ಕಡಬ: ಸಿದ್ದಿಕ್ಕಿಚ್ಚಂಡೆ ಪೀಡೆ & ಅರಣ್ಯ ಇಲಾಖೆ

                                                          


  ಹಾಗೆಂದು ಕಡಬ ತಾಲೂಕು ಆದರೂ ಕೆಲವು ಇಲಾಖೆಗಳು ಇನ್ನೂ ಕಡಬದಲ್ಲಿ ದುಖಾನ್‌‌ ತೆರೆದಿಲ್ಲ. ಅವುಗಳು ಬರಲು ಇನ್ನೂ ಕಾಲ ಕೂಡಿ ಬಂದಿಲ್ಲ. ಇಂಥ ಇಲಾಖೆಗಳಲ್ಲಿ ಅರಣ್ಯ ಇಲಾಖೆ ಕೂಡ ಒಂದು. ಅರಣ್ಯ ಇಲಾಖೆಯ ಮ್ಯಾಪಿನಲ್ಲಿ ಕಡಬ ಪಂಜ‌ ರೇಂಜಿನಡಿಯಲ್ಲಿ ಬರುತ್ತದೆ. ಪಂಜ ರೇಂಜಿಂದ ಕಡಬಕ್ಕೆ ಫಾರೆಸ್ಟರ್, ಗಾರ್ಡ್ ಗಳ ರೌಂಡ್ಸ್ ಇದೆ. ಆದರೂ ಕಡಬಕ್ಕೆ ಒಂದು ಪೂರ್ಣ ಪ್ರಮಾಣದ ಕಾಡಾಫೀಸು ಬೇಕು ಅನ್ನುವುದು ಸಾರ್ವಜನಿಕರ ಒತ್ತಾಯ. ಯಾಕೆಂದರೆ ಕಡಬದಲ್ಲಿ ಮರ ಕಡಿಯುವ ಶಬ್ದ ಪಂಜ ತನಕ ಕೇಳಿಸುವುದೇ ಇಲ್ಲ.
  ಹಾಗೆಂದು ಕಡಬದಲ್ಲಿ ಕೂಡ‌ ಎಲ್ಲಾ ಊರುಗಳಲ್ಲಿ ಇರುವಂತೆ ಮರಗಳ್ಳರ ದೊಡ್ಡ ದೊಡ್ಡ ಟೀಮೇ ಇದೆ. ಚಿಲ್ಲರೆ ಮರಗಳ್ಳರ ಕಲರವ ಕೂಡ ಕಡಬದಲ್ಲಿದೆ. ಇವರೆಲ್ಲರೊಂದಿಗೆ ಅರಣ್ಯ ಇಲಾಖೆಯ ಜುಗಲ್ ಬಂದಿ ಇದೆ. ಮರಗಳ್ಳರು ಸತ್ತಂತೆ ಮಾಡೋದು ಅರಣ್ಯ ಇಲಾಖೆಯವರು ಅತ್ತಂತೆ ಮಾಡೋದು ಓಬಿರಾಯನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹಾಗೆಂದು ಕಡಬಕ್ಕೆ ಕಾಡು ಕಾಯಲು ಬರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಡ ಸನ್ಯಾಸಿಗಳಲ್ಲ. ಕಡಬದಲ್ಲಿ ಮರ ಕಡಿಯುವ ಶಬ್ದಕ್ಕೆ ಸೌಂಡ್ ಪ್ರೂಫ್ ಮಾಡಿಕೊಂಡ ಮಹಾನ್ ಕೆಲಸಗಾರರು ಇವರು.





   ಹಾಗೆಂದು ಕಡಬದ ಅರಣ್ಯ ಇಲಾಖೆ ಸಿಬ್ಬಂದಿ ಯಾರೂ ಒಂದು ಪೈಸೆ ಮುಟ್ಟಲ್ಲ. ನೀವು ಎಷ್ಟೇ ಒತ್ತಾಯ ಮಾಡಿದರೂ ಅವರು ನಿಮ್ಮ ಹತ್ತಿರ ದುಡ್ಡು ತೆಗೆದು ಕೊಳ್ಳಲ್ಲ.ಆದರೆ ನಿಮ್ಮ ಕೆಲಸ ಮಾತ್ರ ಜಟ್ ಫಟ್ ಆಗಿಯೇ ಆಗುತ್ತದೆ.‌ ಇದು ಹೇಗೆ ಎಂದು ನಿಮಗೆ ಆಶ್ಚರ್ಯವೇ ಆಗಬಹುದು. ಈಗ ಮ್ಯಾಟರ್ ಗೆ‌‌ ಬರ್ತೇನೆ. ಅಲ್ಲಿ ಕಡಬದ ಹೃದಯ ಭಾಗದಲ್ಲಿ ಸಿದ್ದಕ್ಕಿಚ್ಚನ‌‌ ಗೂಡು ಪೀಡೆ ಒಂದಿದೆ. ಓಬಿರಾಯನ ಕಾಲದಿಂದಲೂ ಕಡಬದಲ್ಲಿ ಈ ಗೂಡಂಗಡಿ ಅರಣ್ಯ ಇಲಾಖೆ ಸಿಬ್ಬಂದಿಗಳ ಅಡ್ಡೆಯಾಗಿದೆ. ನೀವು ಕಡಬದಲ್ಲಿ ಅರಣ್ಯ ಇಲಾಖೆಗೆ ಸಂಬಂಧ ಪಟ್ಟಂತೆ ಏನು ತಪ್ಪು ಕೆಲಸ ಮಾಡಿದರೂ ಅದಕ್ಕೊಂದು ಕ್ಷಮೆ ಇದೆ. ಆದರೆ ಅದಕ್ಕೆ ಪರಿಹಾರವಾಗಿ ಬಡಿಸುವ ಕಾರ್ಯಕ್ರಮ ಏನಿದ್ದರೂ ಅದು ಸಿದ್ದಿಕ್ಕಿಚ್ಚಂಡೆ ಪೀಡೆಯಲ್ಲಿ.
   ಹಾಗೆಂದು ನೀವು ಒಂದು ಮರ🌲ಕದ್ದು ಕಡಿದಿರಿ ಎಂದು ಇಟ್ಟುಕೊಳ್ಳೋಣ. ಅರಣ್ಯ ಇಲಾಖೆಯವರು ಭೂತ ಹಿಡಿದವರಂತೆ ಬಂದು ನಿಮ್ಮನ್ನು ತಿರ್ತ್ ಮಿತ್ತ್ ಮಾಡುತ್ತಾರೆ. ನಂತರ ಭೂತ ಪಿರಿದು ಡೀಲಿಂಗ್ ನಡೆಯುತ್ತದೆ. ಆ ಡೀಲಿಂಗ್ ದುಡ್ಡು ಅವರು ಕೈಯಲ್ಲಿ ಮುಟ್ಟಲ್ಲ. ಅದನ್ನು ನೀವು ಸಿದ್ದಿಕ್ಕಿಚ್ಚಂಡೆ ಪೀಡೆಗೆ ಮುಟ್ಟಿಸಿದರೆ ಸಾಕು,ಅದು ಮುಟ್ಟುವಲ್ಲಿಗೆ ಮುಟ್ಟಿ ಬಿಡುತ್ತದೆ. ಹೀಗೆ ಮರಗಳ್ಳರು, ಮಿಸನ್ ಇದ್ದವರು, ಕ್ರೇನ್ ಇದ್ದವರು, ಆನೆ 🐘 ಹೋಲ್ಡರ್ಸ್, ಮಿಲ್ಲಿನವರು, ಫರ್ನಿಚರ್ ಮಾಡುವವರು ಮತ್ತು ಮರ ಕದ್ದುಕೊಂಡು ಪರ್ಮನೆಂಟ್ ಕಾಡಿನಲ್ಲೇ ಇರುವ ಕಾಡುಪಾಪಗಳು ಹೀಗೆ ಎಲ್ಲರೂ ಅರಣ್ಯ ಇಲಾಖೆಯಿಂದ ಏನಾದರೂ ಉಪದ್ರ,ಅಜನೆ, ವಾಸ್ತು ದೋಷ, ಚಿದ್ರದೋಷ ಕಂಡು ಬಂದಲ್ಲಿ ಸೀದಾ ಸಿದ್ದಿಕ್ಕಿಚ್ಚಂಡೆ ಪೀಡೆಗೆ ಹೋಗಿ ಅಲ್ಲಿ ಅಗೆಲು ಕೊಟ್ಟು ಪರಿಹಾರ ಕಂಡು ಕೊಳ್ಳುತ್ತಾರೆ. ಇದೊಂದು ಸೇಫ್ ಟೆಕ್ನಿಕ್. ಅತಿಮೀರ ಲೋಕಾಯುಕ್ತ ಪೋಲಿಸರು ಬಂದರೂ ಸಿದ್ದಿಕ್ಕಿಚ್ಚನ    ಲುಂಗಿಯನ್ನೇ ಹಿಡಿಯ ಬೇಕಷ್ಟೇ, ಇವರು ಸಿಕ್ಕಿ ಬೀಳುವ ಚಾನ್ಸೇ ಇಲ್ಲ.




     ಇನ್ನೊಂದು ಇಲ್ಲಿನ ವಿಶೇಷ ಏನೆಂದರೆ ಕಾನೂನು ಬಾಹಿರವಾಗಿ ಮರ ಕಡಿಯುವವರು ಮತ್ತು ಕದಿಯುವವರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗುಳಿಗ್ಗನ ಹಾಗೆ   ಊರಿನ ಕೋಳಿ 🐓 ಕೇಳುತ್ತಾರೆ ಎಂಬ ಸುದ್ದಿ ಇದೆ. ಅಲ್ಲಿ ಹಳೇ ಸ್ಟೇಷನ್ ಹತ್ತಿರ ಯಾರದ್ದು ಮಾರಾಯ್ರೆ 🏡 ಮನೆ? ಕಂಡಾಪಟ್ಟೆ ಮರ ಹಾಕಿದ್ದಾರಂತೆ ಅದಕ್ಕೆ. ಪಾಪದವನು ಸೂತ ಪೆಟ್ಟಿಗೆ ಮಾಡ್ಲಿಕ್ಕೆ ಒಂದು ಪೊಂಗರೆ ಮರ ಕಡಿದರೂ ಅಬ್ಬರಿಸಿ ಬೊಬ್ಬಿರಿಯುವ ಮಂದಿ ಹಳೇ ಸ್ಟೇಷನ್ ಮನೆಗೆ ಒಂದು ರೌಂಡ್ ಹೋಗಿ ಬರಲಿ.







Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget