ಸುಳ್ಯ: ಲಕಪತಿ ದೀದಿ ಮೋಹಿನಿ ವಿಶ್ವನಾಥ್

                                            


  ದಕ್ಷಿಣ ಕನ್ನಡದ ಗಡಿ ಕಲ್ಲುಗುಂಡಿಯಿಂದ ಒಂದು ಒಳ್ಳೆ ಸುದ್ದಿ ಬಂದಿದೆ. ‌ಯಾವುದೇ ಲಾಭಾಂಶ, ಪ್ರತಿಫಲದ ನಿರೀಕ್ಷೆ ಇಲ್ಲದೆ, ನಿಸ್ವಾರ್ಥವಾಗಿ‌‌ ‌ಮಾಡಿದ ಕೆಲಸಗಳನ್ನು ದೇವರು‌ ಮಾತ್ರವಲ್ಲದೆ‌ ಸಮಾಜ,‌ ವ್ಯವಸ್ಥೆ ಕೂಡ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತದೆ  ಮತ್ತು ಅಂಥ ಕೆಲಸಗಾರರನ್ನು ಗುರುತಿಸುವ ಕೆಲಸವೂ ನಡೆಯುತ್ತಲೇ ಇರುತ್ತದೆ. ಇದೀಗ ಸುಳ್ಯ ಸಂಪಾಜೆಯ ಸಂಪಾಜೆ ಗ್ರಾಮದ ಕೃಷಿ ಸಖಿಯೊಬ್ಬರು ಸದ್ದಿಲ್ಲದೆ ಸುದ್ದಿ ಮಾಡಿದ್ದಾರೆ, ಸುದ್ದಿಲ್ಲದೆ ಸದ್ದು ಮಾಡಿದ್ದಾರೆ.



   ಇವರು ಮೋಹಿನಿ ವಿಶ್ವನಾಥ್. ದಕ್ಷಿಣ ಕನ್ನಡ ಸಂಪಾಜೆ ಗ್ರಾಮದ ಕೃಷಿ ಸಖಿ. ಮೋಹಿನಿ ಕೃಷಿ ಸಖಿ‌ ಮತ್ತು ಕಲ್ಲುಗುಂಡಿ ಪಂಚಮಿ ಸ್ಟೋರ್ ಮಾಲೀಕ ವಿಶ್ವನಾಥ್ ಪತ್ನಿ ಎಂದಷ್ಟೇ ಸಮಾಜಕ್ಕೆ ಗೊತ್ತಿದ್ದದ್ದು. ಇವರು ಸದ್ದಿಲ್ಲದೆ ಏನು ಮಾಡಿದ್ದಾರೆ ಎಂದು ಮೊನ್ನೆ ಪತ್ರಿಕೆಗಳನ್ನು ಓದಿದಾಗಲೇ ಗೊತ್ತಾದದ್ದು. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಪ್ರಧಾನಿ ಮೋದಿಯವರ ಉಪಸ್ಥಿತಿಯಲ್ಲಿ ಲಕಪತಿ ದೀದಿ ಅವರೊಂದಿಗೆ ಒಂದು ಸಂವಾದ ಕಾರ್ಯಕ್ರಮ ದೆಹಲಿಯಲ್ಲಿ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಮೋಹಿನಿ ವಿಶ್ವನಾಥ್ ಉಪಸ್ಥಿತರಿದ್ದರು. ಮಹಿಳಾ ಸ್ವಸಹಾಯ ಸಂಘಗಳ ಮೂಲಕ ವಾರ್ಷಿಕ ಒಂದು ಲಕ್ಷಕ್ಕೂ ‌ಅಧಿಕ ಆದಾಯ ಗಳಿಸುತ್ತಿರುವ ಕರ್ನಾಟಕ ರಾಜ್ಯದ ಇಪ್ಪತ್ತು ಮಂದಿ  ಲಕಪತಿ ದೀದಿಗಳಲ್ಲಿ ಮೋಹಿನಿ ದೀದಿಯೂ ಒಬ್ಬರು. ಹಾಗಾಗಿ ಪ್ರಧಾನಿ ಸಂವಾದ ಕಾರ್ಯಕ್ರಮಕ್ಕೆ ಆಹ್ವಾನ. ಕೃಷಿ ಸಖಿ‌ಯಾಗಿ ಮೋಹಿನಿ ದೀದಿ ಮಾಡಿದ ಒಳ್ಳೆ ಕೆಲಸಗಳಿಗೆ ಅರ್ಹವಾಗಿಯೇ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಲಕಪತಿ ದೀದಿ ಕೋಟಿ ಪತಿ ದೀದಿಯಾಗಿ ಈ ಜಿಲ್ಲೆಗೆ ಕೀರ್ತಿ ತರಲಿ.










Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget