ಪುತ್ತೂರು - ಮಂಗಳೂರು ಸ್ಟೇಟ್ ಹೈವೇಯಲ್ಲಿ ಸಿಗುವ ದೊಡ್ಡ ಜಂಕ್ಷನ್ ಈ ಕಬಕ. ಇಲ್ಲಿ ಕೆಲವೊಂದು ಕಾನೂನು ಬಾಹಿರ ಚಟುವಟಿಕೆಗಳು ಅಪಗಪಗ ನಡೆಯುತ್ತಾ ಇರುತ್ತದೆ. ಯಾಕೆಂದರೆ ಇಲ್ಲಿ ಅಂಚಿ ನಿಂತರೆ ವಿಟ್ಲ ಪೊಲೀಸರ, ಇಂಚಿ ನಿಂತರೆ ಪುತ್ತೂರು ಟೌನು ಪೋಲಿಸರ ಗಡಿ ರೇಖೆ ಇರುವ ಕಾರಣ ಕಳ್ಳ ಕಾಕರ ಕೆರೆ ದಡ, ಕೆರೆ ದಡ ನಡೆಯುತ್ತಾ ಇರುತ್ತದೆ.
ಇದೀಗ ಕಬಕ ಆಸುಪಾಸಿನಲ್ಲಿ ಜುಗಾರಿ ಪ್ಲೇಯರ್ಸ್ ಸಂಖ್ಯೆ ಗಣನೀಯವಾಗಿ ಏರಿದೆ.ಇದೀಗ ಕಬಕ ಆಸುಪಾಸಿನಲ್ಲಿ ದಿನಾ ಇಸ್ಪೀಟ್ ಎಲೆ ಕಲಸುವ ಶಬ್ದ ಕೇಳಿ ಬರುತ್ತಿದ್ದು ಒಮ್ಮೆ ವಿಟ್ಲ ಪೊಲೀಸರು ಮೆರವಣಿಗೆಯಲ್ಲಿ ಬಂದು ಜುಗಾರಿ ಪ್ಲೇಯರ್ಸ್ ಗಳನ್ನೇಲ್ಲ ಎಲೆಗಳ ಸಮೇತ ಹೊತ್ತು ಕ್ಕೊಂಡು ಹೋಗಿ ಸನ್ಮಾನ ಮಾಡಿ ಕಳಿಸಿದ್ದರು. ಆದರೆ ಇವರಿಗೆ ಇನ್ನೂ ದೇವರು ಬುದ್ಧಿ ಕಲಿಸಿಲ್ಲ. ಥೇಟ್ ನಾಯ್ದ ಬಾಲದ ಹಾಗೆ ಇವರು. ಇದೀಗ ಜುಗಾರಿ ಪ್ಲೇಯರ್ಸ್ ಕಬಕ ಸಮೀಪದ ಕಂಬಳಬೆಟ್ಟುನಲ್ಲಿ ನಿತ್ಯ ಕಲ ಹಾಕುತ್ತಿದ್ದು ಇಲ್ಲಿ ಜುಗಾರಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ತಿಳಿದುಬಂದಿದೆ. ನೀವು ಕಂಬಳಬೆಟ್ಟು ಜುಗಾರಿ ಅಡ್ಡೆಗೆ ಹೋಗುವುದಿದ್ದರೆ ನಿಮ್ಮ ವಾಹನವನ್ನು ಸ್ಥಳೀಯ ಪೆಟ್ರೋಲ್ ಬಂಕ್ ಒಂದರಲ್ಲಿ ನಿಲ್ಲಿಸಿ ಜುಗಾರಿ ಅಡ್ಡೆಯ ಸ್ವಯಂ ಸೇವಕರಿಗೆ ಕಾಲ್ ಮಾಡಿದರೂ ಸಾಕು ಅವರೇ ಬಂದು ಅವರ ವಾಹನದಲ್ಲೇ ನಿಮ್ಮ ಭಂಡಾರವನ್ನು ಜುಗಾರಿ ಅಡ್ಡೆಗೆ ಹೊತ್ತುಕ್ಕೊಂಡು ಹೋಗುತ್ತಾರೆ. ಎಲ್ಲಿಯಾದರೂ ಪೋಲಿಸರು ಬಂದರೂ ನಿಮ್ಮ ವಾಹನ ಮಾತ್ರ ಸೇಫ್ ಆಗಿರುತ್ತದೆ. ನೀವು ಮಾತ್ರ ನಿಮ್ಮ ನಿಮ್ಮ ಲೆಗ್ ಪೀಸ್ ಗಳನ್ನು ರೆಡಿ ಮಾಡಿಟ್ಟುಕೊಂಡರೆ ಸಾಕು, ಬದುಕಿದರೆ ಬಜಂಟ್ ಹೆಕ್ಕಿಯಾದರೂ ಬದುಕಿಯೇನು ಎಂದು ಓಡ್ಲಿಕ್ಕೆ,ಒಯ್ತಬುಡಿ ಮಾಡ್ಲಿಕ್ಕೆ.
ಹಾಗೇ ಅಲ್ಲೇ ಕಂಬಳಬೆಟ್ಟು ಗದ್ದೆಯಲ್ಲೇ ದಿನಾ ಜುಗಾರಿ ಆಡಿದರೆ ಪೋಲಿಸರಿಗೆ ಪರಿಮಳ ಬಂದಿತೆಂದು ಗೊತ್ತಿರುವ ಜುಗಾರಿ ಆಯೋಜಕರು ಕೆಲವು ದಿನ ಕಬಕದ ಕಲ್ಲು ಕೋರೆಗೆ ಹೋಗುವ ನಿರ್ಜನ ಬಲ್ಲೆಯಲ್ಲೂ ಭಜನೆ ಮಾಡುತ್ತಾರೆ ಎಂಬ ಮಾಹಿತಿ ಇದೆ. ಇನ್ನು ಕಬಕ ಪಳ್ಳಿಂಡೆ ಅಪ್ಪರ, ಕಬ್ಬಿನ ಜ್ಯೂಸ್ ಅಂಗಡಿಯ ಗುಂಡಿಯಲ್ಲಿ ರೈಲ್ವೇ ಟ್ರ್ಯಾಕ್ ಬದಿಯಲ್ಲಿ ನಿರಂತರ ಜುಗಾರಿ ನಡೆಯುತ್ತಿದೆ. ಈ ಬಗ್ಗೆ ಕಂಬಳಬೆಟ್ಟುವಿನ ತಾಲೂಕು ಲೆವೆಲ್ ಜುಗಾರಿ ಆಯೋಜಕ ಜುಗಾರಿ ಕೇಚುನಲ್ಲಿ "ಏನ್ಸಾರ್ ಇದೆಲ್ಲ"ಎಂದು ಕೇಳಿದರೆ "ಕತ್ತಲೆಗ್ ಎನ್ಮ ಗಂಟೆಗ್ ವಿಟ್ಲ ಸ್ಟೇಷನ್ ಬಲೆ, ಪೋಲಿಸ್ತಕುಲೆಡನೇ ಪಾತೆರ್ಗ " ಎಂಬ ದಿಟ್ಟ ಉತ್ತರ ಬರುತ್ತದೆ. ಹಾಗಾದರೆ ವಿಟ್ಲ ಪೊಲೀಸರ ಸರಹದ್ದಿನಲ್ಲಿ ಜುಗಾರಿ ಪ್ಲೇಯರ್ಸ್ ಯಾವ ರೇಂಜಿನಲ್ಲಿ ಬೆಳೆದಿರ ಬಹುದೆಂದು ನೀವೇ ಊಹಿಸಿ. ಆದ್ದರಿಂದ ಇನ್ನಾದರೂ ವಿಟ್ಲ ಪೊಲೀಸರು ಜುಗಾರಿ ಕೇಚುನ ಜುಗಾರಿ ಅಡ್ಡೆಗಳಿಗೆ ಧಾಳಿ ನಡೆಸಿ ಜುಗಾರಿ ಪ್ಲೇಯರ್ಸ್ ಗಳ ಹೆಂಡತಿಗಳ ಚೈನು, ಕಾಜಿ,ಬೆಂಡು, ಮೂಂಕುತಿ,ಕರಿಮಣಿ ಮುಂತಾದ ಪದ್ದೊಯಿಗಳನ್ನು ಉಳಿಸಿಕೊಡ ಬೇಕೆಂಬುದು ಸಾರ್ವಜನಿಕ ಆಶಯವಾಗಿದೆ. ಅಲ್ಲ ಮಾರಾಯ್ರೆ ಒಬ್ಬ ಜುಗಾರಿ ಆಯೋಜಕನೇ ಪತ್ರಿಕೆಯವರನ್ನು ನೈಟ್ ಪೋಲಿಸ್ ಠಾಣೆಗೆ ಕರೆಯುತ್ತಾನೆಂದರೆ ಅವನಿಗೆ ಪೋಲಿಸರ ಬಗ್ಗೆ ಎಷ್ಟು ಸಲಿಗೆ ಇರಬಹುದು. ಅವನು ಕರೆದ ಅಂತ ರಾತ್ರಿ ಪೋಲಿಸ್ ಸ್ಟೇಷನ್ ಗೆ ಯಾಕೆ ಹೋಗಬೇಕು? ಅಲ್ಲಿ ಎಂಥ ಕುಲೆಗಳಿಗೆ ಬಡಿಸ್ಲಿಕೆ ಉಂಟಾ? ಜುಗಾರಿ ಕೇಚುಗೇ ಗೊತ್ತು.
Post a Comment