ಪುತ್ತೂರು: ಧಾರ್ಮಿಕ ಪರಿಷತ್ ಮೀಟಿಂಗ್ ಏಪ?

     



   ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದು ವರುಷಗಳೇ ಉರುಳಿದರೂ ಇನ್ನೂ ಕೆಲವೊಂದು ನೇಮಕಾತಿಗಳನ್ನು ಪೆಂಡಿಂಗ್ ಇಡಲಾಗಿದೆ. ಯಾಕೆಂತ ಗೊತ್ತಿಲ್ಲ. ಉದಾಹರಣೆಗೆ ಆ ಧಾರ್ಮಿಕ ಪರಿಷತ್ ಗೆ ನೇಮಕವಾದರೂ ಇನ್ನೂ ಒಂದೇ ಒಂದು ಟೀ ಬಿಸ್ಕತ್ತು ಮೀಟಿಂಗು ಕೂಡ ಕರೆದಿಲ್ಲ. ಧಾರ್ಮಿಕ ಪರಿಷತ್ ರಚನೆ ಆಗಿ ಅದರ ಮೇಂಬರ್ ಗಳ ಸಮ್ಮನ ಮುಗಿದು, ಪೇಪರ್ ಗಳಲ್ಲಿ ಅವರ ಫೋಟೋ ಬಂದು ಬಂದು ಸಾಕಾಗಿ ಹೋದರೂ ಇನ್ನೂ ಮೀಟಿಂಗ್ ಆಗಿಲ್ಲ. ಫಸ್ಟ್ ಮೀಟಿಂಗ್ ಗೆ ಅಂತ ಬೇರೆಯೇ ಅಂಗಿ ಪ್ಯಾಂಟು, ಪಂಚೆ ತೆಗೆದಿಟ್ಟಿದ್ದರೂ ಮೀಟಿಂಗ್ ಇಲ್ಲ. ಜಿಲ್ಲಾಧಿಕಾರಿಗಳು ಹೆಡ್ ಆಗಿರುವ ಪರಿಷತ್ ಗೆ ಈಗ ಮೂರು ತಿಂಗಳು.      ಮೀಟಿಂಗ್ ಮಾಡಲು ಅವರಿಗೆ ಬರ್ಸ ಬಿಡುತ್ತಿಲ್ಲ. ಮೀಟಿಂಗ್ ಮಾಡಿ ಎಂದು ಅವರಲ್ಲಿ ಹೇಳುವ ವಿಕೆಟ್ ಪರಿಷತ್ ನಲ್ಲಿ ಇಲ್ಲ. ಹಾಗಾಗಿ ಕುಂತಿ ಮಕ್ಕಳಿಗೆ ಮೀಟಿಂಗ್ ಇಲ್ಲ.


   ಇನ್ನು ಆ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಅವಧಿ ಮುಗಿದು ಹತ್ತು ತಿಂಗಳು ಕಳೆದರೂ ಹೊಸ ಸಮಿತಿ ಇನ್ನೂ ಆಡಳಿತಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಸರ್ಕಾರ ಬಂದ ಕೂಡಲೇ ದೇಶಭಕ್ತರ ಕಮಿಟಿ ಹೋಯ್ತಲ್ಲ ಆಗದಿಂದ ಲೋಕಲ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸೀಟುಗಳಿಗೆ ಲೋಕಲ್ ಕಾಂಗ್ರೆಸ್ ಲೀಡರ್ಸ್ ಟವೆಲ್ ಹಾಕಿ ಕಾದು ಕುಂತಿದ್ದರು. ಆದರೆ ಅರ್ಜಿ ಹಾಕಲು ಆದೇಶವೇ ಬರಲಿಲ್ಲ. ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲೂ ಸ್ಪರ್ಧೆಗಳಿದ್ದು, ರಾಜಕೀಯಗಳಿದ್ದು ಸರ್ಕಾರದ ನಿಧಾನಗತಿ ಕಾಂಗ್ರೆಸಿಗರ ತಾಳ್ಮೆಯನ್ನೇ ಪರೀಕ್ಷಿಸುತ್ತಿದೆ. ಈಗಾಗಲೇ ಲೋಕಲ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಸೀಟು ನಿಘಂಟಾದವರು ಸಂಜೀವ ಶೆಟ್ರ ಅಂಗಡಿಯಿಂದ ರಾಮ್ ರಾಜ್ ಕಾಟನ್ ಪಂಚೆ ಶಾಲು ಶರ್ಟು ತೆಗೆದಿಟ್ಟಿದ್ದು, ಪೊಂಜೊವು ಕಾಂಗ್ರೆಸಿಗಳು ಕಾಟನ್ ಸಾರಿ ಮ್ಯಾಚಿಂಗ್ ಬ್ಲೌಸ್ ಇಸ್ತ್ರಿ ಹಾಕಿ ಕಪಾಟಿನಲ್ಲಿಟ್ಟಿದ್ದಾರೆ. ಆದರೆ ಅದನ್ನು ಹಾಕಿಕೊಂಡು ಜಿಗ್ಗ ಕಾಣಲು ಇನ್ನೂ ಸಮಿತಿಯೇ ಆಗಿಲ್ಲ. ದೇವರಿಗೂ ಕಾದು ಕಾದು ಸುಸ್ತಾಗಿರ ಬಹುದು.
   ಇದೀಗ ಕರ್ನಾಟಕ ಸರ್ಕಾರ ರಾಜ್ಯದ ದೊಡ್ಡ ದೊಡ್ಡ ಶ್ರೀಮಂತ ದೇವರುಗಳ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಕರೆದಿದ್ದು ಕಾಂಗ್ರೆಸಿಗರು ವೈಟೇಂಡ್ ವೈಟಲ್ಲಿ ಮಿರ ಮಿರ ಮಿಂಚಲು ರೆಡಿಯಾಗಿದ್ದಾರೆ. ಇನ್ನು ದೇವರು ಹೆದರಿಕೊಳ್ಳದಿದ್ದರೆ ಸಾಕು ಕುಬೇರ ಕಾಂಗ್ರೇಸಿಗರನ್ನು ನೋಡಿ.



Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget