ಕಡಬ: ವೀಡಿಯೋ ಶೂಟಿಂಗ್ ಮಾಡಿದ್ದಕ್ಕೆ ಅಟ್ರಾಸಿಟಿ ಕೇಸ್ ಹಾಕಲು ಒತ್ತಾಯ

    



   ಕಾಲ ಎಲ್ಲಿಗೆ ಬಂದಿದೆ, ಎಲ್ಲಿಗೆ ಹೋಗುತ್ತಿದೆ ಎಂದೇ ಹೇಳಕ್ಕಾಗಲ್ಲ ಮಾರಾಯ್ರೆ. ಇನ್ನೂ ಮುಂದೆ ಹೋದರೆ ನಡೆದಾಡಲೂ ಕಷ್ಟ ಎನ್ನುವಲ್ಲಿ ತನಕ ಪರಿಸ್ಥಿತಿ ಬರಬಹುದು. ಇಲ್ಲದಿದ್ದರೆ ಕೇವಲ ವೀಡಿಯೋ ಶೂಟಿಂಗ್ ಮಾಡಿದ್ದಕ್ಕೆ ಅಟ್ರಾಸಿಟಿ ಕೇಸ್ ಹಾಕಲು ಸಂಘಟನೆಯೊಂದು ಪೋಲೀಸರನ್ನು ಮೇಲೆ ಕೆಳಗೆ ಮಾಡಿ ಒತ್ತಾಯಿ‌ಸಿದ ಕತೆ ಕಡಬದಿಂದ ಬಂದಿದೆ.
   ಅಲ್ಲಿ ಕಡಬ ತಾಲೂಕು ಕೊಂಬಾರಿನ ಬೊಟ್ಟಡ್ಕದ ರಿಸರ್ವ್ ಕಾಡಿನಲ್ಲಿ ಎರಡು ಬಡಬಡ ಕುಟುಂಬಗಳು ಮನೆ ಇಲ್ಲದೆ ಟೆಂಟ್ ಹಾಕಿದ್ದವು. ಓ..... ಎಂದ ಅರಣ್ಯ ಇಲಾಖೆ ಎರಡೂ ಕುಟುಂಬಗಳನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿ ಕರ ಕೈಲ್ ಸಮೇತ ತಂದು ಬಿಳಿನೆಲೆ ಗ್ರಾಮದ ಸರ್ಕಾರಿ ಜಾಗವೊಂದರಲ್ಲಿ ಸ್ಥಾಪನೆ ಮಾಡುತ್ತಾರೆ. ಸ್ಥಾಪನೆ ಆಗಿ ಕೆಲವೇ ದಿನಗಳಲ್ಲಿ ಅದೂ ಅರಣ್ಯ ಇಲಾಖೆ ಭೂಮಿ ಎಂದು ತಿಳಿದುಬಂದಿದೆ. ಪುನಃ ಅರಣ್ಯ ಇಲಾಖೆ ಬಂದು ಈ ಎರಡು ಕುಟುಂಬಗಳನ್ನು ಜಾಗ ಖಾಲಿ ಮಾಡಿಸುವ ಕೆಲಸಕ್ಕೆ ಇಳಿದಿದೆ. ಅಷ್ಟರಲ್ಲಿ ಸ್ಪಾಟಲ್ಲಿ ಕಳಾರ ಸಂಘಟನೆಯ ಭಯಂಕರ ಲೀಡರೊಬ್ಬ ಧುತ್ತೆಂದು ಹಾಜರಾಗಿ ದೆಪ್ಪೆ ದೀಪೆ ಎಂದು ಕಿಟಿ ಕಿಟಿ ಕಿಟಿ ಶುರು ಮಾಡಿದ್ದಾನೆ. ಗಲಾಟೆ ಶುರುವಾಗಿದೆ. ಈ ಗಲಾಟೆಯನ್ನು ಸ್ಥಳೀಯ ಕಾಲೇಜು ಹುಡುಗನೊಬ್ಬ ವೀಡಿಯೋ ಶೂಟಿಂಗ್ ಮಾಡಿದ್ದಾನೆ. ಅಷ್ಟೇ. ಕಳಾರದ ಭಯಂಕರ ನಾಯಕ ಅರಚಾಡಲು, ಕಿರುಚಾಡಲು ಶುರು ಮಾಡಿದ್ದಾನೆ.
   ಹಾಗೆ ಬಿಳಿನೆಲೆ ಗ್ರಾಮದ ವಿವಾದಿತ ಸ್ಥಳದಲ್ಲಿ ಅರಣ್ಯ ಇಲಾಖೆ ಮತ್ತು ಕಳಾರ ಸಂಘಟನೆಯ ಭಯಂಕರ ನಾಯಕನ ನಡುವೆ ಜಟಾಪಟಿ ನಡೆಯುವುದನ್ನು ಕಾಲೇಜು ಹುಡುಗನೊಬ್ಬ ವೀಡಿಯೋ ಶೂಟಿಂಗ್ ಮಾಡಿದ್ದು ಪರಮ ಅಪರಾಧ ಎಂದು ಘೋಷಿಸಿದ ಕಳಾರ ನಾಯಕ ಸೀದಾ ಬಂದು ಕಡಬ ಠಾಣೆಯಲ್ಲಿ ಕುಂತು ಹುಡುಗನ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸುವಂತೆ ಪೋಲಿಸರ ಮೇಲೆ ಹೈ ಪ್ರೆಷರ್ ಹಾಕಿದ್ದಾನೆ. ಪಾಪ ಕಡಬ ಪೋಲಿಸರಿಗೆ ಹೆದರಿ ಲೋಕವಿಲ್ಲ. ಯಾಕೆಂದರೆ ಕಳಾರದ ನಾಯಕ ಒಂದು ಅರ್ಭಟೆ ಕೊಟ್ಟರೆ ಸಾಕು ಹತ್ತು ಪೊಂಕ್ರ, ಚೀಂಕ್ರ,ಚೋಂಕ್ರಗಳು ಜೈ ಎಂದು ಬಂದು ಠಾಣೆ ಮುಂದೆ ಕಾರಣಗಳೇ ಇಲ್ಲದೆ ಪೊಕ್ಕಡೆ ಪ್ರತಿಭಟನೆಗೆ ಕುಂತು ಬಿಡುತ್ತವೆ. ಹಾಗಾಗಿ ಪೋಲಿಸರಿಗೆ ಉಭಯ ಸಂಕಟ ಶುರುವಾಗಿ ಹೋಯ್ತು. ಅನ್ಯಾಯವಾಗಿ ಒಬ್ಬ ಕಾಲೇಜು ಹುಡುಗನ ಮೇಲೆ ಅಟ್ರಾಸಿಟಿ ಕೇಸ್ ಹಾಕ ಬೇಕು ಮತ್ತು ಮರುದಿನವೇ ಅವನಿಗೆ ಪರೀಕ್ಷೆ ಬೇರೆ ಇತ್ತು. ಹಾಗಾಗಿ ಪೋಲಿಸರು ಆದಷ್ಟು ಕಳಾರದ ಪೊಕ್ಕಡೆ ಹೋರಾಟಗಾರನ ಮನವೊಲಿಸಲು ಯತ್ನಿಸಿದರೂ ಅವನದ್ದು ಒಂದೇ ಜಪ ಅಟ್ರಾಸಿಟಿ.. ಅಟ್ರಾಸಿಟಿ!


   ಹಾಗೇ ಒಬ್ಬ ಕಾಲೇಜು ಹುಡುಗನ ಮೇಲೆ ಅನ್ಯಾಯವಾಗಿ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಲು ಕಳಾರದ ಪಟಾಕಿ ನಾಯಕ ಪೋಲಿಸರ ಮೇಲೆ ಹೈ ಪ್ರೆಷರ್ ಹಾಕುತ್ತಿದ್ದಾನೆ ಎಂದು ಗೊತ್ತಾಗುತ್ತಲೇ ನೆಟ್ಟಣದ ದೇಶ ಭಕ್ತರ ಟೀಂ ಕಾಲೇಜು ಹುಡುಗನ ರಕ್ಷಣೆಗೆ ಧಾವಿಸಿದೆ. ಯಾವಾಗ ದೇಶ ಭಕ್ತರ ಟೀಂ ಹುಡುಗನ ಸೈಡಿಂದ ಬಂತೋ ನೆಟ್ಟಣದ ಕೆಲವು ಕಾಂಗ್ರೆಸ್ ನಾಯಕರು ಕಳಾರ ಹೋರಾಟಗಾರನ ನಟ್ಟು ಬೋಲ್ಟ್ ಟೈಟ್ ಮಾಡಿ ಬಿಟ್ಟರು. ಈ ಮೂವರ ನಡುವೆ ಕಡಬ ಪೊಲೀಸರು ಮಾತ್ರ ಪಾಪಚ್ಚಿ ಆಗಿಬಿಟ್ಟರು.
  ಹಾಗೆಂದು ಯಾವ ಸಂಧಾನವೂ ಈ   ವಿವಾದವನ್ನು ಬಗೆಹರಿಸಲಿಲ್ಲ. ಕಳಾರದ ಪಟಾಕಿ ವೀರ ರಚ್ಚೆಯಿಂದ ಬಿಡಲಿಲ್ಲ ದೇಶ ಭಕ್ತರು  ಕೂಂಜಿಯಿಂದ ಬಿಡಲಿಲ್ಲ. ಅಟ್ರಾಸಿಟಿ ಕೇಸ್ ದಾಖಲಿಸಲೇ ಬೇಕೆಂದು ಅವನು ಹಟ ಹಿಡಿದು ಕುಂತಿದ್ದರೆ ದೇಶ ಭಕ್ತರು ಹೇಗೆ ದಾಖಲಿಸುತ್ತೀರಿ ಎಂದು ಹಠಕ್ಕೆ ಬಿದ್ದರು. ಒಂದು ದಿನ ಮುಗಿದರೂ ನಾಟಕ "ಎಲ್ಲೆ ತೂಕ" ಡೈಲಾಗ್ ನೊಂದಿಗೆ ಸಶೇಷದಲ್ಲಿ ಆವತ್ತು ತೆರೆ ಎಳೆಯಲಾಯಿತು.
   ಹಾಗೇ ಯಾವುದೇ ಸಂಧಾನಕ್ಕೆ ಕಳಾರದ ಪಟಾಕಿ ವೀರ ಜಪ್ಪಯ್ಯ ಅನ್ನಲಿಲ್ಲವೋ ದೇಶಭಕ್ತರು ಕಾಲೇಜು ಹುಡುಗನ ತಾಯಿಯನ್ನ ಅಡ್ಮಿಟ್ ಮಾಡಿ ಬಿಟ್ಟರು ಮತ್ತು ಕಳಾರದ ಪಟಾಕಿ ಮೇಲೆ ಕೌಂಟರ್ ಕಂಪ್ಲೇಂಟ್ ಕೊಟ್ಟು ಬಿಟ್ಟರು. ಆಗ ಸ್ವಲ್ಪ ವಿಚಲಿತನಾದ ಕಳಾರದ ನಾಯಕ ನಂತರದ ಬೆಳವಣಿಗೆಗಳಲ್ಲಿ ಮರುದಿನ ರಾತ್ರಿ ಒಂದು ಗಂಟೆಗೆಲ್ಲ ತನ್ನ ಕಂಪ್ಲೇಂಟ್ ವಾಪಾಸ್ ತಗೊಂಡು ಪೇಸ್ಟ್ ಮಾಡಿ ಬಾತ್ ಮಾಡಲು ಮನೆಗೆ ಹೋಗಿದ್ದ ಎಂದು ತಿಳಿದುಬಂದಿದೆ. ಈ ನಡುವೆ ವಿವಾದ ಬಗೆಹರಿಯದ ಕಾರಣ ಕಾಲೇಜು ಹುಡುಗನ ಪರೀಕ್ಷೆಯೂ ತಪ್ಪಿದ್ದು ಒಬ್ಬ ಪೊಕ್ಕಡೆ ಹೋರಾಟಗಾರನ ಅಂಡಿಗುಂಡಿ ನ್ಯಾಯ ಬೇಡಿಕೆಯಿಂದ ಇಷ್ಟೆಲ್ಲಾ ರಾದ್ಧಾಂತಗಳೇ ನಡೆದು ಹೋಗಿದೆ. ಶಿಲ್ಪಿಯೊಬ್ಬರ ಫೋಟೋ ತೋರ್ಸಿ ತೋರ್ಸಿ ಈ ಪಟಾಕಿ ವೀರ ಮಾಡಿದ ದುಡ್ಡು ಚಿಲ್ಲರೆಗಳಲ್ಲಿ ಇಲ್ಲ.    ಆ ದುಡ್ಡಿನ ಲಿಸ್ಟ್ ಕೂಡ ಇದೆ. ದರ್ಶನ್ ಜೈಲಿಂದ ರಿಲೀಸ್ ಆದ ಮೇಲೆ ಅದು ಕೂಡ ರಿಲೀಸ್ ಆಗಲಿದೆ.



Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget