August 2024

                    


    ಎಡಮಂಗಲ ನಿಂತಿಕಲ್ಲು ರಸ್ತೆಯ ಮಾಲಂಗೇರಿ ಕಿರು ಸೇತುವೆ 15 ದಿನ ಹಿಂದೆ ಮೆಗಾಸ್ಫೋಟಕ್ಕೆ ಕೊಚ್ಚಿ ಹೋದುದನ್ನು ಶಾಸಕರ ತುರ್ತು ಅನುದಾನದಿಂದ ದುರಸ್ತಿಗೊಳಿಸಲಾಯಿತು. ಆದರೆ ಸ್ಥಳಿಯ ಪಂಚಾಯತ್ ಹಾಗೂ  ನಾಯಕರ ಬೇಜವಾಬ್ದಾರಿಯಿಂದ ಅನುದಾನ ಬಳಕೆ ಸಮರ್ಪಕ ವಾಗದೆ ನಾಲ್ಕು ಮೋರಿಗಳು ಅಳವಡಿಕೆ ಆಗುವ ಜಾಗಕ್ಕೆ ಎರಡು ಮೂರಿ ಅಳವಡಿಸಿದ ಕಾರಣ ಸೇತುವೆಯ ಕೆಲವು ಅಂಗಗಳು ಉದ್ಘಾಟನೆ ನಂತರ ಕುಸಿಯಲು ಪ್ರಾರಂಭವಾಗಿದೆ.. ಸ್ಥಳಿಯ ಪಂಚಾಯತ್ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ನೇತುವೆ ನಿರ್ಮಾಣಗೊಂಡರು ಶಾಲಾ ಮಕ್ಕಳಿಗೆ ದುಪ್ಪಟ್ಟು ಖರ್ಚು ಮಾಡಿ ಶಾಲೆಗೆ ಹೋಗುವಂತ ಪರಿಸ್ಥಿತಿ  ಇನ್ನು ತಪ್ಪಿಲ್ಲ ಹಾಗೂ ಬಸ್ಸುಗಳು ಇದರಲ್ಲಿ ಹೋಗದಂತ ಸೇತುವೆ ನಿರ್ಮಾಣವಾಗಿ ಮಂಗಗಳಿಂದ ಮಾಡಿದ ರಾಮ ಸೇತು ಎಂಬ ಮಾತು ಸ್ಥಳೀಯ ಜನರಲ್ಲಿ ಎಲ್ಲರೂ ಆಡಿಕೊಳ್ಳುವಂತಾಗಿದೆ.
   ಹಾಗೆಂದು ಈ ಸಂಕಕ್ಕೆ ಅರ್ಜೆಂಟ್ ಅನುದಾನ ಎಂದು ಒಂದೂವರೆ ಲಕ್ಷ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸಂಕಕ್ಕೆ ಎಷ್ಟು ಹಾಕಿದರು, ಕಿಸೆಗೆ ಎಷ್ಟು ಹಾಕಿದರು ಎಂದು ಅಷ್ಟಮಂಗಲವೇ ಇಡಬೇಕಷ್ಟೆ. ಈ ಕಾಮಗಾರಿಯ ನಾಲಕ್ಕು ಮೋರಿಗಳಲ್ಲಿ ಎರಡನ್ನು ನುಂಗಲಾಗಿದೆ ಮತ್ತು ಎರಡನ್ನು ಹಾಕಲಾಗಿದೆ. ಅದರಲ್ಲಿ ನೀರು ಬ್ಲಾಕ್ ಆಗಿ ಹಾಕಿದ ಒಂದೂವರೆಯೂ ಕುಮಾರಧಾರನ ಪಾಲಾಗುವ ಲಕ್ಷಣಗಳಿವೆ. ಒಂದು ಕಾಮಗಾರಿಗೆ ಒಂದೂವರೆ ಲಕ್ಷ ಹಾಕಿದ ಮೇಲೆ ಕಡೇ ಪಕ್ಷ ಒಂದು ಬಸ್ಸಾದರೂ ಮುರ್ಲಿಕೊಂಡು ಹೋಗಬೇಕು. ಆದರೆ ಈ ಸಂಕದಲ್ಲಿ ಮೂರು ಚಕ್ರದ್ದು ಹೋಗುವುದು ಡೌಟು. ಎಂಥಾ ಒಂದು ಸಾಮಾನುಗಳೆಲ್ಲ ಇದ್ದಾರೆ ಮಾರಾಯ್ರೆ, ಇಷ್ಟು ಕಷ್ಟದಲ್ಲಿ ಬುಡೆದಿ ಜೋಕುಲು ಬೇಕಾ?
   

   .....................................................

    ಪಂಜ ಐವತ್ತೋಕ್ಲು ಗ್ರಾಮದ ಬೊಳ್ಳಾಜೆ ತಿಮ್ಮಪ್ಪ ಗೌಡರ ಪತ್ನಿಯ ಅಕಾಲಿಕ ಮರಣದಿಂದ ಕಂಗೆಟ್ಟ ತಿಮ್ಮಪ್ಪ ಗೌಡರಿಗೆ  ಬೊಳ್ಳಾಜೆ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಪಂಜ ವಲಯ ಕಾಂಗ್ರೆಸ್ ಮತ್ತು ಊರಿನ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಈ ದಿನ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ bollaje, ಚಿನ್ನಪ್ಪ ಸಂಕಡ್ಕ, ದಿನೇಶ್ ಪುಂಡಿಮನೆ , ಕುಸುಮಾದರ ಕೆರೆಯಡ್ಕ, ಸತೀಶ್ ಪೂಜಾರಿ ಮನೆ ಉಪಸ್ಥಿತರಿದ್ದರು.



                   


    ಬಿನ್ನೆರ್ ಬಂದದ್ದು ನಿನ್ನೆ. ಮೊನ್ನೆ ತಿದ್ದಿ ಬಂದಿದ್ದು, ನಿನ್ನೆ ಮಾಮು, ಆಗ ಬಂದಿದ್ದು ತಮ್ಮು ಅಂತ ಮನೆಗೆ ಬಂದವರೆಲ್ಲ ಬಿನ್ನೆರ್ ಎಂದು ಹೇಳುತ್ತಾ ಮನೆಯಲ್ಲೇ ಗ್ರಾಮೀಣ ಮಟ್ಟದ ವೇಶ್ಯಾವಾಟಿಕೆ ಮಾಡುವ ಗ್ರಾಮೀಣ ಪ್ರತಿಭೆಯೊಂದು ಬೆಳ್ಳಾರೆಯಲ್ಲಿ ಅರಳಿದೆ. ಒಂದು ರೌಂಡು ಬೆಳ್ಳಾರೆ ಪೋಲಿಸರು ಸ್ಪಾಟಿಗೆ ಹೋಗಿದ್ದಾರಂತೆ. ಮನೆ ಯಾವುದು ಎಂದು ಗೊತ್ತಾಗದೆ ಎಂಕು ಪಣಂಬೂರಿಗೆ ಹೋದ ಹಾಗೆ ಹೋಗಿ ವಾಪಾಸಾಗಿದ್ದಾರೆ.


  ಇದು ಬೆಳ್ಳಾರೆ. ಇಲ್ಲಿನ ಸುಳ್ಯ ರೋಡಲ್ಲಿ ಸೀದಾ ಹೋದರೆ ಅಲ್ಲಿ ಕಲ್ಲೊಣಿ ಅಂತ‌ ಒಂದು ಊರು ಸಿಗುತ್ತದೆ. ಇಲ್ಲಿನ ಗ್ರಾಮೀಣ ಪ್ರತಿಭೆಯೊಂದು ಇದೀಗ ಕಲ್ಲೋಣಿ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾಳೆ. ತನ್ನ ಮನೆಯನ್ನೇ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡಿರುವ ಈಕೆಯ ಧೈರ್ಯಕ್ಕೆ  ಯಾರಾದರೂ ಬೌಬೌ ಅನ್ನಲೇ ಬೇಕು.  ಬೆಳ್ಳಾರೆ ಪೇಟೆಯಿಂದ ಒಂದೂವರೆ ಕಿ.ಮಿ ದೂರದಲ್ಲಿ ಶ್ರೀ ಕ್ಷೇತ್ರ ಇದ್ದು ಭಕ್ತಾದಿಗಳು ಬಿನ್ನೆರ್ ರೂಪದಲ್ಲಿ ಬಂದು ದರ್ಶನ ಮಾಡುತ್ತಿದ್ದಾರೆ. ಹಾಗೆಂದು ಇಲ್ಲಿ ನಿರಂತರವಾಗಿ, ರಾಜಾರೋಷವಾಗಿ ಆಟೋಟ ನಡೆಯುತ್ತಿಲ್ಲ. ಬುಕ್ಕಿಂಗ್ ಇದ್ದರೆ ಮಾತ್ರ.  ಉದಾ: ನಿಮಗೆ ಒಂದು ಐಟಂ ಬೇಕಿದ್ದರೆ ನೀವು ಮೊದಲೇ ದಿನ, ಘಳಿಗೆ ಬುಕ್ ಮಾಡಬೇಕು, ನಾನು ಇಂತದ್ದೇ ದಿನ ಆಯಿಲ್ ಛೇಂಜ್ ಗೆ ಬರುತ್ತೇನೆ ಎಂದು ನಿಗದಿ ಮಾಡಬೇಕು. ಆವತ್ತು ಆ ಮನೆಯ ಸಂಘಟಕಿ ನಿಮಗೊಂದು ರಂಭೆ ಊರ್ವಶಿ ಮೇನಕೆಯನ್ನು ತರಿಸಿಟ್ಟಿರುತ್ತಾಳೆ. ನೀವು ಬೆಳ್ಳಾರೆಯಲ್ಲಿ ನಿಮ್ಮ ನಾಲಕ್ಕು ಚಕ್ರದ್ದು ಅಥವಾ ಮೂರು ಚಕ್ರದ್ದು ಅಥವಾ ಎರಡು ಚಕ್ರದ್ದನ್ನು ಬದಿಗೆ ಹಾಕಿ  ಅವರೇ ಕಳಿಸಿದ ಆಟೋದಲ್ಲಿ ಹೋದರೆ ಸಾಕು. ಕಲ್ಲೋಣಿಯಲ್ಲೇ ಸ್ವರ್ಗ.
   

    ಹಾಗೆಂದು ಇಲ್ಲಿನ ಮೂಲ ಶಕ್ತಿ ಬಹುಶಃ ನಿಮಗೆ ಸಿಗಲ್ಲ. ಅದು ಬೇರೆ ಶಕ್ತಿಗಳ ಆವಾಹನೆ ಮಾಡುತ್ತದೆ. ಒಬ್ಬಳು ಟೀಚರ್, ಇನ್ನೊಂದು ಉಬರಡ್ಕದ ಶಿಫ್ಟ್ ಡಿಸೈರ್, ಇನ್ನೊಂದು ಬ್ಯೂಟಿ ಪಾರ್ಲರ್ ಆಂಟಿ, ಎಣ್ಣೆ ಕಪ್ಪು ಪೈಂಟಿನ ಆಲ್ಟೋ ಏಯ್ಟ್ ಹಂಡ್ರೆಡ್ ಹೀಗೆ ಕೆಲವು ಹುಡುಗಿಯರ ವ್ಯವಸ್ಥೆ ಇಲ್ಲಿ ಮಾಡಿ ಕೊಡಲಾಗುತ್ತದೆ. ಇದರಲ್ಲಿ ಉಬರಡ್ಕದ ಶಿಫ್ಟ್ ಡಿಸೈರ್ ಗೆ ಮೂರುವರೆ ಸಾವಿರದಿಂದ ಐದರ ತನಕ ಮಾರ್ಕೆಟ್ ರೇಟ್ ಇದ್ದು ಉಳಿದ ಕಾಟುಗಳಿಗೆ ಎರಡರಿಂದ ಮೂರರ ತನಕ ಪೇ ಮಾಡಬೇಕಾಗುತ್ತದೆ. ಇಲ್ಲಿನ ಇನ್ನೊಂದು ವಿಶೇಷ ಏನೆಂದರೆ ಇಲ್ಲಿ ನಿಮಗೆ ಚಾಯ್ಸ್ ಇಲ್ಲ. ಅವರು ತರಿಸಿದ, ತೋರಿಸಿದ ಮಾಲನ್ನು ನೀವು ಒಪ್ಪಿಕೊಳ್ಳಬೇಕು. ಅದು ಬೇಡ, ಇದು ಬೇಡ ಎಂದು ನೀವು ರಗಳೆ ಮಾಡುವ ಹಾಗಿಲ್ಲ. ಹೋಗ ಬೇಕು, ದುಡ್ಡು ಕೊಡಬೇಕು, ಹುಳ ಬಿಡಬೇಕು, ಬಾಯ್ಮುಚ್ಚಿಕೊಂಡು ವಾಪಾಸ್ ಹೋಗ ಬೇಕು. ಬಂದ ದಾರಿಗೆ ಸುಂಕ ಇಲ್ಲ.
  ಇನ್ನು ಇಲ್ಲಿಗೆ ನೀವು ಬರಬೇಕಾದರೆ ಬೆಳ್ಳಾರೆಯಲ್ಲಿ ನಿಂತು ಆಂಟಿಗೆ ಒಂದು ಕಾಲ್ ಮಾಡಿ ಎಲ್ಲಿದ್ದೀರಿ ಎಂದು ಹೇಳಿದರೆ ಸಾಕು. ಮಕ್ಕಳನ್ನು ಶಾಲೆಗೆ ಕರಕ್ಕೊಂಡು ಹೋದ ಹಾಗೆ ನಿಮ್ಮನ್ನೂ ಆಟೋ ಬಂದು ಹೊತ್ತುಕ್ಕೊಂಡು ಹೋಗುತ್ತದೆ. ಅಲ್ಲಿ ಕಲ್ಲೊಣಿಯಲ್ಲಿ ಕೂಡ ಚಿಕ್ಕಿ ಮನೆ ತನಕ ಮಾತ್ರ ಆಟೋ ವ್ಯವಸ್ಥೆ ಇದ್ದು, ಚಿಕ್ಕಿ ಮನೆಯಲ್ಲಿ ನೀವು ಆಟೋ ಇಳಿದು ಅಲ್ಲೇ ಸ್ವಲ್ಪ ಮೇಲೆ ಹತ್ತಿ ಹೋದರೆ ಅಲ್ಲಿಯೇ ಇದೆ ವಿಟ ಪುರುಷರ ತವರು. ಸದ್ರಿ ಕಲ್ಲೋಣಿ ರೆಡ್  ಲೈಟ್ ಮನೆ ಬಗ್ಗೆ ಬೆಳ್ಳಾರೆ ಪೋಲಿಸರಿಗೆ ಈಗಾಗಲೇ ಮಾಹಿತಿಗಳು ಬಂದಿದ್ದು ಅವರು ಚೌತಿ ನಂತರ ಆಪರೇಷನ್ ಗೆ ದಿನ ಇಟ್ಟಿರುವ ಅಪಾಯಗಳಿಗೆ. ಯಾಕೆಂದರೆ ಈಗಾಗಲೇ ಬೆಳ್ಳಾರೆ ಪೋಲಿಸರು ಕಲ್ಲೋಣಿಗೆ ಬಂದು ಹೋಗಿರುವ ವಿಷಯವಿದೆ. ಆದ್ದರಿಂದ ಆದಷ್ಟು ಬೇಗ ಕಲ್ಲೋಣಿ ಆಂಟಿಯ ಈ ಉರ್ವೆಲ್ತಡಿ ವಹಿವಾಟು ನಿಲ್ಲಲಿ, ಬೆಳ್ಳಾರೆ ಪೋಲಿಸರು ಅವಳಿಗೊಂದು ರಿಟೈರ್ ಮೆಂಟ್ ಸನ್ಮಾನ ಮಾಡಿ ಕೊಂಡೋಗಿ ಗುಜಿರಿಗೆ ಹಾಕಲಿ ಎಂಬುದು ಸಾರ್ವಜನಿಕ ಆಶಯ.

                  


  ಹಾಗೆಂದು ಕಾಂಗ್ರೆಸಿಗರು ಎಡ್ಡೆ ಜನಗಳು. ಹಂಚಿ ತಿನ್ನುವವರು ಮತ್ತು ದೇಶಭಕ್ತರ ಹಾಗೆ ಕುರೆಗಳಲ್ಲ. ಜಂಟಲ್ ಮ್ಯಾನ್ ಗಳು ಮತ್ತು ಸ್ವಲ್ಪ ರೌಡಿ ಗೆಟಪ್ಪು. ಈ ರೌಡಿ ಗೆಟಪ್ಪೇ ಕಾಂಗ್ರೆಸಿಗರನ್ನು ಯಾವಾಗಲೂ  ‌ವಿಲನ್ ಸ್ಥಾನಗಳಲ್ಲಿ ನಿಲ್ಲಿಸಿ ಬಿಡುತ್ತದೆ. ಇದೀಗ ಕಡಬದ ವೈಟೇಂಡ್ ವೈಟ್ ಪುಣತ್ತ  ಬಟ್ಟೆಯ ಕಲ್ಲುಗುಡ್ಡೆಯ ಯುವ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ಮತ್ತು ಅವನ ಕಾಂಗ್ರೆಸ್ ಗ್ಯಾಂಗೊಂದು ಸುದ್ದಿಲ್ಲದೆ, ಸದ್ದಿಲ್ಲದೆ ದರ್ಶನ್ ಮಾದರಿಯಲ್ಲಿ ಒಂದು ಕಿಡ್ನಾಪ್ ಮತ್ತು ಮಾರಾಣಾಂತಿಕ ಹಲ್ಲೆ ನಡೆಸಿ ಫೈಲ್ ಕ್ಲೋಸ್ ಮಾಡಿದೆ. ಪೆಟ್ಟು ತಿಂದವನು ಮತಿ ತಪ್ಪಿ ಆಚೆ ಹೋಗಿ ಈಚೆ ಬಂದಿದ್ದಾನೆ. ಅಷ್ಟಕ್ಕೆ ಕಡಬ ಕಾಂಗ್ರೆಸ್ ಗ್ಯಾಂಗ್ ಬಚಾವ್.
   ಇದು ಕಡಬ ಕಲ್ಲುಗುಡ್ಡೆಯ ಕತೆ. ಇಲ್ಲಿನ ಕೌ ಆಸ್ಪತ್ರೆ ಹಿಂದೆ ಕೆಲವು ದಿನಗಳ ಹಿಂದೆ ಒಂದು ದೊಡ್ಡ ಹಲ್ಲೆ ಆಯಿತು. ಹಲ್ಲೆ ನಡೆಸಿದ್ದು ಕಾಂಗ್ರೆಸ್ ಗ್ಯಾಂಗ್ ಮತ್ತು ಪೆಟ್ಟು ತಿಂದವನು ಬರ್ತ್ ಡೇ ಬಾಯ್ ಎಂಬ ಒಬ್ಬ ಆಟೋ ಚಾಲಕ. ಸರೀ... ಕೊಟ್ಟಿದ್ದಾರೆ. ಕೊಟ್ಟ ಪೆಟ್ಟಿನಿಂದ ಬರ್ತ್ ಡೇ ಬಾಯ್ ಮತಿ ತಪ್ಪಿ ಬಿದ್ದಿದ್ದಾನೆ. ಆದರೆ ಹೋದ ಮತಿ ವಾಪಾಸ್ ಬಂದಿದೆ. ಇಲ್ಲದಿದ್ದರೆ ಕೊಟ್ಟಯಿ ಕಟ್ಟುವಂತಹ ಪರಿಸ್ಥಿತಿ ಇತ್ತು. ಆಸ್ಪತ್ರೆಗೆ ಬಂದಿದ್ದ ಕಡಬ ಕಾಂಗ್ರೆಸ್ ಲೀಡರೊಬ್ಬ ಸೂಸು ಮಾಡಿಕೊಂಡು ಓಡಿ ಹೋಗಿದ್ದ ಎಂಬ ಮಾಹಿತಿ ಇದೆ.


  ಅವನು ಕಡಬ ಕಲ್ಲುಗುಡ್ಡೆಯ ಒಬ್ಬ ಆಟೋ ಚಾಲಕ. ಜನ ಪ್ರೀತಿಯಿಂದ ಅವನನ್ನು ಬರ್ತ್ ಡೇ ಬಾಯ್ ಎಂದು ಹೆಸರಿಟ್ಟು ರಿಕ್ಷಾದಲ್ಲಿ ಹಾಕಿ ಜೋಯಿ ಹಾಡಿದ್ದಾರೆ. ಸದ್ರಿ ಬರ್ತ್ ಡೇ ಬಾಯ್ ಗೆ ಎರಡು ವರ್ಷಗಳ ಹಿಂದೆ ಒಂದು ಡೀಪ್ ಲವ್ ಇತ್ತಂತೆ. ಹುಡುಗಿ ಪುತ್ತೂರಿನ ಕಾಲೇಜಿಗೆ ಡೈಲಿ ಅಪ್ಪೆಂನ್ಡೌನ್. ಆಗ ಭಾರೀ ಡೀಪಿಗೆ ಹೋಗಿದ್ದ ಇವರ ಲವ್ವಿಗೆ ಆಮೇಲೆ ಧೂಳು ಹಿಡಿದು, ಜೇಡ ಬಂದು ಬಲೆ ಕಟ್ಟಿ,ಕಾಗೆ ಕಣ್ಣು, ನರಿ ಕಣ್ಣು ಬಿದ್ದು ಲವ್ವು ಒಂದು ದಿನ ನಿಂತು ಹೋಯ್ತು. ಆಮೇಲೆ ಅವನೊಂದು ತೀರ ಅವಳೊಂದು ತೀರ ಅಂತ ಆಯಿತು. ಈ  ನಡುವೆ ಹುಡುಗಿ ತನ್ನದೇ ಒಂದು ಸೋಲೋ ಶೂಟಿಂಗ್ ಮಾಡಿಕ್ಕೊಂಡಿದ್ದು ಆ ಚಲನ ಚಿತ್ರ ಅವಳಿಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೇಯೋ ವೈರಲ್ ಆಗಿದೆ. ಹಾಗೆ ಆ ಚಲನ ಚಿತ್ರವನ್ನು ವೈರಲ್ ಮಾಡಿದ್ದು ಬರ್ತ್ ಡೇ ಬಾಯ್ ಎಂಬುದು ಕಾಂಗ್ರೆಸ್ ಗ್ಯಾಂಗ್ ನ ಆರೋಪ. ಆದರೆ ಆ ಕೆಲಸ ಮಾಡಿದ್ದು ನಾನಲ್ಲ, ನೋಪೊರ್ಚಿ ಅಣ್ಣಾ ಅಂತ ಇವನು ಹೇಳಿದರೆ ಅವರು ನಂಬ ಬೇಕಲ್ಲ. ಹಾಗೆ ಕಲ್ಲು ಗುಡ್ಡೆಯ ಕೌ ಆಸ್ಪತ್ರೆ ಹಿಂದೆ ಇವನನ್ನು ಕೊಂಡೋಗಿ ಸರೀ.. ಹೊಡೆದು, ಬೆನ್ನು ತಟ್ಟು ಮಾಡಿ, ನಟ್ಟು ಬೋಲ್ಟ್ ಲೂಸ್ ಮಾಡಿ ಬಿಸಾಕಿದ್ದಾರೆ. ಹೊಡೆದ ಪೆಟ್ಟಿಗೆ ಆಟೋ ಚಾಲಕನಿಗೆ ಮತಿ ತಪ್ಪಿದ್ದು ಸೈತೆ ಅಂತಲೇ ಕಾಂಗ್ರೆಸ್ ಗ್ಯಾಂಗ್ ಗೆ ಬಿತ್ತ್ ಮಿತ್ತ್ ರಟ್ಟಿತ್ತು.
   

   ಆಮೇಲೆ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೋಲಿಸ್ ಕಂಪ್ಲೈಂಟ್ ಆಗಿದ್ದು ಕಡಬ ಪೋಲಿಸರು ಆಟೋ ಚಾಲಕನ ಮೊಬೈಲು ಚೆಕ್ ಮಾಡಿದರೆ ಅದರ ತುಂಬಾ ದೇವರ ಚಿತ್ರಗಳು ಇದ್ದ ಕಾರಣ ಪೋಲಿಸರು ಆಟೋ ಚಾಲಕನಿಗೆ ವಾರ್ನಿಂಗ್ ಕೊಟ್ಟು, ಮುಚ್ಚಳಿಕೆ ಬರೆಸಿ ಫೈಲ್ ಕ್ಲೋಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಂದು ಆಟೋ ಚಾಲಕನ ಮೊಬೈಲ್ ನಲ್ಲಿ ದೇವರ ಚಿತ್ರಗಳು ಇದ್ದರೂ ಈ ಹುಡುಗಿಯ ಸೋಲೋ ವಿಡಿಯೋ ವೈರಲ್ ಮಾಡಿದ್ದು ಅವನಲ್ಲ, ಅವನು ಧರ್ಮಕ್ಕೆ ಪೆಟ್ಟು ತಿಂದ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಹಾಗೆಂದು ಈ ಕಾಂಗ್ರೆಸ್ ಗ್ಯಾಂಗ್ ಕೂಡ ಸರ್ಕಾರ ಇದೆ ಅಂತ ರಂಬಾರೋಟಿ ಮಾಡಿದ್ದೂ ತಪ್ಪುಎಂಬ ಅಭಿಪ್ರಾಯ ಇದೆ.


                 


  ಹಾಗೆಂದು ಸುಬ್ರಹ್ಮಣ್ಯದ ಯಾವುದೇ ಸಮಸ್ಯೆಗಳು ಸರ್ಕಲ್ ಸುತ್ತಾ ಓಡಿದಂತೆ. ಮುಗಿಯಲ್ಲ ಸಮಸ್ಯೆ. ಒಂದು ಸಮಸ್ಯೆ ಸರಿಪಡಿಸಿದರೆ ಹತ್ತು ಹುಟ್ಟಿಕೊಳ್ಳುತ್ತವೆ. ಹತ್ತು ಮುಟ್ಟಲು ಹೋದರೆ ನೂರಾರು ಸಮಸ್ಯೆ. ಇದೀಗ ಸುಬ್ರಹ್ಮಣ್ಯದಲ್ಲಿ ಪಾರ್ಕಿಂಗ್ ಸಮಸ್ಯೆ, ವನ್ ವೇ ಸಮಸ್ಯೆ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಕಿರಿಕಿರಿ ಕಿರಿಕಿರಿ ಆಗುತ್ತಿದೆ. ಯಾರಲ್ಲಿ ಹೇಳೋಣ ಪ್ರಾಬ್ಲಂ?
  ಹಾಗೆಂದು ಸುಬ್ರಹ್ಮಣ್ಯಕ್ಕೆ ಮಾಸ್ಟರ್ ಪ್ಲಾನರಿ ಯೋಜನೆ ಬಂದ ನಂತರ ಸುಬ್ರಹ್ಮಣ್ಯ ಕೂಡ ಅಭಿವೃದ್ಧಿ ಆಗಿದೆ, ಜೊತೆಗೆ ಗುತ್ತಿಗೆದಾರರು ಮತ್ತು ಇತರೇ ಗಣಗಳು ಕೂಡ ಅಜೀರ್ಣ ಆಗುವಷ್ಟು ತಿಂದುಂಡಿದ್ದಾರೆ. ಆದರೆ ಯೋಜನೆಯ ಸದುಪಯೋಗ ಯಾತ್ರಾರ್ಥಿಗಳಿಗೆ ಮಾತ್ರ ಆಗುತ್ತಿಲ್ಲ. ಯಾಕೆಂದರೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗಳನ್ನು ನಟ್ಟ ತಿರುಗಿಸಿ ಬಿಡಲಾಗುತ್ತಿದೆ. ಹಾಗೆಂದು ಈಗ ಸುಬ್ರಹ್ಮಣ್ಯದ ಎಲ್ಲಾ ರಸ್ತೆಗಳೂ ಅಗಲಗಲ ಆಗಿ ಹೋಗಿದೆ. ಕಾಶೀ ಕಟ್ಟೆಯಿಂದ ಸ್ನಾನ ಘಟ್ಟದ ತನಕದ ರಸ್ತೆಯಂತೂ ಮಿರ ಮಿರ ಮಿಂಚುತ್ತಿದೆ. ಪಾರ್ಕಿಂಗ್ ಮಾಡಲೂ ಒಂದು ಲೋಕದ ಜಾಗ ಮೀಸಲಿಡಲಾಗಿದೆ. ಸುಬ್ರಹ್ಮಣ್ಯನ ಮನೆಯ ಬಾಗಿಲು ತನಕ ಯಾವುದೇ ಸಮಸ್ಯೆಯಿಲ್ಲ. ಆದರೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗಳನ್ನು ಲೂಟುವ ಒಂದು ವರ್ಗದ ಜನ ಇದ್ದಾರಲ್ಲ ಅವರಿಂದಾಗಿ ಸಮಸ್ಯೆ ಬಿಗಡಾಯಿಸುತ್ತಿದೆ. ತಮ್ಮ ಕಿಸೆ ತುಂಬಿಸಿಕೊಳ್ಳುವ ಬರದಲ್ಲಿ ಅವರು ಕೋತಿ ತಾನೂ ಕೆಟ್ಪಿತ್ತಲ್ಲದೆ ಸುಬ್ರಹ್ಮಣ್ಯವನ್ನೆಲ್ಲ ಕೆಡಿಸಿತು ಎಂಬಂತೆ ಸಮಸ್ಯೆಗಳ ಮೂಟೆಗಳನ್ನು ಇವರು ಸಾರ್ವಜನಿಕರ ಮೇಲೆ ಹೊರಿಸುತ್ತಿದ್ದಾರೆ.


  ಉದಾಹರಣೆಗೆ ಆ ಪಾರ್ಕಿಂಗ್ ಸ್ಥಳಗಳ ವಿಷಯದ ಬಗ್ಗೆ ನೋಡುವುದಾದರೆ ಸುಬ್ರಹ್ಮಣ್ಯದ ಅಷ್ಟೂ ಪಾರ್ಕಿಂಗ್ ಸ್ಥಳಗಳು ಅಂಡಿಗುಂಡಿ ಅಂಗಡಿಗಳ ಪಾಲಾಗಿದೆ. ಎಲ್ಲೆಲ್ಲಿ ಪಾರ್ಕಿಂಗ್ ಉಂಟು   ಆ ಜಾಗದಲ್ಲೆಲ್ಲ ಟೆಂಪರರಿ, ಅನಧಿಕೃತ ಅಂಗಡಿಗಳು ಶುರುವಾಗಿದೆ. ಒಂದು ಪ್ಲಾಸ್ಟಿಕ್ ಹೊದಿಕೆ ಮತ್ತು ನಾಲ್ಕು ಬಿದಿರಿನ ಕಂಬ ಇದ್ದರೆ ಸಾಕು ಸುಬ್ರಹ್ಮಣ್ಯದ ಪಾರ್ಕಿಂಗ್ ನಲ್ಲಿಯೇ ಒಬ್ಬ ಸಾಫ್ಟವೇರ್ ಇಂಜಿನಿಯರ್ ಅಕೌಂಟಿನಷ್ಟು ಕೌಂಟ್ ಮಾಡಬಹುದು.  ಹಾಗೆ ಯಾವಾಗ ಪಾರ್ಕಿಂಗ್ ಸ್ಥಳಗಳಲ್ಲಿ ಸಾಲು ಸಾಲು ಅಂಡಿಗುಂಡಿ ಅಂಗಡಿಗಳ ನಿರ್ಮಾಣ ಆಯಿತೋ ಜನ ಮಾರ್ಗದಲ್ಲೇ ಕಾರು, ಬಸ್ಸು, ಆಪೆ ನಿಲ್ಲಿಸ ತೊಡಗಿದರು. ಪರಿಣಾಮ ಟ್ರಾಫಿಕ್ ಜಾಮ್ ಶುರುವಾಯಿತು. ಜಾಮಲ್ಲಿ ಬ್ರೆಡ್ ತಿನ್ನಲು ಹಲವು ಜನ ಸೇರಿ ಒಂದು ಪ್ಲಾನ್ ರೂಪಿಸಿ ಬಿಟ್ಟರು. ಅದೇ ವನ್ ವೇ ಐಡಿಯಾ?
  ಈಗ ಸುಬ್ರಹ್ಮಣ್ಯದಲ್ಲಿ ಮೈನ್ ರೋಡನ್ನೇ ವನ್ ವೇ ಮಾಡಿದ್ದಾರೆ. ಅಲ್ಲಿ ಕಾಶಿ ಕಟ್ಟೆಯಿಂದ ರಥಬೀದಿ ಜಂಕ್ಷನ್ ವರೆಗಿನ ಅನೇಕ ಮುಖಗಳಿದ್ದ ಮೈನ್ ರೋಡಿಗೆ ಏಕಮುಖ ಕೊಡಲಾಗಿದೆ. ಇನ್ನು ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ವನ್ ವೇ ನಿರ್ಗಮನದ ನಿಯಮ ಮಾಡಲಾಗಿದ್ದು ಬಸ್ಸಿನ ಚಾಲಕರಂತೂ ಪವರ್ ಸ್ಟೇರಿಂಗನ್ನು ಸೇಮಿಗೆಯ ಮಣೆ ತಿರುಗಿಸುವ ಹಾಗೆ ತಿರುಗಿಸುವ ಅನಿವಾರ್ಯತೆ ಎದುರಾಗಿದೆ. ಇಷ್ಟೆಲ್ಲಾ ಬೇಕಿತ್ತಾ? ರೋಡ್ ಅಗಲ ಮಾಡಿದ್ದೇ ಜಾಮ್ ಆಗದಿರಲಿ ಎಂದು. ಈಗ ಅದನ್ನೇ ವನ್ ವೇ ಮಾಡಲಾಗಿದೆ. ಯಾರ ಮಂಡೆ ಮಾರಾಯ್ರೆ ಇದು? ಈಗ ಸುಬ್ರಹ್ಮಣ್ಯದ ಬಸ್ ನಿಲ್ದಾಣದಿಂದ ಬೆಂಗಳೂರಿಗೆ, ಮಂಗಳೂರಿಗೆ ಅಂತ ಗರಡಿ ಇಳಿಯುವ ಬಸ್ ಗಳು ರೈಟಿಗೆ ತಗೊಂಡು ಸೀದಾ ಕಾಶಿಕಟ್ಟೆಗೆ ಬರುವಂತಿಲ್ಲ. ಅವನು ಬಸ್ ನಿಲ್ದಾಣದಿಂದ ಇಳಿದು ಎಡಕ್ಕೆ ಸೇಮಿಗೆದ ಮಣೆ ತಿರುಗಿಸಿ ರಥಬೀದಿ ಜಂಕ್ಷನ್ ಗೆ ಬಂದು ಅಲ್ಲಿ ಬಲಕ್ಕೆ ತಿರುಗಿಸಿ ಸವಾರಿ ಮಂಟಪಕ್ಕೆ ಬಂದು ಅಲ್ಲಿ ಪುನಃ ಬಲಕ್ಕೆ ಸೇಮಿಗೆದ ಮಣೆ ತಿರುಗಿಸಿ ಕಾಶಿಕಟ್ಟೆಗೆ ಬರಬೇಕಾಗುತ್ತದೆ. ಅಲ್ಲ ಮಾರಾಯ್ರೆ ಅಷ್ಟು ಅಗಲದ ರೋಡನ್ನು ಯಾರಾದರೂ ವನ್ ವೇ ಮಾಡಿಯಾರ? ಮತ್ತೆ ಮಾಸ್ಟರ್ ಪ್ಲಾನರಿ ಯಾಕೆ? ಮಾಸ್ಟರ್ ಪ್ಲಾನರಿ ಮಾಡಿ ಟೀಚರ್ ಪ್ಲಾನರಿ ಆದದ್ದು ವಿಪರ್ಯಾಸವೇ ಸರಿ.


   ಹಾಗೆಂದು ಈ ಪಾರ್ಕಿಂಗ್ ಸ್ಥಳಗಳಲ್ಲಿ ಅಷ್ಟು ಧೈರ್ಯದಲ್ಲಿ ಯಾತ್ರಾರ್ಥಿಗಳನ್ನು ಲೂಟಿ ಮಾಡಲು ಅಂಡಿಗುಂಡಿ ಅಂಗಡಿ ಮಾಡಿದ್ದು ಯಾರು ಹೊರಗಿನವರಲ್ಲ. ಒಳಗಿನ ಲೂಟಿಕೋರರೇ ತಮ್ಮ ಸೈಡ್ ಖರ್ಚಿಗೆ ಅಂತ ಇಂಥ ಅಂಗಡಿಗಳನ್ನು ಮಾಡಿದ್ದಾರೆ. ದೇವಸ್ಥಾನದ ಒಳಗಿನ ಕೆಲವರ ಅಂಗಡಿ ಇರುವುದರಿಂದ ದೇವಸ್ಥಾನದ ಆಡಳಿತ ಮಂಡಳಿ ಕುರುಡರಂತೆ ವರ್ತಿಸಿದರೆ, ಪಂಚಾಯ್ತಿಗೆ  ಸಂಬಂಧ ಪಟ್ಟವರ, ಚಿಲ್ಲರೆ ರಾಜಕೀಯ ಜನಗಳ ಅಂಗಡಿಗಳು ಇರುವುದರಿಂದ ಪಂಚಾಯ್ತಿ ಪೊಟ್ಟರಂತೆ ವರ್ತಿಸುತ್ತದೆ. ಇನ್ನು ಪೋಲಿಸರ ಕೇರ್‌ ಆಫ್ ನಲ್ಲಿ ಕೂಡ ಅಂಡಿಗುಂಡಿ ಅಂಗಡಿಗಳು ಸುಬ್ರಹ್ಮಣ್ಯದ ಪಾರ್ಕಿಂಗ್ ಸ್ಥಳಗಳಲ್ಲಿ ಇದೆ ಎಂದು ಸುದ್ದಿ ಇದೆ. ಹಾಗಾಗಿ ಯಾವ ಅಂಗಡಿಯನ್ನೂ ಯಾರೂ ತೆಗೆಯುವಂತಿಲ್ಲ. ಅದಕ್ಕೆ ಶೀತ ಅಂದಿದ್ದಕ್ಕೆ ಮೂಗನ್ನೇ ಕೊಯ್ದು ಬಿಟ್ಟಿದ್ದು. ಇನ್ನು ಸದ್ರಿ ಅಂಗಡಿಗಳಲ್ಲಿ ರೇಟು ಕೂಡ ಲೇಡೀಸ್ ಬಾರಿಯಂತೆ ಡಬಲ್ ಚಾರ್ಜಸ್ ಇರುತ್ತದೆ ಎಂದು ತಿಳಿದು ಬಂದಿದೆ. ಬೀಡಿ ಸಿಗರೇಟು ಇತ್ಯಾದಿ ರೈಲು ಬಿಡುವ ಮಾಲುಗಳನ್ನು ಮಾರಲು ಪರ್ಮಿಶನ್ ಇಲ್ಲದಿದ್ದರೂ ಈ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗಳಿಗೆ ಮಾರಲಾಗುತ್ತಿದೆ. ಒಂಜಿ ಪ್ಯಾಕ್ ಸಿಗ್ರೇಟಿಗೆ ರೂ ಎಪ್ಪತ್ತೈದು ಇದ್ದರೆ ಈ ಅಂಡಿಗುಂಡಿ ಅಂಗಡಿಗಳಲ್ಲಿ ಪೋಲಿಸರಿಗೆ ದೂರಾಕಿ ದುಪ್ಪಟ್ಟು ಲೂಟಿ ಹೊಡೆಯಲಾಗುತ್ತಿದೆ. ಇನ್ನು ಬೀಡಿ ಪರಿಸ್ಥಿತಿ ಕೂಡ ಸುಬ್ರಹ್ಮಣ್ಯದಲ್ಲಿ ಒಳ್ಳೆದಿಲ್ಲ. ಇನ್ನು ಯಾವುದೋ ಒಂದು ಅಂಡಿಗುಂಡಿ ಅಂಗಡಿಯಲ್ಲಿ ಗಾಂಜಾ ಹೊಗೆಯಾಡುವ ವಿಷಯ ಕೂಡ ಹೊರಗೆ ಬಂದಿದ್ದು ಅಲ್ಲಿ ಕಲ್ಯಾಣ ಮಂಟಪದಲ್ಲಿ ಗಾಂಜಾ ಬೆಳೆಸಿದ ಕೇಸ್ ಪುಸ್ಕ ಆಯಿತೆಂದು ಈ ಕೇಸ್ ಕೂಡ ಪುಸ್ಕ ಆಗಲು ಸಾರ್ವಜನಿಕರು ಬಿಡಲ್ಲ ಎಂಬ ನಂಬಿಕೆ ಇದೆ. ಇಷ್ಟಕ್ಕೂ ಗಾಂಜಾ ಬೆಳೆದ ಭಟ್ರು ಏನಾದರೂ ಈ ಅಂಡಿಗುಂಡಿ ಅಂಗಡಿಗಳಿಗೆ ಗಾಂಜಾ ಸರಬರಾಜು ಮಾಡುವ ವಹಿವಾಟು ಮಾಡುತ್ತಿದ್ದಾರ ಹೇಗೆ?

                


  ಹಾಗೆಂದು ಸ್ವಾಮಿಗಳು ಹೇಗೆ ಇರಬೇಕು ಅಂದ್ರೆ ಎಲ್ಲ ಬಿಟ್ಟವರಂತೆ ಇರಬೇಕು. ಆದರೆ ಈಗಿನ ಸ್ವಾಮಿಗಳು ಹೇಗೆ ಇದ್ದಾರೆಂದರೆ ಎಲ್ಲವನ್ನೂ ಬಿಟ್ಟವರಂತೆ ಇದ್ದಾರೆ. ಈಗಿನ ಸ್ವಾಮಿಗಳತ್ರ ಯಾವುದುಂಟು ಯಾವುದಿಲ್ಲ? ದುಡ್ಡಿದೆ, ಬಿಸಿನೆಸ್ ಇದೆ, ಲಕ್ಸುರಿ ಕಾರುಗಳಿವೆ, ಆಸ್ತಿ ಇದೆ ಮತ್ತು ಎಲ್ಲಾ ಬಿಟ್ಟು ಮಠ ತುಂಬಾ ರಂಭೆ, ಊರ್ವಶಿ ಮೇನಕೆ ಸೈಜಿನ ಸೇವಕಿಯರನ್ನೂ ಇಟ್ಟುಕೊಳ್ಳಲಾಗುತ್ತಿದೆ. ಈಗಿನ ಸ್ವಾಮಿಗಳನ್ನು ಯಾವ ಸೈಡಿಂದ ನೋಡಿದರೂ ಸ್ವಾಮಿ ಥರ ಕಾಣೋದೇ ಇಲ್ಲ ಮಾರಾಯ್ರೆ.


   ಇದೀಗ ನೇರಳಕಟ್ಟೆಯ ಸೂಜಿ ಸ್ವಾಮಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹಾಗೆಂದು ಈ ಸೂಜಿ ಸ್ವಾಮಿಗಳಿಗೆ ಮಠವಿಲ್ಲ, ಆಶ್ರಮ ಇಲ್ಲ, ಧಾಮ ಇಲ್ಲ, ದೇವಸ್ಥಾನ ಇಲ್ಲ, ಮಂದಿರ ಇಲ್ಲ. ಒಂದು ಎ.ಸಿ ಮನೆ ಮತ್ತು‌ ಆ ಮನೆಯಲ್ಲಿ ಮೂರ್ನಾಲ್ಕು ಅಜ್ಜಿಗಳನ್ನು ಬಿಟ್ಟರೆ ಬೇರೆಂತ ಕೂಡ ಇಲ್ಲ. ಸ್ವಾಮಿಗಳನ್ನು ತಂದು ಯಾರೋ ನೇರಳಕಟ್ಟೆಯಲ್ಲಿ ಇಳಿಸಿ ಹೋದದ್ದು ಬಿಟ್ಟರೆ ಅವರೇನು ಹಿಮಾಲಯದಿಂದ ಇಳಿದೂ ಬಂದವರಲ್ಲ. ಆದರೂ ಸ್ವಾಮಿಗೆ ಜನ ಸೇರಿತು, ಸ್ವಾಮೀಜಿ ಹಿಟ್ ಆಗಿ ಹೋದರು. ನೇರಳ ಕಟ್ಟೆಗೆ ಉಟ್ಟ ಬಟ್ಟೆಯಲ್ಲಿ ಬಂದಿದ್ದ ಸ್ವಾಮೀಜಿ ಇದೀಗ ಕೋಟಿ ಬೆಲೆಯ ಒಂದು ಲ್ಯಾಂಡ್ ಪರ್ಚೆಸ್ ಮಾಡಿದ್ದಾರೆ ಎಂದು ಸುದ್ದಿ ಓಡಿ ಬಂದಿದೆ. ಸ್ವಾಮಿಗೆ ಈ ಲ್ಯಾಂಡ್ ಪರ್ಚೆಸ್ ಮಾಡಲು ಕೋಟಿ ದುಡ್ಡು ಎಲ್ಲಿಂದ ಬಂತು ಎಂದು ಎಂದು ಕೆದಕಿದರೆ ಅದರ ಹಿಂದೆ ಒಂದು ಕತೆ ಮತ್ತು ಕೆಲವು ಉಪ ಕತೆಗಳಿವೆ. ಸೂಜಿ ಸ್ವಾಮಿ ಬಗ್ಗೆ ಈಗೀಗ ಭಾರೀ ವಿರೋಧಗಳು ಎದ್ದಿದ್ದು ನೇರಳಕಟ್ಟೆಯಿಂದ ಸ್ವಾಮಿಗಳಿಗೆ ಬೇಗದಲ್ಲೇ ಸೆಂಡಾಫ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಇಷ್ಟಕ್ಕೂ ಸೂಜಿ ಸ್ವಾಮಿಗಳಿಗೆ ಭೂಮಿ ಏಕೆ ಮಾರಾಯ್ರೆ? ಇಂಟರ್ಸಿ ಮಂಗಳ ಹಾಕ್ತಾರ?


               


  ಪುತ್ತೂರಿನಲ್ಲಿ ಹಿಂದೂ ಬ್ಲಡ್ ಪ್ರೆಶರ್ ಸ್ವಲ್ಪ ಜಾಸ್ತಿ ಇರುವ ಕಾರಣ ಇಲ್ಲಿ ಬಿಜೆಪಿ ಡಮ್ಮೀ ಅಭ್ಯರ್ಥಿಗಳು ಗೆಲ್ಲುತ್ತಿದ್ದಾರೆಯೇ ಹೊರತು ಇಲ್ಲಿನ ಬಿಜೆಪಿ ಪದಾಧಿಕಾರಿಗಳಿಗೆ ಒಂದೇ ಒಂದು ವೋಟ್ ಹಾಕಿಸುವ ಕೆಪ್ಯಾಸಿಟಿ ಇಲ್ಲ. ಯಾಕೆಂದರೆ ಪುತ್ತೂರು ಬಿಜೆಪಿಯಲ್ಲಿ ಎಂಎಲ್ಎ ಕ್ಯಾಂಡಿಡೇಟುಗಳು ಹೇಗೆ ವೀಕ್ ನೆಸ್ ನಲ್ಲಿ ಇರುತ್ತಾರೋ ಅಂಚನೇ ಬಿಜೆಪಿ ಪದಾಧಿಕಾರಿಗಳೂ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತೆ ಅವರಷ್ಟಕ್ಕೆ ಅವರು ಹಾಗೆ ಸುಮ್ಮನೆ ಇರುತ್ತಿರುತ್ತಾರೆ.
   ಹಾಗೆಂದು ಮೊದಲಿನಿಂದಲೂ ಪುತ್ತೂರು ಬಿಜೆಪಿ ಎಂಬ ದೇಶಭಕ್ತರ ಕಾರ್ಖಾನೆಯಲ್ಲಿ ಒಳ್ಳೊಳ್ಳೆ ಪ್ರೊಡಕ್ಟುಗಳೇ ರೆಡಿಯಾಗಿದೆ. ಪುತ್ತಿಲಗಳು, ಕೈಕಾರ ಸೆಟ್, ಪೆರ್ವೊಡಿ ಗ್ಯಾಂಗ್, ಬೆದ್ರೊಡಿ, ಬೊರ್ಕರ್ ಗಳು, ಭಾಮಿಗಳು ಹೀಗೆ ಈ ಎಲ್ಲಾ ಪ್ರೊಡಕ್ಟುಗಳ ಮಾರ್ಕೆಟಿಂಗ್ ಆಗಲೇ ಇಲ್ಲ. ಯಾವಾಗ ಸುಳ್ಯದ ಬಿಜೆಪಿ ನಾಯಕ ಬಂದು ಪುತ್ತೂರನ್ನು ತನ್ನ ರಾಜಕೀಯದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡನೋ ಆವತ್ತಿನಿಂದ ಇಡೀ ಪುತ್ತೂರು ಬಿಜೆಪಿ ವೇಸ್ಟ್ ಬಾಡಿಗಳ ಅಡ್ಡೆಯಾಗಿ ಹೋಯ್ತು. ಇಲ್ಲದಿದ್ದರೆ ಕೊಂತೂರಿನ ಮೊರಂಪು ಬೇನೆಯ ದೊಡ್ಡ ಒಂದು ಎಂಎಲ್ಎ ಕ್ಯಾಂಡಿಡೇಟಾ? ಎಂಥೆಂಥ ಪ್ರತಿಭೆಗಳೆಲ್ಲ‌ ಇದ್ದಾರೆ ಮಾರಾಯ್ರೆ ಪುತ್ತೂರು ಬಿಜೆಪಿಯಲ್ಲಿ.
   ಇದೀಗ ಮೊನ್ನೆ ತಾನೇ ಪುತ್ತೂರು ಬಿಜೆಪಿಗೆ ಪೊಸ ಪೊಸತ್ ಪದಾಧಿಕಾರಿಗಳ ನೇಮಕ ಆಗಿದೆ. ಪುತ್ತಿಲನಿಗೆ ಕೊಡುವುದು ಕೊಡುವುದು ಅಂತ ನಂಪಿಸಿ ನಂಪಿಸಿ ಕೊನೆಗೆ ಕೊಟ್ಟದ್ದು ಗುರುತು ಪರಿಚಯ ಇಲ್ಲದ, ಎಣ್ಣೆ ಕಪ್ಪು ಬಣ್ಣದ, ಕಪ್ಪು ಕೂದಲಿನ, ಕನ್ನಡ ಬಾರದ, ಸ್ಟೆಜಿಗೆ ಹತ್ತಿದರೆ ಗಡಗಡ, ಗಡಗಡ ನಡುಗುವ ಬಿಜೆಪಿಯ ನರಿಗಳಿಗೆ, ಕಾಡು ಪಾಪಗಳಿಗೆ, ಪುಣ್ಯ ಕೋಟಿಗಳಿಗೆ. ಪುತ್ತೂರು ಬಿಜೆಪಿಯ ಸಿಂಹಗಳು, ಹುಲಿಗಳು ಎಲ್ಲಿವೆ ಮಾರಾಯ್ರೆ ಎಂದು ಹುಡುಕಿದರೆ ಅವೆಲ್ಲ ಕೋರ್ಟಿನಲ್ಲಿದೆ. ಹಿಂದೂತ್ವಕ್ಕಾಗಿ, ಬಿಜೆಪಿಗಾಗಿ ಹೊಡೆದಾಡಿದವರು, ಬಡಿದಾಡಿದವರು, ಘರ್ಜಿಸಿದವರು, ಘೀಳಿಟ್ಟವರೆಲ್ಲ ಡಜನ್ ಗಟ್ಟಲೆ ಕೇಸು ಹೊತ್ತುಕ್ಕೊಂಡು ಪರದಾಡುತ್ತಿದ್ದರೆ ಕೋಳಿ ನಿದ್ದೆಯ ಸೋಮಾರಿಗಳನ್ನೆಲ್ಲ ತಂದು ತಂದು ಆಯ ಕಟ್ಟಿನ ಜಾಗೆಗಳಲ್ಲಿ ಕೂರಿಸಲಾಗುತ್ತಿದೆ. ಮತ್ತೆ ಹೇಗೆ 274,112 ಸೀಟು ಬರೋದು? ಒಂದು ಟೀಂ ಅಂದ ಮೇಲೆ ಶರ್ಮಾ, ಕೋಹ್ಲಿ, ಸೂರ್ಯ, ಪಾಂಡ್ಯ ಎಲ್ಲಾ ಬೇಕು. ಕೇವಲ ಬೂಮ್ರ, ಅಶ್ವಿನ್, ಸಿರಾಜ್ ರಂತವರು ಮಾತ್ರ ಟೀಮಲ್ಲಿದ್ದರೆ ಹೊಡೆಯೋದು ಯಾರು ಮಾರಾಯ್ರೆ?
   ಹಾಗೆಂದು ಮೊನ್ನೆಯ ಬಿಜೆಪಿ ಪದಾಧಿಕಾರಿಗಳ ನೇಮಕಾತಿಯಲ್ಲಿ ಪುತ್ತೂರು ಜನತೆಯ ಜೊತೆಗೆ ಖುದ್ದು ಬಿಜೆಪಿಗರೇ ಅಲ್ಕಿ ಬಿದ್ದ ನೇಮಕಾತಿ ಅಂದರೆ ನಗರ ಯುವ ಮೋರ್ಚಾ ಅಧ್ಯಕ್ಷನ ನೇಮಕಾತಿ. ಮೋರ್ಚಾ ಅಧ್ಯಕ್ಷನ ಹೆಸರು ಕೇಳಿಯೇ ಇಡೀ ಪುತ್ತೂರು ದೇಶ ಭಕ್ತರ ಸಮೇತ ಮೂರ್ಚೆ ಹೋಗಿದೆ. ಇವರು ಸನ್ಮಾನ್ಯ ನಿತೇಶ್ ಯಾನೆ ನೀತು. ಪುತ್ತೂರು ನರಕ ಯುವ ಮೋರ್ಚಾ ಅಧ್ಯಕ್ಷ. ಇವರ ತಲೆ ಮೇಲೆ ಈಗಾಗಲೇ ಅಂದರೆ ಅಧ್ಯಕ್ಷ ಕುರ್ಚಿ ಸಿಗುವ ಒಂದು ವಾರ ಮೊದಲು ಕಲಂ 74,79,352,3(5) ಬಿಎನ್ ಎಸ್ ಕಾಯ್ದೆ ಮತ್ತು ಸೆಕ್ಷನ್ 153/2024 ಅಡಿಯಲ್ಲಿ ಕೇಸುಗಳಿಗೆ. ಎಲ್ಲಾ ಸೆಕ್ಷನ್ ಗಳೂ ನಾನ್ ಬೇಲಬಲ್. ಹಾಗೇ ಒಳಗೆ ಹೋಗಿ ಹೊರಗೆ ಬಂದವರು. ಹೊರಗೆ ಬಂದ ಕೂಡಲೇ ದೇಶಭಕ್ತರು ಅವರನ್ನು ಸ್ವಾಗತಿಸಿ ಕೊಟ್ಟಿದ್ದು ಪುತ್ತೂರು ನಗರ ಯುವ ಮೋರ್ಚಾ ಅಧ್ಯಕ್ಷ ಕುರ್ಚಿ. ಸೆಕ್ಸ್ ಕೇಸ್ ‌ಸೆಕ್ಷನ್ ಹೊತ್ತು
ಕೊಂಡವನು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ. ಮಾತೆಯರನ್ನು ಮಾಟೆ ಮಾಡಿಕೊಂಡವನಿಂದ ಏನು ನಿರೀಕ್ಷೆ ಮಾಡಬಹುದು?


   ಇವನು ನೀತು. ಪುತ್ತೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ. ಹೊರಗೆ ಸ್ಟೇಜ್ ಮೇಲೆ ಬಿಳಿ ಬಿಳಿ ಶರ್ಟು, ಪರಮ ದೇಶ ಭಕ್ತ. ಆದರೆ ಸ್ಟೇಜ್ ಹಿಂದೆ ನೀತು ಕತೆ ಬೇರೆಯೇ. ನೀತು ಪಬ್ ಪ್ರಿಯ. ಕೇವಲ ಅಷ್ಟೇ ಆದರೆ ಯಾರ ತಕರಾರೂ ಇರುತ್ತಿರಲಿಲ್ಲ. ಆದರೆ ಮೊನ್ನೆ ಮಂಗಳೂರಿನಲ್ಲಿ ಫೋರಂ ಮಾಲ್ ಶೆರ್ ಲಾಕ್ ಪಬ್ ಗೆ ಕುಡಿಯಲು ಬಂದಿದ್ದ ಕುಡುಕಿಯೊಬ್ಬಳ ಶೀಲಕ್ಕೆ ಕೈಹಾಕಿ ನೀತು ಗ್ಯಾಂಗ್ ಮಾವನ ಮನೆಗೆ ಹೋಗಿ ಬಂದಿದೆ. ಹಾಗೆಂದು ನೀತು ಗ್ಯಾಂಗ್ ಕೂಡ ಪಬ್ ನಲ್ಲಿ ಜಾಮ್ ಟೈಟಾಗಿದೆ. ಪಬ್ ಹುಡುಗಿಯರೆಲ್ಲ ರಂಭೆ ಊರ್ವಶಿ ಮೇನಕೆ ತರ ಮಸ್ಕ್ ಮಸ್ಕ್ ಕಾಣ ತೊಡಗಿದ್ದಾರೆ. ನೀತು ಗ್ಯಾಂಗ್ ಗೆ ಆಸೆ ಆಗಿದೆ. ಕಡೆಗೊಮ್ಮೆ ಆಸೆ ತಡೆಯಲಾಗದೆ ಹುಡುಗಿಯೊಬ್ಬಳ ಮೈನ್ ಸ್ವಿಚ್ ಗೆ ಕೈ ಹಾಕಿದ್ದಾರೆ. ಅಷ್ಟೇ! ಅವಳೂ ಟೈಟ್ ಅಲ್ವಾ, ಗಲಾಟೆ ಶುರು ಮಾಡಿದ್ದಾಳೆ. ಇತ್ತಲಿಂದ ಇವರೂ ಟೈಟ್. ಎರಡೂ ಟೈಟುಗಳು ಸೇರಿ ಮಾಡಿದ  ಗಲಾಟೆ ಶಬ್ದ  ಪಾಂಡೇಶ್ವರ ಸ್ಟೇಷನ್ ತನಕ ಕೇಳಿಸಿದೆ. ನಿಂಗೊಲು ತಿಂದು, ಹಾಲು ಕುಡಿದು ಮಲಗಲು ರೆಡಿಯಾಗಿದ್ದ ಪಾಂಡೇಶ್ವರ ಪೊಲೀಸರು ತರಾತುರಿಯಲ್ಲಿ ಪ್ಯಾಂಟು ಸಿಕ್ಕಿಸಿಕೊಂಡು ಫೋರಂ ಮಾಲ್ ಗೆ ಬಂದು ನೋಡಿದರೆ ಪುತ್ತೂರು ದೇಶ ಭಕ್ತರಿಗೆ ಯಾರಿಗೂ ನೈಂಟಿ ನೈಂಟಿ ಅಂತ ಕುಡಿದು ಕುಡಿದು ನೈಂಟಿ ಡಿಗ್ರಿಯಲ್ಲಿ ನಿಲ್ಲೋಕೆ ಆಗುತ್ತಿರಲಿಲ್ಲ. ಜೊತೆಗೆ ಹುಡುಗಿ ಶೀಲಕ್ಕೆ ಕೂಡ ಕೈಹಾಕಿದ್ದಾರೆ. ಪಾಂಡೇಶ್ವರ ಪೊಲೀಸರು ಎಲ್ಲರನ್ನೂ ಬರ್ಂಬಿ ಕೊಂಡೋಗಿ ನಾನ್ ಬೇಲೆಬಲ್ ಸೆಕ್ಷನ್ ಹಾಕಿ ಎಫ್ಐಆರ್ ಹಾಕಿದ್ದಾರೆ. ಹಾಗೆ ಅದೆಲ್ಲ ಪ್ರಕ್ರಿಯೆ ಮುಗಿಸಿ ಬಂದ ನೀತು ಇನ್ನು ಬೇಜಾರಾಗೋದು ಬೇಡ ಎಂದು ಯುವ ಮೋರ್ಚಾ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ. ಪುತ್ತೂರು ನಗರ ನರಕ ಆಗಲು ಇನ್ನೇನು ಬೇಕು?
   ಹಾಗೆಂದು ಪುತ್ತೂರು ಬಿಜೆಪಿ ನಾಯಕರಲ್ಲಿ ಹೆಚ್ಚಿನವರು ಫಿಲಂ ನಟರೇ. ದರ್ಶನ್ ಫಿಲಂಗಿಂತಲೂ ಜಾಸ್ತಿ ಓಡಿದೆ ಇವರ ಚಿತ್ರಗಳು. ಮತ್ತೆ ಮತ್ತೆ ಯಾಕೆ ದುರ್ಯೋಧನ, ದುಶ್ಯಾಸನರಿಗೆ ಪಟ್ಟ ಕಟ್ಟುತ್ತಿದ್ದಾರೆಂದೇ ಅರ್ಥ ಆಗುತ್ತಿಲ್ಲ. ಈ ದುರ್ಯೋಧನ ದುಶ್ಯಾಸನರಿಗಿಂತ ಈಗೀನ ಪುತ್ತೂರು ಬಿಜೆಪಿಯಲ್ಲಿರುವ ವೇಸ್ಟ್ ಬಾಡಿಗಳೇ ಎಷ್ಟೋ ವಾಸಿ. ಅವು ಕೋಳಿ ನಿದ್ದೆ ಮಾಡುತ್ತಾ ಅವಷ್ಟಕ್ಕೆ ಇರುತ್ತವೆ. ಮಾತೆಯರನ್ನು ಮಾಟೆ ಮಾಡಿಕೊಳ್ಳುವ ದುಶ್ಯಾಸನರಿಂದ ಪಕ್ಷದ ವರ್ಚಸ್ಸಿಗೆ ಅಪಾಯಗಳಿವೆ. ದೇಶಭಕ್ತರು ಕುಂತು ಯೋಚಿಸಲಿ. (ಪಬ್ ನಲ್ಲಿ ಅಲ್ಲ)


              


  ಒಂದು ವಾರದ ಹಿಂದೆ ಎಡಮಂಗಲದ ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆಯ ಒಂದು ಸೇತುವೆ ಮುರಿದು ಬಿದ್ದು ಒಂದು ವಾರ ಕಳೆದರೂ ಕೇಳುವರಿಲ್ಲದೆ ಹಾಗೆಯೇ  ಇರುವುದು ಸುಳ್ಯ ತಾಲೂಕಿನ ಬಿಜೆಪಿಯ ಭದ್ರ ಕೋಟೆ ಎಂದೇ ಕರೆಯಲ್ಪಡುವ ಎಡಮಂಗಲ ಗ್ರಾಮದ ಅವಸ್ಥೆ... ಜನನಾಯಕ ಎನಿಸಿಕೊಳ್ಳುವವರು ಭರವಸೆ ಕೊಟ್ಟು ಫೋಟೋ ಶೂಟ್ ಮಾಡುವುದಕ್ಕೆ ಮಾತ್ರ ಸೀಮಿತ ಎನ್ನುವ ಹಾಗೆ ಹಾಗಿದೆ... ಸುಳ್ಯ ವಿಧಾನ ಸಭೆ ಎಂಎಲ್ಎ ಬಂದು ಹೋದರು. ಸ್ಥಳಿಯ ಪಂಚಾಯತು ಅಧ್ಯಕ್ಷರು ಬಂದು ಹೋದರು ಇವತ್ತಿನ ತಾತ್ಕಾಲಿಕ ವ್ಯವಸ್ಥೆ ಮಾಡುವುದರಲ್ಲಿ ಮಾಡಿ ಕೊಡುವುದರಲ್ಲಿ ವಿಫಲರಾಗಿದ್ದಾರೆ.. ಜನಸಾಮಾನ್ಯರು ಒಂದೇ ಧರ್ಮದ ಜನರು ಇಲ್ಲಿ ಇರುವುದರಿಂದ ಇಲ್ಲಿ ಇಷ್ಟು ದಿನವಾದರೂ ತಾತ್ಕಾಲಿಕ ಸೇತುವೆ ನಿರ್ಮಾಣ ಹಾಗಿಲ್ಲ ಎಂದು ಶಾಪ ಹಾಕುತ್ತಿದ್ದಾರೆ


  


             


  ಮಂಗಳೂರು ನಗರದ ಪೋಲಿಸ್ ಕಮಿಷನರ್ ವ್ಯಾಪ್ತಿಗೊಳಪಟ್ಚ 22  ಠಾಣೆಗಳ ಪೈಕಿ ಸುಮಾರು ಏಳೆಂಟು ಪೋಲಿಸ್ ಠಾಣೆ ಹಾಗೂ CCBಯ ಅಧಿಕಾರಿ-ಸಿಬ್ಬಂದಿಗಳನ್ನು ಬಿಟ್ಟರೆ ಬಹುತೇಕ ಠಾಣೆಗಳಲ್ಲಿ ಬರೇ ಅದಕ್ಷ ಅಧಿಕಾರಿಗಳೇ ಕಾಲ ಕಳೆಯುತ್ತಿದ್ದಾರೆ. ಅಕ್ರಮ ಜುಗಾರಿಕೋರರಿಂದ, ಅಕ್ರಮ ಮಸಾಜ್ ಪಾರ್ಲರ್ ಗಳಿಂದ, ಹವಾಲಕೋರರಿಂದ, ಅಕ್ರಮ ಮಧ್ಯ ವ್ಯಾಪಾರಿಗಳಿಂದ, ಕಳ್ಳಸಾಗಣೆದಾರರಿಂದ, ಭೂಗತ ಪಾತಕಿಗಳಿಂದ, ರಿಯಲ್ ಎಸ್ಟೇಟ್ ಮಾಲಕರಿಂದ, ಅಕ್ರಮ ದಾಸ್ತಾನುದಾರರಿಂದ ಮಾಮೂಲು ಪಡೆದು ಸಾಕಷ್ಟು ಅಕ್ರಮ ಸಂಪಾದನೆ ಮಾಡಿಕೊಂಡು ಕಳೆದ ಹಲವಾರು ವರ್ಷಗಳಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲೇ ಬೀಡು ಬಿಟ್ಟಿರುವ  ಅದಕ್ಷ ಪೋಲಿಸ್ ಅಧಿಕಾರಿಗಳು ಸಾಕಷ್ಟು ಅಕ್ರಮ ಸಂಪಾದನೆ ಮಾಡಿಕೊಂಡು ಮೂಗಿನ ತನಕ ಕುಡಿದು ಕುಪ್ಪಳಿಸುವುದಲ್ಲದೆ ಕೊಲೆಯಾಗಲೀ, ದೊಂಬಿಯಾಗಲೀ, ಲೂಟಿಯಾಗಲೀ, ದರೋಡೆ ಯಾಗಲೀ, ಸ್ತ್ರೀಯರ ಮಾನ ಭಂಗವಾಗಲೀ, ದುರ್ಬಲರ ಮೇಲೆ ದೌಜನ್ಯವಾಗಲೀ  ಏನೇ ಆದರೂ ತಮಗಿದು ದೊಡ್ಡ ಸಂಗತಿಯೇ ಅಲ್ಲನೆಂಬಂತೆ ದಡ್ಡರಂತೆ ಒದ್ದಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಅಪರಾಧ ಪತ್ತೆ ಹಚ್ಚಲು ಸಾಧ್ಯವಾಗದೆ CCB ಯವರಿಂದ ಪತ್ತೆ ಮಾಡಿಸುವುದು ಒಂದು ವಾಡಿಕೆಯಾಗಿದೆ.
  ಹಲವು ವರ್ಷಗಳ ಹಿಂದೆ ಲವಕುಮಾರ್, ಸಿ.ಎಸ್. ರುದ್ರಯ್ಯ, ಸಿ.ಕೆ. ಶಶಿಧರ್, ಪಂಕಜ್ ಕುಮಾರ್ ಠಾಕೂರ್, ಪ್ರಶಾಂತ್ ಕುಮಾರ್ ಠಾಕೂರ್, ಸಾಯಿಕುಮಾರ್ ಪೂಂಜಾ, ಎಂ‌.ಆರ್. ಪೂಜಾರ, ಮುರುಗನ್, ಎಂ.ಕೆ ಗಣಪತಿ, ಪಿ.ಸಿ ಗಣಪತಿ, ವಿಶ್ವನಾಥ್ ಪಂಡಿತ್, ಪಿ.ಎಂ. ಪೆಮ್ಮಯ್ಯ,  ಉದಯ ನಾಯಕ್, ವಿನಯ್ ಗಾಂವಕರ್, ಕೆ. ಮೂತಿ೯, ದಿನಕರ್ ಶೆಟ್ಟಿ, ಜಯಂತ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಅಶೋಕನ್, ತಿಲಕ್ ಚಂದ್ರ, ಶಾಂತರಾಂ ಕುಂದರ್, ಟಿ.ಆರ್. ಜಗನ್ನಾಥ್, ದಿನಕರ ಶೆಟ್ಟಿ,  ಸುನಿಲ್ ನಾಯಕ್, ಶೃತಿ, ವೆಲೆಂಟೀನ್ ಡಿಸೋಜ, ಪ್ರಭುದೇವ್ ಮಾಣೆ, ಭಾರತಿ, ನಾಗಭೂಷಣ್  ಹಾಗೂ ಕಮಿಷನರ್ ಗಳಾದ ಸಂದೀಪ್ ಪಾಟೀಲ್‌ ಹಾಗೂ ಚಂದ್ರ ಶೇಖರ್  ಮುಂತಾದ ಪೋಲಿಸ್ ಅಧಿಕಾರಿಗಳು ದ.ಕ. ಜಿಲ್ಲೆಯನ್ನೇ ನಡುಗಿಸಿದ್ದರು. ಆ ಪೊಲೀಸ್ ಅಧಿಕಾರಿಗಳನ್ನು ಕಂಡಾ ಕ್ಷಣ ಜನ ಬೆಚ್ಚಿ ಬೀಳುತ್ತಿದ್ದರು.  ಅಂದು ಅವರು ಪೋಲಿಸ್ ಇಲಾಖೆಗೂ ಗೌರವ ತಂದಿದ್ದರು. ಇಂದಿನ ಪೋಲಿಸ್ ಅಧಿಕಾರಿಗಳನ್ನು ಕಂಡರೆ ಮಕ್ಕಳು ಕೂಡ ಹೆದರುವುದಿಲ್ಲ. ಒಳ್ಳೆಯ ಮೊತ್ತ ಕೊಟ್ಟರೆ ಎಂತಹ ಅಪರಾಧಿಗಳನ್ನು ಮುಚ್ಚಿ ಹಾಕುತ್ತಾರೆ. ಅವರಿಗೆ ಹೆಸರು ಬೇಕಾಗಿಲ್ಲ. ಯಾರು ಸತ್ತರು ಬದುಕಿದರೂ ಅವರಿಗೆ ಹಣ ಆದರೆ ಸಾಕು.  ಇದು ಇಂದಿನ ಪೋಲಿಸ್ ಅಧಿಕಾರಿಗಳ ಧ್ಯೇಯ. ಹೀಗಾಗಿ ಮಂಗಳೂರಲ್ಲಿ ಕೆಲವೊಮ್ಮೆ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಅಪರಾಧಗಳು ಎಲ್ಲಿಯವರೆಗೆ ಹೆಚ್ಚಿತೆಂದರೆ ಪಾಂಡೇಶ್ವರದ ಹಿಂದಿನ ಪೋಲಿಸ್ ಅಧಿಕಾರಿ ಹರಿರಾಂ ಭಂಡಾರಿ ಹಾಗೂ ಕಂಕನಾಡಿ ಗ್ರಾಮಾಂತರ ಠಾಣೆಯ ಹಿಂದಿನ ಎಸ್. ಐ.ಯೊಬ್ಬರಿಗೆ ಸಾರ್ವಜನಿಕರು ಥಳಿಸಿದ್ದು ಮಾತ್ರವಲ್ಲ ಅಂದಿನ ಉರ್ವ ಎಸ್. ಐ. ಕೆ. ಎನ್. ಹಾಸಟ್ಟಿ ಎಂಬವರನ್ನು ಹಾಡು ಹಗಲೇ ಇರಿದು ಕೊಲೆ ಮಾಡಿದ್ದಾನೆಂದರೆ  ಪೋಲಿಸ್ ಇಲಾಖೆಗೆ ಇದಕ್ಕಿಂತ ದೊಡ್ಡ ಅವಮಾನ ಬೇರೇನು ಬೇಕಾಗಿಲ್ಲ. ಸುಮಾರು 22 ರಿಂದ 24 ಜನ ಇನ್ಸ್‌ಪೆಕ್ಟರ್ ಗಳು,  60 ರಿಂದ 80  ಸಬ್ ಇನ್ಸ್‌ಪೆಕ್ಟರ್ ಗಳ ಪೈಕಿ ದಕ್ಷ ಹಾಗೂ ಭ್ರಷ್ಟ ಅಧಿಕಾರಿಗಳು ಯಾರೆಂದು ಪೋಲಿಸ್ ಕಮಿಷನರ್ ಶ್ರೀ ಅನುಪಂ ಅಗರ್ವಾಲ್ ಈಗಾಗಲೇ ಗುರುತಿಸಿಕೊಂಡು ಕಂಕನಾಡಿಯ ಹಿಂದಿನ ಪೋಲಿಸ್ ಅಧಿಕಾರಿಯನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಗೊಳಿಸಿದ್ದು ಅತ್ಯಂತ ಸಮಂಜಸವೆನ್ನಬಹುದು. ಆದ್ದರಿಂದ ಮಂಗಳೂರು ನಗರದ ಅತ್ಯಂತ ದಕ್ಷ ಪೋಲಿಸ್ ಕಮಿಷನರ್ ಎಂದು ಖ್ಯಾತಿವೆತ್ತ ಶ್ರೀ ಅನುಪಂ ಅಗರ್ವಾಲ್ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಿಂದ ಕತ್ತು ಹಿಡಿದು ಹೊರ ದಬ್ಬಲು ಸಿದ್ಧರಾಗಬೇಕೆಂದು ಮಂಗಳೂರು ನಗರದ ಶಾಂತಿ ಪ್ರಿಯ ಜನತೆ ಸರಕಾರವನ್ನು ಅಗ್ರಹಿಸಿದ್ದಾರೆ. 


   ಆದ್ದರಿಂದ ಮಾಮೂಲಿನ ಅಮಲಿನಿಂದ ಮೈ ಮೆರೆಯುತ್ತಿರುವ  ಕೆಲ ಪೋಲಿಸ್ ಅಧಿಕಾರಿಗಳು ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಗ್ರಹಿಸಿರುವ ಕೋಟ್ಯಾಂತರ ರೂ.ಗಳ ಅಕ್ರಮ ಸಂಪತ್ತನ್ನು ಮುಟ್ಟುಗೋಲು ಹಾಕಲು ಅದಾಯ ತೆರಿಗೆ ಇಲಾಖೆಯವರು ಸನ್ನದ್ಧರಾಗಬೇಕು. ಯಾವ್ಯಾವ ಅಧಿಕಾರಿಗಳು ಎಲ್ಲೆಲ್ಲಿ ಎಷ್ಟೆಷ್ಟು ಲಕ್ಷ- ಕೋಟಿಗಳ ಆಸ್ತಿ -ಪಾಸ್ತಿ ಹೊಂದಿದ್ದಾರೆಂಬುದನ್ನು ಮುಂದೆ ಬೆಳಕಿಗೆ ತರಲಿದ್ದೇವೆ. 
-ಶೇಖ್-ಪುತ್ತೂರು.


            


  ಅವನೊಬ್ಬ ಆಟೋ ಡ್ರೈವರ್. ಹೆಸರು ಮಮ್ಮು. ನರಿಮೊಗರು ಗ್ರಾಮ, ಪುತ್ತೂರು ತಾಲೂಕು. ಅದೇನೋ ಸಮಸ್ಯೆಗೆ ಪುತ್ತೂರಿನ ಲೋಕಲ್ ಬಡ್ಡಿ ಮಕ್ಕಳ ಕೈಯಿಂದ ತೆಗೆದ ಸಾಲ ಮೂವತ್ತು ಸಾವ್ರ. ಭದ್ರತೆಗೆ ಇಟ್ಟಿದ್ದು ಬ್ಲ್ಯಾಂಕ್‌ ಚೆಕ್. ಸಕಾಲದಲ್ಲಿ ಸಾಲ ತೀರಿಸಲಾಗದ ಮಮ್ಮುವನ್ನು ಹುಡುಕಿಕೊಂಡು ಬಂದಿದ್ದು ವಾರೆಂಟ್ ವಿದ್ ಪೋಲಿಸ್. ವಾರೆಂಟ್ ಏನು ಎಂದು ವಿಚಾರಿಸಿದರೆ ಚೆಕ್ ಕೇಸ್. ಮಮ್ಮುಗೆ ಮೂವತ್ತು ಸಾವಿರ ಕೊಟ್ಟಿದ್ದ ಬಡ್ಡಿಮಗ ಮಮ್ಮು ಬ್ಲ್ಯಾಂಕ್ ಚೆಕ್ ನಲ್ಲಿ ಮೂರು ಲಕ್ಷ ಅಂತ ಬರೆದು ಬ್ಯಾಂಕ್ ಗೆ  ಹಾಕಿದ್ದ. ಚೆಕ್ ಬ್ಯಾಂಕಿನ ಗೋಡೆ ಬಡಿದು ರಿಬೌಂಡ್ ಆಗಿ ಬೌನ್ಸ್ ಆಗಿದೆ. ಅಷ್ಟೇ, ಬಡ್ಡಿಮಗ ಕೇಸ್ ಹಾಕಿದ್ದಾನೆ. ಮಮ್ಮುಗೆ ಹೆದರಿ ಲೋಕವಿಲ್ಲ. ನಾನು ಸಾಯ್ತೇನೆ ಎಂದು ಹೆಂಡತಿಯಲ್ಲಿ ಹೇಳಿದ್ದು ಮತ್ತು ಎಲ್ಲರೂ ನೋಡ ನೋಡುತ್ತಿದ್ದಂತೆ ಓಡಿ ಹೋಗಿ ಬಾವಿಗೆ ಹಾರಿದ್ದೇ. ಆಟಿ ತಿಂಗಳು ಬೇರೆ, ಬಾವಿಯಲ್ಲಿ ಜಾಮ್ ಟೈಟ್ ನೀರಿತ್ತು. ಮಮ್ಮು ಮುಳುಗಿದವನು ಮತ್ತೆ ತೇಲಾಡಿಕೊಂಡೇ ಎದ್ದದ್ದು. ಅಲ್ಲಿಗೆ ಬಡ್ಡಿಮಕ್ಕಳ ರಕ್ಕಸ ಕೃತ್ಯಕ್ಕೆ ಅಮಾಯಕನೊಬ್ಬನ ಬಲಿ.
   ಚೆಕ್ ಈಸ್ ಓನ್ಲಿ ಫಾರ್ transaction, ನಾಟ್ ಫಾರ್ ಸೆಕ್ಯೂರಿಟಿ ಎಂದು ಇಡೀ ಲೋಕಕ್ಕೆ ಗೊತ್ತಿರುವ ವಿಷಯ. ಆದರೆ ಬಡ್ಡಿ ಮಕ್ಕಳು ಅದೇ ಚೆಕ್ ಹಿಡಕ್ಕೊಂಡು ಓಬಿರಾಯನ ಕಾಲದ negotiable instrument act ನ 138 ಸೆಕ್ಷನ್ ಮತ್ತು ಐಪಿಸಿ ಸೆಕ್ಷನ್ 420 ಮೂಲಕ ಅಮಾಯಕ ಬಡ ಸಾಲಗಾರರನ್ನುಬಾವಿಯ ಕಟ್ಟೆಯ ತನಕ, ಕೆರೆಯ ದಂಡೆಯ ತನಕ, ನದಿಯ ದಡದ ತನಕ, ಸಂಕದ ಮಧ್ಯದ ತನಕ ಮುಟ್ಟಿಸಿ ಬಿಡುತ್ತಿದ್ದಾರೆ. ಇಷ್ಟಕ್ಕೂ ವ್ಯಕ್ತಿಗಳಿಬ್ಬರ ಪರ್ಸನಲ್ ಫೈನಾನ್ಸಿಯಲ್ ವಹಿವಾಟಿನಲ್ಲಿ ಸರ್ಕಾರ ಯಾಕೆ ಮಧ್ಯದಲ್ಲಿ ಬರುತ್ತಿದೆ ಎಂದೇ ಅರ್ಥವಾಗುತ್ತಿಲ್ಲ.   ಒಬ್ಬ ಬಡ್ಡಿಮಗನ ಬಡ್ಡಿ ಅಸಲು ವಸೂಲಾತಿಗೆ ಸರ್ಕಾರ ಯಾಕೆ ನ್ಯಾಯಾಂಗ ಮತ್ತು ಕಾರ್ಯಾಂಗವನ್ನು ಉಪಯೋಗಿಸುತ್ತಿದೆ, ಒಬ್ಬ ಲೋಫರ್ ಬಡ್ಡಿ ಮಗ ಕೊಟ್ಟ ಸಾಲ ವಸೂಲಾತಿಗೆ ನ್ಯಾಯಾಂಗದ ಅಮೂಲ್ಯ ಸಮಯವನ್ನು ಯಾಕೆ ಹಾಳು ಮಾಡುತ್ತಿದೆ, ಒಬ್ಬ ಡಬ್ಬಾ ನನ್ಮಗ ಬಡ್ಡಿಮಗನ ಸಾಲ ವಸೂಲಾತಿಯಲ್ಲಿ ಪೋಲೀಸರನ್ನು ಯಾಕೆ ರಿಕವರಿ ರೌಡಿ ಗ್ಯಾಂಗ್ ನ ಪುಡಿ ರೌಡಿಗಳ ಹಾಗೆ ನಡೆಸಿ ಕೊಳ್ಳಲಾಗುತ್ತಿದೆ ಎಂದು ಯಾರಲ್ಲಿ ಕೇಳಿದರೂ ಸರಿಯಾದ ಆನ್ಸರ್ ಬರಲ್ಲ. ಇಷ್ಟಕ್ಕೂ ಕಚಡಾ  ಬಡ್ಡಿಮಕ್ಕಳ ಸಾಲ ವಸೂಲಾತಿಯಲ್ಲಿ ಸರ್ಕಾರ ಯಾಕೆ ಅಷ್ಟೊಂದು ಇಂಟರೆಸ್ಟೆಡ್? ಕೊಟ್ಟ ಚೆಕ್ಕಲ್ಲಿ ದುಡ್ಡಿಲ್ಲ ಅಂದರೆ ಇನ್ನೊಂದು ಚೆಕ್ ಬರೆಯಲಿ, ಅದರಲ್ಲೂ ದುಡ್ಡಿಲ್ಲ ಅಂದರೆ ಅವರಿಬ್ಬರೇ ಅಥವಾ ಯಾರಾದರೂ ಮಧ್ಯವರ್ತಿಗಳ ಮೂಲಕ ವಿವಾದ ಮುಗಿಸಿ ಕೊಳ್ಳಲಿ. ಅದು ಅವರ ಪರ್ಸನಲ್ ಪ್ರಾಬ್ಲಂ. ಅದಕ್ಕೆ ಸರ್ಕಾರ ಯಾಕೆ ಮೂಗು ತೂರಿಸೋದು?
   ಅದರಲ್ಲೂ ಚೆಕ್ ಕೇಸ್ ಅಂದರೆ ಪೋಲಿಸರಂತೂ ಅದೊಂದು ದೇಶದ್ರೋಹದ ಕೇಸಿನಂತೆ ವರ್ತಿಸುತ್ತಾರೆ. ಚೆಕ್ ಕೇಸಿನ ನನ್ನ ಫ್ರೆಂಡ್ ಒಬ್ಬನಿಗೆ ಸುಳ್ಯ ಪೋಲಿಸ್ ಎಸ್ಸೈ ಒಬ್ಬ ಅಮಾನವೀಯ ರೀತಿಯಲ್ಲಿ ಥಳಿಸಿದ್ದ. ಎನ್ ಕೌಂಟರ್ ಮಾಡಿ ಬಿಸಾಡುತ್ತೇನೆ ಎಂದು ಬೆದರಿಸಿದ್ದ, ಕೇಸಿಗೆ ಹೈಕೋರ್ಟ್ ಸ್ಟೇ ಇದ್ದರೂ ಹಾಕಿ ಸ್ಟಿಕ್ ಬಳಸಿ ನನ್ನ ಫ್ರೆಂಡ್ ನ ಜಾಯಿಂಟ್ ಜಾಯಿಂಟ್ ಬಡಿದಿದ್ದ. ನನ್ನ ಹತ್ತಿರ ನೋವು ತೋಡಿಕೊಳ್ಳಲು ಬಂದಿದ್ದ ಫ್ರೆಂಡ್ ನ ಡ್ಯಾಮೇಜ್ ಬಾಡಿ ನೋಡಿ ಕರುಳು ಚುರ್ರ್ ಅಂದಿತ್ತು. ಫ್ರೆಂಡನ್ನು ಕರಕ್ಕೊಂಡು ಸೀದಾ ಹೋಗಿ ದಕ್ಷಿಣ ಕನ್ನಡ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ IPS ಮುಂದೆ ನಿಲ್ಲಿಸಿದ್ದೆ. ದೇಹದ ನೋವು ನೋಡಲು ನೋ ಅಂದ ಪೋಲಿಸ್ ವರಿಷ್ಠ ಫೋನ್ ಎತ್ತಿಕೊಂಡು ಸುಳ್ಯ ಸರ್ಕಲ್ Inspector ಗೆ ಏರಿದ ಧ್ವನಿಯಲ್ಲಿ ಕ್ಲಾಸ್ ತಗೊಂಡಿದ್ದು "ಅವನು ಯಾಕಂತೆ ಈ ಕೇಸಲ್ಲಿ ಅಷ್ಟೊಂದು ಇಂಟರೆಸ್ಟೆಡ್, ಅವರನ್ನು ಸುಳ್ಯಕ್ಕೆ ಕಳಿಸ್ತೇನೆ, ಸಂಜೆಯೊಳಗೆ ಈ ಕೇಸ್ ಮುಗಿಸಿ ನನಗೆ ರಿಪೋರ್ಟ್ ಮಾಡಬೇಕು, ಇಲ್ಲದಿದ್ದರೆ ಅವನನ್ನು ಸಸ್ಪೆಂಡ್ ಮಾಡುತ್ತೇನೆ, ಏನು ಮನೆಗೆ ಹೋಗ್ತನಂತೆಯ ಅವನು" ಎಂದು SP ಅವಾಜ್ ಹಾಕಿದ್ದರು. ಅಲ್ಲಿಂದ ನಾವಿಬ್ಬರೂ ಸುವರ್ಣ, tv 9, ಪಬ್ಲಿಕ್ ಜನಗಳನ್ನೂ ಹತ್ತಿರ ಕೂರಿಸಿಕೊಂಡು ಕತೆ ಹೇಳಿ ಬಿಟ್ಟೆವು. ಎಸ್ಸೈಗೆ ಲೋಕ ಇಲ್ಲ.


   ಹಾಗೆಂದು ಈ ಚೆಕ್ ಕೇಸಲ್ಲಿ ಕೇವಲ ಹದಿಮೂರು ಸಾವಿರಕ್ಕೆ ಕಡಬ ಪೊಲೀಸರು ನನ್ನನ್ನೂ ಚಡ್ಡಿಯಲ್ಲಿ ಕೂರಿಸಿದ್ದಾರೆ ಮಾರಾಯ್ರೆ. ಆವಾಗ ಅದೊಂದು ದೊಡ್ಡ ಕೇಸ್ ಅಂತ ನಾನೂ ಹೆದರಿಕೊಂಡಿದ್ದೆ. ಅವನ್ಯಾರೋ ಒಬ್ಬ ಎಸ್ಸೈ ನನ್ನ ಪ್ಯಾಂಟ್, ಶರ್ಟು ತೆಗೆಸಿ ಚಡ್ಡಿಯಲ್ಲಿ ಲಾಕಪ್ ಗೆ ಹಾಕಿದ್ದ. ಒಂದು ಪರ್ಸನಲ್ ಆರ್ಥಿಕ ಅಪರಾಧಕ್ಕೆ ಇಷ್ಟೆಲ್ಲ ಬೇಕಾ? ಇದರಿಂದ ಪೋಲಿಸರು ಏನನ್ನು ಸಾಧಿಸಿದಂತಾಗುತ್ತದೆ ಎಂದೇ ಅರ್ಥ ಆಗುತ್ತಿಲ್ಲ. ನಾನೇನೋ ಮನಸ್ಸಿನೊಳಗೆ ಮುಸಿ ಮುಸಿ ನಗುತ್ತಾ ಚಡ್ಡಿಯಲ್ಲಿ ಮಲಗಿದೆ, ಆದರೆ ಅದೆಷ್ಟೋ ಮೃದು ಮನಸ್ಸಿನ ಮಂದಿಯ ಮೇಲೆ ಪೋಲಿಸರ ಈ ವರ್ತನೆ ಕೂಡ ಆತ್ಮಹತ್ಯೆಗೆ ಪ್ರೇರಣೆ ಆಗುವ ಅಪಾಯಗಳಿವೆ. ಮೊನ್ನೆ ಬಾವಿಗೆ ಹಾರಿದ ಮಮ್ಮು ಕತೆ ಕೂಡ ಹೀಗೆ ಇರಬಹುದು.
ಯುವರ್ ಆನರ್,                             
  ನ್ಯಾಯ ದೇವತೆಯ ಬ್ಲೈಂಡ್ ಜಡ್ಜ್ ಮೆಂಟ್ ಗಳಿಂದ ಅಮಾಯಕ ಜನಗಳ ಮೇಲೆ, ಬಡ ಬಗ್ಗರ ಮೇಲೆ, ಮಧ್ಯಮ ವರ್ಗದ ಜನಗಳ ಮೇಲೆ ನೆಗೆಟಿವ್ ಪರಿಣಾಮಗಳಾಗುತ್ತಿದೆ. ನ್ಯಾಯ ದೇವತೆಯ ಕಣ್ಣುಗಳಲ್ಲಿ ಪರೆ ಬಂದಿದೆ. ದೇವತೆಯ ಕಣ್ಣುಗಳಿಗೆ ಜರೂರಾಗಿ ಆಪರೇಷನ್ ನಡೆಸಬೇಕಾಗಿದೆ. ಯಾಕೆಂದರೆ ಬ್ಲೈಂಡ್ ಜಡ್ಜ್ ಮೆಂಟ್  ವನ್ ಸೈಡ್ ಆಗಿರ ಬಾರದು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೊಟ್ಟ ನ್ಯಾಯದಿಂದ ಎಷ್ಟೋ ಜನರು ಬೀದಿ ಪಾಲು ಆಗಿದ್ದಾರೆ, ಅಮಾಯಕರ ಆತ್ಮಹತ್ಯೆಗಳಾಗಿವೆ, ಅಪರಾಧಿಗಳು ನಿರಪರಾಧಿಗಳಾಗಿದ್ದಾರೆ, ನಿರಪರಾಧಿಗಳು ಅಪರಾಧಿಗಳಾಗಿದ್ದಾರೆ. ನ್ಯಾಯ ದೇವತೆಯ ಮುಂದೆ ನಿಜವಾದ ಅಪರಾಧದ ಪರವಾಗಿ ಸುಳ್ಳು ಸುಳ್ಳೇ ಆರ್ಗ್ಯುಮೆಂಟ್ ನಡೆಯುತ್ತಿದೆ. ಇಂಥ ಘಟನೆಗಳಿಂದಾಗಿ ನ್ಯಾಯ ದೇವತೆಯ ಮೇಲಿನ ನಂಬಿಕೆ ಕಡಿಮೆ ಕಡಿಮೆ ಆಗುತ್ತಿದೆ. ಯಾಕೆ ನ್ಯಾಯ ದೇವತೆಯ ತಕ್ಕಡಿ ಸರಿ ಇಲ್ವಾ?


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget