May 2024

   


                ಒಂದು ಸ್ವಾತಂತ್ರ್ಯಕ್ಕಾಗುವಷ್ಟು ಹೋರಾಟಗಳು ನಡೆದವು,‌ ಒಂದು ಸರ್ವಾಧಿಕಾರದ ವಿರುದ್ಧ ಜನ ರೊಚ್ಚಿಗೆದ್ದಷ್ಟು ಜನ ಒಗ್ಗಟ್ಟಾದರು, ಲೋಡ್ ಗಟ್ಟಲೆ ಮನವಿ ಪತ್ರಗಳು ಸಂಬಂಧ ಪಟ್ಟವರ ಕಸದ ಬುಟ್ಟಿಯಲ್ಲಿ ತುಂಬಿ ತುಳುಕಾಡಿತು, ಜಿಲ್ಲಾಡಳಿತಕ್ಕೆ, ಜನ‌ ಪ್ರತಿನಿಧಿಗಳಿಗೆ,  ಮಂತ್ರಿಮಹೋದಯರಿಗೆ ಮನವರಿಕೆ ಮಾಡಲಾಯಿತು, ಆದರೆ ಇದೆಲ್ಲದರ ರಿಸಲ್ಟ್ ಮಾತ್ರ ಜೀರೋ. ಒಂದು ಜನ ವಿರೋಧಿ ಕೆಲಸವನ್ನು ಇಷ್ಟೆಲ್ಲಾ ಬೊಬ್ಬೆ ಹೊಡೆದರೂ ನಿಲ್ಲಿಸಲಾಗುತ್ತಿಲ್ಲ. ಒಂದು ಕೆಟ್ಟ ವ್ಯವಸ್ಥೆಯನ್ನು ದಷ್ಟ ಪುಷ್ಟ ದುಷ್ಟರು ಹೇಗೆಲ್ಲಾ ಯೂಸ್ ಮಾಡಿಕ್ಕೊಂಡು ಅಮಾಯಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದನ್ನು ಪರಾಂಬರಿಸಿ ನೋಡಲು ನೀವು ಒಮ್ಮೆ ಸುಳ್ಯ ತಾಲೂಕು ಮರ್ಕಂಜ ಗ್ರಾಮಕ್ಕೆ ಬರಬೇಕು. ಮರ್ಕಂಜ ಗ್ರಾಮ ಮಾರ್‌ ಕಂಜ ಆಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಂಡರೆ ಒಳ್ಳೆದು.




   ಇದು ಮರ್ಕಂಜ. ಇಲ್ಲಿ ಸಾರ್ವಜನಿಕ   ಜನನಿಬಿಡ ಪ್ರದೇಶದಲ್ಲಿ ಒಂದು ಜಲ್ಲಿ ಕಲ್ಲಿನ ಕ್ರಷರ್ ಇದೆ. ಹೇಗೆ ಅಂದರೆ ಹಂಪನಕಟ್ಟೆ ಸಿಗ್ನಲ್ ನಲ್ಲಿ ಪಟಾಕಿ ಫ್ಯಾಕ್ಟರಿ ಮಾಡಿದಂತೆ. ಬಹಳಷ್ಟು ದಿನಗಳಿಂದ ಈ ಒಂದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟಗಳು ನಡೆಯುತ್ತಲೇ ಬಂದಿದೆ. ಆದರೆ ಅದ್ಯಾಕೋ ಈ ಗಣಿಗಾರಿಕೆಗೆ ಬೀಗ ಹಾಕಿಸಲು ಆಗುತ್ತಿಲ್ಲ. ಯಾಕೆಂದರೆ ಗಣಿಗಾರಿಕೆಯ ದಷ್ಟ ಪುಷ್ಟ ದುಷ್ಟರು ಈಗಾಗಲೇ ಇಡೀ ವ್ಯವಸ್ಥೆಯನ್ನೇ ನಿಂಗೊಲು ಕೊಟ್ಟು ಮಲಗಿಸಿದೆ. ಜನಪ್ರತಿನಿಧಿಗಳು ಮರ್ಕಂಜದ ಹೋರಾಟಗಾರರನ್ನು ಕಂಡ ಕೂಡಲೇ ಅಡ್ಕದಲ್ಲಿ ಅಡಗಿ ಬಿಡುತ್ತಾರೆ. ಹೋರಾಟಗಾರರಿಗೆ ದಿಕ್ಕೇ ತೋಚುತ್ತಿಲ್ಲ.


   ಹಾಗೆಂದು ಇದೊಂದು ಅಕ್ರಮ ಗಣಿಗಾರಿಕೆ. ಪೂಂಬಾಡಿಯ ಗೌಡ್ರಿಗೆ  ದೇವರು ಕೊಟ್ಟ ಕೈಯಿಂದ ಪಾದೆ ಒಡೆದು ಜಲ್ಲಿ‌ ಮಾಡಲು ಕೊಟ್ಟ ಪರವಾನಿಗೆ ಇದು.‌ ನಂತರ ಗೌಡರು ಜಲ್ಲಿ ತೆಗೆದು ತೆಗೆದು ಕೈ ಬಚ್ಚಿದಾಗ ಡೆಲ್ಮಾ ಕಂಪನಿಗೆ ಜಲ್ಲಿ ತೆಗೆಯಲು ವಹಿಸಿ ಬಿಟ್ಟರು. ಆ ಕಂಪೆನಿ ಹತ್ರ ದುಡ್ಡಿತ್ತು. ಅವರು ಬಂದವರೇ ಢಂ... ಢೀಂ...ಮಾಡಿ ಜಲ್ಲಿ ತೆಗೆಯಲು ಶುರು ಮಾಡಿದರು. ಹಾಗಾಗಿ ಆವತ್ತಿನಿಂದ ಮರ್ಕಂಜ ಗ್ರಾಮಸ್ಥರಿಗೆ ವರ್ಷವಿಡೀ ದೀಪಾವಳಿ ಶುರುವಾಗಿ ಹೋಯ್ತು. ಇಲ್ಲಿ ಮಕ್ಕಳು ಕೇಪು ಪಟಾಕಿ ಕೂಡ ಕೇಳಲ್ಲ.
ಹಾಗೆಂದು ಬೊಳ್ಳುಳ್ಳಿ ಪಟಾಕಿ ಇಟ್ಟು ಬಂಡೆಗಳನ್ನು ಒಡೆಯಲು ಆಗಲ್ಲ. ಬಂಡೆ ಒಡೆಯಲು ಅಪಾಯಕಾರಿ ತೋಟೆಗಳನ್ನೇ ಉಪಯೋಗಿಸ ಬೇಕು. ಮ್ಯಾಕ್ಸ್ ವೆಲ್ ನಂತಹ, ಜಾಕ್ಸ್ ನಂತಹ ತೋಟೆ ಇಟ್ಟು ಒಡೆಯಲಿ, ಜಲ್ಲಿ ಮಾಡಲಿ, ಜಲ್ಲಿ ಮಾರಲಿ, ಕಲ್ಲಿನ ಗುಂಡಿಗೆ ಬಿದ್ದು ಸಾಯಲಿ ಯಾರೂ ಏನೂ ಅನ್ನಲ್ಲ. ಆದರೆ ಎಲ್ಲಿ ಇದನ್ನೆಲ್ಲ ಮಾಡಬೇಕಾದ್ದು? ಈ ಕಲ್ಲಿನ ಕ್ರಷರ್ ಸುತ್ತಾ ಮನೆಗಳಿವೆ, ಎರಡು ಮನೆಗಳನ್ನು ಇದೇ ದಷ್ಟಪುಷ್ಟ ದುಷ್ಟರು ಒಕ್ಕಲೆಬ್ಬಿಸಿ ಕಳಿಸಿದ್ದಾರೆ. ಈಗ ಇದ್ದ ಮನೆಗಳಿಗೆ ಇವರ ತೋಟೆಯಿಂದ ಭಾರೀ ಹಾನಿಗಳಾಗುತ್ತಿದೆ, ಇನ್ನು ಮರ್ಕಂಜದ ಅಷ್ಟೂ ರಸ್ತೆಗಳನ್ನು ಇವರ ಟಿಪ್ಪರ್ ಗಳು ಲಗಾಡಿ ತೆಗೆದು ಬಿಟ್ಟಿವೆ.‌ ರಸ್ತೆ ತುಂಬಾ ಧೂಳೆದ್ದು ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಈಸ್ಟ್ ಮನ್ ಕಲ್ರರಿಗೆ ತಿರುಗಿ, ಕೆಂಪಾಗಿ, ಬೊಣ್ಯದ ಕಲರಿಗೆ ಬಂದು ಮನೆಗೆ ಮುಟ್ಟುವಾಗ "ಯಾರೋ ಮಾರ್ನೆಮಿ ವೇಸದವು ಬಂದ ಗಡ" ಎಂದು ಮನೆಯವರಿಗೇ ಗುರ್ತ ಸಿಗದಷ್ಟು ಧೂಳಿನ ಅಭಿಷೇಕ ಇಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕ್ರಷರಿನ ಬದಿಯಲ್ಲಿಯೇ ಮುಡ್ನೂರು ಶಾಲೆಯಿದೆ. ಕ್ರಷರಿನ ಪ್ರತಿ ತೋಟೆ ಸ್ಫೋಟವಾಗುವಾಗಲೂ ಶಾಲಾ ಮಕ್ಕಳ ಸಮೇತ ಚಿಕ್ಕ ಮಾಸ್ತರು, ದೊಡ್ಡ ಮಾಸ್ತರು, ಹೆಡ್ಡ ಮಾಸ್ತರು ಎಲ್ಲರೂ ಬೆಚ್ಚಿ ಬೀಳುತ್ತಾರೆ. ಜೀವ ಕೈಲೀ ಹಿಡಿದೇ ಪಾಠ ಮಾಡುವ ಪರಿಸ್ಥಿತಿ. ತೋಟೆ ಸ್ಫೋಟಕ್ಕೆ ಒಂದು  ಪೀಸ್ ಪಾದೆ ಹಾರಿ ಬಂದರೂ ಸಾಕು ಶಾಲೆಯ ಫೋಟೋಗೆ ಮಾಲೆ ಬೀಳಲು. ಇನ್ನು ಮೀನಂಗೂರು ದುರ್ಗಾ ಪರಮೇಶ್ವರಿ ದೇವಸ್ಥಾನ ಕೂಡ ಕ್ರಷರಿನ ಹತ್ತಿರದಲ್ಲೇ ಇದ್ದು ಒಮ್ಮೆ ಇವರ ತೋಟೆಗೆ ದೇವಸ್ಥಾನದ ಗರ್ಭಗುಡಿಯಲ್ಲಿಯೇ ಬಿರುಕು ಬಿದ್ದಿತ್ತು ಎಂದು ತಿಳಿದುಬಂದಿದೆ. ಇನ್ನು ಬಡವರ ಕಾಲೋನಿಗಳು, ಕುಡಿಯುವ ನೀರಿನ ಕೊಳವೆ ಬಾವಿಗಳು, ನೀರಿನ ಟ್ಯಾಂಕ್ ಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸೊಸೈಟಿ, ಯುವಕ ಮಂಡಲದ ಕಟ್ಟಡ ಹೀಗೆ ಎಲ್ಲವೂ ಅಂದರೆ ಒಂದು ಊರಿಗೆ ಸಂಬಂಧ ಪಟ್ಟಿದ್ದು   ಎಲ್ಲಾ ಅಲ್ಲಿರುವಾಗ ಆ ಊರಿಗೆ ಸಂಬಂಧ ಪಡದವರು ಬಂದು ಊರಿಗೆ ಸಂಬಂಧ ಪಟ್ಟದ್ದಕ್ಕೆಲ್ಲ ಅಪಾಯ ತರುತ್ತಿದ್ದರೂ ಆಡಳಿತ ವ್ಯವಸ್ಥೆ ಊರವರ ಚೆಂದ ನೋಡುತ್ತಾ ಕುಂತಿದ್ದು ಮಾತ್ರ ವಿಪರ್ಯಾಸವೇ ಸರಿ.


ಅಧ್ಯಕ್ಷೆ.. ಅಧ್ಯಕ್ಷೆ... ಅಧ್ಯಕ್ಷೆ... ಅಧ್ಯಕ್ಷೆ....
ಮೆಟ್ಟಿನಲ್ಲಿ‌ ಹೊಡೆಯುವ ಬೊಮ್ಮೆಟ್ಟಿ
   ಇನ್ನು ಧೂಳು ತುಂಬಿದ ಮರ್ಕಂಜದಲ್ಲಿ ಇವಳೊಬ್ಬಳು ಇದ್ದಾಳೆ ಅಧ್ಯಕ್ಷೆ. ಇವಳನ್ನು ಅಧ್ಯಕ್ಷೆ ಮಾಡಿದವರಿಗೆ ಸದ್ಯಕ್ಕೆ ಈ ಲೋಕದ ಮೇಲೆ ಯಾವುದೇ ಪ್ರಶ‌ಸ್ತಿಗಳಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡುತ್ತೇನೆ ಅಂದಳು ಅಧ್ಯಕ್ಷರ ಸೀಟಲ್ಲಿ ಬಂದು ಕುಂತಳು. ಸೀಟಿಗೆ ಅಕ್ರಮ ಗಣಿಗಾರಿಕೆಯವರನ್ನು ಕರೆದಳು ತಿಂಗಳಿಗೆ ನಂಗೆ ಇಂತಿಷ್ಟು ಕೊಡಿ ಎಂದು ಅಧ್ಯಕ್ಷರ ಸೀಟನ್ನೇ ಮಾರಿ ಬಿಟ್ಟಳು. "ಅಧ್ಯಕ್ಷರೇ ಗಣಿಗಾರಿಕೆ ವಿರುದ್ಧ ಹೋರಾಟ ಯಾವಾಗ ಶುರು ಮಾಡೋಣ" ಎಂದು ಕೇಳಿದವರಿಗೆಲ್ಲಾ ಚಪ್ಪಲಿ ಸೇವೆ ಮಾಡಿ ಬಿಟ್ಟಳು. ಇವಳದ್ದು ಒಂಥರಾ ರೌಡಿ ಗೆಟಪ್ಪು. ಸುಳ್ಯ ಪೋಲಿಸರಿಗೆ ಇವಳು ಬಿನ್ನೆರ್. ಸುಳ್ಯ ಪೋಲಿಸ್ ಠಾಣೆ ಇವಳಿಗೆ ಮಾವನ ಮನೆ ಇದ್ದ ಹಾಗೇ. ಪೋಲಿಸರು ಇವಳನ್ನು ಹುಡುಕಿಕೊಂಡು ಬರೋದು, ಇವಳು ಹೋಗಿ ಠಾಣೆಯಲ್ಲಿ ಠಕ್ಕರ ಬೆಂಚಿನಲ್ಲಿ ಕೂರೋದು ಅಪಗಪಗ ನಡೆಯುತ್ತಾ ಇರುತ್ತದೆ. ಇವಳ ಉದಲ್ ಹಿಡಿದ ಜಾತಕ ಎಲ್ಲಾ ಪೋಲಿಸರು ತೆಗೆದು ಓದಿದರೆ ಇವಳ ಹೆಸರು ರೌಡಿ ಲಿಸ್ಟಲ್ಲಿ ಬೀಳೋದು ಗ್ಯಾರಂಟಿ. ಎಲ್ಲರ ಮೇಲೂ ಏಕವಚನ, ಹೋದ ಕಡೆಯೆಲ್ಲಾ ಜಗಳ, ಮಾತೆತ್ತಿದರೆ ಚಪ್ಪಲಿ ಎತ್ತೋದು, ಅವಳೇ ಜಗಳ ಮಾಡೋದು ಅವಳೇ ಓಡಿ ಹೋಗಿ ಕಂಪ್ಲೇಂಟ್ ಕೊಡೋದು, ಮಹಿಳಾ ಆಯೋಗದವರ ಮುಂದೆ ಧಿರೀಲ‌ ಅಳೋದು, ಕಾಲು ಕೆರೆದು ಜಗಳ, ಬೀದಿ ಕಾಳಗ ಮುಂತಾದ ಮಾರಿಮುತ್ತು ಗುಣಗಳನ್ನೆಲ್ಲ ಮೈಗೂಡಿಸಿಕೊಂಡಿರುವ ಈಕೆಯ ಕಾರಣದಿಂದಲೇ ಅಕ್ರಮ ಗಣಿಗಾರಿಕೆಯವರು ಯಾವುದೇ ಹೆದರಿಕೆ ಇಲ್ಲದೆ ರಾಜಾರೋಷವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇವಳಿಗೊಬ್ಬ ಬಾಡಿ ಗಾರ್ಡ್ ಇದ್ದು ಅವನು ಜಾಗ, ಮನೆ ಮಠ ಎಲ್ಲ ಮಾರಿದ ದುಡ್ಡನ್ನು ಇವಳು "ಇತ್ತೇ ಕೊರ್ಪೆ" ಎಂದು ತಗೊಂಡಿದ್ದು ಇನ್ನು ಅವನ ಡಿಕ್ಕಿಗೆ ಯಾವಾಗ ಲಿಂಬೆ ಹುಳಿ ಇಟ್ಟು ಡಿಶುಂ ಮಾಡುತ್ತಾಳೆ ಎಂದು ದೇವರಿಗೇ ಗೊತ್ತು. ನ್ಯಾಯಾಲಯಗಳಲ್ಲಿ ಕೂಡ ಇವಳ ಪೌರುಷದ ಬಗ್ಗೆ ಕೇಸುಗಳಿದ್ದು ಯಾವಾಗ ಬೇಕಾದರೂ ಆಟಿ ಕೂರಲು ಹೋಗುವ ಅಪಾಯಗಳಿವೆ. ಹಾಗೆಂದು ಮರ್ಕಂಜ ಸ್ವಲ್ಪ ಡೀಸೆಂಟ್ ಏರ್ಯ ಆಗಿದ್ದು ಇವಳಿಗೆ ಮಾತ್ರ ಅಪಗಪಗ ಭೂತ ಹಿಡಿದು ಊರಿನ ಹೆಸರಿಗೆ ಮಸಿ ಬಳಿಯುತ್ತಿದ್ದಾಳೆ ಎಂಬ ಅಸಮಾಧಾನ ಊರ ಜನರಲ್ಲಿದೆ.
   
      

  



               ಕಡಬ ಮಾಲೇಶ್ವರದ ಆಸ್ತಿ ಗಲಾಟೆ ಜೋರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಒಬ್ಬ ಕಿರಿಕ್ ಪಿಡಿಒನ ಕಿರಿಕಿರಿಯಿಂದ ಇಡೀ ಪುತ್ತೂರು ಕಡಬ ತಾಲೂಕಿನಲ್ಲಿ ವಾಸನೆ ಎದ್ದಿದೆ. ಅಂಡಿಗುಂಡಿ ಕಾನೂನಿನ ಹೆಸರಿನಲ್ಲಿ ತಾನು ಹೋದಲೆಲ್ಲಾ ಏನಾದರೊಂದು ಕಿರಿಕ್ ಮಾಡುತ್ತಲೇ ಬಂದಿರುವ ಈ ಪಿಡಿಒ ಗೆ ಈಗ ಒಬ್ಬರು ಮಾಸ್ತರ್ ಸಿಕ್ಕಿದ್ದಾರೆ. ಮಾಸ್ತರರು ಪರ್ಚೆಸ್ ಮಾಡಿರುವ ಜಾಗದ ಒಂದು ತುಂಡು ತನ್ನದು ಎಂದು ಹೇಳುತ್ತಿರುವ ಪಿಡಿಒ ಜಾಗ ಮಾಸ್ತರ್ ಹೆಸರಿಗೆ ಅಗ್ರಿಮೆಂಟ್ ಆಗುವಾಗ, ರಿಜಿಸ್ಟ್ರೇಷನ್ ಆಗುವಾಗ, ಜಾಗದ ಪೊಸಿಷನ್ ಮಾಸ್ತರ್ ತಗೊಳ್ಳುವಾಗ, ಜಾಗದಲ್ಲಿ ಮಾಸ್ತರ್ ಕೆಲಸ ಮಾಡಿಸುವಾಗ ಸುಮ್ಮನೆ ಕುತ್ತ ಕುಂತಿದ್ದು ಈಗ ಏಕಾಏಕಿ ಅದು ಜಾಗ ನನ್ನದು ಎಂದು ಪೆಟ್ಟಿಗೆ ನಿಂತಿದ್ದಾನೆ. ಇದೀಗ ಮಾಸ್ತರ್ 32 ಜನರೊಂದಿಗೆ ಬಂದು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪಿಡಿಒ ಪಜ್ಜಿ ಪಜ್ಜಿ ಸುಳ್ಳು ಕಂಪ್ಲೇಂಟ್ ಕಡಬ ಪೊಲೀಸರಿಗೆ ಕೊಟ್ಟಿದ್ದಾನೆ. ಯಾವುದಕ್ಕೂ ಇರಲಿ ಎಂದು ಮಾಸ್ತರ್ ಕಡೆಯಿಂದಲೂ ಕೌಂಟರ್ ಕೇಸ್ ಕೊಡಲಾಗಿದೆ.




   ಈ ಗಲಾಟೆ ಬೇಗ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುರುಂಟು ಕಾನೂನಿನ ಪಂಡಿತರನ್ನು ದಾರಿಗೆ ತರೋದು ಕಷ್ಟದ ಕೆಲಸ. ಅವರಿಗೆ ಇರೋದು ಒಂದೇ ಮದ್ದು. ಗುಮ್ಸುಕಾಯಿ ಬೀಳಬೇಕು ಅಂಥವರಿಗೆ. ಸಂಧು ಸಂದು ಬೀಳಬೇಕು ಇವರಿಗೆ. ಆಗ ಬುದ್ಧಿ ಬರುತ್ತದೆ.


   
      

   



    ಕಡಬ ತಾಲೂಕು ಕೇಂದ್ರಕ್ಕೆ ಅತ್ಯಂತ ಸಮೀಪದಲ್ಲಿ ಒಂದು ದೊಡ್ಡ ಗಲಾಟೆ ಆಗುವ ಸಾಧ್ಯತೆಗಳಿವೆ. ಅಲ್ಲಿ ಮಾಲೇಶ್ವರದಲ್ಲಿ ಪಿಡಿಒ ವರ್ಸಸ್ ಮಾಸ್ತರ್ ಜಟಾಪಟಿ ತಾರಕಕ್ಕೇರಿದ್ದು ಇಬ್ಬರೂ ಯುದ್ಧೋನ್ಮಾದದಿಂದ ಸೇಂಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಲಿದ್ದು ಇಬ್ಬರೂ ತಂತಮ್ಮ ಸೇನೆ ಜಮಾವಣೆ ಮಾಡುತ್ತಿದ್ದಾರೆ.
   ಇದೊಂದು ಜಾಗದ ತಕರಾರು. ಅಂಚಿ ಕಲ್ಲುಗುಡ್ಡೆಯ ಮಾಸ್ತರ್ ಒಬ್ಬರು ಬಂದು ಇಲ್ಲಿ ಮಾಲೇಶ್ವರದಲ್ಲಿ ಒಂದು ಕೃಷಿ ಭೂಮಿ ಖರೀದಿ ಮಾಡುತ್ತಾರೆ. ಒಂದೂವರೆ ಎಕರೆ. ಈ ಮಾಸ್ತರ್ ಖರೀದಿ ಮಾಡಿದ ಜಾಗದ ಬರಿಟ್ ಪಿಡಿಒ ಒಬ್ಬರ ಜಾಗ ಕೂಡ ಇದೆ. ಸ್ವಲ್ಪ ಸಮಯ ಎಲ್ಲವೂ ನಾರ್ಮಲ್ ಆಗಿತ್ತು. ಇಬ್ಬರೂ ನೀರು ಬಿಟ್ಟುಕ್ಕೊಂಡು ಸುಮ್ಮನಿದ್ದರು. ಆದರೆ ಯಾವಾಗ ಕಲ್ಲುಗುಡ್ಡೆಯ ಮಾಸ್ತರ್ ತನ್ನ ವರ್ಗ  ಜಾಗೆಯ ಬರಿತ್ತ ಜಾಗಕ್ಕೆ 94C ಅಡಿಯಲ್ಲಿ ಅರ್ಜಿ ಕೊಟ್ಟರೋ ಆವತ್ತು ಪಿಡಿಒನ ಭೂತ ಎದ್ದು ನಿಂತಿತು.  "ಅದು ಜಾಗ ನನ್ನ ವರ್ಗದ ಕುಮ್ಕಿ" ಎಂದು ಪಿಡಿಒ ಹೇಳಿದರೆ, "ಜಾಗ ಪರ್ಚೆಸ್ ಮಾಡುವಾಗ ನೀನು ಎಲ್ಲಿ ಹೋಗಿದ್ದೆ" ಎಂಬುದು ಮಾಸ್ತರ್ ವಾದ. ಈಗ ಕತ್ತಿ ಕತ್ತಿ.




   ಹಾಗೇ ಇವರಿಬ್ಬರ ನಡುವೆ ಇದ್ದ ಮಾಲೇಶ್ವರ ಟ್ರೀಟಿ, ಕಡಬ ಟ್ರೀಟಿ, ಕಲ್ಲಂತಡ್ಕ ಟ್ರೀಟಿ ಎಲ್ಲವೂ ಮುರಿದು ಬಿದ್ದಿವೆ. ಹಾಗಾಗಿ ಎರಡೂ ಕಡೆಯಿಂದ ಯುದ್ಧ ಘೋಷಣೆಯಾಗಿದೆ. ಮಾಸ್ತರ್ ಹಾಕಿದ ಬೇಲಿಯನ್ನು ಪಿಡಿಒ ತೆಗೆಯೋದು, ಪಿಡಿಒ ಹಾಕಿದ ಬೇಲಿಯನ್ನು ಮಾಸ್ತರ್ ತೆಗೆಯೋದು ದಿನಾ ನಡೆಯುತ್ತಲೇ ಇದೆ. ಅದರಲ್ಲೂ ಡೇಂಜರಸ್ ಏನೆಂದರೆ ಸೇನಾ ಜಮಾವಣೆ. ಬಾಲೇಶ್ವರದ ವಿವಾದಿತ ಜಾಗದಲ್ಲಿ ಎರಡೂ ಕಡೆಯಿಂದ ಪೆಟ್ಟಿಸ್ಟ್ ಗಳ ಜಮಾವಣೆಯಾಗುತ್ತಿದೆ. ಪಿಡಿಒ ಉಪ್ಪಿನಂಗಡಿ ಕಡೆಯಿಂದ ಆರು ಫೀಟಿನವರನ್ನು, ಐದು ಫೀಟಿನವರನ್ನು, ಮೂರು ಫೀಟಿನವರನ್ನು ಕರೆ ತಂದು ಮಾರ್ಚ್ ಫಾಸ್ಟ್ ಮಾಡಿಸಿದರೆ ಇತ್ತ ಮಾಸ್ತರ್ ಕಲ್ಲುಗುಡ್ಡೆಯ ತಲವಾರು ಸ್ಪೆಷಲಿಸ್ಟ್ ಗಳನ್ನು, ಚೂರಿ ಚಿಕ್ಕಣ್ಣನಗಳನ್ನು, ಕೋಲು ತಾಲೀಮಿನವರನ್ನು, ನೆರ್ಪೆಲ್ ಪಂಡಿತರನ್ನು ತಂದು ಶೇಖರಿಸುತ್ತಿದ್ದಾರೆ. ಈಗಾಗಲೇ ಕುಡುದು ಟೈಟಾಗಿ ಬಂದ ಎರಡೂ ಕಡೆಯ ಸೈನಿಕರು ಬಾಯ್ತುಂಬಾ ಬೈದುಕ್ಕೊಂಡು ಸೂಸು ಮಾಡಿ ಜಲಯುದ್ದವನ್ನೂ, ಕೋಳಿ ತಿಂದು ಗ್ಯಾಸ್ಟಿಕ್ ಹೆಚ್ಚಾಗಿ ವಾಯುದಾಳಿಯನ್ನೂ ಮುಗಿಸಿಯಾಗಿದೆ. ಇವರು ಇನ್ನು ಭೂ ಧಾಳಿ ಶುರು ಮಾಡ್ಕೊಂಡು ಒಂಜೆಕ್ ಒಂಜರೆ ಆಗುವ ಮೊದಲು ಕಡಬ ಪೊಲೀಸರು ಒಮ್ಮೆ ಇಬ್ಬರನ್ನೂ ಕರೆದು ಕುಂತು ಮಾತಾಡಿದರೆ ಒಳ್ಳೇದಿತ್ತು. ಇಲ್ಲದಿದ್ದರೆ ಓಪನರ್ ಗಳ ವಿಕೆಟ್ ಗ್ಯಾರೆಂಟಿ.
   ಅಲ್ಲ ಮಾರಾಯ್ರೆ ಒಬ್ಬ ಪಿಡಿಒ ಇನ್ನೊಬ್ಬ ಮಾಸ್ತರ್. ಇಬ್ಬರೂ ವಿದ್ಯಾವಂತರು. ಮಾಸ್ತರ್ ನಾಲಕ್ಕು ಮಕ್ಕಳಿಗೆ ಪಾಠ ಹೇಳಿ ಅವರನ್ನು ಸಮಾಜದ ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುವವರು, ಅದೇ ಪಿಡಿಒ ಇಡೀ ಒಂದು ಗ್ರಾಮ ಪಂಚಾಯಿತಿಯ ಆಡಳಿತ ನಡೆಸಿ ರಾಜ್ಯವನ್ನು ರಾಮರಾಜ್ಯ ಮಾಡುವಲ್ಲಿ ಗ್ರಾಮಗಳನ್ನು ತಂದು ಮುಂಚೂಣಿಯಲ್ಲಿ ನಿಲ್ಲಿಸುವವರು. ಇವರೇ ತುಂಡು ಜಾಗಕ್ಕಾಗಿ ಹೀಗೆಲ್ಲ ಕತ್ತಿ ಕತ್ತಿ ಹಿಡಕೊಂಡರೆ ಉಳಿದವರ ಕತೆ ಏನು? ವಾಯುಧಾಳಿ, ಜಲ ಧಾಳಿ ನಡೆಸಿದವರಿಗೂ ಇವರಿಗೂ ವ್ಯತ್ಯಾಸವೇ ಇಲ್ಲವೇ?
   ಕೊನೆಯದಾಗಿ ಒಂದು ಜೋಕು.   ಉಪ್ಪಿನಂಗಡಿಯಿಂದ ಬಂದ ಆರು ಫೀಟಿನವರು, ಐದು ಫೀಟಿನವರ ಮಧ್ಯೆ ಈ ಮೂರು ಫೀಟಿನವರು ಯಾಕೆ ಎಂದು ನಮ್ಮ ಮಾಹಿತಿದಾರರಲ್ಲಿ ಕೇಳಿದೆ. ಅದು ಆರು ಫೀಟಿನವರು ಮತ್ತು ಐದು ಫೀಟಿನವರ ಮಧ್ಯೆ ಫೈಟಿಂಗ್ ಆಗುವಾಗ ಮೂರು ಫೀಟಿನವರು ಅಡಿಯಿಂದ ಬಂದು ಕೈ ಹಾಕಲಂತೆ. ಇದು ಲೋಕಲ್ ಫೈಟಿಂಗ್ ನ ಹೊಸ ಟೆಕ್ನಿಕ್ ಅಂತೆ.  ಹೇ.... ಪ್ರಭು....!
   
      

  


   ಅವಳಿಗೆ ಅದೇ ವಹಿವಾಟು ಎಂದು ಹೇಳುತ್ತಿದ್ದಾರೆ. ಇದೇ ವಹಿವಾಟಿನಲ್ಲಿ ಅವಳು ಬಿಳಿನೆಲೆಯಲ್ಲೇ ಎರಡ್ಮೂರು ಸೈಟು, ಒಂದು ಲೋನಿನ ಟ್ಯಾಂಕರು, ಆಲ್ಟೋ ಕಾರು, ಗಾಳಿಯಲ್ಲಿ ಹೋಗ್ಲಿಕ್ಕೆ ಬುಲೆಟ್ ಬೈಕು, ಬಿ.ಸಿ ರೋಡಿನಲ್ಲಿ ಒಂದು ಮನೆ ಎಲ್ಲಾ ಮಾಡಿಕೊಂಡು ಹಾಯಾಗಿದ್ದಾಳೆ ಎಂದು ತಿಳಿದುಬಂದಿದೆ. ಕೆಲವೊಂದು ಗಾರ್ಡ್ ಗಳು, ಲೈನ್ ಮೆನ್ ಗಳು ಹಾಗೂ ಮಸ್ಕ್ ಮಸ್ಕ್ ಉದ್ಯಮಿಗಳು ಇವಳ ಕಾಲೋನಿಯ ಅಜೀವ ಚಂದಾದಾರರು. ಇದು  ಕಡಬ ತಾಲೂಕು, ಬಿಳಿನೆಲೆ ಗ್ರಾಮದ ಜನತಾ ಕಾಲೋನಿ ಕತೆ.




   ಅಲ್ಲಿ ಬಿಳಿನೆಲೆ ಜನತಾ ಕಾಲೋನಿಯಲ್ಲಿ ಒಂದು ಜಿಂಕೆ ಕಣ್ಣಿನ ಆಂಟಿಯಿದೆ. ಕೋತಿ ತಾನೂ ಕೆಟ್ಟಿತ್ತಲ್ಲದೆ ವನವನ್ನೆಲ್ಲ ಕೆಡಿಸಿತು ಎಂಬಂತೆ ಈ ಆಂಟಿ ಇಡೀ ಬಿಳಿನೆಲೆಯ ಪಡ್ಡೆಗಳ ಪಾಲಿಗೆ ಸಾಕ್ಷಾತ್ ಐಶೂ, ದೀಪೀ, ಪ್ರೀತಿ, ಕರಿನೂ. ದುಡ್ಡಿಗಾಗಿ ಈ ಆಂಟಿ ಆಡದ ಆಟಗಳಿಲ್ಲ ಮಾಡದ ನಾಟಕಗಳಿಲ್ಲ. ಹಾಗೆಂದು ಈ ಆಂಟಿ ಗಂಡ ಹೆಚ್ಚಾಗಿ ಟ್ಯಾಂಕರು ಅದು ಇದು ಎಂದು ಹೊರಗೆ ಜಾಸ್ತಿ ಇರುವ ಕಾರಣ ಇವಳ ಮನೆಗೆ ಬಿನ್ನೆರ್ ಬರುವುದು ವಿಪರೀತವಾಗಿ ಹೋಗಿತ್ತು. ಬಿನ್ನೆರ್ ಬರುವುದು ಡಿನ್ನರ್ ಮಾಡುವುದು ಆಂಟಿಯ ನಿತ್ಯ ಕಾಯಕವಾಗಿಯೇ ಹೋಗಿತ್ತು. ಇಲ್ಲಿಗೆ ಬಂದ ಬಿನ್ನೆರ್ ಗಳು ಕೋಮಣ ಸಹ ಕಳೆದುಕೊಂಡು ದಿಕ್ಕಾಪಾಲಾಗಿ ಹೋದ ಕತೆಗಳಿವೆ.ಈ ವಿಷಯದಲ್ಲಿ ಆಂಟಿ ಗಂಡ ಗೊತ್ತಿದ್ದೂ ಕಣ್ಣು ಮುಚ್ಚಿಕೊಂಡು ಆಂಟಿಯ ಎಲ್ಲಾ ಪುಣ್ಯ ಕಾರ್ಯಗಳಿಗೆ ಜೆಡ್ ಪ್ಲಸ್ ಕೊಡುತ್ತಿದ್ದಾನೆ ಎಂದು ತಿಳಿದುಬಂದಿದೆ.
   ಹಾಗೆಂದು ಈ ಆಂಟಿಯನ್ನು ಬಿಳಿನೆಲೆ ಲೆವೆಲ್ ನಲ್ಲಿ ನೋಡಿದರೆ ಅವಳು ಮಾಡಿದ್ದು ದೊಡ್ಡ ಸಾಧನೆಯೇ. ಇಲ್ಲದಿದ್ದರೆ ಜನತಾ ಕಾಲೋನಿಯ ಒಂದು ಜೀವ ಏನೇನೂ ಉತ್ಪತ್ತಿ ಇಲ್ಲದೆ ಕೇವಲ ದುಡ್ಡು ಮಾತ್ರ ಉತ್ಪತ್ತಿ ಮಾಡಿದ್ದು ಯಾವ ಮೂಲದಿಂದ, ಯಾವ ಜಾದಿನಿಂದ ಎಂದು ಯಾವ ಅಷ್ಟಮಂಗಲದಲ್ಲೂ ಗೊತ್ತಾಗದ ವಿಷಯ. ಹಾಗೆ ಈ ಜಿಂಕೆ ಕಣ್ಣಿನ ಆಂಟಿಯ ಬಿನ್ನೆರ್ ಗಳಲ್ಲಿ ಮರ್ಧಾಳದ ಹುಡುಗನೂ ಒಬ್ಬ. ಅವನಿಗೂ ಆಂಟಿಗೂ ಅದೇನು ಪರಿಚಯನೋ, ಅಥವಾ ಯಾರಾದರೂ ಪರಿಚಯ ಮಾಡಿಸಿದರಾ ಅಥವಾ ಅವನೇ ಸೌಂಡು ಕೇಳಿ ಬಂದನಾ ಗೊತ್ತಿಲ್ಲ. ಅಂತೂ ಇಂತೂ  ಕಾಲೋನಿಗೆ ಬಂದು ಬಿದ್ದಿದ್ದ. ರಾತ್ರಿ ಹಗಲು, ರಾತ್ರಿ ಹಗಲು ಆಯಿತು. ಮುಗಿಸಿ ಹೊರಟು ಹೋದ. ಮರುದಿನವೇ ಆಂಟಿ ಫೋನು ಮರ್ಧಾಳದ ಹುಡುಗನಿಗೆ. " ಕೋಡೆದ ನಿನ್ನ ಗೊಬ್ಬು ಪೂರಾ ವೀಡಿಯೋ ಆಗಿದೆ.   ಎರಡು ಲಕ್ಷ ತಂದು ಕೊಡು ಇಲ್ಲದಿದ್ದರೆ ರೇಪ್ ಮಾಡಿದಿ ಎಂದು ಕಂಪ್ಲೈಂಟ್ ಕೊಡುತ್ತೇನೆ" ಎಂದು. ಹುಡುಗ ಅಲ್ಕಿ ಬಿದ್ದ. ಯಾಕೆಂದರೆ ಸುಖ ಯಾವಾಗಲೂ ದುಃಖ ತಂದು ಕೊಡುವ ವಾಹಕ ಅಂತ ಅವನಿಗೆ ಗೊತ್ತೇ ಇರಲಿಲ್ಲ. ಬಿಳಿನೆಲೆ ಆಂಟಿಗೆ ಎರಡು ಲಕ್ಷ ಕೊಡಲು ಅವನತ್ರ ಏನಿದೆ? ಕೋಮಣವೂ ಇಲ್ಲ. ಆದರೂ ಆಂಟಿಗೆ ದಮ್ಮಯ್ಯ ಅಂದು ಬಿಟ್ಟ. ಡೇಟ್ ತಗೊಂಡ. ಡೇಟ್ ಬಾರಾಯಿತು, ಶಾರದಾ ಕೆಲಂಡರಿನ ಎಲ್ಲಾ ಡೇಟುಗಳು ಮುಗಿಯಿತು. ಆರೋಗ್ಯ ಸಮಸ್ಯೆ, ಪಿತ್ತ ನೆತ್ತಿಕಂಡೆಗಳು ಮುಗಿದರೂ ಹುಡುಗನ ಕೈಲೀ ದುಡ್ಡಾಗಲಿಲ್ಲ. ಕಡೆಗೊಂದು ದಿನ ಆಂಟಿ ಲಾಸ್ಟ್ ಡೇಟ್ ಕೊಟ್ಟ ದಿನ ಹುಡುಗ ಯಾರದ್ದೋ ಹಿಡಿಯಬಾರದ್ದನ್ನೆಲ್ಲ ಹಿಡಿದು ಕೊಂಡೋಗಿ ಆಂಟಿಗೆ ಐವತ್ತು ಕೊಟ್ಟ. ಐವ ಕೊರ್ಯೆ ಮಗ್ಗೇ..


   ನಂತರ ಮುಂದಿನ ಕಂತು. ಒಂದೂವರೆ ಲಕ್ಷ ಆಂಟಿಗೆ ಬಾಕಿ.ಮರ್ಧಾಳದ ಹುಡುಗ ಕಂಗಾಲಾಗಿ ಹೋದ. ರೈಲು, ಎಂಡ್ರೆಕ್ಸ್, ಎಲಿಪಾಸನ್, ಕೆರೆ, ಗೂವೆಲ್, ಕುಕ್ಕುದ ಗೆಲ್, ನೈಲಾನ್ ಹಗ್ಗ ಮುಂತಾದ ಪರಿಕರಗಳ ಬಗ್ಗೆ ಕೂಡ ಒಂದು ರೌಂಡು ಯೋಚಿಸಿ ಬಿಟ್ಟು ಕಡೆಗೊಂದು ದಿನ ಆಂಟಿ ವಿಷಯ ತನ್ನ ಫ್ರೆಂಡ್ ಗೆ ಹೇಳಿ ಬಿಟ್ಟ. ಅವನು ಬಾಕಿ ಹುಡುಗರಿಗೆ ವಿಸಯ ಹೇಳಿ ಕಡೆಗೆ ಮ್ಯಾಟರು ಯಾರೋ ಪಂಚಾತಿಕೆ ಮಾಡುವವರ ಅಂಗಳಕ್ಕೆ ಮುಟ್ಟಿತು. ನಂತರ ಅವರು ಆಂಟಿ ಮತ್ತು ಆಂಟಿ ಗಂಡನನ್ನು ತರಿಸಿ, ಹುಡುಗನ ಕೈಯಲ್ಲಿ ಹನಿಟ್ರ್ಯಾಪ್ ಕೇಸ್ ಕೊಡಿಸುತ್ತೇನೆಂದು ಹೆದರಿಸಿ, ಆಂಟಿ ಮೊಬೈಲ್ ನಲ್ಲಿದ್ದ ಅವರ ಕ್ರೀಡಾಕೂಟದ ವೀಡಿಯೋ ಡಿಲೀಟ್ ಮಾಡಿಸಿ ಪಂಚಾತಿಕೆ ಮುಗಿಸಿದ್ದರು ಎಂದು ತಿಳಿದುಬಂದಿದೆ. ಇದೀಗ ಆಂಟಿ ಬಿಳಿನೆಲೆ ಬಿಟ್ಟಿದ್ದು ಬಿ.ಸಿ ರೋಡ್ ಕಡೆ ಬಿನ್ನೆರ್ ಕಟ್ಟಿದ್ದಾಳೆಂದು ಸುದ್ದಿ.
   ಬಿಳಿನೆಲೆ ಆಂಟಿ ಇಷ್ಟೆಲ್ಲಾ ದುಡ್ಡು ಮಾಡಿದ್ದು ಇದೇ ರೀತಿಯಿಂದ ಎಂದು ಜನ ಈಗ ಮಾತಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಬಿನ್ನೆರ್ ಗಳ ವಿವಿಧ ಲೀಲೆಗಳ, ಅವರ ಹುಚ್ಚಾಟಗಳ, ವಿಕೃತಿಗಳ, ಧಂ ಧೂಂ ದರುಬುರುಗಳ ಶೂಟಿಂಗ್ ಮಾಡಿ ಈ ಆಂಟಿ ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ದುಡ್ಡು ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇನ್ನೊಂದು ಮಾಹಿತಿ ಪ್ರಕಾರ ಅವಳು ವಿಡಿಯೋ ಕಾಲ್/ಚಾಟಿಂಗ್ ಮುಖಾಂತರವೂ ಪಡ್ಡೆಗಳ ಕಿಸೆ ಖಾಲಿ ಮಾಡಿರುವ ಬಗ್ಗೆ ಮಾಹಿತಿ ಇದೆ. ಸದ್ಯಕ್ಕೆ ಆಂಟಿ ಬಿ.ಸಿ ರೋಡ್ ಕಡೆ ಎಲ್ಲಿಗೋ ಶಿಫ್ಟ್ ಆಗಿದೆ ಎಂದು ಸುದ್ದಿ ಇದೆ. ಅಷ್ಟರ ಮಟ್ಟಿಗೆ ಬಿಳಿನೆಲೆ ಸೇಫ್.
      

 


   ಬೇತೆ ಯಾರೂ ತೆಗೆಯಬಾರದು, ತಾನು ಮಾತ್ರ ತೆಗೆಯಬೇಕು, ಬೇರೆಯವರು ತೆಗೆದರೆ ಅಪ್ಪಗ ಫಾರೆಸ್ಟ್ ಇಲಾಖೆಗೆ ಚಾಡಿ ಹೇಳಿ ಹಿಡಿಸುವುದು. ಇದು‌ ಕಡಬ ಕೊಂಬಾರಿನ ಪೊಯ್ಯೆ ಕಳ್ಳರ ಸ್ಟೈಲು. ಅಲ್ಲಿ ಗುಂಡ್ಯದ ಕೆಳಗಿನ ನದಿ, ಸಾರ್, ತೋಡು ಹೀಗೆ ಎಲ್ಲಾ ತಮ್ಮ ಡ್ಯಾಡಿ ಪ್ರಾಪರ್ಟಿ ಎಂಬಂತೆ ವರ್ತಿಸುತ್ತಿರುವ ಕೊಂಬಾರಿನ ಪೊಯ್ಯೆ ಕಳ್ಳರು ವರ್ಷವಿಡೀ ಕಾಡಿನಲ್ಲಿ, ಗುಂಡ್ಯಹೊಳೆಯ ತಟದಲ್ಲಿಯೇ ದಿನ ಕಳೆದು ಬಿಡುತ್ತಾರೆ.




   ಇದು ಕೊಂಬಾರು. ಕಾಡು ಅಂದರೆ ಕಾಡು ಇಲ್ಲಿ. ಶಿರಾಡಿ ಘಾಟ್ ನ ತಪ್ಪಲಿನಲ್ಲಿದೆ. ಮರಗಳ್ಳರಿಗೆ ಸ್ವರ್ಗ ಇದ್ದ ಹಾಗೆ. ಇನ್ನು ಪೊಯ್ಯೆ ಕಳ್ಳರೂ  ತಮ್ಮ ಫೀಲ್ಡ್ ನಲ್ಲಿ ಸಿಕ್ಸ್, ಫೋರ್ ಎತ್ತುತ್ತಾ ಇರುತ್ತವೆ. ಆದರೆ ಇಲ್ಲಿ ಒಂದು ಮರಳು ಮಾಫಿಯಾ ಇದೆ. ಇಲ್ಲಿ ಮರಳು ಆ ಜನ ಮಾತ್ರ ತೆಗೆಯಬೇಕೆಂದು ಅಲಿಖಿತ ಕಾನೂನು ಇದೆ. ಅರಣ್ಯ ಇಲಾಖೆಯನ್ನು ಬೆಂಡ್ ಮಾಡಿ, ಅವರಿಗೆ ಬಡಿಸಿ ಕಾಡಿನೊಳಗಿಂದ ಮರಳು ಲೋಡ್ ಆಗುತ್ತಿದೆ ಎಂದು ತಿಳಿದುಬಂದಿದೆ. ಗುಂಡ್ಯ, ಕೆಂಜಾಳ, ಕಾಪಾರ್ ಮುಂತಾದ ಕಡೆಗಳಿಂದ ಪೊಯ್ಯೆ ಟಿಪ್ಪರ್ ಹತ್ತುತ್ತಿದೆ. ಈ ಬಗ್ಗೆ ವಿಚಾರಿಸಿದರೆ ದೊಡ್ಡ ದೊಡ್ಡವರಿಗೆ ಕೊಡಲಾಗುತ್ತಿದೆ ಎಂಬ ಮಾಹಿತಿ ಇದೆ. ಈ ದೊಡ್ಡ ದೊಡ್ಡವರು ಯಾರು ಎಂದು ಗುಂಡ್ಯ ಕಾಡಿನ ಪ್ರತಿ ಮಂಗನಿಗೂ ಗೊತ್ತಿರುವ ಸಂಗತಿ. ಪಾಪದವನು ಒಂದು ಬಟ್ಟಿ ಪೊಯ್ಯೆ ತೆಗೆದರೂ ಗರಂ ಆಗುವ ಈ ಕೊಂಬಾರಿನ ಪೊಯ್ಯೆ ಮಾಫಿಯಾದ ವಿಷಯ ಒಮ್ಮೆ ದಕ್ಷಿಣ ಕನ್ನಡ ಪೋಲಿಸ್ ವರಿಷ್ಠನ ಟೇಬಲ್ ಗೆ ಮುಟ್ಟಿದರೆ ಅವರು ಚಳಿ ಬಿಡಿಸುತ್ತಿದ್ದರು.


   
      



   ಹಾಗೆಂದು ಸುದೆಗಳಿಂದ ಪೊಯ್ಯೆ ತೆಗೆಯಬಾರದೆಂದು ಅದ್ಯಾವ ಲೋಫರ್ ನನ್ಮಗ ಹೇಳಿದನೋ ಗೊತ್ತಿಲ್ಲ ಅಂತೂ ಇಂತೂ ಮನೆ ಕಟ್ಟುವ ಕುಂತಿ ಮಕ್ಕಳಿಗಂತೂ ಪೊಯ್ಯೆಗೆ ರೇಟಾಗಿ ಮರತ್ತಡಿಯಲ್ಲಿ ಮಲಗುವ ಪರಿಸ್ಥಿತಿ ಬರುವುದಂತೂ ಗ್ಯಾರೆಂಟಿ. ಇದೀಗ ಸರ್ಕಾರ ಮತ್ತು ಪೊಯ್ಯೆ ಕಳ್ಳರ ನಡುವೆ ಒಯ್ತಬುಡಿ ತಾರಕಕ್ಕೇರಿದ್ದು ಪೊಯ್ಯೆಗೆ ಬಂಗಾರದ ರೇಟಾಗಿದೆ. ಸದ್ಯಕ್ಕೆ ಪೊಯ್ಯೆ ರಾಜಕೀಯ ಮತ್ತೇ ಮತ್ತೇ ಬಿಸಿಯಾಗುತ್ತಿದ್ದು ಒಬ್ಬರನ್ನೊಬ್ಬರು ಫಿಕ್ಸಿಂಗ್ ಮಾಡುವಲ್ಲಿ ತನಕ ಬಂದು ನಿಂತಿದೆ. ಇದೀಗ ಇದೇ ಪೊಯ್ಯೆ ವಿಷಯದಲ್ಲಿ ಮೊನ್ನೆ ಪುತ್ತೂರು ಎಪಿಎಂಸಿ ಮಾಜೀ ಅಧ್ಯಕ್ಷ, ದೇಶಭಕ್ತರ ಗಡಣದ ಪವರ್ ಫುಲ್ ಲೀಡರ್ ದಿನೇಶ್ ಮೆದು ಮೇಲೆ ಅನಾವಶ್ಯಕವಾಗಿ, ರಾಜಕೀಯ ಪ್ರೇರಿತವಾಗಿ ಐದು ಟೈಟ್ ಸೆಕ್ಷನ್ ಹಾಕಿ ಕೇಸು ಜಡಿಯಲಾಗಿದೆ. ಇದರ ಹಿಂದೆ ಪುತ್ತೂರಿನ ಕಾಣದ ಕೈಗಳ ಕೈಚಳಕ ಇದೆ ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿದೆ. ಇದಕ್ಕೆ ಪರಿಹಾರ ಮಾತ್ರ ದೇಶ ಭಕ್ತರಿಗೆ ಅಧಿಕಾರ ಸಿಕ್ಕಿದ ಮೇಲೆ ಕ್ಷಿಪಣಿ ಗುರಿಯ ಗತಿ ಬದಲಾಯಿಸಿದರೆ ಮಾತ್ರ ಸಾಧ್ಯ ಎಂದು ತಿಳಿದುಬಂದಿದೆ.



ದಿನೇಶ್ ಮೆದು
     ಹಾಗೆಂದು ಅಲ್ಲಿ ಕಡಬ ತಾಲೂಕು ಕುದ್ಮಾರು ಗ್ರಾಮದ ನೂಜಿಯಲ್ಲಿ ಪೊಯ್ಯೆ ತೆಗೆಯುವ ಕೆಲಸ ಇಂದು ನಿನ್ನೆಯದಲ್ಲ. ಅಲ್ಲಿ ಚೆನ್ನಪ್ಪಣ್ಣನ ಪಟ್ಟಾ ಜಾಗದಿಂದ ಮಾರ್ಗ ಮಾಡಿಕ್ಕೊಂಡು ಕುಮಾರಧಾರದಿಂದ ಪೊಯ್ಯೆ ತೆಗೆಯಲಾಗುತ್ತಿತ್ತು. ಆಮೇಲೆ ಸರ್ಕಾರ ಪೊಯ್ಯೆ ತೆಗೆಯಬಾರದೆಂದು ಚೆನ್ನಪ್ಪಣ್ಣನಿಗೆ ವಾರ್ನ್ ಮಾಡಿದ ಮೇಲೆ ಚೆನ್ನಪ್ಪಣ್ಣ ಕುಮಾರಧಾರದಲ್ಲಿ ಒಮ್ಮೆ ಮುಳುಗೆದ್ದು ಪೊಯ್ಯೆ ವಹಿವಾಟು ನಿಲ್ಲಿಸಿ ಬೇತೆ ಬೇತೆ ವ್ಯವಹಾರಗಳಿಗೆ ಶಿಫ್ಟ್ ಆಗಿದ್ದರು. ಇದೀಗ ಬರೆಪ್ಪಾಡಿ ಪಂಚಲಿಂಗೇಶ್ವರ  ಮತ್ತು ಕೇಪುಳೇಶ್ವರ ದೇವರುಗಳಿಗೆ ಒಂದು ಸುಂದರ ಆಲಯ ನಿರ್ಮಿಸುವರೇ ತುಂಬಾ ಲೋಡ್ ಪೊಯ್ಯೆ ಬೇಕಾಗಿತ್ತು. ಆಗ ಕಂಡಿದ್ದು ನೂಜಿ ಚೆನ್ನಪ್ಪಣ್ಣನ ಜಾಗದಲ್ಲಿದ್ದ ಸೀಝ್ ಆದ ಪೊಯ್ಯೆ.


   ಹಾಗೆಂದು ಸರ್ಕಾರ ಚೆನ್ನಪ್ಪಣ್ಣನ ಪೊಯ್ಯೆ ವಹಿವಾಟು ಬ್ಯಾನ್ ಮಾಡುವ ಮೊದಲು ಕಳೆದ ಅರೆಗ್ಗಲದಲ್ಲಿ‌ ಅವರ ಎಷ್ಟೋ ಲೋಡ್ ನದಿ ದಂಡೆಯಲ್ಲಿ ಸ್ಟಾಕ್ ಮಾಡಿದ್ದ ಪೊಯ್ಯೆ ಸೀಝ್ ಮಾಡಿತ್ತು. ಈ ಸೀಝ್ ಮಾಡಿದ ಪೊಯ್ಯೆ ಬಗ್ಗೆ ಸರಕಾರದ ಕಾನೂನು ಏನಿದೆ ಅಂದರೆ ಸಾರ್ವಜನಿಕ ಕೆಲಸಗಳಿಗೆ, ಸರ್ಕಾರಿ ಕೆಲಸಗಳಿಗೆ, ಗುಡಿ ಗೋಪುರಗಳ ನಿರ್ಮಾಣಗಳಿಗೆ ಈ ಸೀಝ್ ಮಾಡಿದ ಪೊಯ್ಯೆಯನ್ನು ಸರ್ಕಾರಕ್ಕೆ ಪೆನಾಲ್ಟಿ ಕಟ್ಟಿ ತೆಗೆಯ ಬಹುದೆಂದು ನಿಯಮಗಳಿವೆ, ಸುತ್ತೋಲೆಗಳಿವೆ. ಹಾಗೇ ಬರೆಪ್ಪಾಡಿ  ಪಂಚಲಿಂಗೇಶ್ವರ ದೇವಸ್ಥಾನದ ವರಿಗೆ ಪೊಯ್ಯೆ ಬೇಕಿತ್ತಲ್ಲ ಅವರು ಪೊಯ್ಯೆ ಹುಡುಕಲಾಗಿ ಹತ್ತಿರದಲ್ಲೇ ಇರುವ ಚೆನ್ನಪ್ಪಣ್ಣನಲ್ಲಿ ಈ ಬಗ್ಗೆ ವಿಚಾರಿಸಿದ್ದರು. ಅದಕ್ಕೆ ಚೆನ್ನಪ್ಪಣ್ಣ ಇಂಚಿಂಚ ಎಂದು ಕತೆ ಹೇಳಿ ದೇವಸ್ಥಾನದ ಲೆಟರ್ ಇದ್ದರೆ ಪೆನಾಲ್ಟಿ ಕಟ್ಟಿ ಪೊಯ್ಯೆ ತೆಗೆದು ಕೊಡ ಬಹುದು ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿದ್ದ ದೇವಸ್ಥಾನದವರು ದೇವಸ್ಥಾನದ ಕಾಮಗಾರಿಗಳ ಜರೂರತ್ತಿಗೆ ಪೊಯ್ಯೆ ಬೇಕೆಂದು ಲೆಟಲ್ ಕೊಟ್ಟಿದ್ದರು. ಆ ಲೆಟರ್ ಆಧಾರದಲ್ಲಿ ಚೆನ್ನಪ್ಪಣ್ಣ ಗಣಿ ಇಲಾಖೆಗೆ, ಕಂದಾಯದವರಿಗೆ ರಾಯಲ್ಟಿ ಪೆನಾಲ್ಟಿ ಸಾವು ಸುಡ್ಗಡ್ ಎಲ್ಲಾ ಕಟ್ಟಿಯೇ ಸುದೆಗೆ ಇಳಿದಿದ್ದು. ಈಗ ನೋಡಿದರೆ ಅದೇ ಪೆನಾಲ್ಟಿ ಕಟ್ಟಿ ತೆಗೆವ ಪೊಯ್ಯೆ ಅಡ್ಡೆ ಮೇಲೆ ಪಿದಾಯಿದ ಪೋಲಿಸ್ತಕುಲು ಬಂದು ರೈಡು ಬಿದ್ದು ಕೋಟಿ ತನಕ ಬೆಲೆ ಬಾಳುವ ಸೊತ್ತುಗಳನ್ನು ಸೀಝ್ ಮಾಡಿದ್ದಾರೆ. ಹಾಗಾದರೆ ಚೆನ್ನಪ್ಪಣ್ಣ ಗಣಿ ಇಲಾಖೆಗೆ, ಕಂದಾಯ ಇಲಾಖೆ ಗೆ ಕಟ್ಟಿದ ಪೆನಾಲ್ಟಿ ಏನಾಯ್ತು? ಅವರು ಕೊಟ್ಟ ಪರ್ಮಿಷನ್ ಎಲ್ಲಿ ಹೋಯ್ತು?
  ಹಾಗೆಂದು ಚೆನ್ನಪ್ಪಣ್ಣನ ರಾಯಲ್ಟಿ ಕಟ್ಟಿದ ಪೊಯ್ಯೆ ಅಡ್ಡೆ ಮೇಲೆ ಪಿದಾಯಿದ ಪೋಲಿಸ್ತಕುಲು ರೈಡು ಬೀಳಲೂ ಒಂದು ಚಿಕ್ಕ ಕಾರಣ ಇದೆ. ಅದರಲ್ಲೂ ಗಣಿ ನಿಯಮ ಏನೆಂದರೆ ಇಂಥ ಪೆನಾಲ್ಟಿ ಕೇಸುಗಳಲ್ಲಿ ಮೊದಲು ಇರ್ವ ಲೋಡ್ ಪೊಯ್ಯೆ ತೆಗೆಯಲು ಮಾತ್ರ ಪರ್ಮಿಟ್ ಕೊಡಲಾಗುತ್ತದೆ ಮತ್ತೆ "ಬುಕ್ಕ ಕೊರ್ಕ" ಎಂದು ಕಂದಾಯ ಇಲಾಖೆ ಹೇಳುತ್ತದೆ. ಅದರಲ್ಲೂ ಇನ್ನೊಂದು ಗಣಿ ನಿಯಮ ಏನೆಂದರೆ ಕುರುಕ್ಷೇತ್ರದ ಯುದ್ಧದ ಹಾಗೆ ಸೂರ್ಯ ಹುಟ್ಟಿದ ಮೇಲೆಯೇ ಸುದೆಗೆ ಇಳಿಯ ಬೇಕು ಮತ್ತು ಸೂರ್ಯ ಮುಳುಗುವ ಮೊದಲೇ ಸುದೆಯಿಂದ ಹತ್ತಬೇಕು ಎಂಬ ನಿಯಮ ಇದೆ. ಆದರೆ ಮೊನ್ನೆ ಚೆನ್ನಪ್ಪಣ್ಣನ ಬ್ಯಾಡ್ ಲಕ್ಕಿಗೆ ಪಿದಾಯಿದ ಪೋಲಿಸ್ತಕುಲು ರೈಡು ಬೀಳುವಾಗ ಪೋಲಿಸರಿಗೆ ತೋರಿಸಲು ಚೆನ್ನಪ್ಪಣ್ಣನಲ್ಲಿ ಒಂದು ತುಂಡು ಸೂರ್ಯ ಕೂಡ ಆಕಾಶದಲ್ಲಿರಲಿಲ್ಲ. ಸಂಪೂರ್ಣವಾಗಿ ಕತ್ತಲಾಗಿ ಮೂಡಾಯಿಯಲ್ಲಿ ಚಂದಿರ ಆಫೀಸಿಗೆ ಹೊರಟಿದ್ದ.  ಪೋಲಿಸರಿಗೆ ಅಷ್ಟು ಸಾಕಿತ್ತು. ಪೊಯ್ಯೆ ಟೀಮನ್ನು ಆಲೌಟ್ ಮಾಡಿ ಬಿಟ್ಟರು.


   ಹಾಗೆಂದು ಸದ್ರಿ ಕೇಸಲ್ಲಿ ಅಷ್ಟು ಸಾಕಿತ್ತು. ಎರಡು ಲಕ್ಷ ಚಿಲ್ರೆ ಪೆನಾಲ್ಟಿ ಕಟ್ಟಿದ್ದ ಚೆನ್ನಪ್ಪಣ್ಣ ನೈಟ್ ಪೊಯ್ಯೆ ತೆಗೆದರೆಂದು ಅವರ ಅಡ್ಡೆ ಮೇಲೆ ಧಾಳಿ, ಅವರ ಟಿಪ್ಪರ್ ಗಳು, ಹಿಟಾಚಿಗಳನ್ನು ಒಳಗೆ ಇಡೋದು, ಅವರ ಮೇಲೆ ಟೈಟ್ ಕೇಸು ಹಾಕೋದು ಇಷ್ಟು ಮಾಮೂಲು ಪ್ರಕ್ರಿಯೆ. ಅಗೆಲು ಸಿಗದ ಭೂತಗಳು ಹೀಗೆಲ್ಲ ಮಾಡಿಯೇ ಮಾಡುತ್ತದೆ. ಆದರೆ ಈ ಕೇಸಿನಲ್ಲಿ ದಿನೇಶ್ ಮೆದು ಮೇಲೂ ಯಾಕೆ ಎಫ್ಐಆರ್?  ಪಿದಾಯಿದ ಪೋಲಿಸ್ತಕುಲು ಅವರನ್ನು ಕೊಂಡೋಗಲು ಹುಡುಕಿದ್ದು, ಅವರ ಮೆದು ಮನೆ ಮೇಲೆ ರೈಡು ಬಿದ್ದಿದ್ದು ಯಾಕೆ ಅಂತಲೇ ಯಾರಿಗೂ ಶುರುವಿಗೆ ಅರ್ಥ ಆಗಿರಲಿಲ್ಲ. ಆದರೆ ಪ್ರಬಲ ಒಕ್ಕಲಿಗ  ನಾಯಕ ದಿನೇಶ್ ಮೆದುವನ್ನು ಈಗಲೇ ಚಿವುಟಿದರೆ ಮುಂದಿನ ಓಟಿನಲ್ಲಿ ಒಕ್ಕಲಿಗ ನಾಯಕರು ಕಾಣೆಯಾಗಿದ್ದಾರೆ ಎಂದು ಡಂಗುರ ಹೊಡೆಯ ಬಹುದೆಂದು ಪುತ್ತೂರಿನ ಕಾಣದ ಕೈಗಳು ಮೆದುವನ್ನು ಫಿಕ್ಸಿಂಗ್ ಮಾಡುವಲ್ಲಿ ತೆರೆಯ ಹಿಂದೆ ಓಡಾಡಿದ ಹೆಜ್ಜೆ ಗುರುತುಗಳಿವೆ. ಪುತ್ತೂರು ಎಪಿಎಂಸಿ ಅಧ್ಯಕ್ಷರಾಗಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ, ದೇಶ ಭಕ್ತರ ಪಕ್ಷದ ಪವರ್ ಫುಲ್ ಲೀಡರ್ ಆಗಿ ಮೆದು ಪುತ್ತೂರು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಜನಪ್ರಿಯ ನಾಯಕ. ದಕ್ಷಿಣ ಕನ್ನಡ ಜಿಲ್ಲಾ ಮರಳು ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿಯೂ ಮೆದು ಚಿರಪರಿಚಿತರು. ಒಬ್ಬ ಧಾರ್ಮಿಕ ನಾಯಕನಾಗಿ, ಮರಳು ಸಂಘದ ಅಧ್ಯಕ್ಷನಾಗಿ ಬರೆಪ್ಪಾಡಿ ದೇವಸ್ಥಾನದವರಿಗೆ ಪೊಯ್ಯೆಗೆ ವ್ಯವಸ್ಥೆ ಮಾಡಿ ಕೊಡುವ ಲೀಗಲ್ ಜವಾಬ್ದಾರಿ ಹೊತ್ತು ಕೊಂಡಿದ್ದು ತಪ್ಪೇನಲ್ಲ. ಈ ಬಗ್ಗೆ ಚೆನ್ನಪ್ಪಣ್ಣನಿಗೆ ಗಣಿ ಇಲಾಖೆ, ಕಂದಾಯ ಇಲಾಖೆಯ ನಿಯಮಗಳ ಬಗ್ಗೆ ಮಾರ್ಗಸೂಚಿ ಹೇಳಿದ್ದು ಮತ್ತು ದೇವಸ್ಥಾನಕ್ಕೆ ಬೇಕಾಗಿ ಇಳಿದು ಕೆಲಸ ಮಾಡಿದ್ದ ಮೆದುವನ್ನು ಈ ಕೇಸಲ್ಲಿ ಫಿಕ್ಸಿಂಗ್ ಮಾಡಿದ್ದು ಅಕ್ಷಮ್ಯ. ಕೇವಲ ಮಾರ್ಗದರ್ಶನ ಮಾಡಿದ್ದಕ್ಕೆ ಈ ನಮೂನೆಯ ಫಿಕ್ಸಿಂಗ್ ಮಾಡುತ್ತಾರೆಂದರೆ ಕಾಣದ ಕೈಗಳ ಮೆಂಟಾಲೀಟಿ ಹೇಗಿರಬಹುದು ಎಂಬುದನ್ನು ನೀವೇ ಯೋಚಿಸಿ. ಇನ್ನು ಒಬ್ಬ ಎಪಿಎಂಸಿ ಮಾಜಿ ಅಧ್ಯಕ್ಷ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ, ಬಿಜೆಪಿಯ ಪ್ರಬಲ ನಾಯಕ ಪೋಲಿಸರು ಬಂದರೆಂದು ಓಡುವ ಪ್ರಮೇಯವೇ ಬರಲ್ಲ. ದಿನೇಶ್ ಮೆದು ಕೊಲೆ ಮಾಡಿಲ್ಲ, ಕೊಲೆ ಯತ್ನ ಮಾಡಿಲ್ಲ ,ರೇಪ್ ಮಾಡಿಲ್ಲ, ಸುಲಿಗೆ ಮಾಡಿಲ್ಲ, ವಂಚನೆ ಮಾಡಿಲ್ಲ ಮತ್ಯಾಕೆ ಪೋಲಿಸ್ ಬರುವಾಗ ಓಡಿ ಹೋಗಲಿ? ಓಡುವಾಗ ಕೈ ಮುರಿದು ಕೊಳ್ಳಲಿ. ಅದೆಲ್ಲ ಸುಳ್ಳು ಸುದ್ದಿ. ಟೋಟಲಿಯಾಗಿ ಹೇಳುವುದಾದರೆ ರಾಜಕೀಯ ಕಾರಣಗಳಿಗಾಗಿ ದಿನೇಶ್ ಮೆದುವನ್ನು ಈ ಕೇಸಿನಲ್ಲಿ ಫಿಕ್ಸಿಂಗ್ ಮಾಡಲಾಗಿದೆ.
   ಇನ್ನೊಂದು ವಿಷಯ ಏನೆಂದರೆ ಈ ಕೇಸಿನಲ್ಲಿ ಶಾಂತಿ ಮೊಗರು ಕಿಂಡಿ ಅಣೆಕಟ್ಟಿನ ಪಲಾಯಿ ತಪ್ಪಿಸಿದ ಮ್ಯಾಟರನ್ನೂ ಇವರ ತಲೆಗೆ ಕಟ್ಟಲಾಗಿದೆ. ಆದರೆ ಸತ್ಯ ಸಂಗತಿ ಏನೆಂದರೆ ಚೆನ್ನಪ್ಪಣ್ಣನ ಪೊಯ್ಯೆ ಅಡ್ಡೆ ಇರೋದು ಕಿಂಡಿ ಅಣೆಕಟ್ಟಿನ ಕೆಳಗಿನ ಭಾಗದಲ್ಲಿ. ಕೆಳಗಿನ ಭಾಗದವರಿಗೆ ಕಿಂಡಿ ಓಪನ್ ಆದರೇನೇ ಸಮಸ್ಯೆ. ಹಾಗಾಗಿ ಅವರಾಗಿಯೇ ಹೋಗಿ ಪಲಾಯಿ ತಪ್ಪಿಸಿ ಸೆಲ್ಫ್ ಸೂಸೈಡ್ ಮಾಡಿಕೊಳ್ಳಲು ಅವರಿಗೇನು ಕಂಕನಾಡಿಯ ಮರ್ಲ? ಕಿಂಡಿ ಅಣೆಕಟ್ಟಿನ ಮೇಲೆ ಪೊಯ್ಯೆ ತೆಗೆಯುವವರಿಗೆ ಅಣೆಕಟ್ಟಿನಲ್ಲಿ ನೀರು ನಿಂತರೆ ಪೊಯ್ಯೆ ದೆಪ್ಪೆರ ಭಾರೀ ಕಷ್ಟ. ಹಿನ್ನೀರಿನಲ್ಲಿ ಮುರ್ಕಿ ಪೊಯ್ಯೆ ತೆಗೆಯಬೇಕು. ಹಾಗಾಗಿ ಆಯೇರೆದ ಭಟ್ರು ಪಲಾಯಿ ತಪ್ಪಿಸಿದ್ದು ಎಂಬ ಗುಸುಗುಸು ಇದೆ.
      

                                                                       



   ಅಲ್ಲಿ ಗುತ್ತಿಗಾರು ಮೊಗ್ರದ ಪಡ್ಡೆಗಳಿಬ್ಬರಿಗೆ ಕಡಬ ಕೊಂತೂರುನಲ್ಲಿ ಪದಾನ ಬಿದ್ದಿದೆ ಗಡ. ಅದ್ಯಾರೋ ಕೊಂತೂರು ಅಲಂಗಾರಿನ ಮಿಡ್ಲೇಜ್ ಆಂಟಿಯ ಚಂಗಾಯಿ ಮಾಡಿಕ್ಕೊಂಡಿದ್ದ ಗುತ್ತಿಗಾರು ಮೊಗ್ರದ ಪಡ್ಡೆಗಳಿಬ್ಬರು ಮೊನ್ನೆ ಏಳು ತಾರೀಕಿಗೆ ಆಂಟಿ ಆಪರೇಷನ್ ಗೆ ದಿನ, ಘಳಿಗೆ, ಗುಳಿಗೆ ಎಲ್ಲಾ ರೆಡಿ ಮಾಡಿಕ್ಕೊಂಡಿದ್ದರು. ಅದರಂತೆ ಏಳು ತಾರೀಕಿಗೆ ಮೊಗ್ರದಿಂದ ಶುಚಿರ್ಭೂತರಾಗಿ ಹೊರಟ ಪಡ್ಡೆಗಳು ರಾತ್ರಿ ಊಟಕ್ಕೆ ಕೊಂತೂರು ತಲುಪಿದ್ದಾರೆ. ಅಲ್ಲಿ ಆಂಟಿ ಮನೆಗೆ ಡೈರೆಕ್ಟ್ ಎಂಟ್ರಿ ಕೊಟ್ಟ ಪಡ್ಡೆಗಳು ಆಂಟಿ ಗಂಡನಿಗೆ ಬೆಚ್ಚ ಬೆಚ್ಚ ಗೇರು ಬೀಜದ್ದು ಮತ್ತು ನಿಂಗೊಲು ಕೊಟ್ಟು ಬೆಂಚಿನಡಿಯಲ್ಲಿ ನಿದ್ರೆಗೆ ದೂಡಿ ಹಾಕಿದ್ದಾರೆ. ಆಂಟಿ ಗಂಡನಿಗೆ ಆರು ತಿಂಗಳು ಕಳೆದು ಏಳುವಷ್ಟು ಗಾಢ ನಿದ್ರೆ. ಅಲ್ಲಿಗೆ ಪಡ್ಡೆಗಳ ಲೈನ್ ಕ್ಲೀನ್.



   ಹಾಗೆ ಮೊಗ್ರ ಪಡ್ಡೆಗಳ ಲೈನ್ ಕ್ಲಿಯರ್ ಆಗುತ್ತಿದ್ದಂತೆ ಮನೆಯ ಎಲ್ಲಾ ಲೈಟುಗಳೂ ಸ್ವಿಚ್ ಆಫ್ ಆಗಿದೆ. ಆಂಟಿ ಮೇಲೆ ಇನ್ನೇನು ಮೊಗ್ರದ ಪಡ್ಡೆಗಳ ಜಂಟಿ ಕಾರ್ಯಾಚರಣೆ ಶುರುವಾಗಲಿತ್ತು. ಅಷ್ಟರಲ್ಲಿ ಅದ್ಯಾರೋ ಪಂಪನಿಗೆ ಸ್ವಿಚ್ ಹಾಕಲು ಹೋಗುವವರು ಆಂಟಿ ಜಾಲಿಗೆ ಬಂದಿದ್ದಾರೆ. ಮನೆಯೊಳಗಡೆಯಿಂದ ಗುಸ ಗುಸ, ಪಿಸ ಪಿಸ, ಕಿಲ ಕಿಲ, ಕುರು ಕುರು, ಜುಳು ಜುಳು ಮುಂತಾದ ಅನುಮಾನಾಸ್ಪದ ಶಬ್ದಗಳು ಕೇಳಿ ಬಂದ ಕಾರಣ ಪಂಪಿಗೆ ಸ್ವಿಚ್ ಹಾಕಲು ಹೊರಟವರಿಗೆ ಮನೆಯೊಳಗಡೆ ನಾಯಿ ಮಹಾತ್ಮೆ ನಡೆಯುತ್ತಿರುವ ಬಗ್ಗೆ ಕನ್ಫರ್ಮ್ ಆಗಿದೆ. ಕೂಡಲೇ ಅವರು ಅಕ್ಕಪಕ್ಕದ ಜನರನ್ನು ಸೇರಿಸಿ ಆಂಟಿ ಮನೆಯ ಬಾಗಿಲು ತಟ್ಟುತ್ತಾರೆ. ಆದರೆ ಅಷ್ಟರಲ್ಲಾಗಲೇ ತಮ್ಮ ಗೊಬ್ಬು ಹೊರಗಿನವರಿಗೆ ಗೊತ್ತಾಗಿದೆ ಎಂದು ಗೊತ್ತಾದ ತಕ್ಷಣ  ಮೊಗ್ರದ ಪಡ್ಡೆಗಳಿಬ್ಬರೂ ಆಂಟಿಯ   ಹಿಂದಿನ ಬಾಗಿಲಿನಿಂದ ಚಡ್ಡಿ ಸಿಕ್ಕಿಸಿಕೊಂಡು ತಾವು ಬಂದಿದ್ದ ಬೈಕನ್ನೂ ಬಿಟ್ಟು ಕತ್ತಲೆಗೆ ಪರಾರಿಯಾಗಿದ್ದಾರೆ. ಆದರೆ ಜನ ಬಿಡುತ್ತಾರ? ಆಂಟಿ ಮೊಬೈಲ್ ನಿಂದಲೇ ಪಡ್ಡೆಗಳಿಬ್ಬರಿಗೆ ಕಾಲ್ ಮಾಡಿಸಿ, ಅವರನ್ನು ವಾಪಾಸ್ ತರಿಸಿ ಶಾಲು ಹೊದಿಸಿ, ಮೂಸಂಬಿ ಕೊಟ್ಟು, ಗುಣಗಾನ ಪತ್ರ ಓದಿ ಸನ್ಮಾನ ಮಾಡಿ ಕಳಿಸಿಕೊಟ್ಟಿದ್ದಾರೆ. ಇಷ್ಟಾದರೂ ಕುಂಭಕರ್ಣನಿಗೆ ನಿದ್ದೆಗೆ ಏನೂ ಡಿಸ್ಟರ್ಬ್ ಆಗದೆ ಇದ್ದದ್ದು ವಿಪರ್ಯಾಸವೇ ಸರಿ.



      

                                                                    


     ಈ ಕುತ್ತಿ ಮೀಸೆಯ ಹುಡುಗರಿಗೆ ಇಷ್ಟು ದೊಡ್ಡ ಲೋಕ ಕಣ್ಣಿಗೆ ಕಾಣಲ್ಲ. ಆದರೆ ಚೂಡಿ ಮಾತ್ರ ರಫಕ್ಕನೆ ಬಂದು ಕಣ್ಣಿಗೇ ಬೀಳುತ್ತದೆ. ಒಂದು ಸಿಂಗಲ್ ಚೂಡಿಗಾಗಿ ಇದೇ ಕುತ್ತಿ ಮೀಸೆ ಹುಡುಗ್ರು ಥರ್ಡ್ ವಲ್ಡ್ ವಾರಿಗೂ ರೆಡಿ ರೆಡಿಯಾಗಿರುತ್ತಾರೆ. ಇದೀಗ ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಉಳಿಪು ಎಂಬಲ್ಲಿ ನಡೆದ ಮದುವೆ ನೈಯಲ್ಲಿ ಒಂದು ಚೂಡಿಗಾಗಿ ಫೈಟಿಂಗ್ ನಡೆದು ಕತ್ತಿ, ತಲವಾರು ಪ್ರದರ್ಶನ ಆಗಿದೆ. ಕಡಬ ಪೊಲೀಸರೂ ಕೂಡ ಕತೆಯಲ್ಲಿದ್ದಾರೆ.



   ಇದು ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಉಳಿಪು. ಓ ಮೊನ್ನೆ ಇಲ್ಲಿನ ಕುಶಾಲಪ್ಪ ಗೌಡರ ಮನೆಯಲ್ಲಿ ಮದುವೆ ಸಂಭ್ರಮ. ರೆಂಜಿಲಾಡಿ ಗ್ರಾಮದ ಉಳಿಪು ಕುಶಾಲಪ್ಪ ಗೌಡರ ಮಗಳನ್ನು ಗೋಳ್ತೊಟ್ಟು ಧನಂಜಯ ಎಂಬವರಿಗೆ ಕೊಟ್ಟು ಮದುವೆ ಮಾಡುವುದೆಂದು ಗುರು ಹಿರಿಯರಿದ್ದು ನಿಘಂಟಾಗಿತ್ತು. ಆ ಪ್ರಯುಕ್ತ ಮೊನ್ನೆ ಕುಶಾಲಪ್ಪಣ್ಣನ ಮನೆಯಲ್ಲಿ ಮೆಹಂದಿ ಇಟ್ಟು ಕೊಳ್ಳಲಾಗಿತ್ತು. ಮನೆಯಲ್ಲಿ ಜನವೋ ಜನ. ಎಲ್ಲರ ಕೈಯಲ್ಲೂ ಮೊಬೈಲು, ಎಲ್ಲರೂ ಫೋಟೋಗ್ರಾಫರ್ ಗಳೇ. ಮೆಹಂದಿ ಸಂಭ್ರಮ ಎಲ್ಲರ ಮೊಬೈಲುಗಳಲ್ಲೂ ಶೂಟ್ ಆಗುತ್ತಿತ್ತು. ಆ ಮೊಬೈಲ್ ಫೋಟೋಗ್ರಾಫರ್ ಗಳ ಗುಂಪಿನಲ್ಲಿ ಅವನೊಬ್ಬ ದಿವಾಕರ. ಕುಶಾಲಪ್ಪ ಗೌಡರ ಆಚೆ ಮನೆ ಹುಡುಗ. ಅವನೂ ಫೋಟೋ ತೆಗೆಯುತ್ತಿದ್ದ. ಇನ್ನು ಆ ಸಂಭ್ರಮದಲ್ಲಿ ಮದುವೆ ಹುಡುಗಿಯ ದೋಸ್ತಿ ಒಬ್ಬಳಿದ್ದಳು ಶೈನಿ. ಮಡಿಕೇರಿ ಹುಡುಗಿ. ದಿವಾಕರ ಮೆಹಂದಿ ಸಂಭ್ರಮದಲ್ಲಿ ಎಲ್ಲರ ಫೋಟೋ ಶೂಟ್ ಮಾಡುವಾಗ ಶೈನಿಗೂ ಫೋಕಸ್ ಮಾಡಿದ್ದ. ಇದು ಕುಶಾಲಪ್ಪಣ್ಣನ ಮನೆಯಲ್ಲಿ ಸೇರಿದ್ದ ಕೆಲವು ರೌಡಿ ಗೆಟಪ್ಪಿನ ಕುತ್ತಿ ಮೀಸೆಗಳಿಗೆ ಸರಿ ಬರಲಿಲ್ಲ. ಕೇವಲ ಘಟ್ಟದ ಹುಡುಗಿ ಶೈನಿ ಫೋಟೋ ದಿವಾಕರ ತೆಗೆದ ಎಂಬ ಕಾರಣಕ್ಕೆ ದಿವಾಕರನನ್ನು ಮೆಹಂದಿ ಕಾರ್ಯಕ್ರಮದ ಸ್ಥಳದಿಂದ ಸ್ವಲ್ಪ ಅಂಚಿ ಕರಕ್ಕೊಂಡು ಹೋಗಿ ಹಲ್ಲೆ ಮಾಡಲಾಯಿತು. ದಿವಾಕರನ ಮೊಬೈಲು ಎಳ್ಕೊಂಡು ಶೈನಿ ಫೋಟೋ ಡಿಲೀಟ್ ಮಾಡಿ ಮೊಬೈಲನ್ನು ಚಟ್ನಿ ಮಾಡಲಾಯಿತು. ದಿವಾಕರ ಮಾತಾಡಲಿಲ್ಲ. ಕೊಟ್ಟಿದ್ದನ್ನು ತಗೊಂಡು ಮನೆಗೆ ಹೊರಟು ಹೋದ. ಮರುದಿನ ಮದುವೆ.



      ಹಾಗೆ ಮರುದಿನ ಮದುವೆ ಗೋಳ್ತೊಟ್ಟು ಮದಿಮಯೆ ಧನಂಜಯನ ಮನೆಯಲ್ಲಿ. ದಿವಾಕರ ಮದುವೆಗೂ ಹೋಗಿದ್ದ. ಕುತ್ತಿ ಮೀಸೆಗಳದ್ದು ಅಲ್ಲಿ ಉಸ್ಕು ದಮ್ಮು ಇರಲಿಲ್ಲ. ಮದುವೆ ಯಾವುದೇ ರಗಳೆ ಇಲ್ಲದೆ ಮುಗಿಯಿತು ಮತ್ತು ನೈ ಕೂಡ ಅಂಚಿಂಚಿ ಹೋಗಿ ಮುಗಿಯಿತು. ಮತ್ತೆ ಉಳಿದದ್ದು ಕಾರ್ ಬಚ್ಚಿ.
  ಹಾಗೆ ಮೊನ್ನೆ ಉಳಿಪು ಕುಶಾಲಪ್ಪಣ್ಣನ ಮನೆಯಲ್ಲಿ ಕಾರ್ ಬಚ್ಚಿ ಪ್ರಯುಕ್ತ ಡಿನ್ನರ್ ಇತ್ತು. ಡಿನ್ನರ್ ಅಡುಗೆಗೆ ದಿವಾಕರ ಹೋಗಿರಲಿಲ್ಲ. ಆದರೆ ಅಂದಾಜು ಏಳೂವರೆ ಗಂಟೆಗೆ ದಿವಾಕರ ಡಿನ್ನರ್ ಗೆ ಬಂದಿದ್ದಾನೆ. ಆಗ ಅಲ್ಲಿ ಕುಶಾಲಪ್ಪಣ್ಣನ ಮಗ ನಿಶಾಂತ್ ಪಿಡ್ಕ್ ಓವರ್ ಡೋಸ್ ಆಗಿ ಊರು  ಗೌಡರೊಂದಿಗೆ ಜಗಳಕ್ಕೆ ನಿಂತಿದ್ದ. ಸದ್ರಿ ನಿಶಾಂತ್ ಪಿಡ್ಕ್ ಹಾಕಿ ಕಾರ್ಯಕ್ರಮದಲ್ಲಿ ಅಸಭ್ಯವಾಗಿ  ಡಿಸ್ಕೋ ಡಿಸ್ಕೋ ರೀತಿ ವರ್ತಿಸಿದನ್ನು ಊರ ಗೌಡರು ಪ್ರಶ್ನಿಸಿದ್ದಕ್ಕೆ ಅವರೊಂದಿಗೆ ನಿಶಾಂತ್ ಕುಸ್ತಿಗೆ ನಿಂತಿದ್ದ. ಅಷ್ಟರಲ್ಲಿ ಸ್ಪಾಟಿಗೆ ದಿವಾಕರನೂ ಬಂದನಲ್ಲ, ಅವನನ್ನು ನೋಡುತ್ತಲೇ ನಿಶಾಂತನ ಪಿಡ್ಕ್ ನೆತ್ತಿಗೇರಿ ಬಿಟ್ಟಿತು ಮತ್ತು ಸೀದಾ ಫೋನೆತ್ತಿಕ್ಕೊಂಡು‌ ತನ್ನ ಪೊಸ ಭಾವ ಧನಂಜಯನಿಗೆ ಸಂಭವಾಮಿ ಯುಗೇ ಯುಗೇ ಅಂದು ಬಿಟ್ಟ. ಪೊಸ ಬುಡೆದಿಯ ತಮ್ಮ ಅನ್ಯಾಯದ ವಿರುದ್ಧ ಹೋರಾಡಲು  ಕರೆದಾಗ ಹೋಗದಿರಲು ಮದಿಮಯೆ ಧನಂಜಯ ಏನು ಉತ್ತರ ಕುಮಾರನ? ಧನಂಜಯ ಗೋಳ್ತೊಟ್ಟಿನ ತನ್ನ ಭೂಸೇನೆಯನ್ನು ಹಿಡಕ್ಕೊಂಡು ಎರಡು ಕಾರುಗಳಲ್ಲಿ ವಾಪಸ್ ಉಳಿಪು ಕಡೆ ಚಿತ್ತೈಸಿದ. ಎರಡು ಕಾರು ಜನ. ಆರು ಫೀಟಿನವರು, ಐದು ಫೀಟಿನವರು, ಮೂರೂವರೆ ಫೀಟಿನವರು ಮತ್ತು ಕಾರಿನ ಡಿಕ್ಕಿಯಲ್ಲಿ ತಲವಾರು, ರಾಡು ಮತ್ತು ಪೆಟ್ಟಿಗೆ ಸಂಬಂಧ ಪಟ್ಟ ಇತರೇ ಪ್ರಾಪರ್ಟಿಗಳು.
    ಹಾಗೆ ಧನಂಜಯನ ಭೂ ಸೇನೆ ಸೀದಾ ಬಂದು ಬಾಂತಾಜೆ ಎಂಬಲ್ಲಿ ಬೀಡು ಬಿಟ್ಟು ಅಲ್ಲಿಗೆ ನಿಶಾಂತ್ ನನ್ನು ಕರೆಸಿಕೊಂಡು ಅವನನ್ನೂ ಕಾರಲ್ಲಿ ಹತ್ತಿಸಿಕ್ಕೊಂಡು ಒಂದೂವರೆ ಗಂಟೆ ರಾತ್ರಿಯ ಬ್ರಹ್ಮ ರಕ್ಕಸ ಲಗ್ನದಲ್ಲಿ ದಿವಾಕರನ ಮನೆಗೆ ಬಂದಿದೆ. ಆದರೆ ಬಂದ ಎಲ್ಲರಿಗೂ ಪಿಡ್ಕ್ ಎಷ್ಟು ತಲೆಗೇರಿತ್ತು ಅಂದರೆ ಪುಲ್ಲಿಂಗ ಯಾವುದು, ಸ್ತ್ರೀ ಲಿಂಗ ಯಾವುದು ಮತ್ತು ನಪುಂಸಕ ಯಾವುದು ಎಂದು ಗೊತ್ತಾಗದಷ್ಟು ಟೈಟೀ ಆಗಿದ್ದರು. ಹಾಗಾಗಿ ಅವರು ದಿವಾಕರನ ಮನೆ ಎಂದು ಮಿಸ್ ಮಾಡಿಕ್ಕೊಂಡು ದಿವಾಕರನ ಅಣ್ಣನ  ಮನೆಗೆ ಬಂದು ದಡಬಡ ಮಾಡಿದ್ದಾರೆ. ಬಾಗಿಲು ತೆಗೆದ ದಿವಾಕರನ ಅತ್ತಿಗೆ ಮೇಲೆ ಓಪನಿಂಗ್ ಆಗಿ ಸಿಕ್ಸ್ ಫೋರ್ ಎತ್ತಲಾಗಿದೆ. ನಂತರ ವನ್ ಡೌನ್ ಗೆ ಬಂದ ದಿವಾಕರನ ಅಣ್ಣನ ಮೇಲೆಯೂ ಭಯಂಕರ ಹಲ್ಲೆ ಮಾಡಲಾಗಿದೆ. ಈ ಬೊಬ್ಬೆ ಕೇಳಿ ಓಡಿ ಬಂದ ದಿವಾಕರನ ಮೇಲೆ ಪೆಟ್ಟಿನ ಬರ್ಸ ಬಿದ್ದಿದೆ. ಬರ್ಸದಿಂದ ತಪ್ಪಿಸಿಕೊಳ್ಳಲು ದಿವಾಕರ ಹತ್ತಿರದ ಚಿಕ್ಕಪ್ಪನ ಮನೆಗೆ ಓಡಿ ಬಾಗಿಲು ಹಾಕಿಕೊಂಡರೆ ಆ ಮನೆಯ ಬಾಗಿಲು ಮುರಿದು ದಿವಾಕರನ ಚಿಕ್ಕಪ್ಪನ ಮೇಲೂ ಹಲ್ಲೆ ನಡೆಸಲಾಗಿದೆ.  ಅಪರಾತ್ರಿ ಜಗಳ ಬಿಡಿಸಲು ಬಂದ ನೆರೆಕರೆಯ ಸಂಬಂಧಿಗಳಿಗೆ ತಲವಾರು ತೋರಿಸಿ ಹೆದರಿಸಲಾಗಿದೆ. ಕೈಗೆ ಸಿಕ್ಕಿದ ಮೊಬೈಲುಗಳನ್ನು ಚಟ್ನಿ ಮಾಡಲಾಗಿದೆ. ಮನೆಯ ಸೊತ್ತುಗಳನ್ನೂ ಪುಡ್ಪುಡಿ ಮಾಡಲಾಗಿದೆ. ಹಾಗೆ ಮನಸೋ ಇಚ್ಛೆ ಹಲ್ಲೆ, ಸೊತ್ತು ನಾಶ ಮಾಡಿದ ಧನಂಜಯನ ಗೋಳ್ತೊಟ್ಟು ಭೂಸೇನೆ ನಂತರ ಅಲ್ಲಿಂದ ವಾಪಾಸ್ ಹೊರಟು ಹೋಗಿದೆ.
   ಹಾಗೇ ಫೈಟಿಂಗ್ ಮುಗಿಸಿ ಧನಂಜಯನ ಸೇನೆ ಅತ್ಲಕಡೆ ಹೋಗುತ್ತಿದ್ದಂತೆ ಇತ್ತ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಕಡಬ ಪೋಲಿಸ್ ಗೆ  ಕಂಪ್ಲೈಂಟ್ ಮಾಡಲಾಯಿತು. ಕಡಬ ಪೊಲೀಸರು ಕೇಸು ದಾಖಲಿಸಿಕೊಂಡು ಪಿಡ್ಕ್ ಮಾಸ್ಟ್ರುಗಳ  ಬಳಿ ತಲವಾರು, ಚೂರಿ, ಬೀಸತ್ತಿ, ರಾಡ್ ಮುಂತಾದ ಆಫ್ ಮರ್ಡರ್, ಮರ್ಡರ್ ಗಳಿಗೆ ಸಂಬಂಧ ಪಟ್ಟ ಪ್ರಾಪರ್ಟಿ ಗಳು ಇದ್ದರೂ ಆರೋಪಿಗಳ ಮೇಲೆ ಕಿನ್ಯ ಕಿನ್ಯ ಸೆಕ್ಷನ್ ಗಳ ಹಾಕಿ ಒಂದು ಸ್ವೀಟೆಸ್ಟ್ FIR ಮಾಡಿದ್ದಾರೆ. ಕಡಬ ಪೊಲೀಸರ ಎಫ್ಐಆರ್ ನಲ್ಲಿ ಇರುವ ಆರೋಪಿಗಳ ಹೆಸರು ಈ ಕೆಳಗಿನಂತಿದೆ. 1) ನಿಶಾಂತ್ ( ಮದಿಮಯನ ಭಾವ) 2) ಧನಂಜಯೆ (ಮದಿಮಯೆ) 3) ಜನ್ನೆ   ಯಾನೆ ಜನಾರ್ದನ 4) ಅಶ್ವಿತ್ 5) ಉದಯೆ 6) ರಮೇಸೆ 7) ಲೋಕೇಸೆ 8) ಸ್ವಾತಿ (ಮದಿಮಲ್) 9) ಭುವನ( ಹುಡುಗಿಯರು ಪಿಡ್ಕ್ ಹಾಕಿದರೆ ತಪ್ಪೇನು ಎಂದು ಕಡಬ ಪೋಲಿಸರೇ ಮತಿ ತಪ್ಪುವಂತೆ ಪ್ರಶ್ನೆ ಮಾಡಿದ ಆಧುನಿಕ ಹೈಟೆಕ್ ಹುಡುಗಿ)10) ರೇಷ್ಮೆ (ಸೈಡ್ ಆರ್ಟಿಸ್ಟ್) 11) ಶೈನಿ (ಈ ಕತೆಯ ಹೀರೊಯಿನ್. ಮಡಿಕೇರಿ ಹುಡುಗಿ. ಕೇವಲ ಇವಳಿಗಾಗಿಯೇ ಇಷ್ಟೆಲ್ಲಾ ಫೈಟಿಂಗ್, ಕತ್ತಿ, ತಲವಾರು, ಬೀಸತ್ತಿ, ಪೋಲಿಸ್, FIR,  ಆಸ್ಪತ್ರೆ ಇತ್ಯಾದಿ ಇತ್ಯಾದಿ)
ಇದೀಗ ಧನಂಜಯ ಗ್ಯಾಂಗೂ ಕೌಂಟರ್ ಕಂಪ್ಲೇಂಟ್ ಕೊಟ್ಟಿದ್ದು ಕಡಬ ಪೊಲೀಸರು ಬೆಳಗೆದ್ದು, ಹಲ್ಲುಜ್ಜಿ, ಮೀದ್, ದೇವರಿಗೆ ದೀಪ ಇಟ್ಟು ಪೊಕ್ಕಡೆ ಕಂಪ್ಲೈಂಟ್ ತಗೊಂಡು ಕೇಸ್ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಂತೂ ಇಂತೂ ಧನಂಜನ ವಿವಾಹ ನಂತರದ ರಾತ್ರಿಗಳನ್ನು ಅಟ್ಟದಲ್ಲಿ ಕಳೆಯುವ ಪರಿಸ್ಥಿತಿ ಬಂದದ್ದು ವಿಪರ್ಯಾಸವೇ ಸರಿ.


     

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget