ಪೆರ್ಲ ಯಾವ ಪೋಲಿಸ್ ಸ್ಟೇಷನ್ ಸರಹದ್ದಿನಲ್ಲಿ ಬರುತ್ತದೆ ಎಂದು ಗೊತ್ತಿಲ್ಲ. ಅದು ಕರ್ನಾಟಕ ಅಲ್ಲ. ಕೇರಳ ಸ್ಟೇಟ್ ನ ವಿಷಯ. ವಿಷಯ ಎಂಥದ್ದಿಲ್ಲ ಅಲ್ಲಿ ಪೆರ್ಲದ ಗುಡ್ಡೆಯಲ್ಲಿ ದಿನಾ ಜುಗಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಪೆರ್ಲದ ಗುಡ್ಡೆಯಲ್ಲಿ ಟೆಂಟ್ ಹಾಕಿ, ಬರ್ಸದ ನೀರು ಬೀಳದ ಹಾಗೆ ಶೀಟ್ ಹಾಕಿ, ಫೆಡ್ಲೈಟ್ ಬೊಲ್ಪಿನಲ್ಲಿ ಇಂಟರ್ ಸ್ಟೇಟ್ ಜುಗಾರಿ ನಡೆಸಲಾಗುತ್ತಿದೆ.
ಈ ಜುಗಾರಿ ಗೇಮ್ ಗೆ ಇತ್ಲ ಕಡೆಯಿಂದ ಪುತ್ತೂರು, ಬಂಟ್ವಾಳ, ಕಡಮ್ಮ ತಾಲೂಕಿನ ಹೈಟೆಕ್ ಜುಗಾರಿ ಪ್ಲೇಯರ್ಸ್ ಕೂಡ ಬರುತ್ತಿದ್ದು ಇಲ್ಲಿನ ಜುಗಾರಿ ಸ್ವಯಂ ಸೇವಕರು ಇದ್ದವರನ್ನೆಲ್ಲ ಹೊತ್ತುಕೊಂಡು ಬಂದು ಅತ್ತುಕೊಂಡು ಹೋಗುತ್ತಿದ್ದಾರೆ. ಪೆರ್ಲ ಗುಡ್ಡೆಯಲ್ಲಿ ಕೋಮಣವನ್ನೂ ಕಳೆದುಕೊಂಡು ಹೋದವರ ಸಂಖ್ಯೆಯೂ ದೊಡ್ಡದಿದೆ. ಈ ಜುಗಾರಿ ಅಡ್ಡೆ ಬಹಳ ದಿನಗಳಿಂದ ಚಾಲ್ತಿಯಲ್ಲಿದ್ದು ಸಂಬಂಧ ಪಟ್ಟ ಪೋಲಿಸರಿಗೆ ಗುಡ್ಡೆ ಹತ್ತಲು ಬಹಳ ಕಷ್ಟವಾದ ಕಾರಣ ಜುಗಾರಿ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತಿದೆ. ಅದರಲ್ಲೂ ಪೆರ್ಲ ಗುಡ್ಡೆಯಲ್ಲಿ ಭಯಂಕರ ನೈಟ್ ಶುರುವಾದ ಮೇಲೆ ಜುಗಾರಿ ಕಲ ಬಿಡಿಸುತ್ತಿದ್ದು ಒಂದು ಮೆನ್ಪುರಿ ಲೈಟ್ ಹಾಕಿಕೊಂಡು ಸೂಸು ಮಾಡಲು ಬಂದರೂ " ಅದು ಮೆನ್ಪುರಿ" ಎಂಬ ಕರೆಕ್ಟ್ ಮೆಸೇಜ್ ಬರುವಷ್ಟು ಇವರ ನೆಟ್ ವರ್ಕ್ ಇದೆ. ಹಾಗಾಗಿ ಇಲ್ಲಿ ತನಕ ಈ ಪರಮ ಪವಿತ್ರ ಸ್ಥಳಕ್ಕೆ ಯಾವುದೇ ಪೋಲಿಸರು ರೈಡು ಬಿದ್ದಿಲ್ಲ.
ಇವತ್ತು ಕೂಡ ನೈಟ್ ಪೆರ್ಲ ಗುಡ್ಡೆಯಲ್ಲಿ ಜುಗಾರಿ ಇದ್ದು ಜುಗಾರಿಕೋರರು ಈಗಾಗಲೇ ಪೌಡರ್ ಬಳಿದುಕೊಂಡು ಫ್ರೆಂಡ್ ಮನೆಯಲ್ಲಿ ಕುಲೆಗಳಿಗೆ ಬಡಿಸ್ಲಿಕೆ ಉಂಟು ಎಂದು ಪಜ್ಜಿ ಪಜ್ಜಿಲೊಟ್ಟೆ ಹೇಳಿ ಮನೆಯಿಂದ ಹೊರಟು ಪೆರ್ಲ ಗುಡ್ಢೆ ಕಡೆ ಹೊರಟಿದ್ದಾರೆ. ಸಂಬಂಧಪಟ್ಟ ಪೋಲಿಸರಿಗೆ ಗುಡ್ಡೆ ಹತ್ತಲು ಕಷ್ಟವಾದರೆ ರಿಕ್ಷಾದಲ್ಲಿಯಾದರೂ ಹೋಗಿ ಡೆಡೆನ್ ಡಿಶ್ ಎಂದು ಒಮ್ಮೆ ಜುಗಾರಿಕೋರರ ಎದುರು ಪ್ರತ್ಯಕ್ಷರಾಗಿ ವರ ಕೊಟ್ಟು ಬರೋದು ಒಳ್ಳೆಯದು. ಇಲ್ಲದಿದ್ದರೆ ಗುಡ್ಡೆಯಲ್ಲಿ ಜಾತ್ರೆ, ರಥೋತ್ಸವ ಎಲ್ಲಾ ಮಾಡಿಯಾರು.
Post a Comment