ಇದೊಂದು ಮಹೀಂದ್ರ TRV ವಾಹನ ಯಾರದ್ದು ಮಾರಾಯ್ರೆ? ಬಿಳಿ ಬಣ್ಣದ ಈ ವಾಹನದಲ್ಲಿ ಪೋಲಿಸ್ ಬೋರ್ಡ್ ಇದೆ. ಪುತ್ತೂರು ಪೋಲಿಸ್ inspector ಅವರದ್ದು ನೀಲಿ ಬೊಲೆರೋ, PSI ವಾಹನ ಕೂಡ ನೀಲಿ, ಟ್ರಾಫಿಕ್ ಪೋಲಿಸರದ್ದು ವೈಟ್& ವೈಟ್. ದೊಡ್ಡ ಸಾಹೇಬ್ರದ್ದು ಕೂಡ ವೈಟು ಬೊಲೆರೋ. ಇನ್ನು ಗ್ರಾಮಾಂತರದವರದ್ದು, ಉಬಾರ್ ಪೋಲಿಸರದ್ದು, ವಿಟ್ಲ, ಕಡಬ, ಸುಳ್ಯದವರದ್ದು ಅಲ್ಲವೇ ಅಲ್ಲ ಈ ಗಾಡಿ. ಹಾಗಾದರೆ ಯಾರದ್ದು? ನಾಟಕದವರ ಗಾಡಿಯಾ, ಥ್ರಿಲ್ಲರ್ ಮಂಜು ಗಾಡಿಯಾ? ಗೊತ್ತಿಲ್ಲ.
ಒಟ್ಟಾರೆಯಾಗಿ ಇದೊಂದು ಪೋಲಿಸ್ ಬೋರ್ಡ್ ಇರುವ ಗಾಡಿ. ಇದರಲ್ಲಿ ಹೆಂಗಸ್ರು, ಮಕ್ಳು ಎಲ್ಲಾ ಇರುತ್ತಾರೆ. ಮೊನ್ನೆ ಸಂಡೇ ಈ ಗಾಡಿ ಪುತ್ತೂರಿನಲ್ಲಿ ಕಂಡು ಬಂದಿದೆ. ಇದು ಯಾವ ಊರಿನ ಫೋಲಿಸಪ್ಪ ಎಂದು ಫಾಲೋ ಮಾಡಿದ್ರೆ ಕೇಪುಳು ರೋಡಲ್ಲಿ ಸುಯ್ಯೆಂದು ಹೋಗಿದೆ. ಎಲ್ಲಿಗೆ, ಯಾಕೆ ಹೋಗಿದೆ ಎಂದು ಗೊತ್ತಿಲ್ಲ. ಕಲ್ಲರನ್ನು ಹಿಡಿಯಲು ಎಲ್ಲಿಯಾದರೂ ಬೇರೆ ಊರಿನ ಪೋಲೀಸು ಬಂತಾ ಎಂದು ಯೋಚಿಸಿದರೆ ನಮ್ಮ ಎಣಿಕೆ ತಪ್ಪು. ಯಾಕೆಂದರೆ ಗಾಡಿಯಲ್ಲಿ ಹೆಂಗಸ್ರು, ಮಕ್ಕಳು ಇದ್ದರು. ಕಲ್ಲರನ್ನು ಹಿಡಿಯಲು ಇವರೆಲ್ಲ ಬೇಕಾ?
ಹಾಗಾದರೆ ಈ ಗಾಡಿ ಯಾರದ್ದು? ಸುಮ್ಮನೆ ಖಾಸಗಿ ವಾಹನಗಳಿಗೆಲ್ಲ ಪೋಲಿಸ್ ಅಂತ ಬೋರ್ಡ್ ಸಿಕ್ಕಿಸಿಕೊಂಡು ಓಡಾಡ್ಲಿಕ್ಕೆ ಆಗುತ್ತಾ? ನಾಳೆ ನಾನೂ ಜಿಲ್ಲಾಧಿಕಾರಿಗಳು ಅಂತ ಬೋರ್ಡ್ ಸಿಕ್ಕಿಸಿಕೊಂಡು ಓಡಾಡಿದ್ರೆ ಜಿಲ್ಲೆಯ ಪರಿಸ್ಥಿತಿ ಏನಾಗಬಹುದು?ಪೋಲಿಸರು ನನ್ನ ಬೆಂಡ್ ತೆಗೆದು ಸನ್ಮಾನ ಮಾಡಲ್ವಾ? ಹಾಗಾದರೆ ಖಾಸಗಿ ವಾಹನಗಳಿಗೆಲ್ಲ ಪೋಲಿಸ್ ಅಂತ ಬೋರ್ಡ್ ಸಿಕ್ಕಿಸಿಕೊಂಡು ಓಡಾಡಿದ್ರೆ ಒರಿಜಿನಲ್ ಪೋಲಿಸರ ಗೆಟಪ್ಪಿಗೂ ಧಕ್ಕೆ ಬರಲ್ವಾ? ಆದ್ದರಿಂದ ಆದಷ್ಟು ಬೇಗ ಒರಿಜಿನಲ್ ಪೋಲಿಸರು ಈ ಪೊಕ್ಕಡೆ ಪೋಲಿಸ್ ಯಾರೆಂದು ಕಂಡು ಹಿಡಿಯಲೇ ಬೇಕು. ಪೋಲಿಸ್ ಗೆಟಪ್ ನಲ್ಲಿ ಬರುವ ಈ ಪೊಕ್ಕಡೆ ಪೋಲಿಸನ್ನು ಹಿಡಿದ್ದು ಗೆಬ್ಬೀಗೆ ಎರಡ್ಡು ಕೊಟ್ಟು ಉಳ್ಳಾಲ - ಮಂಜೇಶ್ವರ ತೋರಿಸಬೇಕು. ಇಲ್ಲದಿದ್ದರೆ ಈ ಪೊಕ್ಕಡೆ ಪೋಲಿಸನಿಂದ ಮುಂದೆ ನಡೆಯುವ ಅನಾಹುತಗಳಿಗೆ ಒರಿಜಿನಲ್ ಪೋಲಿಸರೇ ಕಾರಣಕರ್ತರಾಗಿರುತ್ತಾರೆ.
Copy to SP.DK
Post a Comment