ಇದು ಸುಳ್ಯದ ಕತೆ. ಅವನೊಬ್ಬ ಸರ್ಕಾರಿ ಬಸ್ ಡ್ರೈವರ್. ದೂರ ದೂರದ ಊರಿಗೆ ಟ್ರಿಪ್ ಇವನ ಬಸ್ಸಿಗೆ. ಈವತ್ತು ಹತ್ತಿದರೆ ನಾಡಿದ್ದು ಇಳಿಯುವುದು. ಹೆವೀ ಡ್ಯೂಟಿ ಇವನಿಗೆ. ಹಾಗಾಗಿ ಮನೆಯೂ ಖಾಲಿ ಖಾಲಿ. ಯಾರೂ ಇಲ್ಲದ ಮನೆಯಲ್ಲಿ ಕೆಲವು ದಿನಗಳ ಹಿಂದೆ ಡ್ರೈವರ್ ಬೆಡ್ ರೂಂನ ಮಂಚದಡಿಯಲ್ಲಿ ಅಪರೂಪದ ಅತಿಥಿಯೊಬ್ಬ ಕಳ್ಳ ಪೋಲಿಸ್ ಆಡಲು ಬಂದಿದ್ದ. ಕಣ್ಣ ಮುಚ್ಚೆ ಕಾಡೆ ಗೂಡೆ, ಉದ್ದಿನ ಮೂಟೆ ಉರುಳಿ ಹೋಯ್ತು....ಕೂ....ಕೂ ಅಂಥ ಕೂಕುಲು ಹಾಕಿ ಅವನನ್ನು ಹೊರಗೆಳೆಯಲಾಯಿತು.
ಹಾಗೇ ಡ್ರೈವರ್ ಈವತ್ತು ಹತ್ತಿದರೆ ನಾಡಿದ್ದು ಇಳಿಯುವುದಲ್ಲ,ಇತ್ತ ಅವನ ಡ್ರೈವರಿಗೆ ಮನೆಯಲ್ಲಿ ಉರು ಉರು ಆಗತೊಡಗಿತು. ಕೈಕಾಲು ಪುಳೆವು, ಸಂಧಿ ನೋವು, ಏಕಾಂಗಿತನ ಕಾಡ ತೊಡಗಿತು. ಪಾರ್ಟ್ ಟೈಮ್ ಏನಾದರೂ ಮಾಡಬೇಕು ಎಂಬ ದುರಾಲೋಚನೆ ಬಂತು. ಹಾಗೆ ಡ್ರೈವರನ ಡ್ರೈವರಿ ತನಗೊಬ್ಬ ಎಕ್ಸ್ ಟ್ರಾ ಡ್ರೈವರ್ ನನ್ನು ನೇಮಕ ಮಾಡಿಕೊಂಡಿದ್ದಳು. ಗಂಡ ಅಂಚಿ ಬಸ್ ಹತ್ತಿದ ಕೂಡಲೇ ಇಲ್ಲಿ ಮನೆಯಲ್ಲಿ ಇವರಿಬ್ಬರ ಟ್ರಿಪ್ ಶುರುವಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಇವರ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಾ ಬಂದಿತ್ತು. ಕೇಳುವವರೇ ಇಲ್ಲ. ಆದರೆ ಓ ಮೊನ್ನೆ ಇವರ ಕಾರ್ಯಕ್ರಮದಲ್ಲಿ ಕರಡಿ ಬಂದೇ ಬಂತು.
ಹಾಗೆ ತನ್ನ ಅಣ್ಣನ ಮನೆಯಲ್ಲಿ ಅಣ್ಣ ಇಲ್ಲದಾಗ ಏನೋ ಅಜನೆ ಆಗುತ್ತಿದೆ ಎಂಬ ಚಿಕ್ಕ ಸುಳಿವು ಡ್ರೈವರ್ ನ ತಮ್ಮನಿಗೆ ಗೊತ್ತಾಗಿದೆ. ಅಣ್ಣನ ಮನೆಯಲ್ಲಿ ಯಾವ ಭೂತ ಬಂದು ಅಜನೆ ಮಾಡುತ್ತಿದೆ ಎಂದು ಪತ್ತೆ ಹಚ್ಚಲು ಕಳೆದ ಕೆಲವು ದಿನಗಳ ಹಿಂದೆ ಡ್ರೈವರ್ ತಮ್ಮ ಪತ್ನಿ ಸಮೇತರಾಗಿ ಡ್ರೈವರ್ ಮನೆಗೆ ಬರುತ್ತಾನೆ. ಬಂದು ಬಾಗಿಲು ಬಡಿದರೆ ಅತ್ತಿಗೆ ಬಂದು ಬಾಗಿಲು ತೆಗೆದಿದ್ದಾರೆ. ಒಳಗೆ ಯಾರೂ ಇಲ್ಲ. ಎಲ್ಲವೂ ನಾರ್ಮಲ್. ಆದರೂ ತಮ್ಮನಿಗೆ ಅದೇನೋ ಸಂಶಯ. ಸೀದಾ ಅಣ್ಣನ ಬೆಡ್ ರೂಮಿಗೆ ಹೋಗಿ ಮಂಚದಡಿಗೆ ಇಣುಕಿದರೆ ಅಲ್ಲಿ ಅಂಗಿ ಹಾಕದ, ಚಡ್ಡಿ ಆಮೇಲೆ ಹಾಕಿದ, ಬರೀ ಲುಂಗಿಯಂಗಡಿಯಲ್ಲಿ ಶಯನ ಶಯ್ಯೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀ ಶ್ರೀ ಶ್ರೀಗಳು ಕಂಡು ಬಂದಿದ್ದಾರೆ. ನಂತರ ಅವರ ಗುಣಗಾನ ಮಾಡಿ, ಬಿರುದು ಬಾವಲಿಗಳನ್ನು ಸ್ತುತಿಸಿ ಅವರನ್ನು ಮಂಚದಡಿಯಿಂದ ಡ್ಯಾಮೇಜ್ ಆಗದಂತೆ ಮೇಲೆಳೆಯಲಾಯಿತು. ನಂತರ ಅವರಿಗೆ ಸನ್ಮಾನ, ಶಾಲು, ಫಲ ಪುಷ್ಪ, ಸ್ವಾಗತ ಭಾಷಣ, ವಂದನಾರ್ಪಣೆ ಇತ್ಯಾದಿ ಇತ್ಯಾದಿ. ಹಾಗೆಂದು ಈ ವಿಷಯ ಡ್ರೈವರ್ ಗೆ ಗೊತ್ತಾದರೂ ಅವನು ಏನೂ ಮಾಡಂಗಿಲ್ಲ. ಯಾಕೆಂದರೆ ಅವನು ಈಗಾಗಲೇ ಜಾಲ್ಸೂರಿನ ಫಿಟ್ಟರೊಬ್ಬನ ಧರ್ಮ ಪತ್ನಿಯ ಎಕ್ಸ್ ಟ್ರಾ ಡ್ರೈವರ್. ಹಾಗಾಗಿ ಡ್ರೈವರ್ ನ ಕತೆ ಅವಳಿಗೆ ಗೊತ್ತುಂಟು, ಅವಳ ಎಲ್ಲಾ ಉಪಕತೆಗಳ ಕಥಾಸಂಕಲನ ಡ್ರೈವರ್ ನ ಬ್ಯಾಗಿನಲ್ಲಿಯೇ ಉಂಟು. ಹಾಗಾಗಿ ಇಬ್ಬರೂ ಕದನ ವಿರಾಮದಲ್ಲಿದ್ದಾರೆ.
Post a Comment