ಕಳೆದ ಫೆಬ್ರವರಿ 28 ತಾರೀಕಿನಂದು ಬೆಳಗಾಯಿತು. ಸರ್ಕಾರಿ ಅನುದಾನಿತ ಹೈಸ್ಕೂಲ್ ನಲ್ಲಿ ಎಸ್ಸೆಸ್ಸೆಲ್ಸಿ ಹುಡುಗಿಯರಿಗೆ ನಿರಂತರ ಲೈಂಗಿಕ ಕಿರುಕುಳ ಕೊಡುತ್ತಿದ್ದ ಹೈಸ್ಕೂಲ್ ಮಾಸ್ತರ್ ಒಬ್ಬ ಸಿಕ್ಕಿ ಬಿದ್ದಿದ್ದ. ಇದೀಗ ತಲೆ ಮೇಲೆ ಪೋಕ್ಸೋ ಹೊತ್ತುಕೊಂಡು ಹೋಗಿ ಅಟ್ಟದಲ್ಲಿ ಅಡಗಿದ್ದಾನೆ. ಮೂಡುಬಿದಿರೆ ಪೊಲೀಸರಿಗೆ ಒಂದು ತಿಂಗಳಿಂದ ಇವನ ನೆರಳು ಕೂಡ ಸಿಕ್ಕಿಲ್ಲ.
ಇದು ಮೂಡುಬಿದಿರೆ ಸಮೀಪದ ಕಲ್ಲಮುಂಡ್ಕೂರು ಸರ್ವೋದಯ ಹೈಸ್ಕೂಲ್ ಕತೆ. ಹೈಸ್ಕೂಲ್, ಆಡಳಿತ ಮಂಡಳಿ, ಶಿಕ್ಷಕ ವರ್ಗ, ವಿದ್ಯಾರ್ಥಿ ವರ್ಗ ಎಲ್ಲಾನೂ ಅಪ್ಪಟ ಚಿನ್ನ ಆಗಿತ್ತು. ಹೈಸ್ಕೂಲ್ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಆದರೆ ಶಾಲೆಗೆ ಪಾಠ ಮಾಡಲು ಬಂದಿದ್ದ ಸೈಕೊ ಮಾಸ್ತರ್ ಗುರುವಪ್ಪ ಎಂಬವನಿಂದಾಗಿ ಈಗ ಇಡೀ ಶಾಲೆಯ ಹೆಸರು ಚರಂಡಿಗೆ ಬಿದ್ದಿದೆ. ಈ ಶಾಲೆಗೆ ಹೆಣ್ಣು ಮಕ್ಕಳನ್ನು ಕಳಿಸಿದರೆ ಅವರ ಪರಿಸ್ಥಿತಿ ಏನಾಗ ಬಹುದೆಂದು ಪ್ರತಿಯೊಬ್ಬ ಹೆತ್ತವರೂ ಯೋಚಿಸಬೇಕಾದ ಸಮಯ ಬಂದಿದೆ.
ಇವನು ಗುರುವಪ್ಪ ಯಾನೆ ಗುರು ಮಾಸ್ತರ್. ಧರ್ಮಸ್ಥಳ ಸಮೀಪದವನು. ಇವನು ಹೋಗಿ ಪಾಠ ಮಾಡಲು ಸೇರಿಕ್ಕೊಂಡದ್ದು ಮೂಡುಬಿದಿರೆ ಸಮೀಪದ ಕಲ್ಲಮುಂಡ್ಕೂರು ಸರ್ವೋದಯ ಹೈಸ್ಕೂಲ್ ನಲ್ಲಿ. ಮಾಸ್ತರ್ ಸುಮ್ಮನೆ ಸಂಬಳ ತಗೊಂಡು ಪಾಠ ಮಾಡಿಕೊಂಡಿದ್ದರೆ ಈವತ್ತು ಅಟ್ಟದಲ್ಲಿ ಅಡಗುವ ಸ್ಥಿತಿಗೆ ಬರುತ್ತಿರಲಿಲ್ಲ. ಆದರೆ ಗುರು ಮಾಸ್ತರ್ ಪಾಠದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ. ಹೈಸ್ಕೂಲಿಗೆ ಬರುತ್ತಿದ್ದ ಬಾಕ್ಸ್ ಫೀಸ್ ಲತ್ತ್ ಲತ್ತ್ ಹುಡುಗಿಯರನ್ನು ಕಂಡಾಗಲೆಲ್ಲ ಗುರುವ ಮಾಸ್ತರ್ ಗೆ ಗುಳು ಗುಳು ಆಗುತ್ತಿತ್ತು. ಹಾಗಾಗಿ ಹೈಸ್ಕೂಲಿನಲ್ಲಿ ತನ್ನ ಸ್ಟಾಫ್ ರೂಂನಲ್ಲಿ ಕೂರದೆ ಬೇರೆಯೇ ಸಪರೇಟ್ ರೂಂನಲ್ಲಿ ಗುರುವ ಟೆಂಟ್ ಎಬ್ಬಿಸುತ್ತಿದ್ದ. ಹಾಗೆ ರಜೆ ಅರ್ಜಿ ಸ್ವೀಕರಿಸಲು, ಪಾಠಗಳ ಬಗ್ಗೆ ಹೇಳಲು ಹಾಗೂ ಇನ್ನಿತರ ಅನೇಕಾನೇಕ ಕಾರಣಗಳಿಗಾಗಿ ಗುರುವ ಹುಡುಗಿಯರನ್ನು ಆ ರೂಮಿಗೆ ಕರೆಯುತ್ತಿದ್ದ. ಇಬ್ಬರು ಹುಡುಗಿಯರು ಜೊತೆಯಾಗಿ ಬಂದರೆ ತನಗೆ ಬೇಕಾದ ಹುಡುಗಿಯನ್ನು ನಿಲ್ಲಿಸಿಕ್ಕೊಂಡು ಪಾಸಡಿ ಬಂದ ಹುಡುಗಿಗೆ ಗೆಟೌಟ್ ಮಾಡುತ್ತಿದ್ದ. ಅವಳು ಅಂಚಿ ಹೋದ ಕೂಡಲೇ ರೂಂನಲ್ಲಿ ಗುರುವಿನ ಪಠ್ಯೇತರ ಚಟುವಟಿಕೆ ಶುರುವಾಗುತ್ತಿತ್ತು. ಪಾಪದ ಹುಡುಗಿಯರು, ಮುಗ್ಧ ಹುಡುಗಿಯರು ಮಾಸ್ತರ್ ಎಂಬ ಕಾರಣಕ್ಕೆ ಸುಮ್ಮನಾಗುತ್ತಿದ್ದರು. ಹುಡುಗಿಯರ ಈ ಮೌನ ಗುರುವನ್ನು ಮತ್ತೇ ಮತ್ತೇ ಆ ಕೆಲಸಗಳಿಗೆ ಸಮ್ಮತಿ ಕೊಟ್ಟಂತಾಗುತ್ತಿತ್ತು. ಗುರುವನ ಈ ಲೋಫರ್ ಪಠ್ಯೇತರ ಚಟುವಟಿಕೆಗಳು ತುಂಬಾ ದಿನಗಳಿಂದ ಹಾದು ಬಂದು ಮೊನ್ನೆ ಫೆಬ್ರವರಿ 28ರ ತನಕ ಮುಂದುವರೆದು ಆವತ್ತೇ ಬೆಳಗಾಗಿ ಹೋಯ್ತು. ಕಳ್ಳ ಸಿಕ್ಕಿ ಬಿದ್ದಿದ್ದ.
ಕಳೆದ ಫೆಬ್ರವರಿ 28ರಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ಕೊಡುವ ನೆಪದಲ್ಲಿ ಗುರುವ ಕೆಲವು ನೋಟೆಡ್ ಹುಡುಗಿಯರನ್ನು ನಿಲ್ಲಿಸಿಕ್ಕೊಂಡಿದ್ದ. ವನ್ ಬೈ ವನ್ ಹುಡುಗಿಯರನ್ನು ತನ್ನ ರೂಮಿಗೆ ಕರೆಸಿಕೊಳ್ಳುತ್ತಿದ್ದ ಗುರುವ "ಏತ್ ಮಲ್ಲೆ ಆತ್ಂಡ್" ಎಂದು ಮುಟ್ಟಿ ಮುಟ್ಟಿ ಸೈಜು ನೋಡಿ, ಪುಡ್ಡಿ ಹಾಕಿ, ನಮಸ್ತೆ ಮಾಡಿ ಕಳಿಸುತ್ತಿದ್ದ. ಗುರುವನ ಈ ಮಂಗಕ್ರೀಯೆಯನ್ನು ಅದೇ ಕ್ಲಾಸಿನ ಯಾರೋ ಬ್ಯಾಡ್ ಬಾಯ್ಸ್ ಮೆಲ್ಲ ನಿಲ್ಕಿ ನೋಡಿ ಬಿಟ್ಟರು, ಮತ್ತೇ ಮತ್ತೇ ನೋಡಿದರು, ಪರಾಂಬರಿಸಿ ನೋಡಿದರು ಮತ್ತು ಸೀದಾ ಹೋಗಿ ತಮಗೆ ಕ್ಲೋಸ್ ಇದ್ದ ಮಿಸ್ಸಲ್ಲಿ ಹಾಗೆ ಮಿಸ್, ಹೀಗೆ ಮಿಸ್ ಎಂದು ಕ್ಯಾಮೆರಾ ಮೆನ್ ಜೊತೆ ಹೇಳಿ ಬಿಟ್ಟರು. ಮಿಸ್ ಇದನ್ನು ಹೆಡ್ ಮಾಸ್ತರರ ಗಮನಕ್ಕೆ ತಂದರು. ಹೆಡ್ ಮಾಸ್ತರರು ಆಡಳಿತ ಮಂಡಳಿಗೆ ಹೇಳಿ ಗುರುವನಿಗೇ ರಜೆ ಅರ್ಜಿ ಕೊಟ್ಟು ಬಿಟ್ಟರು. ಇನ್ನು ಬೇರೆ ಕೂಡ ಏನಾದರೂ ಕಿರಿಕ್ ಆಗೋದು ಬೇಡ ಎಂದು ಹೆಡ್ ಮಾಸ್ತರರು ಸೀದಾ ಬೆದ್ರಕ್ಕೆ ಹೋಗಿ ಪೋಲಿಸರಿಗೆ ಐದು ಬಜ್ಜೆಯಿ, ಐದು ಬಚ್ಚಿರೆ, ಊದು ಬತ್ತಿ ಪ್ಯಾಕೆಟ್ ಒಂದು ಮತ್ತು ಡಬಲ್ ಬೊಂಡಗಳ ಕೈ ಕಾಣಿಕೆ ಇಟ್ಟು ದೂರು ಕೊಟ್ಟು ಬಂದಿದ್ರು. ಯಾಕೆಂದರೆ ಅದೊಂದು ಪೋಕ್ಸೋ ಪ್ರಕರಣ. ಇದೀಗ ಮೂಡುಬಿದಿರೆ ಪೊಲೀಸರು ಸೈಕೊ ಮಾಸ್ತರ್ ಗುರುವಪ್ಪನ ಮೇಲೆ ಪೋಕ್ಸೋ ಅಡಿಯಲ್ಲಿ ಕೇಸು ದಾಖಲಿಸಿದ್ದು ಗುರುವಪ್ಪ ಶಾಲೆ ಬುಟ್ಟು ಅಟ್ಟ ಪಾಲಾಗಿದ್ದಾನೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಘಟನೆ ನಡೆದು, ಎಫ್ಐಆರ್ ದಾಖಲಾಗಿ ಒಂದು ತಿಂಗಳಾದರೂ ಇನ್ನೂ ಗುರುವನ ಬಂಧನವಾಗಿಲ್ಲ. ಈ ಸೆಕೆಗೆ ಗುರುವ ಯಾವ ಅಟ್ಟದಲ್ಲಿ ಅಡಗಿದ್ದಾನೆ, ತೆನ್ಕಯಿ ಬಡೆಕ್ಕಯಿ ದಿಕ್ಕಿನಲ್ಲಿ ಓಡಿದನಾ, ರೈಲು ಮಾರ್ಗ, ಉಳ್ಳಾಲ ಸಂಕ, ಗೊಂಕಿನ ಮರ ಮತ್ತು ಪಿರಿ ಬಲ್ಲ್, ಎಲಿಪಾಸನ್ ಮುಂತಾದ ಜೀವ ರಕ್ಷಕಗಳ ಮೋರೆ ಹೋದನಾ ಎಂಬುದು ಕಗ್ಗಂಟಾಗಿ ಉಳಿದಿದೆ. ಇದನ್ನು ಪೋಲಿಸರಿಗೆ ಬಿಡಿಸಲಾಗುತ್ತಿಲ್ಲ. ಓ ಮೊನ್ನೆ ಒಮ್ಮೆ ಮೂಡುಬಿದಿರೆ ಪೊಲೀಸರು ಗುರುವನ ಬಾಡಿ ಹುಡುಕಿಕೊಂಡು ಎಂಕು ಪಣಂಬೂರಿಗೆ ಹೋದ ಹಾಗೆ ಮಡಿಕೇರಿ ತನಕ ಹೋಗಿ ಕೈ ಬೀಸಿಕೊಂಡು ವಾಪಾಸ್ ಬಂದಿದ್ದಾರೆ. ಇದೀಗ ಊರವರು, ಸ್ಥಳೀಯ ಜನಪ್ರತಿನಿಧಿಗಳು ಗುರುವನ ಬಂಧನ ಆಗಲೇ ಬೇಕೆಂದು ಪ್ರತಿಭಟನೆಗೆ ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಿಯಾದರೂ ಗುರುವ ಸಿಕ್ಕಿದರೆ ಕುಂಡೆಯಲ್ಲಿ OTP ಬರುವ ತನಕ ಪೆಟ್ಟಿನ ಬರ್ಸ ಗ್ಯಾರೆಂಟಿ.
Post a Comment