ಈ ಕುತ್ತಿ ಮೀಸೆಯ ಹುಡುಗರಿಗೆ ಇಷ್ಟು ದೊಡ್ಡ ಲೋಕ ಕಣ್ಣಿಗೆ ಕಾಣಲ್ಲ. ಆದರೆ ಚೂಡಿ ಮಾತ್ರ ರಫಕ್ಕನೆ ಬಂದು ಕಣ್ಣಿಗೇ ಬೀಳುತ್ತದೆ. ಒಂದು ಸಿಂಗಲ್ ಚೂಡಿಗಾಗಿ ಇದೇ ಕುತ್ತಿ ಮೀಸೆ ಹುಡುಗ್ರು ಥರ್ಡ್ ವಲ್ಡ್ ವಾರಿಗೂ ರೆಡಿ ರೆಡಿಯಾಗಿರುತ್ತಾರೆ. ಇದೀಗ ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಉಳಿಪು ಎಂಬಲ್ಲಿ ನಡೆದ ಮದುವೆ ನೈಯಲ್ಲಿ ಒಂದು ಚೂಡಿಗಾಗಿ ಫೈಟಿಂಗ್ ನಡೆದು ಕತ್ತಿ, ತಲವಾರು ಪ್ರದರ್ಶನ ಆಗಿದೆ. ಕಡಬ ಪೊಲೀಸರೂ ಕೂಡ ಕತೆಯಲ್ಲಿದ್ದಾರೆ.
ಇದು ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಉಳಿಪು. ಓ ಮೊನ್ನೆ ಇಲ್ಲಿನ ಕುಶಾಲಪ್ಪ ಗೌಡರ ಮನೆಯಲ್ಲಿ ಮದುವೆ ಸಂಭ್ರಮ. ರೆಂಜಿಲಾಡಿ ಗ್ರಾಮದ ಉಳಿಪು ಕುಶಾಲಪ್ಪ ಗೌಡರ ಮಗಳನ್ನು ಗೋಳ್ತೊಟ್ಟು ಧನಂಜಯ ಎಂಬವರಿಗೆ ಕೊಟ್ಟು ಮದುವೆ ಮಾಡುವುದೆಂದು ಗುರು ಹಿರಿಯರಿದ್ದು ನಿಘಂಟಾಗಿತ್ತು. ಆ ಪ್ರಯುಕ್ತ ಮೊನ್ನೆ ಕುಶಾಲಪ್ಪಣ್ಣನ ಮನೆಯಲ್ಲಿ ಮೆಹಂದಿ ಇಟ್ಟು ಕೊಳ್ಳಲಾಗಿತ್ತು. ಮನೆಯಲ್ಲಿ ಜನವೋ ಜನ. ಎಲ್ಲರ ಕೈಯಲ್ಲೂ ಮೊಬೈಲು, ಎಲ್ಲರೂ ಫೋಟೋಗ್ರಾಫರ್ ಗಳೇ. ಮೆಹಂದಿ ಸಂಭ್ರಮ ಎಲ್ಲರ ಮೊಬೈಲುಗಳಲ್ಲೂ ಶೂಟ್ ಆಗುತ್ತಿತ್ತು. ಆ ಮೊಬೈಲ್ ಫೋಟೋಗ್ರಾಫರ್ ಗಳ ಗುಂಪಿನಲ್ಲಿ ಅವನೊಬ್ಬ ದಿವಾಕರ. ಕುಶಾಲಪ್ಪ ಗೌಡರ ಆಚೆ ಮನೆ ಹುಡುಗ. ಅವನೂ ಫೋಟೋ ತೆಗೆಯುತ್ತಿದ್ದ. ಇನ್ನು ಆ ಸಂಭ್ರಮದಲ್ಲಿ ಮದುವೆ ಹುಡುಗಿಯ ದೋಸ್ತಿ ಒಬ್ಬಳಿದ್ದಳು ಶೈನಿ. ಮಡಿಕೇರಿ ಹುಡುಗಿ. ದಿವಾಕರ ಮೆಹಂದಿ ಸಂಭ್ರಮದಲ್ಲಿ ಎಲ್ಲರ ಫೋಟೋ ಶೂಟ್ ಮಾಡುವಾಗ ಶೈನಿಗೂ ಫೋಕಸ್ ಮಾಡಿದ್ದ. ಇದು ಕುಶಾಲಪ್ಪಣ್ಣನ ಮನೆಯಲ್ಲಿ ಸೇರಿದ್ದ ಕೆಲವು ರೌಡಿ ಗೆಟಪ್ಪಿನ ಕುತ್ತಿ ಮೀಸೆಗಳಿಗೆ ಸರಿ ಬರಲಿಲ್ಲ. ಕೇವಲ ಘಟ್ಟದ ಹುಡುಗಿ ಶೈನಿ ಫೋಟೋ ದಿವಾಕರ ತೆಗೆದ ಎಂಬ ಕಾರಣಕ್ಕೆ ದಿವಾಕರನನ್ನು ಮೆಹಂದಿ ಕಾರ್ಯಕ್ರಮದ ಸ್ಥಳದಿಂದ ಸ್ವಲ್ಪ ಅಂಚಿ ಕರಕ್ಕೊಂಡು ಹೋಗಿ ಹಲ್ಲೆ ಮಾಡಲಾಯಿತು. ದಿವಾಕರನ ಮೊಬೈಲು ಎಳ್ಕೊಂಡು ಶೈನಿ ಫೋಟೋ ಡಿಲೀಟ್ ಮಾಡಿ ಮೊಬೈಲನ್ನು ಚಟ್ನಿ ಮಾಡಲಾಯಿತು. ದಿವಾಕರ ಮಾತಾಡಲಿಲ್ಲ. ಕೊಟ್ಟಿದ್ದನ್ನು ತಗೊಂಡು ಮನೆಗೆ ಹೊರಟು ಹೋದ. ಮರುದಿನ ಮದುವೆ.
ಹಾಗೆ ಮರುದಿನ ಮದುವೆ ಗೋಳ್ತೊಟ್ಟು ಮದಿಮಯೆ ಧನಂಜಯನ ಮನೆಯಲ್ಲಿ. ದಿವಾಕರ ಮದುವೆಗೂ ಹೋಗಿದ್ದ. ಕುತ್ತಿ ಮೀಸೆಗಳದ್ದು ಅಲ್ಲಿ ಉಸ್ಕು ದಮ್ಮು ಇರಲಿಲ್ಲ. ಮದುವೆ ಯಾವುದೇ ರಗಳೆ ಇಲ್ಲದೆ ಮುಗಿಯಿತು ಮತ್ತು ನೈ ಕೂಡ ಅಂಚಿಂಚಿ ಹೋಗಿ ಮುಗಿಯಿತು. ಮತ್ತೆ ಉಳಿದದ್ದು ಕಾರ್ ಬಚ್ಚಿ.
ಹಾಗೆ ಮೊನ್ನೆ ಉಳಿಪು ಕುಶಾಲಪ್ಪಣ್ಣನ ಮನೆಯಲ್ಲಿ ಕಾರ್ ಬಚ್ಚಿ ಪ್ರಯುಕ್ತ ಡಿನ್ನರ್ ಇತ್ತು. ಡಿನ್ನರ್ ಅಡುಗೆಗೆ ದಿವಾಕರ ಹೋಗಿರಲಿಲ್ಲ. ಆದರೆ ಅಂದಾಜು ಏಳೂವರೆ ಗಂಟೆಗೆ ದಿವಾಕರ ಡಿನ್ನರ್ ಗೆ ಬಂದಿದ್ದಾನೆ. ಆಗ ಅಲ್ಲಿ ಕುಶಾಲಪ್ಪಣ್ಣನ ಮಗ ನಿಶಾಂತ್ ಪಿಡ್ಕ್ ಓವರ್ ಡೋಸ್ ಆಗಿ ಊರು ಗೌಡರೊಂದಿಗೆ ಜಗಳಕ್ಕೆ ನಿಂತಿದ್ದ. ಸದ್ರಿ ನಿಶಾಂತ್ ಪಿಡ್ಕ್ ಹಾಕಿ ಕಾರ್ಯಕ್ರಮದಲ್ಲಿ ಅಸಭ್ಯವಾಗಿ ಡಿಸ್ಕೋ ಡಿಸ್ಕೋ ರೀತಿ ವರ್ತಿಸಿದನ್ನು ಊರ ಗೌಡರು ಪ್ರಶ್ನಿಸಿದ್ದಕ್ಕೆ ಅವರೊಂದಿಗೆ ನಿಶಾಂತ್ ಕುಸ್ತಿಗೆ ನಿಂತಿದ್ದ. ಅಷ್ಟರಲ್ಲಿ ಸ್ಪಾಟಿಗೆ ದಿವಾಕರನೂ ಬಂದನಲ್ಲ, ಅವನನ್ನು ನೋಡುತ್ತಲೇ ನಿಶಾಂತನ ಪಿಡ್ಕ್ ನೆತ್ತಿಗೇರಿ ಬಿಟ್ಟಿತು ಮತ್ತು ಸೀದಾ ಫೋನೆತ್ತಿಕ್ಕೊಂಡು ತನ್ನ ಪೊಸ ಭಾವ ಧನಂಜಯನಿಗೆ ಸಂಭವಾಮಿ ಯುಗೇ ಯುಗೇ ಅಂದು ಬಿಟ್ಟ. ಪೊಸ ಬುಡೆದಿಯ ತಮ್ಮ ಅನ್ಯಾಯದ ವಿರುದ್ಧ ಹೋರಾಡಲು ಕರೆದಾಗ ಹೋಗದಿರಲು ಮದಿಮಯೆ ಧನಂಜಯ ಏನು ಉತ್ತರ ಕುಮಾರನ? ಧನಂಜಯ ಗೋಳ್ತೊಟ್ಟಿನ ತನ್ನ ಭೂಸೇನೆಯನ್ನು ಹಿಡಕ್ಕೊಂಡು ಎರಡು ಕಾರುಗಳಲ್ಲಿ ವಾಪಸ್ ಉಳಿಪು ಕಡೆ ಚಿತ್ತೈಸಿದ. ಎರಡು ಕಾರು ಜನ. ಆರು ಫೀಟಿನವರು, ಐದು ಫೀಟಿನವರು, ಮೂರೂವರೆ ಫೀಟಿನವರು ಮತ್ತು ಕಾರಿನ ಡಿಕ್ಕಿಯಲ್ಲಿ ತಲವಾರು, ರಾಡು ಮತ್ತು ಪೆಟ್ಟಿಗೆ ಸಂಬಂಧ ಪಟ್ಟ ಇತರೇ ಪ್ರಾಪರ್ಟಿಗಳು.
ಹಾಗೆ ಧನಂಜಯನ ಭೂ ಸೇನೆ ಸೀದಾ ಬಂದು ಬಾಂತಾಜೆ ಎಂಬಲ್ಲಿ ಬೀಡು ಬಿಟ್ಟು ಅಲ್ಲಿಗೆ ನಿಶಾಂತ್ ನನ್ನು ಕರೆಸಿಕೊಂಡು ಅವನನ್ನೂ ಕಾರಲ್ಲಿ ಹತ್ತಿಸಿಕ್ಕೊಂಡು ಒಂದೂವರೆ ಗಂಟೆ ರಾತ್ರಿಯ ಬ್ರಹ್ಮ ರಕ್ಕಸ ಲಗ್ನದಲ್ಲಿ ದಿವಾಕರನ ಮನೆಗೆ ಬಂದಿದೆ. ಆದರೆ ಬಂದ ಎಲ್ಲರಿಗೂ ಪಿಡ್ಕ್ ಎಷ್ಟು ತಲೆಗೇರಿತ್ತು ಅಂದರೆ ಪುಲ್ಲಿಂಗ ಯಾವುದು, ಸ್ತ್ರೀ ಲಿಂಗ ಯಾವುದು ಮತ್ತು ನಪುಂಸಕ ಯಾವುದು ಎಂದು ಗೊತ್ತಾಗದಷ್ಟು ಟೈಟೀ ಆಗಿದ್ದರು. ಹಾಗಾಗಿ ಅವರು ದಿವಾಕರನ ಮನೆ ಎಂದು ಮಿಸ್ ಮಾಡಿಕ್ಕೊಂಡು ದಿವಾಕರನ ಅಣ್ಣನ ಮನೆಗೆ ಬಂದು ದಡಬಡ ಮಾಡಿದ್ದಾರೆ. ಬಾಗಿಲು ತೆಗೆದ ದಿವಾಕರನ ಅತ್ತಿಗೆ ಮೇಲೆ ಓಪನಿಂಗ್ ಆಗಿ ಸಿಕ್ಸ್ ಫೋರ್ ಎತ್ತಲಾಗಿದೆ. ನಂತರ ವನ್ ಡೌನ್ ಗೆ ಬಂದ ದಿವಾಕರನ ಅಣ್ಣನ ಮೇಲೆಯೂ ಭಯಂಕರ ಹಲ್ಲೆ ಮಾಡಲಾಗಿದೆ. ಈ ಬೊಬ್ಬೆ ಕೇಳಿ ಓಡಿ ಬಂದ ದಿವಾಕರನ ಮೇಲೆ ಪೆಟ್ಟಿನ ಬರ್ಸ ಬಿದ್ದಿದೆ. ಬರ್ಸದಿಂದ ತಪ್ಪಿಸಿಕೊಳ್ಳಲು ದಿವಾಕರ ಹತ್ತಿರದ ಚಿಕ್ಕಪ್ಪನ ಮನೆಗೆ ಓಡಿ ಬಾಗಿಲು ಹಾಕಿಕೊಂಡರೆ ಆ ಮನೆಯ ಬಾಗಿಲು ಮುರಿದು ದಿವಾಕರನ ಚಿಕ್ಕಪ್ಪನ ಮೇಲೂ ಹಲ್ಲೆ ನಡೆಸಲಾಗಿದೆ. ಅಪರಾತ್ರಿ ಜಗಳ ಬಿಡಿಸಲು ಬಂದ ನೆರೆಕರೆಯ ಸಂಬಂಧಿಗಳಿಗೆ ತಲವಾರು ತೋರಿಸಿ ಹೆದರಿಸಲಾಗಿದೆ. ಕೈಗೆ ಸಿಕ್ಕಿದ ಮೊಬೈಲುಗಳನ್ನು ಚಟ್ನಿ ಮಾಡಲಾಗಿದೆ. ಮನೆಯ ಸೊತ್ತುಗಳನ್ನೂ ಪುಡ್ಪುಡಿ ಮಾಡಲಾಗಿದೆ. ಹಾಗೆ ಮನಸೋ ಇಚ್ಛೆ ಹಲ್ಲೆ, ಸೊತ್ತು ನಾಶ ಮಾಡಿದ ಧನಂಜಯನ ಗೋಳ್ತೊಟ್ಟು ಭೂಸೇನೆ ನಂತರ ಅಲ್ಲಿಂದ ವಾಪಾಸ್ ಹೊರಟು ಹೋಗಿದೆ.
ಹಾಗೇ ಫೈಟಿಂಗ್ ಮುಗಿಸಿ ಧನಂಜಯನ ಸೇನೆ ಅತ್ಲಕಡೆ ಹೋಗುತ್ತಿದ್ದಂತೆ ಇತ್ತ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಕಡಬ ಪೋಲಿಸ್ ಗೆ ಕಂಪ್ಲೈಂಟ್ ಮಾಡಲಾಯಿತು. ಕಡಬ ಪೊಲೀಸರು ಕೇಸು ದಾಖಲಿಸಿಕೊಂಡು ಪಿಡ್ಕ್ ಮಾಸ್ಟ್ರುಗಳ ಬಳಿ ತಲವಾರು, ಚೂರಿ, ಬೀಸತ್ತಿ, ರಾಡ್ ಮುಂತಾದ ಆಫ್ ಮರ್ಡರ್, ಮರ್ಡರ್ ಗಳಿಗೆ ಸಂಬಂಧ ಪಟ್ಟ ಪ್ರಾಪರ್ಟಿ ಗಳು ಇದ್ದರೂ ಆರೋಪಿಗಳ ಮೇಲೆ ಕಿನ್ಯ ಕಿನ್ಯ ಸೆಕ್ಷನ್ ಗಳ ಹಾಕಿ ಒಂದು ಸ್ವೀಟೆಸ್ಟ್ FIR ಮಾಡಿದ್ದಾರೆ. ಕಡಬ ಪೊಲೀಸರ ಎಫ್ಐಆರ್ ನಲ್ಲಿ ಇರುವ ಆರೋಪಿಗಳ ಹೆಸರು ಈ ಕೆಳಗಿನಂತಿದೆ. 1) ನಿಶಾಂತ್ ( ಮದಿಮಯನ ಭಾವ) 2) ಧನಂಜಯೆ (ಮದಿಮಯೆ) 3) ಜನ್ನೆ ಯಾನೆ ಜನಾರ್ದನ 4) ಅಶ್ವಿತ್ 5) ಉದಯೆ 6) ರಮೇಸೆ 7) ಲೋಕೇಸೆ 8) ಸ್ವಾತಿ (ಮದಿಮಲ್) 9) ಭುವನ( ಹುಡುಗಿಯರು ಪಿಡ್ಕ್ ಹಾಕಿದರೆ ತಪ್ಪೇನು ಎಂದು ಕಡಬ ಪೋಲಿಸರೇ ಮತಿ ತಪ್ಪುವಂತೆ ಪ್ರಶ್ನೆ ಮಾಡಿದ ಆಧುನಿಕ ಹೈಟೆಕ್ ಹುಡುಗಿ)10) ರೇಷ್ಮೆ (ಸೈಡ್ ಆರ್ಟಿಸ್ಟ್) 11) ಶೈನಿ (ಈ ಕತೆಯ ಹೀರೊಯಿನ್. ಮಡಿಕೇರಿ ಹುಡುಗಿ. ಕೇವಲ ಇವಳಿಗಾಗಿಯೇ ಇಷ್ಟೆಲ್ಲಾ ಫೈಟಿಂಗ್, ಕತ್ತಿ, ತಲವಾರು, ಬೀಸತ್ತಿ, ಪೋಲಿಸ್, FIR, ಆಸ್ಪತ್ರೆ ಇತ್ಯಾದಿ ಇತ್ಯಾದಿ)
ಇದೀಗ ಧನಂಜಯ ಗ್ಯಾಂಗೂ ಕೌಂಟರ್ ಕಂಪ್ಲೇಂಟ್ ಕೊಟ್ಟಿದ್ದು ಕಡಬ ಪೊಲೀಸರು ಬೆಳಗೆದ್ದು, ಹಲ್ಲುಜ್ಜಿ, ಮೀದ್, ದೇವರಿಗೆ ದೀಪ ಇಟ್ಟು ಪೊಕ್ಕಡೆ ಕಂಪ್ಲೈಂಟ್ ತಗೊಂಡು ಕೇಸ್ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಂತೂ ಇಂತೂ ಧನಂಜನ ವಿವಾಹ ನಂತರದ ರಾತ್ರಿಗಳನ್ನು ಅಟ್ಟದಲ್ಲಿ ಕಳೆಯುವ ಪರಿಸ್ಥಿತಿ ಬಂದದ್ದು ವಿಪರ್ಯಾಸವೇ ಸರಿ.
![]() |
Post a Comment