ಚೆಂಬು: ವಿಷ ಕುಡಿದ ಪ್ರಕರಣಕ್ಕೆ ಟ್ವಿಸ್ಟ್?

                                            



     ಕಳೆದ ವಾರ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಪನೇಡ್ಕ ಎಂಬಲ್ಲಿ ಚೆಂದ ಚೆಂದದ ಆಂಟಿಯೊಬ್ಬಳು ಫೆರಾಡನ್ ಕುಡುದು‌ ಬಂದು ಕೆವಿಜಿ ಪಾಲಾಗಿದ್ದಳು. ಫೆರಾಡನ್ ಕುಡಿಯಲು ಏನಾಯ್ತಪ್ಪಾ ಆಂಟಿಗೆ ಎಂದು ವಿಚಾರಿಸಲಾಗಿ ಆಂಟಿ ಕತೆಯಲ್ಲಿ ಒಂದು ಉಪಕತೆ ಇದೆ ಎಂಬ ಮಾಹಿತಿ ಇದೆ. ಸದ್ರಿ ಉಪಕತೆಯ ಸಾರಾಂಶ‌ ಏನೆಂದರೆ ಈ ಪನೇಡ್ಕದ  ಆಂಟಿಗೂ ಆಂಟಿ ಗಂಡನ ಚಿಕ್ಕಪ್ಪನ ಮಗ ಯತಿಗೂ ಒಂದು ಸೈಜಿನ ಟಚ್ಚಿಂಗ್ ಟಚ್ಚಿಂಗ್ ಇತ್ತೆಂದು ತಿಳಿದುಬಂದಿದೆ. ಈ ಟಚ್ಚಿಂಗು ಯಾರೂ ಇಲ್ಲದ ಸಮಯದಲ್ಲಿ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು ಈ ವಿಷ್ಯ ಆಂಟಿ ಗಂಡನಿಗೂ ಗೊತ್ತಾಗಿ ಅವರು ಹಲವು ಭಾರೀ ನೋಟಿಸ್ ಕೊಟ್ಟಿದ್ದರೂ ಇವರಿಬ್ಬರ ಉರುಳು ಸೇವೆ ನಿಂತಿರಲಿಲ್ಲ. ಆದರೆ ಇವರ ಈ‌ ಕುಸ್ಕುಂಡಿ ಕೇಸಲ್ಲಿ ಇವರಿಬ್ಬರು ಒಮ್ಮೆಯೂ ರೆಡ್ ಹ್ಯಾಂಡ್ ಆಗಿ,‌ಬಿಟ್ ಜಾಮ್ ಆಗಿ ಸಿಕ್ಕಿ ಬಿದ್ದಿರಲಿಲ್ಲ. ಮೊನ್ನೆ ಅದಕ್ಕೆ ದಿನ, ಘಳಿಗೆ ಕೂಡಿ ಬಂತು.



   "ನನ್ನ ಗಂಡ ಮನೇಲಿ ಇಲ್ಲೆ..ನೀ ಬಂದಿಯನಾ"  ಎಂದು ಓ ಮೊನ್ನೆ ಪನೇಡ್ಕ ಆಂಟಿ ತನ್ನ ಗಂಡ ಅಂಚಿ ಹೋದ ಕೂಡಲೇ ತನ್ನ ಗಂಟನಿಗೆ ಕಾಲ್ ಮಾಡಿದ್ದಾಳೆ. ಗಂಡ ಇಲ್ಲದ ಮನೆಗೆ ಗಂಟ ಬಾಯಿ ಚಪ್ಪರಿಸಿಕೊಂಡು,‌ಜೊಲ್ಲು ಸುರಿಸಿಕೊಂಡು ಓಡಿ ಬಂದಿದೆ. ಮನೆಗೆ ಬಂದ ಗಂಟ ಆಂಟಿಯನ್ನು ಚಪ್ಪರಿಸಿ ಬಿಟ್ಟಿದ್ದಾನೆ. ಅಷ್ಟರಲ್ಲಿ ಸ್ಪಾಟಿಗೆ ಗಂಡನ ಎಂಟ್ರಿ ಆಗಿದೆ. ಅಷ್ಟೇ. ಗಲಾಟೆ ಹತ್ತು ಸಾವ್ರ ವೋಲ್ಟ್ಸ್ ನಲ್ಲಿ ಶುರುವಾಗಿದೆ. ತನ್ನ ಹೆಂಡತಿ ಮೇಲಿಂದ ಗಂಟನನ್ನು‌ ಹೊರಗೆಳೆದ‌ ಗಂಡ‌‌ ಮನೆಯ ಅಂಗಳವಿಡೀ ಎಳೆದಾಡಿ, ಪೆರೆಲ್ತ್ ಪೆರೆಲ್ತ್ ಹೊಡೆದಿದ್ದಾನೆ. ಇದರಿಂದ ಸಮಾಧಾನ ಆಗದ ಗಂಡ ಅಲ್ಲೇ ಇದ್ದ ಕತ್ತಿಯಿಂದ ಗಂಟನ ಮಂಡೆಗೇ  ಒಂದು ಏಟು ಹಾಕಿದ್ದಾನೆ. ಅಷ್ಟೇ! ಗಂಟನ ಮಂಡೆ ಶರ್ಬತ್ ಆಗಿದೆ. ಆ  ಕತ್ತಿಯೇಟು ತಗೊಂಡು ಗುಡ್ಡೆ ಹತ್ತಿದ ಗಂಟ ಇಲ್ಲಿ ತನಕ ನಾಪತ್ತೆ ಎಂದು ತಿಳಿದುಬಂದಿದೆ. ಈ ಗಲಾಟೆ ಯನ್ನು ನೋಡಿದ ಆಂಟಿ ಹೆದರಿ, ಗಡಗಡ ಆಗಿ ಇನ್ನು ತನಗೆ ಯಾವ ಬಗೆಯ ಅಪ್ಪ ಕಜ್ಜಾಯ ಸಿಗಬಹುದೆಂದು ಯೋಚಿಸಿ ಓಡಿ ಹೋಗಿ ಅಯ್ಯೋ ವಿಧಿಯೇ ಎಂದು ಗಟಗಟ‌ ಫೆರಾಡನ್ ಬಗ್ಗಿಸಿದೆ. ಅಜ್ಜಿ ಪುಣ್ಯಕ್ಕೆ ಆಂಟಿ ಬದುಕಿ ಉಳಿದಿದೆ. ಟಿಕೆಟ್ ಸಿಕ್ಕಿಲ್ಲ.
   ಇಲ್ಲಿ ಮತ್ತೊಂದು ವಿಷ್ಯ ಏನೆಂದರೆ ಕೆಲವು ವರ್ಷಗಳ ಹಿಂದೆ ಈ ಆಂಟಿಯ ಮಗುವೊಂದು ಉಯ್ಯಾಲೆ ಆಡುವಾಗ ಹಗ್ಗ  ಕುತ್ತಿಗೆಗೆ ಸುತ್ತಿಕೊಂಡು ಮರಣ ಹೊಂದಿತ್ತು. ಈ ಸಾವಿನ ಬಗ್ಗೆ ಊರವರಿಗೆ ಸಂಶಯಗಳಿವೆ. ಆಂಟಿ ಮತ್ತು ಗಂಟನ ಪುಚ್ಚೆ ಗೇಮ್ಸ್ ಗಳನ್ನು‌ ನೋಡಿದ ಮಗು "ಅಪ್ಪನೊಟ್ಟಿಗೆ‌ ಹೇಳಿನೆ" ಎಂದಿದ್ದಕ್ಕೆ  ‌ಗಂಟ‌ ಆ ಮಗುವಿಗೆ ಏನಾದರೂ ಮಾಡಿತಾ‌ ಎಂಬ ಸಂಶಯ ಆವತ್ತು ದಟ್ಟವಾಗಿತ್ತು.‌ಇಷ್ಟಕ್ಕೂ ಗುಡ್ಡೆ ಹತ್ತಿದ ಗಂಟ ಎಲ್ಲಿದೆ? ಗೂಮೆ ಮೆಟ್ಟಿತಾ?






Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget