ಬೇತೆ ಯಾರೂ ತೆಗೆಯಬಾರದು, ತಾನು ಮಾತ್ರ ತೆಗೆಯಬೇಕು, ಬೇರೆಯವರು ತೆಗೆದರೆ ಅಪ್ಪಗ ಫಾರೆಸ್ಟ್ ಇಲಾಖೆಗೆ ಚಾಡಿ ಹೇಳಿ ಹಿಡಿಸುವುದು. ಇದು ಕಡಬ ಕೊಂಬಾರಿನ ಪೊಯ್ಯೆ ಕಳ್ಳರ ಸ್ಟೈಲು. ಅಲ್ಲಿ ಗುಂಡ್ಯದ ಕೆಳಗಿನ ನದಿ, ಸಾರ್, ತೋಡು ಹೀಗೆ ಎಲ್ಲಾ ತಮ್ಮ ಡ್ಯಾಡಿ ಪ್ರಾಪರ್ಟಿ ಎಂಬಂತೆ ವರ್ತಿಸುತ್ತಿರುವ ಕೊಂಬಾರಿನ ಪೊಯ್ಯೆ ಕಳ್ಳರು ವರ್ಷವಿಡೀ ಕಾಡಿನಲ್ಲಿ, ಗುಂಡ್ಯಹೊಳೆಯ ತಟದಲ್ಲಿಯೇ ದಿನ ಕಳೆದು ಬಿಡುತ್ತಾರೆ.
ಇದು ಕೊಂಬಾರು. ಕಾಡು ಅಂದರೆ ಕಾಡು ಇಲ್ಲಿ. ಶಿರಾಡಿ ಘಾಟ್ ನ ತಪ್ಪಲಿನಲ್ಲಿದೆ. ಮರಗಳ್ಳರಿಗೆ ಸ್ವರ್ಗ ಇದ್ದ ಹಾಗೆ. ಇನ್ನು ಪೊಯ್ಯೆ ಕಳ್ಳರೂ ತಮ್ಮ ಫೀಲ್ಡ್ ನಲ್ಲಿ ಸಿಕ್ಸ್, ಫೋರ್ ಎತ್ತುತ್ತಾ ಇರುತ್ತವೆ. ಆದರೆ ಇಲ್ಲಿ ಒಂದು ಮರಳು ಮಾಫಿಯಾ ಇದೆ. ಇಲ್ಲಿ ಮರಳು ಆ ಜನ ಮಾತ್ರ ತೆಗೆಯಬೇಕೆಂದು ಅಲಿಖಿತ ಕಾನೂನು ಇದೆ. ಅರಣ್ಯ ಇಲಾಖೆಯನ್ನು ಬೆಂಡ್ ಮಾಡಿ, ಅವರಿಗೆ ಬಡಿಸಿ ಕಾಡಿನೊಳಗಿಂದ ಮರಳು ಲೋಡ್ ಆಗುತ್ತಿದೆ ಎಂದು ತಿಳಿದುಬಂದಿದೆ. ಗುಂಡ್ಯ, ಕೆಂಜಾಳ, ಕಾಪಾರ್ ಮುಂತಾದ ಕಡೆಗಳಿಂದ ಪೊಯ್ಯೆ ಟಿಪ್ಪರ್ ಹತ್ತುತ್ತಿದೆ. ಈ ಬಗ್ಗೆ ವಿಚಾರಿಸಿದರೆ ದೊಡ್ಡ ದೊಡ್ಡವರಿಗೆ ಕೊಡಲಾಗುತ್ತಿದೆ ಎಂಬ ಮಾಹಿತಿ ಇದೆ. ಈ ದೊಡ್ಡ ದೊಡ್ಡವರು ಯಾರು ಎಂದು ಗುಂಡ್ಯ ಕಾಡಿನ ಪ್ರತಿ ಮಂಗನಿಗೂ ಗೊತ್ತಿರುವ ಸಂಗತಿ. ಪಾಪದವನು ಒಂದು ಬಟ್ಟಿ ಪೊಯ್ಯೆ ತೆಗೆದರೂ ಗರಂ ಆಗುವ ಈ ಕೊಂಬಾರಿನ ಪೊಯ್ಯೆ ಮಾಫಿಯಾದ ವಿಷಯ ಒಮ್ಮೆ ದಕ್ಷಿಣ ಕನ್ನಡ ಪೋಲಿಸ್ ವರಿಷ್ಠನ ಟೇಬಲ್ ಗೆ ಮುಟ್ಟಿದರೆ ಅವರು ಚಳಿ ಬಿಡಿಸುತ್ತಿದ್ದರು.
Post a Comment