ಕಡಬ: ಸುಬ್ರಹ್ಮಣ್ಯದ ಲಡ್ಡು ಹಗರಣ ಏನಾಯ್ತು?

      



ಲಡ್ಡು ತಿಂದು ದುಡ್ಡು ಮಾಡಿದರು!
   ಹಾಗೆಂದು ದೇವಸ್ಥಾನವನ್ನೂ ತಾಲೂಕು ಆಫೀಸು,RTO ಆಫೀಸು ಹಾಗೂ ಇತರೇ ಸರ್ಕಾರಿ ಆಫೀಸು ಎಂದು ತಪ್ಪಾಗಿ ತಿಳಿದು ಕೊಂಡಿರುವ ಸುಬ್ರಹ್ಮಣ್ಯದ ಸುಬ್ಬಪ್ಪನ ದೇವಸ್ಥಾನದ ನೌಕರರಿಗೆ ಒಂದು ರೌಂಡು ಕೌನ್ಸೆಲಿಂಗ್ ಮಾಡುವುದು ಉತ್ತಮ ಎಂಬ ಅಭಿಪ್ರಾಯ ಇದೆ. ಯಾಕೆಂದರೆ ಇವರ ಲಾಸ್ಟ್ ಷೋ ಈಗ ಲಡ್ಡು ಪ್ರಸಾದ ತಿನ್ನುವಲ್ಲಿ ತನಕ ಬಂದಿದೆ. ನಿಜವಾಗಿಯೂ ಪ್ರಸಾದ ಸಿಗಬೇಕಾದ್ದು ದುಡ್ಡು ಕೊಟ್ಟು ಪ್ರಸಾದ ಚೀಟಿ ಮಾಡಿದ ಭಕ್ತರಿಗೆ. ಆದರೆ ಈಗ ಸುಬ್ರಹ್ಮಣ್ಯದಲ್ಲಿ ಪ್ರಸಾದ ತಿಂದಿದ್ದು ದೇವಸ್ಥಾನದ ಕೌಂಟರಿನಲ್ಲಿ ಕುಂತವರು. ಹದಿನೈದು ಲಕ್ಷ ರೂಪಾಯಿಗಳ ಲಡ್ಡು ಮತ್ತು ಪಾಂಚ್ ಕಜ್ಜಾಯ. ಇನ್ನು ತಿಂದವರಿಗೆ ಶುಗರ್ ಶುರುವಾದರೆ ಇನ್ಸುಲಿನ್ ಟ್ಯಾಂಕರ್ ನಲ್ಲೇ ತರಬೇಕಷ್ಟೇ.


   ಹಾಗೆಂದು ಸುಬ್ರಹ್ಮಣ್ಯದ ಸುಬ್ಬಪ್ಪನ ದೇವಸ್ಥಾನದಲ್ಲಿ ದುಡ್ಡು ಮಾಡದ ಜೀವಿ ಅಂತ ಇದ್ದರೆ ಅದು ಯಶಸ್ವಿನಿ ಮಾತ್ರ. ಬಾಕಿ ಎಲ್ಲಾರೂ ಎಲ್ಲಾ ವಿಧಗಳಲ್ಲೂ ಕಿಸೆಗೆ ಹಾಕಿದವರೇ. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯದಲ್ಲಿ ಲಡ್ಡು ಹಗರಣ ಒಂದು ನಡೆದಿತ್ತು. ಈ ಬಗ್ಗೆ ತನಿಖೆಗೆ ಇಳಿದ ಅಧಿಕಾರಿಗಳು ಲಡ್ಡು ತಿಂದವರಿಗೆ ನೋಟಿಸ್ ಕೊಟ್ಟದ್ದು ಬಿಟ್ಟರೆ ಒಂದೇ ಒಂದು ಲಡ್ಡು ದುಡ್ಡು ವಸೂಲಿ ಮಾಡಲಾಗಲಿಲ್ಲ. ಕೆಲವು ದಿನಗಳ ಹಿಂದೆ ಅಂದರೆ ಮಾರ್ಚ್ ತಿಂಗಳಿಂದ ಲಡ್ಡು ಪ್ರಸಾದ ಮತ್ತು ಪಂಚಕಜ್ಜಾಯ ತಯಾರಕರು ಸರಿಯಾಗಿಯೇ ಬೇಡಿಕೆಗೆ ಅನುಗುಣವಾಗಿ ಪ್ರಸಾದ ತಯಾರಿಸಿ ಕೌಂಟರಿಗೆ ಕಳಿಸಿ ಕೊಟ್ಟಿದ್ದಾರೆ. ಕೌಂಟರಿನಲ್ಲೂ ಇಂತಿಷ್ಟು ಬಂದಿದೆ ಎಂಬ ಲೆಕ್ಕಾಚಾರ ಇದೆ. ಆದರೆ ಸ್ಟಾಕ್ ಚೆಕ್ ಮಾಡಿದರೆ ನಲವತ್ತು ಸಾವಿರ ಲಡ್ಡಿಲ್ಲ, ಇಪ್ಪತ್ತು ಸಾವಿರ ಪಂಚ ಕಜ್ಜಾಯದ ಪ್ಯಾಕೆಟ್ ಇಲ್ಲ. ಅಂದಾಜು ಹದಿನೈದು ಲಕ್ಷ ರೂಪಾಯಿ ಐಟಂ. ಯಾರು ತಿಂದಿದ್ದು?
   ಹಾಗೆಂದು ಈ ಬಗ್ಗೆ ಜನರಿಗೆ ಲಡ್ಡು ಪರಿಮಳ ಬರಲು ಶುರುವಾದ ಕೂಡಲೇ ಮೇಲಾಧಿಕಾರಿಗಳು ಸಂಬಂಧ ಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ! ಬೇರೆಂತದೂ ಮಾಡಿಲ್ಲ. ಹದಿನೈದು ಲಕ್ಷ ಕೇವಲ ಲಡ್ಡಿನಲ್ಲಿ ತಿಂದು ಅರಗಿಸಿಕೊಂಡಿದ್ದಾರೆಂದರೆ ಬಾಕಿ ವಿಭಾಗಗಳಲ್ಲಿ ಸುಬ್ಬಪ್ಪನನ್ನು ಯಾವ ರೀತಿ ವಂಚಿಸಿರ ಬಹುದೆಂದು ಊಹಿಸಿ ಕೊಂಡರೂ ಡಬ್ಬಲ್ ಡೆಂಗ್ಯೂ ಬರಬಹುದು. ಲಡ್ಡು ಪ್ರಸಾದ ಅಲ್ಲಿಂದ ಬಂದಿದೆ, ಇಲ್ಲಿಗೆ ಮುಟ್ಟಿದೆ. ಆದರೆ ಸ್ಟಾಕ್ ಇಲ್ಲ. ಎಂಥ ಚೋದ್ಯ ಗಳು ಮಾರಾಯ್ರೆ. ನಲವತ್ತು ಸಾವಿರ ಲಡ್ಡನ್ನು ಪಿಜಿನ್ ತಿನ್ನಲು ಸಾಧ್ಯವಿಲ್ಲ ಮತ್ತು ಅಷ್ಟು ಪಿಜಿನ್ ಸುಬ್ರಹ್ಮಣ್ಯದಲ್ಲಿ ಇಲ್ಲ. ಆದರೆ ದೇವಸ್ಥಾನದೊಳಗೆ ಮನುಷ್ಯ ರೂಪದ ಪೆರ್ಗುಡೆಗಳು ಸೇರಿಕೊಂಡಿದ್ದು ಅವು ದೇವರನ್ನು ಮತ್ತು ದೇವಸ್ಥಾನವನ್ನು ಒಂದು ಮಾದರಿ ಮಾಡಲು ಸ್ಕೆಚ್ ಹಾಕಿದಂತಿದೆ.





Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget