July 2024

           



 ಕ್ಯಾರೇ ಮಾಡಲ್ಲ ಈ ಆಸಾಮಿ ಯಾರನ್ನೂ. ಅಲ್ಲ ಮಾರಾಯ್ರೆ ಒಂದು ಶಾಲೆ, ಶಾಲೆ ಅಂದರೆ ವಿದ್ಯಾ ದೇಗುಲ, ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬರುವ ಮಕ್ಕಳು, ಮಕ್ಕಳ ದೊಡ್ಡ ಬದುಕಿನ ಚಿಕ್ಕ ಪೌಂಡೇಶನ್ ಅಲ್ಲಿದೆ, ಶಾಲಾ ಮಕ್ಕಳು ಪಠ್ಯೇತರ ಚಟುವಟಿಕೆ ಟೈಮಲ್ಲಿ ಆಟದ ಮೈದಾನದಲ್ಲಿ ಆಟ ಆಡುತ್ತಾರೆ ಮತ್ತು ಅದೇ ಶಾಲಾ ಗ್ರೌಂಡಿನ ಬದಿಯಲ್ಲಿ ಗಂಗಸರ ಮಾರಾಟ ಮಾಡಲಾಗುತ್ತಿದೆ. ಅದೇ ಶಾಲಾ ಮಕ್ಕಳ ಗ್ರೌಂಡಿನಲ್ಲಿಯೇ ರಣ ಕುಡುಕರು ಟೈಟಾಗಿ ತೂರಾಡುತ್ತಾ ಲೇಲೆ ಹಾಕುತ್ತಾರೆ ಮತ್ತು ಇದನ್ನೆಲ್ಲ ಮಕ್ಕಳು ಬೆರಗು ಕಣ್ಣುಗಳಿಂದ ನೋಡುತ್ತಾ ಇರುತ್ತಾರೆ. ಇದು ಸುಳ್ಯ ತಾಲೂಕು ಅರಂತೋಡು ಗ್ರಾಮದ ಅಡ್ತಲೆ ಎಂಬ ಊರಿನ ಕತೆ. ಶಾಲೆ ಗ್ರೌಂಡಿನ ಬದಿಯಲ್ಲಿ ಗಂಗಸರ ಮಾರಾಟ ಮಾಡುವ ಲೋಫರ್ ವ್ಯಕ್ತಿ ಆ ಊರಿನ ಪ್ರಭಾವಿ ವ್ಯಕ್ತಿ. ಎಲ್ಲಿಗೆ ಬಂತು ಮಾರಾಯ್ರೆ ಕಾಲ.
   ಇದು ಅಡ್ತಲೆ. ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿದೆ. ಅರಂತೋಡು ಸಿಟಿಯಿಂದ ಏಳು ಕಿ.ಮೀ ದೂರದಲ್ಲಿದೆ. ಅಡ್ತಲೆಯಿಂದ ಇತ್ಲಗಡೆ ಮೂರು ಕಿಲೋ ಮೀಟರ್ ನಲ್ಲಿ ಮರ್ಕಂಜ ಸಿಗುತ್ತದೆ ಮತ್ತು ಇನ್ನೂ ಇಂಚಿ ಬಂದರೆ ಸುಳ್ಯ ಸುಬ್ರಹ್ಮಣ್ಯ ರಸ್ತೆ ಸಿಗುತ್ತದೆ ಅಷ್ಟೇ. ಬೇರೆಂತದೂ ಇಲ್ಲ. ಹಾಗೆ ಅಡ್ತಲೆ ಎಂಬ ಊರನ್ನು ಅಂಡಮಾನಿನ ತಮ್ಮ ಎಂದೂ ಹೇಳಿದರೂ ತಪ್ಪಾಗಲಾರದು. ಇಂಥ ಅಡ್ತಲೆಯಲ್ಲಿ ಒಂದು ಸಣ್ಣ ಸಮಸ್ಯೆ ಇದೆ. ಇಲ್ಲಿನ ಲೋಕಲ್ ಕುಡುಕರ ದೊಂಡೆ ಪಸೆ ನೀಗಿಸಲು ಸರಿಕಟ್ಟ್ ವ್ಯವಸ್ಥೆ ಇಲ್ಲ. ಇಲ್ಲಿನ ಕುಡುಕರು ಟೈಟ್ ಆಗಲು ಒಂದೋ ಏಳು ಕೀಲೋ ಏರುತ ಇಳಿಯುತ‌ ಅರಂತೋಡಿಗೆ ಹೋಗಬೇಕು ಇಲ್ಲದಿದ್ದರೆ ಮರ್ಕಂಜ ದಾಟಿ ಗುತ್ತಿಗಾರಿಗೆ ಬರಬೇಕು. ಇದು ಎರಡೂ ಕಷ್ಟ ಸಾಧ್ಯ. ಎರಡೂ ಕಡೆ ಹೋದರೂ ಕುಡುಕರ ಟೊಪ್ಪಿ ರಟ್ಟುತ್ತದೆ. ಇನ್ನು ಅಡ್ತಲೆಯ ಟೈಟ್ ಮಾಸ್ಟರ್ ಗಳಂತೂ ಆಚೆ ಅರಂತೋಡಿಗೆ ಹೋದರೆ ಅಂಚಿಯೇ ಬಾಕಿ ಈಚೆ ಗುತ್ತಿಗಾರಿಗೆ ಬಂದರೆ ಇಂಚಿಯೇ ಬಾಕಿ ಎಂಬ ಪರಿಸ್ಥಿತಿ ಬಹಳ ಹಿಂದೆ ಇತ್ತು. ಅಡ್ತಲೆಯ ರಣ ಕುಡುಕರ ಈ ಒಂದು ಹೇಳಲಾಗದ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸಿದ್ದು ಅಡ್ತಲೆಯ ಒಬ್ಬ ಮಹಾನು ಪುರ್ಸ. ಹೆಸರು ಸದಾ ಉಗ್ಗಪ್ಪ ಯಾನೆ ಪರಬ್ಬ ಸದಾ ಯಾನೆ ಕ್ವಾಟ್ರು ಸದಾ ಯಾನೆ ಬಾಟ್ಲಿ  ಸದಾ ಯಾನೆ ತೊಟ್ಟೆ ಸದಾ ಅಲಿಯಾಸ್ ಗಂಗಸರ ಸದಾ. ಅಡ್ತಲೆಗೆ ಇವನ ಸೇವೆ ಶ್ಲಾಘನೀಯವಾದದ್ದು.
   ಇವನು ಸದಾ ಉಗ್ಗಪ್ಪ. ಲೋಕಲ್ ಕಾಂಗ್ರೆಸ್ ಲೀಡರ್. ಮಾಜಿ ಪಂಚಾಯ್ತಿ ಮೆಂಬರು. ಇವನಿಗೆ ಬಹಳ ಹಿಂದಿನಿಂದಲೇ ಅಡ್ತಲೆ ಶಾಲೆಯ ಗ್ರೌಂಡಿನ ಬದಿಯಲ್ಲಿ ಗಂಗಸರ ಮಾರಾಟ ಮಾಡುವ ಕಾಯಕ. ಬಹಳ ಹಿಂದೆಯೇ ತೊಟ್ಟೆ ಗಂಗಸರ ಕಾಲದಲ್ಲಿಯೇ ಅಡ್ತಲೆ ಶಾಲೆಯ ಗ್ರೌಂಡಿನ ಬದಿಯಲ್ಲಿ ಇವನು ಗಡಂಗ್ ಮಾಡಿ ತೊಟ್ಟೆ ಸೇಲ್ ಮಾಡುತ್ತಾ ಬೆಳೆದಿದ್ದ. ಆವಾಗಲೇ ಶಾಲೆಯ ಗ್ರೌಂಡಿನ ತುಂಬಾ‌ ಖಾಲಿ ತೊಟ್ಟೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿತ್ತು. ಶಾಲಾ ಮಕ್ಕಳೇ ತೊಟ್ಟೆ ಹೆಕ್ಕಿ ಹೆಕ್ಕಿ ಕ್ಲೀನ್ ಮಾಡುವ ಪರಿಸ್ಥಿತಿ ಇತ್ತು.‌ ನಂತರ ತೊಟ್ಟೆ ಬ್ಯಾನ್ ಆಯಿತಲ್ಲ ಆಗ ಸದಾ ಉಗ್ಗಪ್ಪನ ಭಾಗ್ಯದ ಬಾಗಿಲು ದಡಬಡ ಅಂತ ತೆರೆದುಕೊಂಡಿತು. ಶಾಲಾ ಗ್ರೌಂಡಿನ ಬದಿಯಲ್ಲಿ ಗಡಂಗ್ ಮಾಡಿಕೊಂಡಿದ್ದ ಸದಾ ಉಗ್ಗಪ್ಪ ಗಡಂಗನ್ನೇ ವೈನ್ ಶಾಪ್ ಮಾಡಿ ಬಿಟ್ಟ. ಈಗ ಮಕ್ಕಳು ಖಾಲಿ ಬಾಟ್ಲಿ ಹೆಕ್ಕುತ್ತಿದ್ದಾರೆ.
   ಹಾಗೆ ಅಡ್ತಲೆ ಶಾಲೆಯ ಗ್ರೌಂಡಿನ ಬದಿಯ ಸದಾ ಉಗ್ಗಪ್ಪನ ಗಡಂಗಿಗೆ ಬ್ಯಾರವೇ ಬ್ಯಾರ. ಯಾಕೆಂದರೆ ಅಡ್ತಲೆಯ ರಣ ಕುಡುಕ ತನ್ನ ದೊಂಡೆ ನೀಗಿಸಲು ಒಂದು ಕ್ವಾಟ್ರಿಗೆ  ಬೇಕಾಗಿ ಆಚೆ ಏಳು ಕೀಲೋ ದೂರದ ಅರಂತೋಡಿಗೂ ಹೋಗಲು ಆಗಲ್ಲ ಅಥವಾ ಈಚೆ ಮರ್ಕಂಜ ದಾಟಿ ಗುತ್ತಿಗಾರಿಗೆ ಬರಲೂ ಆಗಲ್ಲ. ಹಾಗಾಗಿ ಸದಾ ಉಗ್ಗಪ್ಪನ ಕ್ವಾಟ್ರು ಅಡ್ಡೆಯೇ ಅಡ್ತಲೆ ಮತ್ತು ಸುತ್ತಮುತ್ತಲಿನ ಅಷ್ಟೂ ಕುಡ್ಕರಿಗೆ ವೈನುಶಾಪು,ಬಾರು, ಪಬ್ಬು, ಕ್ಲಬ್ಬು ಎಲ್ಲವೂ ಆಗಿದೆ. ಉಗ್ಗಪ್ಪ ಕ್ಯಾಬರೆ ಡ್ಯಾನ್ಸ್ ಒಂದು ಇಟ್ಟಿಲ್ಲ ಅಡ್ತಲೆಯ ಮಹಿಳೆಯರ ಅಜ್ಜಿ ಪುಣ್ಯಕ್ಕೆ. ಬಾಕಿ ಎಲ್ಲಾವೂ ಉಗ್ಗಪ್ಪನ ಗಡಂಗಿನಲ್ಲಿದೆ. ಹಾಗೆಂದು ಉಗ್ಗಪ್ಪನ ಗಡಂಗಿನಲ್ಲಿ ಕ್ವಾಟ್ರಿಗೆ, ಅದಕ್ಕೆ ಇದಕ್ಕೆ ರೇಟು ಕೂಡ ಜಾಸ್ತಿ ಇದೆ. ಕುಡುಕರ ಟೊಪ್ಪಿ ರಟ್ಟುವ ರೇಟುಗಳಿವೆ. ಒಂದು ಕ್ವಾಟ್ರಿಗೆ ಹೊರಗೆ ಎಂಬತ್ತು ರೂಪಾಯಿ ಇದ್ದರೆ ಅದೇ ಕ್ವಾಟ್ರಿಗೆ ಉಗ್ಗಪ್ಪನ ರೇಟು ನೂರ ಹತ್ತು, ಇಪ್ಪತ್ತು. ಯಾಕೆ ಉಗ್ಗಪ್ಪು ಇಷ್ಟು ಕಡಿಯುತ್ತಿಯಾ ಎಂದು ಕೇಳಿದರೆ ಸುಳ್ಯ ಸ್ಟೇಷನ್ ಗೆ ಮಾಮೂಲು ಕೊಡಬೇಕು, ಅಬಕಾರಿ ಪೋಲಿಸರಿಗೆ ಮಾಮೂಲು ಕೊಡಬೇಕು, ಪುತ್ತೂರು ಡಿವೈಎಸ್ಪಿಗೂ ಇಲ್ಲಿಂದ ಹೋಗುತ್ತದೆ ಎಂಬ ಉತ್ತರ ಬರುತ್ತದೆ. ಇನ್ನು ಸದಾ ಉಗ್ಗಪ್ಪನ ಗಡಂಗಿನ ವಿಶೇಷ ಏನೆಂದರೆ ಇಡೀ ದೇಶದಲ್ಲೇ ಮದ್ಯ ಮಾರಾಟ ಬಂದ್ ಆದರೂ ಸದಾನ ಗಡಂಗ್ ಮಾತ್ರ ಕುಡ್ಕರಿಗೆ ಸದಾ  ತೆರೆದಿರುತ್ತದೆ. ಗಾಂಧಿ ಜಯಂತಿ ದಿನವೂ ಉಗ್ಗಪ್ಪನಿಗೆ ಗಾಂಧಿಯೂ ಇಲ್ಲ ಜಯಂತಿಯೂ ಇಲ್ಲ. ಇನ್ನು ಎಲೆಕ್ಷನ್ ಟೈಮಲ್ಲಂತೂ ಉಗ್ಗಪ್ಪನ ಗಡಂಗಿನಲ್ಲಿ ಕುಡಿದು ಸೂಸು ಮಾಡಿದ ಸೂಸಿನಲ್ಲೇ ಒಂದು ಸಮುದ್ರ ಮಾಡಬಹುದು. ಉಗ್ಗಪ್ಪ ಅಡ್ತಲೆಯ ರಣ ಕುಡುಕರ ಪಾಲಿನ ಕಾಮಧೇನು, ಕಲ್ಪವೃಕ್ಷ ಮತ್ತು ಯೂಬಿ ಮಲ್ಯ.


   ಹಾಗೆಂದು ಉಗ್ಗಪ್ಪ ಪೋಲಿಸ್ ಲೆವೆಲ್ ನಲ್ಲಿ, ಅಬ್ಕಾರಿ ಲೆವೆಲ್ ನಲ್ಲಿ ಭಾರೀ ಪವರ್ಫುಲ್ಲು. ಅಡ್ತಲೆ ಸುತ್ತಾಮುತ್ತಾ ಯಾರೇ ಆಗಲಿ ಒಂದು ಚಮಚೆ ಮದ್ಯ ಮಾರಾಟ ಮಾಡಿದರೂ ಅಪ್ಪಗ ಸುಳ್ಯ ಪೋಲಿಸರಿಗೆ, ಅಬ್ಕಾರಿ ಪೋಲಿಸರಿಗೆ ಚಾಡಿ ಹೇಳಿ ಅವರನ್ನು ಹಿಡಿಸುತ್ತಾನೆ. ಆ ಭಾಗದಲ್ಲಿ ಯಾರೇ ಆಗಲಿ ವೈನ್ ಶಾಪ್ ಗೆ, ಬಾರ್ ಗೆ ಅರ್ಜಿ ಗುಜರಾಯಿಸಿದರೂ ಇವನು ಅಡ್ಡಗಾಲು, ನೀಟಗಾಲು ಇಡುತ್ತಾನೆ. ಯಾವುದಕ್ಕೂ ಉಗ್ಗಪ್ಪ  ಬುಡುದುಲ್ಲೆ ಗಡ ಎಂಬ ಪ್ರತೀತಿ ಈ ಭಾಗದಲ್ಲಿ ಇದೆ. ಇದೀಗ ಅಡ್ತಲೆಯಿಂದ ಐದು ಕಿಲೋ ದೂರದ ಸೇವಾಜೆಯಲ್ಲಿ ಒಂದು ಎಂಎಸ್ ಐಎಲ್ ಓಪನ್ ಆಗಲಿದೆ ಎಂದು ಗಾಳಿಸುದ್ದಿ ಇದೆ. ಅದಕ್ಕೂ ಉಗ್ಗಪ್ಪ ಎಲ್ಲಾ ಸೈಜಿನ ನಿಮೂರ್ತಿ ಮಾಡಿದ್ದಾನೆಂದು ಸುದ್ದಿ ಇದೆ. ಇಷ್ಟಿದ್ದರೂ, ಇಷ್ಟಾದರೂ ಉಗ್ಗಪ್ಪನಿಗೆ ಅಪಗಪಗ ತಗಡ್ ಬೆಚ್ಚ ಆಗುತ್ತಾ ಇರುತ್ತದೆ. ಕುಡುಕರ ಮೇಲೆ ವಿನಾಕಾರಣ ರೇಗಿ ಬಿಡುತ್ತಾನೆ. ಕ್ವಾಟ್ರು ಧರ್ಮಕ್ಕೆ ಕೊಟ್ಟವನಂತೆ ವರ್ತಿಸುತ್ತಾನೆ, ಶಾಲಾ ಮಕ್ಕಳಿಗೂ ಕಿರಿ ಕಿರಿ ಮಾಡುತ್ತಾನೆ ಮತ್ತು ಇಡೀ ಅಂಗಡಿಯನ್ನು ಹೊತ್ತು ಕೊಂಡವನಂತೆ ವರ್ತಿಸುತ್ತಾನೆ. ಮಾಡೋದು ಕಳ್ಳ ವ್ಯವಹಾರ ಊರಿನ ಗಣ್ಯ ವ್ಯಕ್ತಿ , ಮಾಜಿ ಪಂಚಾಯ್ತಿ ಮೆಂಬರು, ರಾಜಕೀಯ ಪಕ್ಷದ ಲೀಡರ್. ಸೊಬಗತನ ಬೇರೆ.
ಯುವರ್ ಆನರ್,                             
  ಒಂದು ಪ್ರಾಥಮಿಕ ಶಾಲಾ ಗ್ರೌಂಡಿನ ಬದಿಯಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಸಂಬಂಧ ಪಟ್ಟ ನಮ್ಮ ಇಲಾಖೆಗಳಿಗೆ ಬಾಯಿ ಬರಲ್ಲ, ಕಿವಿ ಕೇಳಲ್ಲ, ಕಣ್ಣು ಕಾಣಲ್ಲ. ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಅಬ್ಕಾರಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಈ ವಿಷಯದಲ್ಲಿ ಮೌನವಾಗಿ ಕುಂತಿದೆ. ಪೋಲಿಸರಿಗೆ ಮಾಮೂಲು ಕೊಡುತ್ತೇನೆ, ಅಬ್ಕಾರಿ ಗಳಿಗೆ ಮಾಮೂಲು ಕೊಡುತ್ತೇನೆ ಎಂದು ಆರೋಪಿ ಕರೆದು ಕರೆದು ಹೇಳಿದರೂ ಯಾವ ಪೋಲಿಸೂ, ಯಾವ ಅಬ್ಕಾರಿಯೂ ಈ ಕ್ವಾಟ್ರು ಅಡ್ಡೆಗೆ ರೈಡು ಬೀಳುವ ಧೈರ್ಯ ಮಾಡಿಲ್ಲ. ಶಾಲಾ ಮಕ್ಕಳ ಎದುರಿನಲ್ಲೇ ಕ್ವಾಟ್ರು ಮಾರಿದರೂ ಊರಿನ ಮಂದಿಯೂ ಸುಮ್ಮನೆ ಕುಂತಿದ್ದು ವಿಪರ್ಯಾಸವೇ ಸರಿ. ಅಡ್ತಲೆ ಪುತ್ತೂರು ಉಪವಿಭಾಗದ ಉಪ ಪೋಲಿಸ್ ವರಿಷ್ಠನ ಸರಹದ್ದಿನಲ್ಲಿ ಬರುತ್ತದೆ. ಗ್ರಾಮಸ್ಥರಲ್ಲಿ ಯಾರಾದರೂ ಒಬ್ಬ ಧೈರ್ಯ ಮಾಡಿ ಉಪ ಪೋಲಿಸ್ ವರಿಷ್ಠನಿಗೆ ಒಂದು ಕಾಲ್ ಬಿಸಾಕಿದರೂ ಸಾಕು, ಸಂಬಂಧ ಪಟ್ಟವರಿಗೆ ಮಂಗಳಾರತಿ ಆಗಿ ಬಿಡುತ್ತದೆ.
Call ARUN NAAGE GOWDA DYSp puttur 9480805321


          


 ಹಾಗೆಂದು ಪುತ್ತೂರಿನಲ್ಲಿ ನಿರಂತರವಾಗಿ ಅಂದರೆ 24×7 ರೇಂಜಿನಲ್ಲಿ ವಿಜೃಂಭಣೆಯಿಂದ ವೇಶ್ಯಾವಾಟಿಕೆ ನಡೆದ ಉದಾಹರಣೆಗಳಿಲ್ಲ. ಎಲ್ಲೋ ಮೂಲೆ ಮೂಲೆಗಳಲ್ಲಿ ಯಾವಾಗಲಾದರೂ ಒಮ್ಮೆ ಮುನ್ಕಿದ ಶಬ್ದ ಕೇಳಿದ್ದು ಬಿಟ್ಟರೆ ಆ ಮಟ್ಟಿಗೆ ಪುತ್ತೂರು ಕ್ಲೀನ್ ಆಗಿತ್ತು. ಹಾಗಾಗಿ ಪುತ್ತೂರು ಪೋಲಿಸರೂ ನಿಂಗೊಲು ತಿಂದು ಪೇಪಿ ಕುಡುದು ಬೇಗ ಮಲಗುತ್ತಿದ್ದರು. ಆದರೆ ಇದೀಗ ಪುತ್ತೂರಿನಲ್ಲಿ ಸೈಕಲ್ ಸವಾರಿ ಶುರುವಾಗಿದೆ ಮಾರಾಯ್ರೆ. ಪೋಲಿಸರಿಗೆ ವಿಷಯವೇ ಗೊತ್ತಿಲ್ಲ.   ರಾಜಾರೋಷವಾಗಿ, ಗಾಂಡ್ ಗೌಜಿಯಲ್ಲಿ, ಹಿಮ್ಮೇಳ ಮುಮ್ಮೇಳದಲ್ಲಿ ನಿರಂತರವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ. ಅಲ್ಲಿ ಒಂದು ಕಡೆ ಕ್ಯೂ ಅಂತೆ ಮಾರಾಯ್ರೆ. ಹನುಮಂತನ ಬಾಲಕ್ಕಿಂತಲೂ ದೊಡ್ಡದು.


  ಕೆಲವು ದಿನಗಳ ಹಿಂದೆ ಅಷ್ಟೇ ಬೈಪಾಸಿನ ಲಾಡ್ಜ್ ಒಂದರಲ್ಲಿ ದರುಬುರು ನಡೆಯುತ್ತಿದೆ ಎಂದು ಬರೆದಿದ್ದೆವು. ಪುತ್ತೂರು ಪೋಲಿಸರು ಆ ವಿಷಯವನ್ನು ಎಂಥ ಮಾಡಿದರೆಂದು ಗೊತ್ತಿಲ್ಲ. ಇದೀಗ ಪುತ್ತೂರಿನ ಸಾಮೆತಡ್ಕ ಏರಿಯಾದಲ್ಲಿ ಡೆ&ನೈಟ್ ಕ್ಲಾಸ್ 3 ವೇಶ್ಯೆಯರ ಕೇಟ್ವಾಕ್ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಡಿಸೋಜ ಎಂಬ ಹೆಸರಿನ ನಾನು ಪುತ್ತೂರಿನ ಮತ್ತು ಊರ ಪರ ಊರ ಥರ್ಡ್ ಕ್ಲಾಸ್ ಕಾಮಿಗಳಿಗೆ ಮಲಗಲು ರೂಂ ಕೊಟ್ಟು, ಆಡಲು ಹುಡುಗಿ ಕೊಟ್ಟು ಆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾನೆ. ಲೋಕಲ್ ಆಂಟಿಗಳಿಗೆ ವಿದ್ ರೂಂ ಮೂರು ಸಾವಿರ, ಹೊರ ಜಿಲ್ಲೆ ಜಿಲೇಬಿಗಳಿಗೆ ನಾಲಕ್ಕು ಸಾವಿರ ವಿದ್ ರೂಂ (ಟಿಪ್ಸ್ ಬೇತೆನೆ) ಮತ್ತು ಕಾಲೇಜು ಪುಟಾಣಿಗಳಿಗೆ ಐದು ಸಾವಿರ ವಿದ್ ರೂಂ. ಇದು ಸಾಮೆತಡ್ಕ ಡಿಸೋಜನ ಹುಡುಗಿ ಅಂಗಡಿಯ ರೇಟ್ ಲಿಸ್ಟ್. ಹಾಗೆಂದು ಸಾಮೆತಡ್ಕ ಡಿಸೋಜನ ಬಗ್ಗೆ ಪುತ್ತೂರಿನ ಸಾಧಾರಣ ಎಲ್ಲಾ ಆಟೋ ಚಾಲಕರಿಗೆ ಪರಿಚಯವಿದೆ. ಇನ್ನು ನೀವು ಡಿಸೋಜನಿಗೆ ಒಂದು ಕಾಲ್ ಮಾಡಿದರೂ ಸಾಕು " ಸಾಮೆತಡ್ಕ ಸ್ಪೋರ್ಟ್ಸ್ ಕ್ಲಬ್ ದಡೆಗ್ ಬಲೆ, ಅಡೆಗ್ ಬತ್ತ್ ಕಾಲ್ ಮಲ್ಪುಲೆ" ಎಂಬ ಕ್ಲೀನ್ ಮೆಸೇಜ್ ಬರುತ್ತದೆ.
 ಹಾಗೆಂದು ಸಾಮೆತಡ್ಕ ಡಿಸೋಜನ ಮನೆಯಲ್ಲಿಯೇ ಹುಡುಗಿಯರಿಗಾಗಿ ಇಷ್ಟೆಲ್ಲಾ ಜನಜಂಗುಳಿ ಇದೆ. ಓ ಮೊನ್ನೆ ಒಮ್ಮೆ ಕ್ಯೂ ಇತ್ತಂತೆ. ಆವತ್ತು ಬೇಡಿಕೆ ಜಾಸ್ತಿ ಇತ್ತು, ಪ್ರಾಡಕ್ಟ್ ಕಡಿಮೆ ಇತ್ತಂತೆ. ಹಾಗಾಗಿ ಕ್ಯೂ ಹನುಮಂತನ ಬಾಲಕ್ಕಿಂತಲೂ ಉದ್ದ ಇತ್ತಂತೆ. ಮೊನ್ನೆ ನಾವು ಕೂಡ ಡಿಸೋಜನಿಗೆ ಕಾಲ್ ಮಾಡಿದಾಗ ಲೋಕಲ್ ಆಂಟಿಗಳು ಮಾತ್ರ ಇದೆ, ಆದರೂ ಬನ್ನಿ ಒಳ್ಳೆ ಮಾಲು ಕೊಡುವ ಅಂದಿದ್ದ. ನಂಗೆ ಕಾಲೇಜು ಹುಡುಗಿ ಬೇಕು ಅಂತ ನಾಚಿಕೆಯಿಂದ ನಾನು ಕೇಳಿದಾಗ " ಸೋಮವಾರ ಕಾಲ್ ಮಲ್ಪುಲೆ" ಅಂದಿದ್ದ ಡಿಸೋಜ. ನೀವು ಕೂಡ ಡಿಸೋಜನಿಗೆ ಒಂದು ಕಾಲ್ ಮಾಡಿ ವಿಚಾರಿಸಿಕೊಳ್ಳಿ CALL DSOUZA 6366689926.
   ಇನ್ನು ಅಲ್ಲಿ ಕರ್ಮಲದ ಆಂಟಿ ಕತೆ ರಣರೋಚಕ. ಅವಳ ಪೇರ್ ನಫೀಸೆ. ಇವಳಿಗೆ ಇಂಡಿಯನ್ ಕಾನೂನು, ಸಾಮಾಜಿಕ ವ್ಯವಸ್ಥೆ ಎಲ್ಲ ಸೂಟ್ ಆಗಲ್ಲ. ವೇಶ್ಯಾವಾಟಿಕೆ ಬಿಟ್ಟರೆ ಇವಳಿಗೆ ಬೇರೊಂದು ಮರ್ಯಾದಸ್ಥ ಜಗತ್ತಿದೆ ಎಂಬ ವಿಷಯವೇ ಗೊತ್ತಿಲ್ಲ. ಅವಳ ಜಗತ್ತಿನಲ್ಲಿ ಅವಳೇ ಮಹಾರಾಣಿ, ಬ್ರೋಕರ್ ಗಳೇ ಮಂತ್ರಿಗಳು ಮತ್ತು ಇವಳ ಗಿರಾಕಿಗಳೇ ತೆರಿಗೆದಾರರು. ಬೇರೆ ಯಾರಾದರೂ ಇವಳ ಜಗತ್ತಿಗೆ ಎಂಟ್ರಿ ಕೊಟ್ಟರೆ ಅವರಿಗೆ ಮಾರಿಹಬ್ಬ ಮಾಡಿಬಿಡುತ್ತಾಳೆ. ಇವಳ ಬಿಸಿನೆಸ್ ಏರ್ಯ ಬನ್ನೂರಿನ ಕರ್ಮಲದಲ್ಲಿ. ಕೆಲವು ಮಾಹಿತಿ ಪ್ರಕಾರ ಅವಳು ತನ್ನ ಸೆಂಟರನ್ನು ಬೇರೆ ಕಡೆ ಶಿಫ್ಟ್ ಮಾಡಿದ್ದಾಳೆಂದೂ ತಿಳಿದುಬಂದಿದೆ. ಆದರೆ ಅವಳು ಕರ್ಮಲ ಸೈಕಲ್ ಎಂದೇ ಪ್ರಸಿದ್ಧಿ. ಹಾಗೆಂದು ಅವಳು ಇಬ್ಬರು ಗಂಡರ ಮುದ್ದಿನ ಹೆಂಡತಿ. ಆದರೆ ಇಬ್ಬರಿಗೂ ಕುಂಡೆಗೆ ಲಿಂಬಿಕಾಯಿ ಇಟ್ಟು ತುಳಿದು ಈಗ ಒಬ್ಬ ಸ್ಟೆಪಿನಿ ಗಂಡನನ್ನು ಇಟ್ಟುಕ್ಕೊಂಡು ವ್ಯಾಪಾರ ನಡೆಸುತ್ತಿದ್ದಾಳೆ. ನೆರೆಕರೆಯವರು, ಸ್ವಜಾತಿ ಬಾಂಧವರು, ಕುಟುಂಬಸ್ಥರು ಯಾವ ಭಾಷೆಯಲ್ಲಿ ಬುದ್ಧಿ ಹೇಳಿದರೂ ಕ್ಯಾರೇ ಎನ್ನದ ಹಠಮಾರಿ ಆಂಟಿ ಇದು. ಇವತ್ತಿಗೂ ಈ ಆಂಟಿಗೆ ಒಳ್ಳೇ ಬಿಸಿನೆಸ್ ಇದೆ. ಕಾಮುಕರ ಮಾರ್ಕೆಟ್ ನಲ್ಲಿ ಇವಳು ಫಾಸ್ಟ್ ಮೂವಿಂಗ್ ಪ್ರಾಡಕ್ಟ್. ಇವಳಿಗೂ ಮೂರರಿಂದ ಐದು ಸಾವಿರದವರೆಗೆ ರೇಟಿದ್ದು, ಮತ್ತೆ ಜನ ನೋಡಿ ಇವಳು ಬೊರಿಯಲು ಶುರುವಿಟ್ಟುಕೊಳ್ಳುತ್ತಾಳೆ ಎಂದು ತಿಳಿದುಬಂದಿದೆ. ಹಾಗೆಂದು ಪ್ರೊಬೇಷನರಿ ಬೋರಿಗಳ ಪರ್ಸ್ ಖಾಲಿ ಮಾಡುವ ಈಕೆ ಪ್ರೊಪೆಶನರಿ ಬೋರಿಗಳಿಗೆ ಫಿಕ್ಸೆಡ್ ರೇಟಲ್ಲಿ ಸಿಗುತ್ತಾಳಂತೆ. ಸದ್ರಿ ನಫೀಸೆ ಆಂಟಿ ಈ ವ್ಯಾಪಾರದಲ್ಲಿ ಮಲಗಿ ತಿನ್ನುವಷ್ಟು ದುಡ್ಡು ಮಾಡಿದ್ದು ಕೆಲವೊಮ್ಮೆ ವ್ಯಾಪಾರ ಜೋರಿದ್ದಾಗ ಸಪ್ಲೈ ಕೂಡ ಮಾಡುತ್ತಾಳೆ ಎಂದು ತಿಳಿದುಬಂದಿದೆ. ಇನ್ನು ಆ ಮುಂಡೂರು ರಸಾಕ್ ಇವಳ ಕ್ಲಾಸ್ ವನ್ ಡೀಲರ್ ಕಮ್ ಬ್ರೋಕರ್ ಆಗಿದ್ದು ಇವಳು ನಾಟ್ ರೀಚೆಬಲ್ ಇದ್ದರೆ ರಸಾಕ್ ರೀಚೆಬಲ್ ಆಗಿರುತ್ತಾನೆ. ಇನ್ನು ಮುಂಡೂರು ರಸಾಕ್ ಬಗ್ಗೆ ಕತೆಗಳು,ದಂತ ಕಥೆಗಳು ಇದ್ದು ಇವನು ವಿಟಪುರುಷರ ಮಾರುಕಟ್ಟೆಯ ರಖಂ ಮತ್ತು ಚಿಲ್ಲರೆ ಸರಬರಾಜುದಾರ ಎಂದು ತಿಳಿದುಬಂದಿದೆ. ಇದೀಗ ಇವನ ಭಂಡಾರ ಬೆದ್ರಾಳ ಕಡೆ ಬರುತ್ತಿದ್ದು ಅಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಹುಳ ಬಿಡುವ ಕಾರ್ಯಕ್ರಮ ಮಾಡುತ್ತಿರುವ ಅಪಾಯಗಳಿವೆ. ಇನ್ನು ಪುತ್ತೂರಿನ ಅಷ್ಟೂ ಪ್ರಾಡಕ್ಟ್ ಗಳಿಗೆ ಮತ್ತು ಬ್ರೋಕರ್ ಗಳಿಗೆ ದರ್ಬೆಯಲ್ಲಿ ಮಸಾಜ್ ಮಾಡುವವನೊಬ್ಬ ಧೈರ್ಯ ತುಂಬುತ್ತಿದ್ದು ಸದ್ಯಕ್ಕೆ ಪುತ್ತೂರಿನ ಅಷ್ಟೂ ವ್ಯಾಪಾರಿ ಆಂಟಿಗಳು ಇವನ ಸಲಹೆ ಸೂಚನೆಗಳನ್ನು ಪಾಲಿಸಿಯೇ ಚಿಲಕ ಹಾಕಿ ಕೊಳ್ಳುತ್ತಾರೆ. ಈ ಹಿಂದೆ ಇವನ ಮಸಾಜ್ ವೈರಲ್ ಆದಾಗ ಪುತ್ತೂರು ಪೋಲಿಸರು ಇವನ ಅಂಟ್ ಬಂದ್ ಮಾಡಿದ್ದರು. ಈಗ ಸೈಕಲ್ ಸಲಹೆ ಕೊಡುವುದು ನೋಡಿದರೆ ನಿಂತು ನಗಬೇಕೋ ಕುಂತು ಅಳಬೇಕೋ ಗೊತ್ತಾಗುತ್ತಿಲ್ಲ.
ಯುವರ್ ಆನರ್,                             
   ಪುತ್ತೂರು ಸಿಟಿಗೆ ಸಂಬಂಧ ಪಟ್ಟಂತೆ ಒಬ್ಬ ಪೋಲಿಸ್ ಡಿವೈಎಸ್ಪಿ, ಮೂವರು ಪೋಲಿಸ್ ಇನ್ಸ್ ಪೆಕ್ಟರ್ ಗಳು, ತುಂಬಾ ಎಸ್ಸೈ ಗಳು, ಎಎಸ್ಸೈಗಳು ಮತ್ತು ಹನುಮಂತನ ಬಾಲದಷ್ಟು ಪೋಲಿಸರಿದ್ದರೂ ಸಿಟಿ ಒಳಗೆ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಸಿಟಿ ಒಳಗೆ ಚಿಕ್ಕ ಚಿಕ್ಕದಾಗಿ, ಚೊಕ್ಕವಾಗಿ  ಸಮಾಜಘಾತುಕ ಚಟುವಟಿಕೆಗಳು ಬೇರೂರಲು ಶುರುವಾಗಿದೆ. ಪುತ್ತೂರು ಪೋಲಿಸರು ಬೇರುರೂತ್ತಿರುವ ಅಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಬೇರು ಸಮೇತ ಕಿತ್ತು ಹಾಕದಿದ್ದರೂ ಪರವಾಗಿಲ್ಲ ಅದಕ್ಕೆ ನೀರು, ರಸಗೊಬ್ಬರ ಹಾಕದಿದ್ದರೆ ಅಷ್ಟೇ ಸಾಕು. ಹಾಗೇನಾದರೂ ಪೋಲಿಸರು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡದಿದ್ದರೆ ಪುತ್ತೂರು ಸೂಳೆಸಿಟಿ ಆಗುವುದರಲ್ಲಿ ಸಂಶಯವೇ ಇಲ್ಲ. ವೇಶ್ಯಾವಾಟಿಕೆಯನ್ನೂ ಸಮರ್ಥಿಸುವ ಜನ ಇರುವ ತನಕ ಈ ಪಿಡುಗನ್ನು ನಿಯಂತ್ರಿಸಲು ಪೊಲೀಸರೂ ಕೂಡ ತುಂಬಾ ತುಂಬಾ ಬೆವರು ಖರ್ಚು ಮಾಡುವ ಅನಿವಾರ್ಯತೆ ಇದೆ.


         


 ಅಲ್ಲಾ ಮಾರಾಯ್ರೆ ಒಂದು ಆರ್ಡಿನರಿ ವಾರ್ಷಿಕ ಜ್ವರ ಬಂದರೂ ಈ ಅಂಡಿಗುಂಡಿ ಪಿಚ್ಚರ್ ಡಾಕ್ಟರ್ ಗಳಿಗೆ ಜ್ವರ ನಿಲ್ಲಿಸಲಾಗಲ್ಲ ಮತ್ತು ಜ್ವರ ಏರಿಸಿ ಕೊಂದೇ ಬಿಡುತ್ತಾರೆ ಅಂದರೆ ಇನ್ನು ಆಸ್ಪತ್ರೆಗಳಿಗೆ ಹೋಗುವುದಾದರೂ ಹೇಗೆ ಎಂದೇ ಹೆದರಿಕೆಯಾಗುತ್ತಿದೆ. ನಾವು ನೀವಾದರೂ ಸಾಯಲಿ, ನಾವು ಬಡಬಗ್ಗರು, ನಮ್ಮ ಜೀವಕ್ಕೆ ಅಡಿಕೆ ರೇಟೂ ಇಲ್ಲ ಎಂದಿಟ್ಟುಕೊಳ್ಳೋಣ. ಆದರೆ ಒಬ್ಬಳು ವೈದ್ಯಕೀಯ ವಿದ್ಯಾರ್ಥಿನಿ ಎಂ.ಡಿ ಪದವಿ ಪಡೆಯಲು ಇನ್ನೇನು ಮೂರು ತಿಂಗಳು ಮಾತ್ರ ಬಾಕಿಯಿದ್ದ ಡಾಕ್ಟರ್ ಒಬ್ಬಳನ್ನು ಸುಳ್ಯದ ಡಾಕ್ಟರ್ ಗಳು ಸೇರಿ ಕೊಂದು ಬಿಟ್ಟಿದ್ದಾರೆ. ಎತ್ತಿಕ್ಕೊಂಡು ಬನ್ನಿ ಹೊತ್ತುಕೊಂಡು ಹೋಗಿ.
  ಇದು ಸುಳ್ಯ, ಇಲ್ಲಿ ಇರ್ಲಿಕ್ಕೆ ಎಲ್ಲಾ ಜಾತಿಯ ಕಾಲೇಜುಗಳೂ ಇದೆ. ಆದರೆ ಇಲ್ಲಿಗೆ ಹೋದವರಿಗೆ ಎಬಿಸಿಡಿ ಗೆ ಕಷ್ಟ. ಕಳೆದ ತಿಂಗಳು ತಾನೇ ಇಲ್ಲಿನ ಮೆಡಿಕಲ್ ಕಾಲೇಜಿನ  ವಿದ್ಯಾರ್ಥಿನಿಯೊಬ್ಬಳು ಜ್ವರ ಬಂದು ಮಲಗಿದಳು ಎಳಲೇ ಇಲ್ಲ. ಸದ್ರಿ ವಿದ್ಯಾರ್ಥಿನಿಯ ವೈದ್ಯಕೀಯ ಶಿಕ್ಷಣ ಮುಗಿದಿದ್ದು ಇನ್ನೇನು ಮೂರು ತಿಂಗಳಲ್ಲಿ ಅವಳಿಗೆ ಎಂ.ಡಿ ಪದವಿ ಕೂಡ ಸಿಗುವುದರಲ್ಲಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಜ್ವರ ಬಂದು ಮಲಗಿದವಳನ್ನು ವಾಪಾಸ್ ಎಬ್ಬಿಸಲು ಸುಳ್ಯದ ಅಷ್ಟೂ ಡಾಕ್ಟರ್ ಗಳಿಗೆ ಸಾಧ್ಯವಾಗಲಿಲ್ಲ. ಹುಡುಗಿ ತೀರಿಕೊಂಡಿದೆ.


  ಇವಳು ಸುಜನಿ. ಹೈದರಾಬಾದ್ ಮೂಲದ ವೈದ್ಯಕೀಯ ವಿದ್ಯಾರ್ಥಿನಿ. ವೈದ್ಯಕೀಯ ಶಿಕ್ಷಣದಲ್ಲಿ ಎಂ.ಡಿ ಪದವಿ ಪಡೆಯಲು ಸುಳ್ಯದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಳು. ಸುಜನಿದ್ದು ಎಲ್ಲಾ ಸ್ಟಡೀಸ್ ಮುಗಿದಿತ್ತು, ಇನ್ನೇನು ಮೂರು ತಿಂಗಳಲ್ಲಿ ಎಂ.ಡಿ ಪದವಿ ಅವಳ ಹೆಸರಿನ ಮುಂದೆ ಬಂದು ಎಂಟ್ರಿ ಹಾಕುತ್ತಿತ್ತು. ಅಷ್ಟರಲ್ಲಿ ಅದೆಲ್ಲಿತ್ತೋ ಜ್ವರ, ಹುಡುಗಿಗೆ ಬಂದು ಏರಿ ಬಿಟ್ಟಿದೆ. ಸುಳ್ಯದ ದೊಡ್ಡ ದೊಡ್ಡ ಟೈ ಸಿಕ್ಕಿಸಿಕೊಂಡಿದ್ದ,  ದೊಡ್ಡ ದೊಡ್ಡ ಕಾರುಗಳ ಅಂಡಿಗುಂಡಿ ಡಾಕ್ಟರ್ಸ್ ಕಿಲೋ ಲೆಕ್ಕದಲ್ಲಿ ಸುಜನಿಗೆ ಗುಳಿಗೆ ಕೊಟ್ಟು ಕೊಟ್ಟು ಜ್ವರ ಏರಿಸಿ ಬಿಟ್ಟರು. ಒಬ್ಬ ಟೈ ಸಿಕ್ಕಿಸಿಕೊಂಡಿದ್ದ ಡಾಕ್ಟರು ಮಲೇರಿಯಾಕ್ಕೆ ಗುಳಿಗೆ ಕೊಟ್ಟರೆ, ಇನ್ನೊಬ್ಬ ಸೂಟು ಬೂಟು ಡಾಕ್ಟರ್ ಟೈಫಾಯಿಡ್ ಅಂದು ಬಿಟ್ಟ. ಮತ್ತೊಬ್ಬ ಪಿಚ್ಚರ್ ಡಾಕ್ಟರ್ ಅದು ಜಾಂಡೀಸ್ ಅಂದ. ಇನ್ನೊಬ್ಬ ದೊಡ್ಡ ಡಾಕ್ಟರ್ ಬಂದು ಡೆಂಗ್ಯೂ ಅಂದು ನೆತ್ತೆರ್ ಪರೀಕ್ಷೆಗೆ ಚೀಟಿ ಕೊಟ್ಟ. ಹಾಗೇ ಈ ಎಲ್ಲಾ ಅಂಡಿಗುಂಡಿ ಪಿಚ್ಚರ್ ಡಾಕ್ಟರ್ ಗಳ ಟ್ರಯಲ್ ಟೆಸ್ಟ್, ರಿಯಲ್ ಟೆಸ್ಟ್, ಅಂಡಿಗುಂಡಿ ಟೆಸ್ಟ್ ಗಳು ಮುಗಿಯುವ ಹೊತ್ತಿಗೆ ಹುಡುಗಿ ಕಂಗಾಲಾಗಿ ಹೋಗಿದೆ. ಇನ್ನು ನಮ್ಮ ಟೆಸ್ಟ್ ನಡೆಯಲ್ಲ, ಹುಡುಗಿ ನಾಟ್ ರೀಚೆಬಲ್ ಆಗುತ್ತಿದೆ ಎಂದು ಗೊತ್ತಾಗುತ್ತಲೇ ಸುಳ್ಯದ ಅಷ್ಟೂ ಡಾಕ್ಟರ್ ಗಳೂ ಕೈ ಎತ್ತಿ ಬಿಟ್ಟಿದ್ದಾರೆ. ಮತ್ತೆಂಥ ಮಾಡೋದು ಮಂಗಳೂರಿಗೆ ಅಂಬುಲೆನ್ಸ್ ಗೆ ಹಾಕಿ ಬಿಟ್ಟಿದ್ದಾರೆ. ಹುಡುಗಿ ಕುಂಬ್ರ ಸಮೀಪ ಎಲ್ಲೋ ಉಸಿರು ಚೆಲ್ಲಿ ಬಿಟ್ಟಿದ್ದಾಳೆ. ಅಷ್ಟೇ.



  ಅಲ್ಲಾ ಮಾರಾಯ್ರೆ ಒಂದು ಜ್ವರಕ್ಕೆ ಮುದ್ದು ಕೊಡಲಾಗದ, ಜ್ವರ ಬಂದ ರೋಗಿಯನ್ನು ಸಾಯಿಸಿ ಬಿಡುವ ಆಸ್ಪತ್ರೆಗಳು ಊರಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು. ಹೆಸರಿಗೆ ದೊಡ್ಡ ದೊಡ್ಡ ಆಸ್ಪತ್ರೆಗಳು, ಟೈಧಾರಿ ಡಾಕ್ಟರ್ ಗಳು, ಕೊರುಂಗು ಕಲರಿನ ನರ್ಸ್ ಗಳು, ದೊಡ್ಡ ದೊಡ್ಡ ಕಾರುಗಳು ಇದ್ದರೆ ಸಾಲದು, ರೋಗಿಗಳ ಬಗ್ಗೆ ಕಾಳಜಿ ಬೇಕು, ಜವಾಬ್ದಾರಿ ಇರಬೇಕು. ದುಡ್ಡು ಕೊಟ್ಟು ತಮ್ಮ ಹೆಸರಿನ ಮುಂದೆ ಡಾ| ಪದ ಸೇರಿಸಿಕೊಂಡರೆ ಸಾಲದು ಕಡೇ ಪಕ್ಷ ಏನೂ ಗೊತ್ತಿಲ್ಲದಿದ್ದರೂ ರೋಗಿಗಳ ಬಗ್ಗೆ ಜವಾಬ್ದಾರಿ ಬೇಕು.    ತಮ್ಮಿಂದ ಆಗುತ್ತಾ ಅಥವಾ ಇಲ್ವಾ ಎಂಬುದನ್ನು ಒಂದೇ ಟೆಸ್ಟ್ ನಲ್ಲಿ ಡಿಸೈಡ್ ಮಾಡ ಬೇಕೇ ಹೊರತು ಸಾಯುವ ತನಕವೂ ಟೆಸ್ಟ್ ಮಾಡುತ್ತಾ ಕೂರೋದು ಯಾವ ಸೀಮೆಯ ಡಾಕ್ಟರಿಕೆ ಅದು. ಇವತ್ತು ಸುಜನಿ, ನಾಳೆ ನಮ್ಮನ್ನೂ ಇವರು ಹೀಗೆ ಫಿನಿಷ್ ಮಾಡಿ ಬಿಡುತ್ತಾರೆ. ಡಾ ಎಂಬ ಶಬ್ದವನ್ನು ಡಾಕುಗಳಿಗೂ ಉಪಯೋಗಿಸಲಾಗುತ್ತದೆ.


        


 ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು, ವಿವಿಧ ಸಂಘ ಸಂಸ್ಥೆಗಳು, ದಾನಿಗಳು ವಿವಿಧ ವಿನ್ಯಾಸಗಳಲ್ಲಿ ಬಸ್ ಸ್ಟ್ಯಾಂಡ್ ಗಳನ್ನು ಕಟ್ಟುತ್ತಿದ್ದಾರೆ. ಒಂದಕ್ಕಿಂತ ಒಂದು ಭಿನ್ನ,ಸುಂದರ, ಚೆಂದ. ಅವುಗಳಿಗೆ ಬೇಕಾಗಿ ಲಕ್ಷಗಟ್ಟಲೆ ಖರ್ಚು ಕೂಡ ಮಾಡಲಾಗುತ್ತದೆ. ಇಂಥ ಸ್ಟ್ಯಾಂಡುಗಳಲ್ಲಿ ಹೋಗಿ ಕುಂತ್ರೆ ಬಸ್ ಬರುವುದೇ ಬೇಡ ಅನ್ನುವಷ್ಟು ಸುಂದರ ಬಸ್ ನಿಲ್ದಾಣಗಳಿವೆ. ಇದೀಗ ಕಾಣಿಯೂರು ಪಂಚಾಯ್ತಿಯಿಂದ ಒಂದು ಬಸ್ ಸ್ಟ್ಯಾಂಡ್ ನಿರ್ಮಾಣ ಆಗಿದೆ, ಸುಂದರವಾಗಿದೆ. ಆದರೆ ಅದನ್ನು ನೋಡುವಾಗ ಮಾತ್ರ ಯಾಕೋ ಬಸಳೆ ದೊಂಪ, ಭೂತದ  ಕೊಡಿಅಡಿ ಎಲ್ಲಾ ನೆನಪಿಗೆ ಬರುತ್ತದೆ. ಯಾಕೆಂತ ಗೊತ್ತಿಲ್ಲ.
   ಇದು ಮಂಜೇಶ್ವರ -ಸುಬ್ರಹ್ಮಣ್ಯ ಇಂಟರ್ ಸ್ಟೇಟ್ ಹೈವೇಯಲ್ಲಿ ಕಾಣ ಸಿಗುವ ಫೇಮಸ್ ಊರಿನ ಕತೆ. ಈ ಊರಿನ ಹೆಸರು ಕಾಣಿಯೂರು. ಇಲ್ಲಿ ಮಠ ಇದೆ, ಆಸ್ಪತ್ರೆಗಳಿವೆ, ಕಾಲೇಜಿದೆ, ದೇವರುಗಳು, ಭೂತಗಳು ಇದ್ದಾರೆ ಮತ್ತು  ನಿಲ್ಲದ ರೈಲಿಗೆ ಒಂದು ನಿಲ್ದಾಣವೂ ಇದೆ. ಇಲ್ಲಿ ಒಂದು ಗ್ರಾಮ ಪಂಚಾಯಿತಿಯೂ ಇದೆ. ಪಂಚಾಯ್ತಿಯಲ್ಲಿ ದೇಶಭಕ್ತರದ್ದೇ ಕಾರುಬಾರು. ಆರು ಫೀಟಿನವರು, ನಾಲ್ಕು ಫೀಟಿನವರು, ಮೂರುವರೆಯವರು, ಗಾಂಧರೀ ಮುಂಚಿಗಳು ಹೀಗೆ ಕಾಣಿಯೂರು ಪಂಚಾಯ್ತಿ ಅಂದರೆ ದೇಶಭಕ್ತರ ಭದ್ರಕೋಟೆ. ಇಂಥ ದೇಶಭಕ್ತರು ಅಪಗಪಗ ಔಟ್ ಆಗುತ್ತಾ ಇರುತ್ತಾರೆ. ಅದರಲ್ಲೂ ರನೌಟ್ ಜಾಸ್ತಿ.


  ಇದೀಗ ಕಾಣಿಯೂರು ದೇಶಭಕ್ತರ ಪಂಚಾಯ್ತಿ ಏಲಡ್ಕ ಮತ್ತು ಪುಣ್ಚತ್ತಾರು ನಡುವೆ ಸಿಗುವ ಪಾಲೆತ್ತಡ್ಕದಲ್ಲಿ ಒಂದು ಸುಂದರ ಬಸ್ ನಿಲ್ದಾಣ ನಿರ್ಮಿಸಿದ್ದು ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಎದುರಿನಿಂದ ನೋಡುವಾಗ ಭೂತದ ಕೊಡಿಅಡಿಯಂತೆಯೂ, ಹಿಂದಿನಿಂದ ನೋಡುವಾಗ ಬಸಳೆ ದೊಂಪದಂತೆಯೂ, ಅಂಚಿದ ಸೈಡಿಂದ ನೋಡುವಾಗ ಜೋಕುಲು ಹಾಕಿದ ಮಾಡಂಗೋಲಿನಂತೆಯೂ,  ಇನ್ನೊಂದು ಸೈಡಿಂದ ನೋಡುವಾಗ ದಾಸನ ಗೂಡಿನಂತೆಯೂ ಕಂಗೊಳಿಸುತ್ತಿದೆ. ಎರಡು ಕಣ್ಣು ಸಾಲದು ಇದನ್ನು ನೋಡಲು. ಇದೊಂಥರಾ ಬಸ್ ಸ್ಟ್ಯಾಂಡನ್ನು ಉರ್ಬುಲಿ ನಿಲ್ಲಿಸಿದ ಹಾಗೆ. ನಾಲಕ್ಕು ಕಂಬ, ಒಂದು ಶೀಟ್, ನೆಲಕ್ಕೆ ನಾಲಕ್ಕು ಕಟ್ಲೀಸ್ ತುಂಡಿನಂತಹ ಟೈಲ್ಸ್, ಅಲ್ಲಿಗೆ ಬಸ್ ಸ್ಟ್ಯಾಂಡ್ ಫಿನಿಷ್. ಇದಕ್ಕೆ ಬಿಲ್ಲು ನಲವತ್ತೊಂಬತ್ತು ಸಾವಿರದ ಏಳುನೂರು ರೂಪಾಯಿಗಳು. ಬಿಲ್ಲು ಐವತ್ತಾದರೆ ಟೆಂಡರ್ ಕರೆಯಲು ಉದಾಸೀನ ಆಗುತ್ತದೆ ಎಂದು ಐವತ್ತರ ಒಳಗೆ ಮುಗಿಸಿ ಒಳಗಿನ ಕುಲೆಗಳಿಗೆ ಮಾತ್ರ ಬಡಿಸಿ ಫೈಲ್ ಕ್ಲೋಸ್ ಮಾಡಲಾಗಿದೆ. ಅದ್ಭುತ ಬಸ್ ಸ್ಟ್ಯಾಂಡ್ ಇದು. ಇಲ್ಲಿ ತನಕ ಯಾರೂ ಕಟ್ಟಿಲ್ಲ ಮುಂದೆ ಇಂತಹ ಕೆಲಸ ಯಾರಾದರೂ ಮಾಡುವುದೂ ಡೌಟು.



       


 ಎಲ್ಲಿಯಾದರೂ ತುರಿಕೆ ಶುರುವಾದರೆ ಮಾರಾಯ್ರೆ ಎರಡು ಕೈ ಸಾಲದು. ಅಂಥ ಎಕ್ಸ್ ಪ್ರೆಸ್ ತುರಿಕೆ ಬರಬಹುದು. ಅಲ್ಲಾ....ಈ ಜನಗಳಿಗೆ ಆಟಿಯಲ್ಲಿಯೇ ಅದರಲ್ಲೂ ಮರಚೇವಿನದ್ದೇ ಪತ್ರೊಡೆ ತಿನ್ನಬೇಕೆಂದು ಫರ್ಮಾನು ಹೊರಡಿಸಿದವರು ಯಾರು?


  ಅಲ್ಲಿ ಕಡಬದಲ್ಲಿ ಆಟಿ ಸ್ವಲ್ಪ ಜೋರಿದ್ದ ಹಾಗೆ ಕಾಣುತ್ತದೆ. ಆಟಿಯಲ್ಲಿ ಒಂದು ರೌಂಡು ಮರಚೇವಿನ ಪತ್ರೊಡೆ ಮಾಡಿ ತಿಂದು ಅಂದಾಜು ಒಂದು ಇನ್ನೂರೈವತ್ತು, ಮುನ್ನೂರು ವರ್ಷಗಳ ಕಾಲ ಬದುಕುವ ಅನ್ನುವ  ಆಶೆ ಕಡಬಿಗರದ್ದು. ಹಾಗೆಂದು ಆ ಆಶೆ ಆಟಿಯಲ್ಲಿ ಎಲ್ಲಾ ಕಡೆ ಮಾಮೂಲು. ಆಟಿಯಲ್ಲಿ ಮರಚೇವಿನ ಪತ್ರೊಡೆ ತಿಂದರೆ ಮನುಷ್ಯನ ಎಲುಮುಳ್ಳು ಗಟ್ಟಿಯಾಗುತ್ತದೆ ಎಂದು ಯಾವನೋ ಒಬ್ಬ ಪುಣ್ಯಾತ್ಮ ಹೇಳಿದ ಕಾರಣ ಆಟಿಯಲ್ಲಿ ಮರಚೇವಿಗೆ ಬಂಗಾರದ ರೇಟು. ಆಟಿಯಲ್ಲಿ ಮರಚೇವಿನ ಪತ್ರೊಡೆ ತಿಂದು ನೂರೈವತ್ತು ವರ್ಷಗಳ ಕಾಲ ಬದುಕಿದವರು ಯಾರಾದರೂ ಇದ್ದಿದ್ದರೆ ಒಂದು ರೌಂಡು ಪತ್ರೊಡೆ ಇಳಿಸಬಹುದಿತ್ತು.
   ಇದೀಗ ಕಡಬದಲ್ಲಿ ಆಟಿ ಸೀಜನು. ಹಾಗಾಗಿ ಮರಚೇವಿಗೆ ಭಾರೀ ಬೇಡಿಕೆ. ಕಡಬಕ್ಕೆ ಲೋಡ್ ಲೆಕ್ಕದಲ್ಲಿ ಮರಚೇವು ಬರುತ್ತಿದೆ. ಒಂದು ಕಟ್ಟಕ್ಕೆ ನಲವತ್ತು ರೂಪಾಯಿ. ಲೆಕ್ಕ ಮಾಡಿ ಐದೇ ಎಲೆ ಇರೋದು ಕಟ್ಟದಲ್ಲಿ. ಹಾಗಾದರೆ ಒಂದು ಎಲೆಗೆ ರೇಟೇಸ್ಟು ಸ್ವಾಮಿ? ಎಂಟೈದ್ಲಿ ನಲವತ್ತು. ಇಷ್ಟು ರೇಟಿಗೆ ಎಲೆ ತಿಂದು ಬೇಕಾ ನೂರೈವತ್ತು ವರ್ಷ?
   ಹಾಗೆಂದು ನಮಗೆ ತಲೆ ಸರಿ ಇಲ್ಲ, ನಮ್ಮತ್ರ ದುಡ್ಡಿದೆ, ಮರಚೇವಿಗೆ ಕಟ್ಟಕ್ಕೆ ಇನ್ನೂರು ರೂಪಾಯಿ ಆದರೂ ಬೇಕು ಅನ್ನುವ ನಮ್ಮ ಹುಚ್ಚು ಬೇಡಿಕೆಯನ್ನು ಯಾರೂ ಮಿಸ್ ಯೂಸ್ ಮಾಡಿಕೊಳ್ಳಬಾರದಲ್ವಾ? ಇಲ್ಲಿ ತನಕ ಕಡಬಕ್ಕೆ ಬಂದದ್ದು, ಬರುತ್ತಿರುವುದು, ಇನ್ನು ಆಟಿಯಿಡೀ ಬರಲಿಕ್ಕಿರುವುದು ಮತ್ತು ನೀವು ಇಲ್ಲಿ ತನಕ ಪತ್ರೊಡೆ ಮಾಡಿ ಎಲುಮುಳ್ಳು ಗಟ್ಟಿ ಮಾಡಿಕೊಂಡಿದ್ದು ಯಾವುದೂ ಒರಿಜಿನಲ್ ಮರಚೇವು ಅಲ್ಲವೇ ಅಲ್ಲ. ಮರಚೇವಿನ ಕುಟುಂಬದ್ದೂ ಅಲ್ಲ. ಅದೆಲ್ಲ ಡೂಪ್ಲಿಕೇಟ್ ಮರಚೇವು. ಘಟ್ಟದ ಮೇಲಿನ,ಸೈಡಿನ ಎಸ್ಟೇಟ್ ಗಳಲ್ಲಿ, ಕಾಡುಗಳಲ್ಲಿ, ಗುಡ್ಡೆ ಪ್ರದೇಶಗಳಲ್ಲಿ, ಬರೆಗಳಲ್ಲಿ, ನೀರು ಝರಿಗಳ ಬದಿಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ಆಗುವ ಸಾಮಾನ್ಯ ಕಂಡ್ರೆಕುಟ್ಟಿ ಚೇವನ್ನೇ ಪೊರಿತ್ತ್ ತಂದು ಮರಚೇವು ಎಂದು ಜನರನ್ನು ಮಂಗ ಮಾಡಲಾಗುತ್ತಿದೆ. ತಲೆ ಸರಿ ಇಲ್ಲದ ಜನ ಓ...... ಎಂದು ಅದನ್ನೇ  ತಿಂದು ಎಲುಮುಳ್ಳು ಮುಟ್ಟಿ ನೋಡಿಕೊಳ್ಳುತ್ತಾರೆ. ಎಲ್ಲಿಯಾದರೂ ಈ ಚೇವು ತಿಂದು ಕಿರ್ಂಬ್ಲಿಕ್ಕೆ ಶುರುವಾದರೆ ರಕ್ತ ಕಣ್ಣೀರಿನ ಉಪೇಂದ್ರ ಕಿರಿಂಬಿದ ಹಾಗೇ ಆಗಬಹುದು ಮಾರಾಯ್ರೆ. ಮತ್ತೆ ಎಂಥ ಕುಸಲ?
   ಇದೀಗ ನಾಳೆ ಕಡಬದಲ್ಲಿ ಸಂಡೇ ಸಂತೆ ಇದ್ದು ಹೆಚ್ಚಿನ ಮನೆಗಳಲ್ಲಿ ಪತ್ರೊಡೆಗೆ ಅರಿ ನೀರಿಗೆ ಹಾಕಿರ ಬಹುದು. ನಾಳೆ ಸಂಡೇ ಸಂತೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮರಚೇವು ಸೇಲಾಗಲಿದೆ. ಯಾವುದಕ್ಕೂ ಮರಚೇವು ಪರ್ಚೆಸ್ ಮಾಡುವ ಮೊದಲು ಅದರ ಗುಣಮಟ್ಟವನ್ನು ಒಮ್ಮೆ ಪರೀಕ್ಷಿಸಿ, ಎಲ್ಲಿಂದ ಬಂದಿದೆ, ಯಾವ ಮರದಲ್ಲಿ ಆದದ್ದು ಎಂದೂ ವಿಚಾರಿಸಿಕೊಳ್ಳಿ. ಸುಮ್ಮನೆ ಸಿಕ್ಕಿತು ಎಂದು ಸಿಕ್ಕಿದ್ದನ್ನೆಲ್ಲ ತಿನ್ನಬೇಡಿ. ಎಲುಮುಳ್ಳು ಗಟ್ಟಿಯಾಗುವ ಬದಲು ಲಟಕ್ ಪಟಕ್ ಆದರೆ ಗತಿ ಯಾರು? ಇನ್ನು ಆಟಿಯಲ್ಲಿ ಮರಚೇವಿನ ಪತ್ರೊಡೆ ತಿಂದರೆ ಕೈಮಾಸ್ ಕೂಡ ತೊಳೆದು ಹೋಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಯಾವುದಕ್ಕೂ ಒರಿಜಿನಲ್ ಮರಚೇವು ಸಿಗಬೇಕಲ್ಲ. ಎಲ್ಲಾ ಬಿಟ್ಟು ಈ ಡೂಪ್ಲಿಕೇಟ್ ಮರಚೇವು ತಿಂದರೆ ಕ್ಲೈಮ್ಯಾಕ್ಸ್ ನಲ್ಲಿ ಅದೇ ಕೈಮಾಸ್ ಆಗುವ ಅಪಾಯಗಳಿವೆ.




      



ಲಡ್ಡು ತಿಂದು ದುಡ್ಡು ಮಾಡಿದರು!
   ಹಾಗೆಂದು ದೇವಸ್ಥಾನವನ್ನೂ ತಾಲೂಕು ಆಫೀಸು,RTO ಆಫೀಸು ಹಾಗೂ ಇತರೇ ಸರ್ಕಾರಿ ಆಫೀಸು ಎಂದು ತಪ್ಪಾಗಿ ತಿಳಿದು ಕೊಂಡಿರುವ ಸುಬ್ರಹ್ಮಣ್ಯದ ಸುಬ್ಬಪ್ಪನ ದೇವಸ್ಥಾನದ ನೌಕರರಿಗೆ ಒಂದು ರೌಂಡು ಕೌನ್ಸೆಲಿಂಗ್ ಮಾಡುವುದು ಉತ್ತಮ ಎಂಬ ಅಭಿಪ್ರಾಯ ಇದೆ. ಯಾಕೆಂದರೆ ಇವರ ಲಾಸ್ಟ್ ಷೋ ಈಗ ಲಡ್ಡು ಪ್ರಸಾದ ತಿನ್ನುವಲ್ಲಿ ತನಕ ಬಂದಿದೆ. ನಿಜವಾಗಿಯೂ ಪ್ರಸಾದ ಸಿಗಬೇಕಾದ್ದು ದುಡ್ಡು ಕೊಟ್ಟು ಪ್ರಸಾದ ಚೀಟಿ ಮಾಡಿದ ಭಕ್ತರಿಗೆ. ಆದರೆ ಈಗ ಸುಬ್ರಹ್ಮಣ್ಯದಲ್ಲಿ ಪ್ರಸಾದ ತಿಂದಿದ್ದು ದೇವಸ್ಥಾನದ ಕೌಂಟರಿನಲ್ಲಿ ಕುಂತವರು. ಹದಿನೈದು ಲಕ್ಷ ರೂಪಾಯಿಗಳ ಲಡ್ಡು ಮತ್ತು ಪಾಂಚ್ ಕಜ್ಜಾಯ. ಇನ್ನು ತಿಂದವರಿಗೆ ಶುಗರ್ ಶುರುವಾದರೆ ಇನ್ಸುಲಿನ್ ಟ್ಯಾಂಕರ್ ನಲ್ಲೇ ತರಬೇಕಷ್ಟೇ.


   ಹಾಗೆಂದು ಸುಬ್ರಹ್ಮಣ್ಯದ ಸುಬ್ಬಪ್ಪನ ದೇವಸ್ಥಾನದಲ್ಲಿ ದುಡ್ಡು ಮಾಡದ ಜೀವಿ ಅಂತ ಇದ್ದರೆ ಅದು ಯಶಸ್ವಿನಿ ಮಾತ್ರ. ಬಾಕಿ ಎಲ್ಲಾರೂ ಎಲ್ಲಾ ವಿಧಗಳಲ್ಲೂ ಕಿಸೆಗೆ ಹಾಕಿದವರೇ. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯದಲ್ಲಿ ಲಡ್ಡು ಹಗರಣ ಒಂದು ನಡೆದಿತ್ತು. ಈ ಬಗ್ಗೆ ತನಿಖೆಗೆ ಇಳಿದ ಅಧಿಕಾರಿಗಳು ಲಡ್ಡು ತಿಂದವರಿಗೆ ನೋಟಿಸ್ ಕೊಟ್ಟದ್ದು ಬಿಟ್ಟರೆ ಒಂದೇ ಒಂದು ಲಡ್ಡು ದುಡ್ಡು ವಸೂಲಿ ಮಾಡಲಾಗಲಿಲ್ಲ. ಕೆಲವು ದಿನಗಳ ಹಿಂದೆ ಅಂದರೆ ಮಾರ್ಚ್ ತಿಂಗಳಿಂದ ಲಡ್ಡು ಪ್ರಸಾದ ಮತ್ತು ಪಂಚಕಜ್ಜಾಯ ತಯಾರಕರು ಸರಿಯಾಗಿಯೇ ಬೇಡಿಕೆಗೆ ಅನುಗುಣವಾಗಿ ಪ್ರಸಾದ ತಯಾರಿಸಿ ಕೌಂಟರಿಗೆ ಕಳಿಸಿ ಕೊಟ್ಟಿದ್ದಾರೆ. ಕೌಂಟರಿನಲ್ಲೂ ಇಂತಿಷ್ಟು ಬಂದಿದೆ ಎಂಬ ಲೆಕ್ಕಾಚಾರ ಇದೆ. ಆದರೆ ಸ್ಟಾಕ್ ಚೆಕ್ ಮಾಡಿದರೆ ನಲವತ್ತು ಸಾವಿರ ಲಡ್ಡಿಲ್ಲ, ಇಪ್ಪತ್ತು ಸಾವಿರ ಪಂಚ ಕಜ್ಜಾಯದ ಪ್ಯಾಕೆಟ್ ಇಲ್ಲ. ಅಂದಾಜು ಹದಿನೈದು ಲಕ್ಷ ರೂಪಾಯಿ ಐಟಂ. ಯಾರು ತಿಂದಿದ್ದು?
   ಹಾಗೆಂದು ಈ ಬಗ್ಗೆ ಜನರಿಗೆ ಲಡ್ಡು ಪರಿಮಳ ಬರಲು ಶುರುವಾದ ಕೂಡಲೇ ಮೇಲಾಧಿಕಾರಿಗಳು ಸಂಬಂಧ ಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ! ಬೇರೆಂತದೂ ಮಾಡಿಲ್ಲ. ಹದಿನೈದು ಲಕ್ಷ ಕೇವಲ ಲಡ್ಡಿನಲ್ಲಿ ತಿಂದು ಅರಗಿಸಿಕೊಂಡಿದ್ದಾರೆಂದರೆ ಬಾಕಿ ವಿಭಾಗಗಳಲ್ಲಿ ಸುಬ್ಬಪ್ಪನನ್ನು ಯಾವ ರೀತಿ ವಂಚಿಸಿರ ಬಹುದೆಂದು ಊಹಿಸಿ ಕೊಂಡರೂ ಡಬ್ಬಲ್ ಡೆಂಗ್ಯೂ ಬರಬಹುದು. ಲಡ್ಡು ಪ್ರಸಾದ ಅಲ್ಲಿಂದ ಬಂದಿದೆ, ಇಲ್ಲಿಗೆ ಮುಟ್ಟಿದೆ. ಆದರೆ ಸ್ಟಾಕ್ ಇಲ್ಲ. ಎಂಥ ಚೋದ್ಯ ಗಳು ಮಾರಾಯ್ರೆ. ನಲವತ್ತು ಸಾವಿರ ಲಡ್ಡನ್ನು ಪಿಜಿನ್ ತಿನ್ನಲು ಸಾಧ್ಯವಿಲ್ಲ ಮತ್ತು ಅಷ್ಟು ಪಿಜಿನ್ ಸುಬ್ರಹ್ಮಣ್ಯದಲ್ಲಿ ಇಲ್ಲ. ಆದರೆ ದೇವಸ್ಥಾನದೊಳಗೆ ಮನುಷ್ಯ ರೂಪದ ಪೆರ್ಗುಡೆಗಳು ಸೇರಿಕೊಂಡಿದ್ದು ಅವು ದೇವರನ್ನು ಮತ್ತು ದೇವಸ್ಥಾನವನ್ನು ಒಂದು ಮಾದರಿ ಮಾಡಲು ಸ್ಕೆಚ್ ಹಾಕಿದಂತಿದೆ.





     



   ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದು ವರುಷಗಳೇ ಉರುಳಿದರೂ ಇನ್ನೂ ಕೆಲವೊಂದು ನೇಮಕಾತಿಗಳನ್ನು ಪೆಂಡಿಂಗ್ ಇಡಲಾಗಿದೆ. ಯಾಕೆಂತ ಗೊತ್ತಿಲ್ಲ. ಉದಾಹರಣೆಗೆ ಆ ಧಾರ್ಮಿಕ ಪರಿಷತ್ ಗೆ ನೇಮಕವಾದರೂ ಇನ್ನೂ ಒಂದೇ ಒಂದು ಟೀ ಬಿಸ್ಕತ್ತು ಮೀಟಿಂಗು ಕೂಡ ಕರೆದಿಲ್ಲ. ಧಾರ್ಮಿಕ ಪರಿಷತ್ ರಚನೆ ಆಗಿ ಅದರ ಮೇಂಬರ್ ಗಳ ಸಮ್ಮನ ಮುಗಿದು, ಪೇಪರ್ ಗಳಲ್ಲಿ ಅವರ ಫೋಟೋ ಬಂದು ಬಂದು ಸಾಕಾಗಿ ಹೋದರೂ ಇನ್ನೂ ಮೀಟಿಂಗ್ ಆಗಿಲ್ಲ. ಫಸ್ಟ್ ಮೀಟಿಂಗ್ ಗೆ ಅಂತ ಬೇರೆಯೇ ಅಂಗಿ ಪ್ಯಾಂಟು, ಪಂಚೆ ತೆಗೆದಿಟ್ಟಿದ್ದರೂ ಮೀಟಿಂಗ್ ಇಲ್ಲ. ಜಿಲ್ಲಾಧಿಕಾರಿಗಳು ಹೆಡ್ ಆಗಿರುವ ಪರಿಷತ್ ಗೆ ಈಗ ಮೂರು ತಿಂಗಳು.      ಮೀಟಿಂಗ್ ಮಾಡಲು ಅವರಿಗೆ ಬರ್ಸ ಬಿಡುತ್ತಿಲ್ಲ. ಮೀಟಿಂಗ್ ಮಾಡಿ ಎಂದು ಅವರಲ್ಲಿ ಹೇಳುವ ವಿಕೆಟ್ ಪರಿಷತ್ ನಲ್ಲಿ ಇಲ್ಲ. ಹಾಗಾಗಿ ಕುಂತಿ ಮಕ್ಕಳಿಗೆ ಮೀಟಿಂಗ್ ಇಲ್ಲ.


   ಇನ್ನು ಆ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಅವಧಿ ಮುಗಿದು ಹತ್ತು ತಿಂಗಳು ಕಳೆದರೂ ಹೊಸ ಸಮಿತಿ ಇನ್ನೂ ಆಡಳಿತಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಸರ್ಕಾರ ಬಂದ ಕೂಡಲೇ ದೇಶಭಕ್ತರ ಕಮಿಟಿ ಹೋಯ್ತಲ್ಲ ಆಗದಿಂದ ಲೋಕಲ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸೀಟುಗಳಿಗೆ ಲೋಕಲ್ ಕಾಂಗ್ರೆಸ್ ಲೀಡರ್ಸ್ ಟವೆಲ್ ಹಾಕಿ ಕಾದು ಕುಂತಿದ್ದರು. ಆದರೆ ಅರ್ಜಿ ಹಾಕಲು ಆದೇಶವೇ ಬರಲಿಲ್ಲ. ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲೂ ಸ್ಪರ್ಧೆಗಳಿದ್ದು, ರಾಜಕೀಯಗಳಿದ್ದು ಸರ್ಕಾರದ ನಿಧಾನಗತಿ ಕಾಂಗ್ರೆಸಿಗರ ತಾಳ್ಮೆಯನ್ನೇ ಪರೀಕ್ಷಿಸುತ್ತಿದೆ. ಈಗಾಗಲೇ ಲೋಕಲ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಸೀಟು ನಿಘಂಟಾದವರು ಸಂಜೀವ ಶೆಟ್ರ ಅಂಗಡಿಯಿಂದ ರಾಮ್ ರಾಜ್ ಕಾಟನ್ ಪಂಚೆ ಶಾಲು ಶರ್ಟು ತೆಗೆದಿಟ್ಟಿದ್ದು, ಪೊಂಜೊವು ಕಾಂಗ್ರೆಸಿಗಳು ಕಾಟನ್ ಸಾರಿ ಮ್ಯಾಚಿಂಗ್ ಬ್ಲೌಸ್ ಇಸ್ತ್ರಿ ಹಾಕಿ ಕಪಾಟಿನಲ್ಲಿಟ್ಟಿದ್ದಾರೆ. ಆದರೆ ಅದನ್ನು ಹಾಕಿಕೊಂಡು ಜಿಗ್ಗ ಕಾಣಲು ಇನ್ನೂ ಸಮಿತಿಯೇ ಆಗಿಲ್ಲ. ದೇವರಿಗೂ ಕಾದು ಕಾದು ಸುಸ್ತಾಗಿರ ಬಹುದು.
   ಇದೀಗ ಕರ್ನಾಟಕ ಸರ್ಕಾರ ರಾಜ್ಯದ ದೊಡ್ಡ ದೊಡ್ಡ ಶ್ರೀಮಂತ ದೇವರುಗಳ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಕರೆದಿದ್ದು ಕಾಂಗ್ರೆಸಿಗರು ವೈಟೇಂಡ್ ವೈಟಲ್ಲಿ ಮಿರ ಮಿರ ಮಿಂಚಲು ರೆಡಿಯಾಗಿದ್ದಾರೆ. ಇನ್ನು ದೇವರು ಹೆದರಿಕೊಳ್ಳದಿದ್ದರೆ ಸಾಕು ಕುಬೇರ ಕಾಂಗ್ರೇಸಿಗರನ್ನು ನೋಡಿ.



    



   ಕಾಲ ಎಲ್ಲಿಗೆ ಬಂದಿದೆ, ಎಲ್ಲಿಗೆ ಹೋಗುತ್ತಿದೆ ಎಂದೇ ಹೇಳಕ್ಕಾಗಲ್ಲ ಮಾರಾಯ್ರೆ. ಇನ್ನೂ ಮುಂದೆ ಹೋದರೆ ನಡೆದಾಡಲೂ ಕಷ್ಟ ಎನ್ನುವಲ್ಲಿ ತನಕ ಪರಿಸ್ಥಿತಿ ಬರಬಹುದು. ಇಲ್ಲದಿದ್ದರೆ ಕೇವಲ ವೀಡಿಯೋ ಶೂಟಿಂಗ್ ಮಾಡಿದ್ದಕ್ಕೆ ಅಟ್ರಾಸಿಟಿ ಕೇಸ್ ಹಾಕಲು ಸಂಘಟನೆಯೊಂದು ಪೋಲೀಸರನ್ನು ಮೇಲೆ ಕೆಳಗೆ ಮಾಡಿ ಒತ್ತಾಯಿ‌ಸಿದ ಕತೆ ಕಡಬದಿಂದ ಬಂದಿದೆ.
   ಅಲ್ಲಿ ಕಡಬ ತಾಲೂಕು ಕೊಂಬಾರಿನ ಬೊಟ್ಟಡ್ಕದ ರಿಸರ್ವ್ ಕಾಡಿನಲ್ಲಿ ಎರಡು ಬಡಬಡ ಕುಟುಂಬಗಳು ಮನೆ ಇಲ್ಲದೆ ಟೆಂಟ್ ಹಾಕಿದ್ದವು. ಓ..... ಎಂದ ಅರಣ್ಯ ಇಲಾಖೆ ಎರಡೂ ಕುಟುಂಬಗಳನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿ ಕರ ಕೈಲ್ ಸಮೇತ ತಂದು ಬಿಳಿನೆಲೆ ಗ್ರಾಮದ ಸರ್ಕಾರಿ ಜಾಗವೊಂದರಲ್ಲಿ ಸ್ಥಾಪನೆ ಮಾಡುತ್ತಾರೆ. ಸ್ಥಾಪನೆ ಆಗಿ ಕೆಲವೇ ದಿನಗಳಲ್ಲಿ ಅದೂ ಅರಣ್ಯ ಇಲಾಖೆ ಭೂಮಿ ಎಂದು ತಿಳಿದುಬಂದಿದೆ. ಪುನಃ ಅರಣ್ಯ ಇಲಾಖೆ ಬಂದು ಈ ಎರಡು ಕುಟುಂಬಗಳನ್ನು ಜಾಗ ಖಾಲಿ ಮಾಡಿಸುವ ಕೆಲಸಕ್ಕೆ ಇಳಿದಿದೆ. ಅಷ್ಟರಲ್ಲಿ ಸ್ಪಾಟಲ್ಲಿ ಕಳಾರ ಸಂಘಟನೆಯ ಭಯಂಕರ ಲೀಡರೊಬ್ಬ ಧುತ್ತೆಂದು ಹಾಜರಾಗಿ ದೆಪ್ಪೆ ದೀಪೆ ಎಂದು ಕಿಟಿ ಕಿಟಿ ಕಿಟಿ ಶುರು ಮಾಡಿದ್ದಾನೆ. ಗಲಾಟೆ ಶುರುವಾಗಿದೆ. ಈ ಗಲಾಟೆಯನ್ನು ಸ್ಥಳೀಯ ಕಾಲೇಜು ಹುಡುಗನೊಬ್ಬ ವೀಡಿಯೋ ಶೂಟಿಂಗ್ ಮಾಡಿದ್ದಾನೆ. ಅಷ್ಟೇ. ಕಳಾರದ ಭಯಂಕರ ನಾಯಕ ಅರಚಾಡಲು, ಕಿರುಚಾಡಲು ಶುರು ಮಾಡಿದ್ದಾನೆ.
   ಹಾಗೆ ಬಿಳಿನೆಲೆ ಗ್ರಾಮದ ವಿವಾದಿತ ಸ್ಥಳದಲ್ಲಿ ಅರಣ್ಯ ಇಲಾಖೆ ಮತ್ತು ಕಳಾರ ಸಂಘಟನೆಯ ಭಯಂಕರ ನಾಯಕನ ನಡುವೆ ಜಟಾಪಟಿ ನಡೆಯುವುದನ್ನು ಕಾಲೇಜು ಹುಡುಗನೊಬ್ಬ ವೀಡಿಯೋ ಶೂಟಿಂಗ್ ಮಾಡಿದ್ದು ಪರಮ ಅಪರಾಧ ಎಂದು ಘೋಷಿಸಿದ ಕಳಾರ ನಾಯಕ ಸೀದಾ ಬಂದು ಕಡಬ ಠಾಣೆಯಲ್ಲಿ ಕುಂತು ಹುಡುಗನ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ಪೋಲಿಸರ ಮೇಲೆ ಹೈ ಪ್ರೆಷರ್ ಹಾಕಿದ್ದಾನೆ. ಪಾಪ ಕಡಬ ಪೋಲಿಸರಿಗೆ ಹೆದರಿ ಲೋಕವಿಲ್ಲ. ಯಾಕೆಂದರೆ ಕಳಾರದ ನಾಯಕ ಒಂದು ಅರ್ಭಟೆ ಕೊಟ್ಟರೆ ಸಾಕು ಹತ್ತು ಪೊಂಕ್ರ, ಚೀಂಕ್ರ,ಚೋಂಕ್ರಗಳು ಜೈ ಎಂದು ಬಂದು ಠಾಣೆ ಮುಂದೆ ಕಾರಣಗಳೇ ಇಲ್ಲದೆ ಪೊಕ್ಕಡೆ ಪ್ರತಿಭಟನೆಗೆ ಕುಂತು ಬಿಡುತ್ತವೆ. ಹಾಗಾಗಿ ಪೋಲಿಸರಿಗೆ ಉಭಯ ಸಂಕಟ ಶುರುವಾಗಿ ಹೋಯ್ತು. ಅನ್ಯಾಯವಾಗಿ ಒಬ್ಬ ಕಾಲೇಜು ಹುಡುಗನ ಮೇಲೆ ಅಟ್ರಾಸಿಟಿ ಕೇಸ್ ಹಾಕ ಬೇಕು ಮತ್ತು ಮರುದಿನವೇ ಅವನಿಗೆ ಪರೀಕ್ಷೆ ಬೇರೆ ಇತ್ತು. ಹಾಗಾಗಿ ಪೋಲಿಸರು ಆದಷ್ಟು ಕಳಾರದ ಪೊಕ್ಕಡೆ ಹೋರಾಟಗಾರನ ಮನವೊಲಿಸಲು ಯತ್ನಿಸಿದರೂ ಅವನದ್ದು ಒಂದೇ ಜಪ ಅಟ್ರಾಸಿಟಿ.. ಅಟ್ರಾಸಿಟಿ!


   ಹಾಗೇ ಒಬ್ಬ ಕಾಲೇಜು ಹುಡುಗನ ಮೇಲೆ ಅನ್ಯಾಯವಾಗಿ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಲು ಕಳಾರದ ಪಟಾಕಿ ನಾಯಕ ಪೋಲಿಸರ ಮೇಲೆ ಹೈ ಪ್ರೆಷರ್ ಹಾಕುತ್ತಿದ್ದಾನೆ ಎಂದು ಗೊತ್ತಾಗುತ್ತಲೇ ನೆಟ್ಟಣದ ದೇಶ ಭಕ್ತರ ಟೀಂ ಕಾಲೇಜು ಹುಡುಗನ ರಕ್ಷಣೆಗೆ ಧಾವಿಸಿದೆ. ಯಾವಾಗ ದೇಶ ಭಕ್ತರ ಟೀಂ ಹುಡುಗನ ಸೈಡಿಂದ ಬಂತೋ ನೆಟ್ಟಣದ ಕೆಲವು ಕಾಂಗ್ರೆಸ್ ನಾಯಕರು ಕಳಾರ ಹೋರಾಟಗಾರನ ನಟ್ಟು ಬೋಲ್ಟ್ ಟೈಟ್ ಮಾಡಿ ಬಿಟ್ಟರು. ಈ ಮೂವರ ನಡುವೆ ಕಡಬ ಪೊಲೀಸರು ಮಾತ್ರ ಪಾಪಚ್ಚಿ ಆಗಿಬಿಟ್ಟರು.
  ಹಾಗೆಂದು ಯಾವ ಸಂಧಾನವೂ ಈ   ವಿವಾದವನ್ನು ಬಗೆಹರಿಸಲಿಲ್ಲ. ಕಳಾರದ ಪಟಾಕಿ ವೀರ ರಚ್ಚೆಯಿಂದ ಬಿಡಲಿಲ್ಲ ದೇಶ ಭಕ್ತರು  ಕೂಂಜಿಯಿಂದ ಬಿಡಲಿಲ್ಲ. ಅಟ್ರಾಸಿಟಿ ಕೇಸ್ ದಾಖಲಿಸಲೇ ಬೇಕೆಂದು ಅವನು ಹಟ ಹಿಡಿದು ಕುಂತಿದ್ದರೆ ದೇಶ ಭಕ್ತರು ಹೇಗೆ ದಾಖಲಿಸುತ್ತೀರಿ ಎಂದು ಹಠಕ್ಕೆ ಬಿದ್ದರು. ಒಂದು ದಿನ ಮುಗಿದರೂ ನಾಟಕ "ಎಲ್ಲೆ ತೂಕ" ಡೈಲಾಗ್ ನೊಂದಿಗೆ ಸಶೇಷದಲ್ಲಿ ಆವತ್ತು ತೆರೆ ಎಳೆಯಲಾಯಿತು.
   ಹಾಗೇ ಯಾವುದೇ ಸಂಧಾನಕ್ಕೆ ಕಳಾರದ ಪಟಾಕಿ ವೀರ ಜಪ್ಪಯ್ಯ ಅನ್ನಲಿಲ್ಲವೋ ದೇಶಭಕ್ತರು ಕಾಲೇಜು ಹುಡುಗನ ತಾಯಿಯನ್ನ ಅಡ್ಮಿಟ್ ಮಾಡಿ ಬಿಟ್ಟರು ಮತ್ತು ಕಳಾರದ ಪಟಾಕಿ ಮೇಲೆ ಕೌಂಟರ್ ಕಂಪ್ಲೇಂಟ್ ಕೊಟ್ಟು ಬಿಟ್ಟರು. ಆಗ ಸ್ವಲ್ಪ ವಿಚಲಿತನಾದ ಕಳಾರದ ನಾಯಕ ನಂತರದ ಬೆಳವಣಿಗೆಗಳಲ್ಲಿ ಮರುದಿನ ರಾತ್ರಿ ಒಂದು ಗಂಟೆಗೆಲ್ಲ ತನ್ನ ಕಂಪ್ಲೇಂಟ್ ವಾಪಾಸ್ ತಗೊಂಡು ಪೇಸ್ಟ್ ಮಾಡಿ ಬಾತ್ ಮಾಡಲು ಮನೆಗೆ ಹೋಗಿದ್ದ ಎಂದು ತಿಳಿದುಬಂದಿದೆ. ಈ ನಡುವೆ ವಿವಾದ ಬಗೆಹರಿಯದ ಕಾರಣ ಕಾಲೇಜು ಹುಡುಗನ ಪರೀಕ್ಷೆಯೂ ತಪ್ಪಿದ್ದು ಒಬ್ಬ ಪೊಕ್ಕಡೆ ಹೋರಾಟಗಾರನ ಅಂಡಿಗುಂಡಿ ನ್ಯಾಯ ಬೇಡಿಕೆಯಿಂದ ಇಷ್ಟೆಲ್ಲಾ ರಾದ್ಧಾಂತಗಳೇ ನಡೆದು ಹೋಗಿದೆ. ಶಿಲ್ಪಿಯೊಬ್ಬರ ಫೋಟೋ ತೋರ್ಸಿ ತೋರ್ಸಿ ಈ ಪಟಾಕಿ ವೀರ ಮಾಡಿದ ದುಡ್ಡು ಚಿಲ್ಲರೆಗಳಲ್ಲಿ ಇಲ್ಲ.    ಆ ದುಡ್ಡಿನ ಲಿಸ್ಟ್ ಕೂಡ ಇದೆ. ದರ್ಶನ್ ಜೈಲಿಂದ ರಿಲೀಸ್ ಆದ ಮೇಲೆ ಅದು ಕೂಡ ರಿಲೀಸ್ ಆಗಲಿದೆ.



   


   ಇನ್ನು ಆ ಕಂದಾಯ ಇಲಾಖೆ ಅಧಿಕಾರಿಗಳ ಬಗ್ಗೆ ನಾವು ಹೆಮ್ಮೆ ಪಡಬೇಕು, ಅಚ್ಚರಿ ಪಡಬೇಕು. ಅವರ ಧೈರ್ಯವನ್ನು ಕೊಂಡಾಡ ಬೇಕು, ಹಾಡಿ ಹೊಗಳಬೇಕು. ಯಾಕೆಂದರೆ ಆ ಕೋರ್ಟ್ ಮೈದಾನವನ್ನು, ನೆಹರೂ ಮೈದಾನವನ್ನು, ಪೋಲಿಸ್ ಠಾಣೆಯನ್ನು ದುಡ್ಡು ಕೊಟ್ಟರೆ ಒಮ್ಮೆಗೆ ಅಕ್ರಮ ಸಕ್ರಮ ಅಡಿಯಲ್ಲಿ ನಮ್ಮ ಹೆಸರಿಗೆ ಮಾಡಿಕೊಡಲು ಹಿಂದೆ ಮುಂದೆ ನೋಡಲಿಕ್ಕಿಲ್ಲ. ಅಂಥ ಜನಗಳು ಅವರು. ಇದೀಗ ಪುತ್ತೂರು ತಾಲೂಕಿನ ಸರ್ವೆಯಲ್ಲಿ ಇರುವ ಗೇರು ಅಭಿವೃದ್ಧಿ ನಿಗಮದ ನೂರು ಎಕರೆಗಿಂತಲೂ ಹೆಚ್ಚಿರುವ ಗೇರು ಬೀಜದ ಕೂಪನ್ನು ತುಂಡು ತುಂಡು ಮಾಡಿ ಸ್ಥಳೀಯ ಕೆಲವು  ನುಂಗಣ್ಣಗಳು ಅಕ್ರಮ ಸಕ್ರಮದಡಿಯಲ್ಲಿ ನುಂಗಲು ಶುರು ಮಾಡಿದ್ದು ಈ ನುಂಗುವ ಪ್ರಕ್ರಿಯೆ ಹೀಗೆ ಮುಂದುವರೆದರೆ ಇಡೀ ಬೀಜದ ಕೂಪು ನಿಗಮದ ಮ್ಯಾಪಿನಿಂದ ಶಾಶ್ವತವಾಗಿ ಕಣ್ಮರೆಯಾಗುವ ಅಪಾಯಗಳಿವೆ.
   ಇದು ಸರ್ವೆ ಗ್ರಾಮದ ಕತೆ. ವಿನಯ್ ಕುಮಾರ್ ಸೊರಕೆ ಎಂಬ ಮಂತ್ರಿಯನ್ನು ಕೊಟ್ಟ ಗ್ರಾಮ ಇದು.  ಈ ಗ್ರಾಮದಲ್ಲಿ ಅಂದಾಜು ನೂರು ಎಕರೆಯಷ್ಟು ವಿಸ್ತಾರದ ಒಂದು ಗೇರುಬೀಜದ ಪ್ಲಾಂಟೇಶನ್ ಇದೆ. ಗಂಜಿ ಕೇಂದ್ರ ಗೇರು ಅಭಿವೃದ್ಧಿ ನಿಗಮದ ಮಾಲೀಕತ್ವದಲ್ಲಿರುವ ಈ ಪ್ಲಾಂಟೇಶನ್ ನಿಗಮಕ್ಕೆ ದೊಡ್ಡ ಆದಾಯ ತರುವ ಪ್ಲಾಂಟೇಶನ್ ಆಗಿದೆ. ವರ್ಷ ವರ್ಷವೂ ಈ ಕೂಪು ಲಕ್ಷಾಂತರ ದುಡ್ಡಿಗೆ ಹರಾಜು ಆಗುತ್ತಿದೆ. ಕಾಣಿಯೂರಿನ ಅಬ್ದುಲ್ ಕರೀಂ ಮಾಲೀಕತ್ವದ ಆಶಿಕಾ ಟ್ರೇಡಿಂಗ್ ಕಂಪನಿ ಹೆಚ್ಚಾಗಿ ಈ ಕೂಪನ್ನು ಹರಾಜಿನಲ್ಲಿ ಪಡೆಯುತ್ತಿದ್ದು ಗೇರು ಅಭಿವೃದ್ಧಿ ನಿಗಮದಂತಹ ಗಂಜಿ‌ ಕೇಂದ್ರಗಳಿಗೆ ಇದು ATM ಇದ್ದ ಹಾಗೇ ಎಂದೇ ಹೇಳಬಹುದು. ಇದೀಗ ಗ್ರಾಮದ ಸೊರಕೆ ಮತ್ತು ಕೆಲವು ಕಡೆಗಳಲ್ಲಿ ಕೂಪಿನ ಬರಿಯ ಖಾಸಗಿ ಜಾಗಗಳ ಕೆಲವು ಕೃಷಿಕರು ಕಂದಾಯ ಇಲಾಖೆಯ ಕೆಲವು ಭೂತಗಳಿಗೆ ಬಡಿಸಿ, ಕೂಪಿನ ಸೈಡ್ ಸೈಡಲ್ಲಿ ಒಂದೆಕರೆ, ಎರಡೆಕರೆ, ಮೂರು, ನಾಲಕ್ಕು ಎಂದು ಅಕ್ರಮ ಸಕ್ರಮದಡಿಯಲ್ಲಿ ನಿಗಮದ ಭೂಮಿಯನ್ನು ಮಂಜೂರಾತಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಒಂದು ನುಂಗುವ ಸತ್ಕಾರ್ಯದಲ್ಲಿ ಗಂಜಿ ಕೇಂದ್ರದ ಕುಲೆಗಳಿಗೂ ಅಗೆಲು ಕೊಡಲಾಗುತ್ತಿದೆ ಮತ್ತು ಕಂದಾಯ ಇಲಾಖೆ ಹಾಗೂ ಗಂಜಿ ಕೇಂದ್ರದ ನಡುವೆ ಲಿಂಕ್ ಇದೆ ಎಂದು ತಿಳಿದುಬಂದಿದೆ. ಇದೀಗ ಈ ಸೀಕ್ ಚಿಕ್ಕದರಲ್ಲಿ ಶುರುವಾಗಿದ್ದು ಕೆಲವೇ ಕೆಲವು ನುಂಗಣ್ಣಗಳು ಮಾತ್ರ ಕೂಪಿನ ಸೈಡ್ ಸೈಡ್ ನುಂಗಿದ್ದು ಇದು ಸಮೂಹ ಸನ್ನಿ ಆಗುವ ಮೊದಲು ಗಂಜಿ ಕೇಂದ್ರ ಕುಂಭಕರ್ಣ ನಿದ್ದೆಯಿಂದ ಎದ್ದೇಳುವುದು ಒಳ್ಳೆಯದು.‌ಇಲ್ಲದಿದ್ದರೆ ಮದ್ದಿಗೆ ಒಂದು ತುಂಡು ಭೂಮಿ ಸಿಗಲಿಕ್ಕಿಲ್ಲ.


ಹಾಗೆಂದು ಕಂದಾಯ ಇಲಾಖೆ ಮತ್ತು ಗಂಜಿ ಕೇಂದ್ರ ಎರಡೂ ಈ ಬಗ್ಗೆ ತನಿಖೆ ನಡೆಸಲೇ ಬೇಕಾಗಿದೆ. ಈಗಾಗಲೇ ಕೆಲವು ಮಂದಿ ಗೇರುಬೀಜ ಕೂಪಿನ ಅಕ್ರಮವನ್ನು ಸಕ್ರಮ ಮಾಡಿಕೊಂಡು ಸಾಗುವಳಿ ಚೀಟಿ ಪಡಕ್ಕೊಂಡು ಇಸ್ತ್ರಿ ಹಾಕಿ ಇಟ್ಟಿದ್ದಾರೆ. ಅಂಥ ಕೂಪು ಕಳ್ಳರನ್ನು ಹುಡುಕಿ ಅವರ ಕೈಯಿಂದ ಕೂಪಿನ ತುಂಡುಗಳನ್ನು ವಶ ಪಡಿಸಿಕೊಳ್ಳಲೇ ಬೇಕು. ಇಲ್ಲದಿದ್ದರೆ "ದಾಲ ಆಪುಜಿಯ" ಡೈಲಾಗ್ ಜಾರಿಗೆ ಬಂದು ನಾಳೆ ಎಲ್ಲರೂ ಸೇರಿ ಕೂಪಿಂದ ಗೇರು ತೆಗೆದು ಇಂಟರ್ಸಿ ಅಡಿಕೆ ಹಾಕಿ ಕಂದಾಯ ಇಲಾಖೆ ಮುಂದೆ ಅಕ್ರಮ ಸಕ್ರಮ ಅರ್ಜಿ ಹಿಡಕ್ಕೊಂಡು ರಜನೀಕಾಂತನ ಮ್ಯಾಟನಿಗೆ ಕ್ಯೂ ನಿಂತ ಹಾಗೆ ನಿಲ್ಲಬಹುದು. ರಾಮಕೃಷ್ಣ ಹೆಗಡೆ ಚಕ್ಕುಲಿ ತಿಂದ ಹಾಗೆ ಸುತ್ತಲಿಂದ ತಿಂದು ತಿಂದು ನಾಳೆ ನನಗೆ ಗೊತ್ತೇ ಇಲ್ಲ ಅಂದರೆ ಲಾಸ್ ಯಾರಿಗೆ ಮಾರಾಯ್ರೆ? ಈಗಾಗಲೇ ಸರ್ವೆ ಗ್ರಾಮದ ಕೆಲವು ತಿಮಿಂಗಿಲಗಳು ಈ ಬಗ್ಗೆ ಒಂದು ರೌಂಡು ಸ್ಟಡಿ ಮಾಡಿ ಮುಂದಿನ ದಿನಗಳಲ್ಲಿ ಕೂಪನ್ನು ಹೇಗೆ ಅದೃಶ್ಯ ಮಾಡ ಬಹುದೆಂಬ ನೀಲಿ ನಕಾಶೆ ರೆಡಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗಂಜಿ ಕೇಂದ್ರಗಳಿಗೆ ಗಂಜಿಗೂ ಗತಿ ಇಲ್ಲದಂತಾಗುವ ದಿನ ದೂರದಲ್ಲಿಲ್ಲ.




  



  ಇವರೆಲ್ಲ ವೀಡಿಯೋ ಮಾಡೋದು ಯಾಕೆ ಮಾರಾಯ್ರೆ?‌ ಹಾಗೆಂದು ಇವರು ಮಾಡುವ ಪುಣ್ಯ ಕಾರ್ಯಗಳ, ಸ್ವಮಜಾ ಸೇವೆಗಳ ಚಿತ್ರೀಕರಣ ಮಾಡಿಕೊಂಡು ಕೆರಿಯರ್ ಲಗಾಡಿ ತೆಗೆಯುವ ಸಾಕ್ಷಿಗಳನ್ನು ಯಾಕೆ ಕ್ರಿಯೇಟ್ ಮಾಡಿಕೊಳ್ಳುತ್ತಾರೆಂದೇ ಅರ್ಥವಾಗುತ್ತಿಲ್ಲ. ಪೋಪಿಕಾಲ ಮಾರಾಯ್ರೆ ಇವರಿಗೆಲ್ಲ. ಅದರಲ್ಲೂ ದೇಶಭಕ್ತರಿಗಂತೂ ಜಾಸ್ತಿ ಅಭ್ಯಾಸ. ಸ್ವಮಜಾ ಸೇವೆ ಮಾಡೋದೂ ಅವರೇ, ಕ್ರೀಯೆಗಳ ಶೂಟಿಂಗ್ ಮಾಡೋದೂ ಅವರೇ, ವೈರಲ್ ಆಗೋದೂ ಅವರಿಂದಲೇ, ತಮ್ಮ ಸ್ಥಾನಗಳಿಂದ ಡಿಸ್ಮಿಸ್ ಆಗೋದೂ ಅವರೇ, ನಂತರ ಪರಪ್ಪನ ಅಗ್ರಹಾರ ವಾಸಿ ಆಗೋದೂ ಅವರೇ. ಓಬಿರಾಯನ ಕಾಲದಲ್ಲಿ ಒಬ್ಬ ಒಲೆಯಲ್ಲಿ ಕಕ್ಕ ಮಾಡಿ ನನ್ನ ಕರ್ಮವೇ ಅಂದನಂತೆ. ದೇಶಭಕ್ತರ ಕತೆ ಇವನ ಹಾಗೇ ಆಗಿದೆ.


ಇದು ಕೊಂತೂರಿನ ಪರಮ ದೇಶ ಭಕ್ತನೊಬ್ಬನ ಕತೆ. ಹೆಸರು ರಾಧೇಶ್  ಜೀ. ದೇಶಭಕ್ತರ ಪಕ್ಷದಲ್ಲಿ, ಸಂಫ ಪರಿವಾರದ ಬೈಠಕ್ ಗಳಲ್ಲಿ ರಾಧೇಶ್ ಜೀಯ ಮಾತು, ಅಭಿಪ್ರಾಯಗಳು ಸುಗ್ರೀವಾಜ್ಞೆ ಇದ್ದ ಹಾಗೇ. ಮಂಗಳೂರು ಎಂಪಿಗೆ ಕ್ಯಾಂಡಿಡೇಟ್ ಯಾರಾಗಬೇಕು, ವಿಧಾನ ಸಭೆಗೆ ಯಾರನ್ನು ಸೆಂಡ್ ಮಾಡಬೇಕು, ಜಿ.ಪಗೆ, ತಾ.ಪಗೆ, ಗ್ರಾ.ಪಂಗೆ ಯಾರನ್ನು ನಿಲ್ಲಿಸ ಬೇಕು, ದೇಶಭಕ್ತರ ಜಿಲ್ಲಾ ಅಧ್ಯಕ್ಷ ಯಾರಾಗ ಬೇಕು, ಪರಿವಾರವನ್ನು ಯಾರ ಕೈಯಲ್ಲಿ ಕೊಡಬೇಕು, ಪೆತ್ತದ ಜವಾಬ್ದಾರಿ ಯಾರಿಗೆ ಮುಂತಾದ ದೇಶ ಭಕ್ತರ ಟೀಮಿನ ಪ್ರಮುಖ ನಿರ್ಧಾರಗಳ ಜ್ಯಾರಿಗೆ ರಾಧೇಶ್ ಜೀ ಒಪೀನಿಯನ್ ಇಂಪಾರ್ಟೆಂಟ್ ಆಗಿರುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರಕ್ಕೆ ಮೊರಂಪು ಬೇನೆಯ ಕ್ಯಾಂಡಿಡೇಟ್ ನಿಲ್ಲಿಸಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕೂಡ ಇದೇ ರಾಧೇಶ್ ಜೀ ಎಂದು ಇವತ್ತಿಗೂ ಕಾಂಗ್ರೆಸಿಗರು ಇವರನ್ನು ಹಾಡಿ ಹೊಗಳುತ್ತಿದ್ದಾರೆ. ಹಾಗೇ ತನ್ನ ಸಂಘಟನೆಯ ಮತ್ತು ರಾಜಕೀಯದ ಉತ್ತುಂಗದಲ್ಲಿರುವಾಗಲೇ ರಾಧೇಶ್ ಜೀ ಗೆ ಗೇರ್ ಬಾಕ್ಸ್ ಪ್ರಾಬ್ಲಂ ಶುರುವಾಗಿ ಹೋಯ್ತು. ಇದೇ ಕಾರಣಕ್ಕೆ ಬಿಜೆಪಿ ಮತ್ತು ಪರಿವಾರಗಳು ರಾಧೇಶ್ ಜೀಯ ಹೆಗಲಿನಿಂದ ಜವಾಬ್ದಾರಿ ತೆಗೆದು ತೋಟಕ್ಕೆ ಮುದ್ದು ಬಿಡಲು ಸೆಂಡ್ ಮಾಡಿದೆ ಎಂದು ತಿಳಿದುಬಂದಿದೆ.
   ಹಾಗೆಂದು ರಾಧೇಶ್ ಜೀ ದೊಡ್ಡ ದೊಡ್ಡ ತಪ್ಪೇನು ಮಾಡಿಲ್ಲ. ಅದ್ಯಾರೋ ಹುಡುಗಿಯೊಬ್ಬಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತಾಡಿದ್ದು ಅಷ್ಟೇ. ಆದರೆ ವೀಡಿಯೋ ಕಾಲ್ ನಲ್ಲಿ ಹುಡುಗಿಯೊಂದಿಗೆ ಯೋಗಕ್ಷೇಮ ಮಾತ್ರ ಮಾತಾಡದೆ "ತೋರ್ಸು.. ತೋರ್ಸು" ಎಂದು ಹೇಳಿದ್ದು, ನಂತರ ತಾನೇ ಒಳಗೇ ಅಡಗಿಸಿಟ್ಟದ್ದನ್ನು ಹೊರಗೆಳೆದು ತೋರಿಸಿದ್ದು ಇದೆಲ್ಲ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸೇವ್ ಆಗಿತ್ತು ಮತ್ತು ವೈರಲ್ ಆಗಿತ್ತು. ಇದು ದೇಶ ಭಕ್ತರ ಟೀಮಿಗೆ ಮತ್ತು ಪರಿವಾರಕ್ಕೆ ಭಾರೀ ಮುಜುಗರ ತಂದಿತ್ತು ಮತ್ತು ರಾಧೇಶ್ ಜೀ ವಿಷಯದಲ್ಲಿ ಏರ್ಯಲ್ ರೂಟ್ ತಗೊಂಡು ಅವರನ್ನು ದೊಡ್ಡ ದೊಡ್ಡ ಜವಾಬ್ದಾರಿಗಳಿಂದ ತೆಗೆದ್ದು ಬಿಸಾಡಿತ್ತು.
   ಹಾಗೆಂದು ಒಂದು ನಿಮಿಷವೂ ಭರ್ತಿ ಇಲ್ಲದ ಈ ಕ್ಲಿಪ್ ನಲ್ಲಿ ಒಮ್ಮೆ ರಾಧೇಶ್ ಜೀ ಮಲಗಿಕೊಂಡು ಹುಡುಗಿ ಒಂದರ ಜೊತೆ ಮಾತಾಡುವ ಸೀನ್ ಇದೆ. ಇನ್ನೊಂದು ಸೀನಿನಲ್ಲಿ ಚಾಕಲೇಟ್ ಫ್ಲೇವರ್ ಕೋನ್ ಐಸ್ ಕ್ರೀಮ್ ನಂತಹ ವಸ್ತುವೊಂದನ್ನು ರಾಧೇಶ್ ಜೀಯೇ ತೋರಿಸುತ್ತಾರೆ ಅಷ್ಟೇ. ಕೇವಲ ಇಷ್ಟಕ್ಕೇ ಪರಿವಾರ ಮತ್ತು ದೇಶಭಕ್ತರು ರಾಧೇಶ್ ಜೀಗೆ ಏರ್ಯಲ್ ರೂಟ್ ತೋರಿಸಿದ್ದಾರೆ. ಇನ್ನೊಂದು ಮಾಹಿತಿ ಏನೆಂದರೆ ರಾಧೇಶ್ ಜೀದ್ದು ಮೂರ್ನಾಲ್ಕು ನಿಮಿಷದ ಇನ್ನೊಂದು ದೊಡ್ಡ ಫಿಲಂ ಇದ್ದು ದರ್ಶನ್ ಜೈಲಿಂದ ಬಂದ ಮೇಲೆ ರಿಲೀಸ್ ಆಗುವ ಅಪಾಯಗಳಿವೆ ಎಂದು ತಿಳಿದುಬಂದಿದೆ. ಅದಕ್ಕೆ ದೇಶಭಕ್ತರು ಮುಂಜಾಗ್ರತಾ ಕ್ರಮವಾಗಿ ರಾಧೇಶ್ ಜೀ ಯನ್ನು ಮದ್ದು ಬಿಡಲು ಕಳಿಸಿದ್ದು.




 


  ಅದೊಂದು ಓಬಿರಾಯನ ಕಾಲದ ಸಮಸ್ಯೆ. ಪುತ್ತೂರು ಕ್ಷೇತ್ರದ  ಶಾಸಕರಾಗಿದ್ದವರು ಈ ರಾಜ್ಯದ ಮುಖ್ಯಮಂತ್ರಿ ಆದಾಗಲೂ ಈ ಸಂಕದ ಸಮಸ್ಯೆ ಪರಿಹಾರ ಕಾಣಲಿಲ್ಲ. ಈ‌ ಒಂದು ಸಮಸ್ಯೆಯ ಪರಿಹಾರಕ್ಕೆ ಆ ಭಾಗದ ಜನ ಅಶೋಕ್ ಕುಮಾರ್ ರೈ ಎಂಬ ಜನನಾಯಕ ಪುತ್ತೂರು ಶಾಸಕನಾಗುವ ತನಕ ಕಾಯ ಬೇಕಾಯಿತು. ಶಬರಿ ರಾಮನನ್ನು ಕಾದಂತೆ, ಭಾರತೀಯರು ವಿಶ್ವಕಪ್ ಕಾದಂತೆ. ಇದೀಗ ಈ ಸಮಸ್ಯೆ ಮುಗಿಯುವ ಹಂತದಲ್ಲಿದೆ. ಆದರೆ ಎಲ್ಲರೂ ಸೇರಿ ಮದುವೆ ಖರ್ಚು ಚಪ್ಪರದಲ್ಲೇ ಮುಗಿಸುವ ಹುನ್ನಾರದಲ್ಲಿದ್ದಾರೆ. ಎಲ್ಲಿಯಾದರೂ ಸಂಕ ಬಾಕಿಯಾದರೆ ಮಾರಾಯ್ರೆ!   
ಇದು ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆಯ ಕತೆ. ಇದೊಂದು ಮುಳುಗು ತಜ್ಞ ಸೇತುವೆ. ಬೇಸ, ಕಾರ್ತೆಲ್, ಆಟಿ, ಸೋಣಗಳಲ್ಲಿ ಈ ಸಂಕ ಸಂಕಷ್ಟದಲ್ಲಿರುತ್ತದೆ. ಅದಕ್ಕೆಂದೇ ಶಾಸಕ ಅಶೋಕ್ ಕುಮಾರ್ ರೈ ಕಳೆದ ಬಜೆಟ್ ನಲ್ಲಿ ಹೊಸ ಸಂಕ ಮಾಡಲು ಮೂರು ಕೋಟಿ ಅನುದಾನ ಮೀಸಲಿಡಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವ ಕಾರಣ ನಂತರದ ದಿನಗಳಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ಗುತ್ತಿಗೆದಾರರೊಬ್ಬರು ಸದ್ರಿ ಅನುದಾನದ ಮಂಜೂರಾತಿಗೆ ಕೆಲಸ ಮಾಡಲು ಶುರುವಿಟ್ಟುಕ್ಕೊಂಡಿದ್ದರು ಮತ್ತು ಆ ಕಾಮಗಾರಿಯ ಟೆಂಡರನ್ನು ತಾವೇ ಪಡೆದು ಕೊಳ್ಳುವ ಇರಾದೆಯಲ್ಲಿದ್ದರು. ಈ ಬಗ್ಗೆ ಸಂಬಂಧ ಪಟ್ಟವರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಆ ಕೆಲಸಕ್ಕೆ ಇಳಿದ ಮೇಲೆ ಅವರಿಗೆ ಅದರ ಆಳ ಅಗಲ ಗೊತ್ತಾಗಿ ಹೋಯ್ತು. ಯಾಕೆಂದರೆ PWD ಇಲಾಖೆಯಲ್ಲಿ ಬಡಿಸಿದಷ್ಷು ಮುಗಿಯದ ಸಂಖ್ಯೆಯಲ್ಲಿ ಕುಲೆಗಳಿವೆ, ಭೂತಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ, ಗುತ್ತಿಗೆದಾರರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಯಾಗಿದ್ದರೂ, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಸದ್ರಿ ಗುತ್ತಿಗೆದಾರರು ಚೆಲ್ಯಡ್ಕ ಸಂಕದ ಅನುದಾನದ ಮಂಜೂರಾತಿಗೆ ಬರೋಬ್ಬರಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು PWD ಇಲಾಖೆಯ ಭೂತಗಳಿಗೆ ಮತ್ತು ಕುಲೆಗಳಿಗೆ ಬಡಿಸಿಯೇ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದರು.


ಹಾಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಇಪ್ಪತ್ತು ಲಕ್ಷ ಲಂಚ‌ ಮತ್ತು ಲಂಚ್ ಕೊಟ್ಟು ಅನುದಾನ ಮಂಜೂರು ಮಾಡಿಸಿಕೊಂಡು ಬಂದ ಗುತ್ತಿಗೆದಾರರಿಗೆ ಟೆಂಡರ್ ಸಮಯದಲ್ಲಿ ಶಾಕ್ ಒಂದು ಕಾದಿತ್ತು. ಸಂಕದ ಟೆಂಡರ್ ಸಮಯದಲ್ಲಿ ಅಲ್ಲಿ ಒಬ್ಬ ಹೊಸ ಗುತ್ತಿಗೆದಾರನ ಎಂಟ್ರಿ ಆಗಿತ್ತು. ಯಾರೆಂದು ನೋಡಿದರೆ ಕೇಡರ್ ಭಟ್ರು, ದುಡ್ಡಿನ ಚೀಲ ಹಿಡಕ್ಕೊಂಡು ರೆಡಿಯಾಗಿ ನಿಂತಿದ್ದಾರೆ. ಏನು ಭಟ್ರೇ ನಿಮ್ಮ ಕತೆ ಎಂದು ಕೇಳಿದರೆ ನಾನೂ ಟೆಂಡರ್ ಕರೆಯುತ್ತೇನೆ ಎಂದು ಭಟ್ರು ಘೋಷಿಸಿದ್ದಾರೆ. ಆಗ PWDಗೆ ಇಪ್ಪತ್ತು ಲಕ್ಷ ಅಗೆಲು ಬಡಿಸಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿದ್ದ ಗುತ್ತಿಗೆದಾರನ ಚಡ್ಡಿ ಜಾರುವ ಸ್ಥಿತಿಗೆ  ಬಂದಿದೆ. ಹಾಗೆ ಇಬ್ಬರೂ ಗುತ್ತಿಗೆದಾರರ ಮಧ್ಯೆ ಕುಂತು, ನಿಂತು ಎಲ್ಲಾ ಸೈಜಿನ ಮಾತುಕತೆಗಳು ನಡೆದರೂ ಭಟ್ರು ಟೆಂಡರಿಂದ ಹಿಂದೆ ಸರಿಯಲು ಒಪ್ಪಲೇ ಇಲ್ಲ. ಕಡೆಗೆ ವಿವಾದ ಪುತ್ತೂರಿನ ಪ್ರಭಾವೀ ಕಾಂಗ್ರೆಸ್ ನಾಯಕರೊಬ್ಬರ ಎದುರು ಬಂದಿತ್ತು. ಅವರೂ ಹಾಗೇ ಸುಮ್ಮನೆ ಪಂಚಾಯಿತಿ ನಡೆಸದೆ ತನ್ನದೇ ಪಕ್ಷದ, ಪಕ್ಷ ಪದಾಧಿಕಾರಿ ಗುತ್ತಿಗೆದಾರನಿಂದ ಐದು ಲಕ್ಷ ರೂಪಾಯಿಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಿಯೇ ಭಟ್ರರನ್ನು ಸಂಕದ ಟೆಂಡರ್ ಪ್ರಕ್ರಿಯೆಯಿಂದ ಹಿಂದೆ ಸರಿಸಿದ್ದರು. ಅಲ್ಲಿಗೆ ಚೆಲ್ಯಡ್ಕ ಸಂಕದ ಬಾಬ್ತು ಮೂರು ಕೋಟಿಯಲ್ಲಿ ಇಪ್ಪತ್ತೈದು ಲಕ್ಷ ಮುಗಿದು ಹೋಗಿದೆ. ಇನ್ನು ಉಳಿದಿರುವ ದುಡ್ಡು ಎರಡು ಕೋಟಿ ಎಪ್ಪತ್ತೈದು ಲಕ್ಷ. ಅದರಲ್ಲಿ ಲೋಕಲ್ ಭೂತಗಳಿಗೆ, ಸ್ಥಳೀಯ ಕುಲೆಗಳಿಗೆ ಬಡಿಸಲು, ಅದಕ್ಕೆ ಇದಕ್ಕೆ ಅಂತ ಒಂದು ಹತ್ತು ಲಕ್ಷ, ಇನ್ನು ಗುತ್ತಿಗೆದಾರ ಸಿಮೆಂಟು ತಿಂದು, ಕಬ್ಬಿಣ ನುಂಗಿ ಮಾಡಿಕೊಳ್ಳುವ ಲಾಭ ಕಡಿಮೆ ಅಂದರೂ ಒಂದು ಇಪ್ಪತ್ತೈದು ಲಕ್ಷ ಎಂದು ತೆಗೆದಿಟ್ಟರೂ ಚೆಲ್ಯಡ್ಕ ಸಂಕಕ್ಕೆ ಉಳಿಯುವುದು ಎರಡು ನಲವತ್ತು. ಆ ಎರಡು ನಲವತ್ತರಲ್ಲಿ ಸಂಕ ಮಾಡಿ ನಿಲ್ಲಿಸ ಬೇಕು. ಸಂಕ ಹೇಗೆ ಆಗ ಬಹುದು, ಅದರ ಆಯುಷ್ಯ ಏನು ಎಂಬುದನ್ನು ಕಾಲವೇ ನಿರ್ಧರಿಸ ಬೇಕಷ್ಟೇ.
  ಇಷ್ಟಕ್ಕೂ ಈ ಭಟ್ರು ಯಾರು ಮಾರಾಯ್ರೆ? ಟೆಂಡರ್ ಟೈಮಲ್ಲೇ ಶಿವ ಪೂಜೆಯಲ್ಲಿ ಕರ್ಡಿ ಬಂದ ಹಾಗೆ ಯಾಕೆ ಬಂದದ್ದು? ಭಟ್ರ ಹಿಂದೆ ಬೇರೆ ಯಾವುದಾದರೂ ಭೂತ ಇದೆಯಾ? ಗೊತ್ತಿಲ್ಲ. ಚೆಲ್ಯಡ್ಕ ಸಂಕದ ಮೇಲೆ ಕುಂತು ಅಷ್ಟಮಂಗಲ ಪ್ರಶ್ನೆ ನೋಡಬೇಕಷ್ಟೇ.





               

       ಹಾಗೆ ನೋಡಿದರೆ ಮಂಜೇಶ್ವರ - ಸುಬ್ರಹ್ಮಣ್ಯ ಸ್ಟೇಟ್ ಹೈವೇ ಇಷ್ಟೆಲ್ಲಾ ಅಭಿವೃದ್ಧಿ ಕಾಣಬಹುದೆಂದು ಯಾರೂ ಕನ ಮನಸ್ಸಿನಲ್ಲೂ ನೆನೆಸಿರಲಿಲ್ಲ. ಕೇವಲ ಸಿಂಗಲ್ ರೋಡ್ ಆಗಿದ್ದು ಕೊಂಡು ಸೈಡ್ ಕೊಡುವ ವಿಷಯದಲ್ಲಿ ದಿನಾ ಪೆಟ್ಟುಗುಟ್ಟಿಗೆ ಕಾರಣವಾಗುತ್ತಿದ್ದ ಈ ರಸ್ತೆ ನಂತರದ ದಿನಗಳಲ್ಲಿ ಡಬಲ್ ರೋಡ್ ವಿದ್ ಇಂಟರ್ ಸ್ಟೇಟ್ ಹೈವೇ ಕೆಟಗರಿಗೆ ಪ್ರಮೋಟ್ ಆದದ್ದು ಈಗ ಇತಿಹಾಸ. ಈಗ ಈ ಹೈವೇಯಲ್ಲಿ ವಾಹನಗಳು ಹೋಗುತ್ತಿಲ್ಲ, ಹಾರುತ್ತವೆ. ಹಾಗೆ ಎಲ್ಲಾ ಸರಿ ಹೋಯ್ತು ಎಂದು ಈ ಭಾಗದ ಜನ ನಿಟ್ಟುಸಿರು ಬಿಡುವಷ್ಟರಲ್ಲಿ ಅಲ್ಲಿ ಸುಬ್ರಹ್ಮಣ್ಯದಲ್ಲಿ ಕುಮಾರಧಾರನ ಕಿರಿಕ್ ಶುರುವಾಗಿದೆ. ಅವನೀಗ ಸ್ಟೇಟ್ ಹೈವೇಯನ್ನೇ ನುಂಗಲು ಹೊಂಚು ಹಾಕುತ್ತಿದ್ದಾನೆ. ಯಾವುದೋ ಅಮಾವಾಸ್ಯೆಯಲ್ಲಿ ಹುಟ್ಟಿದ ಲೋಕೋಪಯೋಗಿ ಗುತ್ತಿಗೆದಾರನ ಕಿಸೆ ಬೆಚ್ಚ ಮಾಡಲು ಕುಮಾರಧಾರನ ಅಳಿಲ ಸೇವೆ ರೆಡಿಯಾಗಿದೆ.



   ಅಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ಸ್ಟೇಟ್ ಹೈವೇಯಲ್ಲಿ ಕುಮಾರಧಾರ ಸ್ನಾನ ಘಟ್ಟದ ಕ್ರಾಸ್ ನಿಂದ ಇಂಚಿ ಪುತ್ತೂರಿಗೆ ಬರುವ ದಾರಿಯಲ್ಲಿ ತಿರ್ಗಣೆ ಗುಂಡಿ ಎಂಬಲ್ಲಿ ಕುಮಾರಧಾರ ತೀರಾ ಹೈವೇ ಪಕ್ಕಕ್ಕೇ ಬಂದು ಬಿಟ್ಟಿದ್ದಾನೆ. ಪಾಪ ರಸ್ತೆ ಇಲ್ಲದೆ ಜನ ಪರದಾಡುವುದು ಬೇಡ ಎಂಬ ಪಾಪ ಪುಣ್ಯಕ್ಕೆ ಕುಮಾರಧಾರ ರಸ್ತೆ ನುಂಗದೆ ಬಿಟ್ಟಿದ್ದಾನೆಯೇ ಶಿವಾಯಿ, ಇಲ್ಲದಿದ್ದರೆ ರಸ್ತೆಗೆ ಒಂದು ಡಿಶುಂ ಕೊಟ್ಟರೂ ಸಾಕು ಸ್ಟೇಟ್ ಹೈವೇ ಉಪ್ಪಿನಂಗಡಿಯಲ್ಲಿ ಇರಬಹುದು. ಇಲ್ಲಿ ಸ್ಟೇಟ್ ಹೈವೇ ಬದಿಯಲ್ಲಿ ಜರಿತಾ ಇದೆ ಮಾರಾಯ್ರೆ. ಒಂಚೂರು ಹೆಚ್ಚು ಕಡಿಮೆಯಾದರೂ ಹೈವೇ ಬಂದ್ ಆಗುವ ಲಕ್ಷಣಗಳಿವೆ. ಅದರಲ್ಲೂ ಹೈವೇ ಬದಿ ತನಕ ಕುಮಾರಣ್ಣ ಬಂದಿದ್ದು ವಾಹನ ಸವಾರರೂ ಭಾರೀ ಜಾಗ್ರತೆಯಿಂದ ವಾಹನ ಚಲಾಯಿಸುವ ಅನಿವಾರ್ಯತೆ ಇದೆ. ಈ ಸ್ಥಳದಲ್ಲಿ ಒಂಚೂರು ಅಂಚಿಂಚಿ ಆದರೂ ವಾಹನ ಸವಾರರು ವಾಹನ ಸಮೇತ ಉಪ್ಪಿನಂಗಡಿಗೆ ಜುಳು ಜುಳು ಹೋಗುವ ಅಪಾಯಗಳಿವೆ. ಕಳೆದ ವರ್ಷವೂ ಈ ಅಪಾಯದ ಬಗ್ಗೆ ಜನ ಓ..... ಅಂದಿದ್ದಕ್ಕೆ ಪಂಚಾಯ್ತಿಯವರು ಎರಡು ಸೂಣ  ಹಾಕಿ ಒಂದು ಟೇಪ್ ಕಟ್ಟಿದ್ದು ಬಿಟ್ಟರೆ ಬೇರೆಂತ ಕರ್ಮನೂ ಮಾಡಿಲ್ಲ. ಪಂಚಾಯ್ತಿಯವರ ಅಜ್ಜಿ ಪುಣ್ಯಕ್ಕೆ ಈ ವರ್ಷ ತನಕವೂ ಟೇಪ್ ಉಳಿದದ್ದು ಸಾರ್ವಜನಿಕರ ಪುಣ್ಯ.
ಹಾಗೆಂದು ಆವತ್ತು ಗುಡ್ಡ ಜರಿದು ಎರಡು ಮಕ್ಕಳು ತೀರಿಕ್ಕೊಂಡ ನೆನಪು ಮಾಸುವ ಮೊದಲೇ ಅಲ್ಲಿ ಕುಸುಮಕ್ಕನ ಮನೆ  ಹತ್ತಿರ ಗುಡ್ಡೆ ಮತ್ತೇ ಜರಿಯಲು ಶುರುವಾಗಿದೆ. ಕರೆಂಟ್ ಕಂಬಗಳೂ ಇಲ್ಲಿಯೇ ಹಾದು ಹೋಗಿದ್ದು ಜರಿಯಲು ಶುರುವಾದರೆ ಮನೆ, ಕರೆಂಟ್ ಕಂಬಗಳು ಎಲ್ಲಾ ಒಟ್ಟಿಗೆ ಜಾರಿ ಬಂದು ಹೈವೇ ಬದಿಯಲ್ಲಿ ಲ್ಯಾಂಡ್ ಆಗಲಿದೆ. ಆಚೆಯಿಂದ ಕುಮಾರಧಾರ ಈಚೆಯಿಂದ ಗುಡ್ಡೆ, ಅಂತೂ ಇಂತೂ ಹೈವೇಗೇ ಸುಬ್ಬಪ್ಪನೇ ಗತಿ. ಈ ಭಾಗದ ಕೆಲವು ಮನೆಗಳಿಗೆ ಪಂಚಾಯ್ತಿ ಈಗಾಗಲೇ ಲಕ್ಲೆ... ಲಕ್ಲೆ.. ಎಂದು ನೋಟಿಸ್ ಕೊಟ್ಟರೂ ಜನ ಮಾತ್ರ ಇನ್ನೂ ಜಾಗ ಖಾಲಿ ಮಾಡಿಲ್ಲ. ಇನ್ನಾದರೂ ಪಂಚಾಯಿತಿ ಇವರ ಬಗ್ಗೆ ಕಠಿಣ ನಿರ್ಧಾರ ತಗೊಂಡು ಇವರನ್ನು ಅಪಾಯದಿಂದ ಪಾರು ಮಾಡ ಬೇಕಾಗಿದೆ.




ಯುವರ್ ಆನರ್,      ‌‌                       
ಕುಮಾರಧಾರನಿಗೆ ಹತಾಶೆಯ ಅಹಂಕಾರ. ಪ್ರತಿಫಲ ಸಿಗದ ನೋವು. ಸುಬ್ರಹ್ಮಣ್ಯದಲ್ಲಿ ಸುಬ್ಬಪ್ಪ  ಮತ್ತು ವೀರಮಂಗಲದಲ್ಲಿ ಮಹತೋಭಾರ ತಮ್ಮನ್ನು ಶುದ್ಧೀಕರಿಸಿಕೊಳ್ಳಲು ಮಾತ್ರ ತನ್ನನ್ನು ಉಪಯೋಗಿಸಿ ಕೊಳ್ಳುತ್ತಾರೆ ಎಂಬ ಸಣ್ಣ ಕೋಪ. ತನ್ನ ಪಾತ್ರವನ್ನು ಎಷ್ಟು ಹಸಿರಾಗಿಸಿದರೂ ತನಗೊಂದು ಆಲಯವಿಲ್ಲ, ದೇವಸ್ಥಾನವಿಲ್ಲ, ಗುಡಿಗೋಪುರಗಳಿಲ್ಲ ಎಂಬ ಹತಾಶೆ ಕುಮಾರಧಾರನಿಗೆ. ಆಯಿತು, ತನ್ನ ಮನದಣ್ಣೆ ನೇತ್ರಾವತಿಯನ್ನಾದರೂ ವರಿಸೋಣ ಎಂದರೆ ಅದಕ್ಕೂ ಉಪ್ಪಿನಂಗಡಿ ತನಕ ಹರಿದು ಹಾದು ಹೋಗಬೇಕು ಎನ್ನುವ ಅನಿವಾರ್ಯತೆ. ಅವಳೋ ದಿಗ್ಗಡ್ ದಿಮ್ಮಿ ಹೈವೇಯ ಸಮಾ ಸಮಾ ಹರಿದು ಬರುವವಳು ಕೊಕ್ಕೆ ಹಲ್ಲಿನ ಕುಮಾರಧಾರ ಬೇಡ ಎಂದು ನೇರವಾಗಿ ತನ್ನ ಇನಿಯ ಸಮುದ್ರ ರಾಜನ ಸೇರಿ ಕೊಳ್ಳಲು ಹಾತೊರೆಯುತ್ತಾ ಹರಿದು ಹೋಗುತ್ತಿರುತ್ತಾಳೆ ಕುಮಾರಧಾರನನ್ನು ಕ್ಯಾರೇ ಅನ್ನದೆ. ಹತಾಶೆಗೊಂಡ ಕುಮಾರಧಾರನೂ ನಂತರ ನೇತ್ರಾವತಿಯನ್ನು ಸೇರಿಕ್ಕೊಂಡು ಸಮುದ್ರ ರಾಜನ ಸಾಮ್ರಾಜ್ಯದತ್ತ ಜುಳುಜುಳು  ಮೆರವಣಿಗೆ ಹೋಗುತ್ತಾನೆ.ಅವರದ್ದು ಒಂದು ತ್ರಿಕೋನ ಪ್ರೇಮ. ಇವರ ಕತೆಯಲ್ಲಿ ಕುಮಾರಧಾರ ಭಗ್ನಪ್ರೇಮಿ.
ಅದಕ್ಕೆ ಅವನು ಅಷ್ಟೆಲ್ಲ ಹಾರೋದು,ಹರಿಯೋದು. ಯಾರದೋ ಕೋಪ, ಯಾರಿಗೋ ಶಿಕ್ಷೆ. ಇವತ್ತಿಗೆ ಇಷ್ಟು ಸಾಕು.




              


           ನಿಲ್ಲಿಸಲಾಗಲ್ಲ ಮಾರಾಯ್ರೆ ಸುಳ್ಯದಲ್ಲಿ ಗಾಂಜಾ ಘಾಟು. ಇನ್ನು ಯಾವ ರೇಂಜಿನ, ಯಾವ ಸೈಜಿನ ಪೋಲಿಸ್ ಬಂದರೂ ಸುಳ್ಯದ ಗಾಂಜಾ ವಹಿವಾಟಿನ ತಾಯಿ ಬೇರನ್ನು ಕಿತ್ತು ಹಾಕಲು ಸಾಧ್ಯವೇ ಇಲ್ಲ ಎಂಬಲ್ಲಿ ತನಕ ಪರಿಸ್ಥಿತಿ ಇದೆ. ಯಾಕೆಂದರೆ ತಾಯಿ ಬೇರು ಪಾತಾಳ ಲೋಕದ ಆಸುಪಾಸಿಗೆ ಹೋಗಿ ರೀಚ್ ಆಗಿದೆ.



ಹಾಗೆಂದು ಸುಳ್ಯದಲ್ಲಿ ಕಾಲೇಜುಗಳು ಸ್ವಲ್ಪ ಜಾಸ್ತಿ. ಆ ಕಾಲೇಜು, ಈ ಕಾಲೇಜು ಎಂದು ಹೊರಗಿನ ವಿದ್ಯಾರ್ಥಿಗಳ ಸಂಖ್ಯೆಯೂ ಸ್ವಲ್ಪ ಜಾಸ್ತಿಯೇ. ಹಾಗಾಗಿ ವಿದ್ಯಾರ್ಥಿಗಳ ಜಾಲಿಯೂ  ಬ್ರೇಕ್ ಫೇಲಾಗಿದೆ. ಹಾಗೆಂದು ವಿದ್ಯಾರ್ಥಿಗಳಿಗೆ ಕುಡಿಯುವುದು, ಕುಡಿದು ಲೇಲೆ ಹಾಕೋದು ಓಲ್ಡ್ ಸ್ಟೈಲ್ ಆಗಿ ಹೋಗಿದೆ. ಅದರ ಕಿಕ್ ಈಗೆಲ್ಲ ಅವರಿಗೆ ಸಾಕಾಗಲ್ಲ. ಯಾಕೆಂದರೆ ಅವರ ಹೆತ್ತವರು ಅವರನ್ನು ಕಂಬಳದ ಕೋಣಗಳ ರೇಂಜಿನಲ್ಲಿ ಬೆಳೆಸಿರುತ್ತಾರೆ. ಹಾಗಾಗಿ ಅವರಿಗೆ ಕೋಮಣ ತಪ್ಪಿಸಲು ಗಾಂಜಾ, ಬ್ರೌನ್ ಶುಗರ್, ಕೆಲವು ಟ್ಯಾಬ್ಲೆಟ್ ಗಳು ಅನಿವಾರ್ಯವೇ ಆಗಿ ಹೋಗಿದೆ. ಹಾಗಾಗಿ ಸುಳ್ಯದಲ್ಲಿ ಗಾಂಜಾ ವಹಿವಾಟು ಅಡಿಕೆ ವಹಿವಾಟಿನ ಹಾಗೆಯೇ ಚಿರಪರಿಚಿತ.



ಹಾಗೆಂದು ಸುಳ್ಯದಲ್ಲಿ ಗಾಂಜಾ ವಹಿವಾಟು ಸ್ವಲ್ಪ ಜೋರಿನಲ್ಲಿಯೇ ಇದೆ. ಸುಳ್ಯ ಪೊಲೀಸರು ಈಗಾಗಲೇ ಕೆಲವರನ್ನು ಹಿಡಿದು ಅವರ ಬೆಂಡ್ ತೆಗೆದರೂ ಬುದ್ಧಿ ಬರುತ್ತಿಲ್ಲ. ಓ.. ಆವತ್ತು ಸುಳ್ಯದ ಟಾಪ್ ಗಾಂಜಾ ಡಿಸ್ಟ್ರಿಬ್ಯೂಟರ್ ಆಗಿರುವ ಶ್ರೀಮಾನ್ ನೆಲ್ಲಿ ಬಂಗಾರಡ್ಕ ತಿರ್ತನನ್ನು ಸುಳ್ಯದ ಆಗಿನ ಎಸ್ಸೈ ಮಂಜುನಾಥ್ ಹಿಡಿದು ಬಡಿದು ಚರ್ಮ ಜಾರಿಸಿ ಒಣಗಲು ಹಾಕಿದ್ದರು. ಆದರೆ ತಿರ್ತ ಠಾಣೆಯಿಂದ ಹೊರಗೆ ಬರುವಾಗ ಪುನಃ ಅದೇ ಗಾಂಜಾ ಅದೇ ಬ್ಯಾರ. ಸುಳ್ಯದ ಪೆಟ್ರೋಲ್ ಪಂಪಿನಲ್ಲಿ ಕೇವಲ ಪೆಟ್ರೋಲ್ ಹಾಕುತ್ತಿದ್ದ ನೆಲ್ಲಿ ತಿರ್ತ ಇವತ್ತು ರನ್ನಿಂಗ್ ಕಂಡೀಷನ್ ಗೆ ಮುಟ್ಟಿದ್ದಾನೆಂದರೆ ಅದಕ್ಕೆ ಗಾಂಜಾ ವ್ಯವಹಾರವೇ ಕಾರಣ ಎಂದು ಎದೆ ತಟ್ಟಿ ಹೇಳಬಹುದು.


   ಸುಳ್ಯದಲ್ಲಿ ವಿದ್ಯಾರ್ಥಿಗಳೇ ಅತ್ಯಂತ ಹೆಚ್ಚು ಗಾಂಜಾ ಗಿರಾಕಿಗಳು. ಸಿಗ್ರೇಟಿನ ಪುಗೆರೆ ತೆಗೆದು ಅದಕ್ಕೆ ಗಾಂಜಾ ತುಂಬಿಸಿ ಎಳಿಯೋದೆ. ಕಾಲೇಜು ಕ್ಯಾಂಪಸ್ ಗಳಲ್ಲಿ ರಾಜಾರೋಷವಾಗಿ ಗಾಂಜಾ ವಹಿವಾಟು ನಡೆಯುತ್ತಿದೆ. ಇನ್ನು ಆ ಕುರುಂಜಿ ಗುಡ್ಡೆ ಪಾರ್ಕ್ ನಲ್ಲಿ ಗಾಂಜಾ ವಹಿವಾಟು ಇದೆ. ಮತ್ತೆ ಅಲ್ಲಿ ಓಡಬಾಯಿಯಲ್ಲಿ ಗಾಂಜಾ ಲಿಕ್ವಿಡ್ ರೂಪದಲ್ಲಿ ಸಿಗುತ್ತದೆ ಎಂಬ ಮಾಹಿತಿ ಇದೆ. ಓಡಬಾಯಿಯಲ್ಲಿ ಲಿಕ್ವಿಡ್ ಗಾಂಜಾ ವಹಿವಾಟು ಭರ್ಜರಿಯಾಗಿದ್ದು ಸಂಜೆ ಒಮ್ಮೊಮ್ಮೆ ಯಾರೋ ಬೆಂದ್ರ್ ಸೂ ಹಾಕಿದಷ್ಟು ಪುಗೆ ಓಡಬಾಯಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ಮತ್ತೊಂದು ಅಂಡಿಗುಂಡಿ ಲಿಂಗ ಒಟ್ಟಿಗೆ ಸೇರಿ ಪುಗೆ ಬಿಡುತ್ತಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಸುಳ್ಯದ ಮಟ್ಟಿಗೆ ಗಾಂಜಾ ಗಾಂಜಿಗಳಿಗೆ ಓಡಬಾಯಿಯೇ ಸ್ವರ್ಗ ಮತ್ತು ತವರು.
   ಹಾಗೆಂದು ಸುಳ್ಯ ಪೊಲೀಸರು ತಮ್ಮ ತಾಕತ್ತು ಮೀರಿ ಗಾಂಜಾ ಮಟ್ಟ ಹಾಕಲು ಪ್ರಯತ್ನಿಸಿದ್ದಾರೆ. ಕಂಡ ಕಂಡಲ್ಲಿಂದ ಗಾಂಜಾ ಡಿಸ್ಟ್ರಿಬ್ಯೂಟರ್ ಗಳನ್ನು ಹೊತ್ತುಕ್ಕೊಂಡು ಬಂದು ಬೆಂಡ್ ತೆಗೆದಿದ್ದಾರೆ, ನಟ್ಟು ಬೋಲ್ಟ್ ಲೂಸ್ ಮಾಡಿದ್ದಾರೆ, ಚರ್ಮ ಸುಲಿದು ಒಣಗಲು ಹಾಕಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಪೋಲಿಸರು ಇನ್ನೂ ಹೆಚ್ಚು ರಂಗೋಲಿ ಕೆಳಗೆ ನುಸುಳಿ ನುಸುಳಿದರೆ ಮಾತ್ರ ಗಾಂಜಾ ವಹಿವಾಟಿಗೆ ಬ್ರೇಕ್ ಹಾಕ ಬಹುದು. ಸದ್ಯಕ್ಕೆ ಈ ಸೀಸನ್ ನಲ್ಲಿ ಸುಳ್ಯ ಪೋಲಿಸ್ ಟೀಮಿನ ವಿರಾಟ್ ಕೊಹ್ಲಿ ಈರಯ್ಯ ಫಾರ್ಮ್ ನಲ್ಲಿ ಇಲ್ಲ. ಸೋ ಕಳ್ಳ ಕಾಕರ ಟೀಮು ಒಂದು ಬಾಲಿಗೆ ಎರಡೆರಡು ಸಿಕ್ಸು ಎತ್ತುತ್ತಿದೆ. ಇನ್ನಾದರೂ ಸುಳ್ಯದಲ್ಲಿ ಗಾಂಜಾ ವಹಿವಾಟು ನಿಂತು ಗಾಂಜಾ ಗಿರಾಕಿ ಕಾಲೇಜು ಮಕ್ಕಳು ಕಡೇ ಪಕ್ಷ ಒಂದು ನಲವತ್ತು ವರ್ಷಗಳ ತನಕವಾದರೂ ಬದುಕಿಕೊಳ್ಳಲಿ. ಮಕ್ಕಳು ಅಜ್ಜ ಆಗುವ ತನಕವಾದರೂ ಬದುಕದ್ದಿದ್ದರೆ ಪರವಾಗಿಲ್ಲ ಕಡೇ ಪಕ್ಷ ಅಂಕಲ್ ಆಗುವ ತನಕವಾದರೂ ಬದುಕಿಕೊಳ್ಳಲಿ.

ವನಮಹೋತ್ಸವ

ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆ ಪರಿಸರದಲ್ಲಿ ಶ್ರೀ ಸುಬ್ರಹ್ಮಣ್ಯ ಮಠ ಸದಾನಂದ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಅರಣ್ಯ ಇಲಾಖೆ ಸುಬ್ರಮಣ್ಯ ಲಯನ್ಸ್ ಕ್ಲಬ್ ರೋಟರಿ ಕ್ಲಬ್ ಹಾಗೂ ಸೀನಿಯರ್ ಚೇಂಬ‌ರ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget