ಸುಳ್ಯ: ಡಾಕ್ಟರನ್ನು ಕೊಂದ ಡಾಕ್ಟರ್ ಗಳು

         


 ಅಲ್ಲಾ ಮಾರಾಯ್ರೆ ಒಂದು ಆರ್ಡಿನರಿ ವಾರ್ಷಿಕ ಜ್ವರ ಬಂದರೂ ಈ ಅಂಡಿಗುಂಡಿ ಪಿಚ್ಚರ್ ಡಾಕ್ಟರ್ ಗಳಿಗೆ ಜ್ವರ ನಿಲ್ಲಿಸಲಾಗಲ್ಲ ಮತ್ತು ಜ್ವರ ಏರಿಸಿ ಕೊಂದೇ ಬಿಡುತ್ತಾರೆ ಅಂದರೆ ಇನ್ನು ಆಸ್ಪತ್ರೆಗಳಿಗೆ ಹೋಗುವುದಾದರೂ ಹೇಗೆ ಎಂದೇ ಹೆದರಿಕೆಯಾಗುತ್ತಿದೆ. ನಾವು ನೀವಾದರೂ ಸಾಯಲಿ, ನಾವು ಬಡಬಗ್ಗರು, ನಮ್ಮ ಜೀವಕ್ಕೆ ಅಡಿಕೆ ರೇಟೂ ಇಲ್ಲ ಎಂದಿಟ್ಟುಕೊಳ್ಳೋಣ. ಆದರೆ ಒಬ್ಬಳು ವೈದ್ಯಕೀಯ ವಿದ್ಯಾರ್ಥಿನಿ ಎಂ.ಡಿ ಪದವಿ ಪಡೆಯಲು ಇನ್ನೇನು ಮೂರು ತಿಂಗಳು ಮಾತ್ರ ಬಾಕಿಯಿದ್ದ ಡಾಕ್ಟರ್ ಒಬ್ಬಳನ್ನು ಸುಳ್ಯದ ಡಾಕ್ಟರ್ ಗಳು ಸೇರಿ ಕೊಂದು ಬಿಟ್ಟಿದ್ದಾರೆ. ಎತ್ತಿಕ್ಕೊಂಡು ಬನ್ನಿ ಹೊತ್ತುಕೊಂಡು ಹೋಗಿ.
  ಇದು ಸುಳ್ಯ, ಇಲ್ಲಿ ಇರ್ಲಿಕ್ಕೆ ಎಲ್ಲಾ ಜಾತಿಯ ಕಾಲೇಜುಗಳೂ ಇದೆ. ಆದರೆ ಇಲ್ಲಿಗೆ ಹೋದವರಿಗೆ ಎಬಿಸಿಡಿ ಗೆ ಕಷ್ಟ. ಕಳೆದ ತಿಂಗಳು ತಾನೇ ಇಲ್ಲಿನ ಮೆಡಿಕಲ್ ಕಾಲೇಜಿನ  ವಿದ್ಯಾರ್ಥಿನಿಯೊಬ್ಬಳು ಜ್ವರ ಬಂದು ಮಲಗಿದಳು ಎಳಲೇ ಇಲ್ಲ. ಸದ್ರಿ ವಿದ್ಯಾರ್ಥಿನಿಯ ವೈದ್ಯಕೀಯ ಶಿಕ್ಷಣ ಮುಗಿದಿದ್ದು ಇನ್ನೇನು ಮೂರು ತಿಂಗಳಲ್ಲಿ ಅವಳಿಗೆ ಎಂ.ಡಿ ಪದವಿ ಕೂಡ ಸಿಗುವುದರಲ್ಲಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಜ್ವರ ಬಂದು ಮಲಗಿದವಳನ್ನು ವಾಪಾಸ್ ಎಬ್ಬಿಸಲು ಸುಳ್ಯದ ಅಷ್ಟೂ ಡಾಕ್ಟರ್ ಗಳಿಗೆ ಸಾಧ್ಯವಾಗಲಿಲ್ಲ. ಹುಡುಗಿ ತೀರಿಕೊಂಡಿದೆ.


  ಇವಳು ಸುಜನಿ. ಹೈದರಾಬಾದ್ ಮೂಲದ ವೈದ್ಯಕೀಯ ವಿದ್ಯಾರ್ಥಿನಿ. ವೈದ್ಯಕೀಯ ಶಿಕ್ಷಣದಲ್ಲಿ ಎಂ.ಡಿ ಪದವಿ ಪಡೆಯಲು ಸುಳ್ಯದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಳು. ಸುಜನಿದ್ದು ಎಲ್ಲಾ ಸ್ಟಡೀಸ್ ಮುಗಿದಿತ್ತು, ಇನ್ನೇನು ಮೂರು ತಿಂಗಳಲ್ಲಿ ಎಂ.ಡಿ ಪದವಿ ಅವಳ ಹೆಸರಿನ ಮುಂದೆ ಬಂದು ಎಂಟ್ರಿ ಹಾಕುತ್ತಿತ್ತು. ಅಷ್ಟರಲ್ಲಿ ಅದೆಲ್ಲಿತ್ತೋ ಜ್ವರ, ಹುಡುಗಿಗೆ ಬಂದು ಏರಿ ಬಿಟ್ಟಿದೆ. ಸುಳ್ಯದ ದೊಡ್ಡ ದೊಡ್ಡ ಟೈ ಸಿಕ್ಕಿಸಿಕೊಂಡಿದ್ದ,  ದೊಡ್ಡ ದೊಡ್ಡ ಕಾರುಗಳ ಅಂಡಿಗುಂಡಿ ಡಾಕ್ಟರ್ಸ್ ಕಿಲೋ ಲೆಕ್ಕದಲ್ಲಿ ಸುಜನಿಗೆ ಗುಳಿಗೆ ಕೊಟ್ಟು ಕೊಟ್ಟು ಜ್ವರ ಏರಿಸಿ ಬಿಟ್ಟರು. ಒಬ್ಬ ಟೈ ಸಿಕ್ಕಿಸಿಕೊಂಡಿದ್ದ ಡಾಕ್ಟರು ಮಲೇರಿಯಾಕ್ಕೆ ಗುಳಿಗೆ ಕೊಟ್ಟರೆ, ಇನ್ನೊಬ್ಬ ಸೂಟು ಬೂಟು ಡಾಕ್ಟರ್ ಟೈಫಾಯಿಡ್ ಅಂದು ಬಿಟ್ಟ. ಮತ್ತೊಬ್ಬ ಪಿಚ್ಚರ್ ಡಾಕ್ಟರ್ ಅದು ಜಾಂಡೀಸ್ ಅಂದ. ಇನ್ನೊಬ್ಬ ದೊಡ್ಡ ಡಾಕ್ಟರ್ ಬಂದು ಡೆಂಗ್ಯೂ ಅಂದು ನೆತ್ತೆರ್ ಪರೀಕ್ಷೆಗೆ ಚೀಟಿ ಕೊಟ್ಟ. ಹಾಗೇ ಈ ಎಲ್ಲಾ ಅಂಡಿಗುಂಡಿ ಪಿಚ್ಚರ್ ಡಾಕ್ಟರ್ ಗಳ ಟ್ರಯಲ್ ಟೆಸ್ಟ್, ರಿಯಲ್ ಟೆಸ್ಟ್, ಅಂಡಿಗುಂಡಿ ಟೆಸ್ಟ್ ಗಳು ಮುಗಿಯುವ ಹೊತ್ತಿಗೆ ಹುಡುಗಿ ಕಂಗಾಲಾಗಿ ಹೋಗಿದೆ. ಇನ್ನು ನಮ್ಮ ಟೆಸ್ಟ್ ನಡೆಯಲ್ಲ, ಹುಡುಗಿ ನಾಟ್ ರೀಚೆಬಲ್ ಆಗುತ್ತಿದೆ ಎಂದು ಗೊತ್ತಾಗುತ್ತಲೇ ಸುಳ್ಯದ ಅಷ್ಟೂ ಡಾಕ್ಟರ್ ಗಳೂ ಕೈ ಎತ್ತಿ ಬಿಟ್ಟಿದ್ದಾರೆ. ಮತ್ತೆಂಥ ಮಾಡೋದು ಮಂಗಳೂರಿಗೆ ಅಂಬುಲೆನ್ಸ್ ಗೆ ಹಾಕಿ ಬಿಟ್ಟಿದ್ದಾರೆ. ಹುಡುಗಿ ಕುಂಬ್ರ ಸಮೀಪ ಎಲ್ಲೋ ಉಸಿರು ಚೆಲ್ಲಿ ಬಿಟ್ಟಿದ್ದಾಳೆ. ಅಷ್ಟೇ.



  ಅಲ್ಲಾ ಮಾರಾಯ್ರೆ ಒಂದು ಜ್ವರಕ್ಕೆ ಮುದ್ದು ಕೊಡಲಾಗದ, ಜ್ವರ ಬಂದ ರೋಗಿಯನ್ನು ಸಾಯಿಸಿ ಬಿಡುವ ಆಸ್ಪತ್ರೆಗಳು ಊರಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು. ಹೆಸರಿಗೆ ದೊಡ್ಡ ದೊಡ್ಡ ಆಸ್ಪತ್ರೆಗಳು, ಟೈಧಾರಿ ಡಾಕ್ಟರ್ ಗಳು, ಕೊರುಂಗು ಕಲರಿನ ನರ್ಸ್ ಗಳು, ದೊಡ್ಡ ದೊಡ್ಡ ಕಾರುಗಳು ಇದ್ದರೆ ಸಾಲದು, ರೋಗಿಗಳ ಬಗ್ಗೆ ಕಾಳಜಿ ಬೇಕು, ಜವಾಬ್ದಾರಿ ಇರಬೇಕು. ದುಡ್ಡು ಕೊಟ್ಟು ತಮ್ಮ ಹೆಸರಿನ ಮುಂದೆ ಡಾ| ಪದ ಸೇರಿಸಿಕೊಂಡರೆ ಸಾಲದು ಕಡೇ ಪಕ್ಷ ಏನೂ ಗೊತ್ತಿಲ್ಲದಿದ್ದರೂ ರೋಗಿಗಳ ಬಗ್ಗೆ ಜವಾಬ್ದಾರಿ ಬೇಕು.    ತಮ್ಮಿಂದ ಆಗುತ್ತಾ ಅಥವಾ ಇಲ್ವಾ ಎಂಬುದನ್ನು ಒಂದೇ ಟೆಸ್ಟ್ ನಲ್ಲಿ ಡಿಸೈಡ್ ಮಾಡ ಬೇಕೇ ಹೊರತು ಸಾಯುವ ತನಕವೂ ಟೆಸ್ಟ್ ಮಾಡುತ್ತಾ ಕೂರೋದು ಯಾವ ಸೀಮೆಯ ಡಾಕ್ಟರಿಕೆ ಅದು. ಇವತ್ತು ಸುಜನಿ, ನಾಳೆ ನಮ್ಮನ್ನೂ ಇವರು ಹೀಗೆ ಫಿನಿಷ್ ಮಾಡಿ ಬಿಡುತ್ತಾರೆ. ಡಾ ಎಂಬ ಶಬ್ದವನ್ನು ಡಾಕುಗಳಿಗೂ ಉಪಯೋಗಿಸಲಾಗುತ್ತದೆ.


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget