ಪುತ್ತೂರು: ಸರ್ವೆಯಲ್ಲಿ ಗೇರು ನಿಗಮದ ಭೂಮಿ ತುಂಡು ತುಂಡಾಗಿ ಗುಳುಂ!

   


   ಇನ್ನು ಆ ಕಂದಾಯ ಇಲಾಖೆ ಅಧಿಕಾರಿಗಳ ಬಗ್ಗೆ ನಾವು ಹೆಮ್ಮೆ ಪಡಬೇಕು, ಅಚ್ಚರಿ ಪಡಬೇಕು. ಅವರ ಧೈರ್ಯವನ್ನು ಕೊಂಡಾಡ ಬೇಕು, ಹಾಡಿ ಹೊಗಳಬೇಕು. ಯಾಕೆಂದರೆ ಆ ಕೋರ್ಟ್ ಮೈದಾನವನ್ನು, ನೆಹರೂ ಮೈದಾನವನ್ನು, ಪೋಲಿಸ್ ಠಾಣೆಯನ್ನು ದುಡ್ಡು ಕೊಟ್ಟರೆ ಒಮ್ಮೆಗೆ ಅಕ್ರಮ ಸಕ್ರಮ ಅಡಿಯಲ್ಲಿ ನಮ್ಮ ಹೆಸರಿಗೆ ಮಾಡಿಕೊಡಲು ಹಿಂದೆ ಮುಂದೆ ನೋಡಲಿಕ್ಕಿಲ್ಲ. ಅಂಥ ಜನಗಳು ಅವರು. ಇದೀಗ ಪುತ್ತೂರು ತಾಲೂಕಿನ ಸರ್ವೆಯಲ್ಲಿ ಇರುವ ಗೇರು ಅಭಿವೃದ್ಧಿ ನಿಗಮದ ನೂರು ಎಕರೆಗಿಂತಲೂ ಹೆಚ್ಚಿರುವ ಗೇರು ಬೀಜದ ಕೂಪನ್ನು ತುಂಡು ತುಂಡು ಮಾಡಿ ಸ್ಥಳೀಯ ಕೆಲವು  ನುಂಗಣ್ಣಗಳು ಅಕ್ರಮ ಸಕ್ರಮದಡಿಯಲ್ಲಿ ನುಂಗಲು ಶುರು ಮಾಡಿದ್ದು ಈ ನುಂಗುವ ಪ್ರಕ್ರಿಯೆ ಹೀಗೆ ಮುಂದುವರೆದರೆ ಇಡೀ ಬೀಜದ ಕೂಪು ನಿಗಮದ ಮ್ಯಾಪಿನಿಂದ ಶಾಶ್ವತವಾಗಿ ಕಣ್ಮರೆಯಾಗುವ ಅಪಾಯಗಳಿವೆ.
   ಇದು ಸರ್ವೆ ಗ್ರಾಮದ ಕತೆ. ವಿನಯ್ ಕುಮಾರ್ ಸೊರಕೆ ಎಂಬ ಮಂತ್ರಿಯನ್ನು ಕೊಟ್ಟ ಗ್ರಾಮ ಇದು.  ಈ ಗ್ರಾಮದಲ್ಲಿ ಅಂದಾಜು ನೂರು ಎಕರೆಯಷ್ಟು ವಿಸ್ತಾರದ ಒಂದು ಗೇರುಬೀಜದ ಪ್ಲಾಂಟೇಶನ್ ಇದೆ. ಗಂಜಿ ಕೇಂದ್ರ ಗೇರು ಅಭಿವೃದ್ಧಿ ನಿಗಮದ ಮಾಲೀಕತ್ವದಲ್ಲಿರುವ ಈ ಪ್ಲಾಂಟೇಶನ್ ನಿಗಮಕ್ಕೆ ದೊಡ್ಡ ಆದಾಯ ತರುವ ಪ್ಲಾಂಟೇಶನ್ ಆಗಿದೆ. ವರ್ಷ ವರ್ಷವೂ ಈ ಕೂಪು ಲಕ್ಷಾಂತರ ದುಡ್ಡಿಗೆ ಹರಾಜು ಆಗುತ್ತಿದೆ. ಕಾಣಿಯೂರಿನ ಅಬ್ದುಲ್ ಕರೀಂ ಮಾಲೀಕತ್ವದ ಆಶಿಕಾ ಟ್ರೇಡಿಂಗ್ ಕಂಪನಿ ಹೆಚ್ಚಾಗಿ ಈ ಕೂಪನ್ನು ಹರಾಜಿನಲ್ಲಿ ಪಡೆಯುತ್ತಿದ್ದು ಗೇರು ಅಭಿವೃದ್ಧಿ ನಿಗಮದಂತಹ ಗಂಜಿ‌ ಕೇಂದ್ರಗಳಿಗೆ ಇದು ATM ಇದ್ದ ಹಾಗೇ ಎಂದೇ ಹೇಳಬಹುದು. ಇದೀಗ ಗ್ರಾಮದ ಸೊರಕೆ ಮತ್ತು ಕೆಲವು ಕಡೆಗಳಲ್ಲಿ ಕೂಪಿನ ಬರಿಯ ಖಾಸಗಿ ಜಾಗಗಳ ಕೆಲವು ಕೃಷಿಕರು ಕಂದಾಯ ಇಲಾಖೆಯ ಕೆಲವು ಭೂತಗಳಿಗೆ ಬಡಿಸಿ, ಕೂಪಿನ ಸೈಡ್ ಸೈಡಲ್ಲಿ ಒಂದೆಕರೆ, ಎರಡೆಕರೆ, ಮೂರು, ನಾಲಕ್ಕು ಎಂದು ಅಕ್ರಮ ಸಕ್ರಮದಡಿಯಲ್ಲಿ ನಿಗಮದ ಭೂಮಿಯನ್ನು ಮಂಜೂರಾತಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಒಂದು ನುಂಗುವ ಸತ್ಕಾರ್ಯದಲ್ಲಿ ಗಂಜಿ ಕೇಂದ್ರದ ಕುಲೆಗಳಿಗೂ ಅಗೆಲು ಕೊಡಲಾಗುತ್ತಿದೆ ಮತ್ತು ಕಂದಾಯ ಇಲಾಖೆ ಹಾಗೂ ಗಂಜಿ ಕೇಂದ್ರದ ನಡುವೆ ಲಿಂಕ್ ಇದೆ ಎಂದು ತಿಳಿದುಬಂದಿದೆ. ಇದೀಗ ಈ ಸೀಕ್ ಚಿಕ್ಕದರಲ್ಲಿ ಶುರುವಾಗಿದ್ದು ಕೆಲವೇ ಕೆಲವು ನುಂಗಣ್ಣಗಳು ಮಾತ್ರ ಕೂಪಿನ ಸೈಡ್ ಸೈಡ್ ನುಂಗಿದ್ದು ಇದು ಸಮೂಹ ಸನ್ನಿ ಆಗುವ ಮೊದಲು ಗಂಜಿ ಕೇಂದ್ರ ಕುಂಭಕರ್ಣ ನಿದ್ದೆಯಿಂದ ಎದ್ದೇಳುವುದು ಒಳ್ಳೆಯದು.‌ಇಲ್ಲದಿದ್ದರೆ ಮದ್ದಿಗೆ ಒಂದು ತುಂಡು ಭೂಮಿ ಸಿಗಲಿಕ್ಕಿಲ್ಲ.


ಹಾಗೆಂದು ಕಂದಾಯ ಇಲಾಖೆ ಮತ್ತು ಗಂಜಿ ಕೇಂದ್ರ ಎರಡೂ ಈ ಬಗ್ಗೆ ತನಿಖೆ ನಡೆಸಲೇ ಬೇಕಾಗಿದೆ. ಈಗಾಗಲೇ ಕೆಲವು ಮಂದಿ ಗೇರುಬೀಜ ಕೂಪಿನ ಅಕ್ರಮವನ್ನು ಸಕ್ರಮ ಮಾಡಿಕೊಂಡು ಸಾಗುವಳಿ ಚೀಟಿ ಪಡಕ್ಕೊಂಡು ಇಸ್ತ್ರಿ ಹಾಕಿ ಇಟ್ಟಿದ್ದಾರೆ. ಅಂಥ ಕೂಪು ಕಳ್ಳರನ್ನು ಹುಡುಕಿ ಅವರ ಕೈಯಿಂದ ಕೂಪಿನ ತುಂಡುಗಳನ್ನು ವಶ ಪಡಿಸಿಕೊಳ್ಳಲೇ ಬೇಕು. ಇಲ್ಲದಿದ್ದರೆ "ದಾಲ ಆಪುಜಿಯ" ಡೈಲಾಗ್ ಜಾರಿಗೆ ಬಂದು ನಾಳೆ ಎಲ್ಲರೂ ಸೇರಿ ಕೂಪಿಂದ ಗೇರು ತೆಗೆದು ಇಂಟರ್ಸಿ ಅಡಿಕೆ ಹಾಕಿ ಕಂದಾಯ ಇಲಾಖೆ ಮುಂದೆ ಅಕ್ರಮ ಸಕ್ರಮ ಅರ್ಜಿ ಹಿಡಕ್ಕೊಂಡು ರಜನೀಕಾಂತನ ಮ್ಯಾಟನಿಗೆ ಕ್ಯೂ ನಿಂತ ಹಾಗೆ ನಿಲ್ಲಬಹುದು. ರಾಮಕೃಷ್ಣ ಹೆಗಡೆ ಚಕ್ಕುಲಿ ತಿಂದ ಹಾಗೆ ಸುತ್ತಲಿಂದ ತಿಂದು ತಿಂದು ನಾಳೆ ನನಗೆ ಗೊತ್ತೇ ಇಲ್ಲ ಅಂದರೆ ಲಾಸ್ ಯಾರಿಗೆ ಮಾರಾಯ್ರೆ? ಈಗಾಗಲೇ ಸರ್ವೆ ಗ್ರಾಮದ ಕೆಲವು ತಿಮಿಂಗಿಲಗಳು ಈ ಬಗ್ಗೆ ಒಂದು ರೌಂಡು ಸ್ಟಡಿ ಮಾಡಿ ಮುಂದಿನ ದಿನಗಳಲ್ಲಿ ಕೂಪನ್ನು ಹೇಗೆ ಅದೃಶ್ಯ ಮಾಡ ಬಹುದೆಂಬ ನೀಲಿ ನಕಾಶೆ ರೆಡಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗಂಜಿ ಕೇಂದ್ರಗಳಿಗೆ ಗಂಜಿಗೂ ಗತಿ ಇಲ್ಲದಂತಾಗುವ ದಿನ ದೂರದಲ್ಲಿಲ್ಲ.




Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget