ನರಿಮೊಗರು: ಮಮ್ಮು ಆತ್ಮಹತ್ಯೆ ಹಿಂದೆ ಬಡ್ಡಿ ಮಕ್ಕಳು

            


  ಅವನೊಬ್ಬ ಆಟೋ ಡ್ರೈವರ್. ಹೆಸರು ಮಮ್ಮು. ನರಿಮೊಗರು ಗ್ರಾಮ, ಪುತ್ತೂರು ತಾಲೂಕು. ಅದೇನೋ ಸಮಸ್ಯೆಗೆ ಪುತ್ತೂರಿನ ಲೋಕಲ್ ಬಡ್ಡಿ ಮಕ್ಕಳ ಕೈಯಿಂದ ತೆಗೆದ ಸಾಲ ಮೂವತ್ತು ಸಾವ್ರ. ಭದ್ರತೆಗೆ ಇಟ್ಟಿದ್ದು ಬ್ಲ್ಯಾಂಕ್‌ ಚೆಕ್. ಸಕಾಲದಲ್ಲಿ ಸಾಲ ತೀರಿಸಲಾಗದ ಮಮ್ಮುವನ್ನು ಹುಡುಕಿಕೊಂಡು ಬಂದಿದ್ದು ವಾರೆಂಟ್ ವಿದ್ ಪೋಲಿಸ್. ವಾರೆಂಟ್ ಏನು ಎಂದು ವಿಚಾರಿಸಿದರೆ ಚೆಕ್ ಕೇಸ್. ಮಮ್ಮುಗೆ ಮೂವತ್ತು ಸಾವಿರ ಕೊಟ್ಟಿದ್ದ ಬಡ್ಡಿಮಗ ಮಮ್ಮು ಬ್ಲ್ಯಾಂಕ್ ಚೆಕ್ ನಲ್ಲಿ ಮೂರು ಲಕ್ಷ ಅಂತ ಬರೆದು ಬ್ಯಾಂಕ್ ಗೆ  ಹಾಕಿದ್ದ. ಚೆಕ್ ಬ್ಯಾಂಕಿನ ಗೋಡೆ ಬಡಿದು ರಿಬೌಂಡ್ ಆಗಿ ಬೌನ್ಸ್ ಆಗಿದೆ. ಅಷ್ಟೇ, ಬಡ್ಡಿಮಗ ಕೇಸ್ ಹಾಕಿದ್ದಾನೆ. ಮಮ್ಮುಗೆ ಹೆದರಿ ಲೋಕವಿಲ್ಲ. ನಾನು ಸಾಯ್ತೇನೆ ಎಂದು ಹೆಂಡತಿಯಲ್ಲಿ ಹೇಳಿದ್ದು ಮತ್ತು ಎಲ್ಲರೂ ನೋಡ ನೋಡುತ್ತಿದ್ದಂತೆ ಓಡಿ ಹೋಗಿ ಬಾವಿಗೆ ಹಾರಿದ್ದೇ. ಆಟಿ ತಿಂಗಳು ಬೇರೆ, ಬಾವಿಯಲ್ಲಿ ಜಾಮ್ ಟೈಟ್ ನೀರಿತ್ತು. ಮಮ್ಮು ಮುಳುಗಿದವನು ಮತ್ತೆ ತೇಲಾಡಿಕೊಂಡೇ ಎದ್ದದ್ದು. ಅಲ್ಲಿಗೆ ಬಡ್ಡಿಮಕ್ಕಳ ರಕ್ಕಸ ಕೃತ್ಯಕ್ಕೆ ಅಮಾಯಕನೊಬ್ಬನ ಬಲಿ.
   ಚೆಕ್ ಈಸ್ ಓನ್ಲಿ ಫಾರ್ transaction, ನಾಟ್ ಫಾರ್ ಸೆಕ್ಯೂರಿಟಿ ಎಂದು ಇಡೀ ಲೋಕಕ್ಕೆ ಗೊತ್ತಿರುವ ವಿಷಯ. ಆದರೆ ಬಡ್ಡಿ ಮಕ್ಕಳು ಅದೇ ಚೆಕ್ ಹಿಡಕ್ಕೊಂಡು ಓಬಿರಾಯನ ಕಾಲದ negotiable instrument act ನ 138 ಸೆಕ್ಷನ್ ಮತ್ತು ಐಪಿಸಿ ಸೆಕ್ಷನ್ 420 ಮೂಲಕ ಅಮಾಯಕ ಬಡ ಸಾಲಗಾರರನ್ನುಬಾವಿಯ ಕಟ್ಟೆಯ ತನಕ, ಕೆರೆಯ ದಂಡೆಯ ತನಕ, ನದಿಯ ದಡದ ತನಕ, ಸಂಕದ ಮಧ್ಯದ ತನಕ ಮುಟ್ಟಿಸಿ ಬಿಡುತ್ತಿದ್ದಾರೆ. ಇಷ್ಟಕ್ಕೂ ವ್ಯಕ್ತಿಗಳಿಬ್ಬರ ಪರ್ಸನಲ್ ಫೈನಾನ್ಸಿಯಲ್ ವಹಿವಾಟಿನಲ್ಲಿ ಸರ್ಕಾರ ಯಾಕೆ ಮಧ್ಯದಲ್ಲಿ ಬರುತ್ತಿದೆ ಎಂದೇ ಅರ್ಥವಾಗುತ್ತಿಲ್ಲ.   ಒಬ್ಬ ಬಡ್ಡಿಮಗನ ಬಡ್ಡಿ ಅಸಲು ವಸೂಲಾತಿಗೆ ಸರ್ಕಾರ ಯಾಕೆ ನ್ಯಾಯಾಂಗ ಮತ್ತು ಕಾರ್ಯಾಂಗವನ್ನು ಉಪಯೋಗಿಸುತ್ತಿದೆ, ಒಬ್ಬ ಲೋಫರ್ ಬಡ್ಡಿ ಮಗ ಕೊಟ್ಟ ಸಾಲ ವಸೂಲಾತಿಗೆ ನ್ಯಾಯಾಂಗದ ಅಮೂಲ್ಯ ಸಮಯವನ್ನು ಯಾಕೆ ಹಾಳು ಮಾಡುತ್ತಿದೆ, ಒಬ್ಬ ಡಬ್ಬಾ ನನ್ಮಗ ಬಡ್ಡಿಮಗನ ಸಾಲ ವಸೂಲಾತಿಯಲ್ಲಿ ಪೋಲೀಸರನ್ನು ಯಾಕೆ ರಿಕವರಿ ರೌಡಿ ಗ್ಯಾಂಗ್ ನ ಪುಡಿ ರೌಡಿಗಳ ಹಾಗೆ ನಡೆಸಿ ಕೊಳ್ಳಲಾಗುತ್ತಿದೆ ಎಂದು ಯಾರಲ್ಲಿ ಕೇಳಿದರೂ ಸರಿಯಾದ ಆನ್ಸರ್ ಬರಲ್ಲ. ಇಷ್ಟಕ್ಕೂ ಕಚಡಾ  ಬಡ್ಡಿಮಕ್ಕಳ ಸಾಲ ವಸೂಲಾತಿಯಲ್ಲಿ ಸರ್ಕಾರ ಯಾಕೆ ಅಷ್ಟೊಂದು ಇಂಟರೆಸ್ಟೆಡ್? ಕೊಟ್ಟ ಚೆಕ್ಕಲ್ಲಿ ದುಡ್ಡಿಲ್ಲ ಅಂದರೆ ಇನ್ನೊಂದು ಚೆಕ್ ಬರೆಯಲಿ, ಅದರಲ್ಲೂ ದುಡ್ಡಿಲ್ಲ ಅಂದರೆ ಅವರಿಬ್ಬರೇ ಅಥವಾ ಯಾರಾದರೂ ಮಧ್ಯವರ್ತಿಗಳ ಮೂಲಕ ವಿವಾದ ಮುಗಿಸಿ ಕೊಳ್ಳಲಿ. ಅದು ಅವರ ಪರ್ಸನಲ್ ಪ್ರಾಬ್ಲಂ. ಅದಕ್ಕೆ ಸರ್ಕಾರ ಯಾಕೆ ಮೂಗು ತೂರಿಸೋದು?
   ಅದರಲ್ಲೂ ಚೆಕ್ ಕೇಸ್ ಅಂದರೆ ಪೋಲಿಸರಂತೂ ಅದೊಂದು ದೇಶದ್ರೋಹದ ಕೇಸಿನಂತೆ ವರ್ತಿಸುತ್ತಾರೆ. ಚೆಕ್ ಕೇಸಿನ ನನ್ನ ಫ್ರೆಂಡ್ ಒಬ್ಬನಿಗೆ ಸುಳ್ಯ ಪೋಲಿಸ್ ಎಸ್ಸೈ ಒಬ್ಬ ಅಮಾನವೀಯ ರೀತಿಯಲ್ಲಿ ಥಳಿಸಿದ್ದ. ಎನ್ ಕೌಂಟರ್ ಮಾಡಿ ಬಿಸಾಡುತ್ತೇನೆ ಎಂದು ಬೆದರಿಸಿದ್ದ, ಕೇಸಿಗೆ ಹೈಕೋರ್ಟ್ ಸ್ಟೇ ಇದ್ದರೂ ಹಾಕಿ ಸ್ಟಿಕ್ ಬಳಸಿ ನನ್ನ ಫ್ರೆಂಡ್ ನ ಜಾಯಿಂಟ್ ಜಾಯಿಂಟ್ ಬಡಿದಿದ್ದ. ನನ್ನ ಹತ್ತಿರ ನೋವು ತೋಡಿಕೊಳ್ಳಲು ಬಂದಿದ್ದ ಫ್ರೆಂಡ್ ನ ಡ್ಯಾಮೇಜ್ ಬಾಡಿ ನೋಡಿ ಕರುಳು ಚುರ್ರ್ ಅಂದಿತ್ತು. ಫ್ರೆಂಡನ್ನು ಕರಕ್ಕೊಂಡು ಸೀದಾ ಹೋಗಿ ದಕ್ಷಿಣ ಕನ್ನಡ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ IPS ಮುಂದೆ ನಿಲ್ಲಿಸಿದ್ದೆ. ದೇಹದ ನೋವು ನೋಡಲು ನೋ ಅಂದ ಪೋಲಿಸ್ ವರಿಷ್ಠ ಫೋನ್ ಎತ್ತಿಕೊಂಡು ಸುಳ್ಯ ಸರ್ಕಲ್ Inspector ಗೆ ಏರಿದ ಧ್ವನಿಯಲ್ಲಿ ಕ್ಲಾಸ್ ತಗೊಂಡಿದ್ದು "ಅವನು ಯಾಕಂತೆ ಈ ಕೇಸಲ್ಲಿ ಅಷ್ಟೊಂದು ಇಂಟರೆಸ್ಟೆಡ್, ಅವರನ್ನು ಸುಳ್ಯಕ್ಕೆ ಕಳಿಸ್ತೇನೆ, ಸಂಜೆಯೊಳಗೆ ಈ ಕೇಸ್ ಮುಗಿಸಿ ನನಗೆ ರಿಪೋರ್ಟ್ ಮಾಡಬೇಕು, ಇಲ್ಲದಿದ್ದರೆ ಅವನನ್ನು ಸಸ್ಪೆಂಡ್ ಮಾಡುತ್ತೇನೆ, ಏನು ಮನೆಗೆ ಹೋಗ್ತನಂತೆಯ ಅವನು" ಎಂದು SP ಅವಾಜ್ ಹಾಕಿದ್ದರು. ಅಲ್ಲಿಂದ ನಾವಿಬ್ಬರೂ ಸುವರ್ಣ, tv 9, ಪಬ್ಲಿಕ್ ಜನಗಳನ್ನೂ ಹತ್ತಿರ ಕೂರಿಸಿಕೊಂಡು ಕತೆ ಹೇಳಿ ಬಿಟ್ಟೆವು. ಎಸ್ಸೈಗೆ ಲೋಕ ಇಲ್ಲ.


   ಹಾಗೆಂದು ಈ ಚೆಕ್ ಕೇಸಲ್ಲಿ ಕೇವಲ ಹದಿಮೂರು ಸಾವಿರಕ್ಕೆ ಕಡಬ ಪೊಲೀಸರು ನನ್ನನ್ನೂ ಚಡ್ಡಿಯಲ್ಲಿ ಕೂರಿಸಿದ್ದಾರೆ ಮಾರಾಯ್ರೆ. ಆವಾಗ ಅದೊಂದು ದೊಡ್ಡ ಕೇಸ್ ಅಂತ ನಾನೂ ಹೆದರಿಕೊಂಡಿದ್ದೆ. ಅವನ್ಯಾರೋ ಒಬ್ಬ ಎಸ್ಸೈ ನನ್ನ ಪ್ಯಾಂಟ್, ಶರ್ಟು ತೆಗೆಸಿ ಚಡ್ಡಿಯಲ್ಲಿ ಲಾಕಪ್ ಗೆ ಹಾಕಿದ್ದ. ಒಂದು ಪರ್ಸನಲ್ ಆರ್ಥಿಕ ಅಪರಾಧಕ್ಕೆ ಇಷ್ಟೆಲ್ಲ ಬೇಕಾ? ಇದರಿಂದ ಪೋಲಿಸರು ಏನನ್ನು ಸಾಧಿಸಿದಂತಾಗುತ್ತದೆ ಎಂದೇ ಅರ್ಥ ಆಗುತ್ತಿಲ್ಲ. ನಾನೇನೋ ಮನಸ್ಸಿನೊಳಗೆ ಮುಸಿ ಮುಸಿ ನಗುತ್ತಾ ಚಡ್ಡಿಯಲ್ಲಿ ಮಲಗಿದೆ, ಆದರೆ ಅದೆಷ್ಟೋ ಮೃದು ಮನಸ್ಸಿನ ಮಂದಿಯ ಮೇಲೆ ಪೋಲಿಸರ ಈ ವರ್ತನೆ ಕೂಡ ಆತ್ಮಹತ್ಯೆಗೆ ಪ್ರೇರಣೆ ಆಗುವ ಅಪಾಯಗಳಿವೆ. ಮೊನ್ನೆ ಬಾವಿಗೆ ಹಾರಿದ ಮಮ್ಮು ಕತೆ ಕೂಡ ಹೀಗೆ ಇರಬಹುದು.
ಯುವರ್ ಆನರ್,                             
  ನ್ಯಾಯ ದೇವತೆಯ ಬ್ಲೈಂಡ್ ಜಡ್ಜ್ ಮೆಂಟ್ ಗಳಿಂದ ಅಮಾಯಕ ಜನಗಳ ಮೇಲೆ, ಬಡ ಬಗ್ಗರ ಮೇಲೆ, ಮಧ್ಯಮ ವರ್ಗದ ಜನಗಳ ಮೇಲೆ ನೆಗೆಟಿವ್ ಪರಿಣಾಮಗಳಾಗುತ್ತಿದೆ. ನ್ಯಾಯ ದೇವತೆಯ ಕಣ್ಣುಗಳಲ್ಲಿ ಪರೆ ಬಂದಿದೆ. ದೇವತೆಯ ಕಣ್ಣುಗಳಿಗೆ ಜರೂರಾಗಿ ಆಪರೇಷನ್ ನಡೆಸಬೇಕಾಗಿದೆ. ಯಾಕೆಂದರೆ ಬ್ಲೈಂಡ್ ಜಡ್ಜ್ ಮೆಂಟ್  ವನ್ ಸೈಡ್ ಆಗಿರ ಬಾರದು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೊಟ್ಟ ನ್ಯಾಯದಿಂದ ಎಷ್ಟೋ ಜನರು ಬೀದಿ ಪಾಲು ಆಗಿದ್ದಾರೆ, ಅಮಾಯಕರ ಆತ್ಮಹತ್ಯೆಗಳಾಗಿವೆ, ಅಪರಾಧಿಗಳು ನಿರಪರಾಧಿಗಳಾಗಿದ್ದಾರೆ, ನಿರಪರಾಧಿಗಳು ಅಪರಾಧಿಗಳಾಗಿದ್ದಾರೆ. ನ್ಯಾಯ ದೇವತೆಯ ಮುಂದೆ ನಿಜವಾದ ಅಪರಾಧದ ಪರವಾಗಿ ಸುಳ್ಳು ಸುಳ್ಳೇ ಆರ್ಗ್ಯುಮೆಂಟ್ ನಡೆಯುತ್ತಿದೆ. ಇಂಥ ಘಟನೆಗಳಿಂದಾಗಿ ನ್ಯಾಯ ದೇವತೆಯ ಮೇಲಿನ ನಂಬಿಕೆ ಕಡಿಮೆ ಕಡಿಮೆ ಆಗುತ್ತಿದೆ. ಯಾಕೆ ನ್ಯಾಯ ದೇವತೆಯ ತಕ್ಕಡಿ ಸರಿ ಇಲ್ವಾ?


Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget