ಬಹಳ ಹಿಂದೆ ಓಬಿರಾಯನ ಕಾಲದಲ್ಲಿ ಒಮ್ಮೆ ಕಡಬದ ಮಾಲೇಶ್ವರ - ಬೊಳ್ಳೂರು ರಸ್ತೆಯಲ್ಲಿ ಡಾಮಾರೀಕರಣದ ಚಿತ್ರ ಬಿಡಿಸಲಾಗಿತ್ತು ಎಂದು ಕಣ್ಣು ಡಿಮ್ಮಾದವರು, ಮೊರಂಪು ಬೇನೆಯವರು, ಬೊಕ್ಕು ಬಾಯಿಯವರು, ಸಿಂಗಲ್ ಕಿಡ್ನಿಯಲ್ಲಿರುವವರು ಅಪಗಪಗ ಹೇಳುತ್ತಾ ಇರುತ್ತಾರೆ. ಆ ಕಾಲದಲ್ಲಿ ಯಾವನೋ ಒಬ್ಬ ಪುಣ್ಯಾತ್ಮ ಫಾರೂಕು ಅಂತ ಗುತ್ತಿಗೆದಾರ ಈ ರೋಡಿಗೆ ಡಾಂಬರು ಹಾಕಿದ್ದನಂತೆ. ಆದರೆ ಅವನು ಹಾಕಿದ ಡಾಂಬರು ಈ ರಸ್ತೆಯಲ್ಲಿ ನಿಲ್ಲಲು ಕೇಳದೆ ಅವನೊಟ್ಟಿಗೆ ಹೋಗಿದೆ ಎಂದು ಈ ರಸ್ತೆಯಲ್ಲಿ ಅಂಚಿಂಚಿ ಸಂಚರಿಸುವ ಸಂಚಾರಿಗಳು ತಿಳಿಸಿದ್ದಾರೆ. ಆಮೇಲೆ ಇಲ್ಲ. ಈ ರಸ್ತೆಯ ಪರಿಸ್ಥಿತಿ ನೀವು ಮಳೆಗಾಲದಲ್ಲಿ ನೋಡಬೇಕು. ವಾಹನಗಳು ಟೈಟ್ ಆಗಿ ಹೋಗುವಂತೆ, ಮನುಷ್ಯರು ತಲೆ ತಿರುಗಿದವರಂತೆ, ಈಗಷ್ಟೇ ಕಂಬಳದ ಕರೆಯಿಂದ ಎದ್ದು ಬಂದವರಂತೆ ಸಂಚಾರಿಸುತ್ತಾ ಇರುತ್ತಾರೆ.
ಹಾಗೆಂದು ಈ ರಸ್ತೆ ಅಂದಾಜು ನಾಲ್ಕು ಕಿಲೋ ಉದ್ದ ಇದೆ. ಆದರೆ ಈ ರಸ್ತೆಯ ಮುಕ್ಕಾಲಂಶ ಕೆಲಸ ಫಿನಿಷ್ ಆಗಿದೆ. ಆದರೆ ಅಲ್ಲಿ ಕಲ್ಲಗಂಡಿಯಿಂದ ಮೂಡ್ಯೆ ತನಕ ರಸ್ತೆಯ ಲಿವರ್ ಕಂಪ್ಲೀಟ್ ಹೋಗಿದೆ. ಒಂದು ಮುನ್ನೂರು ಮೀಟರ್ ಅಷ್ಟೇ. ಅದಕ್ಕೊಂದು ಕಡ್ಲೆ ಬಜಿಲ್ ಮಿಕ್ಸ್ ಮಾಡಿ ಹಾಕ್ಲಿಕ್ಕೆ ಪೊಟ್ಟ(ಣ) ಪಂಚಾಯಿತಿಗೆ ಏನು ಉದಾಸೀನ? ಈ ಬಗ್ಗೆ ಚೀಫ್ ಆಫೀಸೆರ್ ಲೀಲಕ್ಕನಲ್ಲಿ ಕೇಂಡ ಸಾಕು " ಪಾಡುಗ, ಪಾಡುಗ, ಕೂಡ್ಲೆ ಕೆಲಸ ಸುರು ಮಲ್ಪುಗ" ಎಂದು ಗಣಪತಿಗೆ ಮದುವೆ ಮಾಡಿದ್ದು ಬಿಟ್ಟರೆ ಬೇರೆಂತದೂ ಆಗಿಲ್ಲ.ಲೀಲಕ್ಕನ ಈ ಡೈಲಾಗ್ ಕೇಳಿ ಕೇಳಿ ಕೇಳಿ ಈ ಭಾಗದ ಜನರ ಕೆಬಿತ್ತ ಪೂ ಕೂಡ ಬಾಕಿ ಶಬ್ದಗಳಿಗೆ ಸ್ಪಂದಿಸದ ತನಕ ಮುಟ್ಟಿದೆ. ಇನ್ನು ಸುಗ್ಗಿ ಪಗ್ಗು ಹೋಗಿ ಬೇಸ ಕಾರ್ತೆಲ್ ಬಂದರೆ ಈ ಭಾಗದ ಜನರ ಕತೆ ಕೈಲಾಸ ಆಗಿ ಬಿಡುತ್ತದೆ. ಈ ರಸ್ತೆಯಲ್ಲಿ ಹೊಗುವ ಪ್ರತಿ ಸಂಚಾರಿಯೂ ಪಟ್ಟಣ ಪಂಚಾಯಿತಿಗೆ ಮುರಿಯೋ ಇಟ್ಟುಕೊಂಡೇ ಹೋಗುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಡಬ ಪಟ್ಟಣ ಪಂಚಾಯಿತಿಗೆ ಬಾಡಿ ಇಲ್ಲ. ಆವತ್ತು ಗ್ರಾಮ ಪಂಚಾಯಿತಿಯಿಂದ ಚಡ್ಡಿ ಬಿಸಾಕಿ ಪ್ಯಾಂಟು ಹಾಕ್ಕೊಂಡು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿತ್ತಲ್ಲ ಆವತ್ತಿನಿಂದ ಇಲ್ಲಿ ತನಕ ಪಟ್ಟಣ ಪಂಚಾಯಿತಿಗೆ ಎಲೆಕ್ಷನ್ ಆಗಿಲ್ಲ. ಹಾಗಾಗಿ ಇಲ್ಲಿ ಜನ ಪ್ರತಿನಿಧಿಗಳ ಕಲರವ ಇಲ್ಲ. ಲೀಲಕ್ಕ ಮತ್ತು ಟೀಂ ಆಡಿದ್ದೇ ಆಟ, ಮಾಡಿದ್ದೇ ಕೆಲಸ. ಆದ್ದರಿಂದ ಬೇಸ ಕಾರ್ತೆಲ್ ಬರುವ ಮುಂಚೆಯೇ ಈ ರಸ್ತೆಯನ್ನು ಒಂದು ಸರಿ ಮಾಡಿ ಕೊಟ್ರೆ ಪಟ್ಟಣ ಪಂಚಾಯಿತಿಗೂ ಕ್ಷೇಮ, ಜನರಿಗೂ ಕ್ಷೇಮ. ಇಲ್ಲದಿದ್ದರೆ ಇಬ್ಬರ ಆರೋಗ್ಯದಲ್ಲೂ ಏರುಪೇರು ಗ್ಯಾರೆಂಟಿ. ಅಲ್ಲಿ ಒಂದು ಗುಂಡಿಗೆ ಬಿದ್ದರೆ ಏಳಿಕ್ಕೆ ಫಸ್ಟ್ ಗೇರ್, ಸೆಕೆಂಡ್ ಗೇರ್ ಹಾಕಲೇ ಬೇಕಾದ ಪರಿಸ್ಥಿತಿ ಇದೆ.
Post a Comment