ಪುತ್ತೂರು: ರೈಲ್ ಪರ್ಮಿಷನ್ ಇಲ್ವಾ?

                                                  


   ಅಲ್ಲಿ ನೆಹರೂ ನಗರದಲ್ಲಿ ಪೆಟ್ರೋಲ್ ಬಂಕ್ ಹತ್ರ ಶೆಡ್ ನಿರ್ಮಾಣ ಆಗುತ್ತಿದ್ದು ಶೀಘ್ರಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಇಷ್ಟೆಲ್ಲಾ ಅರ್ಜೆಂಟ್ ಅರ್ಜೆಂಟ್ ಯಾಕೆ ಕೆಲಸಗಳು ನಡೆಯುತ್ತಿವೆ ಎಂದು ಗೊತ್ತಾಗುತ್ತಿಲ್ಲ.‌ ಮೋಡ್ಯ‌ ತಿಂಗಳೇನಾದರೂ ಉಂಟಾ ಎಂದು ಪಂಚಾಂಗ ಬಿಡಿಸಿದರೆ ಅದೂ ಇಲ್ಲ. ಇನ್ನು ಮರ್ಯಲ ಬರುವ ಕಾರಣ ಬೇಗ ಬೇಗ ಕೆಲಸ ಮುಗಿಸಿ ಅಟ್ಟ ಹತ್ತಿ ಕೂರುವ ಐಡಿಯಾವೂ ಇರಬಹುದು. ಅಂತೂ ಇಂತೂ ನೆಹರೂ ನಗರದ ಶೆಡ್ ನಿರ್ಮಾಣ ಮಾತ್ರ ಫಾಸ್ಟೊ ಫಾಸ್ಟು.




    ಹಾಗೆಂದು ನೆಹರೂ ನಗರದಲ್ಲಿ ಮೂರು ಸೈಜಿನ ಮಾರ್ಗಗಳು ಹಾದು ಹೋಗುತ್ತದೆ. ಒಂದು ಮೈಸೂರು -ಮಾಣಿ ಸ್ಟೇಟ್ ಹೈವೇ, ಎಳ್ಡು ನೆಹರೂ ನಗರ- ಪಡೀಲ್ ನಗರ ಸಭೆ ರಸ್ತೆ ಮತ್ತೊಂದು ಬೆಂಗ-ಮಂಗ ರೈಲ್ವೇ ಟ್ರ್ಯಾಕ್. ಹಾಗಾಗಿ ಇಷ್ಟೆಲ್ಲಾ ಬಿಜಿ ಇರುವಾಗ ಒಂದು ಕೊಟ್ಟು ಮಣ್ಣು ತೆಗೆಯ ಬೇಕಾದರೂ ಕೆಲವು ಇಲಾಖೆಗಳ ಕಛೇರಿಗಳಿಗೆ ತಲೆಗೆ ಮೈಗೆ ಸ್ನಾನ ಮಾಡಿ ಬಲಿ ಬರಲೇ‌ ಬೇಕಾದ ಪರಿಸ್ಥಿತಿ ಇದೆ. ಇಂಥ ಸೂಕ್ಷ್ಮ ಜಾಗದಲ್ಲಿ ಪಿಕ್ಕಾಸು ಹಾಕುವ ಮೊದಲೇ ಚಿಕ್ಕಾಸು ಹಾಕಿ ಸಂಬಂಧ  ಪಟ್ಟ ಇಲಾಖೆಗಳ ಪರ್ಮಿಷನ್ ತೆಗೆದು ಕೊಳ್ಳುವುದು ಅನಿವಾರ್ಯ. ‌ಇದೀಗ ಸದ್ರಿ ಶೆಡ್ ನಿರ್ಮಾಣಕ್ಕೆ ನಗರ ಸಭೆ, ಸ್ಟೇಟ್ ಹೈವೇ ಅಥಾರಿಟಿ‌ ಮತ್ತು ರೈಲಿನ‌ ಪರ್ಮಿಷನ್ ಸಿಕ್ಕಿದೆಯೇ ಎಂಬುದು ‌ಸಾರ್ವಜನಿಕರ ಪ್ರಶ್ನೆಯಾಗಿದೆ. ಶೆಡ್  ಮುಂದೆ ಸ್ಟೇಟ್ ಹೈವೇ, ಎಡಕ್ಕೆ ಪಂಪು, ಬಲಕ್ಕೆ ನಗರ ಸಭೆ ರಸ್ತೆ, ಹಿಂದೆ ಚುಕುಬುಕು ರೈಲು. ಹೇಗಾಗ ಬಹುದು? ಅಣ್ಣೆರೇ..... ಎಲ್ಲಿದ್ದೀರಿ?










Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget