ಕಡಬ: ಕಾಣಿಯೂರು ಪಂಚಾಯ್ತಿಯಿಂದ ಭೂತದ ಕೊಡಿಅಡಿ ನಿರ್ಮಾಣ

        


 ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು, ವಿವಿಧ ಸಂಘ ಸಂಸ್ಥೆಗಳು, ದಾನಿಗಳು ವಿವಿಧ ವಿನ್ಯಾಸಗಳಲ್ಲಿ ಬಸ್ ಸ್ಟ್ಯಾಂಡ್ ಗಳನ್ನು ಕಟ್ಟುತ್ತಿದ್ದಾರೆ. ಒಂದಕ್ಕಿಂತ ಒಂದು ಭಿನ್ನ,ಸುಂದರ, ಚೆಂದ. ಅವುಗಳಿಗೆ ಬೇಕಾಗಿ ಲಕ್ಷಗಟ್ಟಲೆ ಖರ್ಚು ಕೂಡ ಮಾಡಲಾಗುತ್ತದೆ. ಇಂಥ ಸ್ಟ್ಯಾಂಡುಗಳಲ್ಲಿ ಹೋಗಿ ಕುಂತ್ರೆ ಬಸ್ ಬರುವುದೇ ಬೇಡ ಅನ್ನುವಷ್ಟು ಸುಂದರ ಬಸ್ ನಿಲ್ದಾಣಗಳಿವೆ. ಇದೀಗ ಕಾಣಿಯೂರು ಪಂಚಾಯ್ತಿಯಿಂದ ಒಂದು ಬಸ್ ಸ್ಟ್ಯಾಂಡ್ ನಿರ್ಮಾಣ ಆಗಿದೆ, ಸುಂದರವಾಗಿದೆ. ಆದರೆ ಅದನ್ನು ನೋಡುವಾಗ ಮಾತ್ರ ಯಾಕೋ ಬಸಳೆ ದೊಂಪ, ಭೂತದ  ಕೊಡಿಅಡಿ ಎಲ್ಲಾ ನೆನಪಿಗೆ ಬರುತ್ತದೆ. ಯಾಕೆಂತ ಗೊತ್ತಿಲ್ಲ.
   ಇದು ಮಂಜೇಶ್ವರ -ಸುಬ್ರಹ್ಮಣ್ಯ ಇಂಟರ್ ಸ್ಟೇಟ್ ಹೈವೇಯಲ್ಲಿ ಕಾಣ ಸಿಗುವ ಫೇಮಸ್ ಊರಿನ ಕತೆ. ಈ ಊರಿನ ಹೆಸರು ಕಾಣಿಯೂರು. ಇಲ್ಲಿ ಮಠ ಇದೆ, ಆಸ್ಪತ್ರೆಗಳಿವೆ, ಕಾಲೇಜಿದೆ, ದೇವರುಗಳು, ಭೂತಗಳು ಇದ್ದಾರೆ ಮತ್ತು  ನಿಲ್ಲದ ರೈಲಿಗೆ ಒಂದು ನಿಲ್ದಾಣವೂ ಇದೆ. ಇಲ್ಲಿ ಒಂದು ಗ್ರಾಮ ಪಂಚಾಯಿತಿಯೂ ಇದೆ. ಪಂಚಾಯ್ತಿಯಲ್ಲಿ ದೇಶಭಕ್ತರದ್ದೇ ಕಾರುಬಾರು. ಆರು ಫೀಟಿನವರು, ನಾಲ್ಕು ಫೀಟಿನವರು, ಮೂರುವರೆಯವರು, ಗಾಂಧರೀ ಮುಂಚಿಗಳು ಹೀಗೆ ಕಾಣಿಯೂರು ಪಂಚಾಯ್ತಿ ಅಂದರೆ ದೇಶಭಕ್ತರ ಭದ್ರಕೋಟೆ. ಇಂಥ ದೇಶಭಕ್ತರು ಅಪಗಪಗ ಔಟ್ ಆಗುತ್ತಾ ಇರುತ್ತಾರೆ. ಅದರಲ್ಲೂ ರನೌಟ್ ಜಾಸ್ತಿ.


  ಇದೀಗ ಕಾಣಿಯೂರು ದೇಶಭಕ್ತರ ಪಂಚಾಯ್ತಿ ಏಲಡ್ಕ ಮತ್ತು ಪುಣ್ಚತ್ತಾರು ನಡುವೆ ಸಿಗುವ ಪಾಲೆತ್ತಡ್ಕದಲ್ಲಿ ಒಂದು ಸುಂದರ ಬಸ್ ನಿಲ್ದಾಣ ನಿರ್ಮಿಸಿದ್ದು ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಎದುರಿನಿಂದ ನೋಡುವಾಗ ಭೂತದ ಕೊಡಿಅಡಿಯಂತೆಯೂ, ಹಿಂದಿನಿಂದ ನೋಡುವಾಗ ಬಸಳೆ ದೊಂಪದಂತೆಯೂ, ಅಂಚಿದ ಸೈಡಿಂದ ನೋಡುವಾಗ ಜೋಕುಲು ಹಾಕಿದ ಮಾಡಂಗೋಲಿನಂತೆಯೂ,  ಇನ್ನೊಂದು ಸೈಡಿಂದ ನೋಡುವಾಗ ದಾಸನ ಗೂಡಿನಂತೆಯೂ ಕಂಗೊಳಿಸುತ್ತಿದೆ. ಎರಡು ಕಣ್ಣು ಸಾಲದು ಇದನ್ನು ನೋಡಲು. ಇದೊಂಥರಾ ಬಸ್ ಸ್ಟ್ಯಾಂಡನ್ನು ಉರ್ಬುಲಿ ನಿಲ್ಲಿಸಿದ ಹಾಗೆ. ನಾಲಕ್ಕು ಕಂಬ, ಒಂದು ಶೀಟ್, ನೆಲಕ್ಕೆ ನಾಲಕ್ಕು ಕಟ್ಲೀಸ್ ತುಂಡಿನಂತಹ ಟೈಲ್ಸ್, ಅಲ್ಲಿಗೆ ಬಸ್ ಸ್ಟ್ಯಾಂಡ್ ಫಿನಿಷ್. ಇದಕ್ಕೆ ಬಿಲ್ಲು ನಲವತ್ತೊಂಬತ್ತು ಸಾವಿರದ ಏಳುನೂರು ರೂಪಾಯಿಗಳು. ಬಿಲ್ಲು ಐವತ್ತಾದರೆ ಟೆಂಡರ್ ಕರೆಯಲು ಉದಾಸೀನ ಆಗುತ್ತದೆ ಎಂದು ಐವತ್ತರ ಒಳಗೆ ಮುಗಿಸಿ ಒಳಗಿನ ಕುಲೆಗಳಿಗೆ ಮಾತ್ರ ಬಡಿಸಿ ಫೈಲ್ ಕ್ಲೋಸ್ ಮಾಡಲಾಗಿದೆ. ಅದ್ಭುತ ಬಸ್ ಸ್ಟ್ಯಾಂಡ್ ಇದು. ಇಲ್ಲಿ ತನಕ ಯಾರೂ ಕಟ್ಟಿಲ್ಲ ಮುಂದೆ ಇಂತಹ ಕೆಲಸ ಯಾರಾದರೂ ಮಾಡುವುದೂ ಡೌಟು.



Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget