ಸುಳ್ಯ: ಅಡ್ತಲೆ ಶಾಲಾ ಗ್ರೌಂಡಿನಲ್ಲಿ ಮದ್ಯ ಮಾರಾಟ

           



 ಕ್ಯಾರೇ ಮಾಡಲ್ಲ ಈ ಆಸಾಮಿ ಯಾರನ್ನೂ. ಅಲ್ಲ ಮಾರಾಯ್ರೆ ಒಂದು ಶಾಲೆ, ಶಾಲೆ ಅಂದರೆ ವಿದ್ಯಾ ದೇಗುಲ, ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬರುವ ಮಕ್ಕಳು, ಮಕ್ಕಳ ದೊಡ್ಡ ಬದುಕಿನ ಚಿಕ್ಕ ಪೌಂಡೇಶನ್ ಅಲ್ಲಿದೆ, ಶಾಲಾ ಮಕ್ಕಳು ಪಠ್ಯೇತರ ಚಟುವಟಿಕೆ ಟೈಮಲ್ಲಿ ಆಟದ ಮೈದಾನದಲ್ಲಿ ಆಟ ಆಡುತ್ತಾರೆ ಮತ್ತು ಅದೇ ಶಾಲಾ ಗ್ರೌಂಡಿನ ಬದಿಯಲ್ಲಿ ಗಂಗಸರ ಮಾರಾಟ ಮಾಡಲಾಗುತ್ತಿದೆ. ಅದೇ ಶಾಲಾ ಮಕ್ಕಳ ಗ್ರೌಂಡಿನಲ್ಲಿಯೇ ರಣ ಕುಡುಕರು ಟೈಟಾಗಿ ತೂರಾಡುತ್ತಾ ಲೇಲೆ ಹಾಕುತ್ತಾರೆ ಮತ್ತು ಇದನ್ನೆಲ್ಲ ಮಕ್ಕಳು ಬೆರಗು ಕಣ್ಣುಗಳಿಂದ ನೋಡುತ್ತಾ ಇರುತ್ತಾರೆ. ಇದು ಸುಳ್ಯ ತಾಲೂಕು ಅರಂತೋಡು ಗ್ರಾಮದ ಅಡ್ತಲೆ ಎಂಬ ಊರಿನ ಕತೆ. ಶಾಲೆ ಗ್ರೌಂಡಿನ ಬದಿಯಲ್ಲಿ ಗಂಗಸರ ಮಾರಾಟ ಮಾಡುವ ಲೋಫರ್ ವ್ಯಕ್ತಿ ಆ ಊರಿನ ಪ್ರಭಾವಿ ವ್ಯಕ್ತಿ. ಎಲ್ಲಿಗೆ ಬಂತು ಮಾರಾಯ್ರೆ ಕಾಲ.
   ಇದು ಅಡ್ತಲೆ. ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿದೆ. ಅರಂತೋಡು ಸಿಟಿಯಿಂದ ಏಳು ಕಿ.ಮೀ ದೂರದಲ್ಲಿದೆ. ಅಡ್ತಲೆಯಿಂದ ಇತ್ಲಗಡೆ ಮೂರು ಕಿಲೋ ಮೀಟರ್ ನಲ್ಲಿ ಮರ್ಕಂಜ ಸಿಗುತ್ತದೆ ಮತ್ತು ಇನ್ನೂ ಇಂಚಿ ಬಂದರೆ ಸುಳ್ಯ ಸುಬ್ರಹ್ಮಣ್ಯ ರಸ್ತೆ ಸಿಗುತ್ತದೆ ಅಷ್ಟೇ. ಬೇರೆಂತದೂ ಇಲ್ಲ. ಹಾಗೆ ಅಡ್ತಲೆ ಎಂಬ ಊರನ್ನು ಅಂಡಮಾನಿನ ತಮ್ಮ ಎಂದೂ ಹೇಳಿದರೂ ತಪ್ಪಾಗಲಾರದು. ಇಂಥ ಅಡ್ತಲೆಯಲ್ಲಿ ಒಂದು ಸಣ್ಣ ಸಮಸ್ಯೆ ಇದೆ. ಇಲ್ಲಿನ ಲೋಕಲ್ ಕುಡುಕರ ದೊಂಡೆ ಪಸೆ ನೀಗಿಸಲು ಸರಿಕಟ್ಟ್ ವ್ಯವಸ್ಥೆ ಇಲ್ಲ. ಇಲ್ಲಿನ ಕುಡುಕರು ಟೈಟ್ ಆಗಲು ಒಂದೋ ಏಳು ಕೀಲೋ ಏರುತ ಇಳಿಯುತ‌ ಅರಂತೋಡಿಗೆ ಹೋಗಬೇಕು ಇಲ್ಲದಿದ್ದರೆ ಮರ್ಕಂಜ ದಾಟಿ ಗುತ್ತಿಗಾರಿಗೆ ಬರಬೇಕು. ಇದು ಎರಡೂ ಕಷ್ಟ ಸಾಧ್ಯ. ಎರಡೂ ಕಡೆ ಹೋದರೂ ಕುಡುಕರ ಟೊಪ್ಪಿ ರಟ್ಟುತ್ತದೆ. ಇನ್ನು ಅಡ್ತಲೆಯ ಟೈಟ್ ಮಾಸ್ಟರ್ ಗಳಂತೂ ಆಚೆ ಅರಂತೋಡಿಗೆ ಹೋದರೆ ಅಂಚಿಯೇ ಬಾಕಿ ಈಚೆ ಗುತ್ತಿಗಾರಿಗೆ ಬಂದರೆ ಇಂಚಿಯೇ ಬಾಕಿ ಎಂಬ ಪರಿಸ್ಥಿತಿ ಬಹಳ ಹಿಂದೆ ಇತ್ತು. ಅಡ್ತಲೆಯ ರಣ ಕುಡುಕರ ಈ ಒಂದು ಹೇಳಲಾಗದ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸಿದ್ದು ಅಡ್ತಲೆಯ ಒಬ್ಬ ಮಹಾನು ಪುರ್ಸ. ಹೆಸರು ಸದಾ ಉಗ್ಗಪ್ಪ ಯಾನೆ ಪರಬ್ಬ ಸದಾ ಯಾನೆ ಕ್ವಾಟ್ರು ಸದಾ ಯಾನೆ ಬಾಟ್ಲಿ  ಸದಾ ಯಾನೆ ತೊಟ್ಟೆ ಸದಾ ಅಲಿಯಾಸ್ ಗಂಗಸರ ಸದಾ. ಅಡ್ತಲೆಗೆ ಇವನ ಸೇವೆ ಶ್ಲಾಘನೀಯವಾದದ್ದು.
   ಇವನು ಸದಾ ಉಗ್ಗಪ್ಪ. ಲೋಕಲ್ ಕಾಂಗ್ರೆಸ್ ಲೀಡರ್. ಮಾಜಿ ಪಂಚಾಯ್ತಿ ಮೆಂಬರು. ಇವನಿಗೆ ಬಹಳ ಹಿಂದಿನಿಂದಲೇ ಅಡ್ತಲೆ ಶಾಲೆಯ ಗ್ರೌಂಡಿನ ಬದಿಯಲ್ಲಿ ಗಂಗಸರ ಮಾರಾಟ ಮಾಡುವ ಕಾಯಕ. ಬಹಳ ಹಿಂದೆಯೇ ತೊಟ್ಟೆ ಗಂಗಸರ ಕಾಲದಲ್ಲಿಯೇ ಅಡ್ತಲೆ ಶಾಲೆಯ ಗ್ರೌಂಡಿನ ಬದಿಯಲ್ಲಿ ಇವನು ಗಡಂಗ್ ಮಾಡಿ ತೊಟ್ಟೆ ಸೇಲ್ ಮಾಡುತ್ತಾ ಬೆಳೆದಿದ್ದ. ಆವಾಗಲೇ ಶಾಲೆಯ ಗ್ರೌಂಡಿನ ತುಂಬಾ‌ ಖಾಲಿ ತೊಟ್ಟೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿತ್ತು. ಶಾಲಾ ಮಕ್ಕಳೇ ತೊಟ್ಟೆ ಹೆಕ್ಕಿ ಹೆಕ್ಕಿ ಕ್ಲೀನ್ ಮಾಡುವ ಪರಿಸ್ಥಿತಿ ಇತ್ತು.‌ ನಂತರ ತೊಟ್ಟೆ ಬ್ಯಾನ್ ಆಯಿತಲ್ಲ ಆಗ ಸದಾ ಉಗ್ಗಪ್ಪನ ಭಾಗ್ಯದ ಬಾಗಿಲು ದಡಬಡ ಅಂತ ತೆರೆದುಕೊಂಡಿತು. ಶಾಲಾ ಗ್ರೌಂಡಿನ ಬದಿಯಲ್ಲಿ ಗಡಂಗ್ ಮಾಡಿಕೊಂಡಿದ್ದ ಸದಾ ಉಗ್ಗಪ್ಪ ಗಡಂಗನ್ನೇ ವೈನ್ ಶಾಪ್ ಮಾಡಿ ಬಿಟ್ಟ. ಈಗ ಮಕ್ಕಳು ಖಾಲಿ ಬಾಟ್ಲಿ ಹೆಕ್ಕುತ್ತಿದ್ದಾರೆ.
   ಹಾಗೆ ಅಡ್ತಲೆ ಶಾಲೆಯ ಗ್ರೌಂಡಿನ ಬದಿಯ ಸದಾ ಉಗ್ಗಪ್ಪನ ಗಡಂಗಿಗೆ ಬ್ಯಾರವೇ ಬ್ಯಾರ. ಯಾಕೆಂದರೆ ಅಡ್ತಲೆಯ ರಣ ಕುಡುಕ ತನ್ನ ದೊಂಡೆ ನೀಗಿಸಲು ಒಂದು ಕ್ವಾಟ್ರಿಗೆ  ಬೇಕಾಗಿ ಆಚೆ ಏಳು ಕೀಲೋ ದೂರದ ಅರಂತೋಡಿಗೂ ಹೋಗಲು ಆಗಲ್ಲ ಅಥವಾ ಈಚೆ ಮರ್ಕಂಜ ದಾಟಿ ಗುತ್ತಿಗಾರಿಗೆ ಬರಲೂ ಆಗಲ್ಲ. ಹಾಗಾಗಿ ಸದಾ ಉಗ್ಗಪ್ಪನ ಕ್ವಾಟ್ರು ಅಡ್ಡೆಯೇ ಅಡ್ತಲೆ ಮತ್ತು ಸುತ್ತಮುತ್ತಲಿನ ಅಷ್ಟೂ ಕುಡ್ಕರಿಗೆ ವೈನುಶಾಪು,ಬಾರು, ಪಬ್ಬು, ಕ್ಲಬ್ಬು ಎಲ್ಲವೂ ಆಗಿದೆ. ಉಗ್ಗಪ್ಪ ಕ್ಯಾಬರೆ ಡ್ಯಾನ್ಸ್ ಒಂದು ಇಟ್ಟಿಲ್ಲ ಅಡ್ತಲೆಯ ಮಹಿಳೆಯರ ಅಜ್ಜಿ ಪುಣ್ಯಕ್ಕೆ. ಬಾಕಿ ಎಲ್ಲಾವೂ ಉಗ್ಗಪ್ಪನ ಗಡಂಗಿನಲ್ಲಿದೆ. ಹಾಗೆಂದು ಉಗ್ಗಪ್ಪನ ಗಡಂಗಿನಲ್ಲಿ ಕ್ವಾಟ್ರಿಗೆ, ಅದಕ್ಕೆ ಇದಕ್ಕೆ ರೇಟು ಕೂಡ ಜಾಸ್ತಿ ಇದೆ. ಕುಡುಕರ ಟೊಪ್ಪಿ ರಟ್ಟುವ ರೇಟುಗಳಿವೆ. ಒಂದು ಕ್ವಾಟ್ರಿಗೆ ಹೊರಗೆ ಎಂಬತ್ತು ರೂಪಾಯಿ ಇದ್ದರೆ ಅದೇ ಕ್ವಾಟ್ರಿಗೆ ಉಗ್ಗಪ್ಪನ ರೇಟು ನೂರ ಹತ್ತು, ಇಪ್ಪತ್ತು. ಯಾಕೆ ಉಗ್ಗಪ್ಪು ಇಷ್ಟು ಕಡಿಯುತ್ತಿಯಾ ಎಂದು ಕೇಳಿದರೆ ಸುಳ್ಯ ಸ್ಟೇಷನ್ ಗೆ ಮಾಮೂಲು ಕೊಡಬೇಕು, ಅಬಕಾರಿ ಪೋಲಿಸರಿಗೆ ಮಾಮೂಲು ಕೊಡಬೇಕು, ಪುತ್ತೂರು ಡಿವೈಎಸ್ಪಿಗೂ ಇಲ್ಲಿಂದ ಹೋಗುತ್ತದೆ ಎಂಬ ಉತ್ತರ ಬರುತ್ತದೆ. ಇನ್ನು ಸದಾ ಉಗ್ಗಪ್ಪನ ಗಡಂಗಿನ ವಿಶೇಷ ಏನೆಂದರೆ ಇಡೀ ದೇಶದಲ್ಲೇ ಮದ್ಯ ಮಾರಾಟ ಬಂದ್ ಆದರೂ ಸದಾನ ಗಡಂಗ್ ಮಾತ್ರ ಕುಡ್ಕರಿಗೆ ಸದಾ  ತೆರೆದಿರುತ್ತದೆ. ಗಾಂಧಿ ಜಯಂತಿ ದಿನವೂ ಉಗ್ಗಪ್ಪನಿಗೆ ಗಾಂಧಿಯೂ ಇಲ್ಲ ಜಯಂತಿಯೂ ಇಲ್ಲ. ಇನ್ನು ಎಲೆಕ್ಷನ್ ಟೈಮಲ್ಲಂತೂ ಉಗ್ಗಪ್ಪನ ಗಡಂಗಿನಲ್ಲಿ ಕುಡಿದು ಸೂಸು ಮಾಡಿದ ಸೂಸಿನಲ್ಲೇ ಒಂದು ಸಮುದ್ರ ಮಾಡಬಹುದು. ಉಗ್ಗಪ್ಪ ಅಡ್ತಲೆಯ ರಣ ಕುಡುಕರ ಪಾಲಿನ ಕಾಮಧೇನು, ಕಲ್ಪವೃಕ್ಷ ಮತ್ತು ಯೂಬಿ ಮಲ್ಯ.


   ಹಾಗೆಂದು ಉಗ್ಗಪ್ಪ ಪೋಲಿಸ್ ಲೆವೆಲ್ ನಲ್ಲಿ, ಅಬ್ಕಾರಿ ಲೆವೆಲ್ ನಲ್ಲಿ ಭಾರೀ ಪವರ್ಫುಲ್ಲು. ಅಡ್ತಲೆ ಸುತ್ತಾಮುತ್ತಾ ಯಾರೇ ಆಗಲಿ ಒಂದು ಚಮಚೆ ಮದ್ಯ ಮಾರಾಟ ಮಾಡಿದರೂ ಅಪ್ಪಗ ಸುಳ್ಯ ಪೋಲಿಸರಿಗೆ, ಅಬ್ಕಾರಿ ಪೋಲಿಸರಿಗೆ ಚಾಡಿ ಹೇಳಿ ಅವರನ್ನು ಹಿಡಿಸುತ್ತಾನೆ. ಆ ಭಾಗದಲ್ಲಿ ಯಾರೇ ಆಗಲಿ ವೈನ್ ಶಾಪ್ ಗೆ, ಬಾರ್ ಗೆ ಅರ್ಜಿ ಗುಜರಾಯಿಸಿದರೂ ಇವನು ಅಡ್ಡಗಾಲು, ನೀಟಗಾಲು ಇಡುತ್ತಾನೆ. ಯಾವುದಕ್ಕೂ ಉಗ್ಗಪ್ಪ  ಬುಡುದುಲ್ಲೆ ಗಡ ಎಂಬ ಪ್ರತೀತಿ ಈ ಭಾಗದಲ್ಲಿ ಇದೆ. ಇದೀಗ ಅಡ್ತಲೆಯಿಂದ ಐದು ಕಿಲೋ ದೂರದ ಸೇವಾಜೆಯಲ್ಲಿ ಒಂದು ಎಂಎಸ್ ಐಎಲ್ ಓಪನ್ ಆಗಲಿದೆ ಎಂದು ಗಾಳಿಸುದ್ದಿ ಇದೆ. ಅದಕ್ಕೂ ಉಗ್ಗಪ್ಪ ಎಲ್ಲಾ ಸೈಜಿನ ನಿಮೂರ್ತಿ ಮಾಡಿದ್ದಾನೆಂದು ಸುದ್ದಿ ಇದೆ. ಇಷ್ಟಿದ್ದರೂ, ಇಷ್ಟಾದರೂ ಉಗ್ಗಪ್ಪನಿಗೆ ಅಪಗಪಗ ತಗಡ್ ಬೆಚ್ಚ ಆಗುತ್ತಾ ಇರುತ್ತದೆ. ಕುಡುಕರ ಮೇಲೆ ವಿನಾಕಾರಣ ರೇಗಿ ಬಿಡುತ್ತಾನೆ. ಕ್ವಾಟ್ರು ಧರ್ಮಕ್ಕೆ ಕೊಟ್ಟವನಂತೆ ವರ್ತಿಸುತ್ತಾನೆ, ಶಾಲಾ ಮಕ್ಕಳಿಗೂ ಕಿರಿ ಕಿರಿ ಮಾಡುತ್ತಾನೆ ಮತ್ತು ಇಡೀ ಅಂಗಡಿಯನ್ನು ಹೊತ್ತು ಕೊಂಡವನಂತೆ ವರ್ತಿಸುತ್ತಾನೆ. ಮಾಡೋದು ಕಳ್ಳ ವ್ಯವಹಾರ ಊರಿನ ಗಣ್ಯ ವ್ಯಕ್ತಿ , ಮಾಜಿ ಪಂಚಾಯ್ತಿ ಮೆಂಬರು, ರಾಜಕೀಯ ಪಕ್ಷದ ಲೀಡರ್. ಸೊಬಗತನ ಬೇರೆ.
ಯುವರ್ ಆನರ್,                             
  ಒಂದು ಪ್ರಾಥಮಿಕ ಶಾಲಾ ಗ್ರೌಂಡಿನ ಬದಿಯಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಸಂಬಂಧ ಪಟ್ಟ ನಮ್ಮ ಇಲಾಖೆಗಳಿಗೆ ಬಾಯಿ ಬರಲ್ಲ, ಕಿವಿ ಕೇಳಲ್ಲ, ಕಣ್ಣು ಕಾಣಲ್ಲ. ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಅಬ್ಕಾರಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಈ ವಿಷಯದಲ್ಲಿ ಮೌನವಾಗಿ ಕುಂತಿದೆ. ಪೋಲಿಸರಿಗೆ ಮಾಮೂಲು ಕೊಡುತ್ತೇನೆ, ಅಬ್ಕಾರಿ ಗಳಿಗೆ ಮಾಮೂಲು ಕೊಡುತ್ತೇನೆ ಎಂದು ಆರೋಪಿ ಕರೆದು ಕರೆದು ಹೇಳಿದರೂ ಯಾವ ಪೋಲಿಸೂ, ಯಾವ ಅಬ್ಕಾರಿಯೂ ಈ ಕ್ವಾಟ್ರು ಅಡ್ಡೆಗೆ ರೈಡು ಬೀಳುವ ಧೈರ್ಯ ಮಾಡಿಲ್ಲ. ಶಾಲಾ ಮಕ್ಕಳ ಎದುರಿನಲ್ಲೇ ಕ್ವಾಟ್ರು ಮಾರಿದರೂ ಊರಿನ ಮಂದಿಯೂ ಸುಮ್ಮನೆ ಕುಂತಿದ್ದು ವಿಪರ್ಯಾಸವೇ ಸರಿ. ಅಡ್ತಲೆ ಪುತ್ತೂರು ಉಪವಿಭಾಗದ ಉಪ ಪೋಲಿಸ್ ವರಿಷ್ಠನ ಸರಹದ್ದಿನಲ್ಲಿ ಬರುತ್ತದೆ. ಗ್ರಾಮಸ್ಥರಲ್ಲಿ ಯಾರಾದರೂ ಒಬ್ಬ ಧೈರ್ಯ ಮಾಡಿ ಉಪ ಪೋಲಿಸ್ ವರಿಷ್ಠನಿಗೆ ಒಂದು ಕಾಲ್ ಬಿಸಾಕಿದರೂ ಸಾಕು, ಸಂಬಂಧ ಪಟ್ಟವರಿಗೆ ಮಂಗಳಾರತಿ ಆಗಿ ಬಿಡುತ್ತದೆ.
Call ARUN NAAGE GOWDA DYSp puttur 9480805321


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget