ಹಾಗೆಂದು ಪುತ್ತೂರು ನಗರ ಸಭೆಗೆ ಬಾಡಿ ಇಲ್ಲ. ಬೆಕ್ಕಿಲ್ಲದ ಕಲದಲ್ಲಿ ಎಲಿ ಕುತ್ತಕಂಡೆ ಮಾಡಿತು ಎಂಬಂತೆ ಇಲ್ಲಿ ಈಗ ನೌಕರರದ್ದೇ ಕಾರುಬಾರು. ಅವರು ಮಾಡಿದ್ದೇ ಶಾಸನ, ತಿಂದದ್ದೆಲ್ಲ ದುಡ್ಡು ಎಂಬ ಪರಿಸ್ಥಿತಿ ಇದೆ. ಅದರಲ್ಲೂ ಒಂದು ಮೂರು ಜನ ಅಂತೂ ನಗರ ಸಭೆಯನ್ನು ತಮ್ಮ ಡ್ಯಾಡಿ ಪ್ರಾಪರ್ಟಿ ಎಂಬಂತೆ ವರ್ತಿಸುತ್ತಿದ್ದಾರೆ. ಮಾದ ಮಾನಸಿ ಮತ್ತು ಇಸುಬಿಚ್ಚ.
ಹಾಗೆ ನೋಡಿದರೆ ಪುತ್ತೂರು ನಗರ ಸಭೆಯ ವಾಸ್ತುವೇ ಸರಿ ಇಲ್ಲ. ತೆನ್ಕಯಿ ಮುಖ ಮಾಡಿ ಇರುವ ನಗರ ಸಭೆ ಮುಖವನ್ನು ಒಮ್ಮೆ ಲಕ್ಷಾಂತರ ನುಂಗಿ ಮೂಡಯಿಗೆ ತಿರುಗಿಸಲಾಗಿತ್ತು. ಆದರೂ ಏನೂ ಪ್ರಯೋಜನ ಆಗಿರಲಿಲ್ಲ. ಕಟ್ಟಡದ ವಾಸ್ತು ಗುಂಡಿಗೆ ಬಿದ್ದು ಹೋಗಲಿ ಅದರ ಒಳಗೆ ಏನೆಲ್ಲಾ ನಡೆಯುತ್ತಿದೆ ಎಂದು ಹೇಳಿದರೆ ಸಿಸಿ ಕ್ಯಾಮೆರಾಕ್ಕೂ ನಾಚಿಕೆ ಆದೀತು. ಹಾಗೆಂದು ನಗರ ಸಭೆಯ ಮಾದ ಯಾನೆ ಮಾದು ಬಗ್ಗೆ ಮೊದಲು ಒಳ್ಳೇಯ ಅಭಿಪ್ರಾಯ ಇತ್ತು. ಆದರೆ ಬರಬರುತ್ತಾ ಮಾದನ ಕುದುರೆ ಕತ್ತೆ, ಪಂಜಿ ಎಲ್ಲಾ ಆದದ್ದು ವಿಪರ್ಯಾಸವೇ ಸರಿ. ಹಾಗೆಂದು ಮಾದನನ್ನು ಕುದುರೆಯಿಂದ ಕತ್ತೆ, ಮಂಗ ಎಲ್ಲಾ ಮಾಡಿದ ಶಿಲ್ಪಿಗಳು ಯಾರೆಂದರೆ ಅವಳು ಮಾನಸಿ, ಶ್ವೇತ ವರ್ಣದ ಸುಂದರಿ ಮತ್ತು ಇಸುಬಿಚ್ಚ. ಈ ಮೂವರೂ ಸದ್ಯಕ್ಕೆ ಬಾಡಿ ಬೇರೆ ಬೇರೆ ಆದರೂ ಇಂಜಿನ್ ಒಂದೇ ಎಂಬತ್ತಿದ್ದಾರೆ.
ಹಾಗೆಂದು ಈ ಇಸುಬಿಚ್ಚ ಜನಪ್ರತಿನಿಧಿ. ಮನೆಯಲ್ಲೇ ಅಡಿಂಡೆ ಕರಿ ಚಪ್ಪರಿಸುತ್ತಾ ಕೂರ ಬಹುದು.ಆದರೆ ಇಸುಬಿಚ್ಚ ಸೊಬೈಕ್ ಎದ್ದು ಬಂದು ಮಾದು ಛೇಂಬರಲ್ಲಿ ಕುಂತು ಬಿಟ್ಟರೆ ಥೇಟ್ ಶನಿಯ ಹಾಗೆ, ಭೂಕಂಪ ಆದರೂ ಕದಲಲ್ಲ. ಹಾಗೆಂದು ಮಾದನ ಛೇಂಬರ್ ಒಳಗೆ ಹೋಗಿ ಯಾರಿಗೂ ಪರ್ಸನಲ್ ಮಾತಾಡಲೂ ಗೊತ್ತಿಲ್ಲ ಮಾರಾಯ್ರೆ. ಯಾಕೆಂದರೆ ಇವನು ಶನಿ ಇದ್ದಾನಲ್ಲ. ಇನ್ನು ಆ ಶ್ವೇತ ವರ್ಣದ ಸುಂದರಿ ಬಗ್ಗೆ ಬರೆದರೆ ಆರೋಗ್ಯಕ್ಕೆ ಹಾನಿಕರ. ಮಾದು ಮತ್ತು ಅವಳ ಕಾಂಟೆಕ್ಟ್ಸ್ ಏನು, ಇಸುಬಿಚ್ಚ ಮತ್ತು ಅವಳ ವಹಿವಾಟು ಏನು ಎಂಬುದರ ಬಗ್ಗೆ ಸಿಸಿ ಕ್ಯಾಮರಾಗಳು ಬೆಳಕು ಚೆಲ್ಲುವ ಕೆಲಸ ಆಗಬೇಕಾಗಿದೆ.
ಹಾಗೆಂದು ಈ ಇಸುಬಿಚ್ಚ ಮಾದುನ ಬಾಲದ ಹಾಗೆ. ಮಾದು ಮಂಗಳೂರು ಮೀಟಿಂಗ್ ಹೋದರೆ ಜೊತೆಗೆ ಇಸುಬಿಚ್ಚ ಮತ್ತು ಶ್ವೇತ ವರ್ಣದ ಸುಂದರಿ ಕೂಡ ಗೋಟೂ ಮಂಗಳೂರು. ಮಾದು ಬೆಂಗಳೂರು ಹೊರಟರೂ ಸೂಟ್ ಕೇಸ್ ನಲ್ಲಿ ಎಕ್ಕಲೆ ಹೋದ ಹಾಗೆ ಇಸುಬಿಚ್ಚ ಕೂಡ ಪೌಡರ್ ಬಳಿದು ಬೆಂಗಳೂರು ಹೋಗಿ ಬಿಡುತ್ತಾರೆ. ಇನ್ನು ಶ್ವೇತ ವರ್ಣದ ಸುಂದರಿ ಕಾಸರಗೋಡು ಕಡೆ ಹೊರಟರೆ ಮಾದು ಮತ್ತು ಇಸುಬಿಚ್ಚ ಅವಳ ಚೂಡಿಯಲ್ಲಿ ನೇತಾಡಿಕೊಳ್ಳುತ್ತಾರೆ ಎಂಬ ಸುದ್ದಿ ಇದೆ. ಇನ್ನು ಪುತ್ತೂರಿನಲ್ಲಿ ಇದ್ದರೆ ಮೂವರಿಗೂ ಫೆವಿಕಾಲ್ ಗಂ ಹಾಕಿದ ಹಾಗೆ. ಬಿಡುವುದೇ ಇಲ್ಲ. ಇನ್ನು ಶ್ವೇತ ವರ್ಣದ ಸುಂದರಿಗೆ ಸಂಜೀವ ಶೆಟ್ಟಿ ಬಟ್ಟೆ ಅಂಗಡಿಗೆ ಹೋಗಬೇಕಾದರೂ ಇಸುಬಿಚ್ಚನ ಭಂಡಾರ ಬೇಕೇ ಬೇಕು. ಪುತ್ತೂರಿನಲ್ಲಿ ಭಜರಂಗಿಗಳು ಇಲ್ವಾ?
ಹಾಗೆಂದು ಈ ಮೂವರೂ ಕಿಸೆ ಭರ್ತಿ ಮಾಡುವುದರಲ್ಲೂ ಹಿಂದೆ ಬಿದ್ದಿಲ್ಲ. ಮೂವರೂ ಸೇರಿ ಯಾರನ್ನೆಲ್ಲ ತಿರ್ತ್ ಮಿತ್ತ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ಇಸುಬಿಚ್ಚನಂತೂ ನಗರಸಭೆ ಅಧಿಕಾರಿಗಳಿಗೆ ದುಡ್ಡು ಮಾಡಿ ಕೊಡುವ ಏಜೆಂಟ್ ಇದ್ದ ಹಾಗೇ. ಪುತ್ತೂರು ಸಿಟಿ ಒಳಗೆ ಯಾರೇ ಎಲ್ಲಿಯೂ ನಾಲಕ್ಕು ಕೆಂಪು ಕಲ್ಲು ತಂದಿಟ್ಟರೂ ಸಾಕು, ಸ್ಪಾಟಲ್ಲಿ ಇಸುಬಿಚ್ಚ ಧುತ್ತೆಂದು ಹಾಜರಾಗಿ ಇಲ್ಲದ ಅಂಡಿಗುಂಡಿ ರೂಲ್ಸ್ ಹೇಳಿ, ನಗರ ಸಭೆಯವರನ್ನು ನಾನು ಚಪ್ಪೆ ಮಾಡುತ್ತೇನೆ ಎಂದು ಹೇಳಿ ಕಲ್ಲು ತಂದಿಟ್ಟವನಿಂದ ವಸೂಲಿ ಮಾಡಿ ಅದರಲ್ಲಿ ಚಿಲ್ಲರೆ ಮಾದುಗೆ ಕೊಟ್ಟು ಉಳಿದದ್ದನ್ನು ನುಂಗುವ ಕಾಯಕ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ನಗರ ಸಭೆಯ ಗುತ್ತಿಗೆದಾರರು ಮತ್ತು ಮಾದು ನಡುವೆ ಇಸುಬಿಚ್ಚ ಬಂಗಾರದ ಕೊಂಡಿ ಇದ್ದ ಹಾಗೆ. ರಸ್ತೆಗೆ ಹಾಕುವ ಕಾಂಕ್ರೀಟ್ ತಂದು ತನ್ನ ಮನೆಯಂಗಳವನ್ನು ಕಾಂಕ್ರಿಟೀಕರಣ ಮಾಡಿಸಿದ ಭಯಂಕರ ಜನಪ್ರತಿನಿಧಿ ಯಾರು ಅಂದರೆ ಅದು ಇಸುಬಿಚ್ಚ.
ಪುತ್ತೂರು ನಗರ ಸಭೆ ಈಗ ನರಕ ಸಭೆಯಾಗಿದೆ. ಕೇಳುವವರೇ ಇಲ್ಲ. ಇದನ್ನೆಲ್ಲ ಕಂಟ್ರೋಲ್ ಮಾಡಬೇಕಾದ ಮಾದನೇ ಇಸುಬಿಚ್ಚ ನಂತಹ ಜನಪ್ರತಿನಿಧಿ ಮುಖವಾಡದ ಬ್ರೋಕರ್ ನೊಂದಿಗೆ ಆ ಕ್ಲಬ್ಬು, ಈ ಕ್ಲಬ್ಬು ಎಂದು ಸುತ್ತಾಡುತ್ತಿದ್ದಾನೆ. ಕಂಟ್ರೋಲ್ ಇಲ್ಲದೆ ಕಛೇರಿ ಸಂತೆಯಂತಾಗಿದೆ. ಅಲ್ಲಿ ಮೇಲೆ ಮೀಟಿಂಗ್ ಹಾಲ್ ನಲ್ಲಿ, ಟಾಯ್ಲೆಟ್ ಸುತ್ತ ಮುತ್ತ ಶ್ವೇತ ವರ್ಣದ ಸುಂದರಿ ಒಮ್ಮೊಮ್ಮೆ ಜಾಸ್ತಿ ಸಮಯ ಕಳೆಯುತ್ತಿರುವ ಬಗ್ಗೆ ಸಿಸಿಗಳೂ ಕಣ್ಣು ಮುಚ್ಚಿಕೊಂಡು ಕುಂತಿವೆ. ಮೀಟಿಂಗ್ ಹಾಲ್ ನಲ್ಲಿ, ಟಾಯ್ಲೆಟ್ ಸುತ್ತ ಮುತ್ತ ಶ್ವೇತ ವರ್ಣದ ಸುಂದರಿಗೆ ಏನು ಕೆಲಸ? ಮಾದನಿಗೆ ಏನು ಕೆಲಸ? ಇಸುಬಿಚ್ಚನಿಗೆ ಏನು ಕೆಲಸ? ನಗರ ಸಭೆಯಲ್ಲಿ ಭ್ರಷ್ಟಾಚಾರ ಭರತನಾಟ್ಯ ಮಾಡುತ್ತಿದೆ. ಸುಲಿಗೆ ಕೋರರು, ಲಂಚಬಾಕರು, ಸೋಮಾರಿಗಳು ತುಂಬಿ ಹೋಗಿದ್ದಾರೆ. ಅಲ್ಲಿ ನಗರ ಸಭೆಯ ಮೀಟಿಂಗ್ ಹಾಲ್ ಅಕ್ಕಪಕ್ಕದ ಅಡ್ಡಗಳಲ್ಲಿ ಏನಾದರೂ ಬೇರೆ ಕೇಸುಗಳು ನಡೆಯುತ್ತಿದೆಯಾ? ನಗರ ಸಭೆಗೆ ಇಸುಬಿಚ್ಚ ಮಾತ್ರ ಗತಿಯಾ?
Post a Comment