ಸುಳ್ಯ: ದುಗಲಡ್ಕ‌ದಲ್ಲಿ ಭೂತ ಜುಗಾರಿ

                                           



  ಹಾಗೆಂದು ಇದೊಂದು ಆಟ ಲೋಕಲ್ ಜುಗಾರಿಕೋರರಿಗೆ ಅಂತಲೇ ಮಾಡಿದ್ದು. ಆದರೆ ಇದೀಗ ಇದು ತಾಲೂಕು ಮಟ್ಟ ದಾಟಿ ಹೆಸರುವಾಸಿಯಾಗಿದೆ. ಅಲ್ಲಿ ಸುಳ್ಯ - ಸುಬ್ರಹ್ಮಣ್ಯ ರಸ್ತೆಯಲ್ಲಿ ಸೋಣಂಗೇರಿ ಜಂಕ್ಷನ್ ದಾಟಿದ ಮೇಲೆ ಸಿಗೋದೇ ದುಗಲಡ್ಕ‌ ಜಂಕ್ಷನ್. ಸುಳ್ಯದಿಂದ ಹತ್ತಿರ. ಇದೀಗ ದುಗಲಡ್ಕದಿಂದ ನಮ್ಮಮಾಹಿತಿದಾರ  ಬೊಗ್ಗು ದಿನಾ ಫೋನ್ ಮೇಲೆ ಫೋನ್ ಮಾಡಿ "ಇನಿ‌ ‌ಉಂಡು...ಇನಿ‌ ‌ಉಂಡು" ಎಂದು ಹೇಳಲು ಶುರು ಮಾಡಿದ್ದಾನೆ. ದೊಡ್ಡ ವಿಷಯ ಏನಿಲ್ಲ, ಅಲ್ಲಿ ದುಗಲಡ್ಕದಲ್ಲಿ ಗೀತ ಮಲಗಿ ಭೂತ ಏಳುವ ಸಮಯದಲ್ಲಿ ಜುಗಾರಿ ಕಲ ಹಾಕುತ್ತಿದ್ದಾರೆ ಎಂಬ ಸುದ್ದಿ ಅಷ್ಟೇ. ದುಗಲಡ್ಕದ ಒಬ್ಬ ಆಟೋ ಡ್ರೈವರ್, ಲಾಟ್ರಿ ವಿನ್ನರ್ ಸಾರಥ್ಯದಲ್ಲಿ ಈ ಜುಗಾರಿ ಅಡ್ಡೆ ನಡೆಯುತ್ತಿದೆ ಎಂದು ನಮ್ಮ ವರದಿಗಾರ ಬೊಗ್ಗು ವರದಿ ಕೊಟ್ಟಿದ್ದಾನೆ. ಆದರೆ ಇವರ ಜುಗಾರಿ ಹಗಲು ನಡೆಯಲ್ಲ, ಸಂಜೆ ಆಡಲ್ಲ, ನೈಟ್ ಟೈಟಾಗಿ ಮಲಗಿ ನಸುಕಿನ ಜಾವ ಅಂದರೆ ಭೂತ, ಕುಲೆ, ಪೀಡೆ, ಪಿಚಾಚಿ, ರಣೊ, ಬ್ರಹ್ಮ ರಕ್ಕಸಣ್ಣ ಮುಂತಾದ ಹರರ್‌  ಫಿಲ್ಮ್ ಸಾಮಾನುಗಳು ಬೊಬ್ಬೆ ಹಾಕಲು ಏಳುವ ಸಮಯದಲ್ಲಿ ಇವರ ಜುಗಾರಿ ಶುರುವಾಗಿ ಬೆಳಿಗ್ಗೆ ಪಕ್ಕಿ ಏಳುವ ತನಕವೂ ಯಾವುದೇ,ಯಾರದೇ ಬಾಧೆ ಇಲ್ಲದೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಸದ್ರಿ ಜುಗಾರಿ ಅಡ್ಡೆಯ ಆಯೋಜಕರು ಆಟೋ ಬೆಟ್ರಿಗೆ ಬಲ್ಬು ಸಿಕ್ಕಿಸಿ ಬೊಲ್ಪು ಮಾಡಿಕ್ಕೊಂಡು ಜುಗಾರಿ ಆಡುತ್ತಾರೆ. ಪಾಪ ಭಾರೀ‌ ಕಷ್ಟದಲ್ಲಿ ಆಟ ನಡೆಸೋದು. ಸುಳ್ಯ ಪೊಲೀಸರು ಅವರಿಗೆ ಒಂದು ಗ್ಯಾಸ್ ಲೈಟಾದರೂ ತೆಗೆದು ಕೊಟ್ಠರೆ‌ ಜುಗಾರಿ ಕೋರರು ಪೋಲೀಸರನ್ನು ಜೀವನ ಪರ್ಯಂತ ಮರೆಯಲಿಕ್ಕಿಲ್ಲ.


   ಹಾಗೆಂದು ಈಗಾಗಲೇ ಈ ಜುಗಾರಿ ಅಡ್ಡೆ ಅಪಾಯದ ಮಟ್ಟ ಮೀರಿ ಬೆಳೆದಿದೆ. ಪುತ್ತೂರು,ಕಡಬದ ಗಡಿ ಭಾಗದಿಂದಲೂ ಗಾಡಿ ಮಾಡಿಕ್ಕೊಂಡು ಜುಗಾರಿ ಭಕ್ತರು ಇಲ್ಲಿಗೆ ಆಗಮಿಸಿ ತಂದದ್ದನ್ನೆಲ್ಲ ಕಲದಲ್ಲಿ ಕಳಕ್ಕೊಂಡು ಖಾಲಿ ಚಡ್ಡಿಯಲ್ಲಿ ವಾಪಾಸಾಗುತ್ತಿದ್ದಾರೆ. ಆಯೋಜಕರೇ ತುಂಬಾ ಮೈನಸಲ್ಲಿದ್ದಾರೆ ಎಂದು ಸುದ್ದಿ. ಇನ್ನು ಅವರು ರಿಕ್ಷಾವನ್ನೂ ಕಳಕ್ಕೊಂಡರೆ ಬೆಟ್ರಿಯೂ ಇಲ್ಲ, ಕರ್ಚಿಮೆಯಲ್ಲೇ ಆಡ ಬೇಕಷ್ಟೇ. ಹಾಗೆಂದು ದುಗಲಡ್ಕದ ಜುಗಾರಿ ಕೋರರಿಗೆ ಇಷ್ಟು ಧೈರ್ಯ ಹೇಗೆ ಅಂದರೆ ಸುಳ್ಯ ಪೋಲಿಸರು ಯಾವುದೇ ಕಾರಣಕ್ಕೂ ಆ ಅಪ‌ ರಾತ್ರಿಯಲ್ಲಿ ಪೈಚಾರು ಕಡಪ್ಪು, ಸೋಣಂಗೇರಿ‌ ಕಡಪ್ಪುಗಳನ್ನೆಲ್ಲ ದಾಟಿ ದುಗಲಡ್ಕ ತನಕ ಬರಲಿಕ್ಕಿಲ್ಲ ಎಂಬುದು. ಅದಕ್ಕೆ ಸರಿಯಾಗಿ ಸುಳ್ಯ ಪೋಲಿಸರೂ ಅಷ್ಟೇ, ನೈಟ್ ಒಂಬತ್ತು ಹತ್ತು ಗಂಟೆಗೆಲ್ಲ ನಿಂಗೊಲು ತಿಂದು ಬೆರಳು ಚೀಪುತ್ತಾ ಚಾಚಿ ಮಾಡಿ ಬಿಡುತ್ತಾರೆ. 
ವಿ.ಸೂ: ದುಗಲಡ್ಕದಲ್ಲಿ ಈವತ್ತೂ ಜುಗಾರಿ ಇದೆ. ಆಟೋ ಬೆಟ್ರಿಯಲ್ಲಿ ಹಾಕಿದ‌ ವಿದ್ಯುತ್ ದೀಪಾಲಂಕ್ರೃತ  ಕಲದಲ್ಲಿ‌ ಬೈರಾಸ್‌ ಗೊಬ್ಬು ನಡೆಯಲಿದೆ. ನೀವೂ ಬನ್ನಿ ಇತರರನ್ನೂ ಕರೆ ತನ್ನಿ.

















Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget