ಹಾಗೆಂದು ಆಟೋ ರಿಕ್ಷಾಗಳು ಈ ದೇಶದ ನರನಾಡಿಗಳಿದ್ದಂತೆ. ಒಂದು ಕ್ಷಣ ಈ ವ್ಯವಸ್ಥೆ ಸ್ಥಗಿತಗೊಂಡರೂ ಜನ ವಿಲವಿಲ ಆಗಿ ಬಿಡುತ್ತಾರೆ. ಹಾಗೆಂದು ಎಲ್ಲವೂ ಆಟೋದವರ ಮೂಂಕಿನ ನೇರಕ್ಕೆ ನಡೆಯಲ್ಲ. ಮಿನುಗು ಹುಳ ನನ್ನ ಕುಂಡೆಯ ಬೆಳಕಿನಲ್ಲಿಯೇ ಬೆಳಕಾದದ್ದು ಎಂದು ತಿಳಿದುಕೊಂಡಂತೆ ಆಟೋದವರು ಕೂಡ ವ್ಯವಸ್ಥೆ ತಮ್ಮಿಂದಾಗಿಯೇ ನಡೆಯುತ್ತಿದೆ ಎಂದು ಮಿಸ್ ಅರ್ಥ ಮಾಡಿಕೊಂಡರೆ ಅದು ಅವರ ತಪ್ಪು. ದುಪ್ಪಟ್ಟು ಬಾಡಿಗೆ, ಅಹಂಕಾರ, ದುರಹಂಕಾರ, ಅಸಭ್ಯ ವರ್ತನೆ, ಉಡಾಫೆ, ಧರ್ಮಕ್ಕೆ ಬಿಡುವವರಂತೆ ವರ್ತಿಸುವುದು ಮುಂತಾದ ಸದ್ಗುಣಗಳನ್ನು ಮೈಗೂಡಿಸಿಕೊಂಡಿರುವ ಕೆಲವೇ ಕೆಲವು ಆಟೋ ಚಾಲಕರು ಈ ಸಮಾಜಕ್ಕೆ ಕಿರಿಕ್ ಕೂಡ. ಇದೀಗ ತಲಪಾಡಿ ಕೆ.ಸಿ ರೋಡ್ ಆಟೋ ಚಾಲಕರ ಕತೆ ಒಂದು ಬಂದಿದೆ. ಕೆ.ಸಿ ರೋಡ್ ನಲ್ಲಿ ಸುಮ್ಮನೆ ಹೋಗುವ ರಿಕ್ಷಾದಲ್ಲಿ ಕುಂಡೆ ಊರಿದರೂ ಎಪ್ಪತ್ತು ಬಾಡಿಗೆ. ಇದನ್ನು ಕೇಳುವಾಗಲೇ ಕುಂಡೆಗೆ ಶಾಕ್ ಹೊಡೆಯುತ್ತದೆ ಮಾರಾಯ್ರೆ.
ಇದು ಕೆ.ಸಿ ರೋಡ್. ಇಲ್ಲಿ ಒಂದು ದೊಡ್ಡ ರಿಕ್ಷಾ ನಿಲ್ದಾಣ ಇದೆ. ಕೆ.ಸಿ ರೋಡಿನ ಅಂಚಿಂಚಿ ಎಲ್ಲಿಗೆ ಹೋಗುವುದಿದ್ದರೂ "ಏಯ್ ಆಟೋ" ಎಂದು ಕೆ.ಸಿ ನಿಲ್ದಾಣದಲ್ಲೇ ಬಂದು ಆಟೋ ಹಿಡಿಯಬೇಕು ಮತ್ತು ಮುಟ್ಟುವಲ್ಲಿಗೆ ಮುಟ್ಟಬೇಕು. ಹಾಗೇ ಕೆ.ಸಿ ರೋಡಿಂದ ಸುತ್ತ ಮುತ್ತ ಬಾಡಿಗೆ ಹೋದ ರಿಕ್ಷಾ ವಾಪಾಸ್ ತನ್ನ ಆಟೋ ನಿಲ್ದಾಣಕ್ಕೆ ಬರಬೇಕಲ್ಲ. ಬರಲೇಬೇಕು. ಹಾಗೆ ಬರುವಾಗ ಪಾಪ ಯಾರಾದರೂ ಬಡಪಾಯಿಗಳು ಕೆ.ಸಿ ರೋಡಿಗೆ ಬರುವವರು ಕೈ ಹಿಡಿದರೆ ಅಂಥವರ ಕೈಯಿಂದ ನ್ಯಾಯಸಮ್ಮತವಾಗಿ ಒಂದು ಹತ್ತು ರೂಪಾಯಿಯೋ, ಹದಿನೈದೋ, ಇಪ್ಪತ್ತೋ ಕೀಳಬೇಕಾದ್ದು ಆಟೋ ಧರ್ಮ. ಆದರೆ ಕೆ.ಸಿ ರೋಡಿನ ಕೆಲವು ಕಿರಿಕ್ ಆಟೋ ಚಾಲಕರು ಈ ಆಟೋ ಧರ್ಮ ಸರಿಯಾಗಿ ಪಾಲಿಸುತ್ತಿಲ್ಲ ಎಂಬ ದೂರಿದೆ. ಅಂಥ ಆಟೋಗಳ ಕತೆ ಬೇತೆ ಇದೆ.
ಹಾಗೆಂದು ಈ ವಸೂಲಿಗಳ ಬಗ್ಗೆ ಮಾತಾಡಲು ಸಾಧ್ಯವಿಲ್ಲ. ಅದರಲ್ಲೂ ತುಳುವಿನಲ್ಲಿ ಮಾತನಾಡಿದರಂತೂ ನಾಳೆಯಿಂದ ನೀವು ಆಟೋಗಳ ಸುದ್ದಿಯನ್ನೇ ಬಿಡಬೇಕಾಗುತ್ತದೆ. ಈಗ ಉದಾಹರಣೆಗೆ ಕೆ.ಸಿ ರೋಡಿನ ಒಂದು ಆಟೋ ಇಂಚಿ ದೇವಿ ನಗರಕ್ಕೆ, ವಿದ್ಯಾನಿಕೇತನ ಕಡೆಗೆ ಬಾಡಿಗೆ ಬಂದಿದ್ದರೆ ಅವನು ಬಾಡಿಗೆ ಬಂದವರನ್ನು ಬಿಟ್ಟು ವಾಪಸ್ ಕೆ.ಸಿ ರೋಡ್ ಆಟೋ ನಿಲ್ದಾಣಕ್ಕೆ ಹೋಗಲೇ ಬೇಕು ತಾನೇ. ಅವನು ದೇವಿ ನಗರದಲ್ಲಿ ಮತ್ತೆಂಥದೂ ಮಾಡಲಿಕ್ಕಿಲ್ಲ. ಆದರೆ ಅವನು ಸೀದಾ ಹೋಗಲ್ಲ. ಬಾಡಿಗೆ ಬಂದವರನ್ನು ಬಿಟ್ಟು ಅವನು ಸೀದಾ ಬಂದು ವಿದ್ಯಾನಿಕೇತನದ ಗೇಟಿನ ಮುಂದೆ ಸೀಟು ಬಿಸಿ ಮಾಡುತ್ತಾ ಪಜೆ ಹಾಕಿ ಬಿಡುತ್ತಾನೆ. ಯಾರಾದರೂ ಬಂದು ಕೆ.ಸಿ ರೋಡಿಗೆ ಹೋಗುತ್ತಾ ಎಂದು ಕೇಳಿದರೆ " ಪೋಪುಜಿ, ಬುಡೊಡ" ಎಂದು ಕೇಳುತ್ತಾನೆ. ಬುಡ್ಲೆ ಅಂದರೆ ದೇವಿ ನಗರದಿಂದ ಕೆ.ಸಿ ರೋಡಿಗೆ ಒಂದುವರೆ ಕಿಮೀ ಗೆ ಎಪ್ಪತ್ತು ನೀವು ಲೆಕ್ಕ ಮಾಡಿ ಕೊಡಬೇಕು. ಬೊರ್ಚಿ ಬುಡೋರ್ಚಿ ಅಂದರೆ ನೀವು 43A ಯನ್ನು ಪುಣ ಕಾದ ಹಾಗೆ ಕಾಯಬೇಕು. ಇನ್ನು ಯಾಕೆ ಹೋಗಲ್ಲ ಎಂದು ಎಲ್ಲಿಯಾದರೂ ನೀವು ಕೇಳಿದರೆ ಅದೇ ದೊಡ್ಡ ಅಪರಾಧವಾಗಿ, ಕಿರಿಕ್ ಆಗಿ, ಬ್ರದರ್ಸ್ ಒಗ್ಗಟ್ಟಾಗಿ ಅದಕ್ಕೆ ಕೋಮು ಸೇರಿ, ಪ್ರಳಯ ಆಗಿ ಕೆ.ಸಿ ರೋಡಿಗೆ ಬೇರೆಯೇ ದೇಶದ ಬೇಡಿಕೆ ಇಡುವ ಅಪಾಯಗಳೂ ಇದೆ. ಅದರಲ್ಲೂ ತುಳು ಮಾತನಾಡುವವರಿಗೆ ಫುಲ್ ಬಾಡಿಗೆ, 'ನಂಗಳೆ ಆಳ್' ಗಳಿಗೆ ಡಿಸ್ಕೌಂಟ್ ಬಾಡಿಗೆ ವ್ಯವಸ್ಥೆ ಕೂಡ ಇಲ್ಲಿದೆ ಎಂಬುದು ಖೇದಕರ ಸಂಗತಿಯಾಗಿದೆ. ಒಂದೇ ದೇಶ ಒಂದೇ ವ್ಯವಸ್ಥೆ. ಆದರೆ ತುಳು ಮಾತಾಡುವವರು ಕೊಡುವ ನೋಟಿನ ಅಚ್ಚೇ ಬೇರೆ, ಮಲೆಯಾಳಿಗಳ ನೋಟಿನ ಅಚ್ಚೇ ಬೇರೆ ಎಂಬಂತೆ ವರ್ತಿಸುವ ಜನರ ಮಧ್ಯೆ ಕೆ.ಸಿ ರೋಡಿನಲ್ಲಿ ಹೇಗೆ ಸಹಬಾಳ್ವೆ ನಡೆಸಲಿ?
Post a Comment