ಉದ್ಘಾಟನೆ ಬೆನ್ನಲ್ಲಿ ಅಂಗವೈಕಲ್ಯ ಕಂಡ ಎಡಮಂಗಲ ರಾಮ ಸೇತುವೆ

                    


    ಎಡಮಂಗಲ ನಿಂತಿಕಲ್ಲು ರಸ್ತೆಯ ಮಾಲಂಗೇರಿ ಕಿರು ಸೇತುವೆ 15 ದಿನ ಹಿಂದೆ ಮೆಗಾಸ್ಫೋಟಕ್ಕೆ ಕೊಚ್ಚಿ ಹೋದುದನ್ನು ಶಾಸಕರ ತುರ್ತು ಅನುದಾನದಿಂದ ದುರಸ್ತಿಗೊಳಿಸಲಾಯಿತು. ಆದರೆ ಸ್ಥಳಿಯ ಪಂಚಾಯತ್ ಹಾಗೂ  ನಾಯಕರ ಬೇಜವಾಬ್ದಾರಿಯಿಂದ ಅನುದಾನ ಬಳಕೆ ಸಮರ್ಪಕ ವಾಗದೆ ನಾಲ್ಕು ಮೋರಿಗಳು ಅಳವಡಿಕೆ ಆಗುವ ಜಾಗಕ್ಕೆ ಎರಡು ಮೂರಿ ಅಳವಡಿಸಿದ ಕಾರಣ ಸೇತುವೆಯ ಕೆಲವು ಅಂಗಗಳು ಉದ್ಘಾಟನೆ ನಂತರ ಕುಸಿಯಲು ಪ್ರಾರಂಭವಾಗಿದೆ.. ಸ್ಥಳಿಯ ಪಂಚಾಯತ್ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ನೇತುವೆ ನಿರ್ಮಾಣಗೊಂಡರು ಶಾಲಾ ಮಕ್ಕಳಿಗೆ ದುಪ್ಪಟ್ಟು ಖರ್ಚು ಮಾಡಿ ಶಾಲೆಗೆ ಹೋಗುವಂತ ಪರಿಸ್ಥಿತಿ  ಇನ್ನು ತಪ್ಪಿಲ್ಲ ಹಾಗೂ ಬಸ್ಸುಗಳು ಇದರಲ್ಲಿ ಹೋಗದಂತ ಸೇತುವೆ ನಿರ್ಮಾಣವಾಗಿ ಮಂಗಗಳಿಂದ ಮಾಡಿದ ರಾಮ ಸೇತು ಎಂಬ ಮಾತು ಸ್ಥಳೀಯ ಜನರಲ್ಲಿ ಎಲ್ಲರೂ ಆಡಿಕೊಳ್ಳುವಂತಾಗಿದೆ.
   ಹಾಗೆಂದು ಈ ಸಂಕಕ್ಕೆ ಅರ್ಜೆಂಟ್ ಅನುದಾನ ಎಂದು ಒಂದೂವರೆ ಲಕ್ಷ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸಂಕಕ್ಕೆ ಎಷ್ಟು ಹಾಕಿದರು, ಕಿಸೆಗೆ ಎಷ್ಟು ಹಾಕಿದರು ಎಂದು ಅಷ್ಟಮಂಗಲವೇ ಇಡಬೇಕಷ್ಟೆ. ಈ ಕಾಮಗಾರಿಯ ನಾಲಕ್ಕು ಮೋರಿಗಳಲ್ಲಿ ಎರಡನ್ನು ನುಂಗಲಾಗಿದೆ ಮತ್ತು ಎರಡನ್ನು ಹಾಕಲಾಗಿದೆ. ಅದರಲ್ಲಿ ನೀರು ಬ್ಲಾಕ್ ಆಗಿ ಹಾಕಿದ ಒಂದೂವರೆಯೂ ಕುಮಾರಧಾರನ ಪಾಲಾಗುವ ಲಕ್ಷಣಗಳಿವೆ. ಒಂದು ಕಾಮಗಾರಿಗೆ ಒಂದೂವರೆ ಲಕ್ಷ ಹಾಕಿದ ಮೇಲೆ ಕಡೇ ಪಕ್ಷ ಒಂದು ಬಸ್ಸಾದರೂ ಮುರ್ಲಿಕೊಂಡು ಹೋಗಬೇಕು. ಆದರೆ ಈ ಸಂಕದಲ್ಲಿ ಮೂರು ಚಕ್ರದ್ದು ಹೋಗುವುದು ಡೌಟು. ಎಂಥಾ ಒಂದು ಸಾಮಾನುಗಳೆಲ್ಲ ಇದ್ದಾರೆ ಮಾರಾಯ್ರೆ, ಇಷ್ಟು ಕಷ್ಟದಲ್ಲಿ ಬುಡೆದಿ ಜೋಕುಲು ಬೇಕಾ?
   

   .....................................................

    ಪಂಜ ಐವತ್ತೋಕ್ಲು ಗ್ರಾಮದ ಬೊಳ್ಳಾಜೆ ತಿಮ್ಮಪ್ಪ ಗೌಡರ ಪತ್ನಿಯ ಅಕಾಲಿಕ ಮರಣದಿಂದ ಕಂಗೆಟ್ಟ ತಿಮ್ಮಪ್ಪ ಗೌಡರಿಗೆ  ಬೊಳ್ಳಾಜೆ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಪಂಜ ವಲಯ ಕಾಂಗ್ರೆಸ್ ಮತ್ತು ಊರಿನ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಈ ದಿನ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ bollaje, ಚಿನ್ನಪ್ಪ ಸಂಕಡ್ಕ, ದಿನೇಶ್ ಪುಂಡಿಮನೆ , ಕುಸುಮಾದರ ಕೆರೆಯಡ್ಕ, ಸತೀಶ್ ಪೂಜಾರಿ ಮನೆ ಉಪಸ್ಥಿತರಿದ್ದರು.



Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget