ಇಲ್ಲಿ ಭಾರತವೂ ಇರಲಿಲ್ಲ ಪಾಕಿಸ್ಥಾನವೂ ಇರಲಿಲ್ಲ ಎಂಬ ವಾಸ್ತವ ಸತ್ಯವನ್ನು ನಾವೆಲ್ಲರೂ ಅರಗಿಸಿಕೊಳ್ಳಲೇ ಬೇಕಾದ ವಿಚಾರ. 19ನೇ ಶತಮಾನದಲ್ಲಿ 565 ದೇಶಗಳ ಉಪಖಂಡವಾಗಿದ್ದ ಭಾರತ ಬ್ರಿಟೀಷರ ಆಗಮನ ಹಾಗು ನಿರ್ಗಮನದ ಪರಿಣಾಮ ಭಾರತ ಮತ್ತು ಪಾಕಿಸ್ಥಾನ ದೇಶಗಳಾಗಿ ರೂಪಾಂತರವಾಯಿತು.
ಇಂದಿನ ಕೊಡಗಿಗಿಂತ ಮೊದಲಿನ ಕೊಡಗು ಕೂಡ ಬಹಳಷ್ಟು ಬಾರಿ ತನ್ನ ಭೌಗೋಳಿಕ ನಕಾಶೆಯನ್ನು ಬದಲಿಸಿಕೊಂಡಿದೆ. ಹಾಗೆಯೇ ಇಂದಿನ ಕರ್ನಾಟಕದ ನಕಾಶೆ ಕೂಡ ಅನೇಕ ಬಾರಿ ಬದಲಾವಣೆಗೊಂಡ ನಂತರದಲ್ಲಿ ರಾಜಕೀಯಾಗಿ ರೂಪಗೊಂಡ ಪ್ರಕ್ರಿಯೆ.
ಇಂದಿನ ಕರ್ನಾಟಕದಲ್ಲಿರುವ ಕೊಡಗು ವಸಾಹತು ಪೂರ್ವ ಕಾಲಘಟ್ಟದಲ್ಲಿ ಒಂದು ದೇಶವಾಗಿತ್ತು. ಆ ಕೊಡಗು ದೇಶದ ಭೂಪಟದಲ್ಲಿ ಇಂದಿನ ಪಿರಿಯಾಪಟ್ಟಣ ಅಲ್ಲದೆ ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕೂಡ ಸೇರಿತ್ತು.
1834ರ ಸಮಯದಲ್ಲಿ ಬ್ರಿಟೀಷರು ಅಂದಿನ ಕೊಡಗನ್ನು ಕೊಡಗಿನ ಕೊನೆಯ ಅರಸ ಚಿಕ್ಕ ವೀರ ರಾಜೇಂದ್ರನ ಆಳ್ವಿಕೆ ಸಂದರ್ಭದಲ್ಲಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ.
ಅನಂತರ ಬ್ರಿಟೀಷರ ಆಡಳಿತವನ್ನು ಒಪ್ಪದ ಕೊಡಗು ಸೈನ್ಯ, ಬ್ರಿಟೀಷರ ವಿರುದ್ಧ ಹೋರಾಡುತ್ತದೆ. ಆ ಹೋರಾಟ ಭಾರತದ ಚರಿತ್ರೆಯಲ್ಲಿ ಎಂದೂ ಕೇಳಿರದ 1834 ಗ್ರೇಟ್‌ಾರ್ ಅಗೇನೆಸ್ಟ್ ಬ್ರಿಟೀಶ್ ಎಂದು ಇತಿಹಾಸದ ಕರಾಳ ಪುಟಗಳಲ್ಲಿ ದಾಖಲಾಗುತ್ತದೆ.
ಅದಾದ ನಂತರ ಬ್ರಿಟೀಷರ ವಿರುದ್ದ ಕೊಡಗು ಸೈನಿಕರ ತೀವ್ರ ಪ್ರತಿರೋದ ಕಂಡು ಬಂದ ಪ್ರದೇಶವನ್ನು ಕೆಳ ಕೊಡಗು (ಸುಳ್ಯ ಪುತ್ತೂರು ಪ್ರದೇಶ) ಎಂದು ವಿಭಜಿಸಿ ಅದನ್ನು ಮದ್ರಾಸ್ ಪ್ರೆಸಿಡೆನ್ಸಿಯ ಆಳ್ವಿಕೆಗೆ ಒಳ ಪಡಿಸಿದರು ಹಾಗೆಯೇ ಮೇಲ್ ಕೊಡಗನ್ನು (ಇಂದಿನ ಕೊಡಗ್‌ನ್ನು) ಕೂರ್ಗ್ ಸ್ಟೇಟ್ ಎಂದು ನಾಮಕರಣ ಮಾಡಿ ನೇರವಾಗಿ ತಮ್ಮ ನಿಯಂತ್ರಣದಲ್ಲಿಟ್ಟು ಕೊಂಡರು.
ಇದಾದ ನಂತರ ಚರಿತ್ರೆಯಲ್ಲಿ ದಾಖಲಾಗುವುದೆ ಅಮರ ಸುಳ್ಯ ಸಂಗ್ರಾಮ 1837 ಕೆಳ ಕೊಡಗಿನಲ್ಲಿ ಬ್ರಿಟೀಷರ ವಿರುದ್ದ ಬೇಸತ್ತು ಹೋಗಿದ್ದ ಕೊಡಗು ದೇಶಾಭಿಮಾನಿಗಳು ಅಲ್ಲದೆ ಲಿಂಗಾಯಿತ ಅರಸರ ಕುಟುಂಬದ ಅಭಿಮಾನಿಗಳು ಬ್ರಿಟೀಷರ ವಿರುದ್ಧ ಅಪ್ರತಿಮವಾಗಿ ಸಿಡಿದೆದ್ದ ಪ್ರಸಂಗವೇ ಈ ಅಮರ ಸುಳ್ಯ ಸಂಗ್ರಾಮ 1837.
ಮೇಲ್ ಕೊಡಗು ಕೆಳಕೊಡಗು ರೈತಾಪಿ ಜನರ ಹೋರಾಟಕ್ಕೆ ದಕ್ಷಿಣ ಭಾರತದ ಅನೇಕ ಧಾರ್ಮಿಕ ಮುಖಂಡರು,
ರಾಜಕೀಯ ಮುಖಂಡರು ಹೋರಾಟಗಾರರಿಗೆ ನೈತಿಕವಾಗಿ ಆರ್ಥಿಕವಾಗಿ ಬೆಂಬಲವಿತ್ತು.
ಅಷ್ಟೇ ಅಲ್ಲದೆ ಧರ್ಮಸ್ಥಳದ ಮಂಜಯ್ಯ ಹೆಗ್ಗಡೆಯವರು, ಶೃಂಗೇರಿ ಮಠಾಧೀಶರು, ಮುರುಘಾ ಮಠಾಧೀಶರು ಸಂಗ್ರಾಮಕ್ಕೆ ನೇರ ಬೆಂಬಲ ನೀಡಿದ್ದರು.
ಮೂಡುಬಿದರೆಯ ಬಸದಿ ಮತ್ತು ಲಿಂಗಾಯಿತ ಮಠಗಳು ಕರಾವಳಿಯ ಪ್ರಭಾವಿ ಅರಸರುಗಳಾಗಿದ್ದ ವಿಟ್ಲದ ಅರಸರು ಕುಂಬಳೆಯ ಸುಬ್ಬಯ್ಯ ಹೆಗ್ಗಡೆ ನಂದಾವರದ ಲಕ್ಷಣ ಬಂಗರಸರು ಹೋರಾಟದ ಭಾಗಿಗಳಾಗಿದ್ದರು.
ಮೈಸೂರಿನ ಅರಸರು, ತಮ್ಮ ಪ್ರತಿನಿಧಿಯೊಬ್ಬನ ಮೂಲಕ ಹೋರಾಟ ರೂಪಿಸುವ ತಂತ್ರಗಾರಿಕೆ ಕೂಡಿದಂತೆ ಮಾರ್ಗದರ್ಶನ ನೀಡಿ, ಮಿಂಚಿನ ಅಮರ ಸುಳ್ಯ ಸಂಗ್ರಾಮ 1837 ಚಿರಾಯುವಾಗುವಲ್ಲಿ ಪ್ರಮುಖರಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗುತ್ತಾರೆ.
ಈ ಇತ್ಯಾದಿ ವಿಚಾರಗಳಲ್ಲದೆ ಕೊಡಗು ಸುಳ್ಯ ಪ್ರದೇಶ ಮತ್ತು ಉತ್ತರ ಕೇರಳದ ಗಡಿ ಭಾಗಗಳಲ್ಲಿ ಹರಡಿ ಕೊಂಡಿರುವ ಪಶ್ಚಿಮ ಘಟ್ಟಗಳಲ್ಲಿ ಬದಲಾಗುತ್ತಿದ್ದ ರಾಜಕೀಯ, ಸಾಂಸ್ಕೃತಿಕ ಗಡಿಗಳನ್ನು, ಅಲ್ಲಿನ ಜನರ ಬದುಕಿನ, ಅಳಿವು ಉಳಿವಿನ ಪ್ರಶ್ನೆಗಳಿಗೆ ಸಂಬಂಧಿಸಿದ ಸಾಮರಸ್ಯ ಹಾಗೂ ಸಂಘರ್ಷಗಳನ್ನು ಅಭ್ಯಸಿಸುವ ವಸಾಹತು ಪೂರ್ವದ ನೂರಾರು ವರುಷದ "ಕೊಡಗು" ಎನ್ನುವ ಐಡೆಂಟಿಟಿ ರಾಜಕೀಯ ಹಾಗೂ ಸಾಂಸ್ಕೃತಿಕ ಅನನ್ಯತೆ ರೂಪುತಳೆದ ಪ್ರಕ್ರಿಯೆಯನ್ನು ಡಾ. ವಿಜಯ ಪೂಣಚ್ಚ ತಂಬಡ ಅಭ್ಯಸಿಸಿ ವಿಶ್ಲೇಷಿಸಿ, ಚರಿತ್ರೆಗೆ ಚ್ಯುತಿ ಬರದಂತೆ ದಾಖಲಿಸಿದ ಬೃಹತ್ ಅದ್ಯಯನ ಕೃತಿಯೇ 'ಅಮರ ಸುಳ್ಯ ಸಂಗ್ರಾಮ 1837. ಕೊಡಗು ಪಶ್ಚಿಮ ಘಟ್ಟಗಳ ಚರಿತ್ರೆಯ ಸ್ಥಿತ್ಯಂತರಗಳ ಅಧ್ಯಯನ ಮತ್ತು ವಿಮರ್ಶೆ.
ಪೇಜ್ : 11 ಅಳತೆಯ 706 ಪುಟಗಳ 1600 ರೂಪಾಯಿ ಬೆಲೆಯ ಈ ಅಧ್ಯಯನ ಯೋಗ್ಯ ಕೃತಿಯನ್ನು ಪ್ರಸಾರಾಂಗ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಪ್ರಕಟಿಸಿದ್ದಾರೆ.
ಈ ಅಭ್ಯಾಸ ಕೃತಿಯಲ್ಲಿ ತಂಬಂಡ ವಿಜು ಪೂಣಚ್ಚ ತಮ್ಮ ಜ್ಞಾನದ ಕನ್ನಡವನ್ನು ಕನ್ನಡ ಬೆಳಸಲು ಜಿವಪ್ರದಾನ ಅಂಶಗಳನ್ನು ಸಮಾಜಕ್ಕೆ ಮನವರಿಕೆ ಮಾಡಲು ಬಹುಜ್ಞಾನ ಶಿಸ್ತುಗಳಿಂದ ತಮ್ಮ ಅರಿವಿನ ವಿಚಾರಗಳನ್ನು ನಿರೂಪಿಸಿ ಕನ್ನಡದ ಬೆಳವಣೆಗೆಗೆ ಅವರದ್ದೆ ಕಾಣಿಕೆ ನೀಡಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಉದ್ದೇಶಕ್ಕೆ ತಲೆಬಾಗಿ ಗೌರವ ಸಮರ್ಪಿಸಿ ಕೊಂಡಿದ್ದಾರೆ.
1834 ಗ್ರೇಟ್ ವಾರ್ ಅಗೇನೆಸ್ಟ್ ಬ್ರಿಟೀಷ್ ಬಗ್ಗೆ ಇಲ್ಲಿ ಗಮನಸೆಳೆದಿರುವುದು ಭಾರತದ ಚರಿತ್ರೆಯಲ್ಲಿ ಚರಿತ್ರಕಾರರು ಚರ್ಚಿಸದಿರಲು ಕಾರಣಗಳ ಪ್ರಶ್ನೆಯನ್ನು ಹಾಕಿ ಕೊಡುತ್ತದೆ.
ಅಮರ ಸುಳ್ಯ ಸಂಗ್ರಾಮವನ್ನು "ದಂಗೆ" ಎಂಬುದಾಗಿ ಚಾರಿತ್ರ್ಯವಧೆ ಮಾಡಿದವರ ಬಗ್ಗೆ ಕೃತಿ ಚರ್ಚಿಸಿದೆ.
ಅಮರ ಸುಳ್ಯ ಸಂಗ್ರಾಮದ ಸ್ವರೂಪ ಮತ್ತು ಪರಿಣಾಮ ಹಾಗೂ ಫಲಿತಾಂಶದ ಬಗ್ಗೆ ಬೆಳಕು ಚೆಲ್ಲಿದೆ ಮುಖ್ಯವಾಗಿ ಸಂಗ್ರಾಮದ ಬಗೆಗಿನ ವಿವಿಧ ಕಥನಗಳನ್ನು ಅಧ್ಯಯನ ಮಾಡಲು ಶಕ್ತಿಮೀರಿ ಶ್ರಮಿಸಲಾಗಿದೆ.
ಅಮರ ಸುಳ್ಯ ಸಂಗ್ರಾಮ 1837, 706 ಪುಟಗಳಲ್ಲಿ ಮುದ್ರಣಗೊಳ್ಳಲು ಮತ್ತು ಗ್ರೇಟ್‌ವಾರ್ 1834 ಬಗ್ಗೆ ಓದುಗರಿಗೆ ಮಾಹಿತಿ ಒದಗಿಸಿಕೊಡಲು ಲಂಡನ್ನಿನ ಬ್ರಿಟೀಷ್‌ಲಯಿಬ್ರರಿ, ಭಾರತದ ಅನೇಕ ಪತ್ರಾಗಾರಗಳು ಮಡಿಕೇರಿಯ ಕೂರ್ಗ್ ರೆಕಾರ್ಡ್ ಆಫೀಸಸ್, ಚೆನ್ನೈನ ತಮಿಳುನಾಡು ಸ್ಟೇಟ್ ಆರ್ಕೈನ್ಸ್, ಬೆಂಗಳೂರಿನ ಕರ್ನಾಟಕ ಸ್ಟೇಟ್ ಆರ್ಕೆಟ್ಸ್ ಕೋಲ್ಕತ್ತಾದ ನ್ಯಾಶನಲ್ ಲೈಬ್ರೆರಿ, ಮಿಥಿಕ್ ಸೊಸೈಟಿ ಬೆಂಗಳೂರು ಕರ್ನಾಟಕ ಥಿಯಾಲಾಜಿಕಲ್ ಕಾಲೇಜು ಅಲ್ಲದೆ ಇನ್ನಿತರೇ ಪತ್ರಗಾರಗಳ ಉಪಕಾರವನ್ನು ಗ್ರೇಟ್ಾರ್ ಮತ್ತು ಸಂಗ್ರಾಮದಲ್ಲಿ ಆಗಿ ಹೋದ ವೀರರು ಈ ಕೃತಿಯಿಂದಾಗಿ ವಿಜು ಪೂಣಚ್ಚ ಮತ್ತು ಹಂಪಿ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆ ಸಲ್ಲಿಸಲಾಗದದಿದ್ದರೂ, ಅಳಿಸಲಾಗದ ಅಕ್ಷರಗಳನ್ನು ಬರೆದು ದಾಖಲಿಸಿದ ಪುಣ್ಯಾತ್ಮರ ಅಕ್ಷರ ಮಾಲೆಯನ್ನು ಓದಿ ಸಂಗ್ರಾಮ ಪ್ರಮುಖ ರೂವಾರಿಗಳನ್ನು ಮತ್ತು ಚರಿತ್ರೆಯ ನಿಜ ಘಟನೆಗಳ ಚಾರಿತ್ರ್ಯವದೆ ಮಾಡಿದ, ಮಾಡುತ್ತಿರುವ ಚಪಲಿಗರ ನಾಲಿಗೆಗೆ ಅಮರ ಸುಳ್ಯ ಸಂಗ್ರಾಮ 1837 ಉತ್ತಮೋತಿ ಉತ್ತಮ ಲೇಹ್ಯವನ್ನು ನೀಡಿದೆಯೆಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.
ಅಮರ ಸುಳ್ಯ ಸಂಗ್ರಾಮ 1837 ಕೇವಲ ಅಂದಿನ ಕೊಡಗಿಗೆ ಮಾತ್ರ ಸಂಬಂಧಿಸಿದ ಹೋರಾಟವಲ್ಲದೆ ಹೋರಾಟಗಾರರಿಗೆ ಅಂದಿನ ಕೊಡಗು, ಮಂಗಳೂರು ಕರಾವಳಿ, ಕಾಸರಗೋಡು, ಮಲಬಾರ್ ತಿರುಚನಾಪಳ್ಳಿ, ವೆಲ್ಲೂರು, ಮೈಸೂರು ಹಾಗು ಮದ್ರಾಸ್ ಒಳಗೊಂಡ ವಿಸ್ತಾರವಾದ ಮಹಾನ್ ದೇಶ ಕಟ್ಟುವ ಮಹತ್ವಾಕಾಂಕ್ಷೆಯ ಹೋರಾಟವಾಗಿತ್ತು ಎಂಬ ಮೈನವಿರೇಳಿಸುವ ರೋಚಕ ಸತ್ಯವನ್ನು “ಸಂಗ್ರಾಮ" ಕೃತಿ ಬಿಚ್ಚಿಡುತ್ತದೆ.
ಕೊಡಗು ದೇಶವನ್ನಾಳಿದ ಲಿಂಗರಾಜನು ಕೊಡಗು ದೇಶವನ್ನು ಆಧುನೀಕರಣಗೊಳಿಸಲು ಶ್ರಮಿಸಿದ್ದು, ಕೊಡಗಿನ ರಾಜಕೀಯ ವ್ಯವಸ್ಥೆ ಸಾಮಾಜಿಕ ಸ್ಥಿತಿಗತಿಗಳನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಧ್ಯಾಯ 5, 6 ಮತ್ತು 7 ರಲ್ಲಿ ವಿವರವಾಗಿ ವಿಜು ಪೂಣಚ್ಚ ಚರ್ಚಿಸಿದ್ದಾರೆ.
ದೇಶವಾಗಿದ್ದ ಕೊಡಗು ರಾಜ್ಯವಾಗಿ 1956ರ ನಂತರ ಜಿಲ್ಲೆಯಾಗಿ ಪರಿವರ್ತಿತವಾದ ಕೊಡಗಿನ ಜನ ಸಮುದಾಯಗಳ ತುಮುಲಗಳ, ಸಾಮರಸ್ಯ ಹಾಗೂ ಸಂಘಗಳ ಚಲನ ಶೀಲತೆಯನ್ನು ಚರ್ಚಿಸುತ್ತಾ ಹೊರನೋಟಕ್ಕೆ ಸ್ಥಳೀಯ ಚರ್ಚೆ, ವಿಶ್ಲೇಷಣೆಯಂತೆ ಕಂಡು ಬಂದರೂ ಭಾರತ ಉಪ ಖಂಡದ, ವಿಭಿನ್ನ ಪ್ರದೇಶಗಳ ರಾಜಕೀಯ ಸ್ಥಿತ್ಯಂತರಗಳ ಕಾರಣಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡುವುದನ್ನೂ ಇಲ್ಲಿ ಕಾಣಬಹುದಾಗಿದೆ.
ಇಂದಿನ ಕಾಲ ಘಟ್ಟದ "ಪೋ" ಕಾಯಿದೆಯನ್ನು ಲಿಂಗರಾಜ ಅಂದಿನ ಕಾಲದಲ್ಲೇ ಲಿಂಗರಾಜೇಂದ್ರ ರಾಜ "ಪಚ್ಚಡ ಪೊಣ್ಣೆ" ಹೆಸರಿನಲ್ಲಿ ಉಗ್ರ ಕಾನೂನಿನಲ್ಲಿ ಕೊನೆಗಾಣಿಸಿದನ್ನೂ ಈ ಕೃತಿಯಲ್ಲಿ ಕಾಣಬಹುದಾಗಿದೆ.
ಅಂಥಹಾ ಕಾನೂನಿನಡಿಯಲ್ಲಿ ಬದುಕಿದ ನೆಲದಲ್ಲಿ ಇಂದಿನ ಪೋಕ್ಷೆ ಕಾಯಿದೆಯಡಿಯಲ್ಲಿ ಸ್ಥಳೀಯರು ಶೇಕಡವಾರು, ಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋರ್ಟ್‌ಗೆ ಅಲೆಯುತ್ತಿರುವ ಬಗ್ಗೆ ವರದಿಯಾದ ವಿಚಾರ ಒಡೆಯರ ಕನಸಿನ
ಕೊಡಗನ್ನು ಅಣಕಿಸುವಂತೆ ಮಾಡುತ್ತದೆ. ಹೀಗೆ ಹತ್ತಲಾವರು ವಿಷಯಗಳಲ್ಲಿ ಲಿಂಗ ರಾಜೇಂದ್ರ ರಾಜರ ಅಪ್ಪಟ ಪ್ರಗತಿಪರ ಚಿಂತನೆಗಳನ್ನೂ ಈ ಕೃತಿ ದಾಖಲಿಸುತ್ತಾ ಹೋಗುತ್ತದೆ.
ಈ ಬೃಹತ್ ಕೃತಿಗೆ ಪತ್ರಿಕಾ ಪ್ರಕಟಣೆಗೆ ಅನುರೂಪವಾಗುವ ರಿವ್‌ವ್ಯೂ ಬರೆಯುವುದು ಕಷ್ಟಸಾಧ್ಯ.
1. “ಎಂಟು ಶತಮಾನ ಆಳಿದ ಚಂಗಾಳ್ವರು ಅದು ಇಂದಿನ ಕೊಡಗಲ್ಲ"
2. ಲಿಂಗಾಯಿತ ಅರಸರ ಪರ್ವ ರಾಜಕಾರಣದ ಹೊಸ ತಿರುವು 3. ದೊಡ್ಡ ವೀರಪ್ಪ ನಾಡುಗಳು ಕೊಡಗು ದೇಶವಾದ ರಾಜಕಾರಣ
4. ಆಧುನಿಕ ಕೊಡಗಿನ ಏಕೀಕರಣ ಹೈದರ್-ಟಿಪ್ಪು ಮತ್ತು ದೊಡ್ಡ ವೀರ ರಾಜೇಂದ್ರನ ಸಂಘರ್ಷ
5. ವೀರ ರಾಜೇಂದ್ರನ
6. ಎಂಟು ಶತಮಾನಗಳ ಆಳಿದ ಚಂಗಾಳ್ವರು ಅದು ಇಂದಿನ ಕೊಡಗಲ್ಲ
7. ಲಿಂಗಾಯಿತ ಅರಸರ ಪರ್ವ ರಾಜಕಾರಣದ ಹೊಸತಿರುವು
8. ದೊಡ್ಡ ವೀರಪ್ಪ ನಾಡುಗಳು ಕೊಡಗು ದೇಶವಾದ ರಾಜಕಾರಣ
9. ಆಧುನಿಕ ಕೊಡಗಿನ ಏಕೀಕರಣ ಹೈದರ್ ಟಿಪ್ಪು ಮತ್ತು ದೊಡ್ಡ ವೀರ ರಾಜೇಂದ್ರನ ಸಂಘರ್ಷ
10. ವೀರ ರಾಜೇಂದ್ರನ ರಾಜೇಂದ್ರ ನಾಮೆ 18 ಮತ್ತು 19ನೇಯ ಶತಮಾನಗಳ ಕೊಡಗಿನ ಆಂತರಿಕ ಮತ್ತು ಬಾಹೂ ಸಂಬಂಧಗಳ ಮೇಲೊಂದು ಟಿಪ್ಪಣಿ.
ಈ ಮೇಲಿನ 10 ಅಧ್ಯಯಗಳಲ್ಲಿ ಬಹಳಷ್ಟು ವಿಚಾರಗಳು ಚರ್ಚಿಸಲ್ಪಟಿದೆ
ಕೊಡಗಿನ ತಕ್ಕಾಮೆ ಬಗ್ಗೆ ಕುತೂಹಲಕಾರಿ ವಿಚಾರ ಒಂದನ್ನು 'ಪಟ್ಟೋಲೆ ಪಳಮೆ'ಯ ಚಿಣ್ಣಪ್ಪ ಹಾಗೂ ಬಿ.ಡಿ. ಗಣಪತಿಯವರು ಅವರುಗಳ ಬರಹದಲ್ಲಿ ಉಲ್ಲೇಖ ಮಾಡಿದ್ದೂ ಬೂದಿ ಮುಚ್ಚಿದ್ದ ಕೆಂಡದಂತಿದ್ದ ಸೆನ್ಸ್‌ಟೀವ್ ವಿಚಾರದ ಬಗ್ಗೆ ಕೂಡ ಈ ಅಧ್ಯಯನ ಕೃತಿ ಬೆಳಕು ಚೆಲ್ಲಿದೆ ಆಧಾರ ಸಹಿತವಾಗಿ
ನಡಿಕೇರಿಯಂಡ ಚಿಣ್ಣಪ್ಪನವರ ಅಕ್ಷರಗಳಾದ ಎಡೆ ಕೊಡವ ಮತ್ತು ಬಡುವ" ಇಂತಹ ಹತ್ತು ಹಲವಾರು ಬೆಳಕಿಗೆ ಭಾರದ ವಿಚಾರಗಳಿಗೂ ಇವರ ಹದ್ದಿನ ಕಣ್ಣು ತಲುಪಿರುವ ವಿಸ್ಮಯಗಳೂ ಈ ಕತ್ತಿಯಲ್ಲಿ ಕಾಣಬಹುದು. ಕೊಡವ ಭಾಷಿಕ ಸಮೂದಾಯ ಅದೊಂದು ಸಾಂಸ್ಕೃತಿಕ ವರ್ಗ ಎಂಬುದನ್ನು ಪುನರ್ ಮನವರಿಕೆ ಮಾಡಿಕೊಡುವ ವಿವರಗಳ ಆದ್ಯತೆಯನ್ನು ಈ ಹೊತ್ತಿಗೆಯಲ್ಲಿ ಕಾಣಬಹುದಾಗಿದೆ.
ಕೊಡಗಿನ ಗತದ ಬಗ್ಗೆ ಮೌಖಿಕ ಕಥನಗಳ ಬಗ್ಗೆ, ಸಮುದಾಯಳ ಬಗ್ಗೆ ಗ್ರಾಮ ಗ್ರಾಮಗಳ ಜನ ಜೀವನ ಇತ್ಯಾದಿಗಳ ವಿಚಾರದಲ್ಲಿ ಪರದಂಡ ಚಂಗಪ್ಪ ನವರು ಶ್ರಮವಹಿಸಿ ದಾಖಲಿಸಿದ ಅಕ್ಷರಗಳೂ ಕೂಡ ಇಲ್ಲಿ ದಾಖಲಾಗಿರುವುದು ವಿಶೇಷ ಹಾಗೂ ಸ್ಥಾನ ಪಡೆದು ಕೊಂಡಿರುವ ಹೆಮ್ಮೆಯ ವಿಚಾರವಾಗಿ ಭಾವನಾತ್ಮಕವಾಗಿ ಅಪ್ಪಾಯ ಅನುಭವ ನೀಡುತ್ತದೆ.
ಕೊಡಗಿನ ಚರಿತ್ರೆಯ ಬಗ್ಗೆ ಹತ್ತು ಹಲವಾರು ವಿವರಿಸಿದಂತೆ ಪುಸ್ತಕಗಳು ಪ್ರಕಟವಾಗಿದೆ ಅಮರ ಸುಳ್ಯ ಸಂಗ್ರಮ 1837 ಓದಿದಾಗ ಅದರಲ್ಲಿ ಕೆಲವು ಕುರುಡರು ಆನೆಯನ್ನು ಹೋಲಿಸಿದಂತೆ ಭಾಸವಾಗುತ್ತದೆ.
ಅಮರ ಸುಳ್ಯ ಸಂಗ್ರಾಮ 1837 ಅಖಂಡ ಭಾರತಲ ಬ್ರಿಟೀಷ್‌ರ ವಿರುದ್ಧ ನಡೆದ ಸಂಘಟಿತ ಹೋರಾಟ ಆ ಛಲಕ್ಕೆ ಸಿಕ್ಕಫಲ ಜತೆ ಜತೆಯಲ್ಲೇ ಮೀರ್ ಸಾಧಕರ ಕೈಮೇಲಾಗಿದ ದುರಂತ ಕಥೆಯನ್ನೆಲ್ಲ ಚರಿತ್ರೆಯ ಸತ್ಯಾ ಸತ್ಯಗಳ ನೆನಪುಗಳನ್ನ ವಿಶ್ಲೇಷಿಸುತ್ತಾ ಭಾರತದ ಚರಿತ್ರೆಯ ಒಂದು ಭಾಗವಾಗಿರುವ ರೈತ ಕಾರ್ಮಿಕ ಶ್ರಮಿಕರನ್ನೊಳಗೊಂಡ ಅಮರ ಸುಳ್ಯ ಸಂಗ್ರಾಮ 1837 ಕೊರಳಿಗೆ ಉರುಳು ಕೊಟ್ಟ ಭಗತ್‌ಸಿಂಗ್‌ರಂತವರ ಸಾಲಿನಲ್ಲಿ ಮತ್ತಷ್ಟು ಕೊರಳಿಗೆ ಉರುಳು ಕೊಟ್ಟವರ ಬಗ್ಗೆ ಮಾಹಿತಿ ನೀಡುತ್ತದೆ.
ಚರಿತ್ರೆಯ ವಿದ್ಯಾರ್ಥಿಗಳಿಗೆ ಚರಿತ್ರಾಸಕ್ತರಿಗೆ, ಸಂಗ್ರಾಮ 1837 ವಿಜು ಪೂಣಚ್ಚರ ಅಕ್ಷರ ಶ್ರಮದಿಂದ ಅರಗಿಸಿಕೊಳ್ಳಲು ತೀರಾ ತಾಳ್ಮೆಯ ಅಗತ್ಯವಂತೂ ಇದೇ ಇದೆಯೆಂದರೆ ಅತಿಕಯೋಕ್ತಿಯೇನಲ್ಲ.