ಅಲ್ಲಿ ಗುತ್ತಿಗಾರು ಮೊಗ್ರದ ಪಡ್ಡೆಗಳಿಬ್ಬರಿಗೆ ಕಡಬ ಕೊಂತೂರುನಲ್ಲಿ ಪದಾನ ಬಿದ್ದಿದೆ ಗಡ. ಅದ್ಯಾರೋ ಕೊಂತೂರು ಅಲಂಗಾರಿನ ಮಿಡ್ಲೇಜ್ ಆಂಟಿಯ ಚಂಗಾಯಿ ಮಾಡಿಕ್ಕೊಂಡಿದ್ದ ಗುತ್ತಿಗಾರು ಮೊಗ್ರದ ಪಡ್ಡೆಗಳಿಬ್ಬರು ಮೊನ್ನೆ ಏಳು ತಾರೀಕಿಗೆ ಆಂಟಿ ಆಪರೇಷನ್ ಗೆ ದಿನ, ಘಳಿಗೆ, ಗುಳಿಗೆ ಎಲ್ಲಾ ರೆಡಿ ಮಾಡಿಕ್ಕೊಂಡಿದ್ದರು. ಅದರಂತೆ ಏಳು ತಾರೀಕಿಗೆ ಮೊಗ್ರದಿಂದ ಶುಚಿರ್ಭೂತರಾಗಿ ಹೊರಟ ಪಡ್ಡೆಗಳು ರಾತ್ರಿ ಊಟಕ್ಕೆ ಕೊಂತೂರು ತಲುಪಿದ್ದಾರೆ. ಅಲ್ಲಿ ಆಂಟಿ ಮನೆಗೆ ಡೈರೆಕ್ಟ್ ಎಂಟ್ರಿ ಕೊಟ್ಟ ಪಡ್ಡೆಗಳು ಆಂಟಿ ಗಂಡನಿಗೆ ಬೆಚ್ಚ ಬೆಚ್ಚ ಗೇರು ಬೀಜದ್ದು ಮತ್ತು ನಿಂಗೊಲು ಕೊಟ್ಟು ಬೆಂಚಿನಡಿಯಲ್ಲಿ ನಿದ್ರೆಗೆ ದೂಡಿ ಹಾಕಿದ್ದಾರೆ. ಆಂಟಿ ಗಂಡನಿಗೆ ಆರು ತಿಂಗಳು ಕಳೆದು ಏಳುವಷ್ಟು ಗಾಢ ನಿದ್ರೆ. ಅಲ್ಲಿಗೆ ಪಡ್ಡೆಗಳ ಲೈನ್ ಕ್ಲೀನ್.
ಹಾಗೆ ಮೊಗ್ರ ಪಡ್ಡೆಗಳ ಲೈನ್ ಕ್ಲಿಯರ್ ಆಗುತ್ತಿದ್ದಂತೆ ಮನೆಯ ಎಲ್ಲಾ ಲೈಟುಗಳೂ ಸ್ವಿಚ್ ಆಫ್ ಆಗಿದೆ. ಆಂಟಿ ಮೇಲೆ ಇನ್ನೇನು ಮೊಗ್ರದ ಪಡ್ಡೆಗಳ ಜಂಟಿ ಕಾರ್ಯಾಚರಣೆ ಶುರುವಾಗಲಿತ್ತು. ಅಷ್ಟರಲ್ಲಿ ಅದ್ಯಾರೋ ಪಂಪನಿಗೆ ಸ್ವಿಚ್ ಹಾಕಲು ಹೋಗುವವರು ಆಂಟಿ ಜಾಲಿಗೆ ಬಂದಿದ್ದಾರೆ. ಮನೆಯೊಳಗಡೆಯಿಂದ ಗುಸ ಗುಸ, ಪಿಸ ಪಿಸ, ಕಿಲ ಕಿಲ, ಕುರು ಕುರು, ಜುಳು ಜುಳು ಮುಂತಾದ ಅನುಮಾನಾಸ್ಪದ ಶಬ್ದಗಳು ಕೇಳಿ ಬಂದ ಕಾರಣ ಪಂಪಿಗೆ ಸ್ವಿಚ್ ಹಾಕಲು ಹೊರಟವರಿಗೆ ಮನೆಯೊಳಗಡೆ ನಾಯಿ ಮಹಾತ್ಮೆ ನಡೆಯುತ್ತಿರುವ ಬಗ್ಗೆ ಕನ್ಫರ್ಮ್ ಆಗಿದೆ. ಕೂಡಲೇ ಅವರು ಅಕ್ಕಪಕ್ಕದ ಜನರನ್ನು ಸೇರಿಸಿ ಆಂಟಿ ಮನೆಯ ಬಾಗಿಲು ತಟ್ಟುತ್ತಾರೆ. ಆದರೆ ಅಷ್ಟರಲ್ಲಾಗಲೇ ತಮ್ಮ ಗೊಬ್ಬು ಹೊರಗಿನವರಿಗೆ ಗೊತ್ತಾಗಿದೆ ಎಂದು ಗೊತ್ತಾದ ತಕ್ಷಣ ಮೊಗ್ರದ ಪಡ್ಡೆಗಳಿಬ್ಬರೂ ಆಂಟಿಯ ಹಿಂದಿನ ಬಾಗಿಲಿನಿಂದ ಚಡ್ಡಿ ಸಿಕ್ಕಿಸಿಕೊಂಡು ತಾವು ಬಂದಿದ್ದ ಬೈಕನ್ನೂ ಬಿಟ್ಟು ಕತ್ತಲೆಗೆ ಪರಾರಿಯಾಗಿದ್ದಾರೆ. ಆದರೆ ಜನ ಬಿಡುತ್ತಾರ? ಆಂಟಿ ಮೊಬೈಲ್ ನಿಂದಲೇ ಪಡ್ಡೆಗಳಿಬ್ಬರಿಗೆ ಕಾಲ್ ಮಾಡಿಸಿ, ಅವರನ್ನು ವಾಪಾಸ್ ತರಿಸಿ ಶಾಲು ಹೊದಿಸಿ, ಮೂಸಂಬಿ ಕೊಟ್ಟು, ಗುಣಗಾನ ಪತ್ರ ಓದಿ ಸನ್ಮಾನ ಮಾಡಿ ಕಳಿಸಿಕೊಟ್ಟಿದ್ದಾರೆ. ಇಷ್ಟಾದರೂ ಕುಂಭಕರ್ಣನಿಗೆ ನಿದ್ದೆಗೆ ಏನೂ ಡಿಸ್ಟರ್ಬ್ ಆಗದೆ ಇದ್ದದ್ದು ವಿಪರ್ಯಾಸವೇ ಸರಿ.
Post a Comment