ಸುಳ್ಯ: ಬೆಳ್ಳಾರೆ ಕಲ್ಲೋಣಿಯ ಮನೆಯಲ್ಲಿ ವೇಶ್ಯಾವಾಟಿಕೆ!

                   


    ಬಿನ್ನೆರ್ ಬಂದದ್ದು ನಿನ್ನೆ. ಮೊನ್ನೆ ತಿದ್ದಿ ಬಂದಿದ್ದು, ನಿನ್ನೆ ಮಾಮು, ಆಗ ಬಂದಿದ್ದು ತಮ್ಮು ಅಂತ ಮನೆಗೆ ಬಂದವರೆಲ್ಲ ಬಿನ್ನೆರ್ ಎಂದು ಹೇಳುತ್ತಾ ಮನೆಯಲ್ಲೇ ಗ್ರಾಮೀಣ ಮಟ್ಟದ ವೇಶ್ಯಾವಾಟಿಕೆ ಮಾಡುವ ಗ್ರಾಮೀಣ ಪ್ರತಿಭೆಯೊಂದು ಬೆಳ್ಳಾರೆಯಲ್ಲಿ ಅರಳಿದೆ. ಒಂದು ರೌಂಡು ಬೆಳ್ಳಾರೆ ಪೋಲಿಸರು ಸ್ಪಾಟಿಗೆ ಹೋಗಿದ್ದಾರಂತೆ. ಮನೆ ಯಾವುದು ಎಂದು ಗೊತ್ತಾಗದೆ ಎಂಕು ಪಣಂಬೂರಿಗೆ ಹೋದ ಹಾಗೆ ಹೋಗಿ ವಾಪಾಸಾಗಿದ್ದಾರೆ.


  ಇದು ಬೆಳ್ಳಾರೆ. ಇಲ್ಲಿನ ಸುಳ್ಯ ರೋಡಲ್ಲಿ ಸೀದಾ ಹೋದರೆ ಅಲ್ಲಿ ಕಲ್ಲೊಣಿ ಅಂತ‌ ಒಂದು ಊರು ಸಿಗುತ್ತದೆ. ಇಲ್ಲಿನ ಗ್ರಾಮೀಣ ಪ್ರತಿಭೆಯೊಂದು ಇದೀಗ ಕಲ್ಲೋಣಿ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾಳೆ. ತನ್ನ ಮನೆಯನ್ನೇ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡಿರುವ ಈಕೆಯ ಧೈರ್ಯಕ್ಕೆ  ಯಾರಾದರೂ ಬೌಬೌ ಅನ್ನಲೇ ಬೇಕು.  ಬೆಳ್ಳಾರೆ ಪೇಟೆಯಿಂದ ಒಂದೂವರೆ ಕಿ.ಮಿ ದೂರದಲ್ಲಿ ಶ್ರೀ ಕ್ಷೇತ್ರ ಇದ್ದು ಭಕ್ತಾದಿಗಳು ಬಿನ್ನೆರ್ ರೂಪದಲ್ಲಿ ಬಂದು ದರ್ಶನ ಮಾಡುತ್ತಿದ್ದಾರೆ. ಹಾಗೆಂದು ಇಲ್ಲಿ ನಿರಂತರವಾಗಿ, ರಾಜಾರೋಷವಾಗಿ ಆಟೋಟ ನಡೆಯುತ್ತಿಲ್ಲ. ಬುಕ್ಕಿಂಗ್ ಇದ್ದರೆ ಮಾತ್ರ.  ಉದಾ: ನಿಮಗೆ ಒಂದು ಐಟಂ ಬೇಕಿದ್ದರೆ ನೀವು ಮೊದಲೇ ದಿನ, ಘಳಿಗೆ ಬುಕ್ ಮಾಡಬೇಕು, ನಾನು ಇಂತದ್ದೇ ದಿನ ಆಯಿಲ್ ಛೇಂಜ್ ಗೆ ಬರುತ್ತೇನೆ ಎಂದು ನಿಗದಿ ಮಾಡಬೇಕು. ಆವತ್ತು ಆ ಮನೆಯ ಸಂಘಟಕಿ ನಿಮಗೊಂದು ರಂಭೆ ಊರ್ವಶಿ ಮೇನಕೆಯನ್ನು ತರಿಸಿಟ್ಟಿರುತ್ತಾಳೆ. ನೀವು ಬೆಳ್ಳಾರೆಯಲ್ಲಿ ನಿಮ್ಮ ನಾಲಕ್ಕು ಚಕ್ರದ್ದು ಅಥವಾ ಮೂರು ಚಕ್ರದ್ದು ಅಥವಾ ಎರಡು ಚಕ್ರದ್ದನ್ನು ಬದಿಗೆ ಹಾಕಿ  ಅವರೇ ಕಳಿಸಿದ ಆಟೋದಲ್ಲಿ ಹೋದರೆ ಸಾಕು. ಕಲ್ಲೋಣಿಯಲ್ಲೇ ಸ್ವರ್ಗ.
   

    ಹಾಗೆಂದು ಇಲ್ಲಿನ ಮೂಲ ಶಕ್ತಿ ಬಹುಶಃ ನಿಮಗೆ ಸಿಗಲ್ಲ. ಅದು ಬೇರೆ ಶಕ್ತಿಗಳ ಆವಾಹನೆ ಮಾಡುತ್ತದೆ. ಒಬ್ಬಳು ಟೀಚರ್, ಇನ್ನೊಂದು ಉಬರಡ್ಕದ ಶಿಫ್ಟ್ ಡಿಸೈರ್, ಇನ್ನೊಂದು ಬ್ಯೂಟಿ ಪಾರ್ಲರ್ ಆಂಟಿ, ಎಣ್ಣೆ ಕಪ್ಪು ಪೈಂಟಿನ ಆಲ್ಟೋ ಏಯ್ಟ್ ಹಂಡ್ರೆಡ್ ಹೀಗೆ ಕೆಲವು ಹುಡುಗಿಯರ ವ್ಯವಸ್ಥೆ ಇಲ್ಲಿ ಮಾಡಿ ಕೊಡಲಾಗುತ್ತದೆ. ಇದರಲ್ಲಿ ಉಬರಡ್ಕದ ಶಿಫ್ಟ್ ಡಿಸೈರ್ ಗೆ ಮೂರುವರೆ ಸಾವಿರದಿಂದ ಐದರ ತನಕ ಮಾರ್ಕೆಟ್ ರೇಟ್ ಇದ್ದು ಉಳಿದ ಕಾಟುಗಳಿಗೆ ಎರಡರಿಂದ ಮೂರರ ತನಕ ಪೇ ಮಾಡಬೇಕಾಗುತ್ತದೆ. ಇಲ್ಲಿನ ಇನ್ನೊಂದು ವಿಶೇಷ ಏನೆಂದರೆ ಇಲ್ಲಿ ನಿಮಗೆ ಚಾಯ್ಸ್ ಇಲ್ಲ. ಅವರು ತರಿಸಿದ, ತೋರಿಸಿದ ಮಾಲನ್ನು ನೀವು ಒಪ್ಪಿಕೊಳ್ಳಬೇಕು. ಅದು ಬೇಡ, ಇದು ಬೇಡ ಎಂದು ನೀವು ರಗಳೆ ಮಾಡುವ ಹಾಗಿಲ್ಲ. ಹೋಗ ಬೇಕು, ದುಡ್ಡು ಕೊಡಬೇಕು, ಹುಳ ಬಿಡಬೇಕು, ಬಾಯ್ಮುಚ್ಚಿಕೊಂಡು ವಾಪಾಸ್ ಹೋಗ ಬೇಕು. ಬಂದ ದಾರಿಗೆ ಸುಂಕ ಇಲ್ಲ.
  ಇನ್ನು ಇಲ್ಲಿಗೆ ನೀವು ಬರಬೇಕಾದರೆ ಬೆಳ್ಳಾರೆಯಲ್ಲಿ ನಿಂತು ಆಂಟಿಗೆ ಒಂದು ಕಾಲ್ ಮಾಡಿ ಎಲ್ಲಿದ್ದೀರಿ ಎಂದು ಹೇಳಿದರೆ ಸಾಕು. ಮಕ್ಕಳನ್ನು ಶಾಲೆಗೆ ಕರಕ್ಕೊಂಡು ಹೋದ ಹಾಗೆ ನಿಮ್ಮನ್ನೂ ಆಟೋ ಬಂದು ಹೊತ್ತುಕ್ಕೊಂಡು ಹೋಗುತ್ತದೆ. ಅಲ್ಲಿ ಕಲ್ಲೊಣಿಯಲ್ಲಿ ಕೂಡ ಚಿಕ್ಕಿ ಮನೆ ತನಕ ಮಾತ್ರ ಆಟೋ ವ್ಯವಸ್ಥೆ ಇದ್ದು, ಚಿಕ್ಕಿ ಮನೆಯಲ್ಲಿ ನೀವು ಆಟೋ ಇಳಿದು ಅಲ್ಲೇ ಸ್ವಲ್ಪ ಮೇಲೆ ಹತ್ತಿ ಹೋದರೆ ಅಲ್ಲಿಯೇ ಇದೆ ವಿಟ ಪುರುಷರ ತವರು. ಸದ್ರಿ ಕಲ್ಲೋಣಿ ರೆಡ್  ಲೈಟ್ ಮನೆ ಬಗ್ಗೆ ಬೆಳ್ಳಾರೆ ಪೋಲಿಸರಿಗೆ ಈಗಾಗಲೇ ಮಾಹಿತಿಗಳು ಬಂದಿದ್ದು ಅವರು ಚೌತಿ ನಂತರ ಆಪರೇಷನ್ ಗೆ ದಿನ ಇಟ್ಟಿರುವ ಅಪಾಯಗಳಿಗೆ. ಯಾಕೆಂದರೆ ಈಗಾಗಲೇ ಬೆಳ್ಳಾರೆ ಪೋಲಿಸರು ಕಲ್ಲೋಣಿಗೆ ಬಂದು ಹೋಗಿರುವ ವಿಷಯವಿದೆ. ಆದ್ದರಿಂದ ಆದಷ್ಟು ಬೇಗ ಕಲ್ಲೋಣಿ ಆಂಟಿಯ ಈ ಉರ್ವೆಲ್ತಡಿ ವಹಿವಾಟು ನಿಲ್ಲಲಿ, ಬೆಳ್ಳಾರೆ ಪೋಲಿಸರು ಅವಳಿಗೊಂದು ರಿಟೈರ್ ಮೆಂಟ್ ಸನ್ಮಾನ ಮಾಡಿ ಕೊಂಡೋಗಿ ಗುಜಿರಿಗೆ ಹಾಕಲಿ ಎಂಬುದು ಸಾರ್ವಜನಿಕ ಆಶಯ.

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget