ಕಡಬ ತಾಲೂಕು ಕೇಂದ್ರಕ್ಕೆ ಅತ್ಯಂತ ಸಮೀಪದಲ್ಲಿ ಒಂದು ದೊಡ್ಡ ಗಲಾಟೆ ಆಗುವ ಸಾಧ್ಯತೆಗಳಿವೆ. ಅಲ್ಲಿ ಮಾಲೇಶ್ವರದಲ್ಲಿ ಪಿಡಿಒ ವರ್ಸಸ್ ಮಾಸ್ತರ್ ಜಟಾಪಟಿ ತಾರಕಕ್ಕೇರಿದ್ದು ಇಬ್ಬರೂ ಯುದ್ಧೋನ್ಮಾದದಿಂದ ಸೇಂಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಲಿದ್ದು ಇಬ್ಬರೂ ತಂತಮ್ಮ ಸೇನೆ ಜಮಾವಣೆ ಮಾಡುತ್ತಿದ್ದಾರೆ.
ಇದೊಂದು ಜಾಗದ ತಕರಾರು. ಅಂಚಿ ಕಲ್ಲುಗುಡ್ಡೆಯ ಮಾಸ್ತರ್ ಒಬ್ಬರು ಬಂದು ಇಲ್ಲಿ ಮಾಲೇಶ್ವರದಲ್ಲಿ ಒಂದು ಕೃಷಿ ಭೂಮಿ ಖರೀದಿ ಮಾಡುತ್ತಾರೆ. ಒಂದೂವರೆ ಎಕರೆ. ಈ ಮಾಸ್ತರ್ ಖರೀದಿ ಮಾಡಿದ ಜಾಗದ ಬರಿಟ್ ಪಿಡಿಒ ಒಬ್ಬರ ಜಾಗ ಕೂಡ ಇದೆ. ಸ್ವಲ್ಪ ಸಮಯ ಎಲ್ಲವೂ ನಾರ್ಮಲ್ ಆಗಿತ್ತು. ಇಬ್ಬರೂ ನೀರು ಬಿಟ್ಟುಕ್ಕೊಂಡು ಸುಮ್ಮನಿದ್ದರು. ಆದರೆ ಯಾವಾಗ ಕಲ್ಲುಗುಡ್ಡೆಯ ಮಾಸ್ತರ್ ತನ್ನ ವರ್ಗ ಜಾಗೆಯ ಬರಿತ್ತ ಜಾಗಕ್ಕೆ 94C ಅಡಿಯಲ್ಲಿ ಅರ್ಜಿ ಕೊಟ್ಟರೋ ಆವತ್ತು ಪಿಡಿಒನ ಭೂತ ಎದ್ದು ನಿಂತಿತು. "ಅದು ಜಾಗ ನನ್ನ ವರ್ಗದ ಕುಮ್ಕಿ" ಎಂದು ಪಿಡಿಒ ಹೇಳಿದರೆ, "ಜಾಗ ಪರ್ಚೆಸ್ ಮಾಡುವಾಗ ನೀನು ಎಲ್ಲಿ ಹೋಗಿದ್ದೆ" ಎಂಬುದು ಮಾಸ್ತರ್ ವಾದ. ಈಗ ಕತ್ತಿ ಕತ್ತಿ.
ಹಾಗೇ ಇವರಿಬ್ಬರ ನಡುವೆ ಇದ್ದ ಮಾಲೇಶ್ವರ ಟ್ರೀಟಿ, ಕಡಬ ಟ್ರೀಟಿ, ಕಲ್ಲಂತಡ್ಕ ಟ್ರೀಟಿ ಎಲ್ಲವೂ ಮುರಿದು ಬಿದ್ದಿವೆ. ಹಾಗಾಗಿ ಎರಡೂ ಕಡೆಯಿಂದ ಯುದ್ಧ ಘೋಷಣೆಯಾಗಿದೆ. ಮಾಸ್ತರ್ ಹಾಕಿದ ಬೇಲಿಯನ್ನು ಪಿಡಿಒ ತೆಗೆಯೋದು, ಪಿಡಿಒ ಹಾಕಿದ ಬೇಲಿಯನ್ನು ಮಾಸ್ತರ್ ತೆಗೆಯೋದು ದಿನಾ ನಡೆಯುತ್ತಲೇ ಇದೆ. ಅದರಲ್ಲೂ ಡೇಂಜರಸ್ ಏನೆಂದರೆ ಸೇನಾ ಜಮಾವಣೆ. ಬಾಲೇಶ್ವರದ ವಿವಾದಿತ ಜಾಗದಲ್ಲಿ ಎರಡೂ ಕಡೆಯಿಂದ ಪೆಟ್ಟಿಸ್ಟ್ ಗಳ ಜಮಾವಣೆಯಾಗುತ್ತಿದೆ. ಪಿಡಿಒ ಉಪ್ಪಿನಂಗಡಿ ಕಡೆಯಿಂದ ಆರು ಫೀಟಿನವರನ್ನು, ಐದು ಫೀಟಿನವರನ್ನು, ಮೂರು ಫೀಟಿನವರನ್ನು ಕರೆ ತಂದು ಮಾರ್ಚ್ ಫಾಸ್ಟ್ ಮಾಡಿಸಿದರೆ ಇತ್ತ ಮಾಸ್ತರ್ ಕಲ್ಲುಗುಡ್ಡೆಯ ತಲವಾರು ಸ್ಪೆಷಲಿಸ್ಟ್ ಗಳನ್ನು, ಚೂರಿ ಚಿಕ್ಕಣ್ಣನಗಳನ್ನು, ಕೋಲು ತಾಲೀಮಿನವರನ್ನು, ನೆರ್ಪೆಲ್ ಪಂಡಿತರನ್ನು ತಂದು ಶೇಖರಿಸುತ್ತಿದ್ದಾರೆ. ಈಗಾಗಲೇ ಕುಡುದು ಟೈಟಾಗಿ ಬಂದ ಎರಡೂ ಕಡೆಯ ಸೈನಿಕರು ಬಾಯ್ತುಂಬಾ ಬೈದುಕ್ಕೊಂಡು ಸೂಸು ಮಾಡಿ ಜಲಯುದ್ದವನ್ನೂ, ಕೋಳಿ ತಿಂದು ಗ್ಯಾಸ್ಟಿಕ್ ಹೆಚ್ಚಾಗಿ ವಾಯುದಾಳಿಯನ್ನೂ ಮುಗಿಸಿಯಾಗಿದೆ. ಇವರು ಇನ್ನು ಭೂ ಧಾಳಿ ಶುರು ಮಾಡ್ಕೊಂಡು ಒಂಜೆಕ್ ಒಂಜರೆ ಆಗುವ ಮೊದಲು ಕಡಬ ಪೊಲೀಸರು ಒಮ್ಮೆ ಇಬ್ಬರನ್ನೂ ಕರೆದು ಕುಂತು ಮಾತಾಡಿದರೆ ಒಳ್ಳೇದಿತ್ತು. ಇಲ್ಲದಿದ್ದರೆ ಓಪನರ್ ಗಳ ವಿಕೆಟ್ ಗ್ಯಾರೆಂಟಿ.
ಅಲ್ಲ ಮಾರಾಯ್ರೆ ಒಬ್ಬ ಪಿಡಿಒ ಇನ್ನೊಬ್ಬ ಮಾಸ್ತರ್. ಇಬ್ಬರೂ ವಿದ್ಯಾವಂತರು. ಮಾಸ್ತರ್ ನಾಲಕ್ಕು ಮಕ್ಕಳಿಗೆ ಪಾಠ ಹೇಳಿ ಅವರನ್ನು ಸಮಾಜದ ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುವವರು, ಅದೇ ಪಿಡಿಒ ಇಡೀ ಒಂದು ಗ್ರಾಮ ಪಂಚಾಯಿತಿಯ ಆಡಳಿತ ನಡೆಸಿ ರಾಜ್ಯವನ್ನು ರಾಮರಾಜ್ಯ ಮಾಡುವಲ್ಲಿ ಗ್ರಾಮಗಳನ್ನು ತಂದು ಮುಂಚೂಣಿಯಲ್ಲಿ ನಿಲ್ಲಿಸುವವರು. ಇವರೇ ತುಂಡು ಜಾಗಕ್ಕಾಗಿ ಹೀಗೆಲ್ಲ ಕತ್ತಿ ಕತ್ತಿ ಹಿಡಕೊಂಡರೆ ಉಳಿದವರ ಕತೆ ಏನು? ವಾಯುಧಾಳಿ, ಜಲ ಧಾಳಿ ನಡೆಸಿದವರಿಗೂ ಇವರಿಗೂ ವ್ಯತ್ಯಾಸವೇ ಇಲ್ಲವೇ?
ಕೊನೆಯದಾಗಿ ಒಂದು ಜೋಕು. ಉಪ್ಪಿನಂಗಡಿಯಿಂದ ಬಂದ ಆರು ಫೀಟಿನವರು, ಐದು ಫೀಟಿನವರ ಮಧ್ಯೆ ಈ ಮೂರು ಫೀಟಿನವರು ಯಾಕೆ ಎಂದು ನಮ್ಮ ಮಾಹಿತಿದಾರರಲ್ಲಿ ಕೇಳಿದೆ. ಅದು ಆರು ಫೀಟಿನವರು ಮತ್ತು ಐದು ಫೀಟಿನವರ ಮಧ್ಯೆ ಫೈಟಿಂಗ್ ಆಗುವಾಗ ಮೂರು ಫೀಟಿನವರು ಅಡಿಯಿಂದ ಬಂದು ಕೈ ಹಾಕಲಂತೆ. ಇದು ಲೋಕಲ್ ಫೈಟಿಂಗ್ ನ ಹೊಸ ಟೆಕ್ನಿಕ್ ಅಂತೆ. ಹೇ.... ಪ್ರಭು....!
Post a Comment