ಕೊಲ್ಲಮೊಗ್ರದ ಹೆಸರೆತ್ತಲೂ ಪೊಡಿಗೆ ಪೊಡಿಗೆ ಆಪುಂಡು ಮಾರಾಯ್ರೆ. ಯಾಕೆಂದರೆ ಮೊನ್ನೆ ತಾನೇ ನಕ್ಸಲ್ ಬಿನ್ನೆರ್ ಬಂದು ಹೋಗಿದ್ದಾರೆ. ಇದೀಗ ಕೊಲ್ಲಮೊಗ್ರದ ಆಟೋ ಡ್ರೈವರ್ ಒಬ್ಬನ ಚಿಕ್ಕ ಚೊಕ್ಕ ಕತೆ ಬಂದಿದೆ.ವಿಷ್ಯ ಎಂಥ ಕೂಡ ಜಾಸ್ತಿ ಇಲ್ಲ,ಆದರೆ ಆಂಜನೇಯನ ಸವಾರಿ ಕೊಲ್ಲಮೊಗ್ರದ ದೊಡ್ಡಣ್ಣ ಶೆಟ್ಟಿ ಕೆರೆ ನೀರಿನ ಪ್ರತಿಬಿಂಬದಲ್ಲಿ ಅಪಗಪಗ ಗೋಚರಿಸುತ್ತಿದೆ ಎಂದು ತಿಳಿದುಬಂದಿದೆ. ಆಂಜನೇಯ ಯಾಕೆ ದೊಡ್ಡಣ್ಣ ಶೆಟ್ಟಿ ಕೆರೆ ಬಳಿ ಹೋಗುತ್ತಾನೆ? ಬಾಡಿಗೆಗಂತೂ ಅಲ್ಲ, ಲೋಡೂ ಇರಲ್ಲ, ಹೆಂಡತಿ ಮನೆ ಅತ್ಲಕಡೆ ಅಲ್ಲ, ಇನ್ನು ಸಂಬಂಧಿಕರು, ಕುಟುಂಬಸ್ಥರು, ಬಂಧುಬಳಗ ಕೂಡ ಆಂಜನೇಯನಿಗೆ ಆ ಕಡೆ ಇಲ್ಲ. ಆದರೂ ಆಂಜನೇಯ ಜಾಸ್ತಿ ಸರ್ತಿ ಕೆರೆ ಬಳಿ ಗೋಚರಿಸುತ್ತಾನೆ. ಯಾಕಿರಬಹುದು?
ಹಾಗೆಂದು ಕೊಲ್ಲಮೊಗ್ರದಲ್ಲಿ ಈ ವಿಷಯ ಸೈಲೆಂಟಾಗಿ ಶಬ್ದ ಮಾಡುತ್ತಿದೆ. ಆದರೂ ಆಂಜನೇಯ ಯಾಕೆ ಆ ಕಡೆಯಲ್ಲಿ ಗೋಚರಿಸುತ್ತಿದ್ದಾನೆ ಎಂದು ವಿಚಾರಿಸಲಾಗಿ ಅವನು ಅಡುಗೆ ಮಾಡಲು ಹೋಗುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಇನ್ನು ಆಂಜನೇಯ ವಿಚಿತ್ರ ಅಡುಗೆ ಎಲ್ಲ ಮಾಡಿದರೆ ದೇವರೇ ಗತಿ. ಓ ಮೊನ್ನೆ ಒಮ್ಮೆ ಅಡುಗೆ ಮಾಡಿ ಬರುವಾಗ ಏನೋ ಕಿರಿಕ್ ಆಗಿದೆ ಎಂದು ಕೂಡ ಸುದ್ದಿ ಇದೆ. ಸರಿ ಗೊತ್ತಿಲ್ಲ. ಇನ್ನು ಆಂಜನೇಯ ಅಡುಗೆ ಮಾಡಿ ಮಾಡಿ ಇವನನ್ನೇ ಯಾರಾದರೂ ಅಡುಗೆ ಮಾಡಿ ಕುಲೆಗಳಿಗೆ ಬಡಿಸುವ ಅಪಾಯಗಳಿವೆ. ಆಂಜನೇಯ ಶೆಟ್ಟಿ ಕೆರೆ ಕಡೆ ಬಾಡಿಗೆ ಹೋದರೂ ಅಡುಗೆಯಾಗಿ ಬಿಡುವ ಅಪಾಯಗಳಿವೆ.
Post a Comment