಾಡಿ "ನಿನ್ನನ್ನು ಹಾಗೆ ಬಿಡುವುದಿಲ್ಲ" ಎಂದು ಘರ್ಜಿಸಿದ ಸಿಂಹ ಎಲ್ಲಿದೆ? ನಾನು ಮಾತಾಡಿದ್ದನ್ನು ರೆಕಾರ್ಡ್ ಮಾಡಿಕ್ಕೊಂಡು ಅದನ್ನು ಜಾಲತಾಣಗಳಿಗೆ ಹಾಕಿ ಆನಂದ ಅನುಭವಿಸಿದ‌ ಮಹಾನ್ ದೇಸಭಕ್ತ ಈಗ ಜೈಲಿನಲ್ಲಿ ಇದ್ದಾನ‌‌ ಅಥವಾ ಹೊರಗೆ ಇದ್ದಾನೋ? ಯಾಕೆ ಇವರಿಗೆ ಕಾಕನ ದನ ಕಡಿಯುವ ಅಡ್ಡೆ ಕಣ್ಣಿಗೆ ಬಿದ್ದಿಲ್ವಾ? ಏಳಿ ವೀರರೇ ಎದ್ದೇಳಿ, ಗುರಿ? ಮುಟ್ಟುವ    ತನಕ ಹೋರಾಡಿ.ಕಾಕ ಕಡಿಯುವ ದನಗಳಿಗೆ ಒಂದು ನ್ಯಾಯ ದೊರಕಿಸಿ ಕೊಡಿ. ನಿಮ್ಮ ಹೋರಾಟ ಪತ್ರಿಕೆಯೊಂದರ ವಿರುದ್ಧ ಮಾತ್ರವಲ್ಲದೆ ಅದು ಸಮಾಜ ಕಂಟಕರ ವಿರುದ್ಧವೂ ಜಾರಿಯಲ್ಲಿರಲಿ.










                                                   

   ಒಂದು ನ್ಯಾಶನಲೈಜ್‌ ಬ್ಯಾಂಕಲ್ಲ, ಪ್ರೈವೇಟ್ ಸೆಕ್ಟರ್ ಬ್ಯಾಂಕೂ ಅಲ್ಲ, ಜಿಲ್ಲಾ ಬ್ಯಾಂಕ್ ಕೂಡ ಅಲ್ಲ. ಆದರೂ ಒಂದು ಇದ್ದ ಬ್ರಾಂಚ್ ನ ನವೀಕರಣಕ್ಕೆ ಒಂಬತ್ತು ಲಕ್ಷ ಮುಗಿಸಲಾಗಿದೆ. ಇಷ್ಟು ಖರ್ಚು  ಬೇಕಿತ್ತಾ ಎಂಬ ಪ್ರಶ್ನೆ ಎದ್ದು ಕುಂತಿದೆ.
   ಇದು ನರಿಮೊಗರು ಸೊಸೈಟಿ. ದೊಡ್ಡ ಸೊಸೈಟಿ. ವ್ಯಾಪಾರ ವ್ಯವಹಾರ ಎಲ್ಲವೂ ದೊಡ್ಡದೇ. ಸದ್ರಿ ಸೊಸೈಟಿಯಲ್ಲಿ ದೇಸ ಭಕ್ತರು, ಸೆಕ್ಯುಲರ್ ಗಳು ಎಲ್ಲಾ ಅಧಿಕಾರ ಅನುಭವಿಸಿ ಆಗಿದೆ. ಇದೀಗ ಇಲ್ಲಿ ದೇಶ ಭಕ್ತರ ಆಡಳಿತ ಮಂಡಳಿ ಇದ್ದು ಮೊನ್ನೆ ಡಿಸೆಂಬರ್ ನಲ್ಲಿ ಕಾಂಗ್ರೇಸಿಗರಿಂದ ಕುರ್ಚಿ ತಗೊಂಡು  ಆಡಳಿತ ಶುರು ಮಾಡಿದ್ದಾರೆ. ಹಾಗೇ ಡಿಸೆಂಬರ್ ಚಳಿಯಲ್ಲಿ ಅಧಿಕಾರಕ್ಕೆ ಬಂದವರೇ ದೇಸಭಕ್ತರು ಮೊದಲು ಮಾಡಿದ ದೊಡ್ಡ ಕೆಲಸ ಅಂದರೆ ಶಾಂತಿಗೋಡು ಗ್ರಾಮದ ಕೈಂದಾಡಿ ಬ್ರಾಂಚ್ ನ ನವೀಕರಣ. ಆ ಕೆಲಸ ಯಾಕೆ ಬಂದ ಮೂರು ತಿಂಗಳಲ್ಲಿಯೇ ಫಿನಿಷ್ ಮಾಡಿ ಮುಗಿಸಿದರು ಎಂಬುದು ಸೊಸೈಟಿಯ ನಾಲಕ್ಕು ಸಾವಿರಕ್ಕಿಂತಲೂ ಅಧಿಕ ಸದಸ್ಯರ ಪ್ರಶ್ನೆ. ಹಾಗೆಂದು ಸೊಸೈಟಿಯ ಯಾವುದೇ ಕೆಲಸಗಳ ಒಂದು ಲಕ್ಷಕ್ಕಿಂತ ದೊಡ್ಡ ಬಿಲ್ ಮಾಡಬೇಕಿದ್ದರೆ ಅದಕ್ಕೆ AR,DR ಪರ್ಮಿಷನ್ ಬೇಕು. ಇದು ಅನಾಮತ್ತು ಒಂಬತ್ತು ಲಕ್ಷಗಳ ದೊಡ್ಡ ಬಿಲ್. ಇದಕ್ಕೆ AR ಪರ್ಮಿಷನ್ ಉಂಡಾ ಎಂಬುದು ಸೊಸೈಟಿ ಸದಸ್ಯ ಪ್ರಶ್ನೆ. ಆಯ್ತು AR   ಪರ್ಮಿಷನ್ ದನ ತಿಂದು ಹೋಗಲಿ, ಕಡೇ ಪಕ್ಷ ನವೀಕರಣಕ್ಕೆ ನರಿಮೊಗರು ಪಂಚಾಯಿತಿ ಏನಾದರೂ ಒಂದು ತುಂಡು ಪರ್ಮಿಷನ್ ಆದರೂ ಕೊಟ್ಟಿದೆಯಾ‌ ಎಂಬುದೇ ಡೌಟು ಕೇಸು. ಹಾಗೆಲ್ಲ ದೇಸಭಕ್ತರು ಯಾರದ್ದೂ ಪರ್ಮಿಷನ್ ಇಲ್ಲದೆ ಅಂಡಿಗುಂಡಿ ಕಾಮಗಾರಿಗಳನ್ನೆಲ್ಲ ಮಾಡಿದ್ರೆ ಕತೆ ಎಂತ ಅಂತ?




    ಹಾಗೆಂದು ಯಾವುದೇ ಕಾಮಗಾರಿಗಳಿಗೆ ಇಂಜಿನಿಯರ್ ಎಸ್ಟಿಮೇಟ್ ಬೇಕು ಮತ್ತು ಕಾಮಗಾರಿಗೆ  ಟೆಂಡರ್ ಕರೆಯ ಬೇಕು. ಇಲ್ಲಿ ಅಂಥಹ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂಬ ಗುಸುಗುಸು ಇದೆ. ಯಾವನೋ ದೇಸಭಕ್ತ ಡೈರೆಕ್ಟರ್ ಕೊಟ್ಟ ಅಂಡಿಗುಂಡಿ ಎಸ್ಟಿಮೇಟ್ ಮತ್ತು ಅವನ ಚೇಲಾನೇ ಗುತ್ತಿಗೆದಾರ. ಅಲ್ಲಿಗೆ ಒಂಭತ್ತು ಲಕ್ಷ ಮಟಾಷ್. ಪಾಪ ಸೊಸೈಟಿ ಸದಸ್ಯರು ಊರೇ ಮುಳುಗಿದಂತೆ ಕೈ ಮೇಲೆ ತಲೆ ಹೊತ್ತು ಕುಂತಿದ್ದಾರೆ. ಒಂಜಿ ಪಾಸ್ ಬೂಕು ವಿತರಣೆಗೆ ಇಷ್ಟೆಲ್ಲಾ ಬೇಕೇ?  ಇನ್ನು ಕಾಮಗಾರಿ ವಿಷಯಕ್ಕೆ ಬರುವುದಾದರೆ ಕೆಲಸ ಸರಿ ಆಗಿಲ್ಲ ಎಂಬ ಅಸಮಾಧಾನ ಇದೆ. ಇಂಟರ್ ಲಾಕ್ ಹಾಕಿದ್ದು ಸರಿ ಆಗಿಲ್ಲ ಅಲ್ಲಿ ಗುಂಡಿ ಗುರುಂಪು ಇದೆ  ಎಂಬ ದೂರಿದೆ. ಒಂಬತ್ತು ಲಕ್ಷ ಇಲ್ಲಿ ಖರ್ಚು ಮಾಡದೆ ಸಣ್ಣ ದುಡ್ಡಿನಲ್ಲಿ ಕಾಮಗಾರಿ ನಡೆಸಿ ದೊಡ್ಡ ಬಿಲ್ ಮಾಡಲಾಗಿದೆ ಎಂಬ ಅಸಮಾಧಾನ ಇದೆ. ಅದರಲ್ಲೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಉದ್ಘಾಟಿಸಿ ಏನಾದರೂ ಹೆಚ್ಚು ಕಡಿಮೆ ಆಗುತ್ತಿದ್ದರೆ‌ ಸದಸ್ಯರು ರಂಬಾರೋಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಏರ್ಲ ದಾನೆ ಪನ್ವೆರ್?










MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget