ಕಡಬ: ಪತ್ರೊಡೆ ಇನ್ ಡೂಪ್ಲಿಕೇಟ್ ಮರಚೇವು

       


 ಎಲ್ಲಿಯಾದರೂ ತುರಿಕೆ ಶುರುವಾದರೆ ಮಾರಾಯ್ರೆ ಎರಡು ಕೈ ಸಾಲದು. ಅಂಥ ಎಕ್ಸ್ ಪ್ರೆಸ್ ತುರಿಕೆ ಬರಬಹುದು. ಅಲ್ಲಾ....ಈ ಜನಗಳಿಗೆ ಆಟಿಯಲ್ಲಿಯೇ ಅದರಲ್ಲೂ ಮರಚೇವಿನದ್ದೇ ಪತ್ರೊಡೆ ತಿನ್ನಬೇಕೆಂದು ಫರ್ಮಾನು ಹೊರಡಿಸಿದವರು ಯಾರು?


  ಅಲ್ಲಿ ಕಡಬದಲ್ಲಿ ಆಟಿ ಸ್ವಲ್ಪ ಜೋರಿದ್ದ ಹಾಗೆ ಕಾಣುತ್ತದೆ. ಆಟಿಯಲ್ಲಿ ಒಂದು ರೌಂಡು ಮರಚೇವಿನ ಪತ್ರೊಡೆ ಮಾಡಿ ತಿಂದು ಅಂದಾಜು ಒಂದು ಇನ್ನೂರೈವತ್ತು, ಮುನ್ನೂರು ವರ್ಷಗಳ ಕಾಲ ಬದುಕುವ ಅನ್ನುವ  ಆಶೆ ಕಡಬಿಗರದ್ದು. ಹಾಗೆಂದು ಆ ಆಶೆ ಆಟಿಯಲ್ಲಿ ಎಲ್ಲಾ ಕಡೆ ಮಾಮೂಲು. ಆಟಿಯಲ್ಲಿ ಮರಚೇವಿನ ಪತ್ರೊಡೆ ತಿಂದರೆ ಮನುಷ್ಯನ ಎಲುಮುಳ್ಳು ಗಟ್ಟಿಯಾಗುತ್ತದೆ ಎಂದು ಯಾವನೋ ಒಬ್ಬ ಪುಣ್ಯಾತ್ಮ ಹೇಳಿದ ಕಾರಣ ಆಟಿಯಲ್ಲಿ ಮರಚೇವಿಗೆ ಬಂಗಾರದ ರೇಟು. ಆಟಿಯಲ್ಲಿ ಮರಚೇವಿನ ಪತ್ರೊಡೆ ತಿಂದು ನೂರೈವತ್ತು ವರ್ಷಗಳ ಕಾಲ ಬದುಕಿದವರು ಯಾರಾದರೂ ಇದ್ದಿದ್ದರೆ ಒಂದು ರೌಂಡು ಪತ್ರೊಡೆ ಇಳಿಸಬಹುದಿತ್ತು.
   ಇದೀಗ ಕಡಬದಲ್ಲಿ ಆಟಿ ಸೀಜನು. ಹಾಗಾಗಿ ಮರಚೇವಿಗೆ ಭಾರೀ ಬೇಡಿಕೆ. ಕಡಬಕ್ಕೆ ಲೋಡ್ ಲೆಕ್ಕದಲ್ಲಿ ಮರಚೇವು ಬರುತ್ತಿದೆ. ಒಂದು ಕಟ್ಟಕ್ಕೆ ನಲವತ್ತು ರೂಪಾಯಿ. ಲೆಕ್ಕ ಮಾಡಿ ಐದೇ ಎಲೆ ಇರೋದು ಕಟ್ಟದಲ್ಲಿ. ಹಾಗಾದರೆ ಒಂದು ಎಲೆಗೆ ರೇಟೇಸ್ಟು ಸ್ವಾಮಿ? ಎಂಟೈದ್ಲಿ ನಲವತ್ತು. ಇಷ್ಟು ರೇಟಿಗೆ ಎಲೆ ತಿಂದು ಬೇಕಾ ನೂರೈವತ್ತು ವರ್ಷ?
   ಹಾಗೆಂದು ನಮಗೆ ತಲೆ ಸರಿ ಇಲ್ಲ, ನಮ್ಮತ್ರ ದುಡ್ಡಿದೆ, ಮರಚೇವಿಗೆ ಕಟ್ಟಕ್ಕೆ ಇನ್ನೂರು ರೂಪಾಯಿ ಆದರೂ ಬೇಕು ಅನ್ನುವ ನಮ್ಮ ಹುಚ್ಚು ಬೇಡಿಕೆಯನ್ನು ಯಾರೂ ಮಿಸ್ ಯೂಸ್ ಮಾಡಿಕೊಳ್ಳಬಾರದಲ್ವಾ? ಇಲ್ಲಿ ತನಕ ಕಡಬಕ್ಕೆ ಬಂದದ್ದು, ಬರುತ್ತಿರುವುದು, ಇನ್ನು ಆಟಿಯಿಡೀ ಬರಲಿಕ್ಕಿರುವುದು ಮತ್ತು ನೀವು ಇಲ್ಲಿ ತನಕ ಪತ್ರೊಡೆ ಮಾಡಿ ಎಲುಮುಳ್ಳು ಗಟ್ಟಿ ಮಾಡಿಕೊಂಡಿದ್ದು ಯಾವುದೂ ಒರಿಜಿನಲ್ ಮರಚೇವು ಅಲ್ಲವೇ ಅಲ್ಲ. ಮರಚೇವಿನ ಕುಟುಂಬದ್ದೂ ಅಲ್ಲ. ಅದೆಲ್ಲ ಡೂಪ್ಲಿಕೇಟ್ ಮರಚೇವು. ಘಟ್ಟದ ಮೇಲಿನ,ಸೈಡಿನ ಎಸ್ಟೇಟ್ ಗಳಲ್ಲಿ, ಕಾಡುಗಳಲ್ಲಿ, ಗುಡ್ಡೆ ಪ್ರದೇಶಗಳಲ್ಲಿ, ಬರೆಗಳಲ್ಲಿ, ನೀರು ಝರಿಗಳ ಬದಿಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ಆಗುವ ಸಾಮಾನ್ಯ ಕಂಡ್ರೆಕುಟ್ಟಿ ಚೇವನ್ನೇ ಪೊರಿತ್ತ್ ತಂದು ಮರಚೇವು ಎಂದು ಜನರನ್ನು ಮಂಗ ಮಾಡಲಾಗುತ್ತಿದೆ. ತಲೆ ಸರಿ ಇಲ್ಲದ ಜನ ಓ...... ಎಂದು ಅದನ್ನೇ  ತಿಂದು ಎಲುಮುಳ್ಳು ಮುಟ್ಟಿ ನೋಡಿಕೊಳ್ಳುತ್ತಾರೆ. ಎಲ್ಲಿಯಾದರೂ ಈ ಚೇವು ತಿಂದು ಕಿರ್ಂಬ್ಲಿಕ್ಕೆ ಶುರುವಾದರೆ ರಕ್ತ ಕಣ್ಣೀರಿನ ಉಪೇಂದ್ರ ಕಿರಿಂಬಿದ ಹಾಗೇ ಆಗಬಹುದು ಮಾರಾಯ್ರೆ. ಮತ್ತೆ ಎಂಥ ಕುಸಲ?
   ಇದೀಗ ನಾಳೆ ಕಡಬದಲ್ಲಿ ಸಂಡೇ ಸಂತೆ ಇದ್ದು ಹೆಚ್ಚಿನ ಮನೆಗಳಲ್ಲಿ ಪತ್ರೊಡೆಗೆ ಅರಿ ನೀರಿಗೆ ಹಾಕಿರ ಬಹುದು. ನಾಳೆ ಸಂಡೇ ಸಂತೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮರಚೇವು ಸೇಲಾಗಲಿದೆ. ಯಾವುದಕ್ಕೂ ಮರಚೇವು ಪರ್ಚೆಸ್ ಮಾಡುವ ಮೊದಲು ಅದರ ಗುಣಮಟ್ಟವನ್ನು ಒಮ್ಮೆ ಪರೀಕ್ಷಿಸಿ, ಎಲ್ಲಿಂದ ಬಂದಿದೆ, ಯಾವ ಮರದಲ್ಲಿ ಆದದ್ದು ಎಂದೂ ವಿಚಾರಿಸಿಕೊಳ್ಳಿ. ಸುಮ್ಮನೆ ಸಿಕ್ಕಿತು ಎಂದು ಸಿಕ್ಕಿದ್ದನ್ನೆಲ್ಲ ತಿನ್ನಬೇಡಿ. ಎಲುಮುಳ್ಳು ಗಟ್ಟಿಯಾಗುವ ಬದಲು ಲಟಕ್ ಪಟಕ್ ಆದರೆ ಗತಿ ಯಾರು? ಇನ್ನು ಆಟಿಯಲ್ಲಿ ಮರಚೇವಿನ ಪತ್ರೊಡೆ ತಿಂದರೆ ಕೈಮಾಸ್ ಕೂಡ ತೊಳೆದು ಹೋಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಯಾವುದಕ್ಕೂ ಒರಿಜಿನಲ್ ಮರಚೇವು ಸಿಗಬೇಕಲ್ಲ. ಎಲ್ಲಾ ಬಿಟ್ಟು ಈ ಡೂಪ್ಲಿಕೇಟ್ ಮರಚೇವು ತಿಂದರೆ ಕ್ಲೈಮ್ಯಾಕ್ಸ್ ನಲ್ಲಿ ಅದೇ ಕೈಮಾಸ್ ಆಗುವ ಅಪಾಯಗಳಿವೆ.




Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget