ಅದೊಂದು ಸ್ವಸಹಾಯ ಸಂಘದ ಆಫೀಸು. ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಬಾಲೆಂಬಿಯಲ್ಲಿ ಇದೆ. ಮಡಿಕೇರಿ ತಾಲೂಕು ಅಂದ್ರೆ ಅದು ಘಟ್ಟದ ಮೇಲಿನ ಊರಲ್ಲ. ಘಟ್ಟದ ಕೆಳಗಿನದ್ದೇ ಊರು. ಸುಳ್ಯ ಸಂಪಾಜೆಯ ರಾಜಧಾನಿ ಕಲ್ಲುಗುಂಡಿಯಿಂದ ಬರೀ ಐದಾರು ಕಿ.ಮೀ ಅಷ್ಟೇ. ಒಂದು ಹತ್ತು ಹದಿನೈದು ದಿನಗಳ ಹಿಂದೆ ಇಲ್ಲಿ ಕಾರ್ಯ ನಿರ್ವಹಿಸುವ ಸ್ವಸಹಾಯ ಸಂಘದ ಆಫೀಸಿನಲ್ಲಿ ಗಲಾಟೆಯೋ ಗಲಾಟೆ. ಗ್ರಾಮಸ್ಥರಿಗೆ ಫ್ರೀ ಶೋ. ವಿಷಯ ಏನೆಂದರೆ ಸಂಘದಲ್ಲಿ ಅದೇನೋ ಅಂಡಿಗುಂಡಿ ಕೆಲಸ ಮಾಡುವ ಕುದ್ರೆಪಾಯ ಕೋಜ ಎಂಬುವನು ಪೆರ್ಮುಂಡದ ಆಂಟಿಯೊಬ್ಬಳನ್ನು ಬೈಕಿನಲ್ಲಿ ಅಂಚಿಂಚಿ ಕರಕ್ಕೊಂಡು ಹೋಗುತ್ತಾನೆ, ಸಂಘದ ಕೆಲಸ ಅಂತ ಇಬ್ಬರೂ ಅಪಗಪಗ ಮಾಯವಾಗುತ್ತಾರೆ, ಸಂಘದ ಬಗ್ಗೆ ಫುಲ್ ನೈಟ್ ಕಿವಿಯ ಹೂ ಬಾಡಿ ಹೋಗುವಷ್ಟು ಮಾತಾಡುತ್ತಾರೆ, ಅವಳು ತಿಂದ ಅರ್ಧ ಲಾಡು ಇವನು ತಿನ್ತಾನೆ, ಇವನು ತಿಂದ ಅರ್ಧ ಪೆಲತ್ತರಿ ಅವಳು ತಿನ್ತಾಳೆ, ಇವರಿಬ್ಬರೂ ನಾರ್ಮಲ್ ಇರಲ್ಲ, ಸಂಘದ ಕಛೇರಿಯಲ್ಲಿಯೇ "ಉಪ್ಪು ಬೋಡ..... ಮುಂಚಿ ಬೋಡ..." ಎಂದು ಆಂಟಿಯನ್ನು ಎತ್ತಿಕ್ಕೊಂಡು ಆಟ ಆಡಿಸುತ್ತಾ ಇರ್ತಾನೆ ಎಂದೆಲ್ಲಾ ಸುದ್ದಿಯಾಗಿ ಅದು ಬಾಲೆಂಬಿಯಲ್ಲಿ ದಂತಕಥೆಯಾಗಿ ಬಾಯಿಯಿಂದ ಬಾಯಿಗೆ ಪಿಸ ಪಿಸ ಆಗಿ, ಕಿಸ ಕಿಸ ಹೋಗಿ ಕೊನೆಗೆ ಬಂದು ಬಿದ್ದಿದ್ದು ಪೆರ್ಮುಂಡ ಆಂಟಿಯ ಗಂಡನ ಕಿವಿಗೆ. ಆಂಟಿ ಗಂಡನಿಗೆ ಭೂತ ಹಿಡಿದೇ ಬಿಟ್ಟಿತು.
ಹಾಗೇ ಮೊನ್ನೆ ಬಾಲೆಂಬಿ ಸ್ವಸಹಾಯ ಸಂಘದ ಕಛೇರಿಗೆ ಭೂತ ಹಿಡಿದೇ ಬಂದ ಪೆರ್ಮುಂಡ ಆಂಟಿ ಗಂಡ ತನ್ನ ಹೆಂಡ್ತಿಯ ಗಂಟನಿಗೆ ಸಮಾ... ಕೊಟ್ಟಿದ್ದಾನೆ. ಆದರೆ ಕುದ್ರೆಪಾಯ ಕೋಜ ಪೆಟ್ಟು ತಿಂದು ಸುಮ್ಮನೆ ಕೂರಲಿಲ್ಲ. ಅವನೂ ರಿಟರ್ನ್ ಪೆಟ್ಟು ಕೊಟ್ಟಿದ್ದಾನೆ. ಪೆರ್ಮುಂಡ ಆಂಟಿಯ ಗಂಡ ಮತ್ತು ಗಂಟನ ನಡುವೆ ಬಡಿದಾಟಗಳಾಗಿದೆ. ಗ್ರಾಮಸ್ಥರೆಲ್ಲ ಪ್ರೀಶೋ ನೋಡುತ್ತಾ ನಿಂತಿರಲಾಗಿ ಕುದ್ರೆಪಾಯದವನು ಚೂರಿ ತೆಗೆದಿದ್ದಾನೆ. ಅಷ್ಟರಲ್ಲಿ ಅಲ್ಲಿ ಸೇರಿದ್ದ ಗ್ರಾಮದ ಮಂದಿ ಜಗಳ ಬಿಡಿಸಿ ಇಬ್ಬರನ್ನೂ ಬೇರೆ ಬೇರೆ ಮಾಡಿದ್ದಾರೆ.
ಹಾಗೇ ಬಾಲೆಂಬಿ ಜಗಳದ ನಂತರ ಪೆರ್ಮುಂಡ ಆಂಟಿ ಕುದ್ರೆಪಾಯದ ಚೂರಿ ಚಿಕ್ಕಣ್ಣನ ಸಹವಾಸ ಬಿಟ್ಟಿದ್ದಾಳೆ ಎಂದು ಸುದ್ದಿ. ಇದೀಗ ಮತ್ತೊಂದು ಬ್ರೇಕಿಂಗ್ ಏನೆಂದರೆ ಇದೇ ಆಂಟಿ ದಬ್ಬಡ್ಕದ ಪುಂಡು ಜೊತೆ ಪುಂಡಿ ಬೇಯಿಸಲು ಶುರು ಮಾಡಿದ್ದಾಳೆ, ಇಬ್ಬರೂ ಅಪಗಪಗ ಮಾಯಕ ಆಗುತ್ತಿದ್ದಾರೆ ಎಂಬ ಸುದ್ದಿ ಬಂದಿದೆ .ಇಬ್ಬರೂ ಈ ತಿಂಗಳ ಅಕೇರಿಗೆ ಬೆಂಗಳೂರಿಗೆ ಗಂಟುಮೂಟೆ ಕಟ್ಟುವ ಸ್ಕೆಚ್ ಹಾಕಿದ್ದಾರೆ ಎಂದು ಬಾಲೆಂಬಿಯ ಬೇಹುಗಾರರು ತಿಳಿಸಿದ್ದಾರೆ. ಈ ನಡುವೆ ಪುಂಡುಗೆ ಪರತ್ತ್ ಹೆಂಡ್ತಿಯ ಕೋರ್ಟ್ ನೋಟಿಸ್ ಕೂಡ ಬಂದಿದ್ದು ತರೆಬೆಚ್ಚ ಮಾಡಿಕ್ಕೊಂಡು ಪುಂಡಿ ಬೇಯಿಸಲೂ ಪುರುಸೊತ್ತಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾನೆ. ಅಲ್ಲ ಮಾರಾಯ್ರೆ ಪೆರ್ಮುಂಡ ಆಂಟಿಗೆ ಎರಡು ಮಕ್ಕಳು, ಕುದ್ರೆಪಾಯದ ಗಂಟನಿಗೆ ಎರಡು, ದಬ್ಬಡ್ಕದ ಪಾಂಡುಗೆ ಎರಡು ಮಕ್ಕಳು. ಆದರೂ ಮೂವರಿಗೂ ಪೋಕಾಲ. ಬೇಕಾ ಇದೆಲ್ಲ?
Post a Comment