ಸುಳ್ಯದಲ್ಲಿ ಗಾಂಜಾ ಘಾಟು! ಕಾಲೇಜು ಸ್ಟೂಡೆಂಟ್ಸುಗಳೇ ಗಿರಾಕಿಗಳು?

              


           ನಿಲ್ಲಿಸಲಾಗಲ್ಲ ಮಾರಾಯ್ರೆ ಸುಳ್ಯದಲ್ಲಿ ಗಾಂಜಾ ಘಾಟು. ಇನ್ನು ಯಾವ ರೇಂಜಿನ, ಯಾವ ಸೈಜಿನ ಪೋಲಿಸ್ ಬಂದರೂ ಸುಳ್ಯದ ಗಾಂಜಾ ವಹಿವಾಟಿನ ತಾಯಿ ಬೇರನ್ನು ಕಿತ್ತು ಹಾಕಲು ಸಾಧ್ಯವೇ ಇಲ್ಲ ಎಂಬಲ್ಲಿ ತನಕ ಪರಿಸ್ಥಿತಿ ಇದೆ. ಯಾಕೆಂದರೆ ತಾಯಿ ಬೇರು ಪಾತಾಳ ಲೋಕದ ಆಸುಪಾಸಿಗೆ ಹೋಗಿ ರೀಚ್ ಆಗಿದೆ.



ಹಾಗೆಂದು ಸುಳ್ಯದಲ್ಲಿ ಕಾಲೇಜುಗಳು ಸ್ವಲ್ಪ ಜಾಸ್ತಿ. ಆ ಕಾಲೇಜು, ಈ ಕಾಲೇಜು ಎಂದು ಹೊರಗಿನ ವಿದ್ಯಾರ್ಥಿಗಳ ಸಂಖ್ಯೆಯೂ ಸ್ವಲ್ಪ ಜಾಸ್ತಿಯೇ. ಹಾಗಾಗಿ ವಿದ್ಯಾರ್ಥಿಗಳ ಜಾಲಿಯೂ  ಬ್ರೇಕ್ ಫೇಲಾಗಿದೆ. ಹಾಗೆಂದು ವಿದ್ಯಾರ್ಥಿಗಳಿಗೆ ಕುಡಿಯುವುದು, ಕುಡಿದು ಲೇಲೆ ಹಾಕೋದು ಓಲ್ಡ್ ಸ್ಟೈಲ್ ಆಗಿ ಹೋಗಿದೆ. ಅದರ ಕಿಕ್ ಈಗೆಲ್ಲ ಅವರಿಗೆ ಸಾಕಾಗಲ್ಲ. ಯಾಕೆಂದರೆ ಅವರ ಹೆತ್ತವರು ಅವರನ್ನು ಕಂಬಳದ ಕೋಣಗಳ ರೇಂಜಿನಲ್ಲಿ ಬೆಳೆಸಿರುತ್ತಾರೆ. ಹಾಗಾಗಿ ಅವರಿಗೆ ಕೋಮಣ ತಪ್ಪಿಸಲು ಗಾಂಜಾ, ಬ್ರೌನ್ ಶುಗರ್, ಕೆಲವು ಟ್ಯಾಬ್ಲೆಟ್ ಗಳು ಅನಿವಾರ್ಯವೇ ಆಗಿ ಹೋಗಿದೆ. ಹಾಗಾಗಿ ಸುಳ್ಯದಲ್ಲಿ ಗಾಂಜಾ ವಹಿವಾಟು ಅಡಿಕೆ ವಹಿವಾಟಿನ ಹಾಗೆಯೇ ಚಿರಪರಿಚಿತ.



ಹಾಗೆಂದು ಸುಳ್ಯದಲ್ಲಿ ಗಾಂಜಾ ವಹಿವಾಟು ಸ್ವಲ್ಪ ಜೋರಿನಲ್ಲಿಯೇ ಇದೆ. ಸುಳ್ಯ ಪೊಲೀಸರು ಈಗಾಗಲೇ ಕೆಲವರನ್ನು ಹಿಡಿದು ಅವರ ಬೆಂಡ್ ತೆಗೆದರೂ ಬುದ್ಧಿ ಬರುತ್ತಿಲ್ಲ. ಓ.. ಆವತ್ತು ಸುಳ್ಯದ ಟಾಪ್ ಗಾಂಜಾ ಡಿಸ್ಟ್ರಿಬ್ಯೂಟರ್ ಆಗಿರುವ ಶ್ರೀಮಾನ್ ನೆಲ್ಲಿ ಬಂಗಾರಡ್ಕ ತಿರ್ತನನ್ನು ಸುಳ್ಯದ ಆಗಿನ ಎಸ್ಸೈ ಮಂಜುನಾಥ್ ಹಿಡಿದು ಬಡಿದು ಚರ್ಮ ಜಾರಿಸಿ ಒಣಗಲು ಹಾಕಿದ್ದರು. ಆದರೆ ತಿರ್ತ ಠಾಣೆಯಿಂದ ಹೊರಗೆ ಬರುವಾಗ ಪುನಃ ಅದೇ ಗಾಂಜಾ ಅದೇ ಬ್ಯಾರ. ಸುಳ್ಯದ ಪೆಟ್ರೋಲ್ ಪಂಪಿನಲ್ಲಿ ಕೇವಲ ಪೆಟ್ರೋಲ್ ಹಾಕುತ್ತಿದ್ದ ನೆಲ್ಲಿ ತಿರ್ತ ಇವತ್ತು ರನ್ನಿಂಗ್ ಕಂಡೀಷನ್ ಗೆ ಮುಟ್ಟಿದ್ದಾನೆಂದರೆ ಅದಕ್ಕೆ ಗಾಂಜಾ ವ್ಯವಹಾರವೇ ಕಾರಣ ಎಂದು ಎದೆ ತಟ್ಟಿ ಹೇಳಬಹುದು.


   ಸುಳ್ಯದಲ್ಲಿ ವಿದ್ಯಾರ್ಥಿಗಳೇ ಅತ್ಯಂತ ಹೆಚ್ಚು ಗಾಂಜಾ ಗಿರಾಕಿಗಳು. ಸಿಗ್ರೇಟಿನ ಪುಗೆರೆ ತೆಗೆದು ಅದಕ್ಕೆ ಗಾಂಜಾ ತುಂಬಿಸಿ ಎಳಿಯೋದೆ. ಕಾಲೇಜು ಕ್ಯಾಂಪಸ್ ಗಳಲ್ಲಿ ರಾಜಾರೋಷವಾಗಿ ಗಾಂಜಾ ವಹಿವಾಟು ನಡೆಯುತ್ತಿದೆ. ಇನ್ನು ಆ ಕುರುಂಜಿ ಗುಡ್ಡೆ ಪಾರ್ಕ್ ನಲ್ಲಿ ಗಾಂಜಾ ವಹಿವಾಟು ಇದೆ. ಮತ್ತೆ ಅಲ್ಲಿ ಓಡಬಾಯಿಯಲ್ಲಿ ಗಾಂಜಾ ಲಿಕ್ವಿಡ್ ರೂಪದಲ್ಲಿ ಸಿಗುತ್ತದೆ ಎಂಬ ಮಾಹಿತಿ ಇದೆ. ಓಡಬಾಯಿಯಲ್ಲಿ ಲಿಕ್ವಿಡ್ ಗಾಂಜಾ ವಹಿವಾಟು ಭರ್ಜರಿಯಾಗಿದ್ದು ಸಂಜೆ ಒಮ್ಮೊಮ್ಮೆ ಯಾರೋ ಬೆಂದ್ರ್ ಸೂ ಹಾಕಿದಷ್ಟು ಪುಗೆ ಓಡಬಾಯಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ಮತ್ತೊಂದು ಅಂಡಿಗುಂಡಿ ಲಿಂಗ ಒಟ್ಟಿಗೆ ಸೇರಿ ಪುಗೆ ಬಿಡುತ್ತಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಸುಳ್ಯದ ಮಟ್ಟಿಗೆ ಗಾಂಜಾ ಗಾಂಜಿಗಳಿಗೆ ಓಡಬಾಯಿಯೇ ಸ್ವರ್ಗ ಮತ್ತು ತವರು.
   ಹಾಗೆಂದು ಸುಳ್ಯ ಪೊಲೀಸರು ತಮ್ಮ ತಾಕತ್ತು ಮೀರಿ ಗಾಂಜಾ ಮಟ್ಟ ಹಾಕಲು ಪ್ರಯತ್ನಿಸಿದ್ದಾರೆ. ಕಂಡ ಕಂಡಲ್ಲಿಂದ ಗಾಂಜಾ ಡಿಸ್ಟ್ರಿಬ್ಯೂಟರ್ ಗಳನ್ನು ಹೊತ್ತುಕ್ಕೊಂಡು ಬಂದು ಬೆಂಡ್ ತೆಗೆದಿದ್ದಾರೆ, ನಟ್ಟು ಬೋಲ್ಟ್ ಲೂಸ್ ಮಾಡಿದ್ದಾರೆ, ಚರ್ಮ ಸುಲಿದು ಒಣಗಲು ಹಾಕಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಪೋಲಿಸರು ಇನ್ನೂ ಹೆಚ್ಚು ರಂಗೋಲಿ ಕೆಳಗೆ ನುಸುಳಿ ನುಸುಳಿದರೆ ಮಾತ್ರ ಗಾಂಜಾ ವಹಿವಾಟಿಗೆ ಬ್ರೇಕ್ ಹಾಕ ಬಹುದು. ಸದ್ಯಕ್ಕೆ ಈ ಸೀಸನ್ ನಲ್ಲಿ ಸುಳ್ಯ ಪೋಲಿಸ್ ಟೀಮಿನ ವಿರಾಟ್ ಕೊಹ್ಲಿ ಈರಯ್ಯ ಫಾರ್ಮ್ ನಲ್ಲಿ ಇಲ್ಲ. ಸೋ ಕಳ್ಳ ಕಾಕರ ಟೀಮು ಒಂದು ಬಾಲಿಗೆ ಎರಡೆರಡು ಸಿಕ್ಸು ಎತ್ತುತ್ತಿದೆ. ಇನ್ನಾದರೂ ಸುಳ್ಯದಲ್ಲಿ ಗಾಂಜಾ ವಹಿವಾಟು ನಿಂತು ಗಾಂಜಾ ಗಿರಾಕಿ ಕಾಲೇಜು ಮಕ್ಕಳು ಕಡೇ ಪಕ್ಷ ಒಂದು ನಲವತ್ತು ವರ್ಷಗಳ ತನಕವಾದರೂ ಬದುಕಿಕೊಳ್ಳಲಿ. ಮಕ್ಕಳು ಅಜ್ಜ ಆಗುವ ತನಕವಾದರೂ ಬದುಕದ್ದಿದ್ದರೆ ಪರವಾಗಿಲ್ಲ ಕಡೇ ಪಕ್ಷ ಅಂಕಲ್ ಆಗುವ ತನಕವಾದರೂ ಬದುಕಿಕೊಳ್ಳಲಿ.

ವನಮಹೋತ್ಸವ

ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆ ಪರಿಸರದಲ್ಲಿ ಶ್ರೀ ಸುಬ್ರಹ್ಮಣ್ಯ ಮಠ ಸದಾನಂದ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಅರಣ್ಯ ಇಲಾಖೆ ಸುಬ್ರಮಣ್ಯ ಲಯನ್ಸ್ ಕ್ಲಬ್ ರೋಟರಿ ಕ್ಲಬ್ ಹಾಗೂ ಸೀನಿಯರ್ ಚೇಂಬ‌ರ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಯಿತು
Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget