ಒಂದು ನ್ಯಾಶನಲೈಜ್ ಬ್ಯಾಂಕಲ್ಲ, ಪ್ರೈವೇಟ್ ಸೆಕ್ಟರ್ ಬ್ಯಾಂಕೂ ಅಲ್ಲ, ಜಿಲ್ಲಾ ಬ್ಯಾಂಕ್ ಕೂಡ ಅಲ್ಲ. ಆದರೂ ಒಂದು ಇದ್ದ ಬ್ರಾಂಚ್ ನ ನವೀಕರಣಕ್ಕೆ ಒಂಬತ್ತು ಲಕ್ಷ ಮುಗಿಸಲಾಗಿದೆ. ಇಷ್ಟು ಖರ್ಚು ಬೇಕಿತ್ತಾ ಎಂಬ ಪ್ರಶ್ನೆ ಎದ್ದು ಕುಂತಿದೆ.
ಇದು ನರಿಮೊಗರು ಸೊಸೈಟಿ. ದೊಡ್ಡ ಸೊಸೈಟಿ. ವ್ಯಾಪಾರ ವ್ಯವಹಾರ ಎಲ್ಲವೂ ದೊಡ್ಡದೇ. ಸದ್ರಿ ಸೊಸೈಟಿಯಲ್ಲಿ ದೇಸ ಭಕ್ತರು, ಸೆಕ್ಯುಲರ್ ಗಳು ಎಲ್ಲಾ ಅಧಿಕಾರ ಅನುಭವಿಸಿ ಆಗಿದೆ. ಇದೀಗ ಇಲ್ಲಿ ದೇಶ ಭಕ್ತರ ಆಡಳಿತ ಮಂಡಳಿ ಇದ್ದು ಮೊನ್ನೆ ಡಿಸೆಂಬರ್ ನಲ್ಲಿ ಕಾಂಗ್ರೇಸಿಗರಿಂದ ಕುರ್ಚಿ ತಗೊಂಡು ಆಡಳಿತ ಶುರು ಮಾಡಿದ್ದಾರೆ. ಹಾಗೇ ಡಿಸೆಂಬರ್ ಚಳಿಯಲ್ಲಿ ಅಧಿಕಾರಕ್ಕೆ ಬಂದವರೇ ದೇಸಭಕ್ತರು ಮೊದಲು ಮಾಡಿದ ದೊಡ್ಡ ಕೆಲಸ ಅಂದರೆ ಶಾಂತಿಗೋಡು ಗ್ರಾಮದ ಕೈಂದಾಡಿ ಬ್ರಾಂಚ್ ನ ನವೀಕರಣ. ಆ ಕೆಲಸ ಯಾಕೆ ಬಂದ ಮೂರು ತಿಂಗಳಲ್ಲಿಯೇ ಫಿನಿಷ್ ಮಾಡಿ ಮುಗಿಸಿದರು ಎಂಬುದು ಸೊಸೈಟಿಯ ನಾಲಕ್ಕು ಸಾವಿರಕ್ಕಿಂತಲೂ ಅಧಿಕ ಸದಸ್ಯರ ಪ್ರಶ್ನೆ. ಹಾಗೆಂದು ಸೊಸೈಟಿಯ ಯಾವುದೇ ಕೆಲಸಗಳ ಒಂದು ಲಕ್ಷಕ್ಕಿಂತ ದೊಡ್ಡ ಬಿಲ್ ಮಾಡಬೇಕಿದ್ದರೆ ಅದಕ್ಕೆ AR,DR ಪರ್ಮಿಷನ್ ಬೇಕು. ಇದು ಅನಾಮತ್ತು ಒಂಬತ್ತು ಲಕ್ಷಗಳ ದೊಡ್ಡ ಬಿಲ್. ಇದಕ್ಕೆ AR ಪರ್ಮಿಷನ್ ಉಂಡಾ ಎಂಬುದು ಸೊಸೈಟಿ ಸದಸ್ಯ ಪ್ರಶ್ನೆ. ಆಯ್ತು AR ಪರ್ಮಿಷನ್ ದನ ತಿಂದು ಹೋಗಲಿ, ಕಡೇ ಪಕ್ಷ ನವೀಕರಣಕ್ಕೆ ನರಿಮೊಗರು ಪಂಚಾಯಿತಿ ಏನಾದರೂ ಒಂದು ತುಂಡು ಪರ್ಮಿಷನ್ ಆದರೂ ಕೊಟ್ಟಿದೆಯಾ ಎಂಬುದೇ ಡೌಟು ಕೇಸು. ಹಾಗೆಲ್ಲ ದೇಸಭಕ್ತರು ಯಾರದ್ದೂ ಪರ್ಮಿಷನ್ ಇಲ್ಲದೆ ಅಂಡಿಗುಂಡಿ ಕಾಮಗಾರಿಗಳನ್ನೆಲ್ಲ ಮಾಡಿದ್ರೆ ಕತೆ ಎಂತ ಅಂತ?
ಹಾಗೆಂದು ಯಾವುದೇ ಕಾಮಗಾರಿಗಳಿಗೆ ಇಂಜಿನಿಯರ್ ಎಸ್ಟಿಮೇಟ್ ಬೇಕು ಮತ್ತು ಕಾಮಗಾರಿಗೆ ಟೆಂಡರ್ ಕರೆಯ ಬೇಕು. ಇಲ್ಲಿ ಅಂಥಹ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂಬ ಗುಸುಗುಸು ಇದೆ. ಯಾವನೋ ದೇಸಭಕ್ತ ಡೈರೆಕ್ಟರ್ ಕೊಟ್ಟ ಅಂಡಿಗುಂಡಿ ಎಸ್ಟಿಮೇಟ್ ಮತ್ತು ಅವನ ಚೇಲಾನೇ ಗುತ್ತಿಗೆದಾರ. ಅಲ್ಲಿಗೆ ಒಂಭತ್ತು ಲಕ್ಷ ಮಟಾಷ್. ಪಾಪ ಸೊಸೈಟಿ ಸದಸ್ಯರು ಊರೇ ಮುಳುಗಿದಂತೆ ಕೈ ಮೇಲೆ ತಲೆ ಹೊತ್ತು ಕುಂತಿದ್ದಾರೆ. ಒಂಜಿ ಪಾಸ್ ಬೂಕು ವಿತರಣೆಗೆ ಇಷ್ಟೆಲ್ಲಾ ಬೇಕೇ? ಇನ್ನು ಕಾಮಗಾರಿ ವಿಷಯಕ್ಕೆ ಬರುವುದಾದರೆ ಕೆಲಸ ಸರಿ ಆಗಿಲ್ಲ ಎಂಬ ಅಸಮಾಧಾನ ಇದೆ. ಇಂಟರ್ ಲಾಕ್ ಹಾಕಿದ್ದು ಸರಿ ಆಗಿಲ್ಲ ಅಲ್ಲಿ ಗುಂಡಿ ಗುರುಂಪು ಇದೆ ಎಂಬ ದೂರಿದೆ. ಒಂಬತ್ತು ಲಕ್ಷ ಇಲ್ಲಿ ಖರ್ಚು ಮಾಡದೆ ಸಣ್ಣ ದುಡ್ಡಿನಲ್ಲಿ ಕಾಮಗಾರಿ ನಡೆಸಿ ದೊಡ್ಡ ಬಿಲ್ ಮಾಡಲಾಗಿದೆ ಎಂಬ ಅಸಮಾಧಾನ ಇದೆ. ಅದರಲ್ಲೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಉದ್ಘಾಟಿಸಿ ಏನಾದರೂ ಹೆಚ್ಚು ಕಡಿಮೆ ಆಗುತ್ತಿದ್ದರೆ ಸದಸ್ಯರು ರಂಬಾರೋಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಏರ್ಲ ದಾನೆ ಪನ್ವೆರ್?
Post a Comment