ಈಸರ ಮಂಗಲ: ಫೂಟ್ ವೇರ್ ಮಾಲೀಕನಿಗೆ ಹಲ್ಲೆ

                                        


            


ಇದೊಂದು ಲವ್ ಸ್ಟೋರಿ. ಮದುವೆ ನಂತರವೂ  ಲವ್ವನ್ನು ಐಸಿನಲ್ಲಿಟ್ಟ ಕಾರಣ ಓ ಮೊನ್ನೆ ಮೊಟ್ಟುದಂಗಡಿ ಹುಡುಗನ ಬೆನ್ನು ಸಮತಟ್ಟು ಮಾಡಲಾಗಿದೆ.‌ ಅಲ್ಲಿಗೆ ಒಂದು ಅಕ್ರಮ ಸಂಬಂಧ ಸತ್ತು ಹೋದ ಹಾಗೇ.


     ಇದು ಈಶ್ವರಮಂಗಲ. ಪುತ್ತೂರು ತಾಲೂಕಿನ ಗಡಿ. ಇಲ್ಲಿ ಒಂದು ಮೊಟ್ಟುದಂಗಡಿ ಇದೆ. ಮೊಟ್ಟುದಂಗಡಿ ಹತ್ತಿರವೇ ಒಂದು ಕುಂಟುದಂಗಡಿ. ಈ ಮೊಟ್ಟುದಂಗಡಿ ಮಾಲೀಕನಿಗೂ ಹತ್ತಿರದ ಕುಂಟುದಂಗಡಿ ಸೇಲ್ಸ್ ಗರ್ಲ್ ಗೂ ಒಂದು ಡೀಪ್ ಲವ್. ಡೀಪಂದ್ರೆ ತುಂಬಾ ಡೀಪು. ಅಂದಾಜು ಏಳ್ನೂರು ಫೀಟ್ ಅಡಿ ತನಕ ಡೀಪ್ ಹೋಗಿತ್ತು. ಕಾನತ್ತ್‌ ಆಗುವುದಂತಲೇ ಇತ್ತು. ಒರಿ ಸಮಯ ಕಾನತ್ ಆಗದಿದ್ದರೂ‌ ಚಿಂತಿಲ್ಲ ಇಬ್ಬರೂ ಓಡಿ ಹೋಗುವುದು ನಂತರ ರಿಕ್ಷಾದಲ್ಲಿ ಹೋಗುವುದು ಎಂಬಲ್ಲಿ ತನಕವೂ ಲವ್ ಟೈಟಾಗಿತ್ತು. ಹಾಗೆ ಇಬ್ಬರೂ ಗಂಟೆಗಟ್ಟಲೆ, ದಿನಗಟ್ಟಲೆ ಮಾತಾಡಿದ್ದೇ ಮಾತಾಡಿದ್ದು. ನಂತರ ವೀಡಿಯೋ ಕಾಲ್ ಶುರುವಾಗಿ "ತೋರ್ಸು... ತೋರ್ಸು.." ಎಂಬಲ್ಲಿ ತನಕ ಹೋಗಿ  ಕುಂಟುದಂಗಡಿ ಹುಡುಗಿ  ಮೊಟ್ಟುದಂಗಡಿ ಹುಡುಗನ ಮುಂದೆ ‌ಕುಂಟು ಬಿಚ್ಚಿ ಬಿಟ್ಟಿದ್ದಳು. ಇದನ್ನೆಲ್ಲ ‌ಮೊಟ್ಟುದಂಗಡಿ ಹುಡುಗ ಸೇವ್ ಮಾಡಿಕ್ಕೊಂಡು ಕ್ರಮೇಣ ಹುಡುಗಿಯನ್ನು ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದ. ಇದರಿಂದ ಹುಡುಗಿ ರೋಸಿ ಹೋಗಿದ್ದಳು. ನಂತರದ ದಿನಗಳಲ್ಲಿ 
 ಕುಂಟುದಂಗಡಿ ಹುಡುಗಿಯನ್ನು ಕಾವು ಹತ್ತಿರದ ಅಮ್ಚಿನಡ್ಕಕ್ಕೆ ಕಾನತ್ ಮಾಡಿ ಕೊಡಲಾಯಿತು. ಅವಳ ಗಂಡನಿಗೆ ಕೇರಳದಲ್ಲಿ ಹೋಟೆಲಂತೆ. ಇತ್ತ ತನ್ನ ಹುಡುಗಿಗೆ ಬೇರೆ ಮದುವೆ ಆದರೇನಂತೆ ಅವಳ ಮೊಬೈಲ್ ನಂಬರ್ ಇತ್ತಲ್ಲ, ಮೊಟ್ಟುದಂಗಡಿ ಹುಡುಗ ಅವಳ ನಂಬರಿಗೆ ಕುಟ್ಟತೊಡಗಿದ. "ನಿನ್ನ  ಫಿಲ್ಮ್ ನಿನ್ನ ಗಂಡನಿಗೆ ಸೆಂಡ್ ಮಾಡುತ್ತೇನೆ, ಫೇಸ್ಬುಕ್ ಗೆ ಹಾಕುತ್ತೇನೆ ಎಂದು ಮೊಟ್ಟುದಂಗಡಿ ಹುಡುಗ ಹುಡುಗಿಗೆ ಹೆದರಿಸ‌ ತೊಡಗಿದ.‌ ಈ ಬಗ್ಗೆ ಅಮ್ಚಿನಡ್ಕಕ್ಕೆ ಅಪಗಪಗ ಬರತೊಡಗಿದ. ಹುಡುಗಿ ಮನೆ ಮುಂದೆ ರೊಯ್ಯನೆ ಸುಯ್ಯನೆ‌ ಹಾರಿದ. ಹುಡುಗಿ ಗಂಡ ಹೇಗೂ ಕೇರಳದಲ್ಲಿದ್ದಾನೆ ಮನೆಯಲ್ಲೂ ಜನಸಂಖ್ಯೆ ಕಡಿಮೆಯಿತ್ತು. ಹುಡುಗಿ ಯನ್ನು ತಿಂದುಂಡು ಬಿಸಾಡಲು ಹುಡುಗ ರಕ್ಕಸ ಕಟ್ಟಿ ಬಿಟ್ಟ.


    ಹಾಗೆ ಮದುವೆಗೆ ಮೊದಲು ನಡೆದ ಕೆಟ್ಟ ಘಟನೆಗಳನ್ನು ಕುಂಟುದಂಗಡಿ ಹುಡುಗಿ ಇವನ ಬ್ಲ್ಯಾಕ್ ಮೇಲ್ ತಡೆಯಲಾಗದೆ ತನ್ನ ಗಂಡನಲ್ಲಿ ಹೇಳಿ ಬಿಟ್ಟಳು. ನಾನು ಗೊತ್ತಿಲ್ಲದೆ ಥಿಯರಿ ಮಾತ್ರ ನಡೆಸಿದ್ದೇನೆಯೇ ಹೊರತು ಪ್ರಾಕ್ಟಿಕಲ್ ಮಾಡಿಲ್ಲ, ಅವನು ನನ್ನ ವಿಡಿಯೋ ಇಟ್ಟುಕೊಂಡು ಪ್ರಾಕ್ಟಿಕಲ್ಸ್ ಗೆ ಒತ್ತಾಯಿಸುತ್ತಿದ್ದಾನೆ ಎಂದು ಗಂಡನಲ್ಲಿ ನೇರ್ ಹೇಳಿ ಬಿಟ್ಟಿದ್ದಳು. ಎಲ್ಲಾ ಕತೆ ಕೇಳಿಸಿಕೊಂಡ ಗಂಡ ಮೊಟ್ಟುದಂಗಡಿ ಹುಡುಗನ ಸಿಪ್ಪೆ ಸುಲಿಯಲು ದಿನಾಂಕ ನಿಗದಿಪಡಿಸಿದ.


    ಅದರಂತೆ ಓ ಮೊನ್ನೆ ತಿಂಗಳಾಸೆ ಮೊಟ್ಟುದಂಗಡಿ ಹುಡುಗನನ್ನು "ಒರ್ಕ ಅಮ್ಚಿನಡ್ಕತ್ತೆಕ್‌ ಬನ್ನಿಟ್ ಪೋ" ಎಂದು ಅಮ್ಚಿನಡ್ಕಕ್ಕೆ ಕರೆಸಿಕೊಳ್ಳಲಾಗಿದೆ, ಮತ್ತೊಂದು ಮಾಹಿತಿ ಪ್ರಕಾರ ಹುಡುಗನನ್ನು ಸಾಂತ್ಯದಿಂದ ಎತ್ಹ್ತಾಕಿಕೊಂಡು ಬಂದು ಅಮ್ಚಿನಡ್ಕದಲ್ಲಿ ಫುಟ್ಬಾಲ್ ಮಾಡಲಾಗಿದೆ. "ಪೆಣ್ಣ್ ಬೇನಾರ ನಿನಕ್ ನಾಯಿಂಡೆ ಮೋನೆ" ಎಂದು ಶುರುವಾದ ಗುಳಿಗ್ಗ ಪೆಟ್ಟು ನಿರಂತರ  ಬಿದ್ದಿದೆ. "ತೈಕಂಡ ಮೋನೆ......ತೈಕಂಡ ದಮ್ಮಯ್ಯ ತೈಕಂಡ... ಎಂದು ಮೊಟ್ಟುದಂಗಡಿ ಹುಡುಗ ಮೈಕ ಬೊಬ್ಬೆ ಹಾಕಿದಂತೆ ಬೊಬ್ಬೆ ಹಾಕಿದರೂ ಅಲ್ಲಿ ಕೇಳುವವರು ಯಾರೂ ಇಲ್ಲವಾಗಿತ್ತು. ಕೊನೆಗೂ ಮೂಂಕು ಮುಸುಂಟು ಮಲ್ಲಿಗೆಯಾಗಿ, ಸೊಂಟ ಸೋಬಾನೆ ಆಗಿ, ಮಂಡೆ ಶರ್ಬತ್ ಆಗಿ, ಬಾಡಿಯ ಪೈಂಟೆಲ್ಲ ಹೋಗಿ, ಕಣ್ಣು ಊದಿಕೊಂಡು, ಕಿವಿ ಹರಿದುಕೊಂಡು, ಡಿಕ್ಕಿಗೆ ತುಳಿಸಿಕೊಂಡು, ಕೈಕಾಲು ಡ್ಯಾಮೇಜ್ ಮಾಡಿಕೊಂಡು, ಅಂಗಿ ಚಡ್ಡಿ ಹರಿಸಿಕೊಂಡು, ಚಿಂದಿ ಚಿತ್ರಾನ್ನವಾಗಿ ಅವರ ಸಾಮಾನು ಒಂದು ಹಿಡಿಯದೆ ಬಾಕಿ ಎಲ್ಲಾ ಹಿಡಿದು ಬಚಾವಾಗಿ ಬಂದು ಆಸ್ಪತ್ರೆಯಲ್ಲಿ ಬಿದ್ದವನು ಎರಡು ದಿನ ಆಸ್ಪತ್ರೆಯಲ್ಲೇ ಅಡ್ಮಿಟ್ ಆಗಿದ್ದನಂತೆ. ಇದೀಗ ಮೆಲ್ಲ ಏನೂ ಆಗದಂತೆ ಪುನಃ ಮೊಟ್ಟುದಂಗಡಿಯಲ್ಲಿ ಬಂದು ಗಾಯ ನೆಕ್ಕುತ್ತಾ ಕುಂತಿರುತ್ತಾನೆ ಎಂದು ತಿಳಿದುಬಂದಿದೆ. ಇನ್ನು ಈ ಜನ್ಮದಲ್ಲಿ ಕನಸಿನಲ್ಲೂ ಆ ಕುಂಟುದಂಗಡಿ ಹುಡುಗಿಯ ಫೋಟೋ ಕಂಡರೂ ಸಾಕು ಸುರ್ರೆಂದು ಸೂಸು ಮಾಡಿಕೊಳ್ಳುವ ತನಕ ಬಿದ್ದಿದೆ ಗುಳಿಗ್ಗ ಪೆಟ್ಟು.












Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget