ಚೆಂಬು:‌ ಬಾಲೆಂಬಿಯಲ್ಲಿ ನಾನ್ ಸ್ಟಾಪ್ ಕೋರ್ದ ಕಟ್ಟ

                                           



    ಕೋಳಿ‌‌ ಅಂಕ ಮಾಡಲು ಪರ್ಮಿಷನ್ ಗೆ ಹಲ್ಲು ಗಿಂಜುತ್ತಾ‌ ಪೋಲಿಸ್ ಸ್ಟೇಷನ್ ಗೆ ಬರ್ಬೇಡಿ ಅಂತ ದಕ್ಷಿಣ ಕನ್ನಡ ಪೋಲಿಸ್ ವರಿಷ್ಠಾಧಿಕಾರಿ ಖಡಕ್ ಸೂಚನೆ ಕೊಟ್ಟಿದ್ದರೂ‌ ಭೂತದ ಹೆಸರಿನಲ್ಲಿ ಅಲ್ಲಲ್ಲಿ ಕೋಳಿ   ಶಬ್ದ ಕೇಳಿಸುತ್ತಲೇ ಇದೆ. ಇದೀಗ ಮಡಿಕೇರಿ ಗ್ರಾಮಾಂತರ ಪೊಲೀಸರ ಸರಹದ್ದಿನಲ್ಲಿ ಬರುವ ಚೆಂಬು ಗ್ರಾಮದ ಬಾಲೆಂಬಿಯಲ್ಲಿ ಮೊನ್ನೆ ಕೋಳಿ ಜಾತ್ರೆ ನಡೆದಿತ್ತು. ಈವತ್ತು ಈಗ ಗ್ರಾಂಡ್ ಗೌಜಿಯಲ್ಲಿ ನಡೆಯುತ್ತಿದೆಯಂತೆ. ಮೊನ್ನೆ ನಿಡಿಂಜಿ ಧರ್ಮ ದೈವದ ಹೆಸರಿನಲ್ಲಿ ದೊಡ್ಡ ಕಟ್ಟ ನಡೆದಿತ್ತು. ಅದರ ನಂತರ ಬಾಲೆಂಬಿ ಕೊರಗಜ್ಜ ನೇಮ ನಡೆಯಿತು. 
    ಈವತ್ತು ಆ ಪ್ರಯುಕ್ತ ಕೊಕ್ಕೊ ಕೋಕೋ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎಲ್ಲವೂ ಪ್ರೈವೇಟ್ ಭೂತಗಳು. ಅವುಗಳಿಗೇನು ಕೋಳಿ ಅಂಕ ನಡೆಸಲೇ ಬೇಕೆಂದು ರೂಲ್ಸಿಲ್ಲ. ಆದರೂ ಆಯೋಜಕರು ಭೂತದ ಹೆಸರೇಳಿ ಸಂಪಾಜೆ ಪೋಲಿಸರಿಗೆ ಹೆದರಿಸಿ,ಚಳಿ ಹಿಡಿಸಿ,ಜ್ವರ ಬರಿಸಿ, ಪೋಲಿಸರಿಗೆ ಬಡಿಸಿ ದೊಡ್ಡ ಮಟ್ಟದಲ್ಲಿ ಕೋಳಿ ಅಂಕ ನಡೆಸುತ್ತಾರೆ.ಇದು ಎಲ್ಲಿಯಾದರೂ ಮಡಿಕೇರಿಯ ದೊಡ್ಡ ಟೊಪ್ಪಿಯ ಪೋಲಿಸರಿಗೆ ಗೊತ್ತಾದರೆ ಸಂಪಾಜೆ ಗೇಟ್ ಪೋಲಿಸರ ತಲೆಯ ಪುರಿ ಉದುರಿಸಿಯಾರು. ಇನ್ನು ಮಡಿಕೇರಿಯ ದೊಡ್ಡ ಟೊಪ್ಪಿಯ ಪೋಲಿಸರಿಗೆ ವಿಷಯ ತಿಳಿದು ಅವರು ಸಂಪಾಜೆ ಘಾಟಿ ಇಳಿಯಲು ಶುರು ಮಾಡುವಾಗಲೇ ಇಲ್ಲಿ ಕೋಳಿ ಅಂಕದವರಿಗೆ 'ಓಡಿಯಾ...ಓಡಿಯಾ...' ಎಂಬ ಮೆಸೇಜ್ ಬಂದಿರುತ್ತದೆ. ಮತ್ತೆಂತ ಮಾಡೋದು ಅವ್ರು ಬಂದು. ಬಂದ ದಾರಿಗೆ ಸುಂಕ ಇಲ್ಲ ಎಂದು ಅವರೂ ವಾಪಾಸ್ ಘಟ್ಟ ಹತ್ತಿ ಬಿಡುತ್ತಾರೆ. 
   ಇದು ಚೆಂಬು ಗ್ರಾಮದ ಕೋಳಿ ಅಂಕ ಆಯೋಜಕರಿಗೆ ಒಂದು ವರದಾನವಾಗಿದೆ. 

Copy to  madikeri SP


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget