ಸುಳ್ಯದ ಕೆಲವು ಅಂಡಮಾನ್ ಗಳಲ್ಲಿ ಯಾರು ಏನು ಮಾಡಿದರೂ ಏನೂ ಆಗಲ್ಲ. ಇತ್ತೀಚಿನ ದಿನಗಳಲ್ಲಿ ಸಮಾಜ ಘಾತುಕ ಶಕ್ತಿಗಳು ಸುಳ್ಯದ ಕೆಲವು ಅಂಡಮಾನ್ ಗಳಲ್ಲಿ ಬಂದು ಶೀಟ್ ಹಾಕುತ್ತಿದ್ದು ಈ ವಿಚ್ಛಿದ್ರಕಾರಿ ಶಕ್ತಿಗಳನ್ನು ಕುಪ್ಪಿಯಲ್ಲಿ ತುಂಬಿಸಿ ಪಯಸ್ವಿನಿಯಲ್ಲಿ ವಿಸರ್ಜನೆ ಮಾಡಿದರೆ ಮಾತ್ರ ಸುಳ್ಯದ ಅಂಡಮಾನ್ ಗಳನ್ನು ಬಚಾವ್ ಮಾಡ ಬಹುದು. ಇಲ್ಲದಿದ್ದರೆ ಇಲ್ಲಿ ಕೋತಿ ತಾನೂ ಕೆಡುತ್ತದೆ, ವನವನ್ನೆಲ್ಲ ಕೆಡಿಸಿ ಬಿಡುತ್ತದೆ.
ಅಲ್ಲಿ ಹರಿಹರ, ಬಾಳುಗೋಡು, ಗುತ್ತಿಗಾರು,ಬಳ್ಪ ಭಾಗಗಳಲ್ಲಿ ನಿರಂತರವಾಗಿ ಕೋಳಿ ಕಟ್ಪ ನಡೆಯುತ್ತಿದ್ದು ಕಾನೂನು ವ್ಯವಸ್ಥೆಯ ಸವಾಲಿಗೆ ಸವಾಲ್ ಹಾಕಲಾಗುತ್ತಿದೆ. ಶೀಟ್ ಹಾಕಿ, ಶಾಮಿಯಾನ ಸುತ್ತಿ,ಪಿಚ್ ತಯಾರಿಸಿ, ಕುಲೆಗಳಿಗೆ ಬಡಿಸಿ, ಅಗೆಲು ಕೊಟ್ಟು ನಿರಂತರವಾಗಿ ಎರಡ್ಮೂರು ದಿವ್ಸ ಕೋಳಿ ಕಟ್ಟ ನಡೆಸಲಾಗುತ್ತಿದೆ. ಇವತ್ತು ಹರಿಹರದಲ್ಲಿ ನಡೆಸಿದರೆ ಆಫ್ಟರ್ ತ್ರೀ ಡೇಸ್ ಬಾಳುಗೋಡಿನಲ್ಲಿ ಕಟ್ಟ. ಬಾಳುಗೋಡಿನಲ್ಲಿ ಕಟ್ಟದ ಫೈಟಿಂಗ್ ನಲ್ಲಿ ಸತ್ತ ಪೆಟ್ಟಿಸ್ಟ್ ಕೋಳಿಗಳ ಬೊಜ್ಜ ಮುಗಿಯುವ ಮೊದಲೇ ಗುತ್ತಿಗಾರಿನಲ್ಲಿ ಶೀಟ್ ಹಾಕಲಾಗುತ್ತದೆ. ನಾಳೆ ಬಲ್ಪದಲ್ಲಿ ಕಟ್ಟ ಇದೆ ಎಂದು ನಮ್ಮ ಕೋಳಿ ಕಟ್ಟ ಬೇಹುಗಾರರು ಕೊ..ಕ್ಕೋ.... ಕೋ...ಕೋ... ಎಂದು ಹೇಳಿದ್ದಾರೆ.
ಹಾಗೆಂದು ಈ ವ್ಯವಸ್ಥೆ ಎಲ್ಲವೂ ಹಗಲೇ ಸಾರ್ವಜನಿಕ ಸ್ಥಳಗಳಲ್ಲಿಯೇ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಕಾನೂನು ಮಾತ್ರ ಅವರು ಕೊಟ್ಟಿದ್ದನ್ನು ತಿಂದುಂಡು ಕಣ್ಣು ಮುಚ್ಚಿ ಕುಂತಿರುತ್ತದೆ. ಇದೀಗ ನಾಳೆ ಬಲ್ಪದಲ್ಲಿ ಕಟ್ಟ. ಮೈಪೆ, ಕೆಮೈರೆ, ಉರಿಯೆ, ಕುಪ್ಪುಳೆ, ಬೊಳ್ಳೆ, ಗಿಡಿಯೆ,ಕರ್ಬೊಳ್ಳೆ, ಕಾವೆ, ನೀಲೆ, ಕೆಮೈರೆ ಕುಪ್ಪುಳೆ, ಕೆಮೈರೆ ಗಿಡಿಯೆ ಮುಂತಾದ ಈ ಭಾಗದ ಪೆಟ್ಟಿಸ್ಟ್ ಕೋಳಿಗಳು ಇವತ್ತೇ ನೆಟ್ ಪ್ರಾಕ್ಟೀಸ್ ಮಾಡಿದ್ದು ನಾಳೆ ಟಿಕೆಟ್ ತೆಗೆಯಲು ರೆಡಿಯಾದಂತಿದೆ. ಸತ್ತ ಪೆಟ್ಟಿಸ್ಟ್ ಕೋಳಿಗಳ ಬೊಜ್ಜ ಬರ್ಪಿ ವರ್ಷ ಬೊಳ್ಪುಗು ಬೇಗ.
![]() |
ರಿಷ್ಯಂತ್ IPS, ಪೋಲಿಸ್ ವರಿಷ್ಠಾಧಿಕಾರಿ ದ.ಕ |
ಅದರಲ್ಲೂ ಈ ಕಟ್ಟಕ್ಕಿಂತ ಅಪಾಯಕಾರಿ ಆಟ ಅಂದರೆ ಇದೇ ಶೀಟ್ ನ ಅಡಿಯಲ್ಲಿ ನಡೆಯುವ ಕಲರ್ ಬಾಲ್ ಮತ್ತು ಕುಟು ಕುಟು ಎಂಬ ಗ್ಯಾಂಬ್ಲಿಂಗ್ ಗಿಂತಲೂ ಅಪಾಯಕಾರಿ ಆಟಗಳು. ಕೋಳಿ ಕಟ್ಟಗಳಲ್ಲಿ ಕೋಳಿ ಬಾಡಿಯಾದರೂ ಸಿಗುತ್ತದೆ ಆದರೆ ಕುಟು ಕುಟು ಆಡಿದವ ಸೀದಾ ಕೆರೆ,ಬಾವಿಗೆ ಗ್ಯಾರೆಂಟಿ. ಪರ್ಮಿಷನ್ ಕೋಳಿ ಕಟ್ಟಕ್ಕೆ. ಅದರ ಅಡಿಯಲ್ಲಿ ಕುಟು ಕುಟು.
ಯುವರ್ ಆನರ್,
ಹೇಳುವವರಿಲ್ಲ, ಕೇಳುವವರಿಲ್ಲ. ಕಾನೂನಿನ ಪಾಲನೆಯಿಲ್ಲ. ಸಮಾಜ ಕಂಟಕರ ಮೆರವಣಿಗೆಯಲ್ಲಿ ಕಾರ್ಯಾಂಗದ್ದೇ ಬ್ಯಾಂಡ್ ಸೆಟ್, ಮಂಗಳವಾದ್ಯ, ಗೊಂಬೆ ಕುಣಿತ.ಮೇಲೆ ಕುಂತವರಿಂದ, ಕೆಳಗೆ ಕುಂತವರಿಂದ ಅಡ್ಡ ಪಂಕ್ತಿ ನೀಟ ಪಂಕ್ತಿಯಲ್ಲಿ ಸಹ ಭೋಜನ. ಮೆರವಣಿಗೆ ಎತ್ತ ಸಾಗುತ್ತಿದೆ, ಎಲ್ಲಿ ನಿಲ್ಲುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಚಿಕ್ಕ ಚಿಕ್ಕ ಸಮಾಜ ಕಂಟಕರಿಗೇ ಆನ್ ದಿ ಸ್ಪಾಟ್ ಜಡ್ಜ್ ಮೆಂಟ್ ಕೊಡಲು ಆಗದ ಈ ವ್ಯವಸ್ಥೆಯಲ್ಲಿ ಸಾಮಾನ್ಯ ಜನರ ಪಾಡೇನು? ಕತೆಯೇನು?
Post a Comment