ಅಲ್ಲ ಮಾರಾಯ್ರೆ ಎಂಥೆಂಥ ಪ್ರತಿಭೆಗಳನ್ನೆಲ್ಲ ತಂದು ಭಗವಂತೂ ಪುತ್ತೂರಿನಲ್ಲಿ ಇಳಿಸಿದ್ದಾನೆಂದರೆ ಕುಂತು ನಗಬೇಕೋ, ನಿಂತು ನಗಬೇಕೋ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ಈ ಅಂಗನವಾಡಿಯ ಪುಟಾಣಿ ದೇವರುಗಳು ಆ ಕಳ್ಳ ನನ್ಮಕ್ಕಳಿಗೆ ಮಾಡಿರುವ ಅನ್ಯಾಯವಾದರೂ ಏನು?
ಮೊನ್ನೆ ನೈಟು ಅಲ್ಲಿ ಪುತ್ತೂರು ಕೋಟಿ ಚೆನ್ನಯ KSRTC ಬಸ್ ನಿಲ್ದಾಣದ ಕೂಗಳತೆ ದೂರದ ನೆಲ್ಲಿಕಟ್ಟೆ ಏರಿಯಾಕ್ಕೆ ಡ್ಯೂಟಿಗೆ ಬಂದಿದ್ದ ಕಳ್ಳರಿಗೆ ಭಯಂಕರ ಹಸಿವಾಗಿದೆ. ಬಂಜಿಗೆ ಏನ್ ಮಾಡೋಣ, ಏನ್ ಮಾಡೋಣ ಎಂದು ಇಡೀ ಏರಿಯಾದಲ್ಲಿ ಹುಡುಕಲಾಗಿ ಪುಟಾಣಿ ದೇವರುಗಳ ಅಂಗನವಾಡಿ ಕಣ್ಣಿಗೆ ಬಿದ್ದಿದೆ. ಹಿಂದೆ ಮುಂದೆ ನೋಡದ ಕಳ್ಳರು ಅಂಗನವಾಡಿ ಬೀಗ ಮುರಿದು ಒಳಗೆ ಹೋಗಿ ಅಲ್ಲಿ ಪುಟಾಣಿ ದೇವರುಗಳಿಗೆಂದು ಇಟ್ಟಿದ್ದ ಇಪ್ಪತ್ತೈದಕ್ಕೂ ಹೆಚ್ಚು ಕೆತ್ತಿಗಳನ್ನು ಅಂಗನವಾಡಿಯ ಗ್ಯಾಸ್ ಸ್ಟವ್ ನಲ್ಲೇ ಆಮ್ಲೆಟ್ ಮಾಡಿ ತಿಂದು ಹೋಗಿದ್ದಾರೆ. ಅಷ್ಟು ಮಾತ್ರವಲ್ಲದೆ ಇನ್ನೂ ಅನೇಕ ಅವಾಂತರಗಳನ್ನು ಮಾಡಿ ಹೋಗಿದ್ದಾರೆ. ಕಳ್ಳ ಸಿಕ್ಲಿ, ಉಂಟು ಹಬ್ಬ. ಪುತ್ತೂರು ಪೋಲಿಸರು ಎಣ್ಣೆ ಬೆಚ್ಚ ಮಾಡಿ ಅಕ್ಕಿ ನೆನೆ ಹಾಕಿದ್ದಾರೆ.
ಕಳ್ಳರಿಗೆ ಜೋಕುಲಿಲ್ವಾ? ಅಲ್ಲ ಮಾರಾಯ್ರೆ ಒಂದು ಅಂಗನವಾಡಿ ಕೇಂದ್ರದಲ್ಲಿ ಪುಟಾಣಿಗಳಿಗೆಂದು ಇಟ್ಟಿದ್ದ ಕೆತ್ತಿಗಳನ್ನೂ ಬಿಡದೆ ಕಳವು ಮಾಡುತ್ತಾರಲ್ಲ ಕಳ್ಳರಿಗೆ ಭಾಷೆ ಇಲ್ವಾ? ಕಳ್ಳರ ಬಂಜಿಗೆ ಭೂತೋಲು ಪೆಟ್ಟು ಪಾಡ್ಯರ, ಅವರ ಬಂಜಿಗೆ ಸಿಡಿಲು ಹೊಡಿಲಿಕ್ಕೆ ಎಂದು ಜನ ಸಿಕ್ಕ ಸಿಕ್ಕ ಕಡೆಯೆಲ್ಲಾ ನೆಲಕೈ ಹೊಡೆಯುತ್ತಿದ್ದಾರೆ. ಅಲ್ಲ ಕಳ್ಳರು ಹೇಗೂ ಅಂಗನವಾಡಿ ಪುಟಾಣಿಗಳ ಕೆತ್ತಿ ಆಮ್ಲೆಟ್ ಮಾಡಿ ತಿಂದು ಮುಗಿಸಿದರು, ಅದರೊಟ್ಟಿಗೆ ಅಂಗನವಾಡಿ ಪುಟಾಣಿಗಳ ಸ್ವಲ್ಪ "ಪಿ" ಕೂಡ ಇಡಬೇಕಿತ್ತು, ಅದಕ್ಕೆ ಕಂತಿಸಿ ಕಂತಿಸಿ ತಿನ್ನುತ್ತಿದ್ದರೋ ಏನೋ.
Post a Comment