ನಾವು ಮೊನ್ನೆ ತಾನೇ ಗುತ್ತಿಗಾರು ಸಮೀಪದ ಪೈಕದ ಕೊರಪೊಳಕ್ಕ ಮತ್ತು ಭಾರತಿ ಎಂಬವರ ಮನೆಗೆ ಕುಡಿಯಲೇ ನೀರಿಲ್ಲ, ನೀರಿಗಾಗಿ ಅವರು ಒಂದು ಕಿಲೋ ಮೀಟರ್ ಬಲಿ ಬರಬೇಕು ಎಂದೂ ಬರೆದಿದ್ದೆವು. ಇದಕ್ಕೆ ಪೂರಕ ಎಂಬಂತೆ ಗುತ್ತಿಗಾರು ಪಂಚಾಯಿತಿ ಕೂಡಲೇ ನೀರಿನ ವ್ಯವಸ್ಥೆ ಮಾಡಿದೆ. ಕಟ್ಟಪೆಲಕ್ಕರಿಯಂತಹ ಪಚ್ಚೆ ಪಚ್ಚೆ ಪೈಪು ತಂದು ವಾಟರ್ ಸಪ್ಲೈ ಮಾಡಲಾಗಿದೆ. ಪಂಚಾಯಿತಿ ಅಧ್ಯಕ್ಷರಾದ ಮೂಕಮಲೆ ಸುಮಿತ್ರಕ್ಕೆ, ಬಾಕಿಲ ಜಗ್ಗಣ್ಣ, ಮೂಕಮಲೆ ಸತ್ಸಣ್ಣ, ಪೈಕ ಜಗ್ಗಣ್ಣ, ಪೈಕ ರತ್ನಣ್ಣ, ಪೈಕ ಲೋಕೇಶಣ್ಣ ಮತ್ತು ಬಾಕಿಲ ಅಜಿತಣ್ಣ ಮುಂತಾದ ಜನ ಪ್ರತಿನಿಧಿಗಳು ಮತ್ತು ಜನ ಸೇವಕರು ಸೇರಿ ಭಗೀರಥ ಪ್ರಯತ್ನ ಮಾಡಿ ನೀರು ಬಂದು ಕೊರಪೊಳಕ್ಕನ ನೀಲಿ ಡ್ರಮ್ಮಿಗೆ ಬೀಳುವಂತೆ ಮಾಡಿದ್ದಾರೆ. ಸದ್ಯಕ್ಕೆ ಕೊರಪೊಳಕ್ಕ ಮತ್ತು ಭಾರತಿಯವರಿಗೆ ಅಷ್ಟು ಸಾಕು. ಇದೇ ವ್ಯವಸ್ಥೆಯನ್ನು ಪರ್ಮನೆಂಟ್ ಮಾಡಿದ್ರೆ ಒಳ್ಳೆಯದಿತ್ತು. ಇಲ್ಲದಿದ್ದರೆ ಬರುವ ಪೊಣ್ಣಿ, ಮಾಯಿ, ಸುಗ್ಗಿ,ಪಗ್ಗು ತಿಂಗಳಲ್ಲಿ ಮತ್ತೇ " ನೀರಿಲ್ಲ.. ನೀರಿಲ್ಲ...ನನ್ನ ನಿನ್ನ ನಡುವೆ ನೀರಿಲ್ಲ" ಅಂತ ರಾಗಮಾಲೆ ಎಳೆಯಲು ಆಸ್ಪದ ಕೊಟ್ಟಂತಾಗುತ್ತದೆ.
Post a Comment