ಒಂದು ಸ್ವಾತಂತ್ರ್ಯಕ್ಕಾಗುವಷ್ಟು ಹೋರಾಟಗಳು ನಡೆದವು, ಒಂದು ಸರ್ವಾಧಿಕಾರದ ವಿರುದ್ಧ ಜನ ರೊಚ್ಚಿಗೆದ್ದಷ್ಟು ಜನ ಒಗ್ಗಟ್ಟಾದರು, ಲೋಡ್ ಗಟ್ಟಲೆ ಮನವಿ ಪತ್ರಗಳು ಸಂಬಂಧ ಪಟ್ಟವರ ಕಸದ ಬುಟ್ಟಿಯಲ್ಲಿ ತುಂಬಿ ತುಳುಕಾಡಿತು, ಜಿಲ್ಲಾಡಳಿತಕ್ಕೆ, ಜನ ಪ್ರತಿನಿಧಿಗಳಿಗೆ, ಮಂತ್ರಿಮಹೋದಯರಿಗೆ ಮನವರಿಕೆ ಮಾಡಲಾಯಿತು, ಆದರೆ ಇದೆಲ್ಲದರ ರಿಸಲ್ಟ್ ಮಾತ್ರ ಜೀರೋ. ಒಂದು ಜನ ವಿರೋಧಿ ಕೆಲಸವನ್ನು ಇಷ್ಟೆಲ್ಲಾ ಬೊಬ್ಬೆ ಹೊಡೆದರೂ ನಿಲ್ಲಿಸಲಾಗುತ್ತಿಲ್ಲ. ಒಂದು ಕೆಟ್ಟ ವ್ಯವಸ್ಥೆಯನ್ನು ದಷ್ಟ ಪುಷ್ಟ ದುಷ್ಟರು ಹೇಗೆಲ್ಲಾ ಯೂಸ್ ಮಾಡಿಕ್ಕೊಂಡು ಅಮಾಯಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದನ್ನು ಪರಾಂಬರಿಸಿ ನೋಡಲು ನೀವು ಒಮ್ಮೆ ಸುಳ್ಯ ತಾಲೂಕು ಮರ್ಕಂಜ ಗ್ರಾಮಕ್ಕೆ ಬರಬೇಕು. ಮರ್ಕಂಜ ಗ್ರಾಮ ಮಾರ್ ಕಂಜ ಆಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಂಡರೆ ಒಳ್ಳೆದು.
ಇದು ಮರ್ಕಂಜ. ಇಲ್ಲಿ ಸಾರ್ವಜನಿಕ ಜನನಿಬಿಡ ಪ್ರದೇಶದಲ್ಲಿ ಒಂದು ಜಲ್ಲಿ ಕಲ್ಲಿನ ಕ್ರಷರ್ ಇದೆ. ಹೇಗೆ ಅಂದರೆ ಹಂಪನಕಟ್ಟೆ ಸಿಗ್ನಲ್ ನಲ್ಲಿ ಪಟಾಕಿ ಫ್ಯಾಕ್ಟರಿ ಮಾಡಿದಂತೆ. ಬಹಳಷ್ಟು ದಿನಗಳಿಂದ ಈ ಒಂದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟಗಳು ನಡೆಯುತ್ತಲೇ ಬಂದಿದೆ. ಆದರೆ ಅದ್ಯಾಕೋ ಈ ಗಣಿಗಾರಿಕೆಗೆ ಬೀಗ ಹಾಕಿಸಲು ಆಗುತ್ತಿಲ್ಲ. ಯಾಕೆಂದರೆ ಗಣಿಗಾರಿಕೆಯ ದಷ್ಟ ಪುಷ್ಟ ದುಷ್ಟರು ಈಗಾಗಲೇ ಇಡೀ ವ್ಯವಸ್ಥೆಯನ್ನೇ ನಿಂಗೊಲು ಕೊಟ್ಟು ಮಲಗಿಸಿದೆ. ಜನಪ್ರತಿನಿಧಿಗಳು ಮರ್ಕಂಜದ ಹೋರಾಟಗಾರರನ್ನು ಕಂಡ ಕೂಡಲೇ ಅಡ್ಕದಲ್ಲಿ ಅಡಗಿ ಬಿಡುತ್ತಾರೆ. ಹೋರಾಟಗಾರರಿಗೆ ದಿಕ್ಕೇ ತೋಚುತ್ತಿಲ್ಲ.
ಹಾಗೆಂದು ಇದೊಂದು ಅಕ್ರಮ ಗಣಿಗಾರಿಕೆ. ಪೂಂಬಾಡಿಯ ಗೌಡ್ರಿಗೆ ದೇವರು ಕೊಟ್ಟ ಕೈಯಿಂದ ಪಾದೆ ಒಡೆದು ಜಲ್ಲಿ ಮಾಡಲು ಕೊಟ್ಟ ಪರವಾನಿಗೆ ಇದು. ನಂತರ ಗೌಡರು ಜಲ್ಲಿ ತೆಗೆದು ತೆಗೆದು ಕೈ ಬಚ್ಚಿದಾಗ ಡೆಲ್ಮಾ ಕಂಪನಿಗೆ ಜಲ್ಲಿ ತೆಗೆಯಲು ವಹಿಸಿ ಬಿಟ್ಟರು. ಆ ಕಂಪೆನಿ ಹತ್ರ ದುಡ್ಡಿತ್ತು. ಅವರು ಬಂದವರೇ ಢಂ... ಢೀಂ...ಮಾಡಿ ಜಲ್ಲಿ ತೆಗೆಯಲು ಶುರು ಮಾಡಿದರು. ಹಾಗಾಗಿ ಆವತ್ತಿನಿಂದ ಮರ್ಕಂಜ ಗ್ರಾಮಸ್ಥರಿಗೆ ವರ್ಷವಿಡೀ ದೀಪಾವಳಿ ಶುರುವಾಗಿ ಹೋಯ್ತು. ಇಲ್ಲಿ ಮಕ್ಕಳು ಕೇಪು ಪಟಾಕಿ ಕೂಡ ಕೇಳಲ್ಲ.
ಹಾಗೆಂದು ಬೊಳ್ಳುಳ್ಳಿ ಪಟಾಕಿ ಇಟ್ಟು ಬಂಡೆಗಳನ್ನು ಒಡೆಯಲು ಆಗಲ್ಲ. ಬಂಡೆ ಒಡೆಯಲು ಅಪಾಯಕಾರಿ ತೋಟೆಗಳನ್ನೇ ಉಪಯೋಗಿಸ ಬೇಕು. ಮ್ಯಾಕ್ಸ್ ವೆಲ್ ನಂತಹ, ಜಾಕ್ಸ್ ನಂತಹ ತೋಟೆ ಇಟ್ಟು ಒಡೆಯಲಿ, ಜಲ್ಲಿ ಮಾಡಲಿ, ಜಲ್ಲಿ ಮಾರಲಿ, ಕಲ್ಲಿನ ಗುಂಡಿಗೆ ಬಿದ್ದು ಸಾಯಲಿ ಯಾರೂ ಏನೂ ಅನ್ನಲ್ಲ. ಆದರೆ ಎಲ್ಲಿ ಇದನ್ನೆಲ್ಲ ಮಾಡಬೇಕಾದ್ದು? ಈ ಕಲ್ಲಿನ ಕ್ರಷರ್ ಸುತ್ತಾ ಮನೆಗಳಿವೆ, ಎರಡು ಮನೆಗಳನ್ನು ಇದೇ ದಷ್ಟಪುಷ್ಟ ದುಷ್ಟರು ಒಕ್ಕಲೆಬ್ಬಿಸಿ ಕಳಿಸಿದ್ದಾರೆ. ಈಗ ಇದ್ದ ಮನೆಗಳಿಗೆ ಇವರ ತೋಟೆಯಿಂದ ಭಾರೀ ಹಾನಿಗಳಾಗುತ್ತಿದೆ, ಇನ್ನು ಮರ್ಕಂಜದ ಅಷ್ಟೂ ರಸ್ತೆಗಳನ್ನು ಇವರ ಟಿಪ್ಪರ್ ಗಳು ಲಗಾಡಿ ತೆಗೆದು ಬಿಟ್ಟಿವೆ. ರಸ್ತೆ ತುಂಬಾ ಧೂಳೆದ್ದು ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಈಸ್ಟ್ ಮನ್ ಕಲ್ರರಿಗೆ ತಿರುಗಿ, ಕೆಂಪಾಗಿ, ಬೊಣ್ಯದ ಕಲರಿಗೆ ಬಂದು ಮನೆಗೆ ಮುಟ್ಟುವಾಗ "ಯಾರೋ ಮಾರ್ನೆಮಿ ವೇಸದವು ಬಂದ ಗಡ" ಎಂದು ಮನೆಯವರಿಗೇ ಗುರ್ತ ಸಿಗದಷ್ಟು ಧೂಳಿನ ಅಭಿಷೇಕ ಇಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕ್ರಷರಿನ ಬದಿಯಲ್ಲಿಯೇ ಮುಡ್ನೂರು ಶಾಲೆಯಿದೆ. ಕ್ರಷರಿನ ಪ್ರತಿ ತೋಟೆ ಸ್ಫೋಟವಾಗುವಾಗಲೂ ಶಾಲಾ ಮಕ್ಕಳ ಸಮೇತ ಚಿಕ್ಕ ಮಾಸ್ತರು, ದೊಡ್ಡ ಮಾಸ್ತರು, ಹೆಡ್ಡ ಮಾಸ್ತರು ಎಲ್ಲರೂ ಬೆಚ್ಚಿ ಬೀಳುತ್ತಾರೆ. ಜೀವ ಕೈಲೀ ಹಿಡಿದೇ ಪಾಠ ಮಾಡುವ ಪರಿಸ್ಥಿತಿ. ತೋಟೆ ಸ್ಫೋಟಕ್ಕೆ ಒಂದು ಪೀಸ್ ಪಾದೆ ಹಾರಿ ಬಂದರೂ ಸಾಕು ಶಾಲೆಯ ಫೋಟೋಗೆ ಮಾಲೆ ಬೀಳಲು. ಇನ್ನು ಮೀನಂಗೂರು ದುರ್ಗಾ ಪರಮೇಶ್ವರಿ ದೇವಸ್ಥಾನ ಕೂಡ ಕ್ರಷರಿನ ಹತ್ತಿರದಲ್ಲೇ ಇದ್ದು ಒಮ್ಮೆ ಇವರ ತೋಟೆಗೆ ದೇವಸ್ಥಾನದ ಗರ್ಭಗುಡಿಯಲ್ಲಿಯೇ ಬಿರುಕು ಬಿದ್ದಿತ್ತು ಎಂದು ತಿಳಿದುಬಂದಿದೆ. ಇನ್ನು ಬಡವರ ಕಾಲೋನಿಗಳು, ಕುಡಿಯುವ ನೀರಿನ ಕೊಳವೆ ಬಾವಿಗಳು, ನೀರಿನ ಟ್ಯಾಂಕ್ ಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸೊಸೈಟಿ, ಯುವಕ ಮಂಡಲದ ಕಟ್ಟಡ ಹೀಗೆ ಎಲ್ಲವೂ ಅಂದರೆ ಒಂದು ಊರಿಗೆ ಸಂಬಂಧ ಪಟ್ಟಿದ್ದು ಎಲ್ಲಾ ಅಲ್ಲಿರುವಾಗ ಆ ಊರಿಗೆ ಸಂಬಂಧ ಪಡದವರು ಬಂದು ಊರಿಗೆ ಸಂಬಂಧ ಪಟ್ಟದ್ದಕ್ಕೆಲ್ಲ ಅಪಾಯ ತರುತ್ತಿದ್ದರೂ ಆಡಳಿತ ವ್ಯವಸ್ಥೆ ಊರವರ ಚೆಂದ ನೋಡುತ್ತಾ ಕುಂತಿದ್ದು ಮಾತ್ರ ವಿಪರ್ಯಾಸವೇ ಸರಿ.
ಅಧ್ಯಕ್ಷೆ.. ಅಧ್ಯಕ್ಷೆ... ಅಧ್ಯಕ್ಷೆ... ಅಧ್ಯಕ್ಷೆ....
ಮೆಟ್ಟಿನಲ್ಲಿ ಹೊಡೆಯುವ ಬೊಮ್ಮೆಟ್ಟಿ
ಇನ್ನು ಧೂಳು ತುಂಬಿದ ಮರ್ಕಂಜದಲ್ಲಿ ಇವಳೊಬ್ಬಳು ಇದ್ದಾಳೆ ಅಧ್ಯಕ್ಷೆ. ಇವಳನ್ನು ಅಧ್ಯಕ್ಷೆ ಮಾಡಿದವರಿಗೆ ಸದ್ಯಕ್ಕೆ ಈ ಲೋಕದ ಮೇಲೆ ಯಾವುದೇ ಪ್ರಶಸ್ತಿಗಳಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡುತ್ತೇನೆ ಅಂದಳು ಅಧ್ಯಕ್ಷರ ಸೀಟಲ್ಲಿ ಬಂದು ಕುಂತಳು. ಸೀಟಿಗೆ ಅಕ್ರಮ ಗಣಿಗಾರಿಕೆಯವರನ್ನು ಕರೆದಳು ತಿಂಗಳಿಗೆ ನಂಗೆ ಇಂತಿಷ್ಟು ಕೊಡಿ ಎಂದು ಅಧ್ಯಕ್ಷರ ಸೀಟನ್ನೇ ಮಾರಿ ಬಿಟ್ಟಳು. "ಅಧ್ಯಕ್ಷರೇ ಗಣಿಗಾರಿಕೆ ವಿರುದ್ಧ ಹೋರಾಟ ಯಾವಾಗ ಶುರು ಮಾಡೋಣ" ಎಂದು ಕೇಳಿದವರಿಗೆಲ್ಲಾ ಚಪ್ಪಲಿ ಸೇವೆ ಮಾಡಿ ಬಿಟ್ಟಳು. ಇವಳದ್ದು ಒಂಥರಾ ರೌಡಿ ಗೆಟಪ್ಪು. ಸುಳ್ಯ ಪೋಲಿಸರಿಗೆ ಇವಳು ಬಿನ್ನೆರ್. ಸುಳ್ಯ ಪೋಲಿಸ್ ಠಾಣೆ ಇವಳಿಗೆ ಮಾವನ ಮನೆ ಇದ್ದ ಹಾಗೇ. ಪೋಲಿಸರು ಇವಳನ್ನು ಹುಡುಕಿಕೊಂಡು ಬರೋದು, ಇವಳು ಹೋಗಿ ಠಾಣೆಯಲ್ಲಿ ಠಕ್ಕರ ಬೆಂಚಿನಲ್ಲಿ ಕೂರೋದು ಅಪಗಪಗ ನಡೆಯುತ್ತಾ ಇರುತ್ತದೆ. ಇವಳ ಉದಲ್ ಹಿಡಿದ ಜಾತಕ ಎಲ್ಲಾ ಪೋಲಿಸರು ತೆಗೆದು ಓದಿದರೆ ಇವಳ ಹೆಸರು ರೌಡಿ ಲಿಸ್ಟಲ್ಲಿ ಬೀಳೋದು ಗ್ಯಾರಂಟಿ. ಎಲ್ಲರ ಮೇಲೂ ಏಕವಚನ, ಹೋದ ಕಡೆಯೆಲ್ಲಾ ಜಗಳ, ಮಾತೆತ್ತಿದರೆ ಚಪ್ಪಲಿ ಎತ್ತೋದು, ಅವಳೇ ಜಗಳ ಮಾಡೋದು ಅವಳೇ ಓಡಿ ಹೋಗಿ ಕಂಪ್ಲೇಂಟ್ ಕೊಡೋದು, ಮಹಿಳಾ ಆಯೋಗದವರ ಮುಂದೆ ಧಿರೀಲ ಅಳೋದು, ಕಾಲು ಕೆರೆದು ಜಗಳ, ಬೀದಿ ಕಾಳಗ ಮುಂತಾದ ಮಾರಿಮುತ್ತು ಗುಣಗಳನ್ನೆಲ್ಲ ಮೈಗೂಡಿಸಿಕೊಂಡಿರುವ ಈಕೆಯ ಕಾರಣದಿಂದಲೇ ಅಕ್ರಮ ಗಣಿಗಾರಿಕೆಯವರು ಯಾವುದೇ ಹೆದರಿಕೆ ಇಲ್ಲದೆ ರಾಜಾರೋಷವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇವಳಿಗೊಬ್ಬ ಬಾಡಿ ಗಾರ್ಡ್ ಇದ್ದು ಅವನು ಜಾಗ, ಮನೆ ಮಠ ಎಲ್ಲ ಮಾರಿದ ದುಡ್ಡನ್ನು ಇವಳು "ಇತ್ತೇ ಕೊರ್ಪೆ" ಎಂದು ತಗೊಂಡಿದ್ದು ಇನ್ನು ಅವನ ಡಿಕ್ಕಿಗೆ ಯಾವಾಗ ಲಿಂಬೆ ಹುಳಿ ಇಟ್ಟು ಡಿಶುಂ ಮಾಡುತ್ತಾಳೆ ಎಂದು ದೇವರಿಗೇ ಗೊತ್ತು. ನ್ಯಾಯಾಲಯಗಳಲ್ಲಿ ಕೂಡ ಇವಳ ಪೌರುಷದ ಬಗ್ಗೆ ಕೇಸುಗಳಿದ್ದು ಯಾವಾಗ ಬೇಕಾದರೂ ಆಟಿ ಕೂರಲು ಹೋಗುವ ಅಪಾಯಗಳಿವೆ. ಹಾಗೆಂದು ಮರ್ಕಂಜ ಸ್ವಲ್ಪ ಡೀಸೆಂಟ್ ಏರ್ಯ ಆಗಿದ್ದು ಇವಳಿಗೆ ಮಾತ್ರ ಅಪಗಪಗ ಭೂತ ಹಿಡಿದು ಊರಿನ ಹೆಸರಿಗೆ ಮಸಿ ಬಳಿಯುತ್ತಿದ್ದಾಳೆ ಎಂಬ ಅಸಮಾಧಾನ ಊರ ಜನರಲ್ಲಿದೆ.
Post a Comment